ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಉತ್ತರ ಪ್ರದೇಶದ ಅಲಿಗಢದ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಸ್ಟೇಟ್ ಯೂನಿವರ್ಸಿಟಿಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿಯವರ ಭಾಷಣದ ಪಠ್ಯ (ಆಯ್ದ ಭಾಗಗಳು)

Posted On: 21 OCT 2024 2:21PM by PIB Bengaluru

ಉತ್ತರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಪತಿ ಶ್ರೀಮತಿ ಆನಂದಿಬೆನ್ ಪಟೇಲ್, ರಾಜ್ಯಪಾಲರು ಶಿಕ್ಷಣದ ಬಗ್ಗೆ ಭಾವುಕ ಬದ್ಧತೆಗೆ ಉದಾಹರಣೆಯಾಗಿದ್ದಾರೆ. ಅವರು ದೊಡ್ಡ ಬದಲಾವಣೆಯನ್ನು ತಂದಿದ್ದಾರೆ ಮತ್ತು ನಾನು ಇಲ್ಲಿ ಒಂದನ್ನು ನೋಡಿದ್ದೇನೆ, ಹೆಸರುಗಳು ಮತ್ತು ಪ್ರಮಾಣಪತ್ರಗಳು ಹಾಗು ಅಂಕಪಟ್ಟಿಗಳು ಎಲ್ಲವನ್ನೂ ವಿದ್ಯುನ್ಮಾನವಾಗಿ ಅಪ್ಲೋಡ್ ಮಾಡಲಾಗಿದೆ.

ನಾನು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ, ಕುಲಪತಿ ಪಾತ್ರದ ವಿಷಯಕ್ಕೆ ಬಂದಾಗ ಅವರು ತುಂಬಾ ಮುಂದಾಲೋಚನೆಯನ್ನು ಹೊಂದಿದ್ದರು ಮತ್ತು ಆ ಕಾರಣದಿಂದ ನನ್ನನ್ನು ನಿಭಾಯಿಸಿದ್ದರು. ಗೌರವಾನ್ವಿತ ರಾಜ್ಯಪಾಲರು ಕುಲಪತಿ ಪಾತ್ರವನ್ನು ಅತ್ಯುನ್ನತ ಉತ್ಸಾಹ ಮತ್ತು ಬದ್ಧತೆಯ ಉದಾಹರಣೆಯೊಂದಿಗೆ ವ್ಯಾಖ್ಯಾನಿಸುತ್ತಿದ್ದಾರೆ. ಅವರು ಎರಡು ಬಾರಿ ಇಲ್ಲಿಗೆ ಬಂದಿದ್ದಾರೆ ಮತ್ತು ಉತ್ತರ ಪ್ರದೇಶ ರಾಜ್ಯವು ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಇಂತಹ ಶಿಕ್ಷಣ ತಜ್ಞರನ್ನು, ಇಂತಹ ಪ್ರೇರಕ, ಸ್ಪೂರ್ತಿದಾಯಕ ರಾಜ್ಯಪಾಲರನ್ನು ಹೊಂದಲು ಅದೃಷ್ಟಶಾಲಿಯಾಗಿದೆ.

ನಾನು ಆವರಣಕ್ಕೆ ಕಾಲಿಟ್ಟಾಗ, हमने सबसे पहले एक काम किया महामहिम राज्यपाल ने और मैने ‘मां के नाम एक पेड़’ और जब यहां आकर देखा  ಅದು ಎಷ್ಟೊಂದು ಚಿಂತನಶೀಲವಾಗಿದೆ.  ಅದು  ಪರಿಸರಕ್ಕೆ ಸಂಬಂಧಿಸಿದ ವೈದಿಕ ಪಠಣ.

हमें याद रखना पड़ेगा हमारे पास रहने के लिए पृथ्वी के अलावा कोई दूसरी जगह नहीं है इसी का सृजन करना पड़ेगा

ಆದ್ದರಿಂದ ನಾನು ಇಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ, ಸಿಬ್ಬಂದಿ ವರ್ಗದ ಪ್ರತಿಯೊಬ್ಬ ಸದಸ್ಯ, ಅಧ್ಯಾಪಕ ವೃಂದದ ಸದಸ್ಯ, ಈ ಆವರಣದಲ್ಲಿ के अंदर इस प्रांगण में मां के नाम पेड जरूर लगाए यहां देखा है मैंने सब ठीक उन्नति के ऊपर है पर यह पक्ष कमजोर है यह अति शीघ्र होना चाहिए ಪರಿಸರ ಬದಲಾವಣೆ ಎಂಬ ಟೈಂ ಬಾಂಬ್ ಈಗ ಗಡಿಯಾರದಂತೆ ಶಬ್ದ ಮಾಡುತ್ತಿದೆ, ನಾವೀಗ ಏನಾದರೂ ಮಾಡಲೇಬೇಕಿದೆ.

ಸ್ನೇಹಿತರೇ, ಈ ಘಟಿಕೋತ್ಸವದಲ್ಲಿ ಹಾಜರಿರುವುದು ಒಂದು ಗೌರವವಾಗಿದೆ ಮತ್ತು ಅದಕ್ಕೂ ಬಹಳ ವಿಶೇಷ ಕಾರಣವಿದೆ. ದೇಶಭಕ್ತ, ರಾಷ್ಟ್ರೀಯ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಮತ್ತೊಂದು ಅತ್ಯಂತ ಆಕರ್ಷಕ ಅಂಶವೆಂದರೆ ಬ್ರಿಜ್ಭೂಮಿಯಲ್ಲಿ ಬರುವುದು, ತಂಗುವುದು ಸದಾ  ಆಧ್ಯಾತ್ಮಿಕವಾದ ಪ್ರತಿಫಲವನ್ನು ನೀಡುತ್ತದೆ. ಪದವಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ, ಪದಕ ವಿಜೇತರಿಗೆ ಅವರ ಹೆಮ್ಮೆಯ ಪೋಷಕರಿಗೆ ನನ್ನ ಅಭಿನಂದನೆಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಬೋಧಕವರ್ಗದ ಸದಸ್ಯರಿಗೆ ನನ್ನ ಶುಭಾಶಯಗಳು ಮತ್ತು ಅಭಿನಂದನೆಗಳು.

ನನ್ನ ಯುವ ಸ್ನೇಹಿತರೇ, ನಿಮ್ಮ ಉನ್ನತ ಶೈಕ್ಷಣಿಕ ಅರ್ಹತೆಗಳು ದೇಶಕ್ಕೆ ಒಂದು ಆಸ್ತಿಯಾಗಿವೆ. ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ, ಮತ್ತು ಕ್ಷೇತ್ರಗಳ ಸಂಖ್ಯೆ ಈಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ನೀವು ಭಾರತದ ಅಭಿವೃದ್ಧಿ ಹೊಂದುತ್ತಿರುವ ಬೆಳವಣಿಗೆಯ ಕಥೆಯ ಭಾಗವಾಗುತ್ತೀರಿ. ಭಾರತದ ಕಥನವು ಭರವಸೆಗಳಿಂದ ತುಂಬಿದೆ. ಮುಂದಿನ 25 ವರ್ಷಗಳು ಅಪಾರ ಸಾಮರ್ಥ್ಯವನ್ನು ಹೊಂದಿವೆ, ಅದನ್ನು ನೀವೆಲ್ಲರೂ ಬಳಸಿಕೊಳ್ಳಬೇಕಾಗಿದೆ.

ಸ್ನೇಹಿತರೇ, ನಿಮ್ಮಂತಹ ಉನ್ನತ ಅರ್ಹತೆಗಳನ್ನು ಹೊಂದಿರುವ ನಮ್ಮ ಯುವಜನರು ನಮ್ಮ ಬೆನ್ನುಮೂಳೆಯ ಶಕ್ತಿಯ ಘಟಕವಿದ್ದಂತೆ.

ನಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಚೆನ್ನಾಗಿ ವ್ಯಾಖ್ಯಾನಿಸಲಾಗಿದೆ. ನಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ ಮತ್ತು ಅದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿಪಡಿಸಬೇಕು.

ಪ್ರಯಾಣದಲ್ಲಿ ಯುವ ಮನಸ್ಸುಗಳು ಅತ್ಯಂತ ಪ್ರಮುಖ ಪಾಲುದಾರರು. ನೀವು ಪ್ರಯಾಣವನ್ನು ವ್ಯಾಖ್ಯಾನಿಸುತ್ತೀರಿ, ನೀವು ಪ್ರಯಾಣಕ್ಕೆ ಇಂಧನ ನೀಡುತ್ತೀರಿ ಮತ್ತು ನೀವು ಎಲ್ಲರನ್ನೂ ಹೆಮ್ಮೆಪಡುವಂತೆ ಮಾಡುತ್ತೀರಿ. ನೀವು ಭವಿಷ್ಯದ ನಾಯಕರು, ನೀವು ಸಕಾರಾತ್ಮಕ ಬದಲಾವಣೆಯ ಸೃಷ್ಟಿಕರ್ತರು, ಆರ್ಥಿಕ, ತಾಂತ್ರಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಮುನ್ನಡೆಸುವವರು.

ನಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಚೆನ್ನಾಗಿ ವ್ಯಾಖ್ಯಾನಿಸಲಾಗಿದೆ, ನಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಚೆನ್ನಾಗಿ ನಿಗದಿಪಡಿಸಲಾಗಿದೆ ಮತ್ತು ಅದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬುದಾಗಿದೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾಗವಾಗಬೇಕು. ಈ ಪ್ರಯಾಣದಲ್ಲಿ ಯುವ ಮನಸ್ಸುಗಳು ಅತ್ಯಂತ ಪ್ರಮುಖ ಪಾಲುದಾರರು, ನೀವು ಪ್ರಯಾಣವನ್ನು ವ್ಯಾಖ್ಯಾನಿಸುತ್ತೀರಿ, ನೀವು ಪ್ರಯಾಣಕ್ಕೆ ಇಂಧನ ನೀಡುತ್ತೀರಿ ಮತ್ತು ನಾವು ಪ್ರತಿಯೊಬ್ಬರೂ ಹೆಮ್ಮೆಪಡುವಂತೆ ಮಾಡುತ್ತೇವೆ. ನೀವು ಭವಿಷ್ಯದ ನಾಯಕರು, ನೀವು ಸಕಾರಾತ್ಮಕ ಬದಲಾವಣೆಯ ಸೃಷ್ಟಿಕರ್ತರು, ಆರ್ಥಿಕ, ತಾಂತ್ರಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಮುನ್ನಡೆಸುವವರು. ನೀವು ಬದಲಾವಣೆಯಾಗಬೇಕು. ಅದು ನೀವು ನಂಬುವಂತಹ ಬದಲಾವಣೆಯಾಗಬೇಕು. ಬದಲಾವಣೆಯಿಂದ ವಿಚಲಿತರಾಗಬೇಡಿ. ನಿಮ್ಮ ಧೋರಣೆ/ಯೋಗ್ಯತೆಗೆ ಮತ್ತು ಮನೋಭಾವಕ್ಕೆ ಅನುಗುಣವಾಗಿ ನೀವು ಬಯಸುವ ಬದಲಾವಣೆಯನ್ನು ತನ್ನಿ.

ಸ್ನೇಹಿತರೇ, ಕೇವಲ 3 ವರ್ಷಗಳ ಹಿಂದೆ ನಮ್ಮ ದೂರದೃಷ್ಟಿಯ ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ನಡೆದ ಶಿಲಾನ್ಯಾಸದೊಂದಿಗೆ ವಿಶ್ವವಿದ್ಯಾಲಯವು ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಉತ್ತಮವಾಗಿ ಹೊರಹೊಮ್ಮಿದೆ ಎಂಬುದು ಪ್ರಸ್ತುತ ಆಡಳಿತಕ್ಕೆ ಸಾಕ್ಷಿಯಾಗಿದೆ.

ಅನುಕರಣೀಯ ಕಾನೂನು ಮತ್ತು ಸುವ್ಯವಸ್ಥೆ, ಹೆದ್ದಾರಿಗಳು, ಮೂಲಸೌಕರ್ಯಗಳ ಜೊತೆಗೆ ಸಾಧನೆಯು ಅದರ ಉತ್ತರಾಭಿಮುಖ ಪ್ರಗತಿ ಮತ್ತು ಎತ್ತರಕ್ಕೆ ಏರುವ ನಿಟ್ಟಿನಲ್ಲಿ ಬಹಳ  ಉತ್ತಮವಾಗಿದೆ.

ಇದು ಐತಿಹಾಸಿಕ ಸತ್ಯ - ನಾಗರಿಕತೆಗಳು ಸಂಸ್ಥೆಗಳು ಮತ್ತು ತಮ್ಮ ನಾಯಕರನ್ನು ಕ್ರಮಬದ್ಧಗೊಳಿಸುವ ಮೂಲಕ ಬದುಕುಳಿಯುತ್ತವೆ. ಶಿಕ್ಷಣ ಕ್ಷೇತ್ರದಲ್ಲಿ, ನಳಂದ, ತಕ್ಷಶಿಲಾ ಮತ್ತು ಜ್ಞಾನ ಮತ್ತು ಶಿಕ್ಷಣದ ಇನ್ನೂ ಅನೇಕ ಜಾಗತಿಕ ಮಟ್ಟದ ಹೊಳೆಯುವ ದೀಪಗಳನ್ನು ಕಲ್ಪಿಸಿಕೊಳ್ಳಿ. ನಮ್ಮ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಜಾಗ ನೀಡಬೇಕಾಗಿದ್ದ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರನ್ನು ಸೂಕ್ತವಾಗಿ ಅಮರರನ್ನಾಗಿ ಮಾಡಲು ವಿಶ್ವವಿದ್ಯಾಲಯ ಸ್ಥಾಪನೆ ಸರಿಯಾದ ದಿಕ್ಕಿನಲ್ಲಿ ಇಟ್ಟ ಒಂದು ಹೆಜ್ಜೆಯಾಗಿದೆ. . 1915 ರಲ್ಲಿ, ಅವರು ಕಾಬೂಲಿನಲ್ಲಿ ಭಾರತದ ಮೊದಲ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿದರು, ಅದು 1935 ರ ಭಾರತ ಸರ್ಕಾರ ಕಾಯ್ದೆಯ ಬಗ್ಗೆ ಬ್ರಿಟಿಷರು ಊಹಿಸುವ ಎರಡು ದಶಕಗಳ ಮೊದಲು. ಇದು ಬಹಳ ದೊಡ್ಡ ಪ್ರಯತ್ನವಾಗಿತ್ತು. ಸ್ವಾತಂತ್ರ್ಯವನ್ನು ಘೋಷಿಸುವ ಆಲೋಚನೆಯನ್ನು ಹೊಂದಿತ್ತು.  ಅದು ನಂತರ ನಮಗೆ ಸಿಕ್ಕಿತು ಮತ್ತು ಅವರು ಸಂಸತ್ತಿನ ಸದಸ್ಯರಾಗಲು ಉತ್ತಮ ಅವಕಾಶವನ್ನು ಹೊಂದಿದ್ದರು. ಅವರಂತಹ ವೀರರು ಮಾಡಿದ ತ್ಯಾಗದಿಂದಾಗಿ ನಾವು ಇಂದು ಸ್ವತಂತ್ರ ವಾತಾವರಣದಲ್ಲಿ ಅಭಿವೃದ್ಧಿ ಹೊಂದುತ್ತಿದ್ದೇವೆ.

ದುರದೃಷ್ಟವಶಾತ್ ಅಂತಹ ಮಹಾನ್ ನಾಯಕರ ಸ್ಪೂರ್ತಿದಾಯಕ ಕಥೆಗಳು ನಮ್ಮ ಪಠ್ಯಪುಸ್ತಕಗಳಲ್ಲಿ ಇಲ್ಲಿಯವರೆಗೆ ಬಹಳ ಸಂಕ್ಷಿಪ್ತವಾಗಿವೆ ಅಥವಾ ಯಾವುದೇ ಉಲ್ಲೇಖವಿಲ್ಲ. ನೋವಿನ ಸಂಗತಿ ಎಂದರೆ ಸ್ವಾತಂತ್ರ್ಯದ ಇತಿಹಾಸವನ್ನು ಕುಶಲತೆಯಿಂದ ನಿರ್ವಹಿಸಲಾಯಿತು ಮತ್ತು ಅಂತಹ ಧೈರ್ಯಸ್ಥರಿಗೆ ಮನ್ನಣೆಯನ್ನು ನಿರಾಕರಿಸಲಾಯಿತು.

ಸ್ವಾತಂತ್ರ್ಯ ಹೋರಾಟದ ನಮ್ಮ ನಿಜವಾದ ಹೀರೋಗಳ ಬಗ್ಗೆ ನಮ್ಮ ಯುವಜನರಿಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಯ ಇತಿಹಾಸಕಾರರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಇದು ಹಿತಕರವಾಗಿದೆ, ನಾವು ದೇಶಾದ್ಯಂತ ಹೀಗೆ ಮುಂಚೂಣಿಗೆ ಬಂದಿರದ ನಮ್ಮ ಹೀರೋಗಳನ್ನು ಬಹಳ ಹುರುಪಿನಿಂದ ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದೇವೆ.

1990 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ, 2023 ರಲ್ಲಿ ಚೌಧರಿ ಚರಣ್ ಸಿಂಗ್ ಮತ್ತು ಕರ್ಪೂರಿ ಠಾಕೂರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ವನ್ನು  ತಡವಾಗಿ ನೀಡಿರುವುದು ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆಗಳಾಗಿವೆ. ಎರಡೂ ಸಂದರ್ಭಗಳಲ್ಲಿ ಸಂಸತ್ತಿನ ರಂಗಮಂದಿರದಲ್ಲಿರಲು ನನಗೆ ಅವಕಾಶ ಸಿಕ್ಕಿತ್ತು. 1990 ರಲ್ಲಿ ನಾನು ಕೇಂದ್ರ ಸಚಿವನಾಗಿದ್ದೆ ಮತ್ತು ಈಗ ಉಪರಾಷ್ಟ್ರಪತಿ, ರಾಜ್ಯಸಭಾಧ್ಯಕ್ಷನಾಗಿದ್ದೇನೆ.

ನಾನು ಎಂತಹ ಪರಿಸ್ಥಿತಿಯಲ್ಲಿದ್ದೇನೆ ಎಂದರೆ ಕಳವಳಕ್ಕೂ ಈಡಾಗಿದ್ದೇನೆ ಯಾಕೆಂದರೆ,  ನಮ್ಮ ಹೀರೋಗಳನ್ನು ಗುರುತಿಸಲು ನಮಗೆ ಏಕೆ ಇಷ್ಟು ಸಮಯ ಹಿಡಿಯಿತು?

ಅಂತೆಯೇ, ಇತ್ತೀಚೆಗೆ ಬಹಳ ಒಳ್ಳೆಯ ಬೆಳವಣಿಗೆಗಳು ನಡೆದಿವೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ನಾವು ನವೆಂಬರ್ 15 ರಂದು ಜನಜತೀಯ ಗೌರವ್ ದಿವಸ್ ಆಚರಿಸುತ್ತಿದ್ದೇವೆ. ಅವರೊಬ್ಬ ಮಹಾನ್ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ, ಅವರ ಬಗ್ಗೆ ತಿಳಿಯಿರಿ. ನೀವು ಉತ್ಸುಕರಾಗುತ್ತೀರಿ, ಪ್ರೇರೇಪಿಸಲ್ಪಡುತ್ತೀರಿ, ಸ್ಫೂರ್ತಿ ಪಡೆಯುತ್ತೀರಿ. ಯೌವನದ ಉತ್ತುಂಗದಲ್ಲಿ ಅವರು ಹೊರಟುಹೋದರು ಆದರೆ ನಮ್ಮ ಸ್ವಾತಂತ್ರ್ಯ ಚಳವಳಿಯ ಹೋರಾಟದ ಮೇಲೆ ಅಳಿಸಲಾಗದ ಗುರುತನ್ನು ಬಿಟ್ಟುಹೋದರು. ಈ ದಿನವನ್ನು ಧೈರ್ಯಶಾಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ಸಮರ್ಪಿಸಲಾಗಿದೆ, ಇದರಿಂದ ನಮ್ಮ ಮುಂಬರುವ ಪೀಳಿಗೆ ಮತ್ತು ಪೀಳಿಗೆಯು ಅವರ ತ್ಯಾಗದ ಬಗ್ಗೆ, ಈ ದೇಶದ ಬಗ್ಗೆ ಅರಿತುಕೊಳ್ಳುತ್ತದೆ.

ಅದೇ ರೀತಿ  ಇನ್ನೊಬ್ಬ ಮಹಾನ್ ನಾಯಕನಿಗೂ ಸರಿಯಾದ ಸ್ಥಾನ ಮಾನ ನಿರಾಕರಿಸಲಾಗಿತ್ತು. . ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅದಮ್ಯ ಉತ್ಸಾಹಿ ಮತ್ತು ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ನೇತಾರ. ಅವರ ಜನ್ಮದಿನವಾದ ಜನವರಿ 23 ನ್ನು ಪ್ರತಿ ವರ್ಷ ಪರಾಕ್ರಮ್  ದಿವಸ್ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯ ಸಮಾರಂಭ ನಡೆದಾಗ ನನಗೆ ಮತ್ತೆ ಅದರಲ್ಲಿ ಪಾಲ್ಗೊಳ್ಳುವ ಗೌರವ, ಭಾಗ್ಯ  ಸಿಕ್ಕಿತು.

ಕೋಲ್ಕತ್ತಾದಲ್ಲಿ ನಾನು ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿದ್ದೆ. ರಾಷ್ಟ್ರದ ಸೇವೆಗಾಗಿ ಎಲ್ಲವನ್ನೂ, ಎಲ್ಲಾ ಸೌಕರ್ಯಗಳನ್ನು ತ್ಯಜಿಸಿದ ಅತ್ಯುತ್ತಮ ಮಾನವರಲ್ಲಿ ಒಬ್ಬರನ್ನು, ಅತ್ಯುತ್ತಮ ಆತ್ಮಗಳನ್ನು, ದೂರದೃಷ್ಟಿಯನ್ನು ಹೊಂದಿದ ನಾಯಕರನು ಸ್ಮರಿಸುವ ಮಹಾನ್ ದಿನಾಚರಣೆಯನ್ನು ಗೌರವಾನ್ವಿತ ಪ್ರಧಾನ ಮಂತ್ರಿ ಅವರು ಉದ್ಘಾಟಿಸಿದ್ದರು.

ಸ್ನೇಹಿತರೇ, ನಮ್ಮ ಯುವಜನರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.  ಗಂಭೀರ ಪ್ರತಿಕೂಲ ಪರಿಸ್ಥಿತಿಯಲ್ಲಿ ಜನರು ತೋರಿಸಿದ ಧೈರ್ಯ, ಇದು ನಿಮ್ಮೆಲ್ಲರಲ್ಲಿ ರಾಷ್ಟ್ರೀಯತೆಯ ಉತ್ಸಾಹವನ್ನು ತುಂಬುತ್ತದೆ.

“शहीदों की चिताओं पर जुड़ेंगे हर बरस मेले।

वतन पर मरनेवालों का यही बाक़ी निशाँ होगा॥

कभी वह दिन भी आएगा जब अपना राज देखेंगे।

जब अपनी ही ज़मीं होगी और अपना आसमाँ होगा॥“

यह आज चरितार्थ हो रहा है आजादी के लंबे समय बाद इसको हर पल महसूस किया जा रहा है हर दृष्टि से किया जा रहा है।

ನನ್ನ ಯುವ ಸ್ನೇಹಿತರೇ, ರಾಷ್ಟ್ರೀಯತೆಯ ಬಗೆಗಿನ ನಮ್ಮ ಬದ್ಧತೆಯು ಯಾವಾಗಲೂ ಅಚಲ ಮತ್ತು ಉನ್ನತವಾಗಿರಬೇಕು ಎಂಬುದನ್ನು ನಿಮ್ಮೆಲ್ಲರಿಗೂ ನೆನಪಿಸಲು ನಾನು ಅಂತಹ ಇತ್ತೀಚಿನ ಕೆಲವು ಕ್ರಮಗಳನ್ನು ಪ್ರಸ್ತಾಪಿಸಿದ್ದೇನೆ. राष्ट्र से ऊपर कुछ नहीं है। राष्ट्रवाद हमारा धर्म है, निजी हित या कोई भी हित हो राष्ट्रहित से ऊपर नहीं रख सकते यही हमारा संकल्प होना चाहिए, यही हमारी संस्कृति का निचोड़ है।

ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಕೂಡ ದೂರದೃಷ್ಟಿಯ ಶಿಕ್ಷಣ ತಜ್ಞರಾಗಿದ್ದರು, ಅವರು ಪ್ರೇಮ್ ಮಹಾವಿದ್ಯಾಲಯವನ್ನು ಸ್ಥಾಪಿಸುವ ತಾಂತ್ರಿಕ ಶಿಕ್ಷಣದ ಅಗತ್ಯವನ್ನು ಮೊದಲೇ ಊಹಿಸಿದ್ದರು.

ಸ್ನೇಹಿತರೇ, ಇತಿಹಾಸವೇ ಇದಕ್ಕೆ ಸಾಕ್ಷಿ. ತಾಂತ್ರಿಕ ಕ್ರಾಂತಿಯ ಮುಂಚೂಣಿಯಲ್ಲಿರದ ಯಾವುದೇ ದೇಶವು ಉತ್ತಮ ಸಾಧನೆ ಮಾಡಿಲ್ಲ. ನಾವು ಪ್ಯಾಕ್ಸ್ ಇಂಡಿಕಾ ವಾಸ್ತವವಾಗುವುದನ್ನು ನೋಡಲು ಬಯಸುವುದಾದರೆ, ನಾವು ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸಬೇಕು.

ನಾವು ವಾಸ್ತವಿಕವಾಗಿ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ಕೃಷಿಯಿಂದ ಶಿಕ್ಷಣದವರೆಗೆ ಸಂವಹನದವರೆಗೆ ನಮ್ಮ ಎಲ್ಲಾ ಚಟುವಟಿಕೆಗಳಿಗೆ ಮಾಹಿತಿ ಪ್ರಮುಖವಾಗಿದೆ. ಈ ದಿನಗಳಲ್ಲಿ ಎಲ್ಲವೂ ಸಂವಹನದ ಸುತ್ತ ಸುತ್ತುತ್ತಿದೆ.  ತಂತ್ರಜ್ಞಾನವು ಒಂದು ಗೇಮ್ ಚೇಂಜರ್ ಆಗಿದೆ.

ನಮ್ಮ ದೇಶದಲ್ಲಿ, ಇದು ಅದೃಷ್ಟವಶಾತ್, ಹೆಚ್ಚು ಅಗತ್ಯವಿರುವ, ಪಾರದರ್ಶಕ, ಜವಾಬ್ದಾರಿಯುತ ಆಡಳಿತ, ಸುಲಭದಲ್ಲಿ ಸೇವಾ ವಿತರಣೆಯ ಸೌಲಭ್ಯ  ಮತ್ತು ಸರತಿ ಸಾಲಿನಲ್ಲಿ  ಕೊನೆಯಲ್ಲಿ ಇರುವವರನ್ನೂ ತಲುಪುವುದಕ್ಕೆ,  ಹಾಗು ಸೌಲಭ್ಯಗಳನ್ನು/ ಪ್ರಯೋಜನಗಳನ್ನು ಪಡೆಯುವುದರ ಮೇಲೆ ಪರಿಣಾಮ ಬೀರಿದೆ.

ಜ್ಞಾನ ಆರ್ಥಿಕತೆಯಿಂದ ಪ್ರೇರಿತವಾದ ವಿಕ್ಷಿತ್ Bharat@2047 ಕಡೆಗೆ ನಾವು ಸಾಗುತ್ತಿರುವಾಗ, ವಿಶ್ವದ ಅತ್ಯುತ್ತಮ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಿ ಉತ್ಕೃಷ್ಟ ಸಂಸ್ಥೆಗಳನ್ನು ರೂಪಿಸುವುದು ನಮ್ಮ ಗುರಿಯಾಗಿರಬೇಕು. ಈ ದೇಶವು ಜಾಗತಿಕ ಉತ್ಕೃಷ್ಟತೆ ಮತ್ತು ಶ್ರೇಷ್ಠತೆಯ ಸಂಸ್ಥೆಗಳನ್ನು ಹೊಂದಿದ್ದರಿಂದ, ಪ್ರಪಂಚದಾದ್ಯಂತದ ಜನರು ಜ್ಞಾನೋದಯವನ್ನು ಪಡೆಯಲು ಮುಗಿಬಿದ್ದರು.

ಭಾರತದ ಶೈಕ್ಷಣಿಕ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವಂತೆ ನಾನು ಕೈಗಾರಿಕೆಗಳು ಮತ್ತು ಕಾರ್ಪೊರೇಟ್ ಗಳಿಗೆ ಮನವಿ ಮಾಡುತ್ತೇನೆ. ಶಿಕ್ಷಣದಲ್ಲಿ ಹೂಡಿಕೆ ಎಂದರೆ ನಿಮ್ಮ ವರ್ತಮಾನದಲ್ಲಿ ಹೂಡಿಕೆ, ನಿಮ್ಮ ಭವಿಷ್ಯದಲ್ಲಿ ಹೂಡಿಕೆ, ಆರ್ಥಿಕ ಬೆಳವಣಿಗೆಗಾಗಿ ಹೂಡಿಕೆ, ಶಾಂತಿಗಾಗಿ ಹೂಡಿಕೆ, ಸಾಮರಸ್ಯಕ್ಕಾಗಿ ಹೂಡಿಕೆ.

ಪ್ರಯತ್ನವನ್ನು ಮುನ್ನಡೆಸಬೇಕು, ಈಗ ನನ್ನ ಎಚ್ಚರಿಕೆಯ ಮಾತು ಇಲ್ಲಿದೆ. ನಾನು ಅದನ್ನು ಎಚ್ಚರಿಕೆ ಎಂದು ಕರೆಯಬಹುದು. ನಾವು ಎಂದಿಗೂ ಶಿಕ್ಷಣವನ್ನು ಸರಕನ್ನಾಗಿ ಮಾಡಬಾರದು, ನಾವು ಎಂದಿಗೂ ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಬಾರದು. ಈ ಪ್ರಯತ್ನ, ಈ ಉದ್ಯಮ, ಈ ಮನೋಭಾವವನ್ನು ಶಿಕ್ಷಣದ ಸರಕಾಗಿಸಬಾರದು ಮತ್ತು ವಾಣಿಜ್ಯೀಕರಣದೊಂದಿಗೆ ಮುನ್ನಡೆಸುವಂತಾಗಬಾರದು. ಆದರೆ ಅದು ನಮ್ಮ ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯೊಂದಿಗೆ ಹೊಂದಿಕೆಯಾಗಬೇಕು. गुरुकुल में क्या होता था कोई फीस नहीं होती थी, कोई रोक-टोक नहीं होती थी और यही कारण है कि भारत के संविधान निर्माता ने बहुत सोच समझकर जो 22 चित्र संविधान में रखे हैं आपसे अपील करूंगा उन चित्रों का आप अध्ययन कीजिए। आजकल सोशल मीडिया गूगल सब आपकी मदद करेगा उसमें जहां सिटीजनशिप है वहां गुरुकुल का चित्र है, शिक्षा को क्या इंपोर्टेंस दी गई है। ಚಾರಿತ್ರ್ಯ ರಚನೆಯ ನಿಕ್ಷೇಪಗಳಾಗಬೇಕು,  ನಮ್ಮ ಭಾರತದ ಬಗ್ಗೆ ಬದ್ಧತೆಯ ಮನೋಭಾವದಿಂದ ನಮ್ಮನ್ನು ಉದ್ದೀಪಿಸಬೇಕು.

ಪಠ್ಯಕ್ರಮವನ್ನು ರೂಪಿಸುವವರಿಗೆ, ಪಠ್ಯಕ್ರಮವನ್ನು ರೂಪಿಸುತ್ತಿರುವವರಿಗೆ, ಅಧ್ಯಾಪಕ ವೃಂದದ ಸದಸ್ಯರಿಗೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಗೊಳಿಸುವಂತೆ ನಾನು ಆಗ್ರಹಿಸುತ್ತೇನೆ. ಗೌರವಾನ್ವಿತ ರಾಜ್ಯಪಾಲರು ಮತ್ತು ನಾನು ರಾಷ್ಟ್ರೀಯ ಶಿಕ್ಷಣ ನೀತಿಯ ವಿಕಾಸದ ವಿವಿಧ ಹಂತಗಳಲ್ಲಿ ಭಾಗಿಯಾಗಿದ್ದೇವೆ. ಸಾವಿರಾರು ಮಧ್ಯಸ್ಥಗಾರರ ಒಳಹರಿವುಗಳನ್ನು ಪರಿಗಣಿಸಲಾಗಿದೆ. ಮೂರು ದಶಕಗಳ ನಂತರ ನಾವು ಅದನ್ನು ಹೊಂದಿದ್ದೇವೆ, ಇದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವ ದೂರದೃಷ್ಟಿಯ ಮಾರ್ಗಸೂಚಿಯನ್ನು ಪ್ರಸ್ತುತಪಡಿಸುತ್ತದೆ. ಇದು ಬಹುಶಿಸ್ತೀಯ ಕಲಿಕೆ, ಕೌಶಲ್ಯ ಅಭಿವೃದ್ಧಿ, ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ಪದವಿಗಳಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಶಿಕ್ಷಕರು, ಪ್ರತಿಯೊಬ್ಬ ಪ್ರಾಧ್ಯಾಪಕರು, ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿ ದಯವಿಟ್ಟು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಸರಿಸಬೇಕೆಂದು ನಾನು ಬಯಸುತ್ತೇನೆ. ನೀವು ಅದನ್ನು ಅರ್ಥಮಾಡಿಕೊಳ್ಳದ ಹೊರತು ನೀವು ಅದನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ, ಅದನ್ನು ಕಾರ್ಯಗತಗೊಳಿಸುವ ಮನಸ್ಥಿತಿಯೊಂದಿಗೆ ನೀವು ಅದನ್ನು ಅರ್ಥಮಾಡಿಕೊಳ್ಳಬೇಕು.

ನಮ್ಮ ಭಾರತ ಇಂದು, ಅದೃಷ್ಟವಶಾತ್ ಮತ್ತು ಜಗತ್ತಿಗೆ ಒಂದು ದೊಡ್ಡ ಬೆಳವಣಿಗೆಯ ರೀತಿಯಲ್ಲಿ, ತಂತ್ರಜ್ಞಾನದ ದೃಷ್ಟಿಯಿಂದ ಬೌದ್ಧಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ನನ್ನ ಯುವ ಸ್ನೇಹಿತರು, ಹುಡುಗರು ಮತ್ತು ಹುಡುಗಿಯರು ಇದರ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಪೇಟೆಂಟ್ ಗಳ ವಿಷಯದಲ್ಲಿ ನಾವು ಐದನೇ ಸ್ಥಾನದಲ್ಲಿದ್ದೇವೆ. ಪೇಟೆಂಟ್ ಗಳ ಮಹತ್ವ ನಿಮಗೆ ತಿಳಿದಿದೆ, ಅದರ ಆರ್ಥಿಕ ಫಲಿತಾಂಶಗಳು ನಿಮಗೆ ತಿಳಿದಿವೆ. ಇದು ಹೇಗೆ ಮೃದು ರಾಜತಾಂತ್ರಿಕ ಆಯುಧವಾಗಿದೆ ಎಂಬುದನ್ನು ನೀವು ಅರಿತುಕೊಳ್ಳಬಹುದು ಮತ್ತು ವರ್ಷದಿಂದ ವರ್ಷಕ್ಕೆ 25% ಗಮನಾರ್ಹ ಬೆಳವಣಿಗೆಯೊಂದಿಗೆ, ಪೇಟೆಂಟ್ ಗಳನ್ನು ಸಲ್ಲಿಸುವ ವಿಷಯದಲ್ಲಿ ನಮ್ಮ ವಾರ್ಷಿಕ ಬೆಳವಣಿಗೆ 25% ಆಗಿದೆ.

ಕೃತಕ ಬುದ್ಧಿಮತ್ತೆಯಲ್ಲಿ, ಭಾರತವು ತನ್ನ ದಟ್ಟವಾದ ಮಾನವ ಸಂವಹನ ಮತ್ತು ಆಳವಾದ ತಾಂತ್ರಿಕ ಪಸರಿಸುವಿಕೆಯೊಂದಿಗೆ ಡೇಟಾ ಸೆಟ್ ರಚನೆಯನ್ನು ಮುನ್ನಡೆಸಲು ಸಜ್ಜಾಗಿದೆ. ವಾಸ್ತವವಾಗಿ, ನಮ್ಮ ಡಿಜಿಟಲೀಕರಣ, ನಮ್ಮ ತಾಂತ್ರಿಕ ನುಗ್ಗುವಿಕೆ, ಸೇವಾ ವಿತರಣೆಯ ಬಳಕೆಯನ್ನು ಜಾಗತಿಕ ಸಂಸ್ಥೆಗಳು, ವಿಶ್ವ ಬ್ಯಾಂಕ್ ಶ್ಲಾಘಿಸಿವೆ, ಡಿಜಿಟಲೀಕರಣದ ಮೂಲಕ ಸೇವಾ ವಿತರಣೆಯ ವಿಷಯಕ್ಕೆ ಬಂದಾಗ ಭಾರತವು ಮಾದರಿಯಾಗಿದೆ ಆದರೆ ಆರು ವರ್ಷಗಳಲ್ಲಿ ಭಾರತ ಮಾಡಿದ ಸಾಧನೆಗಳನ್ನು ಸಾಮಾನ್ಯವಾಗಿ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲದ ಅವಧಿಯಲ್ಲಿ ಸಾಧಿಸಲು ಸಾಧ್ಯವಾಗಿಲ್ಲ.

ಸ್ನೇಹಿತರೇ, ನಾವು ತಾಂತ್ರಿಕ ಕ್ರಾಂತಿಯ ಅಮೃತಕಾಲವನ್ನು ಪ್ರವೇಶಿಸುತ್ತಿದ್ದೇವೆ. ಅದನ್ನು ನಿಮ್ಮಂತಹ ಯುವ ಮನಸ್ಸುಗಳು, ಪ್ರಜ್ವಲಿಸಿದ ಮನಸ್ಸುಗಳು ಮುನ್ನಡೆಸಬೇಕು. ಬದಲಾವಣೆಯ ನಿರ್ಮಾತೃಗಳಾಗಿ, ನಾವೀನ್ಯತೆಯನ್ನು ಮುನ್ನಡೆಸಿ ಮತ್ತು ಭಾರತೀಯ ಸಮಸ್ಯೆಗಳಿಗೆ ಭಾರತೀಯ ಪರಿಹಾರಗಳನ್ನು ಕಂಡುಕೊಳ್ಳಿ ಮತ್ತು ಜಾಗತಿಕ ಭ್ರಾತೃತ್ವಕ್ಕೂ ಅವು ಲಭ್ಯವಾಗುವಂತೆ ಮಾಡಿ.

2024 ರಲ್ಲಿ  ಪದವಿ ಪಡೆದಿರುವ ತರಗತಿಗೆ, ನಿಮ್ಮ ಯಶಸ್ಸಿಗೆ ಅಭಿನಂದನೆಗಳು. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರಂತಹ ನಾಯಕರಿಂದ ಸ್ಫೂರ್ತಿ ಪಡೆಯಿರಿ. ನವ ಭಾರತವು ನೀಡುವ ಅವಕಾಶಗಳನ್ನು ಬಳಸಿಕೊಳ್ಳಿ, ನಿಮ್ಮ ಶಿಕ್ಷಣವನ್ನು ಬುದ್ಧಿವಂತಿಕೆಯಿಂದ ಮತ್ತು ಹೆಚ್ಚಿನ ಒಳಿತಿಗಾಗಿ ಬಳಸಿ.

ಸ್ನೇಹಿತರೇ, ನೀವು ಜಗತ್ತಿಗೆ ಪ್ರವೇಶಿಸುತ್ತಿದ್ದಂತೆ ಮತ್ತು ಕಾಲಿಡುತ್ತಿದ್ದಂತೆ, ನಿಮಗೆ ಸವಾಲುಗಳು ಎದುರಾಗುತ್ತವೆ, ನಿಮಗೆ ಗಂಭೀರ ಸವಾಲುಗಳು ಎದುರಾಗುತ್ತವೆ, ನಿಮಗೆ ಕೆಲವು ಹಿನ್ನಡೆಗಳು ಉಂಟಾಗಬಹುದು, ಇವೆಲ್ಲವೂ ಸ್ವಾಭಾವಿಕ.

ಇಲ್ಲಿ  ನಿಮ್ಮ ಪ್ರವೇಶ  ಕನಸಿನಂತಾಗುವುದಿಲ್ಲ. ಇದು ತೀವ್ರ ಸ್ಪರ್ಧಾತ್ಮಕವಾಗಿರುತ್ತದೆ ಮತ್ತು ಅದು ಹಾಗೇ  ಇರಬೇಕು. ವೈಫಲ್ಯಕ್ಕೆ ಎಂದಿಗೂ ಹೆದರಬೇಡಿ. ಯಾವುದೇ ವೈಫಲ್ಯವು ಯಶಸ್ಸಿನ ಮೆಟ್ಟಿಲು, ನಿಮ್ಮ ಮನಸ್ಸಿನಲ್ಲಿ ಉತ್ತಮ ಆಲೋಚನೆ ಇದ್ದರೆ, ಅದನ್ನು ಒಳಗಿಟ್ಟು ಪೋಷಿಸಬೇಡಿ, ಬದಲು ಅದನ್ನು ಅವಲಂಬಿಸಿ ಕಾರ್ಯನಿರ್ವಹಿಸಿ.

ಸಂಯೋಜಿತ ಕಾಲೇಜುಗಳು ಮತ್ತು ಶಿಕ್ಷಣ ತಜ್ಞರಿಗೆ, ನನ್ನ ಮನವಿ ಏನೆಂದರೆ ನಿಮ್ಮ ಚಟುವಟಿಕೆಗಳನ್ನು ಖಚಿತಪಡಿಸಿಕೊಳ್ಳಿ, ಈ ಉದಯೋನ್ಮುಖ ತಾಂತ್ರಿಕ ಜಗತ್ತಿಗೆ ಪದವೀಧರರನ್ನು ಸಿದ್ಧಪಡಿಸಿ, ಅವರಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಮೈಗೂಡಿಸಿ.

ನೀವು ಬುದ್ಧಿವಂತರಾಗಿರಬಹುದು, ಅದರಿಂದಲೇ ಒಳಿತಾಗುತ್ತದೆ ಎನ್ನಲಾಗದು. ನೀವು ತಾಂತ್ರಿಕವಾಗಿ ಬುದ್ಧಿವಂತರಾಗಿರಬಹುದು, ನೀವು ಮೆಚ್ಚುಗೆ ಪಡೆಯಬಹುದು ಆದರೆ ರಾಷ್ಟ್ರೀಯತೆಯೊಂದಿಗಿನ ನಿಮ್ಮ ಸಂಬಂಧ ದುರ್ಬಲವಾಗಿದ್ದರೆ,

'काट्यो काट्यो कपास हो जाए' कपास को जब काटते हैं तो धागा बनता है, तो थोड़ा भी मिस डायरेक्शन हो तो वापस कपास बन जाता है। ನಿಮ್ಮ ಪ್ರಯತ್ನಗಳು ವ್ಯರ್ಥವಾಗುತ್ತವೆ.

ಸ್ನೇಹಿತರೇ, ಮಾನವಕುಲದ ಆರನೇ ಒಂದು ಭಾಗಕ್ಕೆ ನೆಲೆಯಾಗಿರುವ ಭಾರತ, ವಿಶ್ವದ ಅತ್ಯಂತ ಹಳೆಯ ನಾಗರಿಕತೆಯಾಗಿದ್ದು, ಅತಿ ಹೆಚ್ಚು ಆರ್ಥಿಕ ಬೆಳವಣಿಗೆಯನ್ನು ಹೊಂದಿದೆ. ವಿಶ್ವದ ಯಾವುದೇ ದೇಶವು 7.5% ರಿಂದ 8% ಜಿಡಿಪಿ ಬೆಳವಣಿಗೆಯೊಂದಿಗೆ ಮುಂದುವರಿಯುತ್ತಿಲ್ಲ. दुनिया का कोई भी देश 7.5% से 8%, GDP ग्रोथ के साथ आगे नहीं बढ़ रहा है।

आंखों से देख रहे हैं जिसका सपना लेते हुए भी डर लगता था मेरी उम्र के लोगों को।. ರೈಲು, ರಸ್ತೆ, ಸಂಪರ್ಕ, ಜಲಮಾರ್ಗಗಳು, ಡಿಜಿಟಲೀಕರಣದ ವಿಶ್ವದರ್ಜೆಯ ಮೂಲಸೌಕರ್ಯಗಳು ದೇಶದಲ್ಲಿ ರೂಪ ಪಡೆಯುತ್ತಿವೆ.  

ಇದು ನಮ್ಮ ಯುವಜನರ ಸಮಯ, ಈಗ ನಿಮಗೆ ನನ್ನ ವಿಶೇಷ ಮನವಿ, ನೀವು ಇಕ್ಕಟ್ಟಿನಲ್ಲಿ ಇದ್ದೀರಿ. लगता है नौकरी सरकार की ही है लगता है नौकरियां कहां है थोड़ा सा देखोगे तो पता लगेगा की जो ನೀವು ಸ್ವಲ್ಪ ಅತ್ತಿತ್ತ ನೋಡಿದರೆ ಅವಕಾಶಗಳ ಬುಟ್ಟಿ ವಿಸ್ತರಿಸುತ್ತಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.

एक जानकारी के अनुसार सिर्फ 10% छात्रों को ही पता है कि कहां संभावनाएं हैं, 90% को नहीं पता है। (ಒಂದು ಮಾಹಿತಿಯ ಪ್ರಕಾರ, ಕೇವಲ 10% ವಿದ್ಯಾರ್ಥಿಗಳಿಗೆ ಮಾತ್ರ ಭವಿಷ್ಯಗಳು ಎಲ್ಲಿವೆ ಎಂದು ತಿಳಿದಿದೆ, 90% ವಿದ್ಯಾರ್ಥಿಗಳಿಗೆ ತಿಳಿದಿಲ್ಲ). ದಯವಿಟ್ಟು ಸಿಲೋಸ್ ನಿಂದ (ಸ್ಥಾಗಿತ್ಯ ಮನೋಭಾವದಿಂದ)  ಹೊರಗೆ ಬನ್ನಿ.

भारत को यदि अगर आज के दिन ಇದು ಅವಕಾಶ, ಗಮ್ಯಸ್ಥಾನ ಮತ್ತು ಹೂಡಿಕೆಯ ಭೂಮಿಯಾಗಿದೆ, क्यों? नौकरी के लिए तो नहीं कह रहा। ಹೆಚ್ಚಿನದನ್ನು ಮಾಡಿ, ಸುತ್ತಲೂ ನೋಡಿ, ನಿಮ್ಮ ಪ್ರತಿಭೆಯನ್ನು ಸಮುದ್ರದಲ್ಲಿ ನೀಲಿ ಆರ್ಥಿಕತೆಯಲ್ಲಿ, ಬಾಹ್ಯಾಕಾಶ ಆರ್ಥಿಕತೆಯಲ್ಲಿ ಬಳಸಬಹುದು ಎಂಬುದನ್ನು  ನೀವು ಕಾಣುವಿರಿ.

चाणक्य के शब्द बताता हूं आपको और चाणक्य का नाम आते ही चाणक्य का नाम लेते ही एक नई ऊर्जा अपने में जाती है जो चाणक्य का रोल करते हो वह कैसे बोलते हैं, लगता है चाणक्य कितना महान था। "ಶಿಕ್ಷಣವು ಅತ್ಯುತ್ತಮ ಸ್ನೇಹಿತ, ವಿದ್ಯಾವಂತ ವ್ಯಕ್ತಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ."

और स्वामी विवेकानंद जी ने कहा था "ಎದ್ದೇಳಿ, ಎಚ್ಚರವಾಗಿರಿ ಮತ್ತು ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ" ಅದನ್ನು ನೀವು ಎಂದಿಗೂ ಮರೆಯಬಾರದು.

ಹೊರಹೋಗುವವರಿಗೆ, ಇಲ್ಲಿಂದ ಪದವಿ ಪಡೆದು ಹೊರಹೋಗುವವರಿಗೆ, ಸಹವರ್ತಿಗಳಿಗೆ ಮತ್ತು ಪ್ರಸ್ತುತ ವಿದ್ಯಾರ್ಥಿಗಳಿಗೆ, ನನ್ನ ಶುಭ ಹಾರೈಕೆಗಳು. ಈ ಪರಿಸರ ವ್ಯವಸ್ಥೆಯನ್ನು  ಪಡೆದಿರುವ   ನೀವು ಹೆಚ್ಚು ಅದೃಷ್ಟಶಾಲಿಗಳು ಮತ್ತು ನಿಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಈ ಪರಿಸರ ವ್ಯವಸ್ಥೆಯಲ್ಲಿ ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳಬಹುದು.

ಇಂದು ಪದವಿ ಪಡೆದವರಿಗೆ, ನನ್ನ ಒಂದು ಮನವಿ, ನೀವು ಬಹಳ ವಿಶಿಷ್ಟ ವರ್ಗದಲ್ಲಿದ್ದೀರಿ, ನೀವು ಸಂಸ್ಥೆಯ ಮೊದಲ ಹಳೆಯ ವಿದ್ಯಾರ್ಥಿಗಳು. ನೀವು ಸಂಸ್ಥೆಗೆ ಸದಾ ಅಂಟಿಕೊಳ್ಳಲು ಒಂದು ಸ್ಥಾನವನ್ನು ಪಡೆದುಕೊಳ್ಳಬೇಕು, ಈ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರಬೇಕು, ವಾರ್ಷಿಕ ಕೊಡುಗೆಗಳನ್ನು ನೀಡಬೇಕು. ಮೊತ್ತ ಮುಖ್ಯವಲ್ಲ, ಹಣಕಾಸಿನ ಕೊಡುಗೆಯಲ್ಲಿ ಪ್ರಮಾಣ ಮುಖ್ಯವಲ್ಲ, ಆರ್ಥಿಕ ಕೊಡುಗೆ ನೀಡುವುದು ಬಹಳ ಮುಖ್ಯ. ಅದನ್ನು ಮಾಡಿ. ವರ್ಷಗಳಲ್ಲಿ, ಇದು ಬಲೂನ್ ನಂತೆ ಬೆಳೆಯುತ್ತದೆ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. ಇದು ಶಿಕ್ಷಣ ಕ್ಷೇತ್ರಕ್ಕೆ ಮತ್ತು ನಿಮ್ಮ ಸಂಸ್ಥೆಗೆ ದೊಡ್ಡ ಸೇವೆಯಾಗಲಿದೆ.

अंत में एक बात कहूंगा आपको सदैव सचेत रहने के लिए एक सिख दे रहा हूं उसी को सदा याद रखना 'नायमात्मा बलहीनेन लभ्यः' ಇದರರ್ಥ ಆತ್ಮಸಾಕ್ಷಾತ್ಕಾರವನ್ನು ದುರ್ಬಲ ಇಚ್ಛಾಶಕ್ತಿಯಿಂದ ಸಾಧಿಸಲಾಗುವುದಿಲ್ಲ. हम रिलाइज करना चाहते हैं पर अगर ನಾವು ದುರ್ಬಲ ಇಚ್ಛಾಶಕ್ತಿ ಹೊಂದಿದ್ದರೆ हैं तो हम नहीं कर पाएंगे।. ಆದ್ದರಿಂದ ಬಲವಾದ ಇಚ್ಛಾಶಕ್ತಿಯಿಂದಿರಿ, ಎಂದಿಗೂ ವೈಫಲ್ಯದ ಭಯದಲ್ಲಿರಬೇಡಿ, ವೈಫಲ್ಯದ ಭಯದಿಂದಾಗಿ ಎಂದಿಗೂ ಒತ್ತಡ ಮತ್ತು ಉದ್ವೇಗದಿಂದ ಬಳಲಬೇಡಿ. ಪ್ರಯತ್ನಗಳಲ್ಲಿನ ಶ್ರದ್ಧೆ ಮತ್ತು ಬದ್ಧತೆ ಮುಖ್ಯವಾಗಿದೆ ಮತ್ತು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಕಲಿಸಿದ ಪಾಠವು ನಿಮ್ಮ ಭವಿಷ್ಯದ ಕಾರ್ಯಕ್ಕೆ ಮಾರ್ಗದರ್ಶಿ ನಕ್ಷತ್ರವಾಗಬೇಕು.

ಮೊದಲ ಉಪನ್ಯಾಸ, ಮೊದಲ ಘಟಿಕೋತ್ಸವ ಭಾಷಣ ಮಾಡುವ ಗೌರವ ನನಗೆ ಸಿಕ್ಕಿದೆ. ಇದು ನನ್ನ ನೆನಪಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತದೆ. ನನಗಿದು ಈ ಮಣ್ಣಿನ ಶ್ರೇಷ್ಠ ಪುತ್ರರಲ್ಲಿ ಒಬ್ಬರಿಗೆ ಗೌರವ ಸಲ್ಲಿಸುವ ಸಂದರ್ಭ.

 

*****


(Release ID: 2066936) Visitor Counter : 33


Read this release in: English , Urdu , Hindi , Manipuri