ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಜಾಗೃತಿಯಿಂದ ಕ್ರಮದವರೆಗೆ: ವಿಶೇಷಚೇತನರಿಗೆ(ಅಂಗವಿಕಲರು) ಹಕ್ಕುಗಳನ್ನು ಕಲ್ಪಿಸುವ ಭಾರತದ ಬದ್ಧತೆ
Posted On:
05 OCT 2024 6:33PM by PIB Bengaluru
ಭಾರತದಲ್ಲಿ ವಿಶೇಷಚೇತನರ(ಅಂಗವಿಕಲರು) ಹಕ್ಕುಗಳು ಪರಿವರ್ತನೀಯ ಬದಲಾವಣೆಗೆ ಒಳಗಾಗುತ್ತಿವೆ. ವಿಶೇಷಚೇತನರ(ಪಿಡಬ್ಲ್ಯುಡಿ) ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯಿಂದ ಇದು ಪ್ರೇರೇಪಿಸಲ್ಪಟ್ಟಿದೆ. ಈ ಆಂದೋಲನವು ವಿವಿಧ ನೀತಿಗಳು ಮತ್ತು ಉಪಕ್ರಮಗಳಿಂದ ಬೆಂಬಲಿತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಭೌತಿಕ ಸಾಮರ್ಥ್ಯ ಲೆಕ್ಕಿಸದೆ, ಅವಕಾಶಗಳನ್ನು ಪಡೆಯಬಹುದು ಮತ್ತು ಸಮಾಜದಲ್ಲಿ ಸಂಪೂರ್ಣವಾಗಿ ಭಾಗವಹಿಸಬಹುದು ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ. ಶಿಕ್ಷಣ, ಸಾರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಡೆತಡೆ ಮುಕ್ತ ವಾತಾವರಣ ಸೃಷ್ಟಿಸಲು ಸರ್ಕಾರವು ಪ್ರಾರಂಭಿಸಿರುವ “ಆಕ್ಸೆಸಿಬಲ್(ಪ್ರವೇಶಿಸಬಹುದಾದ) ಇಂಡಿಯಾ” ಅಭಿಯಾನವು ಈ ಪ್ರಯತ್ನದ ಕೇಂದ್ರ ಭಾಗವಾಗಿದೆ. ಇದರಿಂದಾಗಿ ಎಲ್ಲರಿಗೂ ಸವಲತ್ತುಗಳ ಲಭ್ಯತೆ ಹೆಚ್ಚಿಸುತ್ತದೆ.
ಭಾರತ ಸರ್ಕಾರವು ಆರ್ಥಿಕ ನೆರವು ಕಾರ್ಯಕ್ರಮಗಳು, ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಮತ್ತು ಶಿಕ್ಷಣಕ್ಕೆ ಬೆಂಬಲ ಸೇರಿದಂತೆ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪ್ರಯತ್ನಗಳ ಪೈಕಿ, ದಿವ್ಯ ಕಲಾ ಮೇಳವು, ವಿಭಿನ್ನ-ವಿಶೇಷಚೇತನ ಕುಶಲಕರ್ಮಿಗಳಿಗೆ ವೇದಿಕೆ ಕಲ್ಪಿಸುವ, ಅವರ ಪ್ರತಿಭೆಯನ್ನು ಪ್ರದರ್ಶಿಸುವ ಮತ್ತು ಸಮುದಾಯದೊಳಗೆ ಆರ್ಥಿಕ ಸ್ವಾವಲಂಬನೆಯನ್ನು ಬೆಳೆಸುವ ಕಾರ್ಯಕ್ರಮವಾಗಿದೆ.
ಇದಲ್ಲದೆ, ಸರ್ಕಾರವು ಈ ಆಂದೋಲನದ ಪ್ರಮುಖ ಅಂಶಗಳಾಗಿ ಸಾಂಸ್ಕೃತಿಕ ಮತ್ತು ಕಲಾತ್ಮಕ ಅಭಿವ್ಯಕ್ತಿಗಳ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ವಿಷೇಶಚೇತನರ ಪ್ರತಿಭೆಯನ್ನು ಎತ್ತಿ ತೋರಿಸುವ ಮೂಲಕ, ಸಮಾಜವು ಏಕರೂಪ ಅಥವಾ ಒಂದೇ ಮಾದರಿಯ ಬದಲಾವಣೆ(ಸ್ಟೀರಿಯೊಟೈಪ್)ಗಳನ್ನು ಸವಾಲು ಮಾಡಬಹುದು ಮತ್ತು ಅವರ ಸಾಮರ್ಥ್ಯಗಳ ಬಗ್ಗೆ ಹೆಚ್ಚು ಸೂಕ್ಷ್ಮವಾದ ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ಭಾರತವು ಈ ಪ್ರಯಾಣದಲ್ಲಿ ಪ್ರಗತಿ ಕಾಣುತ್ತಿರುವಂತೆ, ವಿಶೇಷಚೇತನರ ಹಕ್ಕುಗಳ ಮೇಲಿನ ಒತ್ತುವು ಎಲ್ಲಾ ವ್ಯಕ್ತಿಗಳ ವೈವಿಧ್ಯಮಯ ಕೊಡುಗೆಗಳನ್ನು ಗುರುತಿಸುವ ಸರ್ಕಾರದ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ಅಂತಿಮವಾಗಿ ಹೆಚ್ಚಾದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಮಾನ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುತ್ತದೆ.
“ಪ್ರವೇಶಿಸಬಹುದಾದ ಭಾರತ” ಅಭಿಯಾನ
ಅಕ್ಸೆಸಿಬಲ್(ಪ್ರವೇಶಿಸಬಹುದಾದ) ಇಂಡಿಯಾ ಅಭಿಯಾನ(ಸುಗಮ್ಯ ಭಾರತ್ ಅಭಿಯಾನ)ವು 2015 ಡಿಸೆಂಬರ್ 3ರಂದು ಅಂಗವಿಕಲರ ಸಬಲೀಕರಣ ಇಲಾಖೆ (ಡಿಇಪಿಡಬ್ಲ್ಯುಡಿ) ಮೂಲಕ ಭಾರತದಾದ್ಯಂತ ವಿಶೇಷಚೇತನರಿಗೆ(ಪಿಡಬ್ಲ್ಯುಡಿ) ಸಾರ್ವತ್ರಿಕ ಪ್ರವೇಶ(ಲಭ್ಯತೆ) ಸಾಧಿಸುವ ಗುರಿ ಹೊಂದಿದೆ.
ಪ್ರಮುಖ ಗಮನ ಕೇಂದ್ರೀಕೃತ ಪ್ರದೇಶಗಳು ಸೇರಿವೆ:
1. ಅಂತರ್ನಿರ್ಮಿತ ಪರಿಸರ ಪ್ರವೇಶ: ಎಲ್ಲರಿಗೂ ತಡೆ-ಮುಕ್ತ ಪ್ರವೇಶ ಖಚಿತಪಡಿಸಲು ಶಾಲೆಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕೆಲಸದ ಸ್ಥಳಗಳಂತಹ ಭೌತಿಕ ಸ್ಥಳಗಳನ್ನು ಹೆಚ್ಚಿಸುವುದು.
2. ಸಾರಿಗೆ ಪ್ರವೇಶ ಸಾಧ್ಯತೆ: ಪಿಡಬ್ಲ್ಯಡಿಗಳಿಗೆ ಸ್ವತಂತ್ರ ಚಲನಶೀಲತೆ ಸುಲಭಗೊಳಿಸಲು ವಿಮಾನ ಪ್ರಯಾಣ, ಬಸ್ಸುಗಳು, ಟ್ಯಾಕ್ಸಿಗಳು ಮತ್ತು ರೈಲುಗಳಂತಹ ವಿವಿಧ ಸಾರಿಗೆ ವಿಧಾನಗಳಿಗೆ ಪ್ರವೇಶ ಸುಧಾರಿಸುವುದು.
3. ಮಾಹಿತಿ ಮತ್ತು ಸಂವಹನ: ವೆಬ್‌ಸೈಟ್ ಪ್ರವೇಶ ಸುಧಾರಿಸುವ ಮೂಲಕ ಪ್ರವೇಶಿಸಬಹುದಾದ ಮಾಹಿತಿ ಪರಿಸರ ವ್ಯವಸ್ಥೆ ರಚಿಸುವುದು, ಆಡಿಯೊ-ದೃಶ್ಯ ಮಾಧ್ಯಮ ವಿಷಯ ಒದಗಿಸುವುದು ಮತ್ತು ನಿರ್ಣಾಯಕ ಮಾಹಿತಿಯನ್ನು ದೈನಂದಿನ ಜೀವನಕ್ಕೆ ಅರ್ಥವಾಗುವಂತೆ ಖಚಿತಪಡಿಸಿಕೊಳ್ಳುವುದು.
4. ಸಂಜ್ಞೆ ಭಾಷೆಯ ಪ್ರವೇಶ: ಕಿವುಡ ಮತ್ತು ಶ್ರವಣ ಕಷ್ಟದ ಸಮುದಾಯಗಳನ್ನು ಬೆಂಬಲಿಸಲು ಸಾರ್ವಜನಿಕ ದೂರದರ್ಶನ ಸುದ್ದಿಗಳಲ್ಲಿ ಶೀರ್ಷಿಕೆ ಮತ್ತು ವ್ಯಾಖ್ಯಾನವನ್ನು ಹೆಚ್ಚಿಸುವ ಜತೆಗೆ ಸಂಕೇತ ಭಾಷೆಯ ಮಧ್ಯಸ್ಥಿಕೆಗಳ ಲಭ್ಯತೆ ಮತ್ತು ತರಬೇತಿ ಹೆಚ್ಚಿಸುವುದು.
ದಿವ್ಯ ಕಲಾ ಮೇಳ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2022 ಡಿಸೆಂಬರ್ 2ರಂದು ಉದ್ಘಾಟಿಸಿದ ದಿವ್ಯ ಕಲಾ ಮೇಳ, ದಿವ್ಯಾಂಗರು ಅಥವಾ ವಿಶೇಷಚೇತನರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಬಲೀಕರಣದ ಕಡೆಗೆ ಸಾಗುವ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಪ್ರತಿನಿಧಿಸುತ್ತದೆ. ಈ ಘಟನೆಯು ದೇಶದಲ್ಲಿ ಅಂಗವೈಕಲ್ಯ ಮತ್ತು ಕರಕುಶಲತೆಯ ಸುತ್ತ ವಿಕಸನಗೊಳ್ಳುತ್ತಿರುವ ನಿರೂಪಣೆಗೆ ಸಾಕ್ಷಿಯಾಗಿದೆ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಇದು ಎತ್ತಿ ತೋರಿಸುತ್ತದೆ.
ಐತಿಹಾಸಿಕವಾಗಿ, ಭಾರತದಲ್ಲಿ ಕುಶಲಕರ್ಮಿಗಳು ಅನೇಕ ಸಮುದಾಯಗಳಿಗೆ ಗುರುತಿನ ಮತ್ತು ಜೀವನೋಪಾಯದ ಮೂಲವಾಗಿದೆ. ಶತಮಾನಗಳಿಂದಲೂ, ಕರಕುಶಲಗಳನ್ನು ತಲೆಮಾರುಗಳ ಮೂಲಕ ರವಾನಿಸಲಾಗಿದೆ. ಸ್ಥಳೀಯ ಸಂಪ್ರದಾಯಗಳು ಮತ್ತು ಕೌಶಲ್ಯಗಳನ್ನು ಒಟ್ಟಿಗೆ ಹೆಣೆಯಲಾಗಿದೆ. ಆದಾಗ್ಯೂ, ಈ ಶ್ರೀಮಂತ ಮೇಳದಲ್ಲಿ ದಿವ್ಯಾಂಗ ಕುಶಲಕರ್ಮಿಗಳ ಭಾಗವಹಿಸುವಿಕೆಯನ್ನು ಸಾಮಾನ್ಯವಾಗಿ ಕಡೆಗಣಿಸಲಾಗಿದೆ. ದಿವ್ಯ ಕಲಾ ಮೇಳದ ಸ್ಥಾಪನೆಯು ಈ ಕುಶಲಕರ್ಮಿಗಳ ಕೊಡುಗೆಗಳನ್ನು ಗುರುತಿಸುವಲ್ಲಿ ಮತ್ತು ಪ್ರೋತ್ಸಾಹಿಸುವಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ.
ಪ್ರಾರಂಭದಿಂದಲೂ, ದಿವ್ಯ ಕಲಾ ಮೇಳವು ವೇಗವಾಗಿ ವಿಸ್ತರಿಸಿದೆ, ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಇಂತಹ 20 ಮೇಳಗಳನ್ನು ಆಯೋಜಿಸಲಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಲಾಗಿತ್ತು. ಅಲ್ಲಿ 100 ಪ್ರತಿನಿಧಿಗಳು ಗೃಹಾಲಂಕಾರ, ಬಟ್ಟೆ, ಪರಿಸರ ಸೇರಿದಂತೆ ವಿವಿಧ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸಿದರು. ಸಾವಯವ ಆಹಾರಗಳು ಮತ್ತು ಕೈಮಗ್ಗಗಳ ಜತೆಗೆ ಪರಿಸರಸ್ನೇಹಿ ಲೇಖನ ಸಾಮಗ್ರಿಗಳು, ಆಟಿಕೆಗಳು ಮತ್ತು ವೈಯಕ್ತಿಕ ಪರಿಕರಗಳು ಇದರಲ್ಲಿ ಸೇರಿದ್ದವು. ಮೇಳವು ಸರ್ಕಾರದ "ಸ್ಥಳೀಯವಾಗಿ ತಯಾರಿಸಿ(ವೋಕಲ್ ಫಾರ್ ಲೋಕಲ್)" ಉಪಕ್ರಮದೊಂದಿಗೆ ಸಂಯೋಜಿಸುತ್ತದೆ. ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೆಲಸವನ್ನು ಬೆಂಬಲಿಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.
ಈ ಬೆಳವಣಿಗೆಯು ದಿವ್ಯಾಂಗ ಕುಶಲಕರ್ಮಿಗಳ ಪ್ರತಿಭೆ ಗುರುತಿಸುವುದು ಮಾತ್ರವಲ್ಲದೆ, ಈ ಸಮುದಾಯಗಳಲ್ಲಿ ಸ್ವಾವಲಂಬನೆ ಮತ್ತು ಆರ್ಥಿಕ ಸಬಲೀಕರಣ ಬೆಳೆಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿ ಮೇಳವು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಕುಶಲಕರ್ಮಿಗಳು ತಮ್ಮ ಕೆಲಸವನ್ನು ಪ್ರದರ್ಶಿಸಲು, ಸ್ಥಳೀಯ ಮಾರುಕಟ್ಟೆಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸಂಭಾವ್ಯ ಖರೀದಿದಾರರು ಮತ್ತು ವ್ಯಾಪಾರ ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.
ಮೇಳವು ಕರಕುಶಲ ವಸ್ತುಗಳು, ಕೈಮಗ್ಗಗಳು ಮತ್ತು ಸಾವಯವ ವಸ್ತುಗಳನ್ನು ಒಳಗೊಂಡಂತೆ ಶ್ರೀಮಂತ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಇದು ಭಾರತೀಯ ಕರಕುಶಲತೆಯ ವೈವಿಧ್ಯತೆ ತೋರುವುದು ಮಾತ್ರವಲ್ಲದೆ, ಪ್ರತಿಯೊಂದು ಸೃಷ್ಟಿಯ ಹಿಂದಿನ ವಿಶಿಷ್ಟ ಕಥೆಗಳನ್ನು ಸಹ ವಿವರಿಸುತ್ತದೆ. ಪ್ರತಿಯೊಬ್ಬ ಕುಶಲಕರ್ಮಿಗಳ ಕೆಲಸವು ಅವರ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ, ಆದರೆ, ಮುಖ್ಯವಾಗಿ, ಇದು ಸಮಾಜದಲ್ಲಿ ಹೊಂದಾಣಿಕೆ ಮತ್ತು ಮನ್ನಣೆಯ ಬಯಕೆಯನ್ನು ಸಂಕೇತಿಸುತ್ತದೆ.
ಉತ್ಸವದ ಕೇಂದ್ರ ಭಾಗವು "ದಿವ್ಯ ಕಲಾ ಶಕ್ತಿ" ಎಂಬ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ, ಇದು ದಿವ್ಯಾಂಗ ಕಲಾವಿದರ ಪ್ರದರ್ಶನಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ವಿಶೇಷಚೇತನ ಸಮುದಾಯದ ಅಪಾರ ಪ್ರತಿಭೆಯನ್ನು ಎತ್ತಿ ತೋರಿಸುವುದಲ್ಲದೆ ಕಲೆಗೆ ಅವರ ಸಾಮರ್ಥ್ಯಗಳು ಮತ್ತು ಕೊಡುಗೆಗಳ ಬಗ್ಗೆ ಪ್ರಬಲ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ಸಾಹ ಮತ್ತು ಸೃಜನಶೀಲತೆಯಿಂದ ತುಂಬಿದ ಈ ಪ್ರದರ್ಶನಗಳು, ಸಾಮಾಜಿಕ ಗ್ರಹಿಕೆಗಳಿಗೆ ಸವಾಲು ಹಾಕುತ್ತವೆ ಮತ್ತು ಬದಲಾವಣೆಯನ್ನು ಪ್ರೇರೇಪಿಸುತ್ತವೆ, ಕಲೆಗೆ ಯಾವುದೇ ಗಡಿಗಳಿಲ್ಲ ಎಂದು ಸಾರುತ್ತದೆ.
ಇದಲ್ಲದೆ, ಈ ಕಾರ್ಯಕ್ರಮವನ್ನು ಎನ್ಎಚ್ಎಫ್ ಡಿಸಿ, ಎನ್ ಬಿಸಿಎಫ್ ಡಿಸಿ, ಎನ್ಎಸ್ಎಫ್ ಡಿಸಿ ಮತ್ತು ಎನ್ ಎಸ್ ಕೆಡಿಎಫ್ ಸಿಯಂತಹ ಹಣಕಾಸು ಸಂಸ್ಥೆಗಳು ಬೆಂಬಲಿಸಿದವು. ಇದು ಕುಶಲಕರ್ಮಿಗಳಿಗೆ ಆರ್ಥಿಕ ಸಹಾಯ ಒದಗಿಸುವ ಗುರಿ ಹೊಂದಿದೆ. ಈ ಪಾಲುದಾರಿಕೆಯು ದಿವ್ಯಾಂಗ ಕುಶಲಕರ್ಮಿಗಳನ್ನು ಉನ್ನತೀಕರಿಸಲು ಉದ್ದೇಶಿತ ಬೆಂಬಲದ ಅಗತ್ಯತೆಯ ಹೆಚ್ಚುತ್ತಿರುವ ಗುರುತಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ, ಅವರ ಆರ್ಥಿಕ ಸುಸ್ಥಿರತೆ ಮತ್ತು ವಿಶಾಲ ಮಾರುಕಟ್ಟೆಯಲ್ಲಿ ಏಕೀಕರಣವನ್ನು ಖಾತ್ರಿಪಡಿಸುತ್ತದೆ.
ದಿವ್ಯ ಕಲಾ ಮೇಳವು ದೇಶಾದ್ಯಂತ ನಡೆಯುತ್ತಿರುವುದರಿಂದ, ಇದು ಎಲ್ಲಾ ವ್ಯಕ್ತಿಗಳ ಒಳಗೊಳ್ಳುವಿಕೆ ಮತ್ತು ಸಾಮರ್ಥ್ಯಗಳನ್ನು ಗುರುತಿಸುವ ಕಡೆಗಿನ ವಿಶಾಲವಾದ ಆಂದೋಲನವಾಗಿದೆ. ಇದು ಪರಂಪರೆ, ಕೌಶಲ್ಯ ಮತ್ತು ಸಬಲೀಕರಣದ ಆಚರಣೆಯಾಗಿದೆ. ವಿಭಿನ್ನ-ವಿಶೇಷಚೇತನರ ಕೊಡುಗೆಗಳನ್ನು ಹೆಚ್ಚಾಗಿ ಬದಿಗೊತ್ತಿದ ಐತಿಹಾಸಿಕ ನಿರೂಪಣೆಗಳನ್ನು ಸವಾಲು ಮಾಡುತ್ತದೆ. ಈ ರೀತಿಯಾಗಿ, ದಿವ್ಯ ಕಲಾ ಮೇಳವು ದಿವ್ಯಾಂಗ ಕುಶಲಕರ್ಮಿಗಳ ಪ್ರಸ್ತುತ ಪ್ರತಿಭೆಯನ್ನು ಪ್ರದರ್ಶಿಸುವುದಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಅಂಗೀಕರಿಸುವ ಮತ್ತು ಆಚರಿಸುವ ಹೆಚ್ಚಿನ ಎಲ್ಲರನ್ನೂ ಒಳಗೊಂಡ ಭವಿಷ್ಯಕ್ಕಾಗಿ ವೇದಿಕೆ ರೂಪಿಸುತ್ತದೆ.
ವಿಶೇಷಚೇತನರಿಗೆ ಭಾರತ ಸರ್ಕಾರ ಕೈಗೊಂಡ ಉಪಕ್ರಮಗಳು
ಉಪಕ್ರಮಗಳು
1. 2016ರ ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ: ವಿಶೇಷಚೇತನರ ಹಕ್ಕುಗಳ (ಆರ್ ಪಿಡಬ್ಲ್ಯುಡಿ) ಕಾಯಿದೆಯನ್ನು 2016ರಲ್ಲಿ ಜಾರಿಗೊಳಿಸಲಾಯಿತು. 1995ರ ವಿಶೇಷಚೇತನರ ಕಾಯಿದೆಗೆ ಬದಲಾಗಿ 2017 ಏಪ್ರಿಲ್ 19ರಂದು ಇದು ಜಾರಿಗೆ ಬಂದಿತು. ವಿಶೇಷಚೇತನರು ತಾರತಮ್ಯ ಮುಕ್ತವಾಗಿ ಮತ್ತು ಸಮಾನ ಅವಕಾಶಗಳೊಂದಿಗೆ ಘನತೆಯಿಂದ ಬದುಕುವುದನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ಈ ಕಾಯಿದೆಯು ಹಕ್ಕುಗಳನ್ನು ಎತ್ತಿಹಿಡಿಯಲು ನಿರ್ದಿಷ್ಟ ನಿಬಂಧನೆಗಳನ್ನು ಒಳಗೊಂಡಿದೆ. ಇದು ವಿಶಏಷಚೇತನರ ಹಕ್ಕುಗಳ(ಯುಎನ್ ಸಿಆರ್ ಪಿಡಿ) ಕುರಿತ ವಿಶ್ವಸಂಸ್ಥೆಯ ಒಡಂಬಡಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಅದಕ್ಕೆ ಭಾರತವು ಸಹಿ ಮಾಡಿದೆ.
2. ನರರೋಗ, ಸೆರೆಬ್ರಲ್ ಪಾಲ್ಸಿ(ಮೆದುಳು ಊನತೆ), ಮಾನಸಿಕ ಅಸ್ವಸ್ಥತೆ ಮತ್ತು ಬಹುಮುಖ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ 1999(6)ರ ರಾಷ್ಟ್ರೀಯ ಟ್ರಸ್ಟ್: ಈ ಕಾಯಿದೆಯು ನರರೋಗ, ಮೆದುಳು ಊನತೆ, ಮಾನಸಿಕ ಅಸ್ವಸ್ಥತೆ ಮತ್ತು ಬಹುಮುಖ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ ಮೀಸಲಾಗಿರುವ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸುತ್ತದೆ. ಇದಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಪ್ರಾಸಂಗಿಕ ನಿಬಂಧನೆಗಳ ಜೊತೆಗೆ ಬಹು ಅಂಗವೈಕಲ್ಯಗಳು ಸೇರಿವೆ.
3. 1992ರ ರಿಹ್ಯಾಬಿಲಿಟೇಶನ್ ಕೌನ್ಸಿಲ್ ಆಫ್ ಇಂಡಿಯಾ ಆಕ್ಟ್: ಭಾರತೀಯ ಪುನರ್ವಸತಿ ಮಂಡಳಿ(ಆರ್ ಸಿಐ)ಯನ್ನು 1986ರಲ್ಲಿ ನೋಂದಾಯಿತ ಸೊಸೈಟಿಯಾಗಿ ಸ್ಥಾಪಿಸಲಾಯಿತು. 1992 ಸೆಪ್ಟೆಂಬರ್ ನಲ್ಲಿ, ಆರ್ ಸಿಐ ಕಾಯಿದೆಯನ್ನು ಸಂಸತ್ತು ಜಾರಿಗೊಳಿಸಿತು., 1993 ಜೂನ್ 22ರಂದು ಅದನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡಿತು. ಅದರ ವ್ಯಾಪ್ತಿ ವಿಸ್ತರಿಸಲು 2000ರಲ್ಲಿ ಕಾಯಿದೆ ತಿದ್ದುಪಡಿ ಮಾಡಲಾಯಿತು. ಆರ್ ಸಿಐ ಆದೇಶವು ವಿಶೇಷಚೇತನರಿಗೆ ಸೇವೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡುವುದು, ಪಠ್ಯಕ್ರಮಗಳನ್ನು ಪ್ರಮಾಣೀಕರಿಸುವುದು, ಪುನರ್ವಸತಿ ಮತ್ತು ವಿಶೇಷ ಶಿಕ್ಷಣ ಕ್ಷೇತ್ರಗಳಲ್ಲಿ ಅರ್ಹ ವೃತ್ತಿಪರರು ಮತ್ತು ಸಿಬ್ಬಂದಿಯ ಪುನರ್ವಸತಿ ನೋಂದಣಿ ನಿರ್ವಹಿಸುವುದು ಇದರಲ್ಲಿ ಒಳಗೊಂಡಿದೆ.
4. 2016ರ ವಿಶೇಷಚೇತನರ ಹಕ್ಕುಗಳ ಅನುಷ್ಠಾನದ ಯೋಜನೆ(ಎಸ್ಐಪಿಡಿಎ): ಈ ಯೋಜನೆಯನ್ನು 2015 ಮಾರ್ಚ್ ನಲ್ಲಿ ಪ್ರಾರಂಭಿಸಲಾಯಿತು. ಕೌಶಲ್ಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾಯೋಜನೆ(ಎನ್ಎಪಿ), ಶ್ರವಣ ಮತ್ತು ಮಾತಿನ ದುರ್ಬಲತೆ ಹೊಂದಿರುವವರು ಸೇರಿದಂತೆ 15ರಿಂದ 59 ವರ್ಷ ವಯಸ್ಸಿನ ವಿಶೇಷಚೇತನರಿಗೆ ಕೌಶಲ್ಯ ತರಬೇತಿ ನೀಡಲು ಇದು ಗಮನ ಕೇಂದ್ರೀಕರಿಸುತ್ತದೆ. ಈ ಯೋಜನೆಯನ್ನು ರಕ್ಷಣಾತ್ಮಕ ಯೋಜನೆ ಎಸ್ಐಪಿಡಿಎ ಅಡಿ ಜಾರಿಗೊಳಿಸಲಾಗಿದೆ.
ಡಿಇಪಿಡಬ್ಲ್ಯುಡಿ ಮೂಲಕ ವಿಶೇಷಚೇತನರ ಸಬಲೀಕರಣಕ್ಕಾಗಿ ಯೋಜನೆಗಳು
1. ಸಾಧನಗಳು, ಉಪಕರಣಗಳ ಖರೀದಿ, ಅಳವಡಿಕೆಗಾಗಿ ವಿಶೇಷಚೇತನರಿಗೆ ನೆರವು (ಎಡಿಐಪಿ): 1981ರಿಂದ ಇಲಾಖೆಯು ಎಡಿಐಪಿ ಯೋಜನೆಯ ಕಾರ್ಯಾಚರಣೆಯನ್ನು ಜಾರಿಗೊಳಿಸಿದೆ. ಕಿವುಡ ಮತ್ತು ಮೂಕ ವ್ಯಕ್ತಿಗಳು ಸೇರಿದಂತೆ ಅರ್ಹ ವಿಶೇಷಚೇತನರಿಗೆ ಸಹಾಯ ಮತ್ತು ಸಹಾಯಕ ಸಾಧನಗಳನ್ನು ವಿತರಿಸಲು ವಿವಿಧ ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡುತ್ತದೆ. . ಈ ಯೋಜನೆಯು ಶ್ರವಣ ದೋಷವಿರುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಒದಗಿಸುವ ನಿಬಂಧನೆ ಒಳಗೊಂಡಿದೆ.
2. ಸಮರ್ಥ ವಿಶ್ರಾಂತಿ ಆರೈಕೆ: ರಾಷ್ಟ್ರೀಯ ಟ್ರಸ್ಟ್ ಕಾಯಿದೆ ಅಡಿ, ಗುರುತಿಸಲ್ಪಟ್ಟಿರುವ ಬಿಪಿಎಲ್ ಮತ್ತು ಎಲ್ಐಜಿ ಕುಟುಂಬಗಳ ಅನಾಥರಿಗೆ, ಬಿಕ್ಕಟ್ಟಿನಲ್ಲಿರುವ ಕುಟುಂಬಗಳಿಗೆ ಮತ್ತು ವಿಶೇಷಚೇತನರಿಗೆ ತಾತ್ಕಾಲಿಕ ವಸತಿ ಒದಗಿಸುವ ಕಾರ್ಯಕ್ರಮ ಇದಾಗಿದೆ.
3. ಕಿವುಡರ ಕಾಲೇಜುಗಳಿಗೆ ಹಣಕಾಸಿನ ನೆರವು: ಭಾರತದ 5 ಪ್ರದೇಶಗಳಲ್ಲಿ ಕಿವುಡರಿಗಾಗಿ ಅಸ್ತಿತ್ವದಲ್ಲಿರುವ ಕಾಲೇಜುಗಳಿಗೆ ಹಣಕಾಸಿನ ಬೆಂಬಲ ಒದಗಿಸಲಾಗಿದೆ. ಈ ಉಪಕ್ರಮವು ಯುಜಿಸಿ-ಅನುಮೋದಿತ ಸಂಸ್ಥೆಗಳೊಂದಿಗೆ ಸಂಯೋಜಿತವಾಗಿರುವ ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಪ್ರವೇಶ ಖಚಿತಪಡಿಸುತ್ತದೆ.
4. ದೀನದಯಾಳ್ ದಿವ್ಯಾಂಗರ ಪುನರ್ವಸತಿ ಯೋಜನೆ(ಡಿಡಿಆರ್ ಎಸ್): ಕೇಂದ್ರೀಯ ವಲಯದ ಈ ಯೋಜನೆಯು ಎನ್‌ಜಿಒಗಳಿಗೆ ಪ್ರಿಸ್ಕೂಲ್‌ಗಳು, ಆರಂಭಿಕ ಹಸ್ತಕ್ಷೇಪ, ಕಿವುಡ ಮತ್ತು ಮೂಕ ವಿದ್ಯಾರ್ಥಿಗಳು ಒಳಗೊಂಡಿರುವ ವಿಶೇಷ ಶಾಲೆಗಳು, ಮತ್ತು ವಿಶೇಷಚೇತನ(ಪಿಡಬ್ಲ್ಯುಡಿಗಳು)ರ ಕಲ್ಯಾಣಕ್ಕಾಗಿ ಸಮುದಾಯ ಆಧಾರಿತ ಪುನರ್ವಸತಿ ಮುಂತಾದ ಯೋಜನೆಗಳನ್ನು ನಡೆಸುತ್ತಿದೆ..
5. ರಾಷ್ಟ್ರೀಯ ದಿವ್ಯಾಂಗಜನ ಹಣಕಾಸು ಮತ್ತು ಅಭಿವೃದ್ಧಿ ನಿಗಮ(ಎನ್ ಡಿಎಫ್ ಡಿಸಿ): ಪಿಡಬ್ಲ್ಯುಡಿಗಳ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕಾಗಿ ಎನ್ ಡಿಎಫ್ ಡಿಸಿ ರಿಯಾಯಿತಿ ಸಾಲಗಳನ್ನು ಒದಗಿಸುತ್ತದೆ. ಇದು 2 ಪ್ರಮುಖ ಯೋಜನೆಗಳನ್ನು ನಿರ್ವಹಿಸುತ್ತದೆ: ದಿವ್ಯಾಂಗ ಸ್ವಾವಲಂಬನೆ ಯೋಜನೆ(ಡಿಎಸ್ ವೈ) ಮತ್ತು ವಿಶೇಷ ಸಣ್ಣ ಹಣಕಾಸು ಯೋಜನೆ(ವಿಎಂವೈ).
6. ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ: ಇಲಾಖೆಯು ಸ್ಕಾಲರ್‌ಶಿಪ್‌ಗಳಿಗಾಗಿ ಒಂದು ಪ್ರಧಾನ(ರಕ್ಷಣಾತ್ಮಕ) ಯೋಜನೆ ಜಾರಿಗೊಳಿಸಿದೆ, ಇದು 6 ಘಟಕಗಳನ್ನು ಒಳಗೊಂಡಿದೆ.
7. ಡಿಪ್ಲೊಮಾ ಇನ್ ಟೀಚಿಂಗ್ ಇಂಡಿಯನ್ ಸೈನ್ ಲ್ಯಾಂಗ್ವೇಜ್: ಇಂಡಿಯನ್ ಸೈನ್ ಲ್ಯಾಂಗ್ವೇಜ್ ರಿಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್(ಐಎಸ್ಎಲ್ಆರ್ ಟಿಸಿ)ನಿಂದ ನಡೆಸಲ್ಪಡುವ ಈ ಕಾರ್ಯಕ್ರಮವು ವಿಶಿಷ್ಟ ಅಂಗವೈಕಲ್ಯ ಐಡಿ(ಯುಡಿಐಡಿ) ಯೊಂದಿಗೆ ನೋಂದಾಯಿಸಲ್ಪಟ್ಟ ಕಿವುಡ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮನ್ನಾ ಮಾಡುತ್ತದೆ. ಐಎಸ್ಎಲ್ಆರ್ ಟಿಸಿ ಕಿವುಡ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಸಂವಹನ ಪ್ರಕ್ರಿಯೆ ಸುಗಮಗೊಳಿಸುವ 10,500 ಪದಗಳ ಸಂಕೇತ ಭಾಷೆಯ ನಿಘಂಟು ಸಹ ಪ್ರಕಟಿಸಿದೆ.
8. ಪಿಎಂ-ದಕ್ಷ-ಡಿಇಪಿಡಬ್ಲ್ಯುಡಿ ಪೋರ್ಟಲ್: ಈ ಪೋರ್ಟಲ್ 2 ಮಾಡ್ಯೂಲ್‌ಗಳನ್ನು ಒಳಗೊಂಡಿದೆ:
1. ಕೌಶಲ್ಯ ತರಬೇತಿ: ದೇಶಾದ್ಯಂತ ಪಿಡಬ್ಲ್ಯುಡಿಗಳಿಗೆ ಕೌಶಲ್ಯ ತರಬೇತಿ ಒದಗಿಸುತ್ತದೆ.
2. ದಿವ್ಯಾಂಗ ರೋಜ್ಗಾರ್ ಸೇತು: ಉದ್ಯೋಗಾವಕಾಶಗಳ ಕುರಿತು ಜಿಯೋ-ಟ್ಯಾಗ್ ಮಾಡಲಾದ ಮಾಹಿತಿ ನೀಡುವ, ಪಿಡಬ್ಲ್ಯುಡಿಗಳು ಮತ್ತು ಉದ್ಯೋಗದಾತರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.
9. ರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಯೋಜಿತ ಪ್ರಾದೇಶಿಕ ಕೇಂದ್ರಗಳು(ಸಿಆರ್ ಸಿಗಳು): ಎರಡು ರಾಷ್ಟ್ರೀಯ ಸಂಸ್ಥೆಗಳು, ಅವುಗಳೆಂದರೆ ಅಲಿ ಯವರ್ ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೀಚ್ & ಹಿಯರಿಂಗ್ ಡಿಸಾಬಿಲಿಟೀಸ್ ಮತ್ತು ಇಂಡಿಯನ್ ಸೈನ್ ಲ್ಯಾಂಗ್ವೇಜ್ ರಿಸರ್ಚ್ & ಟ್ರೈನಿಂಗ್ ಸೆಂಟರ್ ಗಳು ಶ್ರವಣ ಮತ್ತು ಮಾತು ಅಸಾಮರ್ಥ್ಯ ಜನರ ಮೇಲೆ ಗಮನ ಕೇಂದ್ರೀಕರಿಸಿದೆ. ಹೆಚ್ಚುವರಿಯಾಗಿ, 25 ಸಂಯೋಜಿತ ಪ್ರಾದೇಶಿಕ ಕೇಂದ್ರಗಳನ್ನು(ಸಿಆರ್ ಸಿ) ಪುನರ್ವಸತಿ ಸೇವೆಗಳನ್ನು ಒದಗಿಸುವ, ವೃತ್ತಿಪರರಿಗೆ ತರಬೇತಿ ನೀಡುವ ಮತ್ತು ವಿಶೇಷಚೇತನರ ಅಗತ್ಯತೆಗಳು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೇಂದ್ರಗಳಾಗಿ ಅನುಮೋದಿಸಲಾಗಿದೆ.
ಅಂತಿಮ ತೀರ್ಮಾನ: ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಭವಿಷ್ಯಕ್ಕಾಗಿ ಒಂದು ದೂರದೃಷ್ಟಿ
ಭಾರತದಲ್ಲಿ ವಿಶೇಷಚೇತನರ ಕಾರ್ಯಕ್ರಮಗಳ ವಿಕಸನವು ವಿಶೇಷಚೇತನರ ಬೆಳೆಯುತ್ತಿರುವ ಹಕ್ಕುಗಳು ಮತ್ತು ಸಾಮರ್ಥ್ಯಗಳನ್ನು ಗುರುತಿಸುತ್ತಿದೆ. ಸಮರ್ಪಿತ ಇಲಾಖೆಗಳು ಮತ್ತು ಉಪಕ್ರಮಗಳ ಜಾರಿಯು ಸಮುದಾಯದೊಳಗೆ ಎಲ್ಲರ ಒಳಗೊಳ್ಳುವಿಕೆ, ಸೃಜನಶೀಲತೆ ಮತ್ತು ಹೊಂದಾಣಿಕೆ ಬೆಳೆಸುವ ಬದ್ಧತೆಯನ್ನು ನಿರೂಪಿಸುತ್ತದೆ. ಪ್ರತಿಭೆಗಳನ್ನು ಪ್ರದರ್ಶಿಸಲು ಮತ್ತು ಆರ್ಥಿಕ ಅವಕಾಶಗಳನ್ನು ಸುಗಮಗೊಳಿಸಲು ವೇದಿಕೆಗಳನ್ನು ಒದಗಿಸುವ ಮೂಲಕ, ಈ ಪ್ರಯತ್ನಗಳು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು ಮಾತ್ರವಲ್ಲದೆ, ಎಲ್ಲರೂ ಅಭಿವೃದ್ಧಿ ಹೊಂದಬಹುದಾದ ಹೆಚ್ಚು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಸಮಾಜಕ್ಕೆ ಕೊಡುಗೆ ನೀಡುತ್ತವೆ.
ಉಲ್ಲೇಖಗಳು
*****
(Release ID: 2062705)
Visitor Counter : 43