ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಕೇಂದ್ರ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವರು


“ಪಿಎಂ-ಇ ಬಸ್ ಸೇವಾ ಪಾವತಿ ಭದ್ರತೆಯ ಯಾಂತ್ರಿಕ ವ್ಯವಸ್ಥೆ (ಪಿಎಸ್ಎಂ) ಯೋಜನೆ ಮತ್ತು “ನಾವೀನ್ಯತೆಯ ವಾಹನ ವರ್ಧನೆಯಲ್ಲಿ ಪಿಎಂ ವಿದ್ಯುನ್ಮಾನ ವಾಹನಗಳ ಚಾಲನೆಯ ಕ್ರಾಂತಿ (ಪಿಎಂ ಇ – ಡ್ರೈವ್)

ಪಿಎಂ-ಇಬಸ್ ಸೇವಾ ಪಾವತಿ ಭದ್ರತೆಯ ಯಾಂತ್ರಿಕ ವ್ಯವಸ್ಥೆ (ಪಿಎಸ್ಎಂ) ಯೋಜನೆಯು ಸಾರ್ವಜನಿಕ ಸಾರಿಗೆ ಪ್ರಾಧಿಕಾರ[ಪಿಟಿಎಗಳು]ಗಳಲ್ಲಿ ಇ-ಬಸ್ ಗಳ ಖರೀದಿ ಮತ್ತು ಕಾರ್ಯಾಚರಣೆಯ ಉದ್ದೇಶ ಹೊಂದಿದೆ

“ನಾವೀನ್ಯತೆಯ ವಾಹನ ವರ್ಧನೆಯಲ್ಲಿ ಪಿಎಂ ವಿದ್ಯುನ್ಮಾನ ವಾಹನಗಳ ಚಾಲನೆಯ ಕ್ರಾಂತಿ (ಪಿಎಂ ಇ – ಡ್ರೈವ್)   ದೇಶದಲ್ಲಿ ವಿದ್ಯುನ್ಮಾನ ವಲಯದ ಸಾಗಾಣೆ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ

Posted On: 12 SEP 2024 4:45PM by PIB Bengaluru

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ ಎಚ್.ಡಿ. ಕುಮಾರ ಸ್ವಾಮಿ ಅವರು ಇಂದು ನವದೆಹಲಿಯ ಉದ್ಯೋಗ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ “ಪಿಎಂ-ಇಬಸ್ ಸೇವಾ ಪಾವತಿಯ ಭದ್ರತಾ ಯಾಂತ್ರಿಕ ವ್ಯವಸ್ಥೆ [ಪಿಎಸ್ಎಂ] ಯೋಜನೆ ಮತ್ತು “ನಾವೀನ್ಯತೆಯ ವಾಹನ ವರ್ಧನೆಯಲ್ಲಿ ಪಿಎಂ ವಿದ್ಯುನ್ಮಾನ ವಾಹನಗಳ ಚಾಲನೆಯ ಕ್ರಾಂತಿ [ಪಿಎಂ ಇ – ಡ್ರೈವ್]  ಯೋಜನೆಗಳ ಕುರಿತು ಮಾಧ್ಯಮ ಸಂಘಟನೆಗಳನ್ನುದ್ದೇಶಿಸಿ ಮಾತನಾಡಿದರು.

 

ಪಿಎಂ-ಇಬಸ್ ಪಾವತಿ ಸೇವಾ ಭದ್ರತೆಯ ಯಾಂತ್ರಿಕ ವ್ಯವಸ್ಥೆ [ಪಿಎಸ್ಎಂ] ಯೋಜನೆ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ “ಪಿಎಂ-ಇಬಸ್ ಪಾವತಿ ಸೇವಾ ಭದ್ರತೆಯ ಯಾಂತ್ರಿಕ ವ್ಯವಸ್ಥೆ [ಪಿಎಸ್ಎಂ] ದೇಶದಲ್ಲಿ ವಿದ್ಯುನ್ಮಾನ ಸಾಗಾಣೆ ವಲಯವನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ 3,435.33 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಹಣಕಾಸು ವರ್ಷ 2024-25 ರಿಂದ ಹಣಕಾಸು ವರ್ಷ 2028-29ರ ನಡುವೆ 38,000 ವಿದ್ಯುನ್ಮಾನ ಬಸ್ ಗಳು [ಇ-ಬಸ್ ಗಳನ್ನು] ನಿಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯಡಿ ಬಸ್ ಗಳನ್ನು ನಿಯೋಜಿಸಿದ 12 ವರ್ಷಗಳ ಅವಧಿಯಲ್ಲಿ ಇ ಬಸ್ ಗಳಿಗೆ ಬೆಂಬಲ ನೀಡಲಾಗುತ್ತದೆ.

ಪ್ರಸ್ತುತ, ಪಿಟಿಎಗಳು ನಿರ್ವಹಿಸುವ ಬಹುತೇಕ ಬಸ್‌ಗಳು ಡೀಸೆಲ್/ಸಿಎನ್‌ಜಿಯಿಂದ ಚಲಿಸುತ್ತವೆ, ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಮತ್ತೊಂದೆಡೆ, ಇ-ಬಸ್‌ಗಳು ಪರಿಸರ ಸ್ನೇಹಿ ಮತ್ತು ಕಡಿಮೆ ಕಾರ್ಯಾಚರಣೆಯ ವೆಚ್ಚವನ್ನು ಹೊಂದಿವೆ. ಆದಾಗ್ಯೂ, ಪಿಟಿಎಗಳು ಇ-ಬಸ್‌ಗಳ ಹೆಚ್ಚಿನ ಮುಂಗಡ ವೆಚ್ಚ ಮತ್ತು ಕಾರ್ಯಾಚರಣೆಗಳಿಂದ ಬರುವ ಆದಾಯದ ಕಡಿಮೆಯಾಗುವುದರಿಂದ ಇ-ಬಸ್‌ಗಳನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು ಸವಾಲಾಗಿ ಪರಿಣಮಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದರು.

ಇ-ಬಸ್‌ಗಳ ಹೆಚ್ಚಿನ ಬಂಡವಾಳ ವೆಚ್ಚವನ್ನು ಪರಿಹರಿಸಲು, ಪಿಟಿಎಗಳು ಈ ಬಸ್‌ಗಳನ್ನು ಒಟ್ಟು ವೆಚ್ಚದ ಒಪ್ಪಂದದ (ಜಿಸಿಸಿ) ಮಾದರಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಸೇರ್ಪಡೆಗೊಳಿಸಲಾಗುತ್ತದೆ. ಪಿಟಿಎಗಳು ಜಿಸಿಸಿ  ಮಾದರಿಯಡಿ ಬಸ್‌ನ ಮುಂಗಡ ವೆಚ್ಚವನ್ನು ಪಾವತಿಸುವ ಅಗತ್ಯವಿಲ್ಲ, ಬದಲಿಗೆ ಒಇಎಂಗಳು/ನಿರ್ವಾಹಕರು ಪಿಟಿಎಗಳಿಗೆ ಮಾಸಿಕ ಪಾವತಿಗಳೊಂದಿಗೆ ಇ-ಬಸ್‌ಗಳನ್ನು ಸಂಗ್ರಹಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. ಆದಾಗ್ಯೂ, ಸಂಭಾವ್ಯ ಪಾವತಿ ಡೀಫಾಲ್ಟ್‌ಗಳ ಕಳವಳದಿಂದಾಗಿ ಇಒಎಂಗಳು/ನಿರ್ವಾಹಕರು ಈ ಮಾದರಿಯಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದರು.

ಮೀಸಲಾದ ನಿಧಿಯ ಮೂಲಕ ಇಒಎಂಗಳು/ಕಾರ್ಯಾಚರಣೆ ನಡೆಸುತ್ತಿರುವವರಿಗೆ ಈ ಯೋಜನೆಯಡಿ ನೆರವಾಗುವ ಮೂಲಕ ಈ ಯೋಜನೆಯಡಿ ವ್ಯಕ್ತವಾಗಿರುವ ಕಳವಳವನ್ನು ನಿವಾರಿಸಲಾಗುತ್ತಿದೆ. ಪಿಟಿಎಗಳಿಂದ ಪಾವತಿ ವಿಳಂಬವಾದ ಸಂದರ್ಭದಲ್ಲಿ, ಅನುಷ್ಠಾನ ಸಂಸ್ಥೆಯಾದ ಸಿಇಎಸ್ಎಲ್ ಯೋಜನೆಯ ನಿಧಿಯಿಂದ ಅಗತ್ಯ ಪಾವತಿ ಮಾಡಲಾಗುವುದು. ನಂತರ ಈ ಮೊತ್ತವನ್ನು ಪಿಟಿಎಗಳು/ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಮರುಪಾವತಿ ಮಾಡಲಾಗುತ್ತದೆ.

ಈ ಉಪಕ್ರಮವು ಖಾಸಗಿ ವಲಯದ ಸಹಭಾಗಿತ್ವವನ್ನು ಉತ್ತೇಜಿಸುವ ಮೂಲಕ ಇ-ಬಸ್‌ಗಳ ಅಳವಡಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸುತ್ತದೆ. ಈ ಯೋಜನೆಯು ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ ಮತ್ತು ಪಳೆಯುಳಿಕೆ ಇಂಧನದ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ  ಎಲ್ಲಾ ಪಿಟಿಎಗಳಿಗೆ ಪ್ರಯೋಜನಗಳನ್ನು ಒದಗಿಸಲಾಗುತ್ತದೆ.

“ನಾವೀನ್ಯತೆಯ ವಾಹನ ವರ್ಧನೆಯಲ್ಲಿ ಪಿಎಂ ವಿದ್ಯುನ್ಮಾನ ವಾಹನಗಳ ಚಾಲನೆಯ ಕ್ರಾಂತಿ [ಪಿಎಂ ಇ – ಡ್ರೈವ್]  ಯೋಜನೆ”

ದೇಶದಲ್ಲಿ ವಿದ್ಯುನ್ಮಾನ ಸಾಗಾಣೆ ವಲಯವನ್ನು ಉತ್ತೇಜಿಸಲು “ನಾವೀನ್ಯತೆಯ ವಾಹನ ವರ್ಧನೆಯಲ್ಲಿ ಪಿಎಂ ವಿದ್ಯುನ್ಮಾನ ವಾಹನಗಳ ಚಾಲನೆಯ ಕ್ರಾಂತಿ [ಪಿಎಂ ಇ – ಡ್ರೈವ್]  ಯೋಜನೆ” ಅನುಷ್ಠಾನ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದರು. ಎರಡು ವರ್ಷಗಳ ಅವಧಿಯಲ್ಲಿ 10,900 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಇ-2ಡಬ್ಲ್ಯುಗಳು, ಇ-3ಡಬ್ಲ್ಯುಗಳು, ಇ-ಆಂಬುಲೆನ್ಸ್ ಗಳು, ಇ-ಸರಕು ಸಾಗಾಣೆ ವಾಹನಗಳು, ಬೆಳವಣಿಗೆಯಾಗುತ್ತಿರುವ ವಿದ್ಯುನ್ಮಾನ ವಾಹನಗಳನ್ನು ಪ್ರೋತ್ಸಾಹಿಸಲು 3,679 ಕೋಟಿ ರೂಪಾಯಿ ಮೊತ್ತದ ಸಬ್ಸಿಡಿಗಳು / ಬೇಡಿಕೆಯ ಪ್ರೋತ್ಸಾಹವನ್ನು ಒದಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು. ಈ ಯೋಜನೆಯು 24.79 ಲಕ್ಷ ಇ-2ಡಬ್ಲ್ಯೂಗಳು, 3.16 ಲಕ್ಷ ಇ-3ಡಬ್ಲ್ಯೂಗಳು ಮತ್ತು 14,028 ಇ-ಬಸ್‌ಗಳನ್ನು ಪಡೆಯಲು ಬೆಂಬಲ ನೀಡುತ್ತದೆ ಎಂದರು.

ಭಾರೀ ಕೈಗಾರಿಕಾ ಸಚಿವಾಲಯ ಈ ಯೋಜನೆಯಡಿಯಲ್ಲಿ ಬೇಡಿಕೆಯ ಪ್ರೋತ್ಸಾಹವನ್ನು ಪಡೆಯಲು ಇವಿ ಖರೀದಿದಾರರಿಗೆ ಇ-ವೋಚರ್‌ಗಳನ್ನು ಪರಿಚಯಿಸುತ್ತಿದೆ. ಇವಿ ಖರೀದಿಸುವ ಸಮಯದಲ್ಲಿ, ಖರೀದಿದಾರರಿಗೆ ಆಧಾರ್ ದೃಢೀಕರಿಸಿದ ಇ-ವೋಚರ್ ಅನ್ನು ರಚಿಸಲಾಗುತ್ತದೆ. ಇ-ವೋಚರ್ ಅನ್ನು ಡೌನ್‌ಲೋಡ್ ಮಾಡಲು ಲಿಂಕ್ ಅನ್ನು ಸಹ ಖರೀದಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಈ ಇ ವೋಚರ್ ನಲ್ಲಿ ಖರೀದಿದಾರರು ಸಹಿ ಮಾಡಿ ವಾಹನ ಮಾರಾಟಗಾರರಿಗೆ ಸಲ್ಲಿಸಿ, ಯೋಜನೆಯಡಿ ಲಭ್ಯವಿರುವ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ. ಆದ್ದರಿಂದ ಇ-ವೋಚರ್ ಅನ್ನು ಡೀಲರ್ ಗಳು ಸಹಿ ಮಾಡಬೆಕು ಮತ್ತು ಪಿಎಂ-ಇ.ಡ್ರೈವ್ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು. ಸಹಿ ಮಾಡಿದ ಇ ವೋಚರ್ ಅನ್ನು ಖರೀದಿಗಾರರಿಗೆ ಎಸ್ಎಂಎಸ್ ಮೂಲಕ ಸಲ್ಲಿಸಬೇಕಾಗುತ್ತದೆ. ಸಹಿ ಮಾಡಿದ ಇ-ವೋಚರ್ ಅತ್ಯಂತ ಅಗತ್ಯವಾಗಿದ್ದು, ಇಎಂಒ ಮೂಲಕ ಯೋಜನೆಯಡಿಯಲ್ಲಿ ಬೇಡಿಕೆಯ ಪ್ರೋತ್ಸಾಹದ ಮರುಪಾವತಿಯನ್ನು ಈ ವ್ಯವಸ್ಥೆಯ ಮೂಲಕ ಪಡೆಯಬಹುದಾಗಿದೆ.

ಇ-ಆಂಬುಲೆನ್ಸ್ ಗಾಗಿ ಯೋಜನೆಯಡಿ 500 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಇದು ಭಾರತ ಸರ್ಕಾರದ ಹೊಸ ಉಪಕ್ರವಾಗಿದ್ದು, ಇ – ಆಂಬುಲೆನ್ಸ್ ಅನ್ನು ರೋಗಿಗಳ ಸುಗಮ ಸಾಗಾಟಕ್ಕೆ ಬಳಕೆ ಮಾಡಬಹುದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ ಇ-ಆಂಬುಲೆನ್ಸ್ ಗಳ ಸಾಮರ್ಥ್ಯ ಮತ್ತು ಸುರಕ್ಷತೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

ಎಸ್.ಟಿ.ಯುಗಳು/ಸಾರ್ವಜನಿಕ ಸಾರಿಗೆ ಸಂಸ್ಥೆಗಳಿಗೆ 14,028 ಇ ಬಸ್ ಗಳನ್ನು ಖರೀದಿಸಲು 4,391 ಕೋಟಿ ರೂಪಾಯಿ ಮೊತ್ತವನ್ನು ಒದಗಿಸಲಾಗುತ್ತದೆ. ಬೇಡಿಕೆಯ ಒಪ್ಪಂದವನ್ನು ಸಿಇಎಸ್ಎಲ್ ಮಾಡಿಕೊಳ್ಳಲಿದ್ದು, ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ, ಅಹಮದಾಬಾದ್, ಸೂರತ್, ಪುಣೆ, ಹೈದ್ರಾಬಾದ್ ಸೇರಿದಂತೆ 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ 9 ನಗರಗಳಲ್ಲಿ ಇ-ಬಸ್ ಗಳು ಕಾರ್ಯಾಚರಣೆ ನಡೆಸಲಿವೆ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಅಂತರ್ ರಾಜ್ಯ ಇ-ಬಸ್ ಸೇವೆಯನ್ನು ಒದಗಿಸಲಾಗುವುದು.

ನಗರಗಳು/ರಾಜ್ಯಗಳಿಗೆ ಬಸ್ಸುಗಳನ್ನು ಹಂಚುವಾಗ, ಎಂ.ಆರ್.ಟಿ.ಎಚ್ ಅವಧಿ ಮೀರಿದ ವಾಹನಗಳನ್ನು ನಾಶಪಡಿಸುವ [ವೆಹಿಕಲ್ ಸ್ಕ್ರ್ಯಾಪಿಂಗ್ ಸ್ಕೀಮ್] ಯೋಜನೆಯ ಮಾರ್ಗಸೂಚಿಗಳನ್ನು ಅನುಸರಿಸಿ ಅಧಿಕೃತ ಸ್ಕ್ರ್ಯಾಪಿಂಗ್ ಕೇಂದ್ರಗಳ ಮೂಲಕ (ಆರ್.ವಿ.ಎಸ್.ಎಫ್ ಗಳು) ಹಳೆಯ ಎಸ್.ಟಿ.ಯು ಬಸ್‌ಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ಖರೀದಿಸಲಾಗುತ್ತಿರುವ ಬಸ್‌ಗಳಿಗೆ ನಗರ/ರಾಜ್ಯಗಳಲ್ಲಿ  ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.

ಸರಕು ಸಾಗಾಣೆ ವಾಹನಗಳು ವಾಯು ಮಾಲೀನ್ಯಕ್ಕೆ ರಹದಾರಿಯಾಗಿವೆ. ಈ ಯೋಜನೆಯಡಿ ದೇಶದಲ್ಲಿ ಇ-ಸರಕು ಸಾಗಾಣೆ ವಾಹನಗಳನ್ನು ನಿಯೋಜಿಸಲಾಗುತ್ತಿದೆ. ಇ-ಸರಕು ಸಾಗಾಣೆ ವಾಹಗಳ ಖರೀದಿಗೆ 500 ಕೋಟಿ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುಮೋದನೆ ಮೇರೆಗೆ ವಾಹನಗಳನ್ನು ನಾಶಪಡಿಸುವ ಕೇಂದ್ರಗಳಿಗೆ [ಆರ್.ವಿ.ಎಸ್.ಎಫ್] ವಾಹನ ನಾಶಪಡಿಸಿದ ಪ್ರಮಾಣಪತ್ರ  ದೊರೆಯಲಿದೆ ಈ ದಾಖಲೆಗಳನ್ನು ಸಲ್ಲಿಸಿದವರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ.

ಈ ಯೋಜನೆಯು ವಿದ್ಯುನ್ಮಾನ ವಾಹನಗಳಿಗಾಗಿ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ (ಇವಿಪಿಸಿಎಸ್) ಸ್ಥಾಪನೆಯನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುವ ಮೂಲಕ ಇವಿ ಖರೀದಿದಾರರ ಆತಂಕವನ್ನು ಪರಿಹರಿಸಲಿದೆ. ಈ ಇವಿಪಿಸಿಎಸ್  ಅನ್ನು ಹೆಚ್ಚಿನ ಇವಿ ಆಯ್ಕೆಮಾಡಿದ ನಗರಗಳಲ್ಲಿ ಮತ್ತು ಆಯ್ಕೆಮಾಡಿದ ಹೆದ್ದಾರಿಗಳಲ್ಲಿ ಸ್ಥಾಪಿಸಲಾಗುವುದು. ಯೋಜನೆಯು ಇ- 4 ಡಬ್ಲ್ಯುಗಳಿಗಾಗಿ 22,100 ವೇಗದ ಚಾರ್ಜರ್‌ಗಳನ್ನು, ಇ-ಬಸ್‌ಗಳಿಗೆ 1800 ವೇಗದ ಚಾರ್ಜರ್‌ಗಳನ್ನು ಮತ್ತು ಇ- 2 ಡಬ್ಲ್ಯುಗಳು/3ಡಬ್ಲ್ಯುಗಳಿಗಾಗಿ 48,400 ವೇಗದ ಚಾರ್ಜರ್‌ಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಇವಿ ಪಿಸಿಎಸ್ ಗೆ 2,000 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಕೇಂದ್ರ ಸಚಿವರು ಮಾಧ್ಯಮಗಳ ಪ್ರಶ್ನೆಗಳಿಗೆ ಇದೇ ಸಂದರ್ಭದಲ್ಲಿ ಉತ್ತರಿಸಿದರು. ಎಂ.ಎಚ್.ಐ ಕಾರ್ಯದರ್ಶಿ ಶ್ರೀ ಕುಮಾರನ್ ರಿಝ್ವಿ ಮತ್ತು ಎಂಎಚ್ಐ ನ ಹೆಚ್ಚುವರಿ ಕಾರ್ಯದರ್ಶಿ ಡಾ. ಹನೀಫ್ ಖುರೇಶಿ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

*****

 




(Release ID: 2054437) Visitor Counter : 27


Read this release in: English , Urdu , Hindi , Tamil