ಉಪರಾಷ್ಟ್ರಪತಿಗಳ ಕಾರ್ಯಾಲಯ
ನವದೆಹಲಿಯ ಸಂಸತ್ ಭವನದಲ್ಲಿ ಐ.ಎಫ್.ಎಸ್. ಪರೀಕ್ಷಣಾರ್ಥಿಗಳನ್ನು ಉದ್ದೇಶಿಸಿ ಉಪರಾಷ್ಟ್ರಪತಿಗಳ ಭಾಷಣ
Posted On:
19 DEC 2024 7:57PM by PIB Bengaluru
ಶುಭ ಮಧ್ಯಾಹ್ನ, ಮತ್ತು ನನಗೆ ಇದು ದೊಡ್ಡ ಬದಲಾವಣೆಯಾಗಿದೆ, ಸಂಸತ್ತು ಅಧಿವೇಶನದಲ್ಲಿದೆ, ಇದು ನನ್ನ ಫಲಪ್ರದ ಕ್ಷಣವಾಗಲಿದೆ.
ಗೌರವಾನ್ವಿತ ಅತಿಥಿಗಳೇ ಮತ್ತು ನನ್ನ ಆತ್ಮೀಯ ಉದಯೋನ್ಮುಖ ಅಧಿಕಾರಿಗಳೇ, ನಮ್ಮ ನೆರೆಯ ದೇಶವಾದ ಭೂತಾನಿನ ನಮ್ಮ ಇಬ್ಬರು ಸ್ನೇಹಿತರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ ಮತ್ತು ಅವರು ಸವಿ ನೆನಪುಗಳನ್ನು ಕೊಂಡೊಯ್ಯುತ್ತಾರೆ ಎಂದು ನನಗೆ ಖಾತ್ರಿಯಿದೆ ಮತ್ತು ಉಳಿದವರು ಜೀವನದಲ್ಲಿ ಆ ದೇಶಕ್ಕೆ ಹೋಗಬೇಕಾದ ಸಂದರ್ಭವನ್ನು ಹೊಂದಿರುತ್ತಾರೆ. ಅವರು ಭೂಮಿಯ ಮೇಲಿನ ಅತಿದೊಡ್ಡ ಪ್ರಜಾಪ್ರಭುತ್ವದ ಸದ್ಭಾವನೆಯ ಸಂದೇಶವನ್ನು ಒಯ್ಯುತ್ತಾರೆ ಎಂದು ನನಗೆ ಖಾತ್ರಿಯಿದೆ ಮತ್ತು ನಾವು ನೆರೆಹೊರೆಯವರು ಮೊದಲು ಎನ್ನುವ ಪರಿಕಲ್ಪನೆಯಲ್ಲಿ ಮತ್ತು ಕ್ರಿಯೆಯಲ್ಲಿ ನಂಬುತ್ತೇವೆ. ನನಗೆ ಜ್ಞಾನೋದಯವಾಗಿದೆ ಮತ್ತು ಪ್ರಪಂಚದಲ್ಲಿ ಅನನ್ಯವಾಗಿರುವ, ಜನಸಂಖ್ಯೆಯ ಆರನೇ ಒಂದು ಭಾಗಕ್ಕೆ ನೆಲೆಯಾಗಿರುವ ಈ ದೇಶದ ಬಗ್ಗೆ ನಿಮಗೆಲ್ಲರಿಗೂ ಹೆಚ್ಚಿನ ಅರಿವಾಗಿದೆ ಎಂದು ನನಗೆ ಖಾತ್ರಿಯಿದೆ ಮತ್ತು ವೈವಿಧ್ಯತೆಯು ಏಕತೆಯಾಗಿ ಒಮ್ಮುಖವಾಗುವುದನ್ನು ನೋಡಿರಿ.
ಪ್ರಪಂಚದ ಆಧ್ಯಾತ್ಮಿಕ ಕೇಂದ್ರವಾದ ಈ ಪವಿತ್ರ ಭೂಮಿಗೆ ನೀವು ಪ್ರಯಾಣಿಸಿದ್ದೀರ ಎಂದಾದರೆ, ನೀವು ನಿಜವಾಗಿಯೂ ಅದ್ಭುತವಾದ ಪರಿಸ್ಥಿತಿಗಳು, ಭವ್ಯವಾದ ಪ್ರಕೃತಿ ಮತ್ತು ನಿಮ್ಮ ಇಂದ್ರಿಯಗಳಿಗೆ ಆನಂದವನ್ನು ಕಂಡುಕೊಂಡಿರುವಿರಿ, ಜೊತೆಗೆ ಈ ಪ್ರಕ್ರಿಯೆಯಲ್ಲಿ, ನಿಮಗೆ ಒಂದು ಆಲೋಚನೆ ಬಂದಿರಬಹುದು. ಒಂದು ಅರ್ಥದಲ್ಲಿ, ಈಗ ಅದರ ಪಾಲಕರಾಗಿದ್ದೀರಿ. ಮೊದಲನೆಯದಾಗಿ ನಾನು ಭೂಮಿಯು ಎದುರಿಸುತ್ತಿರುವ ದೊಡ್ಡ ಸವಾಲು, ಬದುಕುಳಿಯುವ ಸವಾಲನ್ನು ಉಲ್ಲೇಖಿಸಲು ಬಯಸುತ್ತೇನೆ. ಯುವ ಸ್ನೇಹಿತರೇ, ನಮಗೆ ಬದುಕಲು ಬೇರೆ ಯಾವುದೇ ಗ್ರಹವಿಲ್ಲ. ಆದ್ದರಿಂದ, ನಾವು ಭೂಮಿಯನ್ನು ಪೋಷಿಸುತ್ತೇವೆ, ನಮ್ಮ ದುರಾಶೆ ಅಥವಾ ಅಸಡ್ಡೆ ವರ್ತನೆಗಳಿಂದ ಮಾಡಿದ ಹಾನಿಯನ್ನು ನಾವು ಸರಿಪಡಿಸುತ್ತೇವೆ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ. ಆದ್ದರಿಂದ ನೀವು ಈ ಬಹು ಮುಖ್ಯವಾದ ಅಂಶದ ಬಗ್ಗೆ ಗಂಭೀರವಾಗಿ ಚಿಂತಿಸುತ್ತೀರಿ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟ್ಟಿರುವ ಒಂದು ಸಣ್ಣ ಹೆಜ್ಜೆಯತ್ತ ನಿಮ್ಮ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ, 'ಏಕ್ ಪೆಡ್ ಮಾ ಕೆ ನಾಮ್' (ಒಂದು ಮರ ಮಾತೆಯರ ಹೆಸರಲ್ಲಿ), ಇದು ಅವಳಿ ಯೋಜನೆಯಾಗಿದೆ.
- ಒಂದು, ನಮ್ಮ ಉಳಿವಿಗಾಗಿ ಇದು ತುಂಬಾ ಮಹತ್ವದ್ದಾಗಿದೆ ಎಂಬುದನ್ನು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ನೆನಪಿಸುವುದು. ಮತ್ತು;
- ಎರಡನೆಯದಾಗಿ,, ಅದು ನಾಗರಿಕರನ್ನು ಸಶಕ್ತಗೊಳಿಸುತ್ತದೆ, ಅದಕ್ಕಾಗಿ ಎಲ್ಲಾ ನಾಗರಿಕರು ಒಗ್ಗೂಡಿದಾಗ, ಅದು ಒಂದು ಆಂದೋಲನವಾಗುತ್ತದೆ, ಸಾಮೂಹಿಕ ಚಳುವಳಿಯಾಗುತ್ತದೆ.
ಇದು ಬಹಳ ವೇಗವಾಗಿ ಬೆಳೆಯುತ್ತಿದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ, ಆದ್ದರಿಂದ ನಿಮಗೆ ಬಹಳಷ್ಟು ಕೆಲಸ ಇರುತ್ತದೆ. ನೀವು ಅರಣ್ಯದಿಂದ ಪೋಷಣೆ ಪಡೆಯುವ ಜನರೊಂದಿಗೆ ವ್ಯವಹರಿಸಬೇಕು. ನೀವು ಅನನ್ಯವಾಗಿ ಸ್ಥಾನದಲ್ಲಿ ಇರಬೇಕು, ನೀವು ಅವರಿಗೆ ಶಾಂತ ಪ್ರತಿಸ್ಪಂದನೆಯನ್ನು ಹೊಂದಿರಬೇಕು. ಅವರು ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ನೀವು ಅವರಿಗೆ ನೀಡಬೇಕು.
ಬಲವಂತದ ಕಾರ್ಯವಿಧಾನ ಅಥವಾ ನವೀನ ವಿಧಾನವು ಸಲ್ಲತಕ್ಕದ್ದಲ್ಲ. ನಿಮ್ಮ ಕೈಯಲ್ಲಿ ಅಧಿಕಾರವಿರುತ್ತದೆ ಆದರೆ ಅರಣ್ಯ ಮತ್ತು ಅರಣ್ಯ ಉತ್ಪನ್ನಗಳೊಂದಿಗೆ ಸಂಬಂಧ ಹೊಂದಿರುವ ಜನರೊಂದಿಗೆ ವ್ಯವಹರಿಸುವಾಗ ನೀವು ಆ ದೃಷ್ಟಿಕೋನದಿಂದ ಜವಾಬ್ದಾರರಾಗಿರಬೇಕು.
ಅರಣ್ಯದೊಂದಿಗೆ ಸಂಬಂಧ ಹೊಂದಿರುವವರು, ನಿರ್ದಿಷ್ಟವಾಗಿ ನಮ್ಮ ಬುಡಕಟ್ಟು ಜನರು ಪ್ರಕೃತಿಗೆ ಅತ್ಯಂತ ಬದ್ಧರಾಗಿದ್ದಾರೆ. ಅವರು ತಮ್ಮ ಸಂಪ್ರದಾಯಗಳಿಗೆ ಬದ್ಧರಾಗಿದ್ದಾರೆ. ನಿಮ್ಮ ಕೆಲಸದಲ್ಲಿ, ಯಾವಾಗಲೂ ಅವರ ಬಗ್ಗೆ ಸಹಾನುಭೂತಿ ಹೊಂದಿರಿ ಮತ್ತು ಎರಡನೆಯದಾಗಿ, ನಿಮ್ಮ ಔಪಚಾರಿಕ ಕೆಲಸಕ್ಕೆ ಸೀಮಿತವಾಗಿರದೆ ಅದನ್ನು ಮೀರಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ, ಕಾಡಿನ ಪ್ರಾಮುಖ್ಯತೆ, ಅರಣ್ಯ ಪೋಷಣೆಯ ಬಗ್ಗೆ ನೀವು ಸ್ವಾಭಾವಿಕವಾಗಿಯೂ ಇತರರಿಗಿಂತ ಹೆಚ್ಚು ಬುದ್ಧಿವಂತರಾಗುತ್ತೀರಿ. ಅರಣ್ಯ ವ್ಯಾಪ್ತಿ ಎಂದರೆ ಏನು, ಅರಣ್ಯ ವ್ಯಾಪ್ತಿ ಎಂದರೆ ಹವಾಮಾನ, ಸುಸ್ಥಿರ ಅಭಿವೃದ್ಧಿ ಹೊಂದುವುದು. ಎಲ್ಲಕ್ಕಿಂತ ಮುಖ್ಯವಾಗಿ, ಭಗವಂತನು ಮನುಕುಲಕ್ಕಾಗಿ ಮಾತ್ರ ಅಲ್ಲ. ಎಲ್ಲಾ ಜೀವಿಗಳಿಗಾಗಿ ಈ ಗ್ರಹವನ್ನು ಸೃಷ್ಟಿಸಿದ್ದಾನೆ. ನೀವು ಅವರೊಂದಿಗೆ ಪರಿಚಿತರಾಗಿರುತ್ತೀರಿ.
ಆದ್ದರಿಂದ ನಾವು ಮನುಕುಲವನ್ನು ಮೀರಿದ ನಮ್ಮ ಸ್ನೇಹಿತರನ್ನು, ನಮ್ಮ ಏಕೈಕ ಗ್ರಹವನ್ನು ಸಹಾನುಭೂತಿ, ಕಾಳಜಿಯಿಂದ ನೋಡಿಕೊಳ್ಳಬೇಕಾದ ರೀತಿಯಲ್ಲಿ ನಾವು ಇರುವುದುಹೆಚ್ಚು ಮುಖ್ಯವಾಗಿದೆ ಮತ್ತು ಈ ಜಾತಿಯ ಜೀವಿ ನಾಶವಾಗಬಾರದು, ಅದಕ್ಕಾಗಿಯೇ ನಾವು ಅದನ್ನು ಮುಂದಿನ ಪೀಳಿಗೆಗೆ ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದೇವೆ. ಹುಲಿಗಳಿಗೆ ಸಂಬಂಧಿಸಿದಂತೆ ಪ್ರಧಾನಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಇತ್ತೀಚಿನ ಕ್ರಮಗಳ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದಿದೆ ಮತ್ತು ನಾವು ಆ ದಿಕ್ಕಿನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದೇವೆ.
ಆದ್ದರಿಂದ, ನೀವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಈ ಗೌರವಾನ್ವಿದ ಸೇವೆಗೆ ಸೇರುತ್ತಿರುವಿರಿ. ಇದು ಮೂರು ರಾಷ್ಟ್ರೀಯ ಸೇವೆಗಳಲ್ಲಿ ಒಂದಾಗಿದೆ ಮತ್ತು ನನ್ನ ಅಂದಾಜು ಮತ್ತು ಲೆಕ್ಕಾಚಾರದ ಪ್ರಕಾರ, ಇದು ಇತರ ಎರಡು ಸೇವೆಗಳಿಗಿಂತ ಹೆಚ್ಚು ಉತ್ಪಾದಕ ದೃಷ್ಟಿಯನ್ನು ಹೊಂದಿರುವುದರಿಂದ ಇದು ಅತ್ಯಂತ ಮುಖ್ಯವಾಗಿದೆ. ಅದಕ್ಕಾಗಿ ನೀವು ಆ ಮಾರ್ಗದಲ್ಲಿ ನಿಮ್ಮನ್ನು ತೊಡಗಿಸಿಕೊಂಡ ಕ್ಷಣದಲ್ಲಿ ನಿಮ್ಮ ಉಪಸ್ಥಿತಿಯು ಹೆಚ್ಚು ಪರಿಣಾಮ ಬೀರುತ್ತದೆ, ನೀವು ನಮ್ಮ ನಾಗರಿಕತೆಯ ಬೇರುಗಳು, ನಮ್ಮ ನೀತಿಗಳು, ನಮ್ಮ ವೇದಗಳು, ಪುರಾಣಗಳು, ಉಪನಿಷತ್ತುಗಳ ಮೇಲೆ ಕೇಂದ್ರೀಕರಿಸಬೇಕು ಮತ್ತು ನಾವು ಪ್ರಕೃತಿಯನ್ನು ಆರಾಧಿಸಿದ್ದೇವೆ ಎನ್ನುವುದನ್ನು ನೀವು ಕಂಡುಕೊಳ್ಳುತ್ತೀರಿ. ನಾವು ವನ್ಯಜೀವಿಗಳೊಂದಿಗೆ ನಿಜವಾದ ಸಂಬಂಧವನ್ನು ಹೊಂದಿದ್ದೇವೆ. ಪ್ರತಿ ಅವಧಿಯಲ್ಲೂ ನೀವು ಪ್ರಕೃತಿ ಮಾತೆಗೆ ಅಥವಾ ವನ್ಯಜೀವಿಗಳಿಗೆ ಗೌರವ ಸಲ್ಲಿಸುವ ವಿಷಯಕ್ಕೆ ಬಂದಾಗ, ನಮ್ಮ ಧಾರ್ಮಿಕ ಚಟುವಟಿಕೆಗಳೂ ಹಬ್ಬಗಳಾಗುತ್ತವೆ. ನೀವು ಪ್ರಾಥಮಿಕವಾಗಿ ಪ್ರವಾಸೋದ್ಯಮಕ್ಕೆ ರಾಯಭಾರಿಯಾಗುತ್ತೀರಿ.
ನಿಮ್ಮ ಕಾರ್ಯಕ್ಷೇತ್ರಗಳ ಸ್ಥಳಗಳಿಗೆ ವ್ಯಾಪ್ತಿಯಲ್ಲಿರುವ ಸ್ಥಳಗಳಿಗೆ ಜನರು ಬರುವುದನ್ನು ನೀವು ಗಮನಿಸಿರಬೇಕು. ಇದನ್ನು ಹೆಚ್ಚು ತಿಳಿವಳಿಕೆ ನೀಡುವ ಮೂಲಕ ನೀವು ಅದ್ಭುತಗಳನ್ನು ಮಾಡಬಹುದು. ಇಂದಿಗೂ ಸಹ ಸ್ನೇಹಿತರೇ, ಪ್ರಕೃತಿಯು ಭಾರತದ ಎಲ್ಲಾ ಭಾಗಗಳಿಗೆ ಬಹಳಷ್ಟು ನೀಡಿದೆ ಎಂದು ನಾನು ನೋಡುತ್ತೇನೆ, ಆದರೆ ಅರಿವಿನ ಕೊರತೆ ಇದೆ. ಈ ಹುದ್ದೆಯಲ್ಲಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಈಶಾನ್ಯಕ್ಕೆ ಪ್ರಯಾಣಿಸಲು ನನಗೆ ಅವಕಾಶ ಸಿಕ್ಕಿತು. ನಾನು ಕಂಡದ್ದನ್ನು ನೀವು ನೋಡಿ ನಂಬಬೇಕು. ಆದ್ದರಿಂದ, ನೀವು ಈ ದೇಶದ ಪ್ರವಾಸೋದ್ಯಮದ ಸ್ಪಷ್ಟ, ನೈಸರ್ಗಿಕ, ಸಾವಯವ ರಾಯಭಾರಿ ಮತ್ತು ಅದಕ್ಕಾಗಿ ನೀವು ನಮ್ಮಲ್ಲಿರುವ ಶ್ರೀಮಂತ ವನ್ಯಜೀವಿ, ಸಸ್ಯ ಮತ್ತು ಪ್ರಾಣಿಗಳ ಪ್ರಚಾರ ಮಾಡಬೇಕು ಮತ್ತು ಎರಡನೆಯದಾಗಿ, ನಾವು ಅರಣ್ಯ, ವನ್ಯ ಪ್ರದೇಶವನ್ನು ಮೀರಿ, ನರ್ಸರಿ ನೆಡುತೋಪುಗಳ ರಾಷ್ಟ್ರೀಯ ದೃಷ್ಟಿಯನ್ನು ಅಭಿವೃದ್ಧಿಪಡಿಸಬೇಕು. ಏಕೆಂದರೆ ಇದು ದೊಡ್ಡ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ನೀವು ನೋಡಿರಬೇಕು ಮತ್ತು ನೀವು ಸಚಿವಾಲಯದೊಂದಿಗೆ ಬಹಳ ನಿಕಟ ಸಂಬಂಧ ಹೊಂದಿರಬೇಕು. ಅರಣ್ಯ ಭೂಮಿಯನ್ನು ಅಭಿವೃದ್ಧಿಪಡಿಸಿದಾಗ ಅಥವಾ ಅಭಿವೃದ್ಧಿಯ ಅವಶ್ಯಕತೆಗಾಗಿ ಅರಣ್ಯವನ್ನು ಪರಿವರ್ತಿಸಬೇಕಾಗುತ್ತದೆ. ಅದಕ್ಕೆ ಸೂಕ್ತವಾದ ಸರಿದೂಗಿಸುವ ಅರಣ್ಯೀಕರಣ ಮಾಡಬೇಕು, ಆ ಪರಿಹಾರದ ಅರಣ್ಯೀಕರಣವು ಅಧಿಕೃತವಾಗಿರಬೇಕು, ನೈಜವಾಗಿರಬೇಕು ಮತ್ತು ಅದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ದೇಶದ ಹೆಚ್ಚಿನ ಜನರು ಅರಣ್ಯೀಕರಣವನ್ನು ತೋಟಗಾರಿಕೆ ಎಂದುಕೊಂಡು ಗೊಂದಲಗೊಳ್ಳುತ್ತಾರೆ, ಇವೆರಡೂ ಗುಣಾತ್ಮಕವಾಗಿ ವಿಭಿನ್ನವಾಗಿವೆ ಎಂದು ನಿಮಗೆ ತಿಳಿದಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದು ಪ್ರದೇಶಕ್ಕೆ ಸೇರಿದವರು ಮತ್ತು ನನಗನಿಸುವಂತೆ ನಿಮ್ಮಲ್ಲಿ ಹೆಚ್ಚಿನವರು ಭಾರತದ ಹೃದಯವಾದ ಗ್ರಾಮೀಣ ಭಾರತದವರಾಗಿರಬೇಕು. ನೀವು ಸುತ್ತಲೂ ಕಾಣಬಹುದು, ವಿಶೇಷವಾಗಿ ಹಳ್ಳಿಗಳಲ್ಲಿ, ಈ ಅಂಶದ ಮೇಲೆ ಅಷ್ಟೇನೂ ಗಮನಹರಿಸುವುದಿಲ್ಲ.
ನನ್ನ ಮನಸ್ಸಿಗೆ ನೋವಾಗುತ್ತದೆ ಮತ್ತು ರೈತನು ಏನು ಮಾಡಬಹುದು ಎಂಬುದರ ಕುರಿತು ನಾನು ಆಳವಾಗಿ ಚಿಂತಿಸುತ್ತೇನೆ. ಹಿತ್ತಲಿನಲ್ಲಿ ಅಥವಾ ಮುಂಭಾಗದ ಜಾಗದಲ್ಲಿ ಸುಲಭವಾಗಿ ಸಿಗಬಹುದಾದ ನಿಂಬು ಅಥವಾ ಸಣ್ಣ ವಸ್ತುಗಳನ್ನು ಪಡೆಯಲು ಇದು ಮಂಡಿಯನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ನೀವು ಕೆಲವು ರೀತಿಯ ನಿರೂಪಣೆಯನ್ನು ರಚಿಸಬೇಕು, ಹೌದು, ನೀವು ಅದನ್ನು ಮಾಡಬಲ್ಲಿರಿ. ಇದು ಲಾಭದಾಯಕ ಅನುಭವವಾಗಿದೆ. ನಿಮ್ಮ ಕೆಲಸವು ದ್ವಿಗುಣವಾಗಿರುವುದರಿಂದ ನೀವು ಮಾಡಬೇಕಾದ ಕೆಲಸಗಳಲ್ಲಿ ಇದು ಕೂಡ ಒಂದಾಗಿದೆ
- ಒಂದು, ಅರಣ್ಯಸೇವೆಯ ಸದಸ್ಯರಾಗಿ ನೀವು ನಿರ್ವಹಿಸಬೇಕಾದ ಬಾಧ್ಯತೆಗಳು.
- ಎರಡನೆಯದು ಸಮಾಜಕ್ಕೆ ಹಿಂತಿರುಗಿಸುವ ಬಾಧ್ಯತೆಯಾಗಿದೆ, ಆದ್ದರಿಂದ ಆ ದೃಷ್ಟಿಕೋನದಿಂದ, ನಿಮ್ಮ ಅಧಿಕೃತ ಕೆಲಸವನ್ನು ಮೀರಿ, ನೀವು ಇನ್ನೂ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದೀರಿ.
ಮತ್ತು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ, ಅದು ಇಡೀ ಸಮಾಜಕ್ಕೆ ಪ್ರಯೋಜನಕಾರಿ ಫಲಿತಾಂಶಗಳನ್ನು ನೀಡುತ್ತದೆ. ಎರಡನೆಯದಾಗಿ, ಅತ್ಯಂತ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ, ಈ ಮಾರ್ಗವನ್ನು ಪ್ರವೇಶಿಸುವ ಮೂಲಕ, ಈ ಅರಣ್ಯಸೇವೆಗೆ ಪ್ರವೇಶಿಸುವ ಮೂಲಕ, ನೀವು ಯುವಕರಿಗೆ ಸಹಜವಾಗಿಯೇ ಮಾದರಿಯಾಗುತ್ತೀರಿ.
ಯುವಕರು ನಿಮ್ಮನ್ನು ಗೌರವದಿಂದ ನೋಡುತ್ತಾರೆ, ನೀವು ಮೊದಲ ಬಾರಿಗೆ ಸೇವೆಗೆ ಬಂದಾಗ ನಿಮ್ಮ ಪೋಷಕರಿಗೆ ನೆರೆಹೊರೆಯವರ ಪ್ರತಿಕ್ರಿಯೆಯನ್ನು ನೀವು ನೋಡಿರುತ್ತೀರಿ. ಮನಸ್ಸು ತಕ್ಷಣವೇ ಬದಲಾಗುತ್ತದೆ, ಈ ಸೇವೆಯಲ್ಲಿನ ನಿಮ್ಮ ಸಾಮರ್ಥ್ಯದಿಂದಾಗಿ ನಿಮ್ಮ ಪೋಷಕರಿಗೆ ನೀವು ವಿಶೇಷವಾಗುವಿರಿ.
ಅವರ ಕಣ್ಣುಗಳಲ್ಲಿನ ಹೊಳಪು, ನೆರೆಹೊರೆಯವರಿಂದ ಅವರು ಗಳಿಸಿದ ಗೌರವ, ಅಂದರೆ ನೀವು ಹೆಚ್ಚಿನ ಕಾರ್ಯನಿರ್ವಹಣೆಯ ಮಾನದಂಡಗಳನ್ನು ಹೊಂದಿಸಬೇಕು. ನಿಮ್ಮ ಜೀವನದಲ್ಲಿ ರಾಜಿ ಮಾಡಿಕೊಳ್ಳುವ ಸಂದರ್ಭಗಳಿರಬಹುದು. ವನ್ಯಜೀವಿಗಳು ಮತ್ತು ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನೀವು ಕಂಡುಕೊಳ್ಳುವ ಕಾರಣ, ಅನೇಕ ಕಾನೂನಿಗೆ ಮೀರಿದ ಚಟುವಟಿಕೆಗಳು ನಡೆಯುವುದರಿಂದ ಪರಿಸ್ಥಿತಿಯೊಂದಿಗೆ ರಾಜಿಯಾಗುವ ಸಂದರ್ಭಗಳು ಬರಬಹುದು. ಕೆಲವರು ಅಡ್ಡದಾರಿಯಲ್ಲಿ, ಜನರಿಗೆ ಒಳ್ಳೆಯದಾಗುವುದನ್ನು ನಿರ್ಲಕ್ಷಿಸಿ, ವೈಯಕ್ತಿಕ ಲಾಭಕ್ಕಾಗಿ ಹಣಗಳಿಸಲು ಒಂದಲ್ಲ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅದು ನಿಮಗೆ ಸವಾಲಾಗಿರುತ್ತದೆ.
ಆದ್ದರಿಂದ ಪರಸ್ಪರ ಸಂಪರ್ಕದಲ್ಲಿರಬೇಕೆಂದು ನಾನು ಬಲವಾಗಿ ಒತ್ತಾಯಿಸುತ್ತೇನೆ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿರಿ, ನಿಮ್ಮ ಹಿರಿಯರಿಂದ ಮಾರ್ಗದರ್ಶನ ಪಡೆಯಿರಿ. ಆದರೆ ಸಮಗ್ರತೆ, ಕರ್ತವ್ಯದ ಸಮರ್ಪಣೆಯ ಮಾರ್ಗವನ್ನು ಅನುಸರಿಸಿ. ಯುವ ಸ್ನೇಹಿತರೇ, ನಿಮ್ಮ ಕೆಲಸ, ಸ್ಥಾನವನ್ನು ನೀವು ನಂಬಿದರೆ ಜೀವನವು ನಿಮಗೆ ಸಂತೋಷ ತರುತ್ತದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಮೆಟೀರಿಯಲಿಸಂ ಸಂತೋಷವಲ್ಲ. ಸಮಾಜದಲ್ಲಿ ನಿಮ್ಮ ವಯಸ್ಸಿನಲ್ಲಿ ನಿಮಗಿಂತ ಹೆಚ್ಚು ಸಂಪಾದನೆ ಮಾಡುವವರು ಅನೇಕರಿರಬಹುದು ಆದರೆ ಅವರ ಸಂಬಂಧಗಳು ನಿಮ್ಮಂತೆ ಇರುವುದಿಲ್ಲ ಅಲ್ಲವೇ? ನೀವು ಸೇವೆಗೆ ಬಂದ ಕ್ಷಣದಲ್ಲಿ, ಗಂಡು ಮತ್ತು ಹೆಣ್ಣು ಮಕ್ಕಳ ಪೋಷಕರಿಗೆ ಸಂಬಂಧಿತ ಮದುವೆಯ ಸವಾಲುಗಳು ಉದ್ಭವಿಸುತ್ತವೆ.
ಅಜ್ಜ ಬೇಕಿತ್ತು, ಅಜ್ಜಿ ಬೇಕಿತ್ತು, ಅಜ್ಜ ಬೇಕಿತ್ತು, ಚಿಕ್ಕಪ್ಪ ಬೇಕಿತ್ತು. ಇದು ಸಂಭವಿಸಲಿಲ್ಲವೇ? ಇದು ಒಂದು ದೊಡ್ಡ ವ್ಯತ್ಯಾಸವಾಗಿದೆ. ಮುಖ್ಯವಾಗಿ ಒಂದು ವಿಷಯವನ್ನು ನೆನಪಿನಲ್ಲಿಡಿ ಮತ್ತು ನಾವು ಜಾಗತಿಕ ಪ್ರಗತಿಯ ಬಗ್ಗೆ ಹೇಳುವ ಸಮಯದಲ್ಲಿ ನೀವು ಭಾರತದಲ್ಲಿ ವಾಸಿಸುತ್ತಿದ್ದೀರಿ. ಇದು ನಮ್ಮ ಕಾಲದಲ್ಲಾಗಲೀ ಇಲ್ಲಿ ಕುಳಿತವರ ಕಾಲದಲ್ಲಾಗಲೀ ಇರಲಿಲ್ಲ. ನಾನು ಅವರಿಗಿಂತ ಸ್ವಲ್ಪ ದೊಡ್ಡವನು, ನಾವು ನಿಮ್ಮ ವಯಸ್ಸಿನಲ್ಲಿದ್ದಾಗ ನಮ್ಮ ದೇಶದಲ್ಲಿ ಈ ರೀತಿಯ ಪರಿಸ್ಥಿತಿ ಇರಲಿಲ್ಲ. ಇಡೀ ಪರಿಸರ ವ್ಯವಸ್ಥೆಯು ಭರವಸೆ ಮತ್ತು ಸಾಧ್ಯತೆಯನ್ನು ಹೊಂದಿರುವ ಭಾರತದಲ್ಲಿ ನೀವಿರುವಿರಿ ನಾನು ಇದರ ಬಗ್ಗೆ ಹೆಚ್ಚು ಹೇಳುವುದಿಲ್ಲ ಏಕೆಂದರೆ ಅದು ನಿಮಗೆ ತಿಳಿದಿದೆ.
ನಮ್ಮ ಗಣನೀಯ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯಗಳ ಬೆಳವಣಿಗೆ ಮತ್ತು ಯುವಕರಿಗಾಗಿ ಏನೆಲ್ಲವನ್ನು ಮಾಡಲಾಗುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ, ಅಥವಾ ನಿಮಗೆ ಕಂಡುಬರುವ ಇಬ್ಬರು ಯುವಕರು, ಅವರಿಗೆ ಅವಕಾಶದ ಬುಟ್ಟಿ ನಿಜವಾಗಿಯೂ ದೊಡ್ಡದಾಗುತ್ತಿದೆ ಎಂದು ಮತ್ತು ನಿರ್ದಿಷ್ಟವಾಗಿ ನಿಮಗೆ, ನಿಮ್ಮ ಕೆಲಸವು ನಿವೃತ್ತಿಯಲ್ಲಿ ಕೊನೆಗೊಳ್ಳುವುದಿಲ್ಲ, ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ.
ಪರಿಸರ ಮತ್ತು ಅರಣ್ಯವು ಆಜೀವ ಧ್ಯೇಯ, ಉತ್ಸಾಹ ಮತ್ತು ಹೆಚ್ಚಿನ ಅಗತ್ಯವಿರುವ ವಿಷಯವಾಗಿದೆ, ನಿಮ್ಮ ವೃತ್ತಿಪರ ಚಟುವಟಿಕೆಗಳಲ್ಲಿ ತೊಡಗಿರುವಾಗ, ನೀವು ಛಾಯಾಗ್ರಹಣದ ಹವ್ಯಾಸದವರಾಗಿದ್ದರೆ, ನೀವು ಅಪ್ರತಿಮ ಅವಕಾಶವನ್ನು ಪಡೆಯುತ್ತೀರಿ, ಇತರರು ಆ ಅವಕಾಶಕ್ಕಾಗಿ ಹರಸಾಹಸ ಮಾಡಬೇಕಾಗುತ್ತದೆ, ಆದರೆ ಅದು ನಿಮಗೆ ತಾನಾಗಿಯೇ ಬಂದಿದೆ.
ಪಶ್ಚಿಮ ಬಂಗಾಳದಲ್ಲಿ, ನಿಮ್ಮ ಕ್ಷೇತ್ರದ ಒಬ್ಬ ಅಧಿಕಾರಿ ಮತ್ತು ರಾಜಸ್ಥಾನದಿಂದ ನನಗೆ ಪರಿಚಯವಾಯಿತು. ಅವರು ಎಂತಹ ದೊಡ್ಡ ಛಾಯಾಗ್ರಾಹಕರಾಗಿ ಹೊರಹೊಮ್ಮಿದರು. ಅಂತಹ ಹಿತವಾದ ಅನುಭವವು ಪ್ರಕೃತಿಯು ನಮಗೆ ಹೇಗೆ ಸಂತೋಷವನ್ನು ನೀಡುತ್ತದೆ ಎಂದು ನಿಮಗೆ ತಿಳಿಯುತ್ತದೆ. ಮೆಟೀರಿಯಲಿಸಂ (ಭೌತವಾದ)ಗೆ ಎಂದಿಗೂ ಸರಿಸಾಟಿಯಾಗಲಾಗದ ಆನಂದ ಅದು. ಆ ಸಂದರ್ಭ ನಿಮಗೆ ಸಿಗುತ್ತದೆ. ಐತಿಹಾಸಿಕ ದೃಷ್ಟಿಕೋನದಿಂದ ಓದುವ ಅವಕಾಶವನ್ನು ನೀವು ಹೊಂದಿರುತ್ತೀರಿ.
ಜಿಮ್ ಕಾರ್ಬೆಟ್ ಅವರ ಹೆಸರನ್ನು ಒಂದು ಜೈವಿಕಉದ್ಯಾನವನಕ್ಕೆ ಇಡಲಾಗಿದೆ. ನೀವು ಅವರ ಪುಸ್ತಕವನ್ನು ಓದಿದಾಗ, ಸಂಕ್ಷಿಪ್ತವಾಗಿ, ಅದು ಎರಡು ಪುಟಗಳಿರಬಹುದು ಆದರೆ ನೀವು ಓದಿದಾಗ, ಪ್ರತಿ ಕ್ಷಣವೂ ಜೀವದಿಂದ ತುಂಬಿದೆ. ನಾನು ನೋಡಿದ್ದೇನೆ ಸ್ನೇಹಿತರೇ, ಮತ್ತು ನಿಜ ಜೀವನದಲ್ಲಿ ನೀವು ಅದನ್ನು ಹತ್ತಿರದಿಂದ ನೋಡುತ್ತೀರಿ. ಕಾಡಿನಲ್ಲಿ ಹುಲಿ ಮತ್ತು ಸಿಂಹವು ಬೇಟೆಯಾಡಲು ಹೋದಾಗ, ನೀವು ಅವುಗಳ ಸಿದ್ಧತೆಯನ್ನು ಗಮನಿಸುತ್ತೀರಿ . ಈ ಶಕ್ತಿಯುತ ಪ್ರಾಣಿಗಳು ಸಾಧ್ಯವಾದಷ್ಟು ನೆಲಕ್ಕೆ ಹತ್ತಿರವಾಗುತ್ತವೆ. ನೀವು ಅದನ್ನು ನೋಡಿರಬಹುದು. ಅವು ತಮ್ಮ ಉಸಿರನ್ನು ಹಿಡಿದಿಟ್ಟುಕೊಂಡಿರುತ್ತವೆ, ಅವು ಮಾನಸಿಕವಾಗಿ ಕಾರ್ಯತಂತ್ರವನ್ನು ಹೊಂದಿರುತ್ತವೆ. ಅವುಗಳ ಬೇಟೆಯು ಹತ್ತಿರ ಬಂದಾಗ ಮಾತ್ರ ಆಕ್ರಮಣ ಮಾಡುತ್ತವೆ ಆದ್ದರಿಂದ ಪ್ರಕೃತಿಯು ಜೀವನದ ಪ್ರತಿಯೊಂದು ಹಂತದಲ್ಲೂ ನಿಮಗೆ ಉತ್ತಮ ಶಿಕ್ಷಣ ನೀಡುತ್ತದೆ.
ಆ ದೃಷ್ಟಿಕೋನದಿಂದ ನೀವು ಬರಹಗಾರರಾಗುವ ಮೂಲಕ ಅದ್ಭುತಗಳನ್ನು ಮಾಡಬಹುದು. ಇಂದಿನ ದಿನಗಳಲ್ಲಿ ಬರಹಗಳು ಯಾವುದೇ ಸ್ವರೂಪದಲ್ಲಾದರೂ ಬೇರೆ ಬೇರೆ ರೂಪವನ್ನು ಪಡೆದಿದೆ. ನಿಮ್ಮ ಅನುಭವಗಳು. ಎರಡನೆಯದಾಗಿ, ಇದು ಜನರ ಸಂಕಟದ ಪರಿಹಾರಕ್ಕೆ ಬಂದಾಗ, ಮತ್ತು ನೀವು ನಮ್ಮ ವೇದಗಳನ್ನು, ವಿಶೇಷವಾಗಿ ಅಥರ್ವ ವೇದವನ್ನು ನೋಡಿದರೆ, ಅದು ಮುಖ್ಯವಾಗಿ ಆರೋಗ್ಯದ ಮೇಲೆ ಕೇಂದ್ರೀಕರಿಸುತ್ತದೆ. ಇದು ನಿಜವಾಗಿಯೂ ವಿಶ್ವಕೋಶವಾಗಿದೆ, ಆದರೆ ಇದೆಲ್ಲವೂ ಕಾಡಿನಿಂದ ಬಂದಿದೆ. ಮನುಕುಲಕ್ಕೆ ತನ್ನ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಎಷ್ಟು ದೊಡ್ಡ ಸಂಪನ್ಮೂಲವಾಗಿದೆ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ.
ನೀವು ನೋಡಬೇಕಾದ ಸಮಸ್ಯೆಗಳು ಇವು. ನಿಮಗೆ ರೋಮಾಂಚನಕಾರಿಯಾಗದೇ ಇರುವ ಕ್ಷಣವೂ ಇರುವುದಿಲ್ಲ ಏಕೆಂದರೆ ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರುವುದು ಒಂದು ಉತ್ತಮ ಕೊಡುಗೆಯಾಗಿದೆ. ಮೆಟ್ರೋಗಳನ್ನು ಮತ್ತು ಮೆಟ್ರೋಗಳನ್ನು ಹೊರತುಪಡಿಸಿ ನೀವು ಎಲ್ಲಿಯೇ ಇರಿ, ನಿಮ್ಮ ಜೀವನವು ತುಂಬಾ ವಿಭಿನ್ನವಾಗಿರುತ್ತದೆ.
ಆದ್ದರಿಂದ ನಿಮ್ಮ ಸಾಮರ್ಥ್ಯವನ್ನು ಪಠ್ಯೇತರ ಚಟುವಟಿಕೆಗಳಿಗೆ, ಬರವಣಿಗೆಗೆ, ಹವ್ಯಾಸಕ್ಕೆ, ಔಷಧೀಯ ಸಸ್ಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಕಾಡಿನಲ್ಲಿ ಲಭ್ಯವಿರುವುದರ ಬಗ್ಗೆ ತಿಳಿದುಕೊಳ್ಳಲು, ಇದು ನಿಜವಾಗಿಯೂ ಪ್ರಾರಂಭದ ಹಂತ ಅಥವಾ ಸಂಶೋಧನೆಗೆ ವೇಗವನ್ನು ನೀಡಬಲ್ಲದು ಎಂದು ನಾನು ನಿಮಗೆ ಮನವಿ ಮಾಡುತ್ತೇನೆ. ನಾವೀನ್ಯತೆಯನ್ನು ಅಭಿವೃದ್ಧಿಪಡಿಸಿ. ಇವು ನೀವೆಲ್ಲರೂ ಪರಿಹರಿಸಬೇಕಾದ ಸಮಸ್ಯೆಗಳಾಗಿವೆ.
ಈಗ ಜಾಗತಿಕ ಜಾಗೃತಿ ಇದೆ ಮತ್ತು ವಿಶೇಷವಾಗಿ ಭಾರತವು ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಪ್ಯಾರಿಸ್ ಘೋಷಣೆಯ ಬಗ್ಗೆ ನಿಮಗೆ ತಿಳಿದಿರಬೇಕು. ಭಾರತ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. 2070ರ ವೇಳೆಗೆ ನಾವೇ ಗುರಿ ಹಾಕಿಕೊಂಡಿದ್ದೇವೆ. ಪ್ರಪಂಚದ ಇತರ ದೇಶಗಳಿಗಿಂತ ನಾವು ವಿಭಿನ್ನ ರೀತಿಯ ವ್ಯವಸ್ಥೆಯನ್ನು ಹೊಂದಿದ್ದೇವೆ, ಆದರೆ ಇದು ಎಲ್ಲಾ ಜನರನ್ನು ಒಂದುಗೂಡಿಸಲು ಅಗತ್ಯವಾದ ಕ್ರಮಗಳಾಗಿವೆ.
ಎಲ್ಲಕ್ಕಿಂತ ಮುಖ್ಯವಾಗಿ, ಪರಿಸರವು ಬಹಳ ಮುಖ್ಯವಾಗಿದೆ, ಪರಿಸರವು ಉತ್ಪಾದಕವಾಗಿದೆ, ಪರಿಸರವು ಹಿತಕರವಾಗಿದೆ, ಪರಿಸರವು ಪ್ರಭಾವಶಾಲಿಯಾಗಿದೆ ಮತ್ತು ಪರಿಸರಕ್ಕೆ ತೊಂದರೆಯಾದರೆ, ಆಗ ಸಂಗತಿಗಳು ತಪ್ಪಾಗುತ್ತವೆ. ಆದ್ದರಿಂದ, ನಾನು ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತೇನೆ.
ಪ್ರಜಾಪ್ರಭುತ್ವದ ದೇಗುಲಗಳಾದ ಸಂಸತ್ತು ಮತ್ತು ಶಾಸಕಾಂಗಗಳ ಮಂದಿರಗಳಲ್ಲಿ ನಾವು ಹಿತವಾದ, ಜನಸ್ನೇಹಿ, ಜನಕೇಂದ್ರಿತ ವಾತಾವರಣವನ್ನು ಕಾಪಾಡಿಕೊಳ್ಳಬೇಕು ಎಂದು ನಾನು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ.
ಜನರು ಆರಾಧಿಸುವ ಪ್ರಜಾಪ್ರಭುತ್ವದ ಈ ಅತ್ಯುನ್ನತ ವೇದಿಕೆಗಳಿಗೆ ಏನಾದರೂ ಆದಾಗ ದೇಶದ ಜನರು ತುಂಬಾ ದುಃಖಿತರಾಗುತ್ತಾರೆ. ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಯ ಸಮಯದಲ್ಲಿ ತುಂಬಾ ಶ್ರಮಿಸುತ್ತಾರೆ. ಅವರು ಇದನ್ನು ಕನಸನ್ನು ಕಂಡುಕೊಂಡು, ಈ ಜನರು ನಮಗಾಗಿ ಕೆಲಸ ಮಾಡುತ್ತಾರೆ, ನಮ್ಮ ಆಕಾಂಕ್ಷೆಗಳನ್ನು ಪೂರೈಸುತ್ತಾರೆ ಮತ್ತು ನೀತಿ ನಿರೂಪಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತಾರೆ ಎಂದು ಮಾಡುತ್ತಾರೆ . ಈ ದೇವಾಲಯಗಳ ಕಾರ್ಯಗಳಿಗೆ ತೊಂದರೆಯಾದ,ರೆ ಅಡ್ಡಿಪಡಿಸಿದರೆ, ಯಾವುದೇ ಸಂವಾದ, ಚರ್ಚೆಗಳಿರುವುದಿಲ್ಲ, ಆಗ ಅದು ನಮ್ಮ ರಾಷ್ಟ್ರೀಯ ಮೌಲ್ಯ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ನಾನು ಹೇಳಬಲ್ಲೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಮತ್ತು ದೇಶದ ಅಭಿವೃದ್ಧಿಗೆ ಖಂಡಿತವಾಗಿಯೂ ಕೊಡುಗೆ ನೀಡುವುದಿಲ್ಲ.
ಆದ್ದರಿಂದ, ನಾನು ಈ ವೇದಿಕೆಯ ಮುಖಾಂತರ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ, ನಾವು ಭಾರತೀಯ ಸಂವಿಧಾನದ ಅಂಗೀಕಾರದ ಶತಮಾನದ ಕಾಲುಭಾಗವನ್ನು ಪ್ರವೇಶಿಸಿದ್ದೇವೆ. ಅಮೃತ ಕಾಲ ಇದೀಗ ಬಂದಿದೆ, ನಾವು 2047 ರಲ್ಲಿ ವಿಕಸಿತ ಭಾರತದತ್ತ ಸಾಗುತ್ತಿದ್ದೇವೆ. ಆ ಮಹಾನ್ ಸಾಧನೆಗೆ ಕೊಡುಗೆ ನೀಡಲು ಇಡೀ ದೇಶ ಸಿದ್ಧವಾಗಿದೆ. ಸವಾಲು ಬಹಳ ಕಷ್ಟಕರವಾಗಿದೆ, ಆದರೆ ಅಸಾಧ್ಯವಲ್ಲ.
ನಿಜ, ಈಗ ನಾವು ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯ ಹಾದಿಯಲ್ಲಿದ್ದೇವೆ, ಆದರೆ ವಿವೇಚನಾಶೀಲ ಮನಸ್ಸುಗಳು, ಯುವ, ಸೂಕ್ಷ್ಮ ಮನಸ್ಸಿನವರು, ಭಾರತೀಯ ಆಡಳಿತದ ಭಾಗವಾಗಿ ನಾವು ನಮ್ಮ ಆದಾಯವನ್ನು ಎಂಟು ಪಟ್ಟು ಹೆಚ್ಚಿಸಬೇಕು ಎಂದು ನಿಮಗೆ ತಿಳಿದಿದೆ. . ಆದ್ದರಿಂದ, ಪ್ರತಿಯೊಬ್ಬ ಸಂಸದರು ನೇರ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು, ಜನರಿಗಾಗಿ, ಅವರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ನನಸಾಗಿಸುವಲ್ಲಿ ಕೆಲಸ ಮಾಡಬೇಕು ಮತ್ತು ದಾರಿ ತೋರಬೇಕು. ನಾವು ರಾಷ್ಟ್ರೀಯ ಭದ್ರತೆ ಅಥವಾ ಅಭಿವೃದ್ಧಿಯ ಸಮಸ್ಯೆಗಳನ್ನು ರಾಜಕೀಯದ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರೆ, ನಾವು ಸಂವಿಧಾನದ ಆಶಯಕ್ಕೆ ತಕ್ಕಂತೆ ಇರುವುದಿಲ್ಲ. ಇದಕ್ಕಾಗಿ ನಾವೆಲ್ಲರೂ ರಾಷ್ಟ್ರೀಯತೆಯ ಕಡೆಗೆ ಬಲವಾದ ಬದ್ಧತೆಯನ್ನು ಹೊಂದಿರಬೇಕು. ನಾವು ಯಾವಾಗಲೂ ರಾಷ್ಟ್ರದ ಹಿತಾಸಕ್ತಿಯನ್ನು ಮೊದಲು ಗಮನದಲ್ಲಿಡಬೇಕು.
ಸಂಸದರು ಇತರರಿಗೆ ಮಾದರಿ ನಡವಳಿಕೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಸಂಸತ್ತು ಸಂವಾದ, ಚರ್ಚೆ ಮತ್ತು ಚರ್ಚೆಯ ಕೇಂದ್ರವಾಗದಿದ್ದರೆ, ಸಂಸತ್ತಿನಲ್ಲಿ ಜನರ ಸಮಸ್ಯೆಗಳ ಬಗ್ಗೆ ತಿಳಿಸದಿದ್ದರೆ, ಪ್ರಜಾಪ್ರಭುತ್ವದಲ್ಲಿ ಪರಿಸರವು ಇದನ್ನೇ ಬಯಸುತ್ತದೆ, ಸಂಸತ್ತು ಅಪ್ರಸ್ತುತವಾಗುತ್ತದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಸಂಸತ್ತು ಅಪ್ರಸ್ತುತವಾದರೆ, ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳು ಗಂಭೀರ ಅಪಾಯಕ್ಕೆ ಒಳಗಾಗುತ್ತವೆ. ಅವುಗಳನ್ನು ಪೋಷಿಸಬೇಕಾದ ಅಗತ್ಯವಿದೆ.
ನಾವು ಹಿಂತಿರುಗಿ ನೋಡಿದಾಗ, ಭಾರತವು ವಿಶಿಷ್ಟವಾದ ದೇಶವಾಗಿದೆ, 5,000 ವರ್ಷಗಳಷ್ಟು ಹಳೆಯದಾದ ನಾಗರಿಕತೆಯನ್ನು ಹೊಂದಿರುವ ಬೇರೆ ಯಾವುದೇ ದೇಶವನ್ನು ನೀವು ಕಾಣುವುದಿಲ್ಲ. ನೋಡಿ ನಾವು ಎಂತಹ ಜ್ಞಾನ ಭಂಡಾರ, ಎಂತಹ ಅದ್ಭುತ ಹಿನ್ನೆಲೆ ನಮ್ಮದು. ನಾವು ಇದೀಗ ಅದನ್ನು ಮರುಪಡೆಯುವ ಹಾದಿಯಲ್ಲಿದ್ದೇವೆ, ನಾವು ನಮ್ಮ ಹಿಂದಿನದನ್ನು ಮರುಪಡೆಯುತ್ತಿದ್ದೇವೆ ಮತ್ತು ಈ ದೃಷ್ಟಿಕೋನದಿಂದ, ನೀವೆಲ್ಲರೂ ನಿಮ್ಮ ಅತ್ಯುತ್ತಮವಾದದ್ದನ್ನು, ಎಲ್ಲಾ ಪ್ರಾಮಾಣಿಕತೆಯಿಂದ, ಉತ್ಸಾಹದಿಂದ ಒಟ್ಟಾಗಿ, ಹೆಚ್ಚು ಸಮಯ ತೆಗೆದುಕೊಳ್ಳದೆ,ನಿಮ್ಮ ಅತ್ಯುತ್ತಮವಾದದ್ದನ್ನು ನೀಡಬೇಕೆಂದು ನಾನು ನಿರೀಕ್ಷಿಸುತ್ತೇನೆ. ರಾಷ್ಟ್ರವನ್ನು ಶ್ರೇಷ್ಠಗೊಳಿಸುವ ಧ್ಯೇಯ ಮತ್ತು ನಿಮ್ಮ ಕಚೇರಿ ಸಮಯವನ್ನು ಮೀರಿ ನೀವು ಕಳೆಯುವ ಪ್ರತಿ ಕ್ಷಣವನ್ನೂ ರಾಷ್ಟ್ರಕ್ಕೆ ಅರ್ಪಿಸುವಿರೆಂದು ನನಗೆ ಖಾತ್ರಿಯಿದೆ, ನೂರು ವರ್ಷಗಳ ಪ್ರಜಾಪ್ರಭುತ್ವವಾಗಿ ನೂರು ವರ್ಷಗಳಾದ ಭಾರತವು ಆ ಮಟ್ಟಕ್ಕೆ ಏರುವುದನ್ನು ನಾವು ನೋಡದಿದ್ದರೂ ಸಹ, ನಾವು ಆಚರಿಸುತ್ತೇವೆ, ವಾಸ್ತವವಾಗಿ, ನಾವು ಬಹಳ ಹಿಂದೆಯೇ ಪ್ರಜಾಪ್ರಭುತ್ವವಾಗಿತ್ತು. 1947ರ ಸ್ವಾತಂತ್ರ್ಯವು ಭಾರತವನ್ನು ವ್ಯಾಖ್ಯಾನಿಸುವುದಿಲ್ಲ, ಭಾರತದ ಬೇರುಗಳು 1947 ಕ್ಕಿಂತ ಮುಂಚೆಯೇ ಸಾವಿರಾರು ವರ್ಷಗಳ ಹಿಂದೆಯೇ ಇವೆ.
ಆದರೆ 2047ರಲ್ಲಿ ಶತಮಾನೋತ್ಸವ ಆಚರಣೆಗಳು ನಡೆದಾಗ, ಜಗತ್ತು ಭಾರತವನ್ನು ಅಂದು, ಈಗ ಮಾಡುತ್ತಿರುವಂತೆ, ಸೂಪರ್ ಪವರ್ ಎಂದು ಶ್ಲಾಘಿಸುತ್ತದೆ ಏಕೆಂದರೆ ಭಾರತವು ಸೂಪರ್ ಪವರ್ ಆಗಿದ್ದರೆ, ಅದು ಭೂಮಿಗೆ ಒಳ್ಳೆಯದು, ಮಾನವೀಯತೆಗೆ ಒಳ್ಳೆಯದು, ಎಲ್ಲರಿಗೂ ಒಳ್ಳೆಯದು. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ನಾನು ಹಾರೈಸುತ್ತೇನೆ.
ಮತ್ತು ನನ್ನ ಪ್ರಕಾರ ಭಾರತದ ಮೂರು ಸೇವೆಗಳಲ್ಲಿ ನಿಮ್ಮದು ಆ ಎರಡಕ್ಕಿಂತ ಮುಂದಿದೆ ಎಂದು ನೀವು ನೆನಪಿನಲ್ಲಿಟ್ಟುಕೊಳ್ಳುವುದರಲ್ಲಿ ಸಂದೇಹವಿಲ್ಲ. ನೀವು ಅದನ್ನು ಅರಿತುಕೊಳ್ಳಬೇಕು, ನಿಮ್ಮ ಜೀವನದಲ್ಲಿ ಪ್ರತಿ ಕ್ಷಣವೂ ನೀವು ಅದನ್ನು ಅನುಭವಿಸುವಿರಿ.
ಬಹಳ ಧನ್ಯವಾದಗಳು.
*****
(Release ID: 2087188)
Visitor Counter : 37