ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ವಿಜ್ಞಾನಿಗಳು ನಕ್ಷತ್ರಗಳಿಗೆ ಸಂಬಂಧಿಸಿ ಹೊಸ ರೀತಿಯ ರಸಾಯನಶಾಸ್ತ್ರವನ್ನು ಕಂಡುಹಿಡಿದಿದ್ದಾರೆ

Posted On: 19 JUN 2025 5:23PM by PIB Bengaluru

ಓಫಿಯುಚಸ್ ನಕ್ಷತ್ರಪುಂಜದಲ್ಲಿ, 25800 ಬೆಳಕಿನ ವರ್ಷಗಳ ದೂರದಲ್ಲಿರುವ ಎ 980 ಎಂಬ ವಿಚಿತ್ರ ನಕ್ಷತ್ರವು ನಕ್ಷತ್ರ ರಸಾಯನಶಾಸ್ತ್ರದ ಬಗ್ಗೆ ನಮಗೆ ತಿಳಿದಿರುವುದನ್ನು ಮರು ವಿವೇಚಿಸುವಂತೆ ಮಾಡಿದೆ.  ಸಂಶೋಧಕರು ಕಾಸ್ಮಿಕ್ ತಿರುವೊಂದನ್ನು  ಕಂಡುಹಿಡಿದಿದ್ದಾರೆ - ಎಕ್ಸ್‌ಟ್ರೀಮ್ ಹೀಲಿಯಂ (EHe) ನಕ್ಷತ್ರಗಳು ಎಂಬ ಅಪರೂಪದ ವರ್ಗಕ್ಕೆ ಸೇರಿದ ನಿಗೂಢ ನಕ್ಷತ್ರವು ಆಶ್ಚರ್ಯಕರವಾಗಿ ಹೆಚ್ಚಿನ ಪ್ರಮಾಣದ ಜರ್ಮೇನಿಯಮ್ ಅನ್ನು ಹೊಂದಿದೆ . ಜರ್ಮೇನಿಯಂ  ಎಂಬುದು ಒಂದು ಲೋಹದ ಅಂಶವಾಗಿದ್ದು, ಈ ರೀತಿಯ ನಕ್ಷತ್ರದಲ್ಲಿ ಹಿಂದೆಂದೂ ಕಂಡುಬರದ ಲೋಹೀಯ ಅಂಶವಾಗಿದೆ.

ಎ 980 ನ್ನು ಆರಂಭದಲ್ಲಿ ಹೈಡ್ರೋಜನ್ ಕೊರತೆಯಿರುವ ಇಂಗಾಲದ ನಕ್ಷತ್ರ ಎಂದು ಭಾವಿಸಲಾಗಿತ್ತು, ಇದು ಹೈಡ್ರೋಜನ್ ಕೊರತೆಯಿರುವ ತಂಪಾದ ನಕ್ಷತ್ರದ ಒಂದು ವಿಶಿಷ್ಟ ತಳಿಯಾಗಿದೆ, ಮತ್ತು ಇದು   ಇದು ವಿಶ್ವದಲ್ಲಿ ಅತ್ಯಂತ ಸಾಮಾನ್ಯ ಸಂಗತಿಯಾಗಿದೆ.

ಲಡಾಖ್‌ನಲ್ಲಿರುವ ಹಿಮಾಲಯನ್ ಚಂದ್ರ ದೂರದರ್ಶಕದಲ್ಲಿ ಹ್ಯಾನ್ಲೆ ಎಚೆಲ್ ಸ್ಪೆಕ್ಟ್ರೋಗ್ರಾಫ್ ಬಳಸಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿ.ಎಸ್.ಟಿ.) ಸ್ವಾಯತ್ತ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ.ಐ.ಎ.)ನ ಖಗೋಳಶಾಸ್ತ್ರಜ್ಞರು ಹತ್ತಿರದಿಂದ ನೋಡಿದಾಗ ಈ ವಿಚಿತ್ರವಾದ ಅಂಶ  ಕಂಡುಬಂದಿದೆ. ಅದರ ವರ್ಣಪಟಲ - ಮೂಲಭೂತವಾಗಿ ನಕ್ಷತ್ರದ ಬೆರಳಚ್ಚು ಎಂದು ಹೇಳಬಹುದಾದ ಅಂಶ- ಅವರು ನಿರೀಕ್ಷಿಸಿದ್ದಕ್ಕೆ ಹೊಂದಿಕೆಯಾಗಲಿಲ್ಲ.

ಬದಲಾಗಿ, ಇದು ತಂಪಾದ ಇ,ಎಚ್,ಇ ನಕ್ಷತ್ರ ಮಾದರಿಯಾದ  ಅಪರೂಪದ ನಕ್ಷತ್ರವಾದ ಎಲ್.ಎಸ್. IV -14° 109, ನಕ್ಷತ್ರದಂತೆ ಕಾಣುತ್ತಿತ್ತು. ಈ ನಕ್ಷತ್ರಗಳು ತುಂಬಾ ಅಪರೂಪವಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಗುರುತಿಸಲ್ಪಟ್ಟಿವೆ. ಅವುಗಳ ವಿಶೇಷತೆಯೆಂದರೆ ಅವು ಬಹುತೇಕ ಸಂಪೂರ್ಣವಾಗಿ ಹೀಲಿಯಂನಿಂದ ಮಾಡಲ್ಪಟ್ಟಿವೆ ಮತ್ತು ಎರಡು ಬಿಳಿ ಕುಬ್ಜ ನಕ್ಷತ್ರಗಳು - ಒಂದು ಇಂಗಾಲ-ಆಮ್ಲಜನಕ-ಸಮೃದ್ಧ ಮತ್ತು ಇನ್ನೊಂದು ಹೀಲಿಯಂ-ಸಮೃದ್ಧವಾದಂತಹವು- ಅದ್ಭುತವಾದ ಕಾಸ್ಮಿಕ್ ಡಿಕ್ಕಿಯಲ್ಲಿ ವಿಲೀನಗೊಂಡಾಗ ಅವು ರೂಪುಗೊಂಡಿರಬಹುದು.

ತಂಡವು ಇ.ಚ್.ಇ. (EHe)  ನಕ್ಷತ್ರದಲ್ಲಿ ಹಿಂದೆಂದೂ ಯಾರೂ ನೋಡಿರದ ವಿಶೇಷವನ್ನು ಗುರುತಿಸಿದೆ ಅವೆಂದರೆ - ಏಕ-ಅಯಾನೀಕೃತ  ಜರ್ಮೇನಿಯಮ್ (Ge II) ರೇಖೆಗಳು. ಇದರರ್ಥ ನಕ್ಷತ್ರದಲ್ಲಿನ ಜರ್ಮೇನಿಯಮ್ ಪರಮಾಣುಗಳು ಒಂದು ಎಲೆಕ್ಟ್ರಾನ್ ಅನ್ನು ಕಳೆದುಕೊಂಡಿವೆ, ಮತ್ತು ಆ ಮೂಲಕ ನಕ್ಷತ್ರದ ವರ್ಣಪಟಲದಲ್ಲಿ ಒಂದು ವಿಶಿಷ್ಟ ಕುರುಹನ್ನು ಮೂಡಿಸಿವೆ.

"ಎ 980 ರ ಆಪ್ಟಿಕಲ್ ಸ್ಪೆಕ್ಟ್ರಮ್‌ನಲ್ಲಿ ಏಕ-ಅಯಾನೀಕೃತ ಜರ್ಮೇನಿಯಮ್ (Ge II) ರೇಖೆಗಳನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಇವು ಇ.ಎಚ್.ಇ. ಗಳಲ್ಲಿ ಗಮನಿಸಿದ ಸ್ಪೆಕ್ಟ್ರಮ್‌ನಲ್ಲಿ (ವರ್ಣಪಟಲಗಳಲ್ಲಿ) ಕಂಡು ಬಂದ ಜರ್ಮೇನಿಯಮ್ ರೇಖೆಗಳ ಮೊದಲ ಪತ್ತೆಗಳಾಗಿವೆ ಮತ್ತು ಇ.ಎಚ್.ಇ (EHe)  ನಕ್ಷತ್ರದಲ್ಲಿ ಜರ್ಮೇನಿಯಂ ಸಮೃದ್ಧಿಯ ಮೊದಲ ಸೂಚನೆಗಳನ್ನು ಒದಗಿಸುತ್ತವೆ" ಎಂದು ಅಧ್ಯಯನದ ಸಹ-ಲೇಖಕ ಮತ್ತು ಅವರ ಪಿಎಚ್‌ಡಿ ವಿದ್ಯಾರ್ಥಿ ಅಜಯ್ ಸೈನಿ ಅವರ ಪ್ರಬಂಧ ಮೇಲ್ವಿಚಾರಕ ಗಜೇಂದ್ರ ಪಾಂಡೆ ಹೇಳುತ್ತಾರೆ.

ಎ980 ರಲ್ಲಿ ಜರ್ಮೇನಿಯಂ ಪ್ರಮಾಣ ಸೂರ್ಯನಲ್ಲಿರುವುದಕ್ಕಿಂತ ಎಂಟು ಪಟ್ಟು ಹೆಚ್ಚು ಹೇರಳವಾಗಿದೆ ಎಂಬುದನ್ನು ಅವರು ಪತ್ತೆ ಮಾಡಿದ್ದಾರೆ, ಇದು ಇ.ಎಚ್.ಇ.(EHe) ನಕ್ಷತ್ರಗಳಲ್ಲಿ ಜರ್ಮೇನಿಯಂ ಸಂಶ್ಲೇಷಣೆಗೆ ಸಾಕ್ಷಿಯಾಗಿದೆ. ಅಲ್ಲದೆ, ಈಗಾಗಲೇ ತಿಳಿದಿರುವ ತಂಪಾದ ಇ.ಎಚ್.ಇ. (EHe) ನಕ್ಷತ್ರಗಳಲ್ಲಿ ಗಮನಾರ್ಹ ಸಂಖ್ಯೆಯ ರೋಹಿತದ ರೇಖೆಯ ಪರಿವರ್ತನೆಗಳ ಆಧಾರದ ಮೇಲೆ ಎ 980ರಲ್ಲಿ ಎಸ್-ಪ್ರಕ್ರಿಯೆಯ ಗರಿಷ್ಠ ಅಂಶಗಳು ಕಂಡುಬರುತ್ತವೆ.

“ಈ ನಕ್ಷತ್ರಗಳಲ್ಲಿ ಜರ್ಮೇನಿಯಂನ್ನು ಈ ಹಿಂದೆಂದೂ  ಪತ್ತೆಹಚ್ಚಿರಲಿಲ್ಲ. ಮತ್ತು ಇಲ್ಲಿ ಅದು - ನಮ್ಮ ಸ್ವಂತ ಸೂರ್ಯನಿಗಿಂತ ಎಂಟು ಪಟ್ಟು ಹೆಚ್ಚು ಹೇರಳವಾಗಿದೆ! ಎನ್ನುತ್ತಾರೆ, ಅಧ್ಯಯನದ ನೇತೃತ್ವ ವಹಿಸಿದ್ದ ಅಜಯ್ ಸೈನಿ.

ಇ.ಎಚ್.ಇ. (EHe) ನಕ್ಷತ್ರಗಳು ಇಂಗಾಲ-ಆಮ್ಲಜನಕ ಬಿಳಿ ಕುಬ್ಜ ನಕ್ಷತ್ರ ಗಳು ಕಡಿಮೆ ಹೀಲಿಯಂ ಬಿಳಿ ಕುಬ್ಜದೊಂದಿಗೆ ವಿಲೀನಗೊಳ್ಳುವ ಮೂಲಕ ಹುಟ್ಟಿಕೊಂಡಿವೆ ಎಂದು ಭಾವಿಸಲಾಗಿದೆ. ಜರ್ಮೇನಿಯಂನ ಪತ್ತೆ ಇಂತಹ ಇತರ ಸನ್ನಿವೇಶಗಳನ್ನು ಅನ್ವೇಷಿಸಲು ಹೊಸ ಸುಳಿವುಗಳನ್ನು ನೀಡುತ್ತದೆ" ಎಂದು ಅವರು ವಿವರಿಸಿದರು.

ರೋಮಾಂಚಕ ಸಂಶೋಧನೆಯು ಎ980ರ ಹಿನ್ನೆಲೆಯು ಕೆಲವು ಭಾರೀ-ಪ್ರಮಾಣದ ಕಾಸ್ಮಿಕ್ ರಸಾಯನಶಾಸ್ತ್ರವನ್ನು ಒಳಗೊಂಡಿದೆ ಎಂಬುದನ್ನು ಸೂಚಿಸುತ್ತದೆ, ಇದು ಪರಮಾಣು ನ್ಯೂಕ್ಲಿಯಸ್‌ಗಳು ನಿಧಾನವಾಗಿ ನ್ಯೂಟ್ರಾನ್‌ಗಳನ್ನು ಸೆರೆಹಿಡಿಯುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ – ಈ ಎಸ್-ಪ್ರಕ್ರಿಯೆ, ಕಬ್ಬಿಣಕ್ಕಿಂತ ಭಾರವಾದ ವಸ್ತುಗಳನ್ನು ಪರಸ್ಪರ ವಿಲೀನಗೊಳಿಸುವುದಕ್ಕೆ ಸಂಬಂಧಿಸಿ ನಮ್ಮ ಅರಿವಿಗೆ ಬಂದಿರುವ ವಿಧಾನವಾಗಿದೆ.  

ಎ980ರ ಅಸಾಮಾನ್ಯ ರಸಾಯನಶಾಸ್ತ್ರವು ನಕ್ಷತ್ರ ವಿಕಾಸದ ಒಂದು ಹಂತವಾದ ಅಸಿಂಪ್ಟೋಟಿಕ್ ಜೈಂಟ್ ಬ್ರಾಂಚ್ (ಎ.ಜಿ.ಬಿ-AGB) ಗಿಂತ ಹಿಂದಿನದು ಎಂದು ಸಂಶೋಧಕರು ಶಂಕಿಸಿದ್ದಾರೆ ಅಂದರೆ ನಕ್ಷತ್ರಗಳು ಉಬ್ಬಿಕೊಂಡು ಬೇರಿಯಮ್, ಸ್ಟ್ರಾಂಷಿಯಂ ಮತ್ತು ಜರ್ಮೇನಿಯಂನಂತಹ ಭಾರ ವಸ್ತುಗಳನ್ನು ಉತ್ಪಾದಿಸಲು ಪ್ರಾರಂಭಿಸುವ ಹಂತ ಅದು. ನಕ್ಷತ್ರಗಳು ಅಂತಿಮವಾಗಿ ತಮ್ಮ ಹೊರ ಪದರಗಳನ್ನು ಕಳಚುತ್ತವೆ  ಮತ್ತು ಅವುಗಳ ತಿರುಳುಗಳು (ಕೋರ್‌ಗಳು)  ಬಿಳಿ ಕುಬ್ಜವಾಗುತ್ತವೆ.

ಹೀಲಿಯಂ ಬಿಳಿ ಕುಬ್ಜ ಮತ್ತು ಕಾರ್ಬನ್-ಆಮ್ಲಜನಕ ಬಿಳಿ ಕುಬ್ಜ ನಡುವಿನ ವಿಲೀನದ ಪರಿಣಾಮ ಎ 980 ಆಗಿರಬಹುದು ಎಂದು ಅಧ್ಯಯನವು ಊಹಿಸುತ್ತದೆ - ಈ ಅಪರೂಪದ ವಸ್ತುಗಳನ್ನು ರೂಪಿಸಲು ಮತ್ತು ವಿತರಿಸಲು ಈ ವಿಲೀನ ಎಂಬ ನಾಟಕೀಯ ಘಟನೆ ನಡೆಯುತ್ತದೆ ಎಂದು ವಿಜ್ಞಾನಿಗಳು ಊಹಿಸುತ್ತಾರೆ.

ಇದಲ್ಲದೆ ಅಲ್ಲಿ  ಇನ್ನೊಂದು ಸಾಧ್ಯತೆ ಇದೆ. ಥಾರ್ನ್-ಝೈಟ್ಕೋವ್ ವಸ್ತುಗಳು (ಟಿ.ಝಡ್.ಒ.-TŻOs) – ಅಂದರೆ ಕೇಂದ್ರ/ಮಧ್ಯಭಾಗದಲ್ಲಿ ನ್ಯೂಟ್ರಾನ್ ನಕ್ಷತ್ರವನ್ನು ಹೊಂದಿರುವ ಸೈದ್ಧಾಂತಿಕ/ಊಹನಾತ್ಮಕ  ಹೈಬ್ರಿಡ್ ನಕ್ಷತ್ರಗಳು ಕೂಡಾ ಪ್ರತ್ಯೇಕ  ಆರ್.ಪಿ. -ಪ್ರಕ್ರಿಯೆ ಮೂಲಕ (ಕ್ಷಿಪ್ರವಾಗಿ  ಪ್ರೋಟಾನ್ ಸೆರೆಹಿಡಿಯುವಿಕೆ) ಜರ್ಮೇನಿಯಂ ಅನ್ನು ಉತ್ಪಾದಿಸುತ್ತವೆ ಎಂದು ತಿಳಿದುಬಂದಿದೆ. ಎ 980ಯು  ಟಿ.ಝಡ್.ಒ.-(TŻO)ನ ನಿರೀಕ್ಷಿತ ಗುಣಲಕ್ಷಣಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲವಾದರೂ, ಅಲ್ಲಿರುವ ಹೋಲಿಕೆಗಳು ಕುತೂಹಲಕಾರಿಯಾಗಿವೆ.

ಜರ್ಮೇನಿಯಂನಂತಹ ಭಾರ ಧಾತು/ವಸ್ತುಗಳು ಸಾಯುತ್ತಿರುವ ನಕ್ಷತ್ರಗಳ ಬೋಗುಣಿಯಲ್ಲಿ ಉಳಿಯುತ್ತವೆ. ಮತ್ತು ಈ ಕುರಿತ ಪ್ರತಿಯೊಂದು ಹೊಸ ಸುಳಿವು ಖಗೋಳಶಾಸ್ತ್ರಜ್ಞರು ಆ ಧಾತು/ವಸ್ತು ಹೇಗೆ ಉಗಮವಾಯಿತು ಎಂಬುದರ ಕುರಿತು ಕಾಸ್ಮಿಕ್ ಕಥೆಯನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ. ಎ 980 ರಲ್ಲಿ ಜರ್ಮೇನಿಯಂ ಗುರುತಿಸುವ ಮೂಲಕ, ವಿಜ್ಞಾನಿಗಳು ಈಗ ಪರಿಹರಿಸಬೇಕಾದ ಹೊಸ ಒಗಟು ಎಂದರೆ - ಅಪರೂಪದ ನಕ್ಷತ್ರಗಳು ಹೇಗೆ ವಿಕಸನಗೊಳ್ಳುತ್ತವೆ ಮತ್ತು ಬಿಳಿ ಕುಬ್ಜ ನಕ್ಷತ್ರಗಳು ಡಿಕ್ಕಿ ಹೊಡೆದಾಗ ಏನಾಗುತ್ತದೆ ಎಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ಆಳಗೊಳಿಸುವಂತಹ ಸಂಶೋಧನೆಯನ್ನು ಅನಾವರಣಗೊಳಿಸುವುದು.

"ಈ ಆವಿಷ್ಕಾರವು ನಕ್ಷತ್ರ ರಸಾಯನಶಾಸ್ತ್ರದ ಬಗ್ಗೆ ನಮಗೆ ತಿಳಿದಿದೆ ಎಂದು ನಾವು ಭಾವಿಸಿದ ವಿಷಯದ ಗಡಿಗಳನ್ನು ಮುಂದಕ್ಕೆ ತಳ್ಳಿದೆ” ಎಂದು ಅಧ್ಯಯನದ ಸಹ-ಲೇಖಕ ಡಾ. ಗಜೇಂದ್ರ ಪಾಂಡೆ ಹೇಳುತ್ತಾರೆ. "ನಕ್ಷತ್ರಗಳ ಬೆಳಕಿನಲ್ಲಿ ಬರೆಯಲಾಗಿರುವ  ಗುಪ್ತ ಕಥೆಗಳನ್ನು ಬಹಿರಂಗಪಡಿಸುವಲ್ಲಿ ಹೈ-ರೆಸಲ್ಯೂಶನ್ ಸ್ಪೆಕ್ಟ್ರೋಸ್ಕೋಪಿಯನ್ನು ಎಷ್ಟೋಂದು ಶಕ್ತಿಯುತವಾಗಿ ಬಳಸಬಹುದು ಎಂಬುದನ್ನು ಇದು ತೋರಿಸುತ್ತದೆ." ಎನ್ನುತ್ತಾರವರು.

ಸಂಶೋಧನೆಯನ್ನು ದಿ ಆಸ್ಟ್ರೋಫಿಸಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ಗೆ ಸಂಬಂಧಿಸಿ ಇದು ಪ್ರಮುಖ ಮೈಲಿಗಲ್ಲಾಗಿದೆ - ಇದು ಒಂದೇ ನಕ್ಷತ್ರವನ್ನು ಬೆಳಗಿಸುವುದು ಮಾತ್ರವಲ್ಲ, ನಕ್ಷತ್ರ ವಿಕಾಸದ ಸಂಪೂರ್ಣ ಹೊಸ ಗಡಿಗಳನ್ನೂ ಬೆಳಗಿಸುತ್ತದೆ.

 

*****


(Release ID: 2137924)
Read this release in: English , Urdu , Hindi