ಸಹಕಾರ ಸಚಿವಾಲಯ

ಸಹಕಾರ ಸಂಘಗಳಿಗೆ ಆದಾಯ ತೆರಿಗೆ ವಿನಾಯಿತಿ

Posted On: 06 AUG 2024 4:37PM by PIB Bengaluru

'ಸಹಕಾರದ ಮೂಲಕ ಸಮೃದ್ಧಿ'  (Sahakar se Samriddhi) ಸಾಧಿಸುವ ದೃಷ್ಟಿಯಂತೆ, ಸರ್ಕಾರವು ಸಹಕಾರ ಸಂಘಗಳಿಗೆ ಪರಿಹಾರವನ್ನು ಒದಗಿಸಲು ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಇದರಲ್ಲಿ ವಿವಿಧ ಚಟುವಟಿಕೆಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು ಮತ್ತು ನಗದು ಹಿಂಪಡೆಯುವಿಕೆಯ ಮೇಲಿನ ತೆರಿಗೆ ವಿನಾಯಿತಿ (TDS) ಮಿತಿಯನ್ನು ಹೆಚ್ಚಿಸುವುದು ಸೇರಿದೆ.

1.    ಸಹಕಾರ ಸಂಘಗಳ ಮೇಲಿನ ಹೆಚ್ಚುವರಿ ಶುಲ್ಕ ಕಡಿತ

ಸರ್ಕಾರವು ಸಹಕಾರ ಸಂಘಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸಿದೆ. ₹1  ಕೋಟಿಯಿಂದ ₹10 ಕೋಟಿ ರೂಪಾಯಿ ವಾರ್ಷಿಕ ಆದಾಯ ಹೊಂದಿರುವ ಸಹಕಾರ ಸಂಘಗಳಿಗೆ ಹೆಚ್ಚುವರಿ ತೆರಿಗೆಯನ್ನು ಶೇ.12  ರಿಂದ ಶೇ.7ಕ್ಕೆ ಇಳಿಸಲಾಗಿದೆ. ಇದರಿಂದ ಸಂಘಗಳ ಆದಾಯ ಹೆಚ್ಚಳಕ್ಕೆ ನೆರವಾಗುವುದಲ್ಲದೆ. ಅದರಲ್ಲೂ ಗ್ರಾಮೀಣ ಮತ್ತು ಕೃಷಿ  ಕುಟುಂಬಗಳಿಂದ ರಚಿತವಾಗಿರುವ ಸಂಘದ ಸದಸ್ಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

2.    ಸಹಕಾರಿ ಸಂಸ್ಥೆಗಳಿಗೆ ಪರ್ಯಾಯ ಕನಿಷ್ಠ ತೆರಿಗೆ ಕಡಿತ

ಸಹಕಾರ ಸಂಘಗಳು ಹಿಂದೆ ಶೇ.18.5 ರಷ್ಟು ಪರ್ಯಾಯ ಕನಿಷ್ಠ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಆದರೆ ಕಂಪನಿಗಳು ಇದೇ ತೆರಿಗೆಯನ್ನು ಶೇ. 15ರಂತೆ ಪಾವತಿಸುತ್ತಿದ್ದವು. ಸಹಕಾರ ಸಂಘಗಳು ಮತ್ತು ಕಂಪನಿಗಳ ನಡುವೆ ಸಮಾನ ವೇದಿಕೆಯನ್ನು ಸೃಷ್ಟಿಸಲು, ಸಹಕಾರ ಸಂಘಗಳಿಗೆ ತೆರಿಗೆಯನ್ನು ಶೇ. 15ಕ್ಕೆ ಇಳಿಸಲಾಗಿದೆ.

3.    ವಿಭಾಗ 269 ST ಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ

ಸೆಕ್ಷನ್ 269ST (ಎ) ಒಂದು ದಿನದಲ್ಲಿ ಒಬ್ಬ ವ್ಯಕ್ತಿಯಿಂದ ಅಥವಾ ಒಂದು ವಹಿವಾಟಿನಲ್ಲಿ, ಅಥವಾ ಒಂದೇ ಘಟನೆ ಅಥವಾ ಸಂದರ್ಭಕ್ಕೆ ಸಂಬಂಧಿಸಿದ ಹಲವು ವಹಿವಾಟುಗಳಿಂದ ₹ 2 ಲಕ್ಷಕ್ಕಿಂತ ಹೆಚ್ಚಿನ ನಗದು ರಶೀದಿಯನ್ನು ನಿರ್ಬಂಧಿಸುತ್ತದೆ. ಈ ನಿಬಂಧನೆಯ ಉಲ್ಲಂಘನೆಯ ಸಂದರ್ಭದಲ್ಲಿ, ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ಉಲ್ಲಂಘನೆಯ ಮೊತ್ತಕ್ಕೆ ದಂಡ ವಿಧಿಸಲಾಗುತ್ತದೆ. ಹಾಲು ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ಹಾಲಿನ ದರ ಪಾವತಿಸಲು, ವಿಶೇಷವಾಗಿ ಬ್ಯಾಂಕ್ ರಜಾದಿನಗಳಂದು, ತಮ್ಮೊಂದಿಗೆ ಒಪ್ಪಂದ ಹೊಂದಿರುವ ವಿತರಕರಿಂದ ವರ್ಷಕ್ಕೆ ಹಲವು ದಿನಗಳಲ್ಲಿ ₹ 2 ಲಕ್ಷಕ್ಕಿಂತ ಹೆಚ್ಚಿನ ನಗದು ಪಡೆಯುತ್ತವೆ. ಇದರ ಪರಿಣಾಮವಾಗಿ, ಆದಾಯ ತೆರಿಗೆ ಇಲಾಖೆಯು ಸಹಕಾರ ಸಂಘಗಳು ಮತ್ತು ಅದರ ವಿತರಕರ ನಡುವಿನ ಒಪ್ಪಂದವನ್ನು ಒಂದು ಘಟನೆ / ಸಂದರ್ಭವೆಂದು ಪರಿಗಣಿಸುವ ಮೂಲಕ ಹಾಲು ಸಂಘಗಳ ಮೇಲೆ ದೊಡ್ಡ ದಂಡ ವಿಧಿಸಲಾಗಿದೆ. ಸಿಬಿಡಿಟಿ 30.12.2022 ರಂದು ಸಂಖ್ಯೆ 25/2022 ರ ಸುತ್ತೋಲೆಯ ಮೂಲಕ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಒಂದು ಡೀಲರ್‌ ಶಿಪ್ / ವಿತರಣಾ ಒಪ್ಪಂದವು ತಾನಾಗಿಯೇ ವಿಭಾಗ 269 ST ಯ ಕಲಂ (ಸಿ) ಯ ಉದ್ದೇಶಕ್ಕಾಗಿ ಒಂದು ಘಟನೆ ಅಥವಾ ಸಂದರ್ಭವನ್ನು ಸಂಯೋಜಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹಿಂದಿನ ವರ್ಷದಲ್ಲಿ ಸಹಕಾರ ಸಂಘವು ಅಂತಹ ಡೀಲರ್ ಶಿಪ್ / ವಿತರಣಾ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿದ ರಶೀದಿಯು ನಿಗದಿತ ಮಿತಿಯೊಳಗೆ ಇದ್ದರೆ, ಆ ಹಿಂದಿನ ವರ್ಷದಲ್ಲಿ ಹಲವು ದಿನಗಳಿಗೆ ಒಟ್ಟುಗೂಡಿಸಲಾಗುವುದಿಲ್ಲ. ಇದು ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ, ಅವರು ಹೆಚ್ಚಾಗಿ ಗ್ರಾಮೀಣ ಮತ್ತು ಕೃಷಿ ಸಮುದಾಯಗಳಿಂದ ಬಂದವರು, ಬ್ಯಾಂಕ್ ರಜಾದಿನಗಳಲ್ಲಿ ಆದಾಯ ತೆರಿಗೆ ದಂಡದ ಭಯವಿಲ್ಲದೆ ಪಾವತಿ ಮಾಡಲು ಸಾಧ್ಯವಾಗುತ್ತದೆ.

4.    ಹೊಸ ಉತ್ಪಾದನಾ ಸಹಕಾರ ಸಂಘಗಳಿಗೆ ರಿಯಾಯಿತಿ ದರದ ತೆರಿಗೆ

31.03.2024 ರ ಒಳಗಾಗಿ ತಯಾರಿಕಾ ಚಟುವಟಿಕೆಗಳನ್ನು ಆರಂಭಿಸಿದ ಹೊಸ ಸಹಕಾರ ಸಂಘಗಳಿಗೆ ಹೊಸ ತಯಾರಿಕಾ ಕಂಪನಿಗಳಿಗೆ ಲಭ್ಯವಿರುವಂತೆ ಶೇ. 15 ರಷ್ಟು ಕಡಿಮೆ ತೆರಿಗೆ ದರದ ಪ್ರಯೋಜನವನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

5.    ಪ್ರಾಥಮಿಕ ಸಹಕಾರ ಸಂಘಗಳಿಗೆ ನಗದು ಸಾಲ/ ವಹಿವಾಟುಗಳಲ್ಲಿ ವಿನಾಯಿತಿ

ಆದಾಯ ತೆರಿಗೆ ಕಾಯ್ದೆ, 1961 ರ 269SS ವಿಭಾಗದ ಪ್ರಕಾರ, ರೂ. 20,000ಗಿಂತ ಹೆಚ್ಚಿನ ನಗದು ಠೇವಣಿ ಅಥವಾ ಸಾಲವನ್ನು ಅನುಮತಿಸಲಾಗುವುದಿಲ್ಲ. ಉಲ್ಲಂಘನೆಗೆ ಸಾಲ ಅಥವಾ ಠೇವಣಿ ಮೊತ್ತದಷ್ಟು ದಂಡ ವಿಧಿಸಬಹುದು. ಆದಾಯ ತೆರಿಗೆ ಕಾಯ್ದೆ 269SS  ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಈಗ ಪ್ರಾಥಮಿಕ ಕೃಷಿ ಸಹಕಾರಿ ಸಂಘ (PACS) ಅಥವಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PCARDB) ತನ್ನ ಸದಸ್ಯರಿಂದ ಸ್ವೀಕರಿಸುವ ನಗದು ಠೇವಣಿ ಅಥವಾ ಸದಸ್ಯರು PACS ಅಥವಾ PCARDB ಯಿಂದ ಪಡೆಯುವ ನಗದು ಸಾಲದ ಮೊತ್ತವು ಬಾಕಿ ಉಳಿಕೆಯೊಂದಿಗೆ ರೂ. 2 ಲಕ್ಷಕ್ಕಿಂತ ಕಡಿಮೆಯಿದ್ದರೆ ದಂಡ ವಿಧಿಸುವುದಿಲ್ಲ. ಇದಕ್ಕೂ ಮುನ್ನ ಈ ಮಿತಿಯು ಪ್ರತಿ ಸದಸ್ಯರಿಗೆ ರೂ. 20,000 ಆಗಿತ್ತು.

6.    ಪ್ರಾಥಮಿಕ ಸಹಕಾರಿ ಸಂಸ್ಥೆಗಳಿಂದ ನಗದು ರೂಪದಲ್ಲಿ ಸಾಲ ಮರುಪಾವತಿಗೆ ಪರಿಹಾರ

ಆದಾಯ ತೆರಿಗೆ ಕಾಯ್ದೆಯ 269T ಪ್ರಕಾರ, ರೂ. 20,000 ಅಥವಾ ಅದಕ್ಕಿಂತ ಹೆಚ್ಚಿನ ಸಾಲ ಅಥವಾ ಠೇವಣಿಯನ್ನು ನಗದು ರೂಪದಲ್ಲಿ ಮರುಪಾವತಿ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಉಲ್ಲಂಘನೆಗೆ ಸಾಲ ಅಥವಾ ಠೇವಣಿ ಮೊತ್ತದಷ್ಟು ದಂಡ ವಿಧಿಸಬಹುದು. ಆದಾಯ ತೆರಿಗೆ ಕಾಯ್ದೆ 269T ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಈಗ PACS ಅಥವಾ PCARDB ತನ್ನ ಸದಸ್ಯರಿಗೆ ಠೇವಣಿಯನ್ನು ಮರುಪಾವತಿ ಮಾಡುವಾಗ ಅಥವಾ ಸದಸ್ಯರು PACS ಅಥವಾ PCARDB ಗೆ ಸಾಲವನ್ನು ಮರುಪಾವತಿ ಮಾಡುವಾಗ, ಸಾಲ ಅಥವಾ ಠೇವಣಿಯ ಮೊತ್ತವು ಬಾಕಿ ಉಳಿಕೆಯೊಂದಿಗೆ ರೂ. 2 ಲಕ್ಷಕ್ಕಿಂತ ಕಡಿಮೆಯಿದ್ದರೆ ದಂಡ ವಿಧಿಸುವುದಿಲ್ಲ. ಇದಕ್ಕೂ ಮುನ್ನ ಈ ಮಿತಿಯು ಪ್ರತಿ ಸದಸ್ಯರಿಗೆ ರೂ. 20,000 ಆಗಿತ್ತು.

7.    ಸಹಕಾರಿ ಸಂಸ್ಥೆಗಳಿಗೆ ಟಿಡಿಎಸ್ ಮುಕ್ತ ನಗದು ಹಿಂಪಡೆಯುವಿಕೆಯ ಮಿತಿಯಲ್ಲಿ ಹೆಚ್ಚಳ

ಸರ್ಕಾರವು ಸಹಕಾರಿ ಸಂಘಗಳಿಂದ ನಗದು ಹಿಂಪಡೆಯುವ ಮಿತಿಯನ್ನು ತೆರಿಗೆ ಕಡಿತವಿಲ್ಲದೆ ವಾರ್ಷಿಕವಾಗಿ ₹1 ಕೋಟಿಯಿಂದ ₹3 ಕೋಟಿಗೆ ಹೆಚ್ಚಿಸಿದೆ. ಈ ನಿಬಂಧನೆಯಿಂದ ಸಹಕಾರಿ ಸಂಘಗಳಿಗೆ ತೆರಿಗೆ ಕಡಿತದ ಹೊರೆ ಕಡಿಮೆಯಾಗಲಿದ್ದು, ಅವುಗಳ ದ್ರವ್ಯತೆಯನ್ನು ಹೆಚ್ಚಿಸುತ್ತದೆ.

8.    ಕಬ್ಬು ಖರೀದಿಗೆ ಖರ್ಚು ಮಾಡಿದ ಮೊತ್ತದ ಮೇಲೆ ಕಡಿತವನ್ನು ಒದಗಿಸುವ ಮೂಲಕ ಸಕ್ಕರೆ ಸಹಕಾರ ಸಂಘಗಳಿಗೆ ಪರಿಹಾರ

2015 ರ ಹಣಕಾಸು ಕಾಯ್ದೆಯ ಮೂಲಕ ಸಕ್ಕರೆ ತಯಾರಿಕಾ ವ್ಯವಹಾರದಲ್ಲಿ ತೊಡಗಿರುವ ಸಹಕಾರಿ ಸಂಘಗಳು ಖರ್ಚು ಮಾಡಿದ ಮೊತ್ತಕ್ಕೆ ತೆರಿಗೆ ವಿನಾಯಿತಿ ಒದಗಿಸಲು ಆದಾಯ ತೆರಿಗೆ ಕಾಯ್ದೆ 1961 ರಲ್ಲಿ ವಿಭಾಗ 36(1)(xvii) ಸೇರಿಸಲಾಯಿತು. ಈ ನಿಬಂಧನೆ 01.04.2016 ರಿಂದ ಅಂದರೆ ಮೌಲ್ಯಮಾಪನ ವರ್ಷ 2016-17 ರಿಂದ ಜಾರಿಗೆ ಬಂದಿತು. ಆದಾಗ್ಯೂ, ಸಹಕಾರಿ ಸಕ್ಕರೆ ಕಾರ್ಖಾನೆಗಳು (CSM) ಕಬ್ಬಿನ ಬೆಲೆಗೆ ಹೆಚ್ಚುವರಿ ಪಾವತಿಯನ್ನು ರೈತ ಸದಸ್ಯರಿಗೆ ಆದಾಯ ವಿತರಣೆಯಾಗಿ ಪರಿಗಣಿಸುವ ವಿಷಯ ಮತ್ತು ಫಲಿತಾಂಶದ ತೆರಿಗೆ ಹೊಣೆಗಾರಿಕೆಗಳು ಬಗೆಹರಿಯದೆ ಉಳಿದಿತ್ತು, ಇದನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿಯು 25.10.2021 ರಂದು ಸಂಖ್ಯೆ 18/2021 ರ ಸುತ್ತೋಲೆಯ ಮೂಲಕ ಸ್ಪಷ್ಟಪಡಿಸಿತು. ಅದರಂತೆ, ಕಬ್ಬಿನ ಬೆಲೆಗೆ ಸಹಕಾರಿ ಸಕ್ಕರೆ ಕಾರ್ಖಾನೆಗಳು ಮಾಡಿದ ಹೆಚ್ಚುವರಿ ಪಾವತಿಯ ಮೇಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳ ತೆರಿಗೆ ಹೊರೆಗಳು 1.4.2016 ರಿಂದ ನಿವಾರಣೆಯಾದವು.

9.    ಸಕ್ಕರೆ ಸಹಕಾರ ಸಂಘಗಳಿಗೆ ಹಿಂದಿನ ಆದಾಯ ತೆರಿಗೆ ಬೇಡಿಕೆಯಿಂದ ಪರಿಹಾರ

ಸಕ್ಕರೆ ಸಹಕಾರಿ ಸಂಘಗಳು 2016-17 ರ ಮೌಲ್ಯಮಾಪನ ವರ್ಷಕ್ಕಿಂತ ಮೊದಲಿನ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ಮಾಡಿದ ಪಾವತಿಗಳನ್ನು ವೆಚ್ಚವಾಗಿ ಘೋಷಿಸಲು ಅವಕಾಶ ನೀಡಲಾಗಿದೆ. ಇದಕ್ಕೆ ಅನುಗುಣವಾಗಿ, ಆದಾಯ ತೆರಿಗೆ ಕಾಯ್ದೆಯ 155 ನೇ ವಿಭಾಗಕ್ಕೆ ಹೊಸ ಉಪವಿಭಾಗವನ್ನು ಸೇರಿಸಲಾಗಿದೆ.

2023 ರ ಹಣಕಾಸು ಕಾಯ್ದೆಯ ಮೂಲಕ ಆದಾಯ ತೆರಿಗೆ ಕಾಯ್ದೆಯ ವಿಭಾಗ 155 ರ ಉಪವಿಭಾಗ (19) ರ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮತ್ತು ನಿರ್ವಹಿಸುವ ವ್ಯವಸ್ಥಿತ ಕ್ರಮವನ್ನು ಸ್ಥಾಪಿಸಲು ಕೇಂದ್ರ ನೇರ ತೆರಿಗೆ ಮಂಡಳಿ 27.07.2023 ರಂದು ಸಂಖ್ಯೆ 14 ರ ಸುತ್ತೋಲೆಯನ್ನು ಹೊರಡಿಸಿತು. ಈ ನಿರ್ಧಾರದ ಪರಿಣಾಮವಾಗಿ, ದಶಕಗಳಿಂದ ಬಾಕಿ ಇದ್ದ ಸಕ್ಕರೆ ಸಹಕಾರಿ ಕಾರ್ಖಾನೆಗಳ ಆದಾಯ ತೆರಿಗೆ ಸಂಬಂಧಿತ ಸಮಸ್ಯೆಗಳು ಇತ್ಯರ್ಥವಾಗಿವೆ. ಒಟ್ಟಾರೆಯಾಗಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರಿಗೆ ಸುಮಾರು 43,407 ಕೋಟಿ ರೂಪಾಯಿಗಳಷ್ಟು ಪ್ರಯೋಜನ ಲಭಿಸಿದೆ.

10.    1961ರ ಆದಾಯ ತೆರಿಗೆ ಕಾಯ್ದೆಯ 119ನೇ ವಿಭಾಗದ ಉಪವಿಭಾಗ (2) ರ ಕಲಂ (ಬಿ) ಅಡಿಯಲ್ಲಿ ವಿಳಂಬಕ್ಕೆ ಕ್ಷಮೆ ಅಥವಾ ಅನುಮತಿ ನೀಡುವ ಕುರಿತು: 2018-19 ರಿಂದ 2022-23 ರ ತೆರಿಗೆ ವರ್ಷಗಳಿಗೆ 80P ವಿಭಾಗದ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಕೇಳುವ ಆದಾಯ ತೆರಿಗೆ ರಿಟರ್ನ್ಗಳಿಗೆ ಸಂಬಂಧಿಸಿದಂತೆ.

2023ರ ಜುಲೈ 26 ರಂದು ಬಿಡುಗಡೆ ಮಾಡಲಾದ 13/2021 ಸಂಖ್ಯೆಯ ಸುತ್ತೋಲೆಯ ಮೂಲಕ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಆದಾಯ ತೆರಿಗೆಯ ಮುಖ್ಯ ಆಯುಕ್ತರು (CCsIT) / ಆದಾಯ ತೆರಿಗೆಯ ಮಹಾನಿರ್ದೇಶಕರು (DGsIT) ಗಳಿಗೆ ಸಹಕಾರ ಸಂಘಗಳಿಂದ ವಿಳಂಬಕ್ಕೆ ಕ್ಷಮೆ ನೀಡುವ ಅರ್ಜಿಗಳನ್ನು ನಿಭಾಯಿಸಲು ಅಧಿಕಾರ ನೀಡಿದೆ. 139 ರ ಉಪವಿಭಾಗ (1) ರ ಅಡಿಯಲ್ಲಿ ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಲ್ಲಿ ವಿಳಂಬವಾಗಿದ್ದ ಕಾರಣ 2018-19 ರಿಂದ 2022-23 ರ ತೆರಿಗೆ ವರ್ಷಗಳಿಗೆ ಆದಾಯ ತೆರಿಗೆ ಕಾಯ್ದೆಯ 80P ವಿಭಾಗದ ಅಡಿಯಲ್ಲಿ ಲಭ್ಯವಿರುವ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಲು ಸಾಧ್ಯವಾಗದ ಸಹಕಾರ ಸಂಘಗಳಿಂದ ವಿಳಂಬಕ್ಕೆ ಕ್ಷಮೆ ನೀಡುವ ಅರ್ಜಿಗಳನ್ನು ನಿಭಾಯಿಸಲು ಅಧಿಕಾರ ನೀಡಿದೆ. ಈ ವಿಳಂಬವು ಅವರ ನಿಯಂತ್ರಣಕ್ಕೆ ಮೀರಿದ ಸಂದರ್ಭಗಳಿಂದ ಅಥವಾ ರಾಜ್ಯ ಕಾನೂನಿನ ಅಡಿಯಲ್ಲಿ ನೇಮಕಗೊಂಡ ಸ್ಥಿರ ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ವರದಿ ತಡವಾಗಿ ಬಂದ ಕಾರಣದಿಂದಾಗಿ ಆಗಿರುವ ವಿಳಂಬವಾಗಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಸಹಕಾರ ಸಚಿವ ಶ್ರೀ ಅಮಿತ್ ಶಾ ಈ ವಿಷಯ ತಿಳಿಸಿದ್ದಾರೆ.

 

*****



(Release ID: 2042418) Visitor Counter : 65