ಉಪರಾಷ್ಟ್ರಪತಿಗಳ ಕಾರ್ಯಾಲಯ
ಹೊಸದಿಲ್ಲಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ಏಷ್ಯಾ ಪೆಸಿಫಿಕ್ ಬೋಸೆ (ಬೌಸೆ) ಮತ್ತು ಬೌಲಿಂಗ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರ ಭಾಷಣದ ಪಠ್ಯ
Posted On:
19 NOV 2024 7:19PM by PIB Bengaluru
ಶುಭ ಸಂಜೆ, ನಮಸ್ಕಾರ!
ನಾನು ನೋಡಿದ್ದು ಅದ್ಭುತ, ಮತ್ತು ನಂಬಲಾಗದ್ದು. ನಾನು ನಿಮಗೆ ಹೇಳಬಲ್ಲೆ, ನಿಮ್ಮ ಉಪಸ್ಥಿತಿಯಿಂದಾಗಿ ನಾನು ಪ್ರೇರೇಪಿಸಲ್ಪಟ್ಟಿದ್ದೇನೆ, ಸ್ಫೂರ್ತಿ ಪಡೆದಿದ್ದೇನೆ ಮತ್ತು ಹೆಚ್ಚುವರಿ ಉತ್ಸಾಹದ ಶಕ್ತಿಯನ್ನು ಗಳಿಸಿದ್ದೇನೆ..
ಗೌರವಾನ್ವಿತ ಅತಿಥಿಗಳೇ, ಅಧಿಕಾರಿಗಳೇ, ಎಲ್ಲಕ್ಕಿಂತ ಮುಖ್ಯವಾಗಿ, ತರಬೇತುದಾರರು, ಗೌರವಾನ್ವಿತ ತರಬೇತುದಾರರು ಇರುವ ರಾಷ್ಟ್ರದಲ್ಲಿ ನಾವು ವಾಸಿಸುತ್ತಿದ್ದೇವೆ.
ನಾವು ಗುರು ದ್ರೋಣಾಚಾರ್ಯರನ್ನು ನೆನಪಿಸಿಕೊಳ್ಳುತ್ತೇವೆ ಏಕೆಂದರೆ ಅವರು ತರಬೇತುದಾರರಾಗಿ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದರು ಮತ್ತು ನಾನು ಶ್ರೀ ಮಾಂಡವೀಯ ಅವರನ್ನು ಅಭಿನಂದಿಸುತ್ತೇನೆ. ಖ್ಯಾತ ತರಬೇತುದಾರರಿಗೆ ಅವರ ಗೌರವಾರ್ಥವಾಗಿ ಸರ್ಕಾರವು ಅಂತಹ ಪ್ರಶಸ್ತಿಯನ್ನು ನೀಡುತ್ತಿರುವುದು ಬಹಳ ಸರಿಯಾಗಿದೆ.
ಕ್ರೀಡಾಪಟುಗಳ ಹೆಮ್ಮೆಯ ಪೋಷಕರು, ನಮ್ಮಲ್ಲಿ ಹೆಚ್ಚಿನ ಉತ್ಸಾಹ ತುಂಬಿದವರು ಮತ್ತು ನಾವು ಅವರಿಗೆ ಭರವಸೆಯ ವಿಶ್ವಾಸ ಮೂಡಿಸಬೇಕು ಎಂದು ಭಾವಿಸಿದ್ದೆವು, ಆದರೆ ಅವರು ನಮಗೆ ಭರವಸೆಯನ್ನು ಮೂಡಿಸಿದ್ದಾರೆ. ಮಹಿಳೆಯರೇ ಮತ್ತು ಮಹನೀಯರೇ, ಇದು ನಮ್ಮೆಲ್ಲರಿಗೂ ಒಂದು ಅದ್ಭುತ ಸಂದರ್ಭವಾಗಿದೆ, ಅವಕಾಶವಾಗಿದೆ.
ವಿಶೇಷ ಒಲಿಂಪಿಕ್ಸ್ ನ ಉತ್ಸಾಹವನ್ನು ಗೌರವಿಸುವ ವಿಷಯವೇ ಮನಮೋಹಕವಾಗಿದೆ. ವಿಶೇಷ ಒಲಿಂಪಿಕ್ಸ್ ಏಷ್ಯಾ-ಪೆಸಿಫಿಕ್ ಬೌಸೆ ಮತ್ತು ಬೌಲಿಂಗ್ ಸ್ಪರ್ಧೆ 2024 ಅನ್ನು ಉದ್ಘಾಟಿಸುವುದು ನನಗೆ ಮತ್ತು ನನ್ನ ಪತ್ನಿಗೆ ಒಂದು ಗೌರವವಾಗಿದೆ ಮತ್ತು ನನ್ನ ಪತ್ನಿಅದನ್ನು ಎಂದಿಗೂ ಮರೆಯುವುದಿಲ್ಲ.. ಶಿವಾನಿ ಏನು ಸೂಚಿಸಿದಳು. ನಾನು ಅದರ ಬಗ್ಗೆ ಯೋಚಿಸುತ್ತೇನೆ. ನಾನು ಮೊದಲು ಈ ಆಟಗಳ ಸ್ಫೂರ್ತಿಯನ್ನು ಉಲ್ಲೇಖಿಸುತ್ತೇನೆ, "ನಾನು ಗೆಲ್ಲುತ್ತೇನೆ. ಆದರೆ ನಾನು ಗೆಲ್ಲಲು ಸಾಧ್ಯವಾಗದಿದ್ದರೆ, ಪ್ರಯತ್ನದಲ್ಲಿ ಧೈರ್ಯಶಾಲಿಯಾಗಿರುವಂತಾಗಲಿ” . ಇದು ಶತಮಾನಗಳಿಂದ ವಿಕಾಸಗೊಂಡ ಮಾನವೀಯತೆಯ ಪ್ರಗತಿಯನ್ನು ವ್ಯಾಖ್ಯಾನಿಸುತ್ತದೆ. ಇದು ಮಾನವೀಯತೆಯ ಏಳಿಗೆಯನ್ನು ವ್ಯಾಖ್ಯಾನಿಸುತ್ತದೆ, ಇದು ನಮ್ಮನ್ನು ಈ ಮಟ್ಟಕ್ಕೆ ಕರೆದೊಯ್ದ ಮನೋಭಾವವನ್ನು ವ್ಯಾಖ್ಯಾನಿಸುತ್ತದೆ ಮತ್ತು ನಾನು ಮೂಲ ಅಂಶಕ್ಕೆ ಹೋಗುತ್ತೇನೆ..
ಪ್ರಾರ್ಥನೆಯು ಹೀಗೆ ಪ್ರಾರಂಭವಾಗುತ್ತದೆ "ನೀವು ಮೌಢ್ಯವನ್ನು ಜಯಿಸಿರಿ, ಅಜ್ಞಾನವನ್ನು ದಾಟಿರಿ. ಪ್ರತಿ ತಿರುವಿನಲ್ಲಿ ವಿಭಿನ್ನವಾಗಿ ಸವಾಲು ಹಾಕುವಂತಾಗಲಿ ಮತ್ತು ವಿಶೇಷ ಒಲಿಂಪಿಕ್ಸ್ ನ ಶ್ರೇಷ್ಠ ಕ್ರೀಡಾಪಟುಗಳ ಮಧ್ಯಾಹ್ನದ ಹಗಲು ಹೊತ್ತಿನಲ್ಲಿ ನೀವು ಹೆಚ್ಚಿನ ಸಂತೋಷವನ್ನು ಕಂಡುಕೊಳ್ಳುವಂತಾಗಲಿ"
ಸ್ನೇಹಿತರೇ, ಈ ಆಟಗಳ ಮೂಲಕ ನಾವು ಬಹಳ ಮುಖ್ಯವಾದದ್ದನ್ನು ಆಚರಿಸುತ್ತಿದ್ದೇವೆ ಮತ್ತು ಅದು ಏಷ್ಯಾ-ಪೆಸಿಫಿಕ್ ನಾದ್ಯಂತ ವಿಶೇಷ ಚೇತನರಿಗೆ ಒಳಗೊಳ್ಳುವಿಕೆ ಮತ್ತು ಘನತೆಯಾಗಿದೆ, ಇದು ಭಾರತದ ಸಾಂಸ್ಕೃತಿಕ ನೀತಿಯನ್ನು ಪ್ರತಿಬಿಂಬಿಸುತ್ತದೆ. ಜಗತ್ತಿನಲ್ಲಿ ನಮ್ಮ ನಾಗರಿಕತೆ ಅನನ್ಯವಾಗಿದೆ. ಇದು 5000 ವರ್ಷಗಳಿಗಿಂತಲೂ ಹಳೆಯದು. ಅದು ಏನನ್ನು ಪ್ರತಿಬಿಂಬಿಸುತ್ತದೆ? ದಿವ್ಯಾಂಗರಲ್ಲಿ ನಾವು ದೈವತ್ವವನ್ನು ನೋಡುತ್ತೇವೆ, ನಾವು ಸರ್ವೋಚ್ಛವನ್ನು ನೋಡುತ್ತೇವೆ, ನಾವು ಆಧ್ಯಾತ್ಮಿಕತೆಯನ್ನು ನೋಡುತ್ತೇವೆ ಮತ್ತು ಅದಕ್ಕಾಗಿಯೇ ಈ ದೇಶದಲ್ಲಿ, ದೂರದೃಷ್ಟಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಅವರ ಕನಸುಗಳನ್ನು ಸಾಕಾರಗೊಳಿಸಲು ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರಕಟಪಡಿಸಲು ಸೂಕ್ತ ಪರಿಸರ ವ್ಯವಸ್ಥೆಯನ್ನು ಒದಗಿಸಲು ಹಲವಾರು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪರೇಡ್ ಮಾಡುತ್ತಿದ್ದ ಕ್ರೀಡಾಪಟುಗಳನ್ನು ಸ್ವಾಗತಿಸುವಾಗ ನಾನು ಇದನ್ನು ಸ್ವತಃ ನೋಡಿದ್ದೇನೆ.
ಈ ಸಂದರ್ಭದಲ್ಲಿ, ನಾನು ಇಲ್ಲಿ ನೆರೆದಿರುವ 12 ರಾಷ್ಟ್ರಗಳ ಎಲ್ಲಾ ಕ್ರೀಡಾಪಟುಗಳಿಗೆ, ಅವರ ತರಬೇತುದಾರರು, ಕುಟುಂಬಗಳು ಮತ್ತು ಸಮುದಾಯಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಶ್ರೀಮತಿ ನಡ್ಡಾ ಅವರು ಸೂಚಿಸಿದಂತೆ ಅವರು ವಿಶ್ವದ ಅತ್ಯಂತ ದೊಡ್ಡ ಕ್ಯಾಂಪಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ.
ಸ್ನೇಹಿತರೇ, ವಿಶೇಷ ಮಕ್ಕಳ ಉದ್ದೇಶಕ್ಕಾಗಿ ಡಾ. ಮಲ್ಲಿಕಾ ನಡ್ಡಾ ಅವರ ಭಾವೋದ್ರಿಕ್ತ ಬದ್ಧತೆಯನ್ನು ನಾನು ಮತ್ತೊಮ್ಮೆ ಉಲ್ಲೇಖಿಸುತ್ತೇನೆ. ಬಿಲಾಸ್ಪುರದ ಚೇತನಾ ಎಂಬ ಅವರ ಸಂಸ್ಥೆಯ ಅವಿರತ ಕೆಲಸವು ಇದಕ್ಕೆ ಉದಾಹರಣೆಯಾಗಿದೆ. ಚೇತನಾ, ಈ ಪದವೇ ಅವರ ಚಟುವಟಿಕೆಯ ವ್ಯಾಪ್ತಿಯನ್ನು ವ್ಯಾಖ್ಯಾನಿಸುತ್ತದೆ.
ಕ್ರೀಡೆಯು ಭಾಷೆಯನ್ನು ಮೀರಿದ ಭಾಷೆಯಾಗಿದೆ, ಕ್ರೀಡೆಯು ಶಬ್ದಕೋಶವನ್ನು ಮೀರಿದ ಭಾಷೆಯಾಗಿದೆ, ಕ್ರೀಡೆ ಸಾರ್ವತ್ರಿಕ ಭಾಷೆಯಾಗಿದೆ, ಕ್ರೀಡೆ ಎಲ್ಲಾ ಅಡೆತಡೆಗಳನ್ನು ಮುರಿಯುತ್ತದೆ. ಸಂಕುಚಿತ ಮನಸ್ಸಿನ ಜಾಗದಲ್ಲಿ ಮಾನವೀಯತೆ ವ್ಯಾಖ್ಯಾನಿಸಿದ ಎಲ್ಲಾ ಮಿತಿಗಳನ್ನು ಕ್ರೀಡೆಗಳು ನಿವಾರಿಸುತ್ತವೆ, ಕ್ರೀಡೆಗಳು ಮಾನವ ಮನಸ್ಸನ್ನು ಅನನ್ಯವಾಗಿ ಶಕ್ತಿಯುತಗೊಳಿಸುತ್ತವೆ ಮತ್ತು ವಿಶೇಷವಾಗಿ ಸಮರ್ಥ ಮಕ್ಕಳು, ಹುಡುಗರು ಮತ್ತು ಹುಡುಗಿಯರು ಮತ್ತು ವೃದ್ಧರಿಗೆ ಸಂಬಂಧಿಸಿದ ಕ್ರೀಡೆಗಳು ಬಂದಾಗ, ಅದು ಭರವಸೆಯ ಹೊಸ ಬೆಳಕಿನ ಮೂಲವಾಗಿರುತ್ತದೆ. ಇದು ಒಂದು ಮಹತ್ವದ ಸಂದರ್ಭ.
ಮಹಿಳೆಯರೇ ಮತ್ತು ಮಹನೀಯರೇ, ಅಂಗವೈಕಲ್ಯವು ಮಾನವ ಚೈತನ್ಯವನ್ನು ಪಳಗಿಸಿಲ್ಲ ,ಮುರುಟಿಸಿಲ್ಲ ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ. ಮಾನವ ಚೈತನ್ಯವು ಮುರುಟುವುದನ್ನು ಮೀರಿದೆ, ಮಾನವ ಚೈತನ್ಯವು ತನ್ನನ್ನು ತಾನೇ ಮೇಲ್ಮೈಗೆ ತರುತ್ತದೆ, ಸವಾಲುಗಳ ಅಗಾಧತೆ ಅಥವಾ ತೀವ್ರತೆಯ ಹೊರತಾಗಿಯೂ, ಅದು ನಿಗ್ರಹಿಸಲಾಗದು, ಆದರೆ ನಾವು ಸ್ಪೂರ್ತಿಯನ್ನು ಪ್ರೋತ್ಸಾಹಿಸಿದರೆ, ನಾವು ಸ್ಪೂರ್ತಿಯನ್ನು ಹಿಡಿದರೆ, ನಾವು ವಿಭಿನ್ನ ರೀತಿಯ ತೃಪ್ತಿಯನ್ನು ಪಡೆಯುತ್ತೇವೆ. ಈ ರೀತಿಯ ಸಂದರ್ಭವು ನಮ್ಮೆಲ್ಲರಿಗೂ ತೃಪ್ತಿದಾಯಕ ಕ್ಷಣವಾಗಿದೆ. ಮಹಿಳೆಯರೇ ಮತ್ತು ಮಹನೀಯರೇ, ನಮ್ಮ ಮುಂದಿರುವ ಉದಾಹರಣೆಯು ಅತ್ಯುತ್ತಮ ಉದಾಹರಣೆಯಾಗಿದೆ. ನೀವು ಮೈದಾನದಲ್ಲಿ ಮಾತ್ರವಲ್ಲ, ಜೀವನದ ಆಟದಲ್ಲೂ ಚಾಂಪಿಯನ್ ಆಗಿದ್ದೀರಿ, ಅಲ್ಲಿ ..ನಮ್ಮಲ್ಲಿ ಅನೇಕರು ಬರೇ ಊಹಿಸಬಹುದಾದ ಸವಾಲುಗಳನ್ನು ಎದುರಿಸಿ ನೀವು ಗೆಲ್ಲುತ್ತೀರಿ.
ಅವರ ಕಾರ್ಯಕ್ಷಮತೆಯನ್ನು ನೋಡುವುದು ತುಂಬಾ ಸುಲಭ, ಆದರೆ ಅದರ ಆಳಕ್ಕೆ ಹೋಗಿ ನೋಡಿ. ಅವರು 24X7 ಕಾಲಾವಧಿಯಲ್ಲೂ ಈ ಸವಾಲುಗಳನ್ನು ಎದುರಿಸುತ್ತಾರೆ, ಆದರೂ ಅವರ ಹುರುಪು, ಶಕ್ತಿ ಮತ್ತು ಉತ್ಸಾಹವನ್ನು ನೋಡಿ.. ಕ್ರೀಡಾಪಟುಗಳೇ, ನನ್ನ ಸ್ನೇಹಿತರೇ, ನಿಮ್ಮಲ್ಲಿ ಪ್ರತಿಯೊಬ್ಬರೂ ಸವಾಲುಗಳನ್ನು ವಿಜಯಗಳಾಗಿ ಪರಿವರ್ತಿಸುವ ಮೂಲಕ ನಮಗೆ ಸ್ಫೂರ್ತಿ ನೀಡುತ್ತೀರಿ, ಮಾನವ ಸಂಕಲ್ಪವು ಯಾವುದು ಸಾಧ್ಯ ಎಂಬುದನ್ನು ಹೇಗೆ ಮರುವ್ಯಾಖ್ಯಾನಿಸಬಹುದು ಎಂಬುದನ್ನು ತೋರಿಸುತ್ತದೆ. ನೀವು ಜೀವಂತ ಉದಾಹರಣೆಗಳು, ಮಾನವ ಸ್ವಭಾವದ ಸಾಧ್ಯತೆಯನ್ನು ಮೀರಿ ಯಾವುದೂ ಇಲ್ಲ. ಸವಾಲುಗಳ ಎದುರಿನಲ್ಲಿ ನಿಮ್ಮಿಂದ ಪ್ರತಿಬಿಂಬಿತವಾದ ದೃಢನಿಶ್ಚಯ ಮಾತ್ರ ಬೇಕು.
ಮಹಿಳೆಯರೇ ಮತ್ತು ಮಹನೀಯರೇ, ವಿಶೇಷವಾಗಿ ವಿಕಲಚೇತನರು ರಾಷ್ಟ್ರ ನಿರ್ಮಾಣದಲ್ಲಿ ಪಾತ್ರ ವಹಿಸುತ್ತಾರೆ. ಮಾನವಕುಲದ ಆರನೇ ಒಂದು ಭಾಗಕ್ಕೆ ನೆಲೆಯಾಗಿರುವ ಅತಿ ದೊಡ್ಡ, ಮತ್ತು ರೋಮಾಂಚಕವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವ ಭಾರತ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ದಿವ್ಯಾಂಗರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಆಚರಿಸುವ ಮೂಲಕ ಆಡಳಿತವು ಹೆಚ್ಚು ಅಂತರ್ಗತವಾಗುತ್ತಿರುವುದನ್ನು ನೋಡಿದೆ.
ನಮ್ಮ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ, ಚುನಾವಣಾ ಆಯೋಗವು ಮೂಲಭೂತ ಹಕ್ಕು, ಭೂಮಿಯ ಮೇಲಿನ ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ, ಚುನಾವಣಾ ಮತಪತ್ರದ ಮೂಲಕ ಅವನ ಅಥವಾ ಅವಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಭಾಗವಹಿಸುವ ಮೂಲಭೂತ ಹಕ್ಕು ಮತ್ತು ಮತವನ್ನು ಅವರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಕ್ರಮಗಳನ್ನು ಮತ್ತು ಸಕಾರಾತ್ಮಕ ನೀತಿಗಳನ್ನು, ನವೀನ ಕ್ರಮಗಳನ್ನು ತೆಗೆದುಕೊಂಡಿದೆ.
2024ರ ಚುನಾವಣೆಯ ಸಮಯದಲ್ಲಿ, ದೂರದ ಪ್ರದೇಶಗಳು, ಕಷ್ಟಕರ ಪ್ರದೇಶಗಳು, ಅಂಗವಿಕಲತೆಗಳು, ನಾವು ಇಲ್ಲಿ ನೋಡುವಂತಹವು, ವೃದ್ಧಾಪ್ಯದ ಅಂಗವಿಕಲತೆಗಳು, ಎಲ್ಲವನ್ನೂ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ಜಯಿಸಲಾಗಿದೆ, ಮತದಾನದ ಹಕ್ಕನ್ನು ತಳಮಟ್ಟದಲ್ಲಿಯೂ ಸಾಕಾರಗೊಳಿಸಲಾಗಿದೆ ಎಂಬುದನ್ನು ನಾನು ನೋಡಿದ್ದೇನೆ.
ಮಹಿಳೆಯರೇ ಮತ್ತು ಮಹನೀಯರೇ ಮತ್ತು ದೇಶದ ಹೊರಗಿನ ನನ್ನ ಸ್ನೇಹಿತರೇ, ನಮ್ಮ ವಿದೇಶಿ ಸ್ನೇಹಿತರೇ, ಶ್ರೀ ನರೇಂದ್ರ ಮೋದಿ ಅವರ ಸರ್ಕಾರವು ತನ್ನ ಮೊದಲ ಅಧಿಕಾರಾವಧಿಯಲ್ಲಿ ವಿಕಲಚೇತನರ ಹಕ್ಕುಗಳ ಕಾಯ್ದೆಯನ್ನು ಅಂಗೀಕರಿಸಿತು. ಈಗ ಅವರು ಐತಿಹಾಸಿಕ ಮೂರನೇ ಅಧಿಕಾರಾವಧಿಯಲ್ಲಿದ್ದಾರೆ, ಇದು 60 ವರ್ಷಗಳ ನಂತರ ಮೊದಲ ಬಾರಿಗೆ ಭಾರತೀಯ ಪ್ರಧಾನಿಗೆ ಜನರು ಉಡುಗೊರೆಯಾಗಿ ನೀಡಿದ ಗೌರವವಾಗಿದೆ. ಚುನಾವಣೆಯ ಸಮಯದಲ್ಲಿ ವಿಶೇಷ ಸರತಿ ಸಾಲುಗಳು, ಮನೆಯಿಂದ ಮತದಾನ, ಇವಿಎಂಗಳಲ್ಲಿ ಬ್ರೈಲ್ ವೈಶಿಷ್ಟ್ಯಗಳು ..ಹೀಗೆ ಚುನಾವಣಾ ಪ್ರಕ್ರಿಯೆಯಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇದು ಇಲ್ಲಿಗೆ ನಿಲ್ಲುವುದಿಲ್ಲ ನನ್ನ ಸ್ನೇಹಿತರೇ, ಅವರಿಗೆ ಮೀಸಲಾತಿ ಒದಗಿಸಲಾಗಿದೆ. ಇದರಿಂದ ಅವರು ಶಿಕ್ಷಣ ಪಡೆಯುತ್ತಾರೆ. ಈ ಹಿಂದೆ ಶೇ.3ರಷ್ಟಿದ್ದ ಮೀಸಲಾತಿಯನ್ನು ಈಗ ಶೇ.5ಕ್ಕೆ ಏರಿಸಲಾಗಿದೆ.
ಐಎಎಸ್ ಪ್ರೊಬೇಷನರಿಗಳು, ಭಾರತೀಯ ವಿದೇಶಾಂಗ ಸೇವೆಗಳ ಪ್ರೊಬೇಷನರಿಗಳು ಮತ್ತು ಕೇಂದ್ರ ನಾಗರಿಕ ಸೇವೆಗಳ ಪ್ರೊಬೇಷನರಿಗಳು ಬಂದಾಗ, ಅವರಲ್ಲಿ ನಾನು ಸವಾಲುಗಳನ್ನು ಎದುರಿಸುವ ವಿಕಲಚೇತನರನ್ನು ಅಭಿನಂದಿಸುವಾಗ ಅದು ನನಗೆ ಸಂತೋಷದ ಅನುಭವವನ್ನು ತರುತ್ತಿತ್ತು. ಅವರು ಯೋಗ್ಯ ಸೇವೆಗಳು, ಹಿರಿಯ ಸೇವೆಗಳ ಸದಸ್ಯರು, ಅಂದರೆ ಅದರರ್ಥ ಭಾರತವು ಭರವಸೆಯ ವಿಶ್ವಾಸವನ್ನು ಮೂಡಿಸಲು ಕೈ ಹಿಡಿದು ಮುನ್ನಡೆಸುವ ರಾಷ್ಟ್ರವಾಗಿದೆ ಮತ್ತು ಅಲ್ಲಿ ಪ್ರತಿಯೊಬ್ಬರಿಗೂ ಅರ್ಥಪೂರ್ಣ ಜೀವನದ ಅವಕಾಶವಿದೆ.
ಭಾರತೀಯ ಸಂಕೇತ ಭಾಷೆ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು 2015 ರಲ್ಲಿ ಮತ್ತು ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಸಂಸ್ಥೆಯನ್ನು 2019 ರಲ್ಲಿ ಸ್ಥಾಪಿಸಲಾಯಿತು. ಈ ವಿಶೇಷ ವಿಭಾಗಕ್ಕಾಗಿ ತೆಗೆದುಕೊಳ್ಳಲಾಗುತ್ತಿರುವ ಸಕಾರಾತ್ಮಕ ನವೀನ ಕ್ರಮಗಳನ್ನು ನಾವು ಇನ್ನೂ ತ್ವರಿತಗೊಳಿಸುತ್ತಿದ್ದೇವೆ. ಕ್ರೀಡೆಯ ವಿಷಯಕ್ಕೆ ಬಂದಾಗ, ನಾನು ನಿಮಗೆ ಹೇಳುತ್ತೇನೆ, ಎಲ್ಲಾ ರೀತಿಯ ವಿಶೇಷ ಚೇತನ ನಾಗರಿಕರಿಗಾಗಿ ಗ್ವಾಲಿಯರ್ ನಲ್ಲಿ ಅಂಗವೈಕಲ್ಯ ಕ್ರೀಡಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
2015ರಲ್ಲಿ ಪ್ರಾರಂಭಿಸಲಾದ ಅಕ್ಸೆಸಬಲ್ ಇಂಡಿಯಾ ಅಭಿಯಾನವು ಈ ವಿಶೇಷ ಚೇತನ ಜನರಿಗೆ ಸ್ನೇಹಪರವಾಗಿದೆ, ಇದು ಎಲ್ಲಾ ಸಾಂಸ್ಥಿಕ ಮೂಲಸೌಕರ್ಯಗಳು ವಿಶೇಷ ಚೇತನ ಜನರಿಗೆ ಅನುಕೂಲಕರವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಲೆಕ್ಕಪರಿಶೋಧನೆಯನ್ನು ನಡೆಸುತ್ತದೆ. ಈ ದೇಶದ ಯಾವುದೇ ಸಂಸ್ಥೆ, ಶೈಕ್ಷಣಿಕ, ಕೈಗಾರಿಕಾ ಅಥವಾ ಇತರ ಯಾವುದೇ ಸಂಸ್ಥೆಗಳು ಈ ವರ್ಗದ ಜನರಿಗೆ ಸೌಲಭ್ಯವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಬೇಕಾದಂತಹ ಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ.
ಭಾರತವು ಫಿಟ್ ಇಂಡಿಯಾ, ಖೇಲೋ ಇಂಡಿಯಾ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಂತಹ ಮಹತ್ವದ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳ ಸಂಖ್ಯೆ ಹೆಚ್ಚುತ್ತಿದೆ. ಜೀವನದ ಪ್ರತಿಯೊಂದು ಹಂತದಲ್ಲೂ ಇಂತಹ ಸಾಧನೆ ಆಗುತ್ತಿದೆ. ನಮ್ಮ ಜನಸಂಖ್ಯಾ ಗಾತ್ರಕ್ಕೆ ಅನುಗುಣವಾದ ಗಮ್ಯಸ್ಥಾನವನ್ನು ನಾವು ತಲುಪಬೇಕು. ಮತ್ತು ನಾವು ಅದರತ್ತ ಸಾಗುತ್ತಿದ್ದೇವೆ.
ಈ ಕಾರ್ಯಕ್ರಮವು ಬಹಳ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುವ ಭಾರತದ ಬದ್ಧತೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಮಹಿಳೆಯರೇ ಮತ್ತು ಮಹನೀಯರೇ, ಈ ಅಡಿಪಾಯದ ಆಧಾರದ ಮೇಲೆ ಭಾರತವು ದಿಟ್ಟ ಮತ್ತು ಅರ್ಹ ಹೆಜ್ಜೆ ಇಟ್ಟಿದೆ. ಇಂತಹ ಕ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ನೀವು ಎಂದಿಗೂ ಊಹಿಸಿರಲಿಕ್ಕಿಲ್ಲ ಮತ್ತು ಆ ದಿಟ್ಟ ಹೆಜ್ಜೆಯೆಂದರೆ, 2036 ರ ಒಲಿಂಪಿಕ್ಸ್ ಗೆ ಸಂಬಂಧಿಸಿದ್ದು, ಭಾರತವು ಆ ಕ್ರೀಡಾಕೂಟದ ಆತಿಥ್ಯ ವಹಿಸಲು ಅಧಿಕೃತವಾಗಿ ಬಿಡ್ ಮಾಡುವ ಮೂಲಕ ಹೆಜ್ಜೆ ಇಟ್ಟಿದೆ.
ಈ ರಾಷ್ಟ್ರದ ಮಹತ್ವಾಕಾಂಕ್ಷೆಯ ದೃಷ್ಟಿಕೋನ/ಚಿಂತನೆ ಮತ್ತು ಈ ನಿಲುವು ಕ್ರೀಡೆಯ ವಿಷಯಕ್ಕೆ ಬಂದಾಗ ಜಾಗತಿಕ ಪರಿಸ್ಥಿತಿಗಳ ಕೇಂದ್ರ ಸ್ಥಾನದಲ್ಲಿರಲು ಭಾರತ ಕೈಗೊಂಡಿರುವ ಸರ್ವ ಸಿದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸ್ನೇಹಿತರೇ, ಭಾರತವು 2036ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಗೌರವವನ್ನು ಪಡೆಯುವುದಲ್ಲದೆ, ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಪರಂಪರೆಯ ಜೊತೆಗೆ ಯಶಸ್ಸಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂಬ ಭರವಸೆ ಮತ್ತು ವಿಶ್ವಾಸ ನಮಗಿದೆ. ಮತ್ತು ಯಾಕೆ ಹಾಗಾಗಬಾರದು? ತುಂಬಾ ಹಿಂದೆಯೇನಲ್ಲ, ಸ್ವಲ್ಪ ಸಮಯದ ಹಿಂದೆ, ಈ ದೇಶವು ಜಿ 20 ಅನ್ನು ನಂಬಲಾಗದಂತಹ ಮಾನದಂಡಗಳನ್ನು ಅನುಸರಿಸಿ ಆಯೋಜಿಸುವ ಮೂಲಕ ಇಡೀ ಜಗತ್ತಿಗೆ ತನ್ನನ್ನು ತಾನು ಪ್ರದರ್ಶಿಸಿತು.
ಅಲ್ಲಿ ದಾಖಲೆಯ ಒಂದು ಮಟ್ಟವಿತ್ತು, ಮಾನದಂಡವಿತ್ತು. ದೇಶದ ಪ್ರತಿಯೊಂದು ರಾಜ್ಯ, ದೇಶದ ಪ್ರತಿಯೊಂದು ಕೇಂದ್ರಾಡಳಿತ ಪ್ರದೇಶವು ಜಿ 20 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿತ್ತು. ನಮ್ಮಲ್ಲಿ ಅಗತ್ಯವಾದ ಮೂಲಸೌಕರ್ಯ ಮತ್ತು ಸೌಲಭ್ಯಗಳಿವೆ ಮತ್ತು ಆದ್ದರಿಂದ 2036 ರ ಒಲಿಂಪಿಕ್ಸ್ ಗೆ ನಮ್ಮ ಬಿಡ್ ಅತ್ಯಂತ ದೃಢವಾಗಿದೆ, ಮತ್ತು ಅರ್ಹವಾಗಿದೆ, ಅದು ಫಲಪ್ರದವಾಗುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಒಟ್ಟು ಜನಸಂಖ್ಯೆಯ ಆರನೇ ಒಂದು ಭಾಗವನ್ನು ಒಳಗೊಂಡಿರುವ ಜನಸಂಖ್ಯೆಯೊಂದಿಗೆ, ಅಭೂತಪೂರ್ವ ಆರ್ಥಿಕ ಪ್ರಗತಿಯನ್ನು ಹೊಂದಿರುವ ರಾಷ್ಟ್ರವು ಜಾಗತಿಕ ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿದೆ, ಈ ಸಮಯದಲ್ಲಿ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗುವ ಸಂದರ್ಭದಲ್ಲಿ ಮಾಂಡವೀಯ ಜೀ ನಾವು ಕ್ರೀಡೆಯಲ್ಲಿ ಕನಿಷ್ಠ ಆರನೇ ಒಂದು ಭಾಗದಷ್ಟು ಪಾಲನ್ನು ಹೊಂದಿರಬೇಕು, ಇವು ನಿಮಗೆ ಸವಾಲುಗಳಾಗಿವೆ. 2047ರಲ್ಲಿ ನಮ್ಮ ವಿಕಸಿತ ಭಾರತ ಗೆ ಸಹ ಅಲ್ಲಿ ಸವಾಲು ಇದೆ. ನಮ್ಮ ತಲಾ ಆದಾಯವು ಎಂಟು ಪಟ್ಟು ಹೆಚ್ಚಾಗಬೇಕು. ನವೀನ್ ಜಿಂದಾಲ್ ಅವರಂತಹ ಜನರು ಮತ್ತು ಇತರರು ದೊಡ್ಡ ಕೊಡುಗೆ ನೀಡಬೇಕಾಗಿದೆ.
ಸ್ನೇಹಿತರೇ, ಭಾರತದಲ್ಲಿ ಕ್ರೀಡೆಯ ಬಗೆಗಿನ ಮನೋಭಾವದಲ್ಲಿ ನಾವೆಲ್ಲರೂ ಭಾರೀ ಬದಲಾವಣೆಯನ್ನು ಗಮನಿಸಬಹುದು. ನಾನು ಮಗುವಾಗಿದ್ದಾಗ, ನಾವು ಏನನ್ನು ಕೇಳುತ್ತಿದ್ದೆವು ಗೊತ್ತೇ? 'पढ़ोगे लिखोगे बनोगे नवाब, खेलोगे कूदोगे बनोगे खराब। ಈ ಚಿಂತನೆ ಕ್ರೀಡಾಪರವಾದುದಾಗಿರಲಿಲ್ಲ. ಕ್ರೀಡೆಗಳು ಹಿಂದೆ ಇದ್ದವು ಅಂದರೆ ಪ್ರಾಮುಖ್ಯತೆ ಪಡೆದಿರಲಿಲ್ಲ, ಈಗ ಸಮಯ ಬದಲಾಗಿದೆ. ಹೊಸ ಮಂತ್ರ ಬಂದಿದೆ ಅದೆಂದರೆ "“किताब भी जरूरी खेल भी जरूरी दोनों के बिना जिंदगी अधूरी।” ದೇಶಾದ್ಯಂತ ಈ ಸಂದೇಶ ಹರಡಿದೆ.
ಮಹಿಳೆಯರೇ ಮತ್ತು ಮಹನೀಯರೇ ಕ್ರೀಡೆಯನ್ನು ಇನ್ನು ಮುಂದೆ ಪಠ್ಯೇತರ ಚಟುವಟಿಕೆಯಾಗಿ ನೋಡಲಾಗುವುದಿಲ್ಲ. ಇದು ಶಿಕ್ಷಣ ಮತ್ತು ಜೀವನದ ಅತ್ಯಗತ್ಯ ಭಾಗವಾಗಿದೆ. ಏಕತೆಯನ್ನು ಬೆಳೆಸುವ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ತುಂಬುವ ಚಾರಿತ್ರ್ಯ ನಿರ್ಮಾಣದ ವಾಹನವಾಗಿದೆ. ಈ ಸಂದರ್ಭದಲ್ಲಿ ನಾನು ಇಡೀ ಸಮಾಜಕ್ಕೆ ಎದುರಾಗಿರುವ ಗಂಭೀರ ಕಳವಳವನ್ನು ತೋರಿಸಲು ಬಯಸುತ್ತೇನೆ ಮತ್ತು ಇದು ತುಂಬಾ ಗಂಭೀರವಾಗಿದೆ. ಇದು ಆತಂಕಕಾರಿಯಾಗುತ್ತಿದೆ. ಇಂದಿನ ಅತ್ಯಂತ ವೇಗದ ಜಗತ್ತಿನಲ್ಲಿ ನಮ್ಮ ಯುವಜನರು ಮತ್ತು ಮಕ್ಕಳು ಸಣ್ಣ ಪ್ಲಾಸ್ಟಿಕ್ ಪರದೆಗಳಿಂದ ಹೆಚ್ಚು ಆಕರ್ಷಿತರಾಗಿ ಅದರಲ್ಲೇ ಮುಳುಗಿ ಹೋಗುತ್ತಿದ್ದಾರೆ, ಅವುಗಳೆಂದರೆ. ಮೊಬೈಲ್, ಇದು ನಮ್ಮ ಯುವಜನರನ್ನು, ಮಕ್ಕಳನ್ನು ನಿಜವಾದ ಆಟದ ಮೈದಾನಗಳಿಂದ ದೂರ ತಳ್ಳಿ ಡಿಜಿಟಲ್ ಆಟದ ಮೈದಾನಗಳಿಗೆ ದೂಡುತ್ತಿದೆ.
ಈ ಸಣ್ಣ ಪ್ಲಾಸ್ಟಿಕ್ ಪರದೆಗಳಿಂದಾಗಿ ನಿಮ್ಮ ಮಕ್ಕಳು ನೈಜ ಆಟದ ಮೈದಾನಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವಂತೆ ಪ್ರತಿಯೊಬ್ಬ ಪೋಷಕರಲ್ಲಿಯೂ ನಾನು ಕೇಳಿಕೊಳ್ಳುತ್ತೇನೆ. ಈ ಡಿಜಿಟಲ್ ಗೀಳು ಮಕ್ಕಳ ಈ ಪೀಳಿಗೆ, ನೈಜ ಆಟದ ಮೈದಾನದ ರೋಮಾಂಚನ, ಉತ್ಸಾಹ, ಅರಿವನ್ನು ಕಸಿದುಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳೋಣ.
ಮಹಿಳೆಯರೇ ಮತ್ತು ಮಹನೀಯರೇ, ಈ ವಿಶೇಷ ಒಲಿಂಪಿಕ್ಸ್ ಸಾರ್ವತ್ರಿಕ ಒಳಗೊಳ್ಳುವಿಕೆಗೆ ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ, ಅಲ್ಲಿ ಸಮಾಜವು ತನ್ನ ಸರ್ವ ಸಾಮರ್ಥ್ಯಗಳನ್ನು ಬಳಸಿಕೊಂಡಾಗ ಏನು ಮಾಡಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬ ಕ್ರೀಡಾಪಟು ಸಾಬೀತುಪಡಿಸುತ್ತಾನೆ. ತರಬೇತುದಾರರು, ಕುಟುಂಬಗಳು ಮತ್ತು ಮಾರ್ಗದರ್ಶಕರ ಸಮರ್ಪಿತ ಬೆಂಬಲವನ್ನು ನಾವೆಲ್ಲರೂ ಪ್ರಶಂಸಿಸೋಣ.
ಈ ಕಾರ್ಯಕ್ರಮವು ನಮ್ಮೆಲ್ಲರಿಗೂ ಸ್ಪೂರ್ತಿಯನ್ನು ಕೊಡಲಿ, ಯಶಸ್ಸು, ನ್ಯಾಯೋಚಿತ ಆಟದಿಂದ ಗುರುತಿಸಲ್ಪಡಲಿ. ತಮ್ಮ ಚಿಕಾಗೋ ಭಾಷಣದಿಂದ ಇಡೀ ಜಗತ್ತನ್ನು ಮಂತ್ರಮುಗ್ಧಗೊಳಿಸಿದ ನಮ್ಮ ಮಹಾನ್ ಸಾಧುಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರನ್ನು ನಾನು ಉಲ್ಲೇಖಿಸುತ್ತಿದ್ದೇನೆ, ಅವರು ನಮಗೆ "ಎಚ್ಚರವಾಗಿ ಎದ್ದೇಳಿ ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ" ಎಂಬ ಸಂದೇಶವನ್ನು ನೀಡಿದರು.
ಮಹಿಳೆಯರೇ ಮತ್ತು ಮಹನೀಯರೇ, ನಾನು ಈ ವಿಶೇಷ ಒಲಿಂಪಿಕ್ಸ್ ಏಷ್ಯಾ-ಪೆಸಿಫಿಕ್ ಬೌಸೆ ಮತ್ತು ಬೌಲಿಂಗ್ ಸ್ಪರ್ಧೆ 2024 ಉದ್ಘಾಟನೆಯಗಿದೆ ಎಂದು ಘೋಷಿಸುತ್ತೇನೆ.
ಧನ್ಯವಾದಗಳು.
*****
(Release ID: 2075056)
Visitor Counter : 6