ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಪಿಎಂ-ಪ್ರಣಾಮ್ ರಸಗೊಬ್ಬರಗಳ ಸುಸ್ಥಿರ ಮತ್ತು ಸಮತೋಲಿತ ಬಳಕೆಯನ್ನು ಉತ್ತೇಜಿಸುವ ಮೂಲಕ, ಪರ್ಯಾಯ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ ಭೂಮಿ ತಾಯಿಯ ಆರೋಗ್ಯವನ್ನು ಉಳಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪ್ರಾರಂಭಿಸಿದ ಪ್ರಯತ್ನಗಳಿಗೆ ಪೂರಕವಾಗಿ ವರ್ತಿಸುವ ಗುರಿಯನ್ನು ಹೊಂದಿದೆ


ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ಉಳಿಸಿದ ರಸಗೊಬ್ಬರ ಸಬ್ಸಿಡಿಯ 50% ಅನ್ನು ಆ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಅನುದಾನವಾಗಿ ವರ್ಗಾಯಿಸಲಾಗುತ್ತದೆ

Posted On: 09 AUG 2024 1:49PM by PIB Bengaluru

ಆರ್ಥಿಕ ವ್ಯವಹಾರಗಳ ಸಂಪುಟ (ಕ್ಯಾಬಿನೆಟ್) ಸಮಿತಿ (ಸಿಸಿಇಎ) 2023 ರ ಜೂನ್ 28 ರಂದು "ಭೂಮಾತೆಯ ಪುನಃಸ್ಥಾಪನೆ, ಜಾಗೃತಿ ಸೃಷ್ಟಿ, ಪೋಷಣೆ ಮತ್ತು ಸುಧಾರಣೆಗಾಗಿ ಪಿಎಂ ಕಾರ್ಯಕ್ರಮ (ಪಿಎಂ-ಪ್ರಣಾಮ್)" ಕ್ಕೆ ಅನುಮೋದನೆ ನೀಡಿದೆ. ರಸಗೊಬ್ಬರಗಳ ಸುಸ್ಥಿರ ಮತ್ತು ಸಮತೋಲಿತ ಬಳಕೆಯನ್ನು ಉತ್ತೇಜಿಸುವ ಮೂಲಕ, ಪರ್ಯಾಯ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ ಭೂಮಿ ತಾಯಿಯ ಆರೋಗ್ಯವನ್ನು ಉಳಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪ್ರಾರಂಭಿಸಿದ ಪ್ರಯತ್ನಗಳಿಗೆ ಪೂರಕವಾಗಿ ಉಪಕ್ರಮವನ್ನು ರೂಪಿಸಲಾಗಿದೆ.

ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಿಎಂ-ಪ್ರಣಾಮ್ ಅಡಿಯಲ್ಲಿ ಬರುತ್ತವೆ. ಈ ಯೋಜನೆಯಡಿ, ಹಿಂದಿನ 3 ವರ್ಷಗಳ ಸರಾಸರಿ ಬಳಕೆಗೆ ಹೋಲಿಸಿದರೆ ರಾಸಾಯನಿಕ ಗೊಬ್ಬರಗಳ (ಯೂರಿಯಾ, ಡಿಎಪಿ, ಎನ್ ಪಿ ಕೆ, ಎಂಒಪಿ) ಬಳಕೆಯನ್ನು ಕಡಿಮೆ ಮಾಡುವ ಮೂಲಕ ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ರಾಜ್ಯ / ಕೇಂದ್ರಾಡಳಿತ ಪ್ರದೇಶವು ಉಳಿಸಿದ ರಸಗೊಬ್ಬರ ಸಬ್ಸಿಡಿಯ 50% ನಷ್ಟನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಕ್ಕೆ ಅನುದಾನವಾಗಿ ವರ್ಗಾಯಿಸಲಾಗುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುದಾನವನ್ನು ರೈತರು ಸೇರಿದಂತೆ ರಾಜ್ಯದ ಜನರ ಅನುಕೂಲಕ್ಕಾಗಿ ಬಳಸಿಕೊಳ್ಳಬಹುದು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವರಾದ ಶ್ರೀಮತಿ ಅನುಪ್ರಿಯಾ ಪಟೇಲ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾಹಿತಿಯನ್ನು ನೀಡಿದರು.

 

*****

 


(Release ID: 2043678) Visitor Counter : 47