ರಕ್ಷಣಾ ಸಚಿವಾಲಯ
azadi ka amrit mahotsav

ಎಒಸಿ-ಇನ್-ಸಿ ತರಬೇತಿ ಕಮಾಂಡ್ ಆಗಿ ಏರ್ ಮಾರ್ಷಲ್ ತೇಜಿಂದರ್ ಸಿಂಗ್ ಅಧಿಕಾರ ಸ್ವೀಕಾರ 

Posted On: 01 MAY 2025 6:57PM by PIB Bengaluru

ಏರ್ ಮಾರ್ಷಲ್ ತೇಜಿಂದರ್ ಸಿಂಗ್ ಅವರು 2025ರ ಮೇ 01 ರಂದು ತರಬೇತಿ ಕಮಾಂಡಿನ  ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಎಒಸಿ-ಇನ್-ಸಿ) ಆಗಿ ಅಧಿಕಾರ ವಹಿಸಿಕೊಂಡರು. ತಮ್ಮ ಹೊಸ ನೇಮಕಾತಿಯ ಅಧಿಕಾರವನ್ನು ವಹಿಸಿಕೊಂಡ ನಂತರ, ಏರ್ ಮಾರ್ಷಲ್ ಅವರು ತರಬೇತಿ ಕಮಾಂಡ್ ಯುದ್ಧ ಸ್ಮಾರಕದಲ್ಲಿ ಪುಷ್ಪಗುಚ್ಛವನ್ನು ಇರಿಸುವ ಮೂಲಕ ಶೌರ್ಯ ಮೆರೆದ ಹೃದಯಗಳಿಗೆ ಗೌರವ ಸಲ್ಲಿಸಿದರು.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾದ ಏರ್ ಮಾರ್ಷಲ್ ತೇಜಿಂದರ್ ಅವರನ್ನು 1987ರ ಜೂನ್ 13 ರಂದು ಐಎಎಫ್ ನ (ಭಾರತೀಯ ವಾಯು ಪಡೆಯ) ಯುದ್ಧ ವಿಭಾಗಕ್ಕೆ ಫೈಟರ್ ಸ್ಟ್ರೀಮ್ ನಲ್ಲಿ ನಿಯೋಜಿಸಲಾಯಿತು. ಅವರು 4500 ಗಂಟೆಗಳ ಹಾರಾಟದೊಂದಿಗೆ ವರ್ಗ 'ಎ' ಅರ್ಹ ಫ್ಲೈಯಿಂಗ್ ಬೋಧಕರಾಗಿದ್ದಾರೆ, ಅವರು ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಹಳೆಯ ವಿದ್ಯಾರ್ಥಿ. ಅವರು ಫೈಟರ್ ಸ್ಕ್ವಾಡ್ರನ್, ರಾಡಾರ್ ಸ್ಟೇಷನ್, ಪ್ರಮುಖ ಫೈಟರ್ ಬೇಸ್ ಕಮಾಂಡಿಂಗ್ ಮಾಡಿರುವುದಲ್ಲದೆ ಜಮ್ಮು ಮತ್ತು ಕಾಶ್ಮೀರದ ಏರ್ ಆಫೀಸರ್ ಕಮಾಂಡಿಂಗ್ ಆಗಿದ್ದರು. ಅವರ ವೈವಿಧ್ಯಮಯ ಸಿಬ್ಬಂದಿ ನೇಮಕಾತಿಗಳಲ್ಲಿ ಕಮಾಂಡ್ ಪ್ರಧಾನ ಕಚೇರಿಯಲ್ಲಿ ಕಾರ್ಯಾಚರಣೆ ಸಿಬ್ಬಂದಿ, ವಾಯುದಳದ ಪ್ರಧಾನ ಕಚೇರಿಯಲ್ಲಿ ಏರ್ ಕಮಾಂಡರ್ (ಸಿಬ್ಬಂದಿ ಅಧಿಕಾರಿಗಳು -1), ಐಡಿಎಸ್ ಪ್ರಧಾನ ಕಚೇರಿಯಲ್ಲಿ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ನ ಉಪ ಸಹಾಯಕ ಮುಖ್ಯಸ್ಥ, ಹಣಕಾಸು (ಯೋಜನೆ), ಏರ್ ಕಮಾಂಡರ್ (ಏರೋಸ್ಪೇಸ್ ಸುರಕ್ಷತೆ), ವಾಯು ಸಿಬ್ಬಂದಿ ಕಾರ್ಯಾಚರಣೆಗಳ ಸಹಾಯಕ ಮುಖ್ಯಸ್ಥ (ಆಕ್ರಮಣ) ಮತ್ತು ಎಸಿಎಎಸ್ ಕಾರ್ಯಾಚರಣೆ (ಕಾರ್ಯತಂತ್ರ) ಮತ್ತು ಮೇಘಾಲಯದ ಶಿಲ್ಲಾಂಗ್ ನಲ್ಲಿರುವ ಈಸ್ಟರ್ನ್ ಏರ್ ಕಮಾಂಡ್ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿ ಹುದ್ದೆಗಳು ಸೇರಿವೆ. ಪ್ರಸ್ತುತ ನೇಮಕಾತಿಗೆ ಮೊದಲು, ಅವರು ವಾಯು ದಳದ ಕೇಂದ್ರ ಕಚೇರಿಯಲ್ಲಿ (ವಿಬಿ) ವಾಯು ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದರು.

ಅವರ ಶ್ಲಾಘನೀಯ ಸೇವೆಗಳನ್ನು ಗುರುತಿಸಿ 2007ರಲ್ಲಿ ವಾಯು ಸೇನಾ ಪದಕ ಮತ್ತು 2022ರಲ್ಲಿ ಅತಿ ವಿಶಿಷ್ಟ ಸೇವಾ ಪದಕವನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ನೀಡಲಾಗಿದೆ.

 

*****


(Release ID: 2125943) Visitor Counter : 22
Read this release in: English , Urdu , Hindi