ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಗುಜರಾತ್‌ ನ ಪೋರಬಂದರ್‌ ನಿಂದ ಕರಾವಳಿ ಸ್ವಚ್ಛತಾ ಅಭಿಯಾನವನ್ನು ಮುನ್ನಡೆಸಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ; 10 ವರ್ಷಗಳ ಸ್ವಚ್ಛ ಭಾರತ ಮಿಷನಿನ ಭಾಗವಾಗಿ ರಾಷ್ಟ್ರವ್ಯಾಪಿ  ಸಮುದ್ರ ಕಿನಾರೆಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ


ಮಹಾತ್ಮ ಗಾಂಧೀಜಿ ಅವರ ಜನ್ಮ ವಾರ್ಷಿಕೋತ್ಸವದಂದು ಕೇಂದ್ರ ಸಚಿವರು ಗೌರವ ನಮನ ಸಲ್ಲಿಸಿದರು


ಕರಾವಳಿಯ 1,000 ಸ್ಥಳಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವ ಪ್ರಯತ್ನದಲ್ಲಿ ಭಾರತದಾದ್ಯಂತ 1,00,000 ಕ್ಕೂ ಹೆಚ್ಚು ನನ್ನ ಭಾರತ ಯುವ ಸ್ವಯಂಸೇವಕರು ಅಭಿಯಾನದಲ್ಲಿ ಜೊತೆ ಸೇರಿದ್ದಾರೆ

ಸ್ವಚ್ಛತಾ ಹಿ ಸೇವಾ ಅಭಿಯಾನದ ಭಾಗವಾಗಿ, 60 ಲಕ್ಷಕ್ಕೂ ಹೆಚ್ಚು ನನ್ನ ಭಾರತ ಯುವ ಸ್ವಯಂಸೇವಕರು ಭಾರತದಾದ್ಯಂತ ಲಕ್ಷಾಂತರ ಕಿಲೋಗ್ರಾಂಗಳಷ್ಟು ತ್ಯಾಜ್ಯವನ್ನು ಸಮುದ್ರ ಕಿನಾರೆಯಿಂದ ತೆಗೆದುಹಾಕಿದ್ದಾರೆ

Posted On: 02 OCT 2024 5:43PM by PIB Bengaluru

ಇಂದು, ಮಹಾತ್ಮ ಗಾಂಧಿ ಜಯಂತಿಯಂದು, ಗುಜರಾತ್‌ ನ ಪೋರಬಂದರ್‌ ನಿಂದ ಭಾರತದಾದ್ಯಂತ ನನ್ನ ಭಾರತ ಯುವ ಸ್ವಯಂಸೇವಕರು ಆಯೋಜಿಸಿದ್ದ ರಾಷ್ಟ್ರವ್ಯಾಪಿ ಕರಾವಳಿ ಮತ್ತು ಸಮುದ್ರ ಕಿನಾರೆ ಸ್ವಚ್ಛತಾ ಅಭಿಯಾನಕ್ಕೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಚಾಲನೆ ನೀಡಿದರು. ಸೆಪ್ಟೆಂಬರ್ 17, 2024 ರಿಂದ ನಡೆಯುತ್ತಿರುವ " ಸ್ವಚ್ಛತೆಯೇ ಸೇವೆ ( ಹಿ ಸೇವಾ ಸ್ವಚ್ಛತಾ ಹಿ ಸೇವಾ) " ಅಭಿಯಾನದ ಉತ್ತಮ ಹಂತವನ್ನು "ಸ್ವಭಾವ ಸ್ವಚ್ಚತೆ - ಸಂಸ್ಕಾರ ಸ್ವಚ್ಛತೆ" ಎಂಬ ವಿಷಯದ ಅಡಿಯ ಈ ಬೃಹತ್‌ ಪ್ರಮಾಣದ ಕಾರ್ಯಕ್ರಮದಲ್ಲಿ ಗುರುತಿಸಬಹುದಾಗಿದೆ.

ಮಹಾತ್ಮ ಗಾಂಧಿಯವರ ಜನ್ಮಸ್ಥಳವಾದ ಪೋರಬಂದರ್‌ ನಿಂದ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಾ.  ಮಾಂಡವೀಯ ಅವರು ಚಾಲನೆ ನೀಡಿ ಉದ್ಘಾಟಿಸಿದರು. ಇವರ ಜೊತೆಯಲ್ಲಿ, 1,00,000 ಕ್ಕೂ ಹೆಚ್ಚು ನನ್ನ ಭಾರತ ಯುವ ಸ್ವಯಂಸೇವಕರು ಏಕಕಾಲದಲ್ಲಿ ಭಾರತದ ಕರಾವಳಿಯುದ್ದಕ್ಕೂ 1,000 ಸ್ಥಳಗಳಲ್ಲಿ ಸ್ವಚ್ಛತಾ ಪ್ರಯತ್ನಗಳಲ್ಲಿ ಭಾಗವಹಿಸಿದರು. ಸ್ವಯಂಸೇವಕರು ಕಡಲತೀರಗಳಿಂದ ಏಕ-ಬಳಕೆಯ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕುವುದರ ಮೇಲೆ ಕೇಂದ್ರೀಕರಿಸಿದರು, ಹಾಗೂ ಸ್ವಚ್ಛವಾದ ಕರಾವಳಿ ಪರಿಸರಕ್ಕೆ ತಮ್ಮ ಅನನ್ಯ ಕೊಡುಗೆ ನೀಡಿದರು.

 

ಪೋರಬಂದರ್‌ ನಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ. ಮಾಂಡವೀಯ ಅವರು . “ನಾವು ಸ್ವಚ್ಛ ಭಾರತ್ ಮಿಷನ್‌ 10 ವರ್ಷಗಳನ್ನು ಆಚರಿಸುತ್ತಿದೆ. ಈ ರಾಷ್ಟ್ರವ್ಯಾಪಿ ಪ್ರಯತ್ನವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ದೃಷ್ಟಿಕೋನಕ್ಕೆ ನೀಡುವ ಸೂಕ್ತವಾದ ಗೌರವವಾಗಿದೆ. ನಮ್ಮ ಯುವಕರು ಇಂದು ತಮ್ಮ ಗಮನಾರ್ಹ ರೀತಿಯಲ್ಲಿ ಭಾಗವಹಿಸುವಿಕೆಯ ಮೂಲಕ ಪರಿಸರ ಜವಾಬ್ದಾರಿ ಮತ್ತು ಸುಸ್ಥಿರತೆಗೆ ಬದ್ಧರಾಗುವ ಮೂಲಕ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ. ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವುದು ಈ ಪ್ರಯಾಣದಲ್ಲಿ ಕೇವಲ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಇಂದು ಪ್ರದರ್ಶಿಸಲಾದ ಸಮರ್ಪಣೆಯು ಭಾರತವನ್ನು ಸ್ವಚ್ಛ, ಹಸಿರು ಭವಿಷ್ಯದತ್ತ ಕೊಂಡೊಯ್ಯುತ್ತದೆ” ಎಂದು ಹೇಳಿದರು.

ಕರಾವಳಿ ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿದ ನಂತರ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಪೋರಬಂದರ್‌ ನ ಕೀರ್ತಿ ಮಂದಿರದಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು. ಮಹಾತ್ಮ ಗಾಂಧಿಯವರ ಆದರ್ಶಗಳು ಮತ್ತು ತತ್ವಗಳನ್ನು, ಹಾಗೂ ಅವರು ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಅಹಿಂಸೆಯ ತತ್ವಶಾಸ್ತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿಕೊಂಡು ಪುಷ್ಪ ನಮನ ಸಲ್ಲಿಸಿದರು. 

ನಂತರ, ಡಾ. ಮಾಂಡವೀಯ ಅವರು, ಪೋರಬಂದರ್ ಖಾದಿ ಭಂಡಾರದಿಂದ ಖಾದಿ ವಸ್ತ್ರಗಳನ್ನು ಖರೀದಿಸಿದರು. ಈ ಮೂಲಕ ಮಹಾತ್ಮ ಗಾಂಧಿಯವರ ಸ್ವಾವಲಂಬನೆಯ ದೃಷ್ಟಿಕೋನವನ್ನು ಗೌರವಿಸಿದರು, ಹಾಗೂ ಮಹಾತ್ಮಾ ಗಾಂಧಿಯವರು ಸ್ವದೇಶಿ ಚಳವಳಿಯ ಸಂಕೇತವಾಗಿ ಮತ್ತು ಸ್ವಾವಲಂಬನೆಯತ್ತ ಭಾರತದ ಪಯಣದ ಮೂಲಾಧಾರವಾಗಿ ಎತ್ತಿಹಿಡಿದ ಖಾದಿಯ ಮಹತ್ವವನ್ನು ಸಚಿವರು ಗೌರವಿಸಿದರು.

Image

ಭಾರತದ ಕರಾವಳಿಯಾದ್ಯಂತ ನಡೆಸಲಾದ ರಾಷ್ಟ್ರವ್ಯಾಪಿ ಕಾರ್ಯಾಚರಣೆಯು ಗಮನಾರ್ಹ ಪ್ರಮಾಣದ ತ್ಯಾಜ್ಯವನ್ನು, ವಿಶೇಷವಾಗಿ ಏಕ-ಬಳಕೆಯ ಪ್ಲಾಸ್ಟಿಕ್‌ ಗಳನ್ನು ಕಿನಾರೆಯಿಂದ ತೆಗೆದುಹಾಕುವುದಕ್ಕೆ ಕಾರಣವಾಯಿತು.  ಕರಾವಳಿ ಪ್ರದೇಶಗಳ ಸ್ವಯಂಸೇವಕರು ಈ ಉಪಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು, ಯುವಕರು ತಮ್ಮ ಸಾಮೂಹಿಕ ಶಕ್ತಿಯ ಉಸ್ತುವಾರಿಯಲ್ಲಿ ಪರಿಸರ ಕಾಳಜಿಯನ್ನು ಪ್ರದರ್ಶಿಸಿದರು.

 

17ನೇ ಸೆಪ್ಟೆಂಬರ್ 2024 ರಂದು ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವಾ) ಅಭಿಯಾನ ಪ್ರಾರಂಭವಾದಾಗಿನಿಂದ, ಇಂದಿನ ತನಕ ಸುಮಾರು 60 ಲಕ್ಷಕ್ಕೂ ಹೆಚ್ಚು “ನನ್ನ ಭಾರತ ಯುವ ಸ್ವಯಂಸೇವಕರು” ದೇಶಾದ್ಯಂತ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಒಟ್ಟಾರೆ ಸಂಯೋಜಿತ ಪ್ರಯತ್ನಗಳು 1.19 ಲಕ್ಷಕ್ಕೂ ಹೆಚ್ಚು ಹಳ್ಳಿ/ಗ್ರಾಮಗಳು, 17,000+ ಸಮುದಾಯ ಕೇಂದ್ರಗಳು ಮತ್ತು 9,900+ ಅಮೃತ ಸರೋವರಗಳಿಂದ ಲಕ್ಷಾಂತರ ಕಿಲೋಗ್ರಾಂಗಳಷ್ಟು ತ್ಯಾಜ್ಯವನ್ನು ತೆಗೆದುಹಾಕಿ ಸ್ವಚ್ಛಗೊಳಿಸಲು ಕಾರಣವಾಗಿವೆ. ಇದು ಭಾರತದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗಮನಾರ್ಹ ಪರಿಣಾಮ ಬೀರಿದೆ.

 

*****

 


(Release ID: 2061477) Visitor Counter : 39