ರೈಲ್ವೇ ಸಚಿವಾಲಯ
azadi ka amrit mahotsav

ಉತ್ತರ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಪೂರ್ವಾಂಚಲ್ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ರೈಲ್ವೆ ಸಂಪರ್ಕವನ್ನು ಹೆಚ್ಚಿಸಲು 375 ಕಿ. ಮೀ. ರೈಲು ನೆಟ್‌ ವರ್ಕ್‌ ವಿಸ್ತರಣೆ


7, 927 ಕೋಟಿ ವೆಚ್ಚದ ಈ ರೈಲ್ವೆ ಯೋಜನೆಗಳು ವಾರ್ಷಿಕವಾಗಿ 50 ದಶಲಕ್ಷ ಟನ್‌ ಗಳಷ್ಟು ಸರಕುಗಳನ್ನು ಹೆಚ್ಚಿಸುತ್ತವೆ ಮತ್ತು ವರ್ಷಕ್ಕೆ 15 ಕೋಟಿ ಲೀಟರ್ ಡೀಸೆಲ್ ಉಳಿತಾಯ ಮಾಡುತ್ತವೆ

ಶೇಟ್ಕರಿ ಸಮೃದ್ಧಿ ರೈಲು 200% ಆಕ್ಯುಪೆನ್ಸಿಯನ್ನು ಸಾಧಿಸುತ್ತದೆ, ಪ್ರದೇಶಗಳಾದ್ಯಂತ ಹೆಚ್ಚಿನ ರೈತರಿಗೆ ಅನುಕೂಲವಾಗುವಂತೆ ವಿಸ್ತರಣೆಯನ್ನು ಯೋಜಿಸಿದೆ

ಮುಂದಿನ 6 ವರ್ಷಗಳಲ್ಲಿ ರೈಲು ಮಾರ್ಗಗಳಲ್ಲಿ ರಾಷ್ಟ್ರವ್ಯಾಪಿ ಅನುಷ್ಠಾನದೊಂದಿಗೆ ಕವಚ್ 4.0 ಶೀಘ್ರದಲ್ಲೇ 10,000 ಲೋಕೋಮೋಟಿವ್ ಗಳನ್ನು ಸಜ್ಜುಗೊಳಿಸುತ್ತದೆ - ಶ್ರೀ ವೈಷ್ಣವ್

Posted On: 26 NOV 2024 8:16PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಹಾಗೂ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಇಂದು ನವ ದೆಹಲಿಯ ರೈಲ್ವೆ ಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿ (ಸಿಸಿಇಎ) ಅನುಮೋದಿಸಿದ ಮೂರು ಮಹತ್ವಪೂರ್ಣ ರೈಲ್ವೆ ಸಂಚಾರ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದರು. ಈ ಯೋಜನೆಗಳು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಂಪರ್ಕ ವ್ಯವಸ್ಥೆಯನ್ನು ಗಮನಾರ್ಹವಾಗಿ ಸುಧಾರಿಸಲಿವೆ.

ಯೋಜನೆಯ ವಿವರಗಳು ಮತ್ತು ಉತ್ತರ ಮಹಾರಾಷ್ಟ್ರದ ಖಂಡೇಶ್ ಪ್ರದೇಶಕ್ಕೆ ಅದರ ಪ್ರಯೋಜನಗಳು ಮತ್ತು ಉತ್ತರ ಪ್ರದೇಶದ ಪೂರ್ವಾಂಚಲ್ ಪ್ರದೇಶಕ್ಕೆ ಸಂಪರ್ಕವನ್ನು ಚರ್ಚಿಸುವಾಗ, ಸಚಿವರು 375 ಕಿ. ಮೀ. ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದರು, ಇದರಲ್ಲಿ ಜಲ್ಗಾಂವ್-ಮನ್ಮಾಡ್ 4 ನೇ ಮಾರ್ಗ (160 ಕಿ. ಮೀ.) ಭುಸಾವಲ್-ಖಾಂಡ್ವಾ 3 ನೇ ಮತ್ತು 4 ನೇ ಮಾರ್ಗ (131 ಕಿ. ಮೀ.) ಮತ್ತು ಪ್ರಯಾಗ್ರಾಜ್ (ಇರಾದತ್‌ ಗಂಜ್)-ಮಾಣಿಕಪುರ 3 ನೇ ಮಾರ್ಗ ಸೇರಿವೆ (84 km). ಈ ಯೋಜನೆಗಳು ಮುಂಬೈ ಮತ್ತು ಪ್ರಯಾಗ್ ರಾಜ್ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಸಜ್ಜಾಗಿದ್ದು, ಪ್ರಯಾಣಿಕ ಮತ್ತು ಸರಕು ರೈಲುಗಳ ಸಂಚಾರವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದ್ದು, ಆ ಮೂಲಕ ಈ ಪ್ರದೇಶದ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ವಾರಣಾಸಿ ಸೇರಿದಂತೆ ಪೂರ್ವಾಂಚಲ್ ಮತ್ತು ಮುಂಬೈ ನಡುವಿನ ಕಂಟೈನರ್ ಚಲನೆಯನ್ನು ಸುಧಾರಿಸುವ ಸಮಗ್ರ ಕಾರ್ಯತಂತ್ರದ ಭಾಗವಾಗಿರುವ ಈ ಮೂರು ಯೋಜನೆಗಳನ್ನು ಸಂಪುಟ ಮಟ್ಟದಲ್ಲಿ ಅನುಮೋದಿಸಲಾಗಿದೆ ಎಂದು ಸಚಿವರು ವಿವರಿಸಿದರು.ಕಾರಿಡಾರ್ ಉದಯೋನ್ಮುಖ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ವಾರಣಾಸಿಯವರೆಗೆ ವಿಸ್ತಾರವಾದ ಸಮೀಕ್ಷೆಯನ್ನು ನಡೆಸಲಾಯಿತು. ಈ ಯೋಜನೆಗಳು ಈ ವಿಭಾಗಕ್ಕೆ ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಈ ವಿಭಾಗವು ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (EDFC) ಗೆ ಪೂರಕ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ, ಇದು ನಗರಗಳು ಮತ್ತು ಪ್ರಮುಖ ರೈಲ್ವೆ ನಿಲ್ದಾಣಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮಹಾರಾಷ್ಟ್ರದ ಪ್ರಮುಖ ಬಂದರುಗಳಾದ ಜವಾಹರಲಾಲ್ ನೆಹರೂ ಬಂದರು ಮುಂಬೈ ಮತ್ತು ಮುಂಬರುವ ವಾಧ್ವಾನ್ ಬಂದರಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಸಂಪರ್ಕವು ಕೃಷಿ ಮತ್ತು ಕೈಗಾರಿಕಾ ಸರಕುಗಳ ತಡೆರಹಿತ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ, ಹೀಗಾಗಿ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.

ಇತ್ತೀಚೆಗಷ್ಟೇ ಆರಂಭಗೊಂಡ ಶೆಟ್ಕರಿ ಸಮೃದ್ಧಿ ರೈಲಿ(ಶೆಟ್ಕರಿ ಸಮೃದ್ಧಿ ರೈಲು)ನ ದಿಯೋಲಾಲಿಯಿಂದ ದಾನಾಪುರದವರೆಗೆ ಪ್ರಾರಂಭವಾದಾಗಿನಿಂದ 200% ಆಕ್ಯುಪೆನ್ಸಿಯನ್ನು ಸಾಧಿಸಿರುವ ಯಶಸ್ಸಿನ ಬಗ್ಗೆ ಸಚಿವರು ಒತ್ತಿ ಹೇಳಿದರು. ಕೃಷಿ ಉತ್ಪನ್ನಗಳಿಗೆ ಮೀಸಲಾಗಿರುವ 10 ಪ್ಯಾಸೆಂಜರ್ ಕೋಚ್‌ಗಳು ಮತ್ತು 10 ಕೋಚ್‌ ಗಳೊಂದಿಗೆ ಈ ವಿನೂತನ ರೈಲು ಸೇವೆಯನ್ನು ನಾಸಿಕ್‌ ನ ರೈತರ ಸಲಹೆಗಳ ಆಧಾರದ ಮೇಲೆ ಪರಿಚಯಿಸಲಾಗಿದೆ. ಅನೇಕ ಸಣ್ಣ ಪ್ರಮಾಣದ ರೈತರು ಹೊಂದಿಕೊಳ್ಳುವ ಸಾರಿಗೆ ಪರಿಹಾರದ ಅಗತ್ಯವನ್ನು ವ್ಯಕ್ತಪಡಿಸಿದರು, ಏಕೆಂದರೆ ಅವರಿಗೆ ಆಗಾಗ್ಗೆ ಸಂಪೂರ್ಣ ರೈಲನ್ನು ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಶೆಟ್ಕರಿ ಸಮೃದ್ಧಿ ರೈಲು ರೈತರಿಗೆ ಈರುಳ್ಳಿ ಅಥವಾ ದಾಳಿಂಬೆಗಳಂತಹ ಅರ್ಧ ಕ್ವಿಂಟಾಲ್ ಉತ್ಪನ್ನಗಳಿಂದ ಹಿಡಿದು 10 ಕ್ವಿಂಟಾಲ್ ಸೋಯಾಬೀನ್ ಗಳಂತರ ದೊಡ್ಡ ಸರಕುಗಳವರೆಗೆ ವಿವಿಧ ಪ್ರಮಾಣಗಳಲ್ಲಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಈ ರೈಲು ತನ್ನ ರೈತ ಸ್ನೇಹಿ ವಿಧಾನಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ, ಸಕಾರಾತ್ಮಕ ಪ್ರತಿಕ್ರಿಯೆಯು ಅದರ ಜನಪ್ರಿಯತೆ ಮತ್ತು ಉಪಯುಕ್ತತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು. ಅದರ ಯಶಸ್ಸಿನಿಂದ ಉತ್ತೇಜಿಸಲ್ಪಟ್ಟ, ಇತರ ಪ್ರದೇಶಗಳಿಗೆ ಇದೇ ರೀತಿಯ ಸೇವೆಗಳನ್ನು ವಿಸ್ತರಿಸುವ ಯೋಜನೆಗಳು ನಡೆಯುತ್ತಿದ್ದು, ಹೆಚ್ಚಿನ ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸಾರಿಗೆಯಿಂದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತವೆ.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈಲ್ವೆ ನೆಟ್‌ ವರ್ಕ್‌ ನಲ್ಲಿ ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕವಚ್ ತಂತ್ರಜ್ಞಾನದ ಅನುಷ್ಠಾನ ಮತ್ತು ಪ್ರಗತಿಯ ಬಗ್ಗೆ ಚರ್ಚಿಸಿದರು. 1600 ಕಿ. ಮೀ. ಗಿಂತ ಹೆಚ್ಚು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾದ ಕವಾಚ್ ಆವೃತ್ತಿ 3.2 ಅನ್ನು ಈಗ ವರ್ಧಿತ ಕವಚ್ ಆವೃತ್ತಿ 4.0 ಗೆ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕವಚ್ ಆವೃತ್ತಿ 4.0 ಅನ್ನು ಜುಲೈ 16,2024 ರಂದು RDSO ಅನುಮೋದಿಸಿದೆ. ಮೇಲ್ದರ್ಜೆಗೇರಿಸಿದ ಆವೃತ್ತಿಯು ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆ ಮತ್ತು ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕವಚ್ ತಂತ್ರಜ್ಞಾನದೊಂದಿಗೆ 10,000 ಇಂಜಿನ್‌ ಗಳನ್ನು ಸಜ್ಜುಗೊಳಿಸಲು ಬೃಹತ್ ಕಾರ್ಯಕ್ರಮವನ್ನು ಕೈಗೊಂಡಿದೆ. ಈಗಾಗಲೇ ಆದೇಶಗಳನ್ನು ನೀಡಲಾಗಿದೆ ಮತ್ತು 9,000ಕ್ಕೂ ಹೆಚ್ಚು ತಂತ್ರಜ್ಞರು ಮತ್ತು ಎಂಜಿನಿಯರ್‌ಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸುವ ಕುರಿತು ತರಬೇತಿ ನೀಡಲಾಗಿದೆ. ಈ ಯೋಜನೆಯ ಪ್ರಮಾಣವನ್ನು ಹೊಸ ಟೆಲಿಕಾಂ ಕಂಪನಿಯನ್ನು ಪ್ರಾರಂಭಿಸುವುದಕ್ಕೆ ಹೋಲಿಸಿದ ಸಚಿವರು, ಸವಾಯಿ ಮಾಧೋಪುರ ಮತ್ತು ಕೋಟಾ ನಡುವಿನ ರೈಲು ಮಾರ್ಗದಲ್ಲಿ ಕವಚ 4.0 ತಂತ್ರಜ್ಞಾನದ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಮಾರ್ಗವು ಈಗ ಈ ತಂತ್ರಜ್ಞಾನದೊಂದಿಗೆ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬೈ-ವಡೋದರ ರೈಲು ಮಾರ್ಗಕ್ಕೆ ಈ ತಂತ್ರಜ್ಞಾನದ ಪ್ರಮಾಣೀಕರಣ ಪ್ರಕ್ರಿಯೆ ನಡೆಯುತ್ತಿದೆ. ದೆಹಲಿ-ಮಥುರಾ, ದೆಹಲಿ-ಅಲ್ವರ್ ಮತ್ತು ದೆಹಲಿ-ಕಾನ್ಪುರ ರೈಲು ಮಾರ್ಗಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದರು. 

ಇದುವರೆಗೆ, ಕಾಚ 4.0 ಅನ್ನು 1,000 ಕಿಮೀಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಅಳವಡಿಸಲಾಗಿದೆ ಮತ್ತು ಮುಂದಿನ ಆರು ವರ್ಷಗಳಲ್ಲಿ ಇದನ್ನು ಇಡೀ ದೇಶಕ್ಕೆ ವಿಸ್ತರಿಸುವ ಯೋಜನೆಯಿದೆ. ಭಾರತವು ಕೇವಲ  6 ವರ್ಷಗಳಲ್ಲಿ ದೇಶವ್ಯಾಪಿ ವ್ಯಾಪ್ತಿಯನ್ನು ಗುರಿಯಾಗಿಸಿಕೊಂಡಿದೆ. ಆದರೆ ಇತರ ದೇಶಗಳು ತಮ್ಮ ನೆಟ್‌ ವರ್ಕ್‌ಗಳಾದ್ಯಂತ ಇಂತಹ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು 20 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿವೆ ಎಂದು ಸಚಿವರು ಹೇಳಿದರು. ತರಬೇತಿಯ ನಂತರ ಕೇವಲ 22 ಗಂಟೆಗಳಲ್ಲಿ ಒಂದು ರೈಲು ಇಂಜಿನ್‌ ಗೆ ಕವಚವನ್ನು ಅಳವಡಿಸುವ ಮೂಲಕ ಅಳವಡಿಕೆ ಪ್ರಕ್ರಿಯೆಯನ್ನು ಹೆಚ್ಚು ದಕ್ಷವಾಗಿಸಲಾಗಿದೆ. 130 ಕಿಮೀ/ಗಂಟೆ ಮತ್ತು ಅದಕ್ಕಿಂತ ಹೆಚ್ಚಿನ ವೇಗವನ್ನು ಸಾಧಿಸಲು ಕವಚದಂತಹ ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ (ATP) ವ್ಯವಸ್ಥೆಗಳಿಲ್ಲದೆ ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.

ರೈಲ್ವೆ ಯೋಜನೆಗಳ ಪರಿಸರ ಮತ್ತು ಆರ್ಥಿಕ ಪ್ರಯೋಜನಗಳನ್ನು ವಿವರಿಸಿದ ಸಚಿವರು, ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆ ವಿಧಾನವಾಗಿ ರೈಲ್ವೆ, ದೇಶದ ಹವಾಮಾನ ಗುರಿಗಳನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿದರು. ಈ ಯೋಜನೆಗಳು 271 ಕೋಟಿ ಕಿಲೋಗ್ರಾಂಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತವೆ. ಇದು 15 ಕೋಟಿ ಮರಗಳನ್ನು ನೆಡುವುದಕ್ಕೆ ಸಮನಾಗಿರುತ್ತದೆ ಎಂದು ಅವರು  ಹೇಳಿದರು. ಈ ಮೂರು ಯೋಜನೆಗಳ ಒಟ್ಟು ವೆಚ್ಚ ಸುಮಾರು 7,927 ಕೋಟಿ ರೂಪಾಯಿಗಳಾಗಿದ್ದು, ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಗಳು ಹೆಚ್ಚುತ್ತಿರುವ 50 ದಶಲಕ್ಷ ಟನ್ ಸರಕು ಸಾಗಣೆಗೆ ಕಾರಣವಾಗಲಿದ್ದು, ವರ್ಷಕ್ಕೆ ಒಟ್ಟು 15 ಕೋಟಿ ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ಇದು ಹಸಿರು ಮತ್ತು ಸಮರ್ಥ ಮೂಲಸೌಕರ್ಯದ ಮೂಲಕ ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಅವರು ಹೇಳಿದರು.

375 ಕಿಮೀ ಉದ್ದದ ರೈಲ್ವೇ ಲೈನ್ ಯೋಜನೆಗಳ ಈ ವಿಭಾಗಗಳು ಮುಂಬೈ-ಪ್ರಯಾಗ್ ರಾಜ್‌-ವಾರಣಾಸಿ ಮಾರ್ಗ, ಮುಂಬೈ-ಹೌರಾ ಗೋಲ್ಡನ್ ಡಯಾಗನಲ್, ಮತ್ತು ಮುಂಬೈ-ಮನ್ಮದ್-ಭೂಸಾವಲ್-ಖಾಂಡ್ವಾ-ಸತ್ನಾ-ಪ್ರಯಾಗ್ರಾಜ್-ವಾರಣಾಸಿ ಮಾರ್ಗ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಗಳು ಹೆಚ್ಚುವರಿ ಪ್ಯಾಸೆಂಜರ್ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ. ಇದು ನಾಸಿಕ್‌ ನ (ತ್ರಿಂಬಕೇಶ್ವರ), ಖಾಂಡ್ವಾ (ಓಂಕಾರೇಶ್ವರ) ಮತ್ತು ವಾರಣಾಸಿ (ಕಾಶಿ ವಿಶ್ವನಾಥ್) ನಲ್ಲಿನ ಜ್ಯೋತಿರ್ಲಿಂಗಗಳಿಗೆ ಮತ್ತು ಪ್ರಯಾಗ್‌ರಾಜ್, ಚಿತ್ರಕೂಟ್, ಗಯಾ ಮತ್ತು ಶಿರ್ಡಿಗಳಲ್ಲಿನ ಧಾರ್ಮಿಕ ತಾಣಗಳಿಗೆ ಭೇಟಿ ನೀಡುವ ಯಾತ್ರಿಕರಿಗೆ ಪ್ರಯೋಜನಕಾರಿಯಾಗಿದೆ. ಸಾಮರ್ಥ್ಯ ಮತ್ತು ಕಾರ್ಯಾಚರಣಾ ದಕ್ಷತೆಯನ್ನು ಸುಧಾರಿಸುವ ಮೂಲಕ, ಈ ಯೋಜನೆಗಳು ಮಹಾರಾಷ್ಟ್ರದ ಖಾಂಡೇಶ್ ಪ್ರದೇಶ, ಮಧ್ಯಪ್ರದೇಶ, ಉತ್ತರ ಭಾರತದ ಪೂರ್ವಾಂಚಲ ಮತ್ತು ಪಶ್ಚಿಮದ ಮುಂಬೈ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಯೋಜನಗಳ ಜೊತೆಗೆ, ಈ ಯೋಜನೆಗಳು ಖಜುರಾಹೊ UNESCO ವಿಶ್ವ ಪರಂಪರೆಯ ತಾಣ, ಅಜಂತಾ ಮತ್ತು ಎಲ್ಲೋರಾ ಗುಹೆಗಳು UNESCO ವಿಶ್ವ ಪರಂಪರೆಯ ತಾಣಗಳು, ದೇವಗಿರಿ ಕೋಟೆ, ಅಸಿರ್ಗಢ ಕೋಟೆ, ರೇವಾ ಕೋಟೆ, ಯವಾಲ್ ವನ್ಯಜೀವಿ ಅಭಯಾರಣ್ಯ, ಕಿಯೋತಿ ಜಲಪಾತ, ಪೂರ್ವಾ ಜಲಪಾತ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಆಕರ್ಷಣೆಗಳಿಗೆ ಪ್ರವೇಶವನ್ನು ಸುಧಾರಿಸುವ ಮೂಲಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತದೆ.

 

*****


(Release ID: 2077834) Visitor Counter : 5


Read this release in: English , Urdu , Hindi