ನೀತಿ ಆಯೋಗ
azadi ka amrit mahotsav

ಇ.ವಿ. ಪರಿವರ್ತನೆಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಪತ್ತೆಹಚ್ಚಲು ಭಾರತವು ಪ್ರವರ್ತಕ ಭಾರತ ವಿದ್ಯುತ್ ಚಲನಶೀಲತಾ ಸೂಚ್ಯಂಕ (ಐ.ಇ.ಎಂ.ಐ)ವನ್ನು ಪ್ರಾರಂಭಿಸಿದೆ

Posted On: 04 AUG 2025 6:28PM by PIB Bengaluru

ನೀತಿ ಆಯೋಗವು ಇಂದು ಭಾರತ ವಿದ್ಯುತ್ ಚಲನಶೀಲತಾ ಸೂಚ್ಯಂಕ (ಐ.ಇ.ಎಂ.ಐ.-IEMI) ವನ್ನು ಬಿಡುಗಡೆ ಮಾಡಿತು, ಇದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯು.ಟಿ.ಗಳು) ತಮ್ಮ ವಿದ್ಯುತ್ ಚಲನಶೀಲತೆಯ ಗುರಿಗಳನ್ನು ಸಾಧಿಸುವಲ್ಲಿನ ಪ್ರಗತಿಯನ್ನು ಸಮಗ್ರವಾಗಿ ಪತ್ತೆಹಚ್ಚಲು ಮತ್ತು ಮಾನದಂಡವಾಗಿಸಲು ಅಭಿವೃದ್ಧಿಪಡಿಸಲಾದ  ಈ ರೀತಿಯ ಮೊದಲ ಸಾಧನ-ಸಲಕರಣೆಯಾಗಿದೆ.

ನೀತಿ ಆಯೋಗದ ಸದಸ್ಯರಾದ ಶ್ರೀ ರಾಜೀವ್ ಗೌಬಾ ಅವರು ನೀತಿ ಆಯೋಗದ ಸಿ.ಇ.ಒ ಶ್ರೀ ಬಿ.ವಿ.ಆರ್. ಸುಬ್ರಹ್ಮಣ್ಯಂ, ಬೃಹತ್  ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ, ನೀತಿ ಆಯೋಗದ  ಫೆಲೋ ಶ್ರೀ ಒ.ಪಿ. ಅಗರ್ವಾಲ್ ಮತ್ತು ನೀತಿ ಆಯೋಗದ ಇ-ಮೊಬಿಲಿಟಿ ಕಾರ್ಯಕ್ರಮ ನಿರ್ದೇಶಕ ಶ್ರೀ ಸುಧೇಂದು ಸಿನ್ಹಾ ಸೇರಿದಂತೆ ಇತರ ಗಣ್ಯರ ಸಮ್ಮುಖದಲ್ಲಿ ವರದಿಯನ್ನು ಬಿಡುಗಡೆ ಮಾಡಿದರು.

2070 ರ ವೇಳೆಗೆ ಸಾರಿಗೆ ವಲಯದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ನಿವ್ವಳ ಶೂನ್ಯವನ್ನು ಸಾಧಿಸುವ ಭಾರತದ ಮಹತ್ವಾಕಾಂಕ್ಷೆಯಲ್ಲಿ ರಾಜ್ಯಗಳು ಕೇಂದ್ರಭಾಗದಲ್ಲಿವೆ. ಆದ್ದರಿಂದ, ರಾಜ್ಯ ಮಟ್ಟದ ಸಕ್ರಿಯ ಕ್ರಮ ಸೂಕ್ತವಾದ ನೀತಿಗಳನ್ನು ವಿನ್ಯಾಸಗೊಳಿಸುವುದು, ಬೆಂಬಲಿತ ಮೂಲಸೌಕರ್ಯಗಳನ್ನು ನಿಯೋಜಿಸುವುದು ಮತ್ತು ಇ-ಮೊಬಿಲಿಟಿಯ ಪ್ರಯೋಜನಗಳು ಎಲ್ಲಾ ಸಮುದಾಯಗಳು ಹಾಗು ಭೌಗೋಳಿಕ ಪ್ರದೇಶಗಳನ್ನು ಸಮಾನವಾಗಿ ತಲುಪುವಂತೆ ನೋಡಿಕೊಳ್ಳುವುದನ್ನು ಒಳಗೊಂಡಿರುವುದು  ಮುಖ್ಯವಾಗಿದೆ.

ಭಾರತ ವಿದ್ಯುತ್ ಚಲನಶೀಲತೆ ಸೂಚ್ಯಂಕದ ಬಗ್ಗೆ

ಭಾರತ ವಿದ್ಯುತ್ ಚಲನಶೀಲತೆ ಸೂಚ್ಯಂಕ (ಐ.ಇ.ಎಂ.ಐ-IEMI) ಮೂರು ಪ್ರಮುಖ ವಿಷಯಗಳ ಅಡಿಯಲ್ಲಿ 16 ವಿಭಾಗಗಳಲ್ಲಿ 100 ಅಂಕಗಳಲ್ಲಿ ಎಲ್ಲಾ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಟ್ರ್ಯಾಕ್ ಮಾಡುತ್ತದೆ, ಮೌಲ್ಯಮಾಪನ ಮಾಡುತ್ತದೆ ಮತ್ತು ಅಂಕ ನಿಗದಿ ಮಾಡುತ್ತದೆ: ಬೇಡಿಕೆ-ಬದಿಯ ಅಳವಡಿಕೆಯನ್ನು ದಾಖಲಿಸಲು ಸಾರಿಗೆ ವಿದ್ಯುದೀಕರಣ ಪ್ರಗತಿ, ಸಂಬಂಧಿತ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಯನ್ನು ಪತ್ತೆಹಚ್ಚಲು ಚಾರ್ಜಿಂಗ್ ಮೂಲಸೌಕರ್ಯ ಸಿದ್ಧತೆ ಮತ್ತು ಇ.ವಿ. ಸಂಶೋಧನೆ ಮತ್ತು ನಾವೀನ್ಯತೆ ಸ್ಥಿತಿ-ಗತಿ: ಶೀರ್ಷಿಕೆ ಅಡಿಯಲ್ಲಿ ಪೂರೈಕೆ-ಬದಿಯ ಪರಿಸರ ವ್ಯವಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಒಳಗೊಂಡಿದೆ.

A green and black rectangle with textAI-generated content may be incorrect.

ಐ.ಇ.ಎಂ.ಐ (IEMI)  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೌಲ್ಯಮಾಪನವನ್ನು ಸಕ್ರಿಯಗೊಳಿಸುತ್ತದೆ, ಯಶಸ್ಸಿನ ಪ್ರಮುಖ ಚಾಲಕ ಅಂಶಗಳನ್ನು ಹಾಗೂ ಗುರಿ ಕೇಂದ್ರಿತ ಮಧ್ಯಸ್ಥಿಕೆಗಳ ಅಗತ್ಯವಿರುವ ಕ್ಷೇತ್ರಗಳನ್ನು ಗುರುತಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ತಿಳಿಸುವುದು, ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸುವುದು ಮತ್ತು ಉತ್ತಮ ಪದ್ಧತಿಗಳು/ಅಭ್ಯಾಸಗಳ ಹಂಚಿಕೆಯನ್ನು ಉತ್ತೇಜಿಸುವುದು ಸೂಚ್ಯಂಕದ ಗುರಿಯಾಗಿದೆ.

ಭಾರತದ ವಿದ್ಯುತ್ ಚಲನಶೀಲತೆಯ ದೃಷ್ಟಿಕೋನವನ್ನು ಸಾಧಿಸುವಲ್ಲಿ ರಾಜ್ಯ ಮಟ್ಟದ ಸಮನ್ವಯ, ಸಮಗ್ರ ಯೋಜನೆ ಮತ್ತು ಅಂತರ-ವಲಯ ಸಹಯೋಗದ ಮಹತ್ವವನ್ನು ಸೂಚ್ಯಂಕವು ಒತ್ತಿಹೇಳುತ್ತದೆ. ಸಾಮರ್ಥ್ಯ ಮತ್ತು ಅಂತರಗಳನ್ನು ಗುರುತಿಸುವ ಮೂಲಕ, ಸ್ಥಳೀಯ ಅಗತ್ಯಗಳನ್ನು ಪೂರೈಸುವಾಗ ರಾಷ್ಟ್ರೀಯ ಗುರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ರಾಜ್ಯಗಳನ್ನು ಬೆಂಬಲಿಸುವ ಉದ್ದೇಶವನ್ನು ಸೂಚ್ಯಂಕ ಹೊಂದಿದೆ.

ಐ.ಇ.ಎಂ.ಐ ಡ್ಯಾಶ್‌ಬೋರ್ಡ್ ಮತ್ತು ವರದಿಯನ್ನು ಬಿಡುಗಡೆ ಮಾಡಿದ ನೀತಿ ಆಯೋಗದ ಸದಸ್ಯ ಶ್ರೀ ರಾಜೀವ್ ಗೌಬಾ, “ವಿದ್ಯುದೀಕರಣ, ಮೂಲಸೌಕರ್ಯ ಮತ್ತು ನಾವೀನ್ಯತೆ ಮುಂತಾದ ಪ್ರಮುಖ ವಿಷಯಗಳಾದ್ಯಂತ ಪ್ರಗತಿಯನ್ನು ನಿರ್ಣಯಿಸಲು ಐ.ಇ.ಎಂ.ಐ ಪಾರದರ್ಶಕ, ತುಲನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ. ಇದು ರಾಜ್ಯಗಳು ತಮ್ಮ ಪ್ರಯತ್ನಗಳನ್ನು ಮಾನದಂಡವಾಗಿ ಅಳೆಯಲು, ಅಂತರವನ್ನು ಗುರುತಿಸಲು ಮತ್ತು ಪರಸ್ಪರರ ಯಶಸ್ಸಿನಿಂದ ಕಲಿಯಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದರು.

ನೀತಿ ಆಯೋಗದ ಸಿ.ಇ.ಒ ಶ್ರೀ ಬಿ.ವಿ.ಆರ್ ಸುಬ್ರಹ್ಮಣ್ಯಂ ಅವರು, "ನೀತಿ ಆಯೋಗವು ಈಗಾಗಲೇ ನಡೆಯುತ್ತಿರುವ ಇ.ವಿ. ಕ್ರಾಂತಿಯನ್ನು ಸಕ್ರಿಯಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಈ ಸೂಚ್ಯಂಕವು ಭಾರತವನ್ನು ಇಂಗಾಲರಹಿತ ಮತ್ತು ಇಂಧನ-ಸುರಕ್ಷಿತ ಭವಿಷ್ಯದ ದೃಷ್ಟಿಕೋನದತ್ತ ಮುನ್ನಡೆಸಲು ನೀತಿ ಆಯೋಗದ ಮತ್ತೊಂದು ಪ್ರಯತ್ನವಾಗಿದೆ" ಎಂದು ಹೇಳಿದರು.

ಐ.ಇ.ಎಂ.ಐ ಡ್ಯಾಶ್‌ಬೋರ್ಡ್ ಅನ್ನು ಇಲ್ಲಿ ನೋಡಬಹುದು: https://iemi.niti.gov.in ಮತ್ತು ಐಇಎಂಐ  ವರದಿಗಾಗಿ  ಇಲ್ಲಿ ನೋಡಬಹುದು: https://niti.gov.in/sites/default/files/2025-08/India-Electric-Mobility-Index-2024-Report.pdf

 

*****


(Release ID: 2152402)
Read this release in: Hindi , English , Urdu