ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಮಹಾತ್ಮ ಗಾಂಧಿ ಗ್ರಾಮೀಣ ಕೈಗಾರಿಕೀಕರಣದ ಸಂಸ್ಥೆ (ಎಂ.ಜಿ.ಐ.ಆರ್.ಐ)ಯ ಸಾಮಾನ್ಯ ಮಂಡಳಿಯ 11ನೇ ಸಭೆ
प्रविष्टि तिथि:
25 NOV 2024 8:55PM by PIB Bengaluru
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ.) ಸಚಿವರು ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಕೈಗಾರಿಕೀಕರಣದ ಸಂಸ್ಥೆ (ಎಂ.ಜಿ.ಐ.ಆರ್.ಐ)ಯ ಅಧ್ಯಕ್ಷರಾದ ಶ್ರೀ ಜಿತನ್ ರಾಮ್ ಮಾಂಝಿ ಅವರು ನವದೆಹಲಿಯ ಉದ್ಯೋಗ್ ಭವನದಲ್ಲಿ 25.11.2024 ರಂದು ಸಾಮಾನ್ಯ ಮಂಡಳಿಯ 11ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಎಂ.ಎಸ್.ಎಂ.ಇ. ರಾಜ್ಯ ಸಚಿವರು ಮತ್ತು ಸಾಮಾನ್ಯ ಮಂಡಳಿಯ ಹಿರಿಯ ಉಪಾಧ್ಯಕ್ಷರಾದ ಸು.ಶ್ರೀ ಶೋಭಾ ಕರಂದ್ಲಾಜೆಯವರು, ಕೆವಿಐಸಿ ಅಧ್ಯಕ್ಷರು, ಮತ್ತು ಸಾಮಾನ್ಯ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮನೋಜ್ ಕುಮಾರ್, ಕಾರ್ಯದರ್ಶಿ (ಎಂ.ಎಸ್.ಎಂ.ಇ) ಮತ್ತು ಸಾಮಾನ್ಯ ಮಂಡಳಿಯ ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ (ಎ.ಆರ್.ಐ), ಸಿಇಒ, ಕೆವಿಐಸಿ, ನಿರ್ದೇಶಕ, ಎಂ.ಜಿ.ಐ.ಆರ್.ಐ ಮತ್ತು ಸಾಮಾನ್ಯ ಮಂಡಳಿಯ ಇತರ ಸದಸ್ಯರು ಮತ್ತು ಸಚಿವಾಲಯದ ಮತ್ತು ಎಂ.ಜಿ.ಐ.ಆರ್.ಐ ನ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಎಂ.ಜಿ.ಐ.ಆರ್.ಐ.ಗೆ ಸಂಬಂಧಿಸಿದ ವಿವಿಧ ಕಾರ್ಯಸೂಚಿಗಳನ್ನು ವಿವರವಾಗಿ ಚರ್ಚಿಸಲಾಯಿತು ಮತ್ತು ಹಣಕಾಸು ವರ್ಷ 2024-25 & 2025-26ರ ವಾರ್ಷಿಕ ಬಜೆಟ್ ಗೆ ಅನುಮೋದನೆ ನೀಡಲಾಯಿತು ಹಾಗು 2023-24ರ ವಾರ್ಷಿಕ ಹಣಕಾಸು ಲೆಕ್ಕಪಟ್ಟಿಯನ್ನು ಅನುಮೋದಿಸಲಾಯಿತು.
CSNY.jpeg)
ಸಂಸ್ಥೆಯ ಸಾಧನೆಗಳಾದ ನವೀನ ಉತ್ಪನ್ನಗಳು, ಅಭಿವೃದ್ಧಿ ಪ್ರಕ್ರಿಯೆಗಳು, ಉದ್ಯಮಿಗಳ ಬೆಳವಣಿಗೆ, ಮಂಜೂರು ಮಾಡಿದ ಪೇಟೆಂಟ್ ಮತ್ತು ತರಬೇತಿ ಕಾರ್ಯಕ್ರಮಗಳ ಬಗ್ಗೆಯೂ ಸಹ ಚರ್ಚಿಸಲಾಯಿತು. ಎಂ.ಜಿ.ಐ.ಆರ್.ಐI ಅನ್ನು ಗ್ರಾಮೀಣ ಕೈಗಾರಿಕೀಕರಣಕ್ಕಾಗಿ ಶ್ರೇಷ್ಠತೆಯ ಕೇಂದ್ರವಾಗಿ ಮರುಸ್ಥಾಪಿಸುವ ಪ್ರಸ್ತಾಪವನ್ನು ಸಹ ಚರ್ಚಿಸಲಾಯಿತು. ಗೌರವಾನ್ವಿತ ಸಚಿವರು (ಎಂ.ಎಸ್.ಎಂ.ಇ) ಗ್ರಾಮೀಣ ಕೈಗಾರಿಕೆಗಳ ಪ್ರಚಾರ ಮತ್ತು ಬೆಳವಣಿಗೆ ಹಾಗು ಗ್ರಾಮೀಣ ಉದ್ಯಮಿಗಳ ಅಭಿವೃದ್ಧಿಗಾಗಿ ಸಂಸ್ಥೆಯ ಕೆಲಸವನ್ನು ಅಧಿಕಗೊಳಿಸಲು ನಿರ್ದೇಶನಗಳನ್ನು ನೀಡಿದರು.
*****
(रिलीज़ आईडी: 2077523)
आगंतुक पटल : 57