ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಮೈಸೂರು ಸಂಗೀತ ಸುಗಂಧ ಉತ್ಸವ 2024 ಇದರ ಪೂರ್ವಭಾವಿ ಕಾರ್ಯಕ್ರಮಗಳನ್ನು ಪ್ರಕಟಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ

Posted On: 30 OCT 2024 8:23PM by PIB Bengaluru

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಸಂಗೀತ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಕರ್ನಾಟಕದ ಶ್ರೀಮಂತ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಆಚರಣೆಯಾದ ಮೈಸೂರು ಸಂಗೀತ ಸುಗಂಧ ಉತ್ಸವ 2024 ಅನ್ನು ಸಹರ್ಷಚಿತ್ತದಿಂದ ಘೋಷಿಸುತ್ತಿದೆ. 2024 ರ ನವೆಂಬರ್ 8 ರಿಂದ 10 ರವರೆಗೆ ಮೈಸೂರಿನಲ್ಲಿ ನಡೆಯಲಿರುವ ಉತ್ಸವವು ಕರ್ನಾಟಕದ ಮಹೋನ್ನತ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ, ವಿಶೇಷವಾಗಿ ಕರ್ನಾಟಕ ಸಂಗೀತಕ್ಕೆ ಅದರ ಆಳವಾದ ಕೊಡುಗೆಗಳನ್ನು ತೋರಿಸಿಕೊಡುತ್ತದೆ.

ಮೈಸೂರು ಸಂಗೀತ ಸುಗಂಧ ಉತ್ಸವವು ಭಾರತ ಮತ್ತು ಪ್ರಪಂಚದಾದ್ಯಂತದ ಹಬ್ಬಿರುವ ಸಂಗೀತ ಪ್ರಿಯರಿಗೆ ಮೈಸೂರನ್ನು ಪ್ರಮುಖ ತಾಣವಾಗಿ ಗುರುತಿಸುವ ಗುರಿಯನ್ನು ಹೊಂದಿದೆ. ಈ ಉತ್ಸವದ ಮೂಲಕ, ಕರ್ನಾಟಕ ಸಂಗೀತದ ಅನಾದಿ ಕಾಲದ ಸಂಪ್ರದಾಯಗಳ ಕೇಂದ್ರವಾಗಿ ಮೈಸೂರು ಮಹತ್ವ ಪಡೆಯಲಿದೆ. ಈ ಸಂಗೀತ ಆಚರಣೆಯು ಮೈಸೂರಿನ ಸುತ್ತಮುತ್ತಲಿನ ಕಡಿಮೆ-ಪರಿಚಿತವುಳ್ಳ ವಿವಿಧ ಸ್ಥಳಗಳನ್ನು ಪ್ರಚಾರ ಮಾಡಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಪ್ರದೇಶದ ರಮಣೀಯ ಭೂದೃಶ್ಯಗಳು, ಐತಿಹಾಸಿಕ ದೇವಾಲಯಗಳು ಮತ್ತು ಅನನ್ಯ ಅನುಭವಗಳನ್ನು ಬಯಸುವ ಪ್ರವಾಸಿಗರಿಗೆ ಅನನ್ಯ ಹಾಗೂ ವಿನೂತನ ಸಾಂಸ್ಕೃತಿಕ ಸಂಪತ್ತುಗಳನ್ನು ಅನಾವರಣಗೊಳಿಸುತ್ತದೆ.  ಈ ವೈಶಿಷ್ಟ್ಯಗಳನ್ನು ಗುರುತಿಸುವ ಮೂಲಕ, ಪ್ರಾದೇಶಿಕ ಪ್ರವಾಸೋದ್ಯಮ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ಸಮುದಾಯಗಳನ್ನು ಬೆಂಬಲಿಸಲು ಕೇಂದ್ರ ಸಚಿವಾಲಯವು ಬಯಸುತ್ತಿದೆ.

ಕರ್ನಾಟಕ ಸಂಗೀತದ ವಿಕಾಸದಲ್ಲಿ ಮಹತ್ವದ ಪ್ರಭಾವ ಬೀರಿದ ದಾಸ ಸಂಪ್ರದಾಯಕ್ಕೆ ಅದರ ಗೌರವ ನೀಡುವುದು ಈ ಉತ್ಸವದ ವಿಶೇಷತೆಯಾಗಿದೆ.  ದಾಸರ ಸಂಯೋಜನೆಗಳು ಮತ್ತು ಕೊಡುಗೆಗಳು ಈ ಬೃಹತ್ ಶಾಸ್ತ್ರೀಯ ಕಲಾ ಪ್ರಕಾರವನ್ನು ರೂಪಿಸಿವೆ, ಹಾಗೂ ಈ ಕಾಲಾತೀತ ಸಂಗೀತ ಪರಂಪರೆಗಳನ್ನು ಆಚರಿಸಲು ಮೈಸೂರನ್ನು ಸೂಕ್ತವಾದ ಸ್ಥಳವನ್ನಾಗಿ ಮಾಡಿದೆ.

ಕರ್ನಾಟಕದಾದ್ಯಂತ ಉತ್ಸಾಹವದ ವಾತಾವರಣವನ್ನು ಉಂಟುಮಾಡಲು ಮತ್ತು ವಿವಿಧ ಸಮುದಾಯಗಳನ್ನು ಸಂಪರ್ಕಿಸಲು, ಸಾಂಸ್ಕೃತಿಕವಾಗಿ ಮಹತ್ವದ ನಾಲ್ಕು ಸ್ಥಳಗಳಲ್ಲಿ ನಡೆಯಲಿರುವ ಪೂರ್ವಭಾವಿ ಕಾರ್ಯಕ್ರಮಗಳ ಸರಣಿಯನ್ನು ಘೋಷಿಸಲು ಕೇಂದ್ರ ಸಚಿವಾಲಯವು ಸಂತೋಷವಾಗಿದೆ. ಈ ಪೂರ್ವಭಾವಿ ಕಾರ್ಯಕ್ರಮಗಳ ಸರಣಿಗಳು ವಿಶಿಷ್ಟ ಕರ್ನಾಟಕ ಸಂಗೀತಗಾರರನ್ನು ಒಳಗೊಂಡಿರುತ್ತವೆ ಮತ್ತು ಮುಖ್ಯ ಉತ್ಸವದ ಪೂರಕ ಸಿದ್ಧತೆ ನಿರ್ಮಾಣ ವ್ಯವಸ್ಥೆಯನ್ನು ರಚಿಸುತ್ತವೆ.

 ಪೂರ್ವಭಾವಿ ಕಾರ್ಯಕ್ರಮಗಳ ವೇಳಾಪಟ್ಟಿ:

 1. ಪೂರ್ವಭಾವಿ ಕಾರ್ಯಕ್ರಮಗಳ ಸರಣಿ I - ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್.ಜಿ.ಎಂ.ಎ), ಬೆಂಗಳೂರು

 ದಿನಾಂಕ: 2ನೇ ನವೆಂಬರ್ 2024
 ಸ್ಥಳ: ಎನ್.ಜಿ.ಎಂ.ಎ., ಬೆಂಗಳೂರು
ವಿಳಾಸ: 49, ಜಿ.ಎಫ್, ಮಾಣಿಕ್ಯವೇಲು ಮ್ಯಾನ್ಷನ್, ಅರಮನೆ ರಸ್ತೆ, ವಸಂತ ನಗರ, ಬೆಂಗಳೂರು, ಕರ್ನಾಟಕ 560 052.
ಕಲಾವಿದರು: ಆರ್.ಎ. ರಮಾಮಣಿ, ಕರ್ನಾಟಕ ಸಂಗೀತ ಗಾಯಕರು 

 2. ಪೂರ್ವಭಾವಿ ಕಾರ್ಯಕ್ರಮಗಳ ಸರಣಿ II - ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನ, ದೊಡ್ಡಮಲ್ಲೂರು, ಚನ್ನಪಟ್ಟಣ ತಾಲೂಕು

ದಿನಾಂಕ: 2ನೇ ನವೆಂಬರ್ 2024
ಸ್ಥಳ ಮತ್ತು ವಿಳಾಸ: ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನ, ಚನ್ನಪಟ್ಟಣ ತಾಲ್ಲೂಕು
ಕಲಾವಿದರು: ಟಿ.ವಿ. ರಾಮಪ್ರಸಾದ್, ಕರ್ನಾಟಕ ಗಾಯಕರು 

 3. ಪೂರ್ವಭಾವಿ ಕಾರ್ಯಕ್ರಮಗಳ ಸರಣಿ III - ರಾಮಮಂದಿರಂ, ರುದ್ರಪಟ್ಟಣ, ಹಾಸನ ಜಿಲ್ಲೆ

 ದಿನಾಂಕ: 2ನೇ ನವೆಂಬರ್ 2024
 ಸ್ಥಳ: ರಾಮಮಂದಿರಂ, ರುದ್ರಪಟ್ಟಣ
 ಕಲಾವಿದರು: ಅಮಿತ್ ನಾಡಿಗ್, ಕರ್ನಾಟಕ ಕೊಳಲುವಾದಕರು


 4. ಪೂರ್ವಭಾವಿ ಕಾರ್ಯಕ್ರಮಗಳ ಸರಣಿ IV - ಕಲಾನಾಥ ಸತಮನೋಸ್ತವ ಸಭಾಭವನ, ಆರಗ

 ದಿನಾಂಕ: 3ನೇ ನವೆಂಬರ್ 2024
 ಸ್ಥಳ: ಕಲಾನಾಥ ಶತಮನೋಸ್ತವ ಸಭಾಭವನ, ಆರಗ
ಕಲಾವಿದರು: ವಿಷ್ಣುದೇವ್ ನಂಬೂದಿರಿ, ಕರ್ನಾಟಕ ಗಾಯಕ

ಈ ಪೂರ್ವಭಾವಿ ಕಾರ್ಯಕ್ರಮಗಳ ಸರಣಿಯು ಕರ್ನಾಟಕದ ಸಂಗೀತ ಪರಂಪರೆಯ ಬಗ್ಗೆ ಸಂಗೀತ ಆಸಕ್ತರಲ್ಲಿ ಇನ್ನೂ ವಿಶೇಷವಾದ ಹಾಗೂ ಆಳವಾದ ಮೆಚ್ಚುಗೆಯನ್ನು ಬೆಳೆಸುವ ಗುರಿಯನ್ನು ಹೊಂದಿವೆ, ಮತ್ತು ಮೈಸೂರು ಸಂಗೀತ ಸುಗಂಧ ಉತ್ಸವದ ವೈಭವದಲ್ಲಿ ಪಾಲ್ಗೊಳ್ಳಲು ಸಮುದಾಯಗಳನ್ನು ಪ್ರೇರೇಪಿಸುತ್ತದೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಈ ಸಂಗೀತ ಆಚರಣೆಗಳಲ್ಲಿ ಭಾಗವಹಿಸಲು ಮತ್ತು ಕರ್ನಾಟಕದ ಸಾಂಸ್ಕೃತಿಕ ಮತ್ತು ರಮಣೀಯ ಸೌಂದರ್ಯವನ್ನು ಅನ್ವೇಷಿಸಲು ಈ ಮೂಲಕ ಎಲ್ಲರನ್ನು ಆಹ್ವಾನಿಸುತ್ತದೆ.

 

*****


(Release ID: 2069760)
Read this release in: English , Urdu , Hindi