ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸಾಹಿಬ್ ಗಂಜ್ - ಹೌರಾ ಇಂಟರ್ ಸಿಟಿ ಎಕ್ಸ್ ಪ್ರೆಸ್‌ಗೆ ಚಾಲನೆ ನೀಡಿದರು, ಜಾರ್ಖಂಡ್‌ನಲ್ಲಿ ರೈಲು ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸಿದರು


ಸಾಹಿಬ್ ಗಂಜ್ ನಿಲ್ದಾಣವು ಆನಂದ್ ವಿಹಾರ್-ಅಗರ್ತಲಾ ತೇಜಸ್ ರಾಜಧಾನಿ ಎಕ್ಸ್ ಪ್ರೆಸ್‌ ಗೆ ಜಾರ್ಖಂಡ್ ನಲ್ಲಿ ಮೊದಲ ನಿಲುಗಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಂತಾಲ್ ಪರಗಣ ಪ್ರದೇಶದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ

ಕಳೆದ ದಶಕದಲ್ಲಿ ಶೇಕಡಾ 100 ರಷ್ಟು ವಿದ್ಯುದ್ದೀಕರಣವನ್ನು ಸಾಧಿಸಿದೆ ಮತ್ತು ₹56,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 1200 ಕಿಮೀ ಹೊಸ ರೈಲು ಮಾರ್ಗಗಳನ್ನು ಹಾಕಿದೆ ಮತ್ತು 57 ನಿಲ್ದಾಣಗಳ ಪುನರಾಭಿವೃದ್ಧಿ ಪ್ರಗತಿಯಲ್ಲಿದೆ

Posted On: 10 OCT 2024 7:35PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ದೈನಂದಿನ ಸಾಹಿಬ್ ಗಂಜ್-ಹೌರಾ ಇಂಟರ್ ಸಿಟಿ ಎಕ್ಸ್ ಪ್ರೆಸ್ ಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಈ ಮೂಲಕ ಜಾರ್ಖಂಡ್ ಜನರಿಗೆ ಮಹತ್ವದ ಉಡುಗೊರೆಯನ್ನು ನೀಡಿದರು. ಈ ಹೊಸ ರೈಲು ಸೇವೆಯು ಸಾಹಿಬ್ ಗಂಜ್ ನಿಂದ ಹೌರಾಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕೇವಲ 7 ಗಂಟೆಗಳಲ್ಲಿ 350 ಕಿಮೀ ದೂರವನ್ನು ₹125 ಕೈಗೆಟುಕುವ ದರದಲ್ಲಿ ಕ್ರಮಿಸುತ್ತದೆ, ಇದು ಜಾರ್ಖಂಡ್ ನಿವಾಸಿಗಳಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಪ್ರಸ್ತುತ, ಪ್ರಯಾಣಿಕರು ಸಾಹಿಬ್ ಗಂಜ್ ನಿಂದ ಹೌರಾಕ್ಕೆ ರಸ್ತೆ ಮೂಲಕ ಪ್ರಯಾಣಿಸಲು ₹ 700 ರಿಂದ ₹ 800 ವರೆಗೆ ಖರ್ಚು ಮಾಡುತ್ತಾರೆ. ಈ ರೈಲು ಸೇವೆಯ ಪರಿಚಯವು ಪ್ರಯಾಣವನ್ನು ಸರಳಗೊಳಿಸುವುದಲ್ಲದೆ, ಈ ಪ್ರದೇಶದಲ್ಲಿ ವ್ಯಾಪಾರ ಅವಕಾಶಗಳು ಮತ್ತು ಉದ್ಯೋಗವನ್ನು ಹೆಚ್ಚಿಸುತ್ತದೆ.

ಜಾರ್ಖಂಡ್ ಗೆ ರೈಲ್ವೆ ಸಚಿವರು ಇಂದು ಮತ್ತೊಂದು ಉಡುಗೊರೆ ನೀಡಿದ್ದಾರೆ. ಇಂದಿನಿಂದ, ರಾಷ್ಟ್ರೀಯ ರಾಜಧಾನಿ ಪ್ರದೇಶದ ಆನಂದ್ ವಿಹಾರ್ನಿಂದ ಅಗರ್ತಲಾಕ್ಕೆ ಪ್ರಯಾಣಿಸುವ ಸಾಪ್ತಾಹಿಕ ಆನಂದ್ ವಿಹಾರ್ - ಅಗರ್ತಲಾ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ (20501) ಈಗ ಜಾರ್ಖಂಡ್ನ ಸಾಹಿಬ್ಗಂಜ್ ನಿಲ್ದಾಣದಲ್ಲಿ ನಿಲ್ಲುತ್ತದೆ. ಸಾಹಿಬ್ಗಂಜ್ ರಾಜ್ಯದಲ್ಲಿ ಈ ರೈಲಿನ ಮೊದಲ ನಿಲುಗಡೆಯಾಗಲಿದೆ, ಹೀಗಾಗಿ ಇದು ಬಿಹಾರ ಮತ್ತು ಪಶ್ಚಿಮ ಬಂಗಾಳದ ನಡುವೆ ಜಾರ್ಖಂಡ್ನಲ್ಲಿ ರೈಲು ನಿಲ್ಲುವ ಏಕೈಕ ನಿಲ್ದಾಣವಾಗಿದೆ. ಇದು ಜಾರ್ಖಂಡ್ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು, ಇದೀಗ ಈಡೇರಿದೆ.

ಸಾಹಿಬ್ ಗಂಜ್-ಹೌರಾ ಇಂಟರ್ ಸಿಟಿ ಎಕ್ಸ್ಪ್ರೆಸ್ (13428) ಸಾಹಿಬ್ ಗಂಜ್ ಮತ್ತು ಹೌರಾ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುತ್ತದೆ. ರೈಲು ಸಕ್ರಿಗಾಲಿ, ತಿನ್ಪಹಾರ್, ಬರ್ಹರ್ವಾ, ಪಕೌರ್, ರಾಂಪುರ್ ಹ್ಯಾಟ್, ಬೋಲ್ಪುರ್ ಶಾಂತಿನಿಕೇತನ, ಬರ್ದ್ಧಮಾನ್ ಮತ್ತು ಬುಂದೇಲ್ ನಲ್ಲಿ ನಿಲ್ಲುತ್ತದೆ. ರೈಲು ಸಾಹಿಬ್ ಗಂಜ್ ನಿಂದ ಬೆಳಗ್ಗೆ 5:20 ಕ್ಕೆ ಹೊರಟು ಮಧ್ಯಾಹ್ನ 12:15 ಕ್ಕೆ ಹೌರಾ ತಲುಪಲಿದೆ. ಈ ರೈಲಿನ (13427) ಹಿಂದಿರುಗುವ ಪ್ರಯಾಣವು ಮಧ್ಯಾಹ್ನ 13: ಕ್ಕೆ ಹೌರಾದಿಂದ ಹೊರಟು 20:35  ಕ್ಕೆ ಸಾಹಿಬ್ಗಂಜ್ ತಲುಪಲಿದೆ. ರೈಲು 9 ಸಾಮಾನ್ಯ ಕೋಚ್ ಗಳು ಮತ್ತು 2 SLR/SLRD ಕೋಚ್ ಗಳನ್ನು ಹೊಂದಿರುತ್ತದೆ.

ಅಗರ್ತಲಾ, ಆನಂದ್ ವಿಹಾರ್-ಅಗರ್ತಲಾ ತೇಜಸ್ ರಾಜಧಾನಿ ಎಕ್ಸ್ ಪ್ರೆಸ್ (20502) ಮಾಲ್ಡಾ ವಿಭಾಗದ ಸಾಹಿಬ್ ಗಂಜ್ ನಿಲ್ದಾಣದಲ್ಲಿ ಹೊಸ ನಿಲುಗಡೆಯನ್ನು ಹೊಂದಿರುತ್ತದೆ. ರೈಲು 15.10.2024 ರಂದು 13:56 ಗಂಟೆಗೆ ಸಾಹಿಬ್ ಗಂಜ್ ನಿಲ್ದಾಣದಲ್ಲಿ ನಿಲ್ಲುತ್ತದೆ ಮತ್ತು ಇಲ್ಲಿಂದ 13:58 ಗಂಟೆಗೆ ಹೊರಡುತ್ತದೆ. ಹಿಂದಿರುಗುವಾಗ, ಈ ರೈಲು (20501) 10.10.2024 ರಂದು 17:01 ಗಂಟೆಗೆ ಸಾಹಿಬ್ ಗಂಜ್ ನಿಲ್ದಾಣದಲ್ಲಿ ನಿಲ್ಲುತ್ತದೆ ಮತ್ತು ಇಲ್ಲಿಂದ 17:03 ಗಂಟೆಗೆ ಹೊರಡುತ್ತದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, "ಸಂತಾಲ್ ಪರಗಣ ಪ್ರದೇಶವು ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಜಾರ್ಖಂಡ್ ಐತಿಹಾಸಿಕ ಸಂಸ್ಕೃತಿಯನ್ನು ಹೊಂದಿರುವ ದೊಡ್ಡ ರಾಜ್ಯವಾಗಿದೆ ಮತ್ತು ದೇಶದಾದ್ಯಂತ ಅನೇಕ ಕೈಗಾರಿಕೆಗಳು ವಿದ್ಯುತ್ ಪೂರೈಕೆಗಾಗಿ ಜಾರ್ಖಂಡ್ ರಾಜ್ಯವನ್ನು  ಅವಲಂಬಿಸಿವೆ. ಮೋದಿಯವರ ನಾಯಕತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನೀಡಿದ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳಬೇಕು. ಹತ್ತು ವರ್ಷಗಳ ಹಿಂದೆ ಜಾರ್ಖಂಡ್ ಗೆ ರೈಲ್ವೆ ಬಜೆಟ್ ನಲ್ಲಿ ಕೇವಲ ₹450 ಕೋಟಿ ಮೀಸಲಿಟ್ಟಿದ್ದು, ಇಂದು ₹7,300 ಕೋಟಿಗೆ ಏರಿಕೆಯಾಗಿದೆ. ಇದು ಜಾರ್ಖಂಡ್ನ ಅಭಿವೃದ್ಧಿಗಾಗಿ ಹೂಡಿಕೆಯಲ್ಲಿ 16 ಪಟ್ಟು ಹೆಚ್ಚಳವಾಗಿದೆ.

ಕಳೆದ ದಶಕದಲ್ಲಿ 1,200 ಕಿಲೋಮೀಟರ್ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಮತ್ತು ಜಾರ್ಖಂಡ್ನಲ್ಲಿ 100% ವಿದ್ಯುದ್ದೀಕರಣವನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. 57 ನಿಲ್ದಾಣಗಳ ಪುನರಾಭಿವೃದ್ಧಿ ಪ್ರಗತಿಯಲ್ಲಿದೆ ಮತ್ತು ರಾಜ್ಯದಾದ್ಯಂತ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಜಾರ್ಖಂಡ್ನಲ್ಲಿ ರೈಲ್ವೆ ವಲಯಕ್ಕೆ ₹56,000 ಕೋಟಿ ಹೂಡಿಕೆಯನ್ನು ಯೋಜಿಸಲಾಗಿದೆ. ಇದು ನಿವಾಸಿಗಳಿಗೆ ಉತ್ತಮ ಪ್ರಯಾಣ ಸೌಲಭ್ಯಗಳನ್ನು ಒದಗಿಸುತ್ತದೆ, ಹೊಸ ಕೈಗಾರಿಕೆಗಳನ್ನು ಆಕರ್ಷಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಪ್ರಯಾಣಿಸಲು ಸಾಧನಗಳನ್ನು ಹೊಂದಿರುತ್ತಾರೆ ಮತ್ತು ವೈದ್ಯಕೀಯ ಸೇವೆಗಳ ಅಗತ್ಯವಿರುವವರಿಗೆ ಸಾರಿಗೆ ಸೌಲಭ್ಯವೂ ಇರುತ್ತದೆ.

ಸಾಹಿಬ್‌ಗಂಜ್   ಮತ್ತು ಸಾಹಿಬ್ ಗಂಜ್ ನಿಂದ ಹೌರಾಕ್ಕೆ ಹೋಗುವ ಮಾರ್ಗದ ಗ್ರಾಮಗಳು, ಪಟ್ಟಣಗಳು ಮತ್ತು ನಗರಗಳ ನಿವಾಸಿಗಳಿಗೆ ಶುಭ ಹಾರೈಸಿದ ಸಚಿವರು, ಶ್ರೀ ನಿಶಿಕಾಂತ್ ದುಬೆ ಮತ್ತು ಶ್ರೀ ಅನಂತ್ ಕುಮಾರ್ ಓಜಾ ಅವರು ತಮ್ಮ ಪ್ರದೇಶಗಳಿಗೆ ಸೇವೆ ಸಲ್ಲಿಸುವಲ್ಲಿ ಮಾಡಿದ ಶ್ಲಾಘನೀಯ ಪ್ರಯತ್ನಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು. ಸವಾಲುಗಳನ್ನು ಎತ್ತಿ ಹಿಡಿಯಲು ಮಾತ್ರವಲ್ಲದೆ ಪರಿಣಾಮಕಾರಿ ಪರಿಹಾರಗಳನ್ನು ತರಲು ಅವರ ನಿರಂತರ ಅನುಸರಣೆ ಮತ್ತು ಬದ್ಧತೆಯನ್ನು ಅವರು ಒಪ್ಪಿಕೊಂಡರು. ಈ ಸಹಯೋಗದ ಮನೋಭಾವವು ಸಾಹಿಬ್ ಗಂಜ್ ನಿಂದ ಹೌರಾಕ್ಕೆ ಹೊಸ ರೈಲು ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗಿಸಿದೆ ಎಂದು ಅವರು ಹೇಳಿದರು.

ಗೊಡ್ಡಾದ ಸಂಸದರಾದ ಶ್ರೀ ನಿಶಿಕಾಂತ್ ದುಬೆ ಅವರು ರೈಲ್ ಭವನದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಾರ್ಖಂಡ್ ನ ರಾಜಮಹಲ್ ನ ಶಾಸಕರಾದ ಶ್ರೀ ಅನಂತ್ ಕುಮಾರ್ ಓಜಾ ಅವರು ಸಾಹಿಬ್ ಗಂಜ್ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೈಲ್ವೆ ಸಚಿವರು ಪರಿಚಯಿಸಿದ ರೈಲ್ವೆ ಯೋಜನೆಗಳನ್ನು ಇಬ್ಬರೂ ನಾಯಕರು ಶ್ಲಾಘಿಸಿದರು. 140 ವರ್ಷಗಳ ಹಿಂದೆ ನಿರ್ಮಿಸಲಾದ ಗಿರಿದಿಹ್ ರೈಲು ನಿಲ್ದಾಣದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ರೈಲುಗಳು ಸಂಚರಿಸಿರಲಿಲ್ಲ ಎಂದು ಶ್ರೀ ದುಬೆ ಹೇಳಿದರು. ಈ ಬೆಳವಣಿಗೆಯು ಹೊಸ ಸೇವೆಗಳೊಂದಿಗೆ ಜಾರ್ಖಂಡ್ ನ ಜನರಿಗೆ ನವರಾತ್ರಿ ಹಬ್ಬದ ಸಮಯದಲ್ಲಿ ವಿಶೇಷ ಕೊಡುಗೆಯಾಗಿ ಮೂರು ಮಹತ್ವದ ಶಕ್ತಿ ಪೀಠಗಳಾದ ಕಾಮಾಖ್ಯ, ತ್ರಿಪುರ ಸುಂದರಿ ಮತ್ತು ಕಾಳಿಘಾಟ್ ಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶವನ್ನು ಒದಗಿಸುತ್ತದೆ ಎಂದು ಅವರು  ಹೇಳಿದರು.

 

*****
 


(Release ID: 2064073) Visitor Counter : 43


Read this release in: English , Urdu , Hindi