ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಲವಾರು ಜಿ20 ದೇಶಗಳು, ಅತಿಥಿ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅನುಮೋದಿಸಲಾದ ಜಿ20 ತ್ರಿದೇಶಗಳ ಒಕ್ಕೂಟಗಳ (ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ) ಜಂಟಿ ಸಂವಹನ - ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃತಕಬುದ್ಧಿಮತ್ತೆ(ಎಐ) ಮತ್ತು ಆಡಳಿತಕ್ಕಾಗಿ ದತ್ತಾಂಶಗಳ ಕುರಿತು ಘೋಷಣೆ 

Posted On: 20 NOV 2024 7:52AM by PIB Bengaluru

ಜಾಗತಿಕ ಬೆಳವಣಿಗೆಯು ಕೇವಲ 3 ಪ್ರತಿಶತಕ್ಕಿಂತ ಕಡಿಮೆಯಾಗಿದೆ. ಈ ಶತಮಾನದ ಆರಂಭದ ನಂತರ ಸರಾಸರಿ 4 ಪ್ರತಿಶತವು ಸಾಂಕ್ರಾಮಿಕ ರೋಗದವರೆಗೆ ಮೇಲುಗೈ ಸಾಧಿಸಿದೆ. ಅದೇ ಸಮಯದಲ್ಲಿ, ತಂತ್ರಜ್ಞಾನವು ಅತ್ಯಂತ ವೇಗದಲ್ಲಿ ಪ್ರಗತಿಕಂಡುಕೊಂಡು ಮುನ್ನುಗ್ಗುತ್ತಿದೆ. ಈ ಕಾಲಘಟ್ಟದಲ್ಲಿ, ನಾವು ತಂತ್ರಜ್ಞಾನಗಳನ್ನು ಸಮಾನವಾಗಿ ನಿಯೋಜಿಸಿಕೊಂಡರೆ, ಬೆಳವಣಿಗೆಯನ್ನು ಹೆಚ್ಚಿಸಲು, ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್.ಡಿ.ಜಿ.ಗಳು) ಸಾಧಿಸುವಲ್ಲಿ ಅಂತರವನ್ನು ಕಡಿಮೆ ಮಾಡಲು ಒಂದು ಬೃಹತ್ ಹೆಜ್ಜೆಯನ್ನು ತೆಗೆದುಕೊಳ್ಳಲು ನಮಗೆ ಐತಿಹಾಸಿಕ ಅವಕಾಶವನ್ನು ನೀಡುತ್ತದೆ.

ಎಸ್.ಡಿ.ಜಿ.ಗಳ ಕಡೆಗೆ ಪ್ರಗತಿಯನ್ನು ವೇಗಗೊಳಿಸಲು ಅಂತರ್ಗತ ಡಿಜಿಟಲ್ ರೂಪಾಂತರದ ಅಗತ್ಯವಿದೆ. ಹಲವಾರು ಜಿ20 ದೇಶಗಳ ಅನುಭವಗಳು ಕೃತಕ ಬುದ್ಧಿಮತ್ತೆ (ಎಐ) ಮೂಲಕ ಉತ್ತಮವಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅಭಿವೃದ್ಧಿಗೆ ಡೇಟಾ ಬಳಕೆಯನ್ನು ಸಕ್ರಿಯಗೊಳಿಸುತ್ತಿವೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ಹಾಗೂ, ಉತ್ತಮ ಆರೋಗ್ಯ ಮತ್ತು ಶಿಕ್ಷಣದ ಫಲಿತಾಂಶಗಳನ್ನು ನೀಡುತ್ತಿವೆ. ಜಿ20 ದೇಶಗಳು ಹೆಚ್ಚು ವ್ಯಾಪಕವಾಗಿ ಅಳವಡಿಸಿಕೊಂಡಿರುವುದು ನಾಗರಿಕರ ಜೀವನವನ್ನು ಆಮೂಲಾಗ್ರವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಆ ಮೂಲಕ ವೈವಿದ್ಯಮಯ ಪ್ರಜಾಪ್ರಭುತ್ವದ ತತ್ವಗಳಲ್ಲಿ ಆ ದೇಶದ ನಂಬಿಕೆಯನ್ನು ನವೀಕರಿಸುತ್ತವೆ. ಈ ಸಂದರ್ಭದಲ್ಲಿ, ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಗ್ಲೋಬಲ್ ಡಿಜಿಟಲ್ ಕಾಂಪ್ಯಾಕ್ಟ್ ಅನ್ನು ಅಳವಡಿಸಿಕೊಂಡಿರುವುದನ್ನು ನಾವು ನೆನಪಿಸಿಕೊಳ್ಳ ಬೇಕಾಗುತ್ತದೆ. 2024 ರಲ್ಲಿ ಈಜಿಪ್ಟ್ ದೇಶದ ಕೈರೋದಲ್ಲಿ ನಡೆದ ಜಾಗತಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಶೃಂಗಸಭೆಯನ್ನು ನಾವು ಸ್ವಾಗತಿಸುತ್ತೇವೆ.

ತಾಂತ್ರಿಕ ವ್ಯವಸ್ಥೆಗಳು ಪ್ರತಿಯೊಬ್ಬ ನಾಗರಿಕರ ಮೇಲೆ ಕೇಂದ್ರೀಕರಿಸಿದಾಗ ಮಾತ್ರ ಉದ್ಯೋಗ ಸೃಷ್ಟಿಯೊಂದಿಗೆ ಬೆಳವಣಿಗೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕುಟುಂಬಗಳು ಮತ್ತು ನೆರೆಹೊರೆಯವರ ಜೀವನೋಪಾಯವನ್ನು ಸುಧಾರಿಸಲು ಸಣ್ಣ ಮತ್ತು ದೊಡ್ಡ ವ್ಯವಹಾರಗಳನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಅಂತಹ ವ್ಯವಸ್ಥೆಗಳು ಒಳಗೊಳ್ಳುವ, ಅಭಿವೃದ್ಧಿ-ಆಧಾರಿತ, ಸುರಕ್ಷಿತ ಮತ್ತು ವ್ಯಕ್ತಿಗಳ ಗೌಪ್ಯತೆಯನ್ನು ಗೌರವಿಸಲು ವಿನ್ಯಾಸಗೊಳಿಸಿದಾಗ ಇದು ಸಂಭವಿಸುತ್ತದೆ. ಮಾರುಕಟ್ಟೆಯಲ್ಲಿ, ಸಾಮಾನ್ಯ ವಿನ್ಯಾಸ ತತ್ವಗಳನ್ನು ಅನುಸರಿಸುವ ವ್ಯವಸ್ಥೆಗಳು - ಮುಕ್ತವಾದ, ಮಾಡ್ಯುಲರ್ ರೀತಿಯ, ಪರಸ್ಪರ ಪೂರಕವಾಗಿ ಉಪಯೋಗಿಸಲು ಸಾಧ್ಯವಿರುವ,  ಮತ್ತು ಬೃಹತ್ ಗಾತ್ರದಲ್ಲಿ ಬಳಸಬಹುದಾದ (ಸ್ಕೇಲೆಬಲ್) – ಇ-ಕಾಮರ್ಸ್ ವ್ಯವಸ್ಥೆಗಳು, ಆರೋಗ್ಯ, ಶಿಕ್ಷಣ ಮತ್ತು ಹಣಕಾಸು ಮುಂತಾದ ವೈವಿಧ್ಯಮಯ ವಲಯಗಳಿಗೆ ಸೇವೆ ಸಲ್ಲಿಸುವ ಖಾಸಗಿ ವಲಯವನ್ನು ತಾಂತ್ರಿಕ ವ್ಯವಸ್ಥೆಗೆ ಹೊಂದಿಸಿಕೊಳ್ಳಲು ಮತ್ತು ಪರಸ್ಪರ ಸಂಪರ್ಕಿಸಲು ಸಕ್ರಿಯಗೊಳಿಸುತ್ತದೆ. ಕಾಲಾನಂತರದಲ್ಲಿ, ಜನಸಂಖ್ಯೆಯು ಬೆಳೆದಂತೆ ಮತ್ತು ರಾಷ್ಟ್ರೀಯ ಅಗತ್ಯಗಳು ಬದಲಾದಾಗ, ವ್ಯವಸ್ಥೆಗಳು ಅವುಗಳಿಗೆ ಅನುಗುಣವಾಗಿ ಹೊಂದಿಕೊಳ್ಳುತ್ತವೆ.

ಕಾಲಾನಂತರದಲ್ಲಿ ತಂತ್ರಜ್ಞಾನದ ತಡೆರಹಿತ ಸ್ಥಿತ್ಯಂತರವು ಮಾರುಕಟ್ಟೆ ಭಾಗವಹಿಸುವವರಿಗೆ ಒಂದು ಮಟ್ಟದ-ವ್ಯವಹಾರಿಕ ಕ್ಷೇತ್ರವನ್ನು ರಚಿಸಲು ಮತ್ತು ಅಭಿವೃದ್ಧಿಗಾಗಿ ಡಿಪಿಐ, ಎಐ ಮತ್ತು ಡೇಟಾದ ನಿಯೋಜನೆ ಮತ್ತು ಪ್ರಸರಣಕ್ಕಾಗಿ ತಂತ್ರಜ್ಞಾನ ತಟಸ್ಥ ವಿಧಾನವನ್ನು ಅನುಸರಿಸುವ ಅಗತ್ಯವಿದೆ. ಈ ವಿಧಾನವು ಹೆಚ್ಚಿನ ಸ್ಪರ್ಧೆ ಮತ್ತು ನಾವೀನ್ಯತೆಯನ್ನು ಬೆಂಬಲಿಸಲು ಮತ್ತು ವ್ಯಾಪಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಅಸಮತೋಲನವನ್ನು ಕಡಿಮೆ ಮಾಡಲು ಅನುಕೂಲಕರವಾಗಿದೆ.

ಮಾರುಕಟ್ಟೆಯಲ್ಲಿ ಭಾಗವಹಿಸುವವರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಮತ್ತು ಅವರ ಗೌಪ್ಯ ಮಾಹಿತಿಯನ್ನು ನೀಡುವಾಗ ಡೇಟಾ ರಕ್ಷಣೆ ಮತ್ತು ನಿರ್ವಹಣೆ, ಗೌಪ್ಯತೆ ಮತ್ತು ಭದ್ರತೆಯನ್ನು ಪರಿಹರಿಸಲು ಡೇಟಾ ನಿರ್ವಹಣೆ-ಬಳಕೆ ಮತ್ತು ಆಡಳಿತಕ್ಕಾಗಿ ನ್ಯಾಯಯುತ ಮತ್ತು ಸಮಾನ ತತ್ವಗಳ ಸ್ಥಾಪನೆಯು ಈ ನಿಯೋಜನೆಯಲ್ಲಿ ಪ್ರಮುಖವಾಗಿದೆ.

ನಂಬಿಕೆಯು ಅತ್ಯಂತ ಪ್ರವರ್ಧಮಾನಕ್ಕೆ ಬರುತ್ತಿದ್ದು, ವಿಶ್ವಾಸವೇ ಪ್ರಜಾಪ್ರಭುತ್ವಗಳ ಮೂಲಾಧಾರವಾಗಿದೆ ಮತ್ತು ಇದು ತಾಂತ್ರಿಕ ವ್ಯವಸ್ಥೆಗಳಿಗೆ ಭಿನ್ನವಾಗಿರುವುದಿಲ್ಲ. ಈ ವ್ಯವಸ್ಥೆಗಳಲ್ಲಿ ಸಾರ್ವಜನಿಕ ನಂಬಿಕೆಯನ್ನು ನಿರ್ಮಿಸಲು ಕಾರ್ಯಾಚರಣೆಯಲ್ಲಿ ಪಾರದರ್ಶಕತೆ, ನಾಗರಿಕರ ಹಕ್ಕುಗಳನ್ನು ಗೌರವಿಸಲು ಸೂಕ್ತವಾದ ಸುರಕ್ಷತೆಗಳು ಮತ್ತು ಅವರ ಆಡಳಿತ ವ್ಯವಸ್ಥೆಗಳಲ್ಲಿ ನ್ಯಾಯಯುತತೆಯ ಅಗತ್ಯವಿರುತ್ತದೆ. ಈ ಕಾರಣಕ್ಕಾಗಿ, ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಅರಿಯಲು ವೈವಿಧ್ಯಮಯ ಮತ್ತು ಸರಿಯಾಗಿ ಪ್ರತಿನಿಧಿಸುವ ದತ್ತಾಂಶಗಳಲ್ಲಿ ತರಬೇತಿ ಪಡೆದ ಅಡಿಪಾಯ ಅಗತ್ಯವಾಗಿದೆ, ಮತ್ತು ಕೃತಕ ಬುದ್ಧಿಮತ್ತೆ (ಎಐ) ಮಾದರಿಗಳು ಅತ್ಯಗತ್ಯವಾಗಿದ್ದು ಅವು ಜಗತ್ತಿನಾದ್ಯಂತ ವಿವಿಧ ಸಮಾಜಗಳಿಗೆ ಪ್ರಯೋಜನವನ್ನು ನೀಡುತ್ತವೆ.

 

*****
 


(Release ID: 2078501) Visitor Counter : 37