ರಕ್ಷಣಾ ಸಚಿವಾಲಯ
ಭಾರತದಲ್ಲಿ ಅತ್ಯಾಧುನಿಕ ವ್ಯವಸ್ಥೆಗಾಗಿ ಸಹ ಅಭಿವೃದ್ಧಿ ಮತ್ತು ಸಹ ಉತ್ಪಾದನೆ ಮಾಡುವಂತೆ ಜಾಗತಿಕ ಸಮುದಾಯಕ್ಕೆ ರಕ್ಷಣಾ ಸಚಿವರ ಕರೆ
ಪ್ರಸ್ತುತ ಜಾಗತಿಕ ಭದ್ರತಾ ಪರಿಸ್ಥಿತಿಯಲ್ಲಿ ನಾವೀನ್ಯತೆಯ ವಿಧಾನಗಳು ಮತ್ತು ಬಲಿಷ್ಠ ಸಹಭಾಗಿತ್ವದ ಬೇಡಿಕೆಯಿದೆ : ರಕ್ಷಣಾ ಸಚಿವರ ಸಮ್ಮೇಳನದಲ್ಲಿ ಶ್ರೀ ರಾಜನಾಥ್ ಸಿಂಗ್
“ಭಾರತವು ವಹಿವಾಟು ಸಂಬಂಧಗಳನ್ನು ನಂಬುವುದಿಲ್ಲ; ಇದರ ವಿಧಾನವು ಪರಸ್ಪರ ಸಾಮರ್ಥ್ಯ ನಿರ್ಮಾಣ, ಸಮೃದ್ಧಿ ಮತ್ತು ಪಾಲುದಾರ ರಾಷ್ಟ್ರಗಳ ಭದ್ರತೆ ಅಗತ್ಯ ಎಂದು ಒತ್ತಿಹೇಳಿದೆ
"ನಮ್ಮ ಬದ್ಧತೆಯು ಹಿಂದೂ ಮಹಾಸಾಗರ ಪ್ರದೇಶವನ್ನು ಮೀರಿ ವಿಸ್ತರಿಸಿದೆ, ಇದು ಸಮಾನತೆ, ನಂಬಿಕೆ, ಪರಸ್ಪರ ಗೌರವ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಅನುಸರಣೆಯ ಮೇಲೆ ಜಾಗತಿಕ ಪಾಲುದಾರಿಕೆಯನ್ನು ಬೆಳೆಸುವ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ"
Posted On:
11 FEB 2025 3:55PM by PIB Bengaluru
ಅತ್ಯಾಧುನಿಕ ವ್ಯವಸ್ಥೆಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯಲ್ಲಿ ಭಾರತದೊಂದಿಗೆ ಕೈಜೋಡಿಸುವಂತೆ ಜಾಗತಿಕ ಸಮುದಾಯಕ್ಕೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಆಹ್ವಾನ ನೀಡಿದ್ದಾರೆ. ಪ್ರಸ್ತುತ ಜಾಗತಿಕ ಭದ್ರತಾ ಸನ್ನಿವೇಶವು ನಾವೀನ್ಯತೆಯ ವಿಧಾನಗಳು ಮತ್ತು ಬಲವಾದ ಪಾಲುದಾರಿಕೆಗಳನ್ನು ಬಯಸುತ್ತದೆ ಎಂದು ಒತ್ತಿಹೇಳಿದ್ದಾರೆ. ಅವರು ಫೆಬ್ರವರಿ 11, 2025 ರಂದು ಕರ್ನಾಟಕದ ಬೆಂಗಳೂರಿನಲ್ಲಿ 15 ನೇ ಏರೋ ಇಂಡಿಯಾದ ಭಾಗವಾಗಿ ಆಯೋಜಿಸಲಾದ ರಕ್ಷಣಾ ಮಂತ್ರಿಗಳ ಸಮಾವೇಶ ‘ಅಂತಾರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕವಾಗಿ ತೊಡಗಿಕೊಳ್ಳುವ ಮೂಲಕ (ಬ್ರಿಡ್ಜ್) ಪುಟಿದೇಳುವ ಪರಿಸ್ಥಿತಿಯನ್ನು ನಿರ್ಮಿಸುವ” ವಿಷಯ ಕುರಿತ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ಸಮಾವೇಶದಲ್ಲಿ 81 ದೇಶಗಳ 162 ಪ್ರತಿನಿಧಿಗಳು, 15 ಮಂದಿ ರಕ್ಷಣಾ ಸಚಿವರು, 11 ಉಪ ರಕ್ಷಣಾ ಸಚಿವರು, 15 ಶಾಶ್ವತ ಕಾರ್ಯದರ್ಶಿಗಳು ಮತ್ತು 17 ಸೇವಾ ವಿಭಾಗಗಳ ಮುಖ್ಯಸ್ಥರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿತ್ತು.
ಹೆಚ್ಚುತ್ತಿರುವ ಘರ್ಷಣೆಗಳು, ಹೊಸ ಶಕ್ತಿ ಪ್ರದರ್ಶನ, ಹೊಸ ವಿಧಾನಗಳು ಮತ್ತು ಆಯುಧೀಕರಣದ ವಿಧಾನಗಳು, ರಾಜ್ಯೇತರ ವಲಯದಲ್ಲಿ ಬೆಳೆಯುತ್ತಿರುವ ಪಾತ್ರ ಮತ್ತು ವಿಚ್ಛಿದ್ರಕಾರಕ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯು ವಿಶ್ವ ಕ್ರಮವನ್ನು ಹೆಚ್ಚು ದುರ್ಬಲಗೊಳಿಸಿದೆ. ಹೈಬ್ರಿಡ್ ಯುದ್ಧವು ಶಾಂತಿಯ ಸಮಯದಲ್ಲಿಯೂ ಸಹ ನಿರ್ಣಾಯಕ ರಾಷ್ಟ್ರೀಯ ಮೂಲಸೌಕರ್ಯವನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಗಡಿ ಭದ್ರತೆ ಮತ್ತು ಆಂತರಿಕ ಭದ್ರತೆಯ ನಡುವಿನ ವ್ಯತ್ಯಾಸವು ಅಸ್ಪಷ್ಟವಾಗುತ್ತಿದೆ. ಸೈಬರ್ ವಲಯ ಮತ್ತು ಬಾಹ್ಯಾಕಾಶವು ಸಾರ್ವಭೌಮತ್ವದ ಸ್ಥಾಪಿತ ವ್ಯಾಖ್ಯಾನಕ್ಕೆ ಸವಾಲೊಡ್ಡಿದೆ” ಎಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಹೇಳಿದರು.
ಕೃತಕ ಬುದ್ದಿಮತ್ತೆ, ಕ್ವಾಂಟಮ್ ತಂತ್ರಜ್ಞಾನ, ಹೈಪರ್ಸಾನಿಕ್ ಮತ್ತು ಡೈರೆಕ್ಟ್ ಎನರ್ಜಿಯಂತಹ ವಿಚ್ಛಿದ್ರಕಾರಕ ತಂತ್ರಜ್ಞಾನಗಳು ಯುದ್ಧದ ಸ್ವರೂಪವನ್ನು ಮಾರ್ಪಡಿಸುತ್ತಿವೆ, ಹೊಸ ದುರ್ಬಲತೆಗಳನ್ನು ಸೃಷ್ಟಿಸುತ್ತಿವೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ಈ ಬದಲಾವಣೆಗಳು ಭವಿಷ್ಯದ ಯುದ್ಧದ ಮೇಲೆ ಆಳವಾದ ಪ್ರಭಾವ ಬೀರುತ್ತವೆ, ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಸಾಮರ್ಥ್ಯಗಳ ಮರುಮೌಲ್ಯಮಾಪನ ಕೈಗೊಳ್ಳಲು ಇದು ಒತ್ತಾಯಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ದುರ್ಬಲ ಸ್ಥಾನದಿಂದ ಅಂತಾರಾಷ್ಟ್ರೀಯ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರ ರಕ್ಷಣಾ ಸಾಮರ್ಥ್ಯಗಳನ್ನು ಪರಿವರ್ತಿಸಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. “ನಾವು ಆಧುನಿಕ ಅತ್ಯಾಧುನಿಕ ಭೂಮಿ, ಕಡಲ ಮತ್ತು ವಾಯು ವ್ಯವಸ್ಥೆಗಳ ಸಂಪೂರ್ಣ ಶ್ರೇಣಿಯ ಹೂಡಿಕೆ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಅನುಕೂಲಕರ ನೀತಿಯನ್ನು ಜಾರಿಗೆ ತಂದಿದ್ದೇವೆ. ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವೀನ್ಯತೆಗಾಗಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿರುವುದು ನಮ್ಮ ಸಾಮರ್ಥ್ಯಗಳು ಮತ್ತು ಆಕಾಂಕ್ಷೆಗಳಿಗೆ ಸಾಕ್ಷಿಯಾಗಿದೆ ”ಎಂದು ಅವರು ಹೇಳಿದರು.
ಭಾರತ ಉಜ್ವಲ ರಕ್ಷಣಾ ನವೋದ್ಯಮಗಳ ಪರಿಸರ ವ್ಯವಸ್ಥೆಯನ್ನು ಒಳಗೊಂಡಿದ್ದು, ಜಗತ್ತಿನ ಮೂರನೇ ಅತಿ ದೊಡ್ಡ ಯೂನಿಕಾರ್ನ್ ಗಳನ್ನು ಹೊಂದಿದೆ. ಭಾರತೀಯ ವೈಮಾನಿಕ ಮತ್ತು ರಕ್ಷಣಾ ವಲಯಗಳಲ್ಲಿ ಸಾಟಿಯಿಲ್ಲದಷ್ಟು ಅವಕಾಶಗಳಿದ್ದು, ಇದಕ್ಕೆ ನಿರ್ಣಾಯಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉದ್ಯಮಶೀಲತೆಯ ಸ್ಫೂರ್ತಿ ಲಭ್ಯವಿದೆ. "ನಮ್ಮ ಕೌಶಲ್ಯದ ನೆಲೆಯು ಹೆಚ್ಚು ಸ್ಪರ್ಧಾತ್ಮಕ ವೆಚ್ಚದಲ್ಲಿ ಉತ್ಪಾದಿಸಲು ನಮಗೆ ಅನುವು ಮಾಡಿಕೊಡುತ್ತದೆ. ನಮ್ಮ ಸ್ನೇಹಿತರು ಮತ್ತು ಪಾಲುದಾರರೊಂದಿಗೆ ಅತ್ಯಾಧುನಿಕ ರಕ್ಷಣಾ ಉಪಕರಣಗಳು, ಯಂತ್ರಾಂಶಗಳು, ಸೇವೆಗಳು ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳಲು ಭಾರತ ಬದ್ಧವಾಗಿದೆ” ಎಂದು ರಕ್ಷಣಾ ಸಚಿವರು ಮತ್ತು ಇತರ ವಿದೇಶಿ ಪ್ರತಿನಿಧಿಗಳನ್ನುದ್ದೇಶಿಸಿ ಹೇಳಿದರು.
ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯ ದೃಷ್ಟಿಗೆ ಭಾರತ ಧ್ವನಿಯಾಗಿದೆ. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ಐದು ‘ಎಸ್’ ವಿಧಾನದಿಂದ ಮಾರ್ಗದರ್ಶನ ಪಡೆದಿದೆ. ಸಮ್ಮಾನ್ (ಗೌರವ), ಸಂವಾದ್ (ಸಂವಾದ), ಸಹಯೋಗ್ (ಸಹಕಾರ), ಶಾಂತಿ (ಶಾಂತಿ) ಮತ್ತು ಸಮೃದ್ಧಿ (ಸಮೃದ್ಧಿ). ಈ ತತ್ವಗಳು ಭಾರತ ಅಂತರಾಷ್ಟ್ರೀಯವಾಗಿ ತೊಡಗಿಕೊಳ್ಳಲು ಮೂಲಾಧಾರವಾಗಿದೆ ಮತ್ತು ಇಂದಿನ ಜಗತ್ತಿನಲ್ಲಿ ಇವು ಬಲವಾಗಿ ಪ್ರತಿಧ್ವನಿಸುತ್ತವೆ, ಇದು ಹೆಚ್ಚು ಹೆಚ್ಚು ವಿಭಾಗಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಡಲ ಭದ್ರತೆ, ಆರ್ಥಿಕ ಅಭಿವೃದ್ಧಿ ಮತ್ತು ನೀಲಿ ಆರ್ಥಿಕತೆಯಂತಹ ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಹಿಂದೂ ಮಹಾಸಾಗರ ಪ್ರದೇಶ (ಐಒಆರ್) ಗಳಿಗಾಗಿ ಭಾರತವು ‘ಈ ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ (ಸಾಗರ್)’ ದೃಷ್ಟಿಕೋನವನ್ನು ಸ್ವೀಕರಿಸಿದೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ಕಡಲ್ಗಳ್ಳತನ, ಭಯೋತ್ಪಾದನೆ, ಅಕ್ರಮ ಮತ್ತು ಅನಿಯಂತ್ರಿತ ಮೀನುಗಾರಿಕೆ ಮತ್ತು ಹವಾಮಾನ-ಸಂಬಂಧಿತ ಸವಾಲುಗಳಂತಹ ಸಾಂಪ್ರದಾಯಿಕವಲ್ಲದ ಬೆದರಿಕೆಗಳನ್ನು ಎದುರಿಸುವಲ್ಲಿ ಭಾರತದ ಸಹಯೋಗದ ಪ್ರಯತ್ನಗಳು ಐಒಆರ್ ಅನ್ನು ಮೀರಿದ ಜಾಗತಿಕ ಸಹಕಾರ ಕ್ರಮಕ್ಕಾಗಿ ಬದ್ಧತೆಯನ್ನು ಒತ್ತಿಹೇಳುತ್ತವೆ ಎಂದು ಅವರು ಹೇಳಿದರು. "ನಮ್ಮ ಬದ್ಧತೆಯು ಐಒಆರ್ ಅನ್ನು ಮೀರಿ ವಿಸ್ತರಿಸಿದೆ ಮತ್ತು ಸಮಾನತೆ, ನಂಬಿಕೆ, ಪರಸ್ಪರ ಗೌರವ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವ ಜಾಗತಿಕ ಪಾಲುದಾರಿಕೆಗಳನ್ನು ಬೆಳೆಸುವ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳಿದರು.
ಭಾರತ ವಹಿವಾಟು ಸಂಬಂಧಗಳಲ್ಲಿ ಅಥವಾ ಹೇರುವ ಪರಿಹಾರಗಳನ್ನು ನಂಬುವುದಿಲ್ಲ ಎಂಬ ಅಂಶವನ್ನು ರಕ್ಷಣಾ ಸಚಿವರು ಒತ್ತಿ ಹೇಳಿದರು. ಅದರ ವಿಧಾನವು ಪಾಲುದಾರ ರಾಷ್ಟ್ರಗಳ ಸಾರ್ವಭೌಮತ್ವಕ್ಕಾಗಿ ಪರಸ್ಪರ ಸಾಮರ್ಥ್ಯ ನಿರ್ಮಾಣ, ಸಮೃದ್ಧಿ ಮತ್ತು ಭದ್ರತೆಗೆ ಒತ್ತು ನೀಡುತ್ತದೆ. ತಮ್ಮ ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಾಣಿಕೆಯಾಗುವ ಬೆಂಬಲದ ಮೂಲಕ ತಮ್ಮದೇ ಆದ ಮಾರ್ಗಗಳನ್ನು ರೂಪಿಸಲು ಅದರ ಪಾಲುದಾರರಿಗೆ ಅಧಿಕಾರ ನೀಡುವುದು ಗುರಿಯಾಗಿದೆ ಎಂದು ಅವರು ಹೇಳಿದರು. ಭಾರತೀಯ ನಿರ್ಮಿತ ಹಡಗುಗಳು ಮತ್ತು ವಿಮಾನಗಳನ್ನು ಪೂರೈಸುವುದು, ಪರಿಣತಿಯನ್ನು ಹಂಚಿಕೊಳ್ಳುವುದು ಅಥವಾ ಜಂಟಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಸಮಾನ ಪಾಲುದಾರಿಕೆಯು ರಕ್ಷಣಾ ಸಹಯೋಗದ ಅಡಿಪಾಯ ಎಂದು ಅವರು ವಿವರಿಸಿದರು.
ರಕ್ಷಣಾ ರಫ್ತಿಗೆ ಆದ್ಯತೆಯ ಪಾಲುದಾರನಾಗಿ ಭಾರತದ ಸ್ಥಾನವು ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಪಾಲುದಾರರ ನಿರ್ದಿಷ್ಟ ಅಗತ್ಯಗಳಿಗೆ ಬದ್ಧವಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಬೆಳಕು ಚೆಲ್ಲಿದರು. "ನಮ್ಮ ರಕ್ಷಣಾ ಉದ್ಯಮವು ಅತ್ಯಾಧುನಿಕ ತಂತ್ರಜ್ಞಾನದಿಂದ ವೆಚ್ಚ-ಪರಿಣಾಮಕಾರಿ ಪರಿಹಾರಗಳವರೆಗೆ ವೈವಿಧ್ಯಮಯ ಅವಶ್ಯಕತೆಗಳನ್ನು ಪೂರೈಸಲು ಸುಸಜ್ಜಿತವಾಗಿದೆ. ನಮ್ಮ ಪಾಲುದಾರ ರಾಷ್ಟ್ರಗಳ ಸಾಮರ್ಥ್ಯಗಳನ್ನು ಬಲಪಡಿಸಲು ಬೆಂಬಲ ನೀಡುವಲ್ಲಿ ನಾವು ಹೆಮ್ಮೆಪಡುತ್ತೇವೆ, ಅವರ ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅನುವು ಮಾಡಿಕೊಡುತ್ತದೆ, ”ಎಂದು ಅವರು ಹೇಳಿದರು.
ಬ್ರಿಡ್ಜ್ ಉಪಕ್ರಮದ ಸಂವಾದವನ್ನು ಕ್ರಿಯಾಶೀಲ ಫಲಿತಾಂಶಗಳಾಗಿ ಪರಿವರ್ತಿಸುವ ಬದ್ಧತೆ ನಮ್ಮದಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು. ಚೇತರಿಸಿಕೊಳ್ಳುವ, ಹೊಂದಿಕೊಳ್ಳುವ ಮತ್ತು ಭವಿಷ್ಯವನ್ನು ನೋಡುವ ಪಾಲುದಾರಿಕೆಗಳನ್ನು ಇದು ಉತ್ತೇಜಿಸುತ್ತದೆ. ಭಯೋತ್ಪಾದನೆ ಮತ್ತು ಸೈಬರ್-ಅಪರಾಧಗಳಿಂದ ಹಿಡಿದು ಮಾನವೀಯ ಬಿಕ್ಕಟ್ಟುಗಳು ಮತ್ತು ಹವಾಮಾನ-ಪ್ರೇರಿತ ವಿಪತ್ತುಗಳವರೆಗಿನ ಸವಾಲುಗಳು ಗಡಿಗಳನ್ನು ಮೀರಿವೆ ಮತ್ತು ಒಗ್ಗಟ್ಟಿನ ಪ್ರತಿಕ್ರಿಯೆಯನ್ನು ಬಯಸುತ್ತವೆ ಎಂದರು.
ಸಭೆಯಲ್ಲಿ, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ, ಏರೋ ಇಂಡಿಯಾವನ್ನು ಆಯೋಜಿಸಲು ರಕ್ಷಣಾ ಸಚಿವಾಲಯದ ಪ್ರಯತ್ನಗಳನ್ನು ರಕ್ಷಣಾ ಸಚಿವರು ಶ್ಲಾಘಿಸಿದರು ಮತ್ತು ಇತ್ತೀಚಿನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲು ವಿಶ್ವದರ್ಜೆಯ ತಯಾರಕರಿಗೆ ಅವಕಾಶವನ್ನು ಒದಗಿಸಲಾಗಿದೆ. ಎಲ್ಲರಿಗೂ ಶಾಂತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುವ ಭರವಸೆ ನೀಡುವ ಬ್ರಿಡ್ಜ್ ಪರಿಕಲ್ಪನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ರಕ್ಷಣೆ ಮತ್ತು ಇತರ ಅವಶ್ಯಕತೆಗಳಿಗಾಗಿ ಭಾರತದೊಂದಿಗೆ ಕೆಲಸ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು, ಹೊಸ ದೆಹಲಿಯೊಂದಿಗಿನ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ತಂತ್ರಜ್ಞಾನದ ವರ್ಗಾವಣೆ ಮತ್ತು ಇತ್ತೀಚಿನ ಉಪಕರಣಗಳು ಹಾಗೂ ಉತ್ಪನ್ನಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ತಮ್ಮ ಬಯಕೆಯನ್ನು ಪ್ರತಿನಿಧಿಗಳು ವ್ಯಕ್ತಪಡಿಸಿದರು. ಭಾರತವನ್ನು ಪುಟಿದೇಳುವ ಪರಿಸ್ಥಿತಿಯಲ್ಲಿ ಪೂರೈಕೆ ಸರಪಳಿಯಲ್ಲಿ ಪಾಲುದಾರ ದೇಶ ಎಂದು ಕರೆದರು. ಶಾಂತಿಪಾಲನೆಯಲ್ಲಿ ಭಾರತದ ಪಾತ್ರಕ್ಕೆ ಸಮ್ಮತಿ ಸೂಚಿಸಿದರು. ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ದೇಶಗಳ ಸಾಮರ್ಥ್ಯಗಳನ್ನು ಮೇಲ್ದರ್ಜೆಗೇರಿಸಲು ಭಾರತದ ಪ್ರಯತ್ನಗಳಿಗೆ ಸಮ್ಮತಿ ಸೂಚಿಸಿದರು.
ಸಶಸ್ತ್ರ ಸಂಘರ್ಷ ತಪ್ಪಿಸಲು ಸಚಿವರು ಸರ್ವಾನುಮತದಿಂದ ಒಪ್ಪುವ ಮೂಲಕ ಇದು ಜನವಿರೋಧಿ ಮತ್ತು ಅಭಿವೃದ್ಧಿ-ವಿರೋಧಿ ಎಂದು ವಿವರಿಸುವುದರೊಂದಿಗೆ ಹಂಚಿಕೆಯ ಭದ್ರತಾ ಕಾಳಜಿಗಳು ಸಹ ಚರ್ಚೆಯ ಸಮಯದಲ್ಲಿ ಪ್ರಸ್ತಾಪವಾದವು. ಅಕ್ರಮ ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಮೀನುಗಾರಿಕೆ, ಭಯೋತ್ಪಾದನೆ ಮತ್ತು ಸೈಬರ್ ಅಪರಾಧಗಳಂತಹ ವಿವಿಧ ಸವಾಲುಗಳ ಕುರಿತು ಚರ್ಚಿಸಲಾಯಿತು, ಈ ಬೆದರಿಕೆಗಳ ವಿರುದ್ಧ ರಾಷ್ಟ್ರಗಳು ಒಟ್ಟಾಗಿ ಹೋರಾಡಲು ಪ್ರತಿಜ್ಞೆ ಮಾಡುತ್ತವೆ. ಭಾರತದ ಜಿ20 ಅಧ್ಯಕ್ಷತೆಯ ವಿಷಯವಾದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಕಲ್ಪನೆಯೊಂದಿಗೆ ಒಟ್ಟಾಗಿ ಮುಂದುವರಿಯಲು ಸಮ್ಮತಿಸಿದರು.
ಸಮಾರೋಪ ಭಾಷಣ ಮಾಡಿದ ರಕ್ಷಣಾ ಖಾತೆ ರಾಜ್ಯ ಸಚಿವರಾದ ಶ್ರೀ ಸಂಜಯ್ ಸೇಠ್, ಭಾಗವಹಿಸಿದ, ಉಪಸ್ಥಿತರಿದ್ದ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು. ರಕ್ಷಣಾ ಸಚಿವರುಗಳು, ಹಿರಿಯ ಅಧಿಕಾರಿಗಳು ಮತ್ತು ಗಣ್ಯ ಅತಿಥಿಗಳು ಪಾಲ್ಗೊಂಡು ಸಮಾವೇಶಕ್ಕೆ ಕೊಡುಗೆಗಳನ್ನು ನೀಡಿದ ಕಾರಣಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಅವರು ಬ್ರಿಡ್ಜ್ ವಿಷಯದಿಂದ ಸಾಕಾರಗೊಂಡಿರುವ ಸಹಯೋಗದ ಮನೋಭಾವವನ್ನು ಒತ್ತಿ ಹೇಳಿದರು. ಸಹಕಾರದ ಮೂಲಕ ಪರಸ್ಪರ ಸಮೃದ್ಧಿಯ ಹೊಸ ಕ್ಷೇತ್ರಗಳನ್ನು ಅನ್ವೇಷಿಸುವಾಗ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ಮುಂದುವರೆಸುವ ಆಶಾವಾದವನ್ನು ವ್ಯಕ್ತಪಡಿಸಿದರು.
ರಕ್ಷಣಾ ಇಲಾಖೆಯ [ರಕ್ಷಣಾ ಉತ್ಪನ್ನ] ಕಾರ್ಯದರ್ಶಿ ಶ್ರೀ ಸಂಜೀವ್ ಕುಮಾರ್ ಸ್ವಾಗತ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಮತ್ತು ರಕ್ಷಣಾ ಇಲಾಖೆ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ ಸಮೀರ್ ವಿ ಕಾಮತ್ ಉಪಸ್ಥಿತರಿದ್ದರು.
ಹೂಡಿಕೆ, ಜಂಟಿ ಉದ್ಯಮಗಳು ಮತ್ತು ಸಹ-ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಸಹಯೋಗ, ಕೃತಕ ಬುದ್ದಿಮತ್ತೆ ಮತ್ತು ಬಾಹ್ಯಾಕಾಶದಲ್ಲಿ ತರಬೇತಿ ಮತ್ತು ತಾಂತ್ರಿಕ ಪ್ರಗತಿಗಳು, ಕಡಲ ಭದ್ರತಾ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ರಕ್ಷಣಾ ಸಾಮರ್ಥ್ಯ ನಿರ್ಮಾಣದಂತಹ ಪ್ರಮುಖ ಅಂಶಗಳನ್ನು ಚರ್ಚಿಸಲು ಸಮಾವೇಶ ವೇದಿಕೆಯನ್ನು ಒದಗಿಸಿದೆ.
*****
(Release ID: 2102179)
Visitor Counter : 25