ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಸುಶ್ರೀ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸ್ವಿಗ್ಗಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ


ಎನ್.ಸಿ.ಎಸ್.ನಲ್ಲಿ ಗಿಗ್ ಮತ್ತು ಲಾಜಿಸ್ಟಿಕ್ಸ್ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು 2-3 ವರ್ಷಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ತಿಳುವಳಿಕೆ ಒಪ್ಪಂದ  

Posted On: 15 APR 2025 7:08PM by PIB Bengaluru

ರಾಷ್ಟ್ರೀಯ ವೃತ್ತಿ ಸೇವೆ (ಎನ್.ಸಿ.ಎಸ್.) ಪೋರ್ಟಲ್ ಮೂಲಕ ಗಿಗ್ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ಉದ್ಯೋಗ ಸಂಪರ್ಕಗಳನ್ನು ಬಲಪಡಿಸುವತ್ತದ ಮಹತ್ವದ ಹೆಜ್ಜೆಯ  ಮೂಲಕ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸ್ವಿಗ್ಗಿ ಇಂದು ನವದೆಹಲಿಯಲ್ಲಿ ತಿಳುವಳಿಕೆ ಒಪ್ಪಂದಕ್ಕೆ (ಎಂ.ಒ.ಯು.) ಸಹಿ ಹಾಕಿವೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ತಮ್ಮ ಭಾಷಣದಲ್ಲಿ ಡಾ. ಮಾಂಡವಿಯ ಅವರು "ರಾಷ್ಟ್ರೀಯ ವೃತ್ತಿ ಸೇವಾ ಪೋರ್ಟಲ್ ಭಾರತದಾದ್ಯಂತ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಸಂಪರ್ಕಿಸುವ ಒಂದು ಕ್ರಿಯಾತ್ಮಕ ವೇದಿಕೆಯಾಗಿದೆ. ಜನವರಿ 31, 2025 ರ ಹೊತ್ತಿಗೆ 1.25 ಕೋಟಿಗೂ ಹೆಚ್ಚು ಸಕ್ರಿಯ ಉದ್ಯೋಗಾಕಾಂಕ್ಷಿಗಳು ಮತ್ತು 40 ಲಕ್ಷ ನೋಂದಾಯಿತ ಉದ್ಯೋಗದಾತರೊಂದಿಗೆ, ಇದು ಕೆಲಸದ ತಂಡವನ್ನು ಸಜ್ಜುಗೊಳಿಸುವಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಸ್ವಿಗ್ಗಿಯೊಂದಿಗಿನ ಈ ಪಾಲುದಾರಿಕೆಯು ವೇಗವಾಗಿ ಬೆಳೆಯುತ್ತಿರುವ ಗಿಗ್ ಮತ್ತು ಪ್ಲಾಟ್ಫಾರ್ಮ್ (ವೇದಿಕೆಯ)ಆರ್ಥಿಕತೆಗೆ ಪೋರ್ಟಲ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ, ಲಕ್ಷಾಂತರ ಯುವಕರಿಗೆ ಹೊಂದಿಕೊಳ್ಳುವ ಮತ್ತು ಸ್ಥಳ ಆಧಾರಿತ ಅವಕಾಶಗಳನ್ನು  ಪಡೆಯಲು ಸಹಾಯ ಮಾಡುತ್ತದೆ." ಎಂದು ಹೇಳಿದರು.

ಡಾ. ಮಾಂಡವಿಯ ಸಹಯೋಗವನ್ನು ಸ್ವಾಗತಿಸುತ್ತಾ ಮುಂದಿನ 2-3 ವರ್ಷಗಳಲ್ಲಿ ಎನ್.ಸಿ.ಎಸ್. ಪೋರ್ಟಲ್ ಮೂಲಕ 12 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸಜ್ಜುಗೊಳಿಸುವ ಸ್ವಿಗ್ಗಿಯ ಬದ್ಧತೆಯನ್ನು ಶ್ಲಾಘಿಸಿದರು. "ಈ ಸಹಯೋಗವು ಇಬ್ಬರಿಗೂ ಲಾಭವಾಗುವ ಮಾದರಿಯನ್ನು ಪ್ರತಿನಿಧಿಸಿದರೆ,  ವೈವಿಧ್ಯಮಯ, ಕೌಶಲ್ಯಪೂರ್ಣ ಮತ್ತು ಉದ್ಯೋಗಕ್ಕೆ ಸಿದ್ಧವಾಗಿರುವ ಪ್ರತಿಭೆಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ,   ದೇಶಾದ್ಯಂತ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಸುಧಾರಿತ ಗೋಚರತೆ ಮತ್ತು ಉದ್ಯೋಗಾವಕಾಶಗಳ ಮಾಹಿತಿಯ   ಪ್ರಯೋಜನ ಪಡೆಯುತ್ತಾರೆ" ಎಂದು ಕೇಂದ್ರ ಸಚಿವರು ಹೇಳಿದರು.

ಈ ಪ್ಲಾಟ್ಫಾರ್ಮ್ ನ ಲಭ್ಯತೆ ಮತ್ತು ವ್ಯಾಪ್ತಿಯ ಬಗ್ಗೆ ಒತ್ತಿ ಹೇಳುತ್ತಾ, ಕೇಂದ್ರ ಸಚಿವರು, ಎನ್.ಸಿ.ಎಸ್.  ಅನ್ನು ಉದ್ಯೋಗ, ಕೌಶಲ್ಯ ಮತ್ತು ಸಮಾಲೋಚನೆಗಾಗಿ ಒಂದೇ ಕಡೆಯಲ್ಲಿ ಸಿಗುವ ಪರಿಹಾರವನ್ನಾಗಿ ಮಾಡುವ ಮತ್ತು ಅದೇ ಸಮಯದಲ್ಲಿ ಹೈಪರ್ಲೋಕಲ್ ಉದ್ಯೋಗ ಹೊಂದಾಣಿಕೆ ಹಾಗು  ದೇಶೀಯ ಮತ್ತು ಅಂತರರಾಷ್ಟ್ರೀಯ ನಿಯೋಜನೆಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುವ ಸರ್ಕಾರದ ದೃಷ್ಟಿಕೋನವನ್ನು ಪುನರುಚ್ಚರಿಸಿದರು.

ಈ ಒಪ್ಪಂದದಡಿಯಲ್ಲಿ, ಸ್ವಿಗ್ಗಿ ತನ್ನ ವಿತರಣೆ, ಲಾಜಿಸ್ಟಿಕ್ಸ್ ಮತ್ತು ಬೆಂಬಲ ಪಾತ್ರಗಳನ್ನು ಗಿಗ್ ಅವಕಾಶಗಳ ಜೊತೆಗೆ ಎನ್.ಸಿ.ಎಸ್. ಪೋರ್ಟಲ್ ಗೆ ಸಂಯೋಜಿಸುತ್ತದೆ. ಈ ನೈಜ-ಸಮಯದ ಜೋಡಣೆಯು ಎನ್.ಸಿ.ಎಸ್. ಬಳಕೆದಾರರಿಗೆ ಗಿಗ್ ಉದ್ಯೋಗಗಳ ಗೋಚರತೆಯನ್ನು ಹೆಚ್ಚಿಸುತ್ತದೆ ಮತ್ತು ನಗರ ಮತ್ತು ಅರೆ ನಗರ/ ಉಪನಗರ ಪ್ರದೇಶಗಳಲ್ಲಿ ಸಕಾಲಿಕ ಮತ್ತು ಪರಿಶೀಲಿಸಿದ ಉದ್ಯೋಗಾವಕಾಶಗಳನ್ನು ಪಡೆಯಲು ಅವರಿಗೆ ಅನುವು ಮಾಡಿಕೊಡುತ್ತದೆ.

ಸ್ವಿಗ್ಗಿಯ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥರಾದ ಶ್ರೀ ದಿನಕರ್ ವಶಿಷ್ಟ್ ಅವರು ಸಹಯೋಗವನ್ನು ಸ್ವಾಗತಿಸಿದರು ಮತ್ತು ಉದ್ಯೋಗವನ್ನು ಹೆಚ್ಚಿಸಲು ಗಿಗ್ ಪ್ಲಾಟ್ಫಾರ್ಮ್ ಮತ್ತು ಸರ್ಕಾರಿ ಪ್ಲಾಟ್ಫಾರ್ಮ್ ಗಳ ನಡುವಿನ ಪಾಲುದಾರಿಕೆಗಳ ಮಹತ್ವವನ್ನು ಒತ್ತಿ ಹೇಳಿದರು. “ಸ್ವಿಗ್ಗಿಯ ಪ್ರಯಾಣವು ಡಿಜಿಟಲ್ ಉದ್ಯಮಶೀಲತೆ ಜೀವನೋಪಾಯವನ್ನು ಹೇಗೆ ಪರಿವರ್ತಿಸುತ್ತದೆ ಎನ್ನುವುದನ್ನು ತೋರಿಸುತ್ತದೆ. ಈ ಒಪ್ಪಂದವು ಉದ್ಯೋಗಾಕಾಂಕ್ಷಿಗಳಿಗೆ ಶಕ್ತಿಯನ್ನು  ನೀಡುತ್ತದೆ ಮತ್ತು ಹೊಸ ಯುಗದ ಆರ್ಥಿಕತೆಯಲ್ಲಿ ಸಮಗ್ರ ಬೆಳವಣಿಗೆಗೆ ನಮ್ಮ ಬದ್ಧತೆಗೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ.”

ಉದ್ಯೋಗಾಕಾಂಕ್ಷಿಗಳು ಮತ್ತು ಖಾಸಗಿ ವಲಯದ ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು, ಉದ್ಯೋಗಾಕಾಂಕ್ಷಿಗಳು ಮತ್ತು ಖಾಸಗಿ ವಲಯದ ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು, ಉದ್ಯೋಗ ಸೌಲಭ್ಯದಲ್ಲಿ ಸಾರ್ವಜನಿಕ-ಖಾಸಗಿ ಸಮನ್ವಯಕ್ಕೆ ಸಮಗ್ರ ವಿಧಾನವನ್ನು ಸಕ್ರಿಯಗೊಳಿಸಲು ಖಾಸಗಿ ಉದ್ಯೋಗದಾತರು/ಪೋರ್ಟಲ್ಗಳು, ಇತರ ಪ್ರಮುಖ ಉದ್ಯೋಗ/ಗಿಗ್ ಪ್ಲಾಟ್ಫಾರ್ಮ್ ಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವ ಸರಣಿಯಲ್ಲಿ ಇದು ಒಂದು ಹಂತವಾಗಿದೆ.

ಒಪ್ಪಂದದ ಪ್ರಮುಖ ಅಂಶಗಳು:

  • ಸ್ವಿಗ್ಗಿ ನಿಯಮಿತವಾಗಿ ಎನ್.ಸಿ.ಎಸ್. ಪೋರ್ಟಲ್ನಲ್ಲಿ ಪರಿಶೀಲಿಸಿದ ಗಿಗ್ ಮತ್ತು ವಿತರಣಾ ಉದ್ಯೋಗಾವಕಾಶಗಳ ಮಾಹಿತಿಯನ್ನು ಪ್ರಕಟಿಸುತ್ತದೆ ಮತ್ತು ಅದರ ಮೂಲಕ ನೇಮಕಾತಿಯನ್ನು ನಡೆಸುತ್ತದೆ.
  • ಎಪಿಐ -ಆಧಾರಿತ ಜೋಡಣೆಯು ಬಳಕೆದಾರರಿಗೆ ನೈಜ-ಸಮಯದ ಉದ್ಯೋಗಾವಕಾಶದ ಪ್ರಕಟಣೆಗಳು ಮತ್ತು ತಡೆರಹಿತ ಅಪ್ಲಿಕೇಶನ್ ಟ್ರ್ಯಾಕಿಂಗ್ ಅನ್ನು ಖಚಿತಪಡಿಸುತ್ತದೆ.
  • ವಿಶೇಷವಾಗಿ ಯುವಕರು, ಮಹಿಳೆಯರು ಮತ್ತು ತಮಗೆ ಹೊಂದಿಕೊಳ್ಳುವ ಕೆಲಸವನ್ನು ಬಯಸುವವರಿಗೆ ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ಮೂಲಕ ಎಲ್ಲರನ್ನೊಳಗೊಂಡ ನೇಮಕಾತಿಯ ಮೇಲೆ ಕೇಂದ್ರೀಕರಿಸಲಾಗಿದೆ.
  • ಈ ಪಾಲುದಾರಿಕೆಯು ರಚನಾತ್ಮಕ ಆನ್ಬೋರ್ಡಿಂಗ್, ಡಿಜಿಟಲ್ ಸಬಲೀಕರಣ ಮತ್ತು ಕಾರ್ಮಿಕರ ಕಲ್ಯಾಣ ಯೋಜನೆಗಳ ಅರಿವನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎನ್.ಸಿ.ಎಸ್. ಪೋರ್ಟಲ್ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಫಲಿತಾಂಶಗಳನ್ನು ಸುಧಾರಿಸಲು ಬದ್ಧವಾಗಿದೆ ಮತ್ತು ಭಾರತದ ವೈವಿಧ್ಯಮಯ ಕೆಲಸಗಾರರಿಗೆ ಸಕ್ರಿಯಗೊಳಿಸುವ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಖಾಸಗಿ ವಲಯದೊಂದಿಗೆ  ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ.

 

*****


(Release ID: 2122292)