ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೂರೈಕೆ ಸರಪಳಿ ಆಪ್ಟಿಮೈಸೇಶನ್ ಟೂಲ್ ಮತ್ತು SCAN (ಸಬ್ಸಿಡಿ ಕ್ಲೈಮ್ ಅಪ್ಲಿಕೇಷನ್ ಫಾರ್ NFSA) ಪೋರ್ಟಲ್ 'ಅನ್ನ ಚಕ್ರ' ಕ್ಕೆ ಶ್ರೀ ಪ್ರಲ್ಹಾದ್ ಜೋಶಿ ಚಾಲನೆ
PDS ಸಪ್ಲೈ ಚೈನ್ ಆಪ್ಟಿಮೈಸೇಶನ್ ದಕ್ಷತೆಯನ್ನು ಸುಧಾರಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅಗತ್ಯ ಸರಕುಗಳ ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ
SCAN ಪೋರ್ಟಲ್, ಒಂದೇ ವಿಂಡೋದಲ್ಲಿ ಸಬ್ಸಿಡಿ ಕ್ಲೈಮ್ ಗಳನ್ನು ಸಲ್ಲಿಸಲು ಅನುಮತಿಸುತ್ತದೆ ಮತ್ತು ತ್ವರಿತ ಪರಿಹಾರ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ
Posted On:
05 DEC 2024 7:24PM by PIB Bengaluru
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರು 'ಅನ್ನ ಚಕ್ರ' ಪೋರ್ಟಲ್ ಬಿಡುಗಡೆ ಮಾಡಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (PDS) ಪೂರೈಕೆ ಸರಪಳಿ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಟೂಲ್ ಮತ್ತು SCAN (Subsidy Claim Application for NFSA) ಪೋರ್ಟಲ್ ಪ್ರಾರಂಭಿಸಲಾಗಿದೆ. ರಾಜ್ಯಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸಬ್ಸಿಡಿ ಕ್ಲೈಮ್ ಕಾರ್ಯವಿಧಾನವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ನೇತೃತ್ವದಲ್ಲಿ "ಅನ್ನ ಚಕ್ರ" ಪಿಡಿಎಸ್ ಪೂರೈಕೆ ಸರಪಳಿ ಆಪ್ಟಿಮೈಸೇಶನ್, ದೇಶಾದ್ಯಂತ ಪಿಡಿಎಸ್ ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನ ದಕ್ಷತೆಯನ್ನು ಹೆಚ್ಚಿಸುವ ಒಂದು ಮಹತ್ವದ ಉಪಕ್ರಮವಾಗಿದೆ. ವಿಶ್ವ ಆಹಾರ ಕಾರ್ಯಕ್ರಮ (WFP) ಮತ್ತು ಫೌಂಡೇಶನ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (FITT), ಐಐಟಿ-ದೆಹಲಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಪೂರೈಕೆ ಸರಪಳಿ ನೋಡ್‌ಗಳಾದ್ಯಂತ ಆಹಾರ ಧಾನ್ಯಗಳ ಸರಾಗ ಚಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸೂಕ್ತ ಮಾರ್ಗಗಳನ್ನು ಗುರುತಿಸಲು ಸುಧಾರಿತ ಅಲ್ಗಾರಿದಮ್‌ಗಳನ್ನು ಬಳಸಿಕೊಳ್ಳುತ್ತದೆ. ಈ ಪ್ರಮಾಣದ ಕಾರ್ಯಾಚರಣೆಯು ರೈತರಿಂದ ನ್ಯಾಯಬೆಲೆ ಅಂಗಡಿಗಳವರೆಗೆ ಬಹು ಪಾಲುದಾರರನ್ನು ಅವಲಂಬಿಸಿರುವ ಸಂಕೀರ್ಣ ಪೂರೈಕೆ ಸರಪಳಿಯನ್ನು ಒಳಗೊಂಡಿರುತ್ತದೆ. ಇದು 81 ಕೋಟಿ ಫಲಾನುಭವಿಗಳಿಗೆ ಆಹಾರ ಸುರಕ್ಷತಾ ಜಾಲವನ್ನು ಒದಗಿಸುವ ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮದ ವೇಗ ಮತ್ತು ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುವ ಉಪಕ್ರಮವನ್ನು ವಿಶಿಷ್ಟಗೊಳಿಸುತ್ತದೆ. ಇಂಧನ ಬಳಕೆ, ಸಮಯ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವ ಸುವ್ಯವಸ್ಥಿತ ವಿತರಣಾ ಮಾರ್ಗಗಳ ಮೂಲಕ ಸುಧಾರಿತ ದಕ್ಷತೆ ಮತ್ತು ವೆಚ್ಚ ಉಳಿತಾಯದ ಜೊತೆಗೆ, ಸಾರಿಗೆಯಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತದೆ ಮತ್ತು ಪರಿಸರ ಪ್ರಯೋಜನಗಳನ್ನು ಸಹ ಒದಗಿಸುತ್ತದೆ.
ಪಡಿತರ ಅಂಗಡಿಗಳಲ್ಲಿ ಆಹಾರೇತರ ಪೂರೈಕೆ ಸರಪಳಿಯನ್ನು ಸುಧಾರಿಸಲು ಇದುವರೆಗೆ 30 ರಾಜ್ಯಗಳನ್ನು ಮೌಲ್ಯಮಾಪನ ಮಾಡಲಾಗಿದೆ ಮತ್ತು ಫಲಿತಾಂಶಗಳು ವಾರ್ಷಿಕ ಸುಮಾರು 250 ಕೋಟಿ ರೂ.ಗಳ ಅಂದಾಜು ವೆಚ್ಚ ಉಳಿತಾಯದೊಂದಿಗೆ ಅಗಾಧವಾದ ಭರವಸೆಯನ್ನು ತೋರಿಸುತ್ತವೆ. ಈ ಸಂಪೂರ್ಣ ಕಾರ್ಯಾಚರಣೆಯ ವಸ್ತುನಿಷ್ಠ ಕಾರ್ಯವಾದ ಪ್ರತಿ ವರ್ಷ 250 ಕೋಟಿ QKM (ಅಂದರೆ ಪ್ರತಿ ಕ್ವಿಂಟಾಲ್‌ಗೆ ಆಹಾರ ಧಾನ್ಯಗಳನ್ನು ಪ್ರತಿ ಕಿಲೋಮೀಟರ್‌ಗೆ ದೂರದಿಂದ ಗುಣಿಸಿದಾಗ) ಅನ್ನು 58 ಕೋಟಿಗಳಷ್ಟು ಕಡಿಮೆ ಮಾಡಲಾಗಿದೆ. ಈ ಪ್ರಕ್ರಿಯೆಯು ಸುಮಾರು 4.37 ಲಕ್ಷ ನ್ಯಾಯಬೆಲೆ ಅಂಗಡಿಗಳನ್ನು ಒಳಗೊಂಡಿದೆ. ಪಿಡಿಎಸ್ ಪೂರೈಕೆ ಸರಪಳಿಯಲ್ಲಿ 6700 ಗೋದಾಮುಗಳು ತೊಡಗಿಕೊಂಡಿವೆ. ರಾಜ್ಯಗಳ ನಡುವಿನ ಪಿಡಿಎಸ್ ಸಂಚಾರವನ್ನು ಉತ್ತಮಗೊಳಿಸಲು ಅಂತರರಾಜ್ಯ ಮಾರ್ಗ ಆಪ್ಟಿಮೈಸೇಶನ್ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇದನ್ನು ಯನೈಟೆಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ ಫಾರ್ಮ್ (ULIP) ಮೂಲಕ ರೈಲ್ವೆಯ FOIS (Freight Operations Information System) ಪೋರ್ಟಲ್ ನೊಂದಿದೆ ಸಂಯೋಜಿಸಲಾಗಿದೆ. ಈ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲು ಎಂದರೆ ಪಿಎಂ ಗತಿ ಶಕ್ತಿ (PM Gati Shakti) ಪ್ಲಾಟ್ ಫಾರ್ಮ್ ನೊಂದಿಗೆ ಆಪ್ಟಿಮೈಸೇಶನ್ ಸಾಧನದ ಏಕೀಕರಣವಾಗಿದ್ದು, ಇದು ಈಗ ರಾಜ್ಯಗಳಾದ್ಯಂತ FPS ಗಳು ಮತ್ತು ಗೋದಾಮುಗಳ ಭೌಗೋಳಿಕ ಸ್ಥಳಗಳನ್ನು ಹೊಂದಿದೆ.
SCAN (ಸಬ್ಸಿಡಿ ಕ್ಲೈಮ್ ಅಪ್ಲಿಕೇಷನ್ ಫಾರ್ NFSA) ಪೋರ್ಟಲ್ ರಾಜ್ಯಗಳಿಂದ ಸಬ್ಸಿಡಿ ಕ್ಲೈಮ್ ಗಳ ಏಕ ವಿಂಡೋ ಸಲ್ಲಿಕೆ, ಕ್ಲೈಮ್ ಪರಿಶೀಲನೆ ಮತ್ತು ಡಿ. ಎಫ್. ಪಿ. ಡಿ. ಯಿಂದ ಅನುಮೋದನೆಯನ್ನು ಒದಗಿಸುತ್ತದೆ. ನಿಯಮ ಆಧಾರಿತ ಸಂಸ್ಕರಣೆಯನ್ನು ಬಳಸಿಕೊಂಡು ಆಹಾರ ಸಬ್ಸಿಡಿಯ ಬಿಡುಗಡೆ ಮತ್ತು ಇತ್ಯರ್ಥಕ್ಕಾಗಿ ಎಲ್ಲಾ ಪ್ರಕ್ರಿಯೆಗಳ ಎಂಡ್-ಟು-ಎಂಡ್ ವರ್ಕ್ ಫ್ಲೋ ಆಟೊಮೇಷನ್ ಅನ್ನು ಪೋರ್ಟಲ್ ಖಚಿತಪಡಿಸುತ್ತದೆ.
*****
(Release ID: 2082049)
Visitor Counter : 12