ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಜನವರಿ 21, 2025 ರಂದು ನವದೆಹಲಿಯ ಭಾರತ ಮಂಟಪದಲ್ಲಿ ಪ್ರಧಾನಮಂತ್ರಿ ಜನಮಾನ್ ಕುರಿತು ಜಿಲ್ಲಾ ನಿರ್ವಹಣಾಧಿಕಾರಿಗಳ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ
Posted On:
20 JAN 2025 8:54PM by PIB Bengaluru
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುವಾಲ್ ಓರಂ ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ದುರ್ಗಾದಾಸ್ ಉಯಿಕೆ ಅವರ ಮಾರ್ಗದರ್ಶನದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಜನವರಿ 21, 2025 ರಂದು ನವದೆಹಲಿಯ ಭಾರತ ಮಂಟಪದಲ್ಲಿ “ಪ್ರಧಾನಮಂತ್ರಿ ಜನಮಾನ್ ಕುರಿತು ಜಿಲ್ಲಾ ನಿರ್ವಹಣಾಧಿಕಾರಿಗಳ ರಾಷ್ಟ್ರೀಯ ಸಮ್ಮೇಳನ”ವನ್ನು ಆಯೋಜಿಸುತ್ತಿದೆ. ವಿವಿಧ ಅಭಿಯಾನಗಳ ಅಡಿಯಲ್ಲಿ 06 ಪ್ರಮುಖ ಕ್ಷೇತ್ರಗಳಾದ ಗ್ರಾಮೀಣಾಭಿವೃದ್ಧಿ (ವಸತಿ ಮತ್ತು ರಸ್ತೆಗಳು), ಪಿವಿಟಿಜಿ ಶಾಲಾ ವಿದ್ಯಾರ್ಥಿ ನಿಲಯ (ಶಾಲೆಗಳು /ಹಾಸ್ಟೆಲ್‌ಗಳು), ಜೆಜೆಎಂ ಅಡಿಯಲ್ಲಿ ಕುಡಿಯುವ ನೀರು, ಅಂಗನವಾಡಿಗಳ ಕಾರ್ಯಾಚರಣೆ ಮತ್ತು ಬಹುಪಯೋಗಿ ಕೇಂದ್ರಗಳ (ಎಂಪಿಸಿ) ಕಾರ್ಯಾಚರಣೆಯ ಮೇಲೆ ಈ ಸಮ್ಮೇಳನವು ಕಾರ್ಯಕ್ರಮಗಳ ವಿಷಯವನ್ನು ಕೇಂದ್ರೀಕರಿಸುತ್ತದೆ.
ನಿರ್ದಿಷ್ಟವಾಗಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮತ್ತು ಸುಧಾರಣೆಗೆ ಗಣನೀಯ ಅವಕಾಶವಿರುವ ಜಿಲ್ಲೆಗಳಲ್ಲಿ ಪ್ರಗತಿಯನ್ನು ಸುಗಮಗೊಳಿಸುವ ಗುರಿಯನ್ನು ಈ ಸಮ್ಮೇಳನವು ಹೊಂದಿದೆ. ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ವಿವಿಧ ಮಿಷನ್ ಗಳ ಉದ್ದೇಶಗಳನ್ನು ತ್ವರಿತಗೊಳಿಸಲು ಮತ್ತು ಉದ್ದೇಶಿತ ಪ್ರಯೋಜನಗಳು ಕೊನೆಯ ಮೈಲಿಯನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದ ಚರ್ಚೆಯಲ್ಲಿರುವ ಪ್ರಮುಖ ವಿಷಯಾಧಾರಿತ ಕ್ಷೇತ್ರಗಳು ಹೀಗಿವೆ:
i. ವಸತಿ(ಆವಾಸ್): ಮನೆಗಳ ನಿರ್ಮಾಣ ಮತ್ತು ಮಂಜೂರಾತಿಗಳ ಪ್ರಗತಿ.
ii. ರಸ್ತೆಗಳು: ರಸ್ತೆ ಸಂಪರ್ಕದ ಕಾರ್ಯಗಳ ಪ್ರಗತಿ
iii. ಅಂಗನವಾಡಿಗಳು: ಪಿವಿಟಿಜಿ ವಸತಿಗಾಗಿ ಅಂಗನವಾಡಿ ಕೇಂದ್ರಗಳ ನಿರ್ಮಾಣ ಮತ್ತು ಕಾರ್ಯಾಚರಣೆ
iv. ಶಾಲಾ ವಿದ್ಯಾರ್ಥಿ ನಿಲಯ( ಹಾಸ್ಟೆಲ್) ಗಳು: ಮಂಜೂರಾತಿಗಳ ಪ್ರಗತಿ ಮತ್ತು ಶಾಲಾ ವಿದ್ಯಾರ್ಥಿ ನಿಲಯ( ಹಾಸ್ಟೆಲ್)ಗಳ ನಿರ್ಮಾಣ.
v. ಎಂಪಿಸಿ: ಬಹುಪಯೋಗಿ ಕೇಂದ್ರಗಳ (ಎಂಪಿಸಿ) ನಿರ್ಮಾಣ ಮತ್ತು ಕಾರ್ಯಾಚರಣೆ
vi. ವಿ.ಡಿ.ವಿ.ಕೆ: ತರಬೇತಿ, ವ್ಯವಹಾರ ಯೋಜನೆ ಅಭಿವೃದ್ಧಿ ಮತ್ತು ಟೂಲ್‌ಕಿಟ್ ವಿತರಣೆ ಸೇರಿದಂತೆ ಕಾರ್ಯಾಚರಣೆ
ಸಮ್ಮೇಳನವು ಪ್ರತಿಯೊಂದು ಪ್ರಮುಖ ಪ್ರದೇಶದ ಮೇಲೆ ಕೇಂದ್ರೀಕರಿಸಿದ ಮಧ್ಯಂತರ (ಬ್ರೇಕ್ ಔಟ್) ಅವಧಿಗಳನ್ನು ಸಮ್ಮೇಳನವು ಒಳಗೊಂಡಿರುತ್ತದೆ. ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಗಳು (ಟಿ.ಡಬ್ಲ್ಯೂ.ಡಿ), ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪಿ ಒ ಐ ಟಿ ಡಿ ಎ ಮತ್ತು ಡಿಎಸ್‌ಡಬ್ಲ್ಯೂಒ/ಡಿಡಬ್ಲ್ಯೂಒ/ಬುಡಕಟ್ಟು ಕಲ್ಯಾಣದ ಉಸ್ತುವಾರಿ (ಪ್ರತಿ ಜಿಲ್ಲೆಗೆ 3 ಸದಸ್ಯರು) ಸೇರಿದಂತೆ ಅವರ ತಂಡಗಳ ಭಾಗವಹಿಸುವಿಕೆಯೊಂದಿಗೆ. ಪಿಎಂ ಜನಮಾನ್ ನಲ್ಲಿ ಭಾಗಿಯಾಗಿರುವ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು (ಗ್ರಾಮೀಣಾಭಿವೃದ್ಧಿ ಸಚಿವಾಲಯ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಸಚಿವಾಲಯ, ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ) ಈ ಅಧಿವೇಶನಗಳನ್ನು ನಿರ್ವಹಿಸುತ್ತವೆ ಮತ್ತು ಎಲ್ಲಾ ಪಿವಿಟಿಜಿ ಜನವಸತಿಗಳಲ್ಲಿ ಮಧ್ಯಸ್ಥಿಕೆಗಳ ಆಧಾರದ ಮೇಲೆ ಪ್ರಮುಖತೆಯ ಕುರಿತು ಗಮನ ಹರಿಸಿ ಅಂತಿಮ ಕ್ರಿಯಾ ಯೋಜನೆಗಳನ್ನು ಪ್ರಸ್ತುತಪಡಿಸುತ್ತವೆ.
18 ರಾಜ್ಯಗಳಿಂದ ಒಟ್ಟು 88 ಜಿಲ್ಲೆಗಳು ವಿವಿಧ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುತ್ತವೆ ಮತ್ತು ಪಿಎಂ ಜನ್ ಮಾನ್ ಅನುಷ್ಠಾನದ ಕುರಿತು ಕ್ರಿಯಾ ಯೋಜನೆಯನ್ನು ರೂಪಿಸುವ ಒಳನೋಟಗಳನ್ನು ಹಂಚಿಕೊಳ್ಳುತ್ತವೆ. ಈ 88 ಜಿಲ್ಲೆಗಳನ್ನು 6 ಬ್ಯಾಚ್ ಗಳಾಗಿ ವರ್ಗೀಕರಿಸಲಾಗಿದೆ. ಸಮ್ಮೇಳನಕ್ಕಾಗಿ ಗುರುತಿಸಲಾದ 6 ಪ್ರಮುಖ ಕ್ಷೇತ್ರಗಳಿಗೆ ಜವಾಬ್ದಾರರಾಗಿರುವ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಸಹ 6 ಗುಂಪುಗಳಾಗಿ ಆಯೋಜಿಸಲಾಗಿದೆ. ಈ ಪ್ರಮುಖ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ತೋರುವವರಾಗಿ ಗುರುತಿಸಲ್ಪಟ್ಟ ಜಿಲ್ಲೆಗಳು ಇತರ ಜಿಲ್ಲೆಗಳಿಗೆ ತಮ್ಮ ಅತ್ಯುತ್ತಮ ಅಭ್ಯಾಸಗಳನ್ನು ಪ್ರಸ್ತುತಪಡಿಸುತ್ತವೆ. ಮಧ್ಯಂತರ (ಬ್ರೇಕ್ ಔಟ್) ಅಧಿವೇಶನಗಳ ಕೊನೆಯಲ್ಲಿ, ಭಾಗವಹಿಸುವ ಆರು ಸಚಿವಾಲಯಗಳು ಮತ್ತು ಇಲಾಖೆಗಳು ಏಕೀಕೃತ ಕ್ರಿಯಾ ಯೋಜನೆಗಳನ್ನು ಪ್ರಸ್ತುತಪಡಿಸುತ್ತವೆ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮುಂದಿನ ಮಾರ್ಗವನ್ನು ಚರ್ಚಿಸುತ್ತವೆ.
ಈ ಸಮ್ಮೇಳನದ ಮೂಲಕ, ಸಚಿವಾಲಯವು ನೀತಿ ಮತ್ತು ತಳಮಟ್ಟದ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಮತ್ತು ಪಿಎಂ ಜನಮಾನ್ ಅನುಷ್ಠಾನವನ್ನು ಗಮನಾರ್ಹವಾಗಿ ತ್ವರಿತಗೊಳಿಸಲು ಪ್ರಯತ್ನಿಸುತ್ತದೆ. ಇದರ ಪ್ರಯೋಜನಗಳು ಭಾಗವಹಿಸುವ 18 ರಾಜ್ಯಗಳ ಪ್ರತಿಯೊಂದು ಮೂಲೆಯನ್ನೂ ತಲುಪುವಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ ಅತ್ಯಂತ ದೂರದ ಮತ್ತು ವಂಚಿತ ಸಮುದಾಯಗಳನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಕೊನೆಯ ಮೈಲಿಯನ್ನು ಕೇಂದ್ರೀಕರಿಸುವ ಮೂಲಕ, ಪಿಎಂ ಜನಮಾನ್ ಅನ್ನು ಈ ಸಮುದಾಯಗಳ ತಕ್ಷಣದ ಅಗತ್ಯಗಳನ್ನು ಪರಿಹರಿಸಲು ಮಾತ್ರವಲ್ಲದೆ ಅವರ ಜೀವನದಲ್ಲಿ ಸುಸ್ಥಿರ, ದೀರ್ಘಕಾಲೀನ ಬದಲಾವಣೆಗಳನ್ನು ಸೃಷ್ಟಿಸಲು, ಅಗತ್ಯ ಸೇವೆಗಳಿಗೆ ಅವರ ಪ್ರವೇಶವನ್ನು ಸುಧಾರಿಸಲು, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಮತ್ತು ಅವರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಸಮಗ್ರ ಬೆಳವಣಿಗೆ ಮತ್ತು ಸಬಲೀಕರಣದ ಗುರಿಗೆ ಬದ್ಧವಾಗಿದೆ. ಶಾಶ್ವತ ಬದಲಾವಣೆಗಾಗಿ ವಿಶಾಲವಾದ ಅಭಿವೃದ್ಧಿ ಚೌಕಟ್ಟಿನೊಳಗೆ ಅಭಿವೃದ್ಧಿ ಹೊಂದಲು ಪಿವಿಟಿಜಿ ಗಳು ಅನುವು ಮಾಡಿಕೊಡುತ್ತದೆ.
*****
(Release ID: 2094663)
Visitor Counter : 6