ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಕಳಪೆ ಗುಣಮಟ್ಟದ ಪಾದರಕ್ಷೆಗಳ ಆಮದನ್ನು ತಡೆಯಲು, ದೇಶೀಯ ಉದ್ಯಮವನ್ನು ಅಕ್ರಮ ಸ್ಪರ್ಧೆಯಿಂದ ರಕ್ಷಿಸಲು ಗುಣಮಟ್ಟ ನಿಯಂತ್ರಣ ಆದೇಶ ಜಾರಿಗೆ: ಶ್ರೀ ಪಿಯೂಷ್ ಗೋಯಲ್
QCO ಮಾರ್ಗಸೂಚಿಗಳಿಗೆ ಕೆಲ ವಿನಾಯಿತಿ, ಚಿಲ್ಲರೆ ವ್ಯಾಪಾರಿಗಳಿಗೆ ಅಸ್ತಿತ್ವದಲ್ಲಿರುವ ಸ್ಟಾಕ್ ಅನ್ನು ವಿಲೇವಾರಿ ಮಾಡಲು 2 ವರ್ಷಗಳ ಕಾಲಾವಕಾಶ: ಶ್ರೀ ಗೋಯಲ್
ಚರ್ಮ ಮತ್ತು ಪಾದರಕ್ಷೆಗಳ ಉದ್ಯಮವು 40 ಲಕ್ಷದಿಂದ 1 ಕೋಟಿಗೆ ಉದ್ಯೋಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ: ಶ್ರೀ ಗೋಯಲ್
2030ರ ವೇಳೆಗೆ $50 ಬಿಲಿಯನ್ ಮೌಲ್ಯದ ಪಾದರಕ್ಷೆ ರಫ್ತು ಸಾಧಿಸುವ ಗುರಿ: ಶ್ರೀ ಗೋಯಲ್
Posted On:
08 AUG 2024 9:57PM by PIB Bengaluru
ಗುಣಮಟ್ಟ ನಿಯಂತ್ರಣ ಆದೇಶಗಳ (QCOs) ಅನುಷ್ಠಾನವು ಕೆಳದರ್ಜೆಯ, ಕಡಿಮೆ-ವೆಚ್ಚದ ಚರ್ಮದ ಉತ್ಪನ್ನಗಳ ಆಮದುಗಳನ್ನು ತಡೆಯಲು ನೆರವಾಗುತ್ತಿದ್ದು, ಮತ್ತು ಅಕ್ರಮದ ಸ್ಪರ್ಧೆಯಿಂದ ಭಾರತೀಯ ಪಾದರಕ್ಷೆಗಳ ಉದ್ಯಮವನ್ನು ಉಳಿಸಲು ಆದ್ಯತೆ ನೀಡುತ್ತಿದೆ. ಇಂದು ಇಲ್ಲಿ 8ನೇ ಭಾರತ ಅಂತರಾಷ್ಟ್ರೀಯ ಪಾದರಕ್ಷೆ ಮೇಳವನ್ನು ಉದ್ಘಾಟಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಈ ವಿಷಯ ತಿಳಿಸಿದ್ದಾರೆ.
QCO ಗಳು ದೇಶೀಯ ತಯಾರಕರಲ್ಲಿ ಗುಣಮಟ್ಟದ ಮನೋಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ. ಭಾರತವು ಗುಣಮಟ್ಟದ ಪಾದರಕ್ಷೆಗಳ ವಿಶ್ವದರ್ಜೆಯ ತಯಾರಕರಾಗಲು ಅನುವು ಮಾಡಿಕೊಡುತ್ತದೆ. ಆಗಸ್ಟ್ 1, 2024 ರಿಂದ QCO ಗಳ ಅನುಷ್ಠಾನವು ಚರ್ಮ ಮತ್ತು ಪಾದರಕ್ಷೆಗಳ ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದರು.
QCO ಮಾರ್ಗಸೂಚಿಗಳಿಗೆ ಕೆಲ ರಿಯಾಯಿತಿ ನೀಡುವ ಕುರಿತು, ಮಾತನಾಡಿದ ಸಚಿವರು, ಪಾದರಕ್ಷೆಗಳ ದಾಸ್ತಾನು ವಿಲೇವಾರಿ ಮಾಡಲು ಚಿಲ್ಲರೆ ವ್ಯಾಪಾರಿಗಳಿಗೆ ಕೇಂದ್ರವು ಎರಡು ವರ್ಷಗಳ ಕಾಲಾವಕಾಶವನ್ನು ನೀಡುತ್ತದೆ ಎಂದರು. 72,000 ಜೋಡಿಗಳವರೆಗಿನ ಫ್ಯಾಶನ್ ಪಾದರಕ್ಷೆಗಳ ತಯಾರಿಕೆಯು QCOಗಳ ಮೂಲಕ ಹೋಗಬೇಕಾಗಿಲ್ಲ ಎಂದು ಅವರು ಹೇಳಿದರು.
ಚರ್ಮ ಮತ್ತು ಪಾದರಕ್ಷೆಗಳ ಉದ್ಯಮವು ತಮ್ಮ ಮಾರುಕಟ್ಟೆಯನ್ನು ದೇಶೀಯವಾಗಿ ಮತ್ತು ವಿದೇಶಗಳಲ್ಲಿ ವಿಸ್ತರಿಸುವ ಸಾಮರ್ಥ್ಯದ ಬಗ್ಗೆ ಸಚಿವರು ತಿಳಿಸಿದರು.
ತಯಾರಕರು ಕ್ಷೇತ್ರದಲ್ಲಿ ಪ್ರಸ್ತುತ 40 ಲಕ್ಷದಿಂದ 1 ಕೋಟಿ ಉದ್ಯೋಗಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. "ನಮಗೆ ವಿಶ್ವ ಮಾರುಕಟ್ಟೆ ಇದೆ. ನಮಗೆ ಆತ್ಮಸ್ಥೈರ್ಯ ಬೇಕು, ಬದಲಾವಣೆಯನ್ನು ಒಪ್ಪಿಕೊಳ್ಳಲು ಮುಕ್ತ ಮನಸ್ಸು ಬೇಕು” ಎಂದು ಸಚಿವರು ಹೇಳಿದರು.
ಭಾರತವು ವಿಶ್ವದಲ್ಲೇ ಮಾರುಕಟ್ಟೆ ನಾಯಕರಾಗಲು ಸಜ್ಜಾಗಿದೆ. ಪಾದರಕ್ಷೆಗಳ ಉದ್ಯಮವು ವಿಶ್ವದ ಅತಿದೊಡ್ಡ ತಯಾರಕರಾಗುವ ಭರವಸೆ ಇದೆ. ಪ್ರಸ್ತುತ, ಭಾರತವು 2ನೇ ಅತಿದೊಡ್ಡ ತಯಾರಕ ಮತ್ತು 9 ನೇ ಅತಿದೊಡ್ಡ ಪಾದರಕ್ಷೆಗಳ ರಫ್ತುದಾರ ದೇಶವಾಗಿದೆ.
2030ರ ವೇಳೆಗೆ $ 50 ಶತಕೋಟಿ ರಫ್ತು ಮಾಡುವ ಗುರಿಯನ್ನು ಸಾಧಿಸಬಹುದು. QCO ಗಳು ರಫ್ತಿನ ಮೇಲೆ ಅನ್ವಯಿಸುವುದಿಲ್ಲ ಆದರೆ ರಫ್ತುದಾರರು ತಮ್ಮ ಗ್ರಾಹಕರ ಗುಣಮಟ್ಟದ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಸಚಿವರು ಸೂಚಿಸಿದರು. ವಿಶೇಷವಾಗಿ ಆಸಿಯಾನ್ ಮತ್ತು ಯುರೋಪಿಯನ್ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಹತೋಟಿಗೆ ತರಲು ಮತ್ತು ಭಾರತೀಯ ಬ್ರಾಂಡ್‌ಗಳನ್ನು ಜಾಗತಿಕವಾಗಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ಶ್ರೀ ಪಿಯೂಷ್ ಗೋಯಲ್ ಕರೆ ನೀಡಿದರು.
*****
(Release ID: 2043466)
Visitor Counter : 54