ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತದ ನವೀಕರಿಸಬಹುದಾದ ಇಂಧನ ವೃದ್ಧಿ: ಪಶ್ಚಿಮ ವಲಯದಲ್ಲಿ ಸಹಯೋಗಕ್ಕೆ ಕರೆ ನೀಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


ನವೀಕರಿಸಬಹುದಾದ ಇಂಧನವು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ: ಕೇಂದ್ರ ಕೇಂದ್ರ ಸಚಿವರು

Posted On: 09 JAN 2025 5:58PM by PIB Bengaluru

ಭಾರತದ ನವೀಕರಿಸಬಹುದಾದ ಇಂಧನ ಕಾರ್ಯಸೂಚಿಗಳನ್ನು ಮುನ್ನಡೆಸುವ ಪ್ರಾದೇಶಿಕ ಕಾರ್ಯಾಗಾರದ ಉದ್ಘಾಟನಾ ಅಧಿವೇಶನವು ಇಂದು ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್; ಮಹಾರಾಷ್ಟ್ರ ಸರ್ಕಾರದ ಶ್ರೀ ಅತುಲ್ ಮೊರೇಶ್ವರ್ ಸೇವ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು; ಗುಜರಾತ್ ಸರ್ಕಾರದ ಹಣಕಾಸು, ಇಂಧನ ಮತ್ತು ಪೆಟ್ರೋಕೆಮಿಕಲ್ಸ್ ಸಚಿವ ಶ್ರೀ ಕನುಭಾಯಿ ಮೋಹನ್ ಲಾಲ್ ದೇಸಾಯಿ ;  ಮತ್ತು  ಗೋವಾ ರಾಜ್ಯದ ಅಸಾಂಪ್ರದಾಯಿಕ ಇಂಧನ ಮೂಲಗಳ ಸಚಿವ ಶ್ರೀ ಸುದಿನ್ ಧವಲಿಕರ್, ಸಹ ಭಾಗವಹಿಸಿದ್ದರು

ತಲಾ ಕಡಿಮೆ ವಿದ್ಯುತ್ ಬಳಕೆಯ ಹೊರತಾಗಿಯೂ, ನವೀಕರಿಸಬಹುದಾದ ಇಂಧನದಲ್ಲಿ ಭಾರತವು ಜಾಗತಿಕ ಮುಂಚೂಣಿಯಲ್ಲಿದೆ" ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಮಾಹಿತಿಯನ್ನು ವಿವರಿಸಿದರು. "ಇಂಧನ ಕ್ಷೇತ್ರದಲ್ಲಿ ಪಳೆಯುಳಿಕೆ ರಹಿತ 500 ಗಿಗಾ ವಾಟ್ ಶಕ್ತಿ ಸಾಮರ್ಥ್ಯವನ್ನು ಸಾಧಿಸುವುದು, 50% ಸ್ಥಾಪಿತ ವಿದ್ಯುತ್ ಅನ್ನು ಪಳೆಯುಳಿಕೆಯೇತರ ಮೂಲಗಳಿಂದ ಉತ್ಪಾದಿಸುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು 1 ಶತಕೋಟಿ ಟನ್ ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು - 2030ರ ಒಳಗಾಗಿ ಮಾಡಬೇಕಾದ ಪ್ರಮುಖ ಗುರಿಗಳಾಗಿವೆ. ಹೆಚ್ಚುವರಿಯಾಗಿ, 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ತಲುಪುವ ದೀರ್ಘಾವಧಿಯ ಉದ್ದೇಶದೊಂದಿಗೆ  ಹೊರಸೂಸುವಿಕೆಯ ತೀವ್ರತೆಯಲ್ಲಿ 45% ರಷ್ಟು ಕಡಿತವನ್ನು ಸಾಧಿಸುವ ಗುರಿಯಿದೆ "ಎಂದು ಕೇಂದ್ರ ಸಚಿವ ಶ್ರೀ ಜೋಶಿ ಅವರು ಹೇಳಿದ್ದಾರೆ.

"ಪಿಎಂ - ಕುಸುಮ್ ಯೋಜನೆ, ಪಿಎಂ ಸೂರ್ಯ ಘರ್ ಯೋಜನೆ ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ ನಂತಹ ಭಾರತದ ಪ್ರಮುಖ ಕಾರ್ಯಕ್ರಮಗಳು ನವೀಕರಿಸಬಹುದಾದ ಇಂಧನ ಭೂದೃಶ್ಯವನ್ನು ಪರಿವರ್ತಿಸುವಲ್ಲಿ ಪ್ರಮುಖವಾಗಿವೆ.  2025 ರ ವೇಳೆಗೆ 35 ಲಕ್ಷ ಕೃಷಿ ಪಂಪ್‌ ಗಳನ್ನು ಸೋಲಾರೈಸ್ ಮಾಡುವ ಗುರಿಯೊಂದಿಗೆ, ಪಿಎಂ ಕುಸುಮ್ ಅನ್ನು ಅನುಷ್ಠಾನಗೊಳಿಸುವಲ್ಲಿ ಮಹಾರಾಷ್ಟ್ರವು ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ" ಎಂದು ಶ್ರೀ ಜೋಶಿಯವರು ಮಹಾರಾಷ್ಟ್ರ ರಾಜ್ಯದ ಮಹತ್ವದ ಸಾಧನೆಗಳನ್ನು ವಿವರಿಸಿದರು.

“ರಾಜ್ಯಗಳು ಮತ್ತು ಈ ಇಂಧನ ಕ್ಷೇತ್ರದ ಮಧ್ಯಸ್ಥಗಾರರ ಸಾಮೂಹಿಕ ಹಾಗೂ ಸಮಗ್ರ ಪ್ರಯತ್ನಗಳೊಂದಿಗೆ ಭಾರತವು ತನ್ನ ನವೀಕರಿಸಬಹುದಾದ ಇಂಧನ ಗುರಿಗಳನ್ನು ಯಶಸ್ವಿಯಾಗಿ ಸಾಧಿಸುವ ಹಾದಿಯಲ್ಲಿದೆ.  ಒಟ್ಟಾಗಿ, ನಾವು ನಮ್ಮ ದೇಶಕ್ಕೆ ಉಜ್ವಲವಾದ, ಸ್ವಚ್ಛವಾದ ಭವಿಷ್ಯವನ್ನು ರಚಿಸುತ್ತಿದ್ದೇವೆ, ”ಎಂದು ಹೇಳುತ್ತಾ ಕೇಂದ್ರ ಸಚಿವರಾದ ಶ್ರೀ ಜೋಶಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

*****
 


(Release ID: 2091597) Visitor Counter : 38


Read this release in: English , Marathi