ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಇಂಡಿಯಾ ಇಂಟರ್ನ್ಯಾಶನಲ್ ಸ್ಕೂಲ್ ( ಪರಿಗಣಿತ ವಿಶ್ವವಿದ್ಯಾಲಯ), ಜೈಪುರದಲ್ಲಿ ಉಪರಾಷ್ಟ್ರಪತಿಗಳ ಭಾಷಣದ ಆಯ್ದ ಭಾಗಗಳು 

Posted On: 28 SEP 2024 5:21PM by PIB Bengaluru

ನಾನು ಇಲ್ಲಿ ಕಾಲಿಟ್ಟ ಕ್ಷಣದಿಂದ,  ನನಗೆ ನವ ಶಕ್ತಿ ಮತ್ತು ನವ ಉತ್ಸಾಹ ಬಂದಿದೆ, ಮತ್ತೆ ಯಾಕಾಗಬಾರದು ಹೇಳಿ? ನಾನು ಮತ್ತು ಡಾ. ಸುದೇಶ್ ಧನಕರ್ ಒಬ್ಬ ಹೆಣ್ಣು ಮಗುವಿನ ಹೆಮ್ಮೆಯ ಹೆತ್ತವರು.

ಗೌರವಾನ್ವಿತ ಅಧ್ಯಾಪಕರೇ ಮತ್ತು ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ನಾನು ಇಂದು ನಿಮಗಾಗಿ ಇಲ್ಲಿದ್ದೇನೆ, ಡಾ. ಅಶೋಕ್ ಗುಪ್ತಾ ಮೂರು ಅಂಶಗಳನ್ನು ಹೊಂದಿರುವ ವಿಷಯವನ್ನು ಆಯ್ಕೆ ಮಾಡಿದ್ದಾರೆ, ಮೊದಲನೆಯದಾಗಿ ವಿಕಸಿತ ಭಾರತಕ್ಕೆ ಸಂಬಂಧಿಸಿದ ಮಹಿಳೆಯರು.

ಸ್ನೇಹಿತರೇ, ಹೆಚ್ಚಿನವರಿಗೆ ವಿಕಸಿತ ಭಾರತದ ಚೌಕಟ್ಟು ಅರ್ಥವಾಗುತ್ತಿಲ್ಲ, ನಾವು ವಿಕಸಿತ ಭಾರತ@ 2047 ಕ್ಕಾಗಿ ಗುರಿಯನ್ನು ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಉತ್ತಮ ಮ್ಯಾರಥಾನ್ ಯಾತ್ರೆ ನಡೆಯುತ್ತಿದೆ.

ಎಲ್ಲಾ ಪಾಲುದಾರರು ಒಗ್ಗೂಡುತ್ತಿದ್ದಾರೆ. ಈಗಾಗಲೇ ಕಳೆದ ಕೆಲವು ವರ್ಷಗಳಲ್ಲಿ ನಾವು ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿದ್ದೇವೆ. ನಾವು ವಿಶ್ವದ ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿದ್ದೇವೆ.

ಜಾಗತಿಕವಾಗಿ, ವಿಕಸಿತ ಭಾರತವನ್ನು  ವ್ಯಾಖ್ಯಾನಿಸಲಾಗಿಲ್ಲ.  ವಿಕಸಿತ ದೇಶವನ್ನು ವ್ಯಾಖ್ಯಾನಿಸಲಾಗಿಲ್ಲ ಆದರೆ ನೀವು ಹಲವಾರು ಕಾರ್ಯವಿಧಾನಗಳ ಮೂಲಕ ಅದನ್ನು ಅರಿತುಕೊಳ್ಳಬೇಕು, ಅವುಗಳಲ್ಲಿ ಒಂದು ತಲಾ ಆದಾಯ. ಭಾರತಕ್ಕೆ ಅಭಿವೃದ್ಧಿ ಹೊಂದಿದ ದೇಶದ ಸ್ಥಾನಮಾನವನ್ನು ನೀಡಲು ನಾವು ನಮ್ಮ ತಲಾ ಆದಾಯವನ್ನು ಎಂಟು ಪಟ್ಟು ಹೆಚ್ಚಿಸಬೇಕು, ಅದಕ್ಕಾಗಿ ಕೆಲವು ಮೂಲಭೂತ ವಿಷಯಗಳ ಅಗತ್ಯವಿದೆ.

ಒಂದು ಮೂಲಭೂತ ಅಂಶವೆಂದರೆ, ನಾವು ಸರಿಯಾದ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆಯೇ? ಪರಿಸರ ವ್ಯವಸ್ಥೆಯ ಮೊದಲ ಅಂಶವೆಂದರೆ ಭರವಸೆ ಮತ್ತು ಸಾಧ್ಯತೆ.
 
ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರತಿಭೆ ಮತ್ತು ಆಕಾಂಕ್ಷೆಗಳು ಹಾಗು ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸ್ಥಳದಲ್ಲಿ ಒಂದು ವಿಧಾನವಿದೆ ಮತ್ತು ಅದಕ್ಕಾಗಿ ಎರಡು ವಿಷಯಗಳ ಅಗತ್ಯವಿದೆ - ಒಂದು, ಕಾನೂನಿನ ಮುಂದೆ ಸಮಾನತೆ. ಸಂವಿಧಾನ ಒದಗಿಸಿದ ಕಾನೂನಿನ ಮುಂದೆ ಸಮಾನತೆ ಬಹಳ ಸಮಯದಿಂದಲು ನಮಗೆ ದೊರೆತಿರಲಿಲ್ಲ, ಕೆಲವರು ಇತರರಿಗಿಂತ ಹೆಚ್ಚು ಸಮಾನರು ಎಂದು ಭಾವಿಸಿದರು, ಕೆಲವರು ನಾವು ಕಾನೂನಿನ ವ್ಯಾಪ್ತಿಯನ್ನು ಮೀರಿದ್ದೇವೆ ಎಂದು ಭಾವಿಸಿದರು, ನಾವು ಕಾನೂನಿಗಿಂತ ಮೇಲಿದ್ದೇವೆ ಎಂದು ಭಾವಿಸಿದರು ಆದರೆ ಪ್ರಮುಖ ಬದಲಾವಣೆಯೆಂದರೆ ಕಾನೂನಿನ ಮುಂದೆ ಸಮಾನತೆ ಈಗ ವಾಸ್ತವವಾಗಿದೆ.  ವಿಶೇಷ ಸವಲತ್ತು ಇದ್ದ ಜನರು,  ತಾವು ಕಾನೂನಿನಿಂದ ಹೊರತಾಗಿದ್ದೇವೆ ಎಂದು ಭಾವಿಸಿದ ವಿಶೇಷ ವರ್ಗವನ್ನು ಈಗ ಕಾನೂನಿಗೆ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಇದೊಂದು ದೊಡ್ಡ ಬದಲಾವಣೆ.  

ಭ್ರಷ್ಟಾಚಾರದಿಂದ ನಡೆಸಲ್ಪಡುವ, ಕೈ ಬಿಸಿ ಮಾಡಿದ,  ಸಂಪರ್ಕ ದಲ್ಲಾಳಿಗಳಿಂದ ನಡೆಸಲ್ಪಡುವ, ಭ್ರಷ್ಟಾಚಾರವಿಲ್ಲದೆ ಉದ್ಯೋಗ ಅಥವಾ ಗುತ್ತಿಗೆ ಸಿಗುವುದಿಲ್ಲ ಎಂಬ ವ್ಯವಸ್ಥೆಯಿಂದ ನಡೆಸಲ್ಪಡುವ ಯಾವುದೇ ಸಮಾಜವು ಖಂಡಿತವಾಗಿಯೂ ಯುವಕರ ಏಳಿಗೆಗೆ ವಿರುದ್ಧವಾಗಿದೆ. ಭ್ರಷ್ಟಾಚಾರವು ಪ್ರತಿಭಾವಂತರ ಆಪೋಷನ ತೆಗೆದುಕೊಳ್ಳುತ್ತದೆ, ಭ್ರಷ್ಟಾಚಾರವು ಯೋಗ್ಯತೆಯನ್ನು ನಿಷ್ಪರಿಣಾಮಗೊಳಿಸುತ್ತದೆ.

ಒಂದು ಮಹತ್ವದ ಬದಲಾವಣೆಯಾಗಿದೆ. ಒಂದು ಕಾಲದಲ್ಲಿ ಭ್ರಷ್ಟ ಮಧ್ಯವರ್ತಿಗಳಿಂದ ತುಂಬಿದ, ಕಾನೂನುಬಾಹಿರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ, ಅರ್ಹತೆಯನ್ನು ಪರಿಗಣಿಸದೆ ಗುತ್ತಿಗೆಗಳು ಮತ್ತು ಉದ್ಯೋಗಗಳನ್ನು ನೀಡುವ ಅಧಿಕಾರದ ಕಾರಿಡಾರ್ ಗಳು ನಿಷ್ಪರಿಣಾಮಕಾರಿಯಾಗಿರುವುದೆ. ದೇಶದಲ್ಲಿ ಈಗ ಪಾರದರ್ಶಕ ಹೊಣೆಗಾರಿಕೆಯ ಆಡಳಿತವಿದೆ ಮತ್ತು ಯಾವುದೇ ಮಧ್ಯವರ್ತಿಯಿಲ್ಲದೆ ಹಣ ವರ್ಗಾವಣೆಯಾಗುವ ತಂತ್ರಜ್ಞಾನವನ್ನು ತಲುಪುವ ಹಳ್ಳಿಗಳಿಗೆ ಇದು ಸಾಧ್ಯವಾಗಿದೆ ಎನ್ನುವುದನ್ನು ನೀವು ಗಮನಿಸಿರಬೇಕು.

ನಮ್ಮ ಯುವಕರು ಇನ್ನೂ ಏನನ್ನೋ ಬಯಸುತ್ತಿದ್ದಾರೆ, ಹೌದು, ಮತ್ತು ಅವರು  ವಿಕಸಿತ ಭಾರತಕ್ಕೆ ನಮ್ಮ ಪ್ರಯಾಣದಲ್ಲಿ ಪಾಲುದಾರರು, ಭಾಗೀದಾರರು, ಕೊಡುಗೆದಾರರಾಗಲು ಬಯಸುತ್ತಾರೆ ಮತ್ತು ಇದಕ್ಕೆ ಮೊದಲ ವಿಧಾನವೆಂದರೆ ಶಿಕ್ಷಣ. ಶಿಕ್ಷಣವು ಮೂಲಭೂತವಾಗಿದೆ, ಶಿಕ್ಷಣವು ಬದಲಾವಣೆಗೆ ಅತ್ಯಂತ ಪರಿವರ್ತಕ ವಿಧಾನವಾಗಿದೆ.

ಶಿಕ್ಷಣವಿಲ್ಲದೆ ಯಾವುದೇ ಬದಲಾವಣೆ ಸಾಧ್ಯವಿಲ್ಲ, ಶಿಕ್ಷಣವು ಗುಣಮಟ್ಟದ ಶಿಕ್ಷಣವಾಗಿರಬೇಕು, ಶಿಕ್ಷಣವು ಉದ್ದೇಶವಿರುವ ಶಿಕ್ಷಣವಾಗಿರಬೇಕು.

ಶಿಕ್ಷಣವು ಕೇವಲ ಪದವಿಗಳಾಗದೆ ಅದನ್ನು ಮೀರಬೇಕು, ಒಂದರ ನಂತರ ಒಂದರಂತೆ ಪದವಿಗಳನ್ನು ಪಡೆಯುವುದು ಶಿಕ್ಷಣದ ಸರಿಯಾದ ವಿಧಾನವಲ್ಲ ಮತ್ತು ಅದಕ್ಕಾಗಿಯೇ ಮೂರು ದಶಕಗಳ ನಂತರ ದೇಶವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಂದಿತು ಅದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಅವರನ್ನು ಪದವಿ ಆಧಾರಿತ ಶಿಕ್ಷಣದಿಂದ ದೂರವಿಡಲಾಗಿದೆ.
ಇದರಲ್ಲಿ ಕೌಶಲ್ಯ ಶಿಕ್ಷಣ ಮತ್ತು ಸಾಮರ್ಥ್ಯದತ್ತ ಗಮನ ಹರಿಸಲಾಗಿದೆ. ಏಕಕಾಲದಲ್ಲಿ  ದೇಶವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವ ಕೋರ್ಸುಗಳನ್ನು ನೀವು ಮುಂದುವರಿಸಬಹುದು.  

ಶಿಕ್ಷಣವು ಸಮಾನತೆಯನ್ನು ತರುತ್ತದೆ, ಶಿಕ್ಷಣವು ಅಸಮಾನತೆಯನ್ನು ತೆಗೆದುಹಾಕುತ್ತದೆ. ಶಿಕ್ಷಣವು ಸಾಮಾಜಿಕ ವ್ಯವಸ್ಥೆಯ ಒಂದು ದೊಡ್ಡ ಮಟ್ಟದಲ್ಲಿ ಸಮಾನತೆಯನ್ನು ತರುತ್ತದೆ, ಶಿಕ್ಷಣವು ಪ್ರಜಾಪ್ರಭುತ್ವಕ್ಕೆ ಪ್ರಾಣವನ್ನು ಒದಗಿಸುತ್ತದೆ.

ನಾವು ನಮ್ಮ ವೇದಗಳನ್ನು ಗಮನಿಸಿದರೆ, ಶಿಕ್ಷಣ ಮತ್ತು ಮಹಿಳೆಯರ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಯಿತು.ಆದರೆ ನಡುನಡುವೆ ದಾರಿ ತಪ್ಪಿದೆವು, ಆದರೆ ವೇದಗಳ ಆ ಕಾಲದಲ್ಲಿ, ವೇದಕಾಲದಲ್ಲಿ, ಮೊದಲನೆಯದಾಗಿ, ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡಲಾಯಿತು.

ಆಕೆ ನೀತಿ ನಿರೂಪಕರಾಗಿದ್ದರು, ನಿರ್ಧಾರ ತೆಗೆದುಕೊಳ್ಳುವವರಾಗಿದ್ದರು, ಮಾರ್ಗದರ್ಶನದ ಶಕ್ತಿಯಾಗಿದ್ದರು. ನಾವು ಎಲ್ಲೋ ದಾರಿ ತಪ್ಪಿದ್ದೇವೆ, ನಾವು ಅದನ್ನು ವೇಗವಾಗಿ ಮರಳಿ ಪಡೆಯುತ್ತಿದ್ದೇವೆ. ಇನ್ನೂ ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಹೇ, ಅಳಬೇಡ, ನೀನು ಹುಡುಗ. ಈಗ ಈ ವಿಷಯಗಳು ಹಳೆಯದಾಗಿವೆ, ಹೇಳುವವರೂ ಭಯಪಡಲು ಪ್ರಾರಂಭಿಸಿದ್ದಾರೆ.

ನನ್ನ ಮಾತನ್ನು ಪುಷ್ಟೀಕರಿಸಲು ನಾನು ಇದನ್ನು ಹೇಳುತ್ತಿದ್ದೇನೆ.

ಈಗ ನಾವು ಮಹಿಳೆಯರಿಲ್ಲದೆ ಮತ್ತು ಶಿಕ್ಷಣವಿಲ್ಲದೆ ವಿಕಸಿತ ಭಾರತದ ಕಲ್ಪನೆ  ಮಾಡಲು ಸಾಧ್ಯವಿಲ್ಲ, ಮಹಿಳೆಯರು ಮತ್ತು ಶಿಕ್ಷಣವು ದೇಶವನ್ನು ಓಡಿಸುವ ರಥದ ಎರಡು ಚಕ್ರಗಳು.

ಅದು ಆರ್ಥಿಕತೆ, ಅದು ಅಭಿವೃದ್ಧಿಯ ಪಯಣ ಮತ್ತು ವಿಕಸಿತ ಭಾರತ @ 2047 ರಲ್ಲಿ ಫಲಪ್ರದವಾಗುತ್ತದೆ, ಅದಕ್ಕಿಂತ ಮೊದಲು ಆಗದಿದ್ದರೂ.

 
ದೇಶವು ಐತಿಹಾಸಿಕ ಮಹತ್ತರ  ಅಭಿವೃದ್ಧಿಯನ್ನು ಕಂಡಿದೆ, ನಮಗೆ ಮೊದಲು ತಿಳಿದಿರದ ಆರ್ಥಿಕ ಪ್ರಗತಿ. ವಿಶ್ವ ದರ್ಜೆಯ ಮೂಲಸೌಕರ್ಯ, ನಮ್ಮಲ್ಲಿರುವ ಅವಕಾಶಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಆದರೆ ನಾನು ನಿಮಗೆ ಒಂದು ವಿಷಯವನ್ನು ಹೇಳಬಲ್ಲೆ ಮತ್ತು ಜಾಗತಿಕ ಸಂಸ್ಥೆಗಳು, ವಿಶ್ವ ಹಣಕಾಸು ಸಂಸ್ಥೆ, ವಿಶ್ವ ಬ್ಯಾಂಕ್, ವಿಶ್ವ ಆರ್ಥಿಕ ವೇದಿಕೆ ಮತ್ತು ಎಲ್ಲರೂ ಜಾಗತಿಕವಾಗಿ ಭಾರತವು ಅತಿದೊಡ್ಡ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಹೇಳಿವೆ.  

ಸುತ್ತಲೂ ಯಾವುದೇ ದೇಶವನ್ನು ನೋಡಿ, ಅವಕಾಶ ಮತ್ತು ಹೂಡಿಕೆಯ ವಿಷಯದಲ್ಲಿ ನಾವೇ ಅತಿ ಉತ್ತಮರು.


ಒಂದು ಮಹತ್ತರ ಬೆಳವಣಿಗೆಯಾಗಿದೆ, ಐತಿಹಾಸಿಕ ಬೆಳವಣಿಗೆಯಾಗಿದೆ, ಅದೇನೆಂದರೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯಾಗಿದೆ, ಸಂವಿಧಾನವು ಈಗ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಿದೆ, ಇದು ಕನಿಷ್ಠ, ಇದನ್ನು ಮತ್ತಷ್ಟು ಹೆಚ್ಚಿಸಬಹುದು. ಸಾಮಾನ್ಯ ಸ್ಥಾನಗಳ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಈಗ ಒಂದು ಸನ್ನಿವೇಶವನ್ನು ಊಹಿಸಿ, ಲೋಕಸಭೆಯಲ್ಲಿ ಮೂರನೇ ಒಂದಕ್ಕಿಂತ ಹೆಚ್ಚು ಮಹಿಳೆಯರು ಇರುತ್ತಾರೆ. ಅವರು ನೀತಿ ರಚನೆಯ ಭಾಗವಾಗುತ್ತಾರೆ, ಅವರು ಕಾನೂನು ರಚನೆಯ ಭಾಗವಾಗುತ್ತಾರೆ, ಅವರು ಕಾರ್ಯಕಾರಿ ಕಾರ್ಯಗಳ ಭಾಗವಾಗುತ್ತಾರೆ, ಅವರು ಪ್ರೇರಕ ಶಕ್ತಿಯಾಗಿರುತ್ತಾರೆ. ಇದು ಶತಮಾನದ ಬೆಳವಣಿಗೆ. ದೇಶವು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಅದಕ್ಕಾಗಿ  ವಿಫಲ ಪ್ರಯತ್ನ ನಡೆಸಿತು ಆದರೆ ಕಳೆದ ವರ್ಷ, ಇದು ದೊಡ್ಡ ಯಶಸ್ಸನ್ನು ಕಂಡಿತು. ಹಿರಿಯರ ಸದನ, ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಅಂಗೀಕಾರವಾದಾಗ ಆ ಸಮಯದಲ್ಲಿ ಪೀಠದಲ್ಲಿರುವ ಸೌಭಾಗ್ಯ, ಸವಲತ್ತು ಮತ್ತು ಗೌರವ ನನಗೆ ಸಿಕ್ಕಿತ್ತು.  

ನೀವು ಜನಸಂಖ್ಯೆಯ 50% ಮತ್ತು ನಿಮ್ಮ ಕೊಡುಗೆ ಯಾವಾಗಲೂ 50% ಕ್ಕಿಂತ ಹೆಚ್ಚು ಎಂಬುದರಲ್ಲಿ ನನಗೆ ಸಂದೇಹವಿಲ್ಲ ಏಕೆಂದರೆ ನೀವು ಸೂಕ್ಷ್ಮ ನಡವಳಿಕೆ, ಅತ್ಯುತ್ತಮ ನಡವಳಿಕೆ, ಆಧ್ಯಾತ್ಮಿಕ ನಡವಳಿಕೆ, ಆತ್ಮೀಯತೆ ಮತ್ತು ಸಹಾನುಭೂತಿಯ ನೈಸರ್ಗಿಕ ಭಂಡಾರವಾಗಿದ್ದೀರಿ, ಆದ್ದರಿಂದ, ನನಗೆ ಯಾವುದೇ ಸಂದೇಹವಿಲ್ಲ. ವಿಕಸಿತ ಭಾರತದಲ್ಲಿ ಮಹಿಳೆಯರು ಮತ್ತು ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಿಮ್ಮಂತಹ ಸಂಸ್ಥೆಗಳು ಅದನ್ನು ಸರಿಯಾದ ಮನೋಭಾವದಿಂದ ಪೋಷಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.

ಸಾಕ್ರಟಿಸ್ ಗಿಂತಲೂ ಮೊದಲು ಇದ್ದ ತತ್ವಜ್ಞಾನಿ ಹೆರಾಕ್ಲಿಟಸ್ ಅವರ ಒಂದು ಮಾತನ್ನು ನಾನು ನಿಮಗೆ ನೆನಪಿಸಲು ಬಯಸುತ್ತೇನೆ, ಅವರು ಜೀವನದಲ್ಲಿ ಒಂದೇ ಶಾಶ್ವತವಾದ ವಿಷಯವೆಂದರೆ ಬದಲಾವಣೆ ಎಂದು ಹೇಳಿದರು ಮತ್ತು ನಂತರ ಅವರು ಅದನ್ನು ಒಂದು ನಿದರ್ಶನದ ಮೂಲಕ  ತೋರಿಸಿದರು.  ಒಬ್ಬ ವ್ಯಕ್ತಿಯು ಅದೇ ನದಿಯನ್ನು ಎರಡು ಬಾರಿ ಪ್ರವೇಶಿಸಲಾಗುವುದಿಲ್ಲ, ಏಕೆಂದರೆ ವ್ಯಕ್ತಿಯೂ ಅದೇ ಆಗಿರುವುದಿಲ್ಲ ಅಥವಾ ನದಿಯೂ  ಅದೇ ಆಗಿರುವುದಿಲ್ಲ

ಆದ್ದರಿಂದ ನೀವು ಯಾವಾಗಲೂ ಬದಲಾವಣೆಗೆ ಸಿದ್ಧರಾಗಿರಬೇಕು. ಆದರೆ ನಂತರ ನೀವು ಬದಲಾವಣೆಯ ಬಂಧಿಯಾಗಿ ಉಳಿಯಲು ಸಾಧ್ಯವಿಲ್ಲ, ನೀವು ಅರ್ಹರಾಗಿರುವ,ನೀವು ಇಷ್ಟಪಡುವ ಬದಲಾವಣೆಯ ಭಾಗವಾಗಿರಬೇಕು, 
ಒಂದು ಸಣ್ಣ ಉದಾಹರಣೆ ಕೊಡುತ್ತೇನೆ, ತಂತ್ರಜ್ಞಾನದ ವಿಚಾರದಲ್ಲಿ ನಾವು ಮತ್ತೊಂದು ಕೈಗಾರಿಕಾ ಕ್ರಾಂತಿಯನ್ನು ಹೊಂದುತ್ತಿದ್ದೇವೆ.

ಇದು ತುಂಬಾ ವೇಗವಾಗಿ ಬದಲಾಗುತ್ತಿದೆ, ಇದು ನಾವು ಊಹಿಸಲು ಸಾಧ್ಯವಾಗದಷ್ಟು ವೇಗವಾಗಿ ಬದಲಾಗುತ್ತಿದೆ. ಇದು ಒಂದು ದೊಡ್ಡ ಸವಾಲು, ಆದರೆ ಕಲಿಕೆಯನ್ನು ಮುಂದುವರಿಸಲು, ಸಮಯಕ್ಕಿಂತ ಮುಂದೆ ಉಳಿಯಲು, ಜ್ಞಾನವನ್ನು ಪಡೆಯಲು ದೊಡ್ಡ ಅವಕಾಶ. ನಾವು ನಮ್ಮ ವೇದಗಳ ಬಗ್ಗೆ ಮಾತನಾಡುತ್ತೇವೆ ಎಂದು ನನಗೆ ಕೆಲವೊಮ್ಮೆ ಬೇಸರವಾಗುತ್ತದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ವೇದಗಳನ್ನು ಅರಿಯುವುದನ್ನು ಖಚಿತಪಡಿಸಿಕೊಳ್ಳಲು ನಾನು ವಿಶೇಷವಾಗಿ ಉಪಕುಲಪತಿಗಳಿಗೆ ಹೇಳಲು ಬಯಸುತ್ತೇನೆ.

ನೀವು ವೇದಗಳನ್ನು ಓದಿದ ಕೂಡಲೇ ನಿಮ್ಮ ಶ್ರೀಮಂತ ಪರಂಪರೆಯ ಬಗ್ಗೆ ನಿಮಗೆ ತಿಳಿಯುತ್ತದೆ, ಅಲ್ಲಿ ನಿಮಗೆ ಒಂದು ರೀತಿಯ ಜ್ಞಾನೋದಯವಾಗುತ್ತದೆ. ಆರೋಗ್ಯದಿಂದ ಖಗೋಳಶಾಸ್ತ್ರ, ಭೌತಶಾಸ್ತ್ರದಿಂದ ರಸಾಯನಶಾಸ್ತ್ರದವರೆಗೆ, ನೀವು ಪ್ರತಿಯೊಂದು ಅಂಶದಲ್ಲೂ ಎಲ್ಲವನ್ನೂ ಕಾಣುವಿರಿ.

ಅದರತ್ತ ಗಮನ ಹರಿಸಿ.

ಒಬ್ಬ ವ್ಯಕ್ತಿಯು ದೇಶಕ್ಕೆ ಉತ್ತಮ ವ್ಯಕ್ತಿಯಾಗಲು ಉತ್ತಮ ತಿಳುವಳಿಕೆಯು ಅವಶ್ಯಕವಾಗಿದೆ ಏಕೆಂದರೆ ಮೊದಲ ಮತ್ತು ಕೊನೆಯದಾಗಿ, ನೀವು ಯಾವಾಗಲೂ ನಿಮ್ಮ ದೇಶವನ್ನು ಇತರ ಎಲ್ಲ ಆಸಕ್ತಿಗಳಿಗಿಂತ ಹೆಚ್ಚಾಗಿ ಇರಿಸಿಕೊಳ್ಳಬೇಕು.

ನನ್ನ ಮಾತುಗಳನ್ನು ನೆನಪಿಸಿಕೊಳ್ಳಿ, ಅಗತ್ಯದ ಸಮಯದಲ್ಲಿ, ಬಿಕ್ಕಟ್ಟಿನ ಸಮಯದಲ್ಲಿ, ತೀವ್ರ ಅವಶ್ಯಕತೆಯ ಸಮಯದಲ್ಲಿ, ಬದುಕುಳಿಯುವ ಸಂದರ್ಭಗಳಲ್ಲಿ, ಶಾರ್ಟ್ಕಟ್  ಲಾಂಗ್ ಕಟ್ ಆಗಿರುತ್ತದೆ. ಅದು ಎಂದಿಗೂ ಕೊನೆಗೊಳ್ಳದ ರಸ್ತೆ ಆದ್ದರಿಂದ ಯಾವಾಗಲೂ ಸರಿಯಾದ ಹಾದಿಯಲ್ಲಿರಿ, ಸದಾಚಾರದ ಹಾದಿಯಲ್ಲಿರಿ, ನೀವು ಮಾತ್ರ ಆ ಮಾರ್ಗದಲ್ಲಿ ಇರಬಾರದು. ನೀವು ಇತರರಿಂದ ಮಾದರಿಯಾಗುವ ನಡವಳಿಕೆಯನ್ನು ಪ್ರದರ್ಶಿಸಬೇಕು, ಹೌದು, ನಾನು ಸರಿಯಾದ ಹಾದಿಯಲ್ಲಿರುತ್ತೇನೆ ಎನ್ನುವ ಹಾಗೆ. ಒಂದು ದೇಶವು ತನ್ನಲ್ಲಿರುವ ವಿಮಾನ ನಿಲ್ದಾಣಗಳಿಂದ ಬದಲಾವಣೆಯನ್ನು ತೋರಿಸುತ್ತದೆ, ಅದನ್ನು ನಾವು 70 ರಿಂದ 147 ಕ್ಕೆ ಎರಡು ಪಟ್ಟು ಹೆಚ್ಚಿಸಿದ್ದೇವೆ, ಎಕ್ಸ್ ಪ್ರೆಸ್ ವೇಗಳು, ಬಂದರುಗಳು, ಕಟ್ಟಡಗಳು, ಡಿಜಿಟಲೀಕರಣ, ಇಂಟರ್ನೆಟ್, ಕೈಗೆಟುಕುವ ವಸತಿ, ಅಡುಗೆ ಅನಿಲ ಸಂಪರ್ಕಗಳು, ಎಲ್ಲವೂ. ಮಾನವ ಸಂಪನ್ಮೂಲದ ಗುಣಮಟ್ಟವು ಮುಖ್ಯವಾಗಿದೆ, ಅದರ ನಾಗರಿಕರ ಶಿಸ್ತಿನ ಮೂಲಕ ರಾಷ್ಟ್ರವನ್ನು ಗುರುತಿಸಲಾಗುತ್ತದೆ.

ದೆಹಲಿಯ ಸಂಸತ್ತಿನ ಹೊಸ ಕಟ್ಟಡಕ್ಕೆ ನನ್ನ ಅತಿಥಿಯಾಗಿ ನಿಮ್ಮ ವಿದ್ಯಾರ್ಥಿನಿಯರ ಭೇಟಿಗಾಗಿ ನನ್ನ ಆಹ್ವಾನವನ್ನು ಸ್ವೀಕರಿಸಲು ನಾನು ಡಾ. ಅಶೋಕ್ ಗುಪ್ತಾ ಅವರಿಗೆ ಮನವಿ ಮಾಡುತ್ತೇನೆ.

ನಾನು ದೆಹಲಿಯಲ್ಲಿದ್ದರೆ ನಾನು ನಿಮ್ಮನ್ನು ಅಲ್ಲಿ ಸ್ವಾಗತಿಸುತ್ತೇನೆ ಮತ್ತು ಅಂದು ನಾನು ದೆಹಲಿಯಲ್ಲಿ ಉಳಿಯಲು ಪ್ರಯತ್ನಿಸುತ್ತೇನೆ. ನಾನು ನನ್ನ ಮಾತನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳುತ್ತೇನೆ ಮತ್ತು ಹೆಣ್ಣು ಮಕ್ಕಳ ವಿಷಯಕ್ಕೆ ಬಂದಾಗ ನಾನು ಹೇಳಿದ್ದನ್ನು ಖಂಡಿತ ಸಾಧ್ಯವಾಗಿಸುತ್ತೇನೆ.
 

*****


(Release ID: 2060260) Visitor Counter : 22


Read this release in: English , Hindi