ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಕರ್ನಾಟಕದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕ್ಯೂ ಕಾಂಪ್ಲೆಕ್ಸ್ ಮತ್ತು ಜ್ಞಾನದೀಪ ಕಾರ್ಯಕ್ರಮ 2024-25ರ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳ ಭಾಷಣದ ಪಠ್ಯ

Posted On: 07 JAN 2025 5:34PM by PIB Bengaluru

ಭಕ್ತರ ಅನುಕೂಲತೆಗಳನ್ನು ಸುಧಾರಿಸುವ ಉದ್ದೇಶದಿಂದ ಇತ್ತೀಚೆಗೆ ನಿರ್ಮಿಸಲಾದ, ಅತ್ಯಾಧುನಿಕ ಸರತಿ ಸಾಲಿನ ವ್ಯವಸ್ಥೆಯ (ಕ್ಯೂ ಸಿಸ್ಟಮ್ ) ಸಂಕೀರ್ಣವಾದ 'ಶ್ರೀ ಸಾನ್ನಿಧ್ಯ' ವನ್ನು ಅಧಿಕೃತವಾಗಿ ಉದ್ಘಾಟಿಸುವುದು ಒಂದು ಗೌರವ ಮತ್ತು ಮರ್ಯಾದೆ.

ನಮ್ಮ ದೇವರಾದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಭಕ್ತರಿಗೆ ಕಾಯುವ ಅನುಭವವನ್ನು ಹೆಚ್ಚಿಸುವ ಆರೋಗ್ಯಕರ ಉದ್ದೇಶದಿಂದ ಸಮಕಾಲೀನ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣದ ಕಲ್ಪನೆ ಮಾಡಿದ್ದಕ್ಕಾಗಿ ಮತ್ತು ಅದನ್ನು ಸಾಕಾರಗೊಳಿಸಿದ್ದಕ್ಕಾಗಿ ಪದ್ಮಶ್ರೀ ಡಾ.ಹೆಗ್ಗಡೆಯವರನ್ನು ನಾನು ಶ್ಲಾಘಿಸುತ್ತೇನೆ.

ಮಹಿಳೆಯರೇ ಮತ್ತು ಮಹನೀಯರೇ, ಈ ಸಂಕೀರ್ಣದ ಅತ್ಯುತ್ತಮ ಲಕ್ಷಣವೆಂದರೆ ಭಕ್ತರಿಗೆ ಅನುಕೂಲತೆ ಮತ್ತು ತಾಂತ್ರಿಕ ಪ್ರಗತಿಯ ಸೌಲಭ್ಯಗಳನ್ನು ಒದಗಿಸುವುದು.  ಭಾರತವು ವಿಶ್ವದ ಆಧ್ಯಾತ್ಮಿಕ ಕೇಂದ್ರವಾಗಿದೆ ಮತ್ತು ಸ್ಥಳವು ಅದಕ್ಕೆ ಸಾಕ್ಷಿಯಾಗಿದೆ.

ಭಗವಾನ್ ಶ್ರೀ ಮಂಜುನಾಥನ ದೈವಿಕ ವಲಯದಲ್ಲಿ ಧಾರ್ಮಿಕತೆ, ವಿನೀತ ಭಾವನೆ, ಸಾಮರಸ್ಯ ಮತ್ತು ಮನಸ್ಸಿನ ಶಾಂತಿಯ ಪ್ರತಿಬಿಂಬವಿದೆ. ಇಲ್ಲಿ ದೈವಿಕ ಭಾವನೆ ಅಭಿವ್ಯಕ್ತಿಯನ್ನು ಮೀರಿದೆ. ಸಾಂತ್ವನ, ಆಶೀರ್ವಾದ ಮತ್ತು ದೈವಿಕ ಸಂಪರ್ಕವನ್ನು ಹುಡುಕುತ್ತಾ ಲಕ್ಷಾಂತರ ಜನರು ಸ್ಥಳಕ್ಕೆ ಬರುತ್ತಾರೆ. ಸಾನ್ನಿಧ್ಯ ಕ್ಯೂ ಕಾಂಪ್ಲೆಕ್ಸ್ ಭೌತಿಕ ರಚನೆಯನ್ನು ಮೀರಿದೆ; ಇದು ಕೇವಲ ಕಟ್ಟಡವಲ್ಲ, ಇದು ಒಳಗೊಳ್ಳುವಿಕೆ, ಆತಿಥ್ಯ ಮತ್ತು ಸೇವೆಗೆ ನಮ್ಮ ಸಾಮೂಹಿಕ ಬದ್ಧತೆಯ ಅಭಿವ್ಯಕ್ತಿಯಾಗಿದೆ. ಈ ಭವ್ಯವಾದ ಸೌಲಭ್ಯವನ್ನು ಸಾಕಾರಗೊಳಿಸಲು ಒಗ್ಗೂಡಿದ ಎಲ್ಲರಿಗೂ ಅಭಿನಂದನೆಗಳು.

ಮಹಿಳೆಯರೇ ಮತ್ತು ಮಹನೀಯರೇ, ನಾನು ನೋಡಿದ್ದೇನೆ. ಈ ಸೌಲಭ್ಯವು ವಿಶಿಷ್ಟವಾಗಿದೆ. ದೈವಿಕ ಆಶೀರ್ವಾದವನ್ನು ಪಡೆಯಲು ಶ್ರದ್ಧೆಯಿಂದ ಬರುವವರ ಬಗ್ಗೆ ಇದು ಕಾಳಜಿಗೆ ಸಾಕ್ಷಿಯಾಗಿದೆ. ನಮ್ಮ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದು ಹಿತಕರ ಬದಲಾವಣೆಯೆಂದರೆ ನಮ್ಮ ಧಾರ್ಮಿಕ ಸ್ಥಳಕ್ಕೆ ಸಂಬಂಧಿಸಿದ ಮೂಲಸೌಕರ್ಯ ಬೆಳವಣಿಗೆ. ನಮ್ಮ ನಾಗರಿಕ ಮೌಲ್ಯಗಳ ಕೇಂದ್ರಗಳೂ ಆಗಿರುವುದರಿಂದ ಇದನ್ನು ಶ್ಲಾಘಿಸಬೇಕಾಗಿದೆ. ಸರ್ವಶಕ್ತನಾದ ದೇವರ ಮುಂದೆ ಯಾವ ವ್ಯಕ್ತಿಯೂ ಶ್ರೇಷ್ಠನಲ್ಲವಾದ್ದರಿಂದ ಧಾರ್ಮಿಕ ಸಂಸ್ಥೆಗಳು ಸಮಾನತೆಯ ಸಂಕೇತವಾಗಿವೆ. ನಾವು ಧಾರ್ಮಿಕ ಸಂಸ್ಥೆಗಳಲ್ಲಿ ಸಮಾನತೆಯ ಕಲ್ಪನೆಯನ್ನು ಮತ್ತೆ ಹುಟ್ಟುಹಾಕಬೇಕು. ಯಾರಿಗಾದರೂ ಆದ್ಯತೆ ನೀಡಿದಾಗ, ನಾವು ಅದನ್ನು ವಿವಿಐಪಿ ಅಥವಾ ವಿಐಪಿ ಎಂದು ಹಣೆಪಟ್ಟಿ ಹಚ್ಚಿದಾಗ, ಇದು ಸಮಾನತೆಯ ಪರಿಕಲ್ಪನೆಯನ್ನು ಕೀಳಾಗಿ ಕಾಣುತ್ತದೆ.

ಸ್ನೇಹಿತರೇ, ವಿಐಪಿ ಸಂಸ್ಕೃತಿ ಒಂದು ಅಪದ್ಧ ವಿಪರ್ಯಾಸ, ಸಮಾನತೆಯ ಚೌಕಟ್ಟಿನಲ್ಲಿ ನೋಡಿದಾಗ ಇದೊಂದು ಅತಿಕ್ರಮಣವಾಗಿದೆ. ಅದಕ್ಕೆ ಸಮಾಜದಲ್ಲಿ ಯಾವುದೇ ಸ್ಥಾನ ಇರಬಾರದು, ಧಾರ್ಮಿಕ ಸ್ಥಳಗಳಲ್ಲಿ ಇಂತಹದ್ದಕ್ಕೆ ಅವಕಾಶಗಳು ಕಡಿಮೆ ಇರಬೇಕು. ಈ ಧರ್ಮಸ್ಥಳವನ್ನು ಸಾರ್ವಕಾಲಿಕ ಗಣ್ಯರು ಮುನ್ನಡೆಸುತ್ತಿರುವುದು ಸಮಾನತೆಗೆ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಾವು ಎಲ್ಲಾ ಸಮಯದಲ್ಲೂ ವಿಐಪಿ ಸಂಸ್ಕೃತಿಯನ್ನು ತ್ಯಜಿಸೋಣ. ವಿಐಪಿ ದರ್ಶನದ ಕಲ್ಪನೆಯೇ ದೈವತ್ವಕ್ಕೆ ವಿರುದ್ಧವಾಗಿದೆ. ಅದನ್ನು ಕೈಬಿಡಬೇಕು.

ನಮ್ಮ ದೇಶದಲ್ಲಿ ಧಾರ್ಮಿಕ ಸಂಸ್ಥೆಗಳು ನಂಬಿಕೆಯ ತಾಣಗಳನ್ನು ಮೀರಿದ ಕೇಂದ್ರಗಳಾಗಿವೆ. ಇವು ಸಮುದಾಯ ಸೇವೆಯ ಕೇಂದ್ರಗಳಾಗಿವೆ ಮತ್ತು ಸ್ಥಳವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ದೊಡ್ಡ ಕೊಡುಗೆ ನೀಡಿದೆ. ಅದು ಶ್ಲಾಘನಾರ್ಹ ಮತ್ತು ಅನುಕರಿಸಲು ಯೋಗ್ಯವಾಗಿದೆ. ಗ್ರಾಮೀಣ ಭಾರತಕ್ಕೆ ಸೇವೆ ಸಲ್ಲಿಸುವಲ್ಲಿ ಸಂಸ್ಥೆಯು ಮಾಡಿದ ಅಸಾಧಾರಣ ಪ್ರಯತ್ನಗಳು ನನಗೆ ಆಹ್ಲಾದಕರ ಆಶ್ಚರ್ಯವನ್ನುಂಟುಮಾಡಿವೆ.

ನಮ್ಮ ಭಾರತವು ಹಳ್ಳಿಗಳಲ್ಲಿ ವಾಸಿಸುತ್ತದೆ. ನಮ್ಮ ಪ್ರಗತಿಯ ಹಾದಿ ಹಳ್ಳಿಗಳ ಮೂಲಕ ಸಾಗಬೇಕು. ಹಳ್ಳಿಗಳು ನಮ್ಮ ಜೀವನ ವಿಧಾನ, ನಮ್ಮ ಪ್ರಜಾಪ್ರಭುತ್ವ, ನಮ್ಮ ಆರ್ಥಿಕತೆಯನ್ನು ವ್ಯಾಖ್ಯಾನಿಸುತ್ತವೆ. ಹಳ್ಳಿಗಳಲ್ಲಿಯೇ ಭಾರತದ ಹೃದಯ ಬಡಿತವು ಪ್ರತಿಧ್ವನಿಸುತ್ತದೆ ಮತ್ತು ಅದು ಹೆಚ್ಚಿನ ಡೆಸಿಬೆಲ್ ಗಳಲ್ಲಿ ಪ್ರತಿಧ್ವನಿಸುತ್ತದೆ. ಈ ಪ್ರದೇಶಗಳ ಅಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿರಬೇಕು.

ಇದು ನಮ್ಮ ಪವಿತ್ರ ಕರ್ತವ್ಯ ಮತ್ತು ಪರಿವರ್ತನೆಯ ಅತ್ಯುತ್ತಮ ಮಾರ್ಗವೆಂದರೆ ಶಿಕ್ಷಣ. ಸಮಾನತೆಯನ್ನು ತರಲು ಶಿಕ್ಷಣವು ಅತ್ಯಂತ ಪರಿಣಾಮಕಾರಿ ಕಾರ್ಯವಿಧಾನವಾಗಿದೆ. ಅಸಮಾನತೆಗಳನ್ನು ತೊಡೆದುಹಾಕಲು ಇದು ಅತ್ಯುತ್ತಮ ಪರಿಣಾಮಕಾರಿ ಕಾರ್ಯವಿಧಾನವಾಗಿದೆ.

ನಾನು ಎಲ್ಲಾ ಧಾರ್ಮಿಕ ಸಂಸ್ಥೆಗಳನ್ನು ಒಂದು ನಿರ್ದಿಷ್ಟ ಪ್ರಯತ್ನವನ್ನು ಮಾಡಬೇಕೆಂದು ಒತ್ತಾಯಿಸುತ್ತೇನೆ ಮತ್ತು ಅದು ನಮ್ಮ ಪೀಳಿಗೆಗೆ, ನಮ್ಮ ಯುವಜನರಿಗೆ ನಮ್ಮ ನಾಗರಿಕತೆಯ ಆಳದ ಬಗ್ಗೆ ಅರಿವು ಮೂಡಿಸುವುದು. ನಮ್ಮ ಚಿಕ್ಕ ಮಕ್ಕಳು ಮತ್ತು ಯುವಜನರು ನಮ್ಮ ನಾಗರಿಕ ಚಿನ್ನದ ಗಣಿಯ ಅಗಾಧತೆ, ಬುದ್ಧಿವಂತಿಕೆ, ಜ್ಞಾನ, ಆಳದ ಬಗ್ಗೆ ತಿಳಿದುಕೊಳ್ಳದಿರುವ, ಅದಕ್ಕೆ  ಒಡ್ಡಿಕೊಳ್ಳದ ಸಂದರ್ಭಗಳ ಬಗ್ಗೆ ನನಗೆ ಕಳವಳಗಳಿವೆ. ಸಂಸ್ಥೆಗಳು ಆ ತಿಳುವಳಿಕೆ ಕೊಡುವುದನ್ನು ವೇಗವರ್ಧಿಸಬಹುದು. ಅಂತಹ ಉಪಕ್ರಮವಿಲ್ಲದೆ ಇದ್ದರೆ, ಸಮಕಾಲೀನ ಕಾಲದಲ್ಲಿ ಅಮೂಲ್ಯವಾದ ಪರಂಪರೆ ಮತ್ತು ಪ್ರಸ್ತುತತೆ ಕಳೆದುಹೋಗುತ್ತದೆ.

ಸ್ನೇಹಿತರೇ, ಜಗತ್ತು ಹಿಂದೆಂದಿಗಿಂತಲೂ ಪ್ರಕ್ಷುಬ್ಧ ವಾತಾವರಣವನ್ನು ಹೊಂದಿದೆ. ನಿಸ್ಸಂದೇಹವಾಗಿ, ಇದು ನಮ್ಮ ಆರ್ಥಿಕ ಉಲ್ಬಣ, ಮೂಲಸೌಕರ್ಯದ ಬೆಳವಣಿಗೆ, ಆಳವಾದ ತಾಂತ್ರಿಕ, ಡಿಜಿಟಲ್ ನುಗ್ಗುವಿಕೆಯನ್ನು ನಾವು ನೋಡುವ ಕ್ಷಣವಾಗಿದೆ. ಭಾರತವು ಜಾಗತಿಕ ನಾಯಕನಾಗಿ, ಇತರ ರಾಷ್ಟ್ರಗಳಿಗೆ ಮಾದರಿಯಾಗಿ ಹೊರಹೊಮ್ಮಿದ ಕ್ಷೇತ್ರಗಳಿವೆ.

ಅಂತಹ ಕಾರ್ಯವಿಧಾನದಲ್ಲಿ, ಆಳವಾದ ನಾಗರಿಕ ಮೌಲ್ಯಗಳ ಭೂಮಿಯಾದ ಸಂಸ್ಕೃತಿಯ ಭೂಮಿಯನ್ನು ಹೊಂದಿರುವ  ನಾವು ನಮ್ಮ ಹೊಳಪನ್ನು ಕಳೆದುಕೊಳ್ಳಬಹುದೇ ಎಂದು ಊಹಿಸಿ? ನಮ್ಮ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರಕಾಶಮಾನವಾಗಿ ಹೊಳೆಯಬೇಕು. ಮಾನವೀಯತೆಯ ಕಲ್ಯಾಣದ ವಿಷಯಕ್ಕೆ ಬಂದಾಗ, ವಸುದೈವ ಕುಟುಂಬಕಂ, ನಾವು ಶಾಂತಿಯ ರಾಷ್ಟ್ರ ಸಂದೇಶವಾಹಕರಾಗಿದ್ದೇವೆ. ನಾವು ಸಾಮರಸ್ಯ, ಸಮಾನತೆ, ಶಾಂತಿಯನ್ನು ಉತ್ತೇಜಿಸುತ್ತೇವೆ. ಮಹಿಳೆಯರೇ ಮತ್ತು ಮಹನೀಯರೇ, ಈ ದೇಶದಲ್ಲಿ ಆಳವಾದ ರಾಜಕೀಯ ವಿಭಜನೆಯನ್ನು ಪ್ರತಿಬಿಂಬಿಸಲು, ಅದರ ಬಗ್ಗೆ ಯೋಚಿಸಬೇಕಾದ  ತುರ್ತು ಅವಶ್ಯಕತೆಯಿದೆ. ದೇಶದ ರಾಜಕೀಯ ವಾತಾವರಣವು ಹವಾಮಾನ ಬದಲಾವಣೆಯಷ್ಟೇ ಸವಾಲಾಗಿದೆ.

ಅದನ್ನು ಸಮನ್ವಯಗೊಳಿಸಲು ನಾವು ಕೆಲಸ ಮಾಡಬೇಕು. ನಮ್ಮ ದೀರ್ಘಕಾಲೀನ ಲಾಭಗಳನ್ನು, ಅಲ್ಪಾವಧಿಯ ಲಾಭಗಳಿಗಾಗಿ ರಾಷ್ಟ್ರೀಯತೆಯ ಬದ್ಧತೆಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ದೇಶದ ರಾಜಕೀಯ ತಾಪಮಾನವನ್ನು ವೈಚಾರಿಕ ಮನಸ್ಸುಗಳು ನಿಯಂತ್ರಿಸಬೇಕಾಗಿದೆ. ನಮ್ಮ ಎಲ್ಲಾ ನಿಲುವುಗಳನ್ನು ರಾಷ್ಟ್ರದ ಒಳಿತಿಗಾಗಿ  ಎಂಬ ಒಂದೇ ಪರಿಗಣನೆಯಿಂದ ನಿರ್ದೇಶಿಸಬೇಕು ಮತ್ತು ಆ ನಿಟ್ಟಿನಲ್ಲಿ ದೃಢವಾಗಿ ಗಮನ ಕೇಂದ್ರೀಕರಿಸಬೇಕು.

ನಾವು ಎಲ್ಲಾ ಸಂದರ್ಭಗಳಲ್ಲಿ ರಾಷ್ಟ್ರವನ್ನು ಮೊದಲಾದ್ಯತೆಯಲ್ಲಿಡಲು ಪ್ರಯತ್ನಿಸಬೇಕು, ಏಕೆಂದರೆ ಮಾನವಕುಲದ ಆರನೇ ಒಂದು ಭಾಗವನ್ನು ಹೊಂದಿರುವ ದೇಶವು ನರ ಕೇಂದ್ರ, ಸಾಂಸ್ಕೃತಿಕ ಕೇಂದ್ರ, ಭೂಗ್ರಹದ ಆಧ್ಯಾತ್ಮಿಕ ಕೇಂದ್ರವಾಗಿದೆ. ಅಲ್ಲಿ ನಮ್ಮಂತಹ ನಾಗರಿಕತೆಗಳಿವೆ, ಮೆಸೊಪೊಟೇಮಿಯಾ, ಚೀನಾದಲ್ಲಿ ಇತರ ನಾಗರಿಕತೆಗಳೂ ಇವೆ, ಆದರೆ ನೋಡಿ, ನಾವು ಬದುಕುಳಿದಿದ್ದೇವೆ,  ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ.

ಜನರು ಸಾಂತ್ವನವನ್ನು ಹುಡುಕಲು, ಬುದ್ಧಿವಂತಿಕೆಯನ್ನು ಹುಡುಕಲು, ಜ್ಞಾನವನ್ನು ಪಡೆಯಲು, ತಮಗಾಗಿ ದೈವತ್ವವನ್ನು ಕಂಡುಕೊಳ್ಳಲು ದೇಶಕ್ಕೆ ಬರುತ್ತಾರೆ. ಈ ಧಾರ್ಮಿಕ ವೇದಿಕೆಯಿಂದ ನಾನು ದೇಶದ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಮತ್ತು ಸಂವಾದಕ್ಕೆ ಸೂಕ್ತ ಆದ್ಯತೆ, ಮಾನ್ಯತೆ  ನೀಡುವಂತೆ ಮನವಿ ಮಾಡುತ್ತೇನೆ.

ಸಂವಾದ ಮತ್ತು ಅಭಿವ್ಯಕ್ತಿ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುತ್ತವೆ. ನಮ್ಮ ಅಭಿವ್ಯಕ್ತಿ ಹಕ್ಕನ್ನು ಮೊಟಕುಗೊಳಿಸಿದರೆ, ಕಡಿಮೆ ಮಾಡಿದರೆ, ಒಬ್ಬ ವ್ಯಕ್ತಿಯಲ್ಲಿರುವ  ಅತ್ಯುತ್ತಮವಾದುದು ಹೊರಹೊಮ್ಮಲು  ಸಾಧ್ಯವಿಲ್ಲ, ಆದರೆ ನಾವು ಅಭಿವ್ಯಕ್ತಿಗೆ ಮಾತ್ರ ಒತ್ತಾಯಿಸಿದರೆ ಮತ್ತು ಸಂವಾದದಲ್ಲಿ ನಂಬಿಕೆ ಇಡದಿದ್ದರೆ, ನಾವು ಅಭಿವ್ಯಕ್ತಿಯನ್ನು ಮಾತ್ರ ನಂಬಿದರೆ ಮತ್ತು ನಾವು ಮಾತ್ರ ಸರಿ ಎಂದು ನಂಬಿದರೆ, ನಾವು ಮಾನವೀಯತೆಗೆ, ಇತರ ವ್ಯಕ್ತಿಗೆ ಅನ್ಯಾಯ ಮಾಡುತ್ತಿದ್ದೇವೆ. ಸಂಭಾಷಣೆ ಮತ್ತು ಅಭಿವ್ಯಕ್ತಿ ಒಟ್ಟಿಗೆ ಸಾಗಬೇಕು. ಸಂವಾದವು ಇತರ ದೃಷ್ಟಿಕೋನದ ಮಹತ್ವವನ್ನು ಅರಿತುಕೊಳ್ಳುವಂತೆ ಮಾಡುತ್ತದೆ.

ಆದ್ದರಿಂದ ನಾನು ಎಲ್ಲರಿಗೂ ಕರೆ ನೀಡುತ್ತೇನೆ, ಸಂವಾದವು ಯಾವುದೇ ಉದ್ವಿಗ್ನತೆಯನ್ನು ನಿವಾರಿಸುತ್ತದೆ. ಸಕಾರಾತ್ಮಕ ವಿಧಾನದೊಂದಿಗೆ ಅರ್ಥಪೂರ್ಣ ಸಂವಾದವು ನಮ್ಮ ಸಮಾಜಕ್ಕೆ ತುಂಬಾ ನೋವಿನಿಂದ ಕೂಡಿದ ಸಮಸ್ಯೆಗಳಿಗೆ ಪರಿಹಾರವನ್ನು ತರಬಹುದು. ಜನರು ವ್ಯಕ್ತಪಡಿಸಲು ಮತ್ತು ಸಂವಾದದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಹೊರತು ಪ್ರಜಾಪ್ರಭುತ್ವಕ್ಕೆ ಯಾವುದೇ ಅರ್ಥವಿಲ್ಲ.

ನಾನು ಈ ಬಗ್ಗೆ ಚಿಂತಿತ ವ್ಯಕ್ತಿ. ಪ್ರಜಾಪ್ರಭುತ್ವದಲ್ಲಿ ಸಂವಾದಕ್ಕಾಗಿ ಅತ್ಯಂತ ಪವಿತ್ರವಾದ ವೇದಿಕೆ, ಅತ್ಯಂತ ಅಧಿಕೃತ ವೇದಿಕೆ ಜನರಿಂದ ಹೊರಹೊಮ್ಮುತ್ತದೆ. ಜನರು ತಮ್ಮ ಪ್ರತಿನಿಧಿಗಳನ್ನು ಸಂಸತ್ತು ಮತ್ತು ಶಾಸಕಾಂಗಗಳಿಗೆ ಆಯ್ಕೆ ಮಾಡುತ್ತಾರೆ. ಜನರ ಸಮಸ್ಯೆಗಳಿಗೆ ಧ್ವನಿ ನೀಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಅವರು ಪರಿಹಾರಗಳನ್ನು ನೀಡಬೇಕು. ಅವರು ಜನರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಕೆಲಸ ಮಾಡಬೇಕು ಆದರೆ ಸಾಂವಿಧಾನಿಕವಾಗಿ ಬದ್ಧರಾಗಿರುವವರು, ಸಂವಾದದಲ್ಲಿ ತೊಡಗುವ ಬದಲು ಅದಕ್ಕೆ  ಅಡ್ಡಿಪಡಿಸಲು ತೊಡಗಿದ್ದರೆ, ವಿಷಯಗಳು ತಪ್ಪು ಹಾದಿ ಹಿಡಿಯುತ್ತವೆ. ಸಮಾಜದಲ್ಲಿ ನಿರ್ವಾತವಿಲ್ಲದ ಕಾರಣ ಬಹಳ ವಿಷಯಗಳು ಕಷ್ಟಕರ ಪರಿಸ್ಥಿತಿಗೆ ದೂಡಲ್ಪಡುತ್ತವೆ.

ಸಂಸದರು ಮತ್ತು ಜನ ಪ್ರತಿನಿಧಿಗಳು ತಮ್ಮ ಚಟುವಟಿಕೆಯಲ್ಲಿ ತೊಡಗದಿದ್ದರೆ, ನಿರ್ವಾತವನ್ನು ತುಂಬಲಾಗುತ್ತದೆ. ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ಜನರು ಗೊಂದಲಮಯ ಸ್ಥಿತಿಗೆ ಹೋಗುತ್ತಾರೆ ಏಕೆಂದರೆ ಅವರು ತಮ್ಮ ಸಮಸ್ಯೆಗಳ ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕು. ಅವರು ಪರಿಹಾರಗಳನ್ನು ಹುಡುಕಬೇಕು.

ಆದ್ದರಿಂದ ನಾನು ಒತ್ತಾಯಿಸುತ್ತೇನೆ, ಎಚ್ಚರಗೊಳ್ಳಿ. ನಾವು ಸಂಸದೀಯ ಸಂಸ್ಥೆಯಾಗಿ ಗುರುತಿಸಲ್ಪಡುತ್ತಿದ್ದೇವೆ. ಆದರೆ ನಾವು ಅದಕ್ಕೆ ಗ್ರಹಣ ತರುವಷ್ಟು ಹತ್ತಿರದಲ್ಲಿದ್ದೇವೆ. ನಾವು ಅಪ್ರಸ್ತುತ ವಿಧಾನಕ್ಕೆ  ಹೋಗುತ್ತಿದ್ದೇವೆ. ನಮ್ಮ ಸಂವಿಧಾನದ ವಿಕಸನದಲ್ಲಿ ಸಂವಿಧಾನ ಸಭೆಯು ಪ್ರತಿಬಿಂಬಿಸಿದ ಅಭಿಪ್ರಾಯಗಳ ಅಭಿವ್ಯಕ್ತಿ, ಆರೋಗ್ಯಕರ ಸಂವಾದ, ಒಮ್ಮತದ ವಿಧಾನಕ್ಕಾಗಿ ಪ್ರಜಾಪ್ರಭುತ್ವದ ದೇವಾಲಯಗಳು ರೋಮಾಂಚಕವಾದ ರೀತಿಯಲ್ಲಿ ಕಾರ್ಯಪ್ರವೃತ್ತವಾಗಬೇಕಾದ ಸಮಯ ಇದಾಗಿದೆ.

ಜನರನ್ನು ಪ್ರತಿನಿಧಿಸುವ ಪ್ರತಿಯೊಬ್ಬರೂ ಆತ್ಮಶೋಧನೆ ನಡೆಸಬೇಕು ಎಂದು  ನಾನು ಆಗ್ರಹಿಸುತ್ತೇನೆ,  ಏಕೆಂದರೆ ನಾವು ನಮ್ಮ ಸ್ವಾತಂತ್ರ್ಯ ಆಚರಣೆಯ ಶತಮಾನೋತ್ಸವದ  ಕೊನೆಯ ಕಾಲು ಶತಮಾನ ಭಾಗದಲ್ಲಿದ್ದೇವೆ. ನಾವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯನ್ನು ಹೊಂದಿದ್ದೇವೆ. ಇದು ಇನ್ನು ಮುಂದೆ ಕನಸಲ್ಲ, ಅದು ನಮ್ಮ ಉದ್ದೇಶ. ಇದನ್ನು ಸಾಧಿಸಬಹುದು, ಆದರೆ ನಾವೆಲ್ಲರೂ ನಮ್ಮ ರಾಷ್ಟ್ರದಲ್ಲಿ, ರಾಷ್ಟ್ರದ ಸೇವೆಯಲ್ಲಿ ನಂಬಿಕೆ ಇಡಬೇಕು ಮತ್ತು ಅಭಿವೃದ್ಧಿ ಅಥವಾ ರಾಷ್ಟ್ರೀಯ ಕಲ್ಯಾಣದ ವಿಷಯಕ್ಕೆ ಬಂದಾಗ ಪಕ್ಷಪಾತದ ವಿಧಾನವನ್ನು ಮೀರಿ ನಿಲ್ಲಬೇಕು.

ನಾನು ಜನರಿಗೆ ಕರೆ ನೀಡುತ್ತೇನೆ, ಅವರಿಗೆ ಸಾಮಾಜಿಕ ಮಾಧ್ಯಮದ ಶಕ್ತಿ ಇದೆ. ನಾನು ಯುವಜನರಿಗೆ ಕರೆ ನೀಡುತ್ತೇನೆ, ನಿಮ್ಮ ಪ್ರತಿನಿಧಿಗಳ ಮೇಲೆ ಒತ್ತಡ ಹೇರಿ. ನಿಮ್ಮ ಪ್ರತಿನಿಧಿಗಳ ಲೆಕ್ಕಪರಿಶೋಧನೆಯನ್ನು ನಡೆಸಿ. ಏಕೆಂದರೆ ನಿಮ್ಮ ಕಾವಲು ನಾಯಿಯ ಸ್ಥಾನಮಾನವು (ವಾಚ್ ಡಾಗ್ ) ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುತ್ತದೆ. ಒಮ್ಮೆ ನೀವು ಅದನ್ನು ಮಾಡಿದರೆ, ಪ್ರತಿನಿಧಿಗಳು ರಾಷ್ಟ್ರದ ಸೇವೆಯಲ್ಲಿ ಮಿಂಚುತ್ತಾರೆ ಮತ್ತು ಒಬ್ಬರನ್ನೊಬ್ಬರು ಮೀರಿಸುತ್ತಾರೆ.

ಸ್ನೇಹಿತರೇ, ಭಾರತವು ಹಿಂದೆಂದಿಗಿಂತಲೂ ಪ್ರಗತಿಯಲ್ಲಿ ಮೇಲಕ್ಕೇರುತ್ತಿರುವಾಗ, ಜಾಗತಿಕ ಸಂಸ್ಥೆಗಳು ನಮ್ಮನ್ನು ಶ್ಲಾಘಿಸುತ್ತಿರುವಾಗ, ಭಾರತದ ವಿರುದ್ಧ ಶಕ್ತಿಗಳು, ನಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾದ ಶಕ್ತಿಗಳು, ನಮ್ಮ ಬಗ್ಗೆ ಸರಿಯಾಗಿ ಯೋಚಿಸದ ಶಕ್ತಿಗಳು ಒಂದಲ್ಲ ಒಂದು ರೂಪದಲ್ಲಿ ಸಂಭಾಷಿಸುತ್ತಿರುವಾಗ ನಾನು ನಿಮಗೆ ಎಚ್ಚರಿಕೆ ನೀಡಬೇಕಾಗಿದೆ. ಅವರು ನಮ್ಮ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಬಯಸುತ್ತಾರೆ. ಅವರು ನಮ್ಮ ಸಾಂವಿಧಾನಿಕ ಸ್ಥಾನಗಳಿಗೆ ಕಳಂಕ ತರಲು ಬಯಸುತ್ತಾರೆ. ಅವರು ನಮ್ಮ ಪ್ರಗತಿಯ ಇತಿಹಾಸವನ್ನು ತಡೆಹಿಡಿಯಲು ಬಯಸುತ್ತಾರೆ. ನಾವು ಶಕ್ತಿಗಳನ್ನು ಸಂಪೂರ್ಣ ಹಿಡಿತದೊಂದಿಗೆ ತಟಸ್ಥಗೊಳಿಸಬೇಕು ಮತ್ತು ಅಲ್ಲಿ ಶಾಶ್ವತ ಜಾಗರೂಕತೆ, ಮೇಲ್ವಿಚಾರಣೆ ಇದ್ದಾಗ ಅದನ್ನು ಮಾಡಬಹುದು. ಶಾಶ್ವತ ಜಾಗರೂಕತೆಯು ನಾವು ಸ್ವಾತಂತ್ರ್ಯಕ್ಕೆ ಪಾವತಿಸಬೇಕಾದ ಕಂದಾಯವಾಗಿದೆ.  

ಆದ್ದರಿಂದ, ಪ್ರತಿಯೊಬ್ಬರೂ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ರಾಷ್ಟ್ರದ ಸೇವೆ ಮಾಡಬೇಕೆಂದು ನಾನು ಕರೆ ನೀಡುತ್ತೇನೆ. ನಮ್ಮಂತಹ ದೇಶದಲ್ಲಿ, ಜನರು ಕಾನೂನು ಜಾರಿ ಅಧಿಕಾರಿಗಳಿಗೆ ಸವಾಲು ಹಾಕುತ್ತಾರೆ ಎಂದು ಊಹಿಸಿಕೊಳ್ಳಿ. ಅವರು ಸಾರ್ವಜನಿಕ ಸುವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ. ನ್ಯಾಯಾಲಯದ ಸಮನ್ಸ್ ಬಂದರೆ ಅವರು ಬೀದಿಗೆ ಬರುತ್ತಾರೆ. ಇದು ಕಾರ್ಯನಿರ್ವಹಿಸುವ ಮಾರ್ಗವೇ? ಭಾರತದಂತಹ ದೇಶದಲ್ಲಿ, ಜನರು ತಮಗಷ್ಟೇ  ಬಾಧ್ಯರು ಎಂಬಂತಹ ರೀತಿಗೆ ನಾವು ಅವಕಾಶ ಕೊಡಬಹುದೇ?.  ಈ ಜನರಿಗೆ ಸಮಾಜದಲ್ಲಿ ಅನಿಯಂತ್ರಿತ ಮತ್ತು ಅನಿರೀಕ್ಷಿತವಾಗಿ ವರ್ತಿಸುವ “ಸಡಿಲ ಫಿರಂಗಿ”ಗಳಾಗಲು ನಾವು ಅನುಮತಿಸಬಹುದೇ? ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಪ್ರಶ್ನಿಸುವ ಯಾರನ್ನೇ ಆದರೂ ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು. ಇದು ನಮಗೆ ಎಷ್ಟು ನಾಚಿಕೆಗೇಡಿನ ಸಂಗತಿ.

ಸಾರ್ವಜನಿಕ ಆಸ್ತಿಪಾಸ್ತಿಗಳು ನಾಶವಾಗುವುದನ್ನು, ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವುದನ್ನು ನೋಡಿದಾಗ ಅದು ಎಷ್ಟು ನೋವು ತರುತ್ತದೆ.  ನಾವು ಅದನ್ನು ಅನುಮತಿಸಬಹುದೇ, ಅದಕ್ಕೆ ಅವಕಾಶ ನೀಡಬಹುದೇ ?.  ಅವರು ರಾಷ್ಟ್ರದ ಶತ್ರುಗಳು. ಈ ಜನರನ್ನು, ಈ ದುಷ್ಟ ಶಕ್ತಿಗಳನ್ನು ಅನುಕರಣೀಯ ರೀತಿಯಲ್ಲಿ ಎದುರಿಸಬೇಕು. ಅವರನ್ನು ಕಾನೂನಿನ ಮುಂದೆ ತರಬೇಕು. ಅವರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಬೇಕು.

1.4 ಬಿಲಿಯನ್ ಜನಸಂಖ್ಯೆಯ ದೇಶವು ರೀತಿಯ ಸಾರ್ವಜನಿಕ ಉಪದ್ರವ, ಸಾರ್ವಜನಿಕ ಆಸ್ತಿಯ ನಾಶವನ್ನು ಅನುಭವಿಸಲು ಸಾಧ್ಯವಿಲ್ಲ. ಜಗತ್ತು ನಮ್ಮ ರೈಲುಗಳನ್ನು ಮೆಚ್ಚುತ್ತಿದೆ. ಒಂದರ ನಂತರ ಒಂದರಂತೆ ನಾವು ಅತ್ಯಾಧುನಿಕ ರೈಲುಗಳನ್ನು ಹೊಂದಿದ್ದೇವೆ ಮತ್ತು ಅದಕ್ಕೆ ಕಲ್ಲು ಹೊಡೆಯುವ ಕೆಲವು ಜನರಿದ್ದಾರೆ. ಅವರು ಸಮಾಜದ ರಾಕ್ಷಸ ಅಂಶಗಳು. ಅವರಿಗೆ ನಮ್ಮ ಗೌರವ ಇರಬಾರದು. ಅವರನ್ನು ಪ್ರತ್ಯೇಕಿಸಬೇಕು, ಗುರುತಿಸಬೇಕು ಮತ್ತು ಅವರ ಜೊತೆ ಕಠಿಣವಾಗಿ  ವ್ಯವಹರಿಸಬೇಕು.

ದೇಶದ ಕೆಲವು ಭಾಗಗಳಲ್ಲಿ ಇದನ್ನು ಮಾಡಲಾಗುತ್ತಿದೆ,  ಇದು ನನಗೆ  ಸಂತೋಷವನ್ನು ತಂದಿದೆ. ಇದನ್ನು ದೇಶದ ಪ್ರತಿಯೊಂದು ಭಾಗದಲ್ಲೂ ಮಾಡಬೇಕಾಗಿದೆ. ರಾಜಕೀಯವು ಕಹಿಗಾಗಿ ಅಲ್ಲ, ರಾಜಕಾರಣಿಗಳು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುತ್ತಾರೆ. ಯಾಕಿಲ್ಲ? ಅವರು ಹೊಂದಿರಬೇಕು. ಭಾರತವನ್ನು ಅದರ ವೈವಿಧ್ಯತೆಗಾಗಿ ವ್ಯಾಖ್ಯಾನಿಸಲಾಗಿದೆ ಏಕೆಂದರೆ ವೈವಿಧ್ಯತೆಯು ಏಕತೆಯಲ್ಲಿ ಒಟ್ಟುಗೂಡುತ್ತದೆ ಆದರೆ ರಾಜಕೀಯ ಕಹಿ ಏಕೆ ಇರಬೇಕು? ಅದು ನಮ್ಮ ಸಂಸ್ಕೃತಿಯಲ್ಲ.

ನಾವು ವಿಶ್ವ ಭ್ರಾತೃತ್ವ, ಸಹೋದರತ್ವವನ್ನು ನಂಬುತ್ತೇವೆ. ನಾವು ಜಗತ್ತನ್ನು ಒಂದು ಏಕತೆ, ಒಂದು ಕುಟುಂಬವಾಗಿ ಪರಿಗಣಿಸುತ್ತೇವೆ. ನಾವು 24X7 ಕೇವಲ ರಾಜಕೀಯ ಮಾಡಬಹುದೇ? ನಾವು 24X7 ಕೇವಲ ರಾಜಕೀಯ ಲಾಭಕ್ಕಾಗಿ ತೊಡಗಬಹುದೇ? ರಾಜಕೀಯದ ಉದ್ದೇಶ ಕೇವಲ ಅಧಿಕಾರವಾಗಬಾರದು. ಅಧಿಕಾರ ಮುಖ್ಯ. ಅದರ ಮೂಲಕ  ಸಮಾಜಕ್ಕೆ ಸೇವೆ ಸಲ್ಲಿಸಬೇಕು, ರಾಷ್ಟ್ರದ ಸೇವೆ ಮಾಡಬೇಕು.

ನಾನು ಕಳವಳಗೊಂಡಿದ್ದೇನೆ, ಮತ್ತು ನೀವೂ  ಈ ಬಗ್ಗೆ  ಅಷ್ಟೇ  ಕಳವಳ/ಚಿಂತೆಯನ್ನು ಹೊಂದಿದ್ದೀರಿ ಎಂಬ ಬಗ್ಗೆ  ಖಾತ್ರಿಯಿದೆ. ನಮ್ಮ ಸಮಾಜ ಧ್ರುವೀಕರಣಗೊಳ್ಳುತ್ತಿದೆ. ಸಾಮರಸ್ಯವು ನಮ್ಮಿಂದ ತಪ್ಪಿಸಿಕೊಳ್ಳುತ್ತಿದೆ. ಏಕೆ? ನಾವು ಒಂದು ರೀತಿಯ ನಿರೂಪಣೆಯನ್ನು ಪ್ರಾರಂಭಿಸಬೇಕು. ನಮ್ಮೆಲ್ಲರಿಗೂ, ನಮ್ಮ ನಾಗರಿಕತೆಯನ್ನು, 5,000 ವರ್ಷಗಳ ಹಿಂದಿನದನ್ನು  ನೆನಪಿಸಿ. ಎಲ್ಲಾ ಆಲೋಚನಾ ಮನಸ್ಸುಗಳು, ತರ್ಕಬದ್ಧ ಮನಸ್ಸುಗಳು ಸಾರ್ವಜನಿಕ ಅಭಿಪ್ರಾಯಕ್ಕೆ  ವೇಗವರ್ಧನೆಯನ್ನು ನೀಡುತ್ತವೆ ಎಂಬ ಬಗ್ಗೆ  ನನಗೆ ಖಾತ್ರಿಯಿದೆ, ಇದರಿಂದಾಗಿ ನಾವು ಪರಸ್ಪರರ ದೃಷ್ಟಿಕೋನಗಳನ್ನು ಹಾಗು  ಸಹಿಷ್ಣುತೆ ಇರುವ  ಜನರನ್ನು ಹೊಂದಿದ್ದೇವೆ. ನೀವು ಯಾರೊಂದಿಗಾದರೂ ಅವರ ಅಭಿಪ್ರಾಯಗಳನ್ನು ಒಪ್ಪದಿರಬಹುದು, ಆದರೆ ದಯವಿಟ್ಟು ಅವನು ಅಥವಾ ಅವಳ ಮಾತನ್ನು ಕೇಳಿ. ಇನ್ನೊಬ್ಬರ ದೃಷ್ಟಿಕೋನವನ್ನು ಕೇಳಲು ನಿರಾಕರಿಸುವುದು ನಿರಂಕುಶ, ಅಮಾನವೀಯ ಏಕೆಂದರೆ ದೃಷ್ಟಿಕೋನವು ಸರಿಯಾದ ದೃಷ್ಟಿಕೋನವಾಗಿರಬಹುದು.

ಕಾರ್ಪೊರೇಟ್ಗಳು, ಭಾರತೀಯ ಕಾರ್ಪೊರೇಟ್ಗಳು ಮುಂದೆ ಬಂದು ತಮ್ಮ ಸಿಎಸ್ಆರ್ ನಿಧಿಯಿಂದ ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಮತ್ತು ಅಂತಹ  ಧಾರ್ಮಿಕ ಸಂಸ್ಥೆಗಳ ಸುತ್ತಲಿನ ಮೂಲಸೌಕರ್ಯಗಳಿಗೆ ಉದಾರವಾಗಿ ಕೊಡುಗೆ ನೀಡುವಂತೆ ನಾನು ಕರೆ ನೀಡುತ್ತೇನೆ, ಏಕೆಂದರೆ ಧಾರ್ಮಿಕ ಸಂಸ್ಥೆಗಳು ಪೂಜಾ ಸ್ಥಳಗಳನ್ನು ಮೀರಿದುದಾಗಿವೆ. ಅವು ನಮ್ಮ ಸಂಸ್ಕೃತಿಯ ನರ ಕೇಂದ್ರಗಳಾಗಿವೆ. ಇದು ನಮ್ಮ ಯುವಜನರಲ್ಲಿ, ನಮ್ಮ ಮಕ್ಕಳಲ್ಲಿ, ಸಾಂಸ್ಕೃತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೇಶವನ್ನು ಇತರ ದೇಶಗಳಿಗಿಂತ ಭಿನ್ನವಾಗಿಸುತ್ತದೆ.

ನಮ್ಮ ರಾಷ್ಟ್ರವನ್ನು  ಪಾಶ್ಚಿಮಾತ್ಯ ಪ್ರಪಂಚದಂತೆ ಕೇವಲ ಭೌತಿಕವಾದದಿಂದ ನಡೆಸಲಾಗದು. ನಾವು ಜೀವನದ ಅತ್ಯುತ್ತಮ ಮೌಲ್ಯ, ಆಧ್ಯಾತ್ಮಿಕತೆಯನ್ನು ನಂಬುತ್ತೇವೆ. ನಾವು ದೈವತ್ವವನ್ನು ಮುಖಾಮುಖಿಯಾಗಿಸಲು, ದೈವತ್ವದೊಂದಿಗೆ ಬದುಕಲು ಬಯಸುತ್ತೇವೆ ಮತ್ತು ಅದಕ್ಕಾಗಿಯೇ ನಮ್ಮ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ಸಾಂಸ್ಕೃತಿಕ ನೀತಿಗಳು ಮತ್ತು ಮೌಲ್ಯಗಳಿಗೆ ತೆರೆದುಕೊಳ್ಳಬೇಕು.

ಸ್ನೇಹಿತರೇ, ನಮ್ಮ ರಾಷ್ಟ್ರೀಯ ಪರಿವರ್ತನೆಗೆ ಅಡಿಪಾಯ ಹಾಕಲಾಗುತ್ತಿದೆ. ಆದರೆ ಎಲ್ಲಾ ವ್ಯಕ್ತಿಗಳು, ಎಲ್ಲಾ ನಾಗರಿಕರು ಐದು ಸ್ತಂಭಗಳಿಗೆ ಬದ್ಧರಾದರೆ ಅದು ವೇಗಗೊಳ್ಳಬಹುದು, ಅದನ್ನು ನಾನು ಪಂಚಪ್ರಾಣ ಎಂದು ಕರೆಯುತ್ತೇನೆ.

ಒಂದು, ನಾವು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಬೇಕು. ವೈವಿಧ್ಯತೆಯನ್ನು ಮೀರಿದ, ವೈವಿಧ್ಯತೆಯನ್ನು ರಾಷ್ಟ್ರೀಯ ಏಕತೆಯನ್ನಾಗಿ ಪರಿವರ್ತಿಸುವ ಸಾಮಾಜಿಕ ಸಾಮರಸ್ಯವನ್ನು ನಾವು ನಂಬಬೇಕು. ಮಕ್ಕಳೊಂದಿಗೆ ತಳಮಟ್ಟದಲ್ಲಿ ದೇಶಭಕ್ತಿ ಮೌಲ್ಯಗಳನ್ನು ಬೆಳೆಸುವ ಮೂಲಕ ನಾವು ಕುಟುಂಬ ಜೀವನ, ಕುಟುಂಬದ  ಜ್ಞಾನದಲ್ಲಿ ನಂಬಿಕೆ ಇಡಬೇಕು. ನಾವು ನಮ್ಮ ಪರಿಸರ, ಪರಿಸರ ಸ್ನೇಹಿ ಜೀವನಶೈಲಿ, ಪರಿಸರ ಮೌಲ್ಯಗಳ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ಪೂಜೆಗಳನ್ನು ನೋಡಿ. ಅವು ಪರಿಸರ ಸ್ನೇಹಿ. ಸಹಬಾಳ್ವೆ ನಡೆಸಲು ನಮಗೆ ಮತ್ತೊಂದು ಭೂಮಿ ಇಲ್ಲ ಎಂದು ನಮಗೆ ಖಾತ್ರಿಯಿದೆ. ಈ ಅಸ್ತಿತ್ವದ ಸವಾಲು ನಮ್ಮನ್ನು ದಾಟಿ ಮುನ್ನುಗ್ಗಲು  ನಾವು ಅನುಮತಿಸುವುದಿಲ್ಲ. ನಾವು ಪರಿಸರ ಸ್ನೇಹಿಯಾಗಿರಬೇಕು.

ದೇಶದ ಪ್ರತಿಯೊಬ್ಬರೂ ಸ್ವದೇಶಿಯಲ್ಲಿ ನಂಬಿಕೆ ಇಡಬೇಕು ಎಂದು ನಾನು ಕರೆ ನೀಡುತ್ತೇನೆ. ಉದ್ಯೋಗವನ್ನು ಉತ್ತೇಜಿಸುವ, ಅಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸುವ ಸ್ಥಳೀಯ ಉತ್ಪನ್ನಗಳ  ಬಗ್ಗೆ ಧ್ವನಿ ಎತ್ತಿ. ನೀವು ಅದರಲ್ಲಿ ನಂಬಿಕೆ ಇಡಬೇಕು ಮತ್ತು ಕೊನೆಯದಾಗಿ, ನಮ್ಮ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡುತ್ತದೆ, ಆದರೆ ನಾವು ಮೂಲಭೂತ ಕರ್ತವ್ಯಗಳತ್ತ ಗಮನ ಹರಿಸಬೇಕು. ನಮ್ಮ ಕರ್ತವ್ಯಗಳು ಪವಿತ್ರವಾಗಿವೆ, ಅವು ಹೆಚ್ಚೇನನ್ನೂ ತೆಗೆದುಕೊಳ್ಳುವುದಿಲ್ಲ. ನೀವು ಮೂಲಭೂತ ಕರ್ತವ್ಯಗಳ ಮೂಲಕ ಹೋದರೆ, ನೀವು ಅವುಗಳನ್ನು ಅನುಸರಿಸಲು ಪ್ರೇರೇಪಿಸಲ್ಪಡುತ್ತೀರಿ, ಸ್ಪೂರ್ತಿಯನ್ನು ಪಡೆಯುತ್ತೀರಿ.

मुझे कहने में कोई संकोच नहीं है, हमारे राष्ट्रीय परिवर्तन की नींव पांच शिक्तशाली स्तंभों पर टिकी हुई है:

● सामाजिक सद्भाव जो विविवधता को राष्ट्रीय एकता में बदल देता है,

● जमीनी स्तर पर देशभिक्त के मूल्यों का पोषण कहां होता है, परिवार में होता है इसकी शुरुआत कीजिए

● भारत माता का सम्मान तब होगा जब हम पयार्वरण संरक्षण कारेगे, सृजन करेंगे,

● स्वदेशी को अपनाएंगे तो आत्मनिर्भर भारत की नीव मजबूत होगी, हम आत्मनिर्भर बनेंगे; और

● यदि अगर हम नागिरक के कतर्व्य का निर्वहन करेंगे तो हम प्रगति के पथ प्रदर्शक बनेंगे।

ಮಹಿಳೆಯರೇ ಮತ್ತು ಮಹನೀಯರೇ, ನಾವು ರಾಷ್ಟ್ರಕ್ಕಾಗಿ ಕೆಲಸ ಮಾಡಬೇಕು ಎಂಬುದಕ್ಕೆ ಇಲ್ಲಿ  ಸಂದೇಶವಿದೆ.  ರಾಷ್ಟ್ರವನ್ನು ಮೊದಲು ಎಂದು ಪರಿಗಣಿಸಲು  ಪ್ರತಿಯೊಬ್ಬ ವ್ಯಕ್ತಿಯೂ ಶಕ್ತಿಯನ್ನು ಪಡೆಯಬೇಕು ಎಂಬುದಕ್ಕೆ  ಇಲ್ಲಿ  ಸಂದೇಶ ಇದೆ. ನಾನು  ಇಲ್ಲಿಂದ  ಈ ಸಂದೇಶಗಳನ್ನು ಕೊಂಡೊಯ್ಯುತ್ತೇನೆ. ಯಾವುದೇ ವೈಯಕ್ತಿಕ, ಸೈದ್ಧಾಂತಿಕ, ಸಾಂಸ್ಥಿಕ ಪರಿಗಣನೆಯು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮೀರಲು, ನಿರ್ಲಕ್ಷಿಸಲು  ಸಾಧ್ಯವಿಲ್ಲ.

ನಿಮ್ಮ ಸಂಸ್ಥೆಗೆ ಒಳಿತಾಗಲಿ, ನಿಮ್ಮ ಭಕ್ತರು ಮತ್ತು ಪ್ರತಿಯೊಬ್ಬರಿಗೂ ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನಾನು ಬಯಸುತ್ತೇನೆ.

ತುಂಬಾ ಧನ್ಯವಾದಗಳು.

 

*****


(Release ID: 2091099) Visitor Counter : 8


Read this release in: English , Urdu , Hindi