ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

ಐ ಎಫ್ ಎಫ್ ಐ 2024ರಲ್ಲಿ ಭವ್ಯವಾದ ಮರಳು ಕಲಾ ಶಿಲ್ಪಗಳನ್ನು ಉದ್ಘಾಟಿಸಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ 


ಸುದರ್ಶನ್ ಪಟ್ನಾಯಕ್ ಅವರ ಕೈಚಳಕದಲ್ಲಿ ಗೋವಾದ ಮಿರಾಮಾರ್ ಬೀಚಿನಲ್ಲಿ ಅದ್ಭುತ ಮರಳಿನ ಕಲಾತ್ಮಕತೆ ಮೈದಳೆದಿದೆ.

ಭಾರತೀಯ ಸಿನಿಮಾ ಮತ್ತು ಸಂಗೀತದ ದಂತಕಥೆಗಳಾದ ಅಕ್ಕಿನೇನಿ ನಾಗೇಶ್ವರ ರಾವ್, ತಪನ್ ಸಿನ್ಹಾ, ಮೊಹಮ್ಮದ್ ರಫಿ ಮತ್ತು ರಾಜ್ ಕಪೂರ್  ಅವರಿಗೆ ಗೌರವ 

ಸುಂದರವಾದ ಕಡಲತೀರಗಳನ್ನು ಹೊಂದಿರುವ ಗೋವಾ ಮರಳು ಕಲಾ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಬೇಕು: ಸುದರ್ಶನ್‌ ಪಟ್ನಾಯಕ್

ಹೆಸರಾಂತ ಮರಳು ಕಲಾವಿದ ಮತ್ತು ಪದ್ಮಶ್ರೀ ಪುರಸ್ಕೃತರಾದ ಶ್ರೀ ಸುದರ್ಶನ್ ಪಟ್ನಾಯಕ್ ಅವರು 55ನೇ ಇಂಟರ್‌ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ದಲ್ಲಿ ಮಿರಾಮಾರ್ ಬೀಚ್‌ನಲ್ಲಿ ಅದ್ಭುತವಾದ ಮರಳು ಕಲಾಕೃತಿಗಳನ್ನು ರಚಿಸಿದರು. ಗೋವಾ ಮುಖ್ಯಮಂತ್ರಿ, ಡಾ. ಪ್ರಮೋದ್ ಸಾವಂತ್ ಅವರು ಭಾರತೀಯ ಚಿತ್ರರಂಗ ಮತ್ತು ಸಂಗೀತದ ಮೇರು ವ್ಯಕ್ತಿಗಳಾದ ಅಕ್ಕಿನೇನಿ ನಾಗೇಶ್ವರ ರಾವ್, ತಪನ್ ಸಿನ್ಹಾ, ಮೊಹಮ್ಮದ್ ರಫಿ ಮತ್ತು ರಾಜ್ ಕಪೂರ್ ಅವರ ಮರಳು ಶಿಲ್ಪವನ್ನು ಉದ್ಘಾಟಿಸಿದರು.

ಎನ್ ಎಫ್ ಡಿ ಸಿ ಮತ್ತು ಶ್ರೀ ಸುದರ್ಶನ್ ಪಟ್ನಾಯಕ್ ಅವರಿಗೆ ಭಾರತೀಯ ಚಿತ್ರರಂಗದ ನಾಲ್ಕು ದಂತಕಥೆಗಳನ್ನು ಇಂತಹ ಸೃಜನಶೀಲ ಮತ್ತು ಕಲಾತ್ಮಕ ರೀತಿಯಲ್ಲಿ ಗೌರವಿಸಿದ್ದಕ್ಕಾಗಿ ಡಾ. ಪ್ರಮೋದ್ ಸಾವಂತ್  ಕೃತಜ್ಞತೆ ಸಲ್ಲಿಸಿದರು. "ಇದು ಮಿರಾಮರ್ ಬೀಚ್‌ನಲ್ಲಿ ರಚಿಸಲಾದ ಅತಿದೊಡ್ಡ ಮರಳು ಶಿಲ್ಪಗಳಲ್ಲಿ ಒಂದಾಗಿದೆ ಮತ್ತು ಈ ಮಹಾನ್ ವ್ಯಕ್ತಿಗಳ ಪರಂಪರೆಗೆ ಸುಂದರವಾದ ಸಾಕ್ಷಿಯಾಗಿದೆ. ಅವರ ಗಮನಾರ್ಹ ಪ್ರಯತ್ನಗಳಿಗಾಗಿ ನಾನು ಶ್ರೀ ಪಟ್ನಾಯಕ್ ಮತ್ತು ಇಡೀ ತಂಡವನ್ನು ಅಭಿನಂದಿಸುತ್ತೇನೆ ”ಎಂದು ಡಾ. ಸಾವಂತ್ ತಿಳಿಸಿದರು, ಈ ಶಿಲ್ಪವು ಈಗ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ ಎಂದು ಹೇಳಿದರು.

ಮಿರಾಮಾರ್ ಬೀಚ್‌ನ ಸುಂದರವಾದ ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಸ್ಥಾಪನೆಯು ನಾಲ್ಕು ಚಿತ್ರರಂಗದ ದಂತಕಥೆಗಳ ಅಮರ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತದೆ. ಈ ಪ್ರತಿಯೊಂದು ಐಕಾನ್‌ಗಳು ಭಾರತೀಯ ಚಲನಚಿತ್ರ ಮತ್ತು ಸಂಗೀತ ಉದ್ಯಮಗಳನ್ನು ರೂಪಿಸಿವೆ ಮತ್ತು ಈ ಮರಳಿನ ಶಿಲ್ಪವು ಅವರ ಅಸಾಧಾರಣ ಪ್ರತಿಭೆಗೆ ಗೌರವವಾಗಿದೆ.

"ಈ ಕಲಾಕೃತಿಯು ಪೂರ್ಣಗೊಳ್ಳಲು ಎರಡು ಪೂರ್ಣ ದಿನಗಳನ್ನು ತೆಗೆದುಕೊಂಡಿತು-ಒಂದು ದಿನ ತಯಾರಿಗಾಗಿ ಮತ್ತು ಎರಡನೆಯದು ಸಂಕೀರ್ಣವಾದ ಕೆತ್ತನೆಗಾಗಿ" ಎಂದು ಪಟ್ನಾಯಕ್ ಹೇಳಿದರು.  


ಮರಳು ಕಲೆಗೆ ಅವರ ಪರಿವರ್ತನಾತ್ಮಕ ಕೊಡುಗೆಗಳು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ, ವಿವಿಧ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು, ಅವರ ಕೆಲಸದ ಮೂಲಕ ಶಾಂತಿ, ಸಾಮರಸ್ಯ ಮತ್ತು ಏಕತೆಯನ್ನು ಉತ್ತೇಜಿಸಲು ಅವರ ಕಲಾತ್ಮಕತೆಯನ್ನು ಬಳಸುವುದಕ್ಕಾಗಿ ಹೆಸರುವಾಸಿಯಾಗಿದ್ದಾರೆ. "ನಾನು ಈ ಹಿಂದೆ ನನ್ನ ಮರಳಿನ ಶಿಲ್ಪವನ್ನು ಕಾನ್‌ನಲ್ಲಿ ಪ್ರಸ್ತುತಪಡಿಸಿದ್ದೇನೆ IFFI ಗೆ ನನ್ನನ್ನು ಆಹ್ವಾನಿಸಿರುವುದು ಇದೇ ಮೊದಲು" ಎಂದು ಸುದರ್ಶನ್‌ ಹೇಳಿದರು.

ಮರಳು ಕಲೆಯ ಮಹತ್ವದ ಕುರಿತು ಮಾತನಾಡಿದ ಶ್ರೀ ಸುದರ್ಶನ್ ಪಟ್ನಾಯಕ್ ಅವರು ಮರಳು ಶಿಲ್ಪಕಲೆ ತರಬೇತಿಗೆ ಗೋವಾ ಪ್ರಧಾನ ಕೇಂದ್ರವಾಗುವ ಸಾಮರ್ಥ್ಯವಿದೆ. "ಗೋವಾ ತನ್ನ ಸುಂದರವಾದ ಕಡಲತೀರಗಳನ್ನು ಹೊಂದಿದ್ದು, ಸ್ಥಳೀಯ ಕಲಾವಿದರು ಮತ್ತು ವಿದ್ಯಾರ್ಥಿಗಳು ಮರಳು ಶಿಲ್ಪದ ಸೂಕ್ಷ್ಮತೆಗಳನ್ನು ಕಲಿಯಲು ಮೀಸಲಾದ ಮರಳು ಕಲಾ ತರಬೇತಿ ಸಂಸ್ಥೆಯನ್ನು ಹೊಂದಿರಬೇಕು. ಇದು ರಾಜ್ಯದ ಸಾಂಸ್ಕೃತಿಕ ಪಟ್ಟಿಗೆ ಉತ್ತಮ ಸೇರ್ಪಡೆಯಾಗಲಿದೆ ಮತ್ತು ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ತೊಡಗಿಸಿಕೊಳ್ಳಲು ಅದ್ಭುತ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಗೋವಾ ಮತ್ತು ನನ್ನ ತವರು ರಾಜ್ಯ ಒಡಿಶಾದ ಅನನ್ಯ ಕರಾವಳಿ ಪ್ರದೇಶಗಳನ್ನು ಹೊಂದಿದೆ. ವಿವಿಧ ಬೀಚ್‌ಗಳಲ್ಲಿ ಕಂಡುಬರುವ ವಿವಿಧ ರೀತಿಯ ಮರಳಿನ ಕುರಿತು ಸುದರ್ಶನ್‌ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. 

"ಪ್ರತಿಯೊಂದು ಬೀಚ್ ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಮರಳಿನ ಪ್ರಕಾರವನ್ನು ಹೊಂದಿದೆ. "ಆದರೆ ಕಲಾವಿದನಿಗೆ, ಪ್ರತಿ ಮರಳು ಒಂದೇ ಆಗಿರುತ್ತದೆ," ಅವರು ಹೇಳಿದರು.

ಪ್ರತಿಷ್ಠಿತ ಕಾನ್‌ ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶ್ರೀ ಪಟ್ನಾಯಕ್ ಅವರಿಗೆ ವಿಶ್ವಾದ್ಯಂತ ಮೆಚ್ಚುಗೆ ಸಂದಿದೆ. IFFI ನಲ್ಲಿನ ಅವರ ಇತ್ತೀಚಿನ ಕೆಲಸವು ಭಾರತೀಯ ಚಿತ್ರರಂಗದ ದಂತಕಥೆಗಳಿಗೆ ಗೌರವ ಮಾತ್ರವಲ್ಲದೆ ಉತ್ಸವದ ಶ್ರೀಮಂತ ಸಾಂಸ್ಕೃತಿಕ ಕೊಡುಗೆಗಳಿಗೆ ಗಮನಾರ್ಹವಾದ ಸೇರ್ಪಡೆಯಾಗಿದೆ, ಕಲೆ ಮತ್ತು ಸಿನಿಮಾದ ಸಮ್ಮಿಳನವನ್ನು ಪ್ರದರ್ಶಿಸುತ್ತದೆ.

ಮಿರಾಮರ್ ಬೀಚ್‌ನಲ್ಲಿರುವ ಮರಳಿನ ಶಿಲ್ಪವು ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ, IFFI ಪಾಲ್ಗೊಳ್ಳುವವರು ಮತ್ತು ಸ್ಥಳೀಯ ಸಮುದಾಯವು ಈ ಅಸಾಮಾನ್ಯ ಕಲಾಕೃತಿಯನ್ನು ವೀಕ್ಷಿಸಲು ಮತ್ತು ಪ್ರಶಂಸಿಸಲು ಅನುವು ಮಾಡಿಕೊಡುತ್ತದೆ.

 

*****

iffi reel

(Release ID: 2076420) Visitor Counter : 49