ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಹಿಮೋಫಿಲಿಯಾಗೆ (ರಕ್ತ ಅಸ್ವಸ್ಥತೆ/ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ) ವಂಶವಾಹಿ(ಜೀನ್) ಚಿಕಿತ್ಸೆಯಲ್ಲಿ ಭಾರತ ಪ್ರಗತಿ ಸಾಧಿಸಿದೆ, ಡಾ. ಜಿತೇಂದ್ರ ಸಿಂಗ್ ಅವರು ಬ್ರಿಕ್-ಇನ್ ಸ್ಟೆಮ್(BRIC-inStem) ಪ್ರಯೋಗಗಳನ್ನು ಪರಿಶೀಲಿಸಿದರು
"ಇದು ಕೇವಲ ವಿಜ್ಞಾನವಲ್ಲ, ಇದು ರಾಷ್ಟ್ರ ನಿರ್ಮಾಣ": ಭವಿಷ್ಯದ ಆರ್ಥಿಕತೆಯಲ್ಲಿ ಬಯೋಟೆಕ್ ನ (ಜೈವಿಕತಂತ್ರಜ್ಞಾನ) ಪಾತ್ರವನ್ನು ಶ್ಲಾಘಿಸಿದ ಸಚಿವರು
ಪ್ರಯೋಗಾಲಯದಿಂದ ಜೀವನಕ್ಕೆ: ಬೆಂಗಳೂರಿನ ಬ್ರಿಕ್-ಇನ್ ಸ್ಟೆಮ್, ಜೀನ್ ಥೆರಪಿ, ಪುನರುತ್ಪಾದಕ ವಿಜ್ಞಾನದೊಂದಿಗೆ ಭಾರತದ ಜೈವಿಕ ಕ್ರಾಂತಿಯನ್ನು ಮುನ್ನಡೆಸುತ್ತದೆ
Posted On:
24 APR 2025 4:30PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಮತ್ತು ಪ್ರಧಾನಮಂತ್ರಿ ಕಾರ್ಯಾಲಯದ ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಬ್ರಿಕ್-ಇನ್ ಸ್ಟೆಮ್ ನಲ್ಲಿನ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಪ್ರಮುಖ ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ಕ್ಲಿನಿಕಲ್ ಪ್ರಯೋಗಗಳನ್ನು ಪರಿಶೀಲಿಸಿದರು. ಇದನ್ನು "ಭಾರತದ ವೈಜ್ಞಾನಿಕ ಪ್ರಯಾಣದಲ್ಲಿ ಮೈಲಿಗಲ್ಲು" ಎಂದು ಕರೆದ ಸಚಿವರು, ತಡೆಗಟ್ಟುವ ಮತ್ತು ಪುನರುತ್ಪಾದಕ ಆರೋಗ್ಯ ರಕ್ಷಣೆಗೆ ಸಂಸ್ಥೆಯ ಕೊಡುಗೆಗಳನ್ನು ಶ್ಲಾಘಿಸಿದರು.
ಡಾ. ಜಿತೇಂದ್ರ ಸಿಂಗ್ ಅವರು ತಮ್ಮ ಭೇಟಿಯ ಸಮಯದಲ್ಲಿ, ಭಾರತದ ಭವಿಷ್ಯದ ಆರ್ಥಿಕತೆ ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ರೂಪಿಸುವಲ್ಲಿ ಜೈವಿಕ ತಂತ್ರಜ್ಞಾನದ ಕಾರ್ಯತಂತ್ರದ ಮಹತ್ವವನ್ನು ಒತ್ತಿ ಹೇಳಿದರು. "ಇದು ಕೇವಲ ವಿಜ್ಞಾನದ ವಿಷಯ ಅಲ್ಲ - ಇದು ರಾಷ್ಟ್ರ ನಿರ್ಮಾಣದ ಬಗ್ಗೆ" ಎಂದ ಅವರು, ಜೈವಿಕ ತಂತ್ರಜ್ಞಾನ ಇಲಾಖೆಯ (ಡಿಬಿಟಿ) ಇತ್ತೀಚಿನ ಯಶಸ್ಸನ್ನು ಮತ್ತು ಸಾಪೇಕ್ಷ ಅಸ್ಪಷ್ಟತೆಯಿಂದ ರಾಷ್ಟ್ರೀಯ ಪ್ರಸ್ತುತತೆಗೆ ಹೊರಹೊಮ್ಮಿರುವುದನ್ನು ಶ್ಲಾಘಿಸಿದರು.

ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರವು ಕಳೆದ ದಶಕದಲ್ಲಿ 16 ಪಟ್ಟು ಬೆಳೆದು 2024ರಲ್ಲಿ 165.7 ಶತಕೋಟಿ ಡಾಲರ್ ತಲುಪಿದ್ದು, 2030ರ ವೇಳೆಗೆ 300 ಶತಕೋಟಿ ಡಾಲರ್ ತಲುಪುವ ದೃಷ್ಟಿಕೋನ ಹೊಂದಿದೆ. ಜೈವಿಕ ತಂತ್ರಜ್ಞಾನದ ಮೂಲಕ ಆರ್ಥಿಕತೆ, ಉದ್ಯೋಗ ಮತ್ತು ಪರಿಸರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ, ಇತ್ತೀಚೆಗೆ ಅನುಮೋದಿಸಲಾದ ಬಯೋ-ಇ 3 ನೀತಿ ಸೇರಿದಂತೆ ನೀತಿ ಸುಧಾರಣೆಗಳನ್ನು ಸಕ್ರಿಯಗೊಳಿಸಲು ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಸಚಿವರು ಹೇಳಿದರು. "ಒಂದು ದಶಕದ ಹಿಂದಕ್ಕೆ ಹೋಲಿಸಿದರೆ ಆಗ ಕೇವಲ 50 ಮಾತ್ರ ಇದದ್ದು, ಈಗ 10,000ಕ್ಕೂ ಹೆಚ್ಚು ಬಯೋಟೆಕ್ ಸ್ಟಾರ್ಟ್ಅಪ್ ಗಳನ್ನು ನಾವು ಹೊಂದಿದ್ದೇವೆ," ಎಂದು ಗಮನಸೆಳೆದರು.
ಡಾ. ಜಿತೇಂದ್ರ ಸಿಂಗ್ ಅವರು 14 ಸ್ವಾಯತ್ತ ಸಂಸ್ಥೆಗಳನ್ನು ಒಂದೇ ಸೂರಿನಡಿ ಏಕೀಕರಿಸಿದ ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿ (ಬಿಆರ್ ಐಸಿ) ರಚನೆಯನ್ನು ಶ್ಲಾಘಿಸಿದರು. "ಬ್ರಿಕ್-ಇನ್ ಸ್ಟೆಮ್ ಮೂಲಭೂತ ಮತ್ತು ಮಾನವನ ಆರೋಗ್ಯವನ್ನು ಸುಧಾರಿಸುವ ವಿಜ್ಞಾನದ ಅಂತದಲ್ಲಿದೆ," ಎಂದು ಅವರು ಹೇಳಿದರು, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸೂಕ್ಷ್ಮ ಜೀವಿಗಳ ನಾಶಕ ಆಂಟಿ-ವೈರಲ್ ಮುಕ ಕವಚ (ಮಾಸ್ಕ್) ಮತ್ತು ನರಮಂಡಲಕ್ಕೆ ಹಾನಿಮಾಡುವ ಕೀಟನಾಶಕಗಳಿಂದ ರೈತರನ್ನು ರಕ್ಷಿಸುವ 'ಕಿಸಾನ್ ಕವಚ್' ನಂತಹ ಆವಿಷ್ಕಾರಗಳನ್ನು ಒತ್ತಿ ಹೇಳಿದರು.

ಭಾರತದ ಒನ್ ಹೆಲ್ತ್ ಮಿಷನ್ ಅಡಿಯಲ್ಲಿ ಹೆಚ್ಚಿನ ಅಪಾಯದ ರೋಗಕಾರಕಗಳನ್ನು ಅಧ್ಯಯನ ಮಾಡುವ ಪ್ರಮುಖ ರಾಷ್ಟ್ರೀಯ ಸೌಲಭ್ಯವಾದ ಬ್ರಿಕ್-ಇನ್ ಸ್ಟೆಮ್ ನ ಜೈವಿಕ ಸುರಕ್ಷತಾ ಹಂತ 3 ಪ್ರಯೋಗಾಲಯವು ಈ ಭೇಟಿಯ ಪ್ರಮುಖ ಅಂಶವಾಗಿದೆ. "ಇತ್ತೀಚಿನ ಸಾಂಕ್ರಾಮಿಕ ರೋಗವು, ನಾವು ಯಾವಾಗಲೂ ಜಾಗರೂಕರಾಗಿ ಸಿದ್ಧರಾಗಿರಬೇಕು ಎಂದು ನಮಗೆ ಕಲಿಸಿದೆ. ಈ ರೀತಿಯ ಸೌಲಭ್ಯಗಳು ನಮಗೆ ಒಂದು ಹೆಜ್ಜೆ ಮುಂದೆ ಇರಲು ಸಹಾಯ ಮಾಡುತ್ತದೆ," ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು.
ಅಭಿವೃದ್ಧಿ ಜೀವಶಾಸ್ತ್ರ ಸಂಶೋಧನೆಯನ್ನು ಮುನ್ನಡೆಸುವ ಮೂಲಕ ಹುಟ್ಟಿನ ದೋಷಗಳು ಮತ್ತು ಬಂಜೆತನವನ್ನು ಪರಿಹರಿಸಲು, ಹೊಸದಾಗಿ ಪ್ರಾರಂಭಿಸಲಾದ ಸೆಂಟರ್ ಫಾರ್ ರಿಸರ್ಚ್ ಅಪ್ಲಿಕೇಶನ್ ಅಂಡ್ ಟ್ರೈನಿಂಗ್ ಇನ್ ಎಂಬ್ರಿಯಾಲಜಿ (ಸಿಆರ್ ಇಎಟಿ) ಅನ್ನು ಸಚಿವರು ಶ್ಲಾಘಿಸಿದರು. "ಸುಮಾರು ಶೇಕಡ 3 ರಿಂದ 4 ರಷ್ಟು ಶಿಶುಗಳು ಕೆಲವು ರೀತಿಯ ದೋಷಗಳೊಂದಿಗೆ ಜನಿಸುವುದರಿಂದ, ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯವನ್ನು ಸುಧಾರಿಸಲು ಈ ಕೇಂದ್ರವು ಅತ್ಯಗತ್ಯವಾಗಿದೆ," ಎಂದು ಹೇಳಿದರು.

ವೈಜ್ಞಾನಿಕ ಮತ್ತು ವೈದ್ಯಕೀಯ ಸಂಸ್ಥೆಗಳ ನಡುವೆ ಹೆಚ್ಚಿನ ಸಹಯೋಗಕ್ಕೆ ಕರೆ ನೀಡಿದ ಅವರು, ಬ್ರಿಕ್-ಇನ್ ಸ್ಟೆಮ್ ಎಂಡಿ-ಪಿಎಚ್ ಡಿ ಪದವಿ/ಕಾರ್ಯಕ್ರಮಗಳನ್ನು ಅನ್ವೇಷಿಸಬೇಕು, ಕ್ಲಿನಿಕಲ್ ಸಂಶೋಧನೆಯೊಂದಿಗೆ ಹೆಚ್ಚು ಸಂಯೋಜಿಸಬೇಕು ಮತ್ತು ಸಂಘಟಿತ ಸಂವಹನ ತಂತ್ರಗಳ ಮೂಲಕ ವೈದ್ಯಕೀಯ ಅನುಕೂಲತೆಗಳ ಗೋಚರತೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. "ಇಲ್ಲಿ ಏನು ಮಾಡಲಾಗುತ್ತಿದೆಯೋ ಅದು ದೇಶಾದ್ಯಂತ ಪ್ರತಿಧ್ವನಿಸಬೇಕು - ಪ್ರಚಾರಕ್ಕಾಗಿ ಅಲ್ಲ, ಆದರೆ ಇದು ರಾಷ್ಟ್ರಕ್ಕೆ ಬೇಕಾಗಿದೆ" ಎಂದು ಹೇಳಿದರು.
ಡಾ. ಜಿತೇಂದ್ರ ಸಿಂಗ್ ಅವರು ಭಾರತದ ಭವಿಷ್ಯದ ಆರ್ಥಿಕತೆಯು ಜೈವಿಕ ಚಾಲಿತವಾಗಿರುತ್ತದೆ, ಬ್ರಿಕ್-ಇನ್ ಸ್ಟೆಮ್ ನಂತಹ ಸಂಸ್ಥೆಗಳು ಈ ಪರಿವರ್ತನೆಯ ದಾರಿದೀಪಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು. "ಮಾರ್ಕ್ ಟ್ವೈನ್ ಹೇಳಿದಂತೆ, ಆರ್ಥಿಕತೆಯು ಅರ್ಥಶಾಸ್ತ್ರಜ್ಞರಿಗೆ ಮಾತ್ರ ಬಿಡಲಾಗದಷ್ಟು ಗಂಭೀರ ವಿಷಯವಾಗಿದೆ. ಜೈವಿಕ ತಂತ್ರಜ್ಞಾನವು ಇನ್ನು ಮುಂದೆ ಕೇವಲ ವಿಜ್ಞಾನವಲ್ಲ - ಅದು ನಮ್ಮ ರಾಷ್ಟ್ರೀಯ ಕಾರ್ಯತಂತ್ರದ ಆಧಾರಸ್ತಂಭವಾಗಿದೆ ಎಂದರು.
*****
(Release ID: 2124183)
Visitor Counter : 6