ಹಣಕಾಸು ಸಚಿವಾಲಯ
ಪಿಎಂಜೆಡಿವೈ ಅಡಿಯಲ್ಲಿ 19.07.2024 ರ ವೇಳೆಗೆ 2,30,792 ಕೋಟಿ ರೂ.ಗಳ ಠೇವಣಿ ಮೊತ್ತ ಇರುವ 52.81 ಕೋಟಿ ಪಿಎಂ ಜನ್-ಧನ್ ಖಾತೆಗಳನ್ನು ತೆರೆಯಲಾಗಿದೆ
ಪಿಎಂಜೆಡಿವೈ ಅಡಿಯಲ್ಲಿ ತೆರೆಯಲಾಗಿರುವ 29.37 ಕೋಟಿ (55.6%) ಖಾತೆಗಳು ಮಹಿಳೆಯರಿಗೆ ಸೇರಿದವು ಮತ್ತು ಸುಮಾರು 35.15 ಕೋಟಿ (66.6%) ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ
Posted On:
05 AUG 2024 8:45PM by PIB Bengaluru
ಹಣಕಾಸು ಸೇರ್ಪಡೆಗಾಗಿ ರಾಷ್ಟ್ರೀಯ ಮಿಷನ್ (ಎನ್ಎಂಎಫ್ಐ) ಅಂದರೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ) ಯನ್ನು ಸರ್ಕಾರವು 2014 ರ ಆಗಸ್ಟ್ನಲ್ಲಿ ಪ್ರಾರಂಭಿಸಿತು, ಇದು ಬ್ಯಾಂಕಿಂಗ್ ಸೌಲಭ್ಯವಿಲ್ಲದವರಿಗೆ ಬ್ಯಾಂಕಿಂಗ್, ಭದ್ರತೆ ಇಲ್ಲದವರಿಗೆ ಹಣಕಾಸು ಭದ್ರತೆ ಒದಗಿಸುವುದು, ಹಣವಿಲ್ಲದವರಿಗೆ ಧನಸಹಾಯ ಮತ್ತು ಸೇವೆಯಿಲ್ಲದ ಮತ್ತು ಸೌಲಭ್ಯವಿಲ್ಲದ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಮಾರ್ಗದರ್ಶಿ ತತ್ವಗಳ ಆಧಾರದ ಮೇಲೆ ಪ್ರತಿ ಬ್ಯಾಂಕಿಂಗ್ ಸೌಲಭ್ಯವಿಲ್ಲದ ಕುಟುಂಬಗಳಿಗೆ ಸಾರ್ವತ್ರಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.
14.08.2018 ರಿಂದ, ಪಿಎಂಜೆಡಿವೈನ ಉದ್ದೇಶವು ಎಲ್ಲಾ ಬ್ಯಾಂಕಿಂಗ್ ರಹಿತ ವಯಸ್ಕರನ್ನು ಒಳಗೊಳ್ಳುವುದಾಗಿದೆ ಎಂದು ಸಚಿವರು ಹೇಳಿದರು.
ದೇಶಾದ್ಯಂತ ಹಣಕಾಸು ಸೇರ್ಪಡೆಯನ್ನು ಉತ್ತೇಜಿಸಲು ಬ್ಯಾಂಕಿಂಗ್ ಪ್ರವೇಶವನ್ನು ಹೆಚ್ಚಿಸುವಲ್ಲಿ ಪಿಎಂಜೆಡಿವೈ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದರು. ಪಿಎಂಜೆಡಿವೈ ಅಡಿಯಲ್ಲಿ 19.07.2024 ರವರೆಗೆ 2,30,792 ಕೋಟಿ ರೂ.ಗಳ ಠೇವಣಿ ಮೊತ್ತ ಇರುವ ಒಟ್ಟು 52.81 ಕೋಟಿ ಜನ್-ಧನ್ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ 29.37 ಕೋಟಿ (55.6%) ಜನ್-ಧನ್ ಖಾತೆಗಳು ಮಹಿಳೆಯರಿಗೆ ಸೇರಿದ್ದು, ಸುಮಾರು 35.15 ಕೋಟಿ (66.6%) ಪಿಎಂಜೆಡಿವೈ ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ.
ಹೆಚ್ಚಿನ ಮಾಹಿತಿ ನೀಡಿದ ಸಚಿವರು, ಸರ್ಕಾರವು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರಾರಂಭಿಸಿದೆ, ಅವುಗಳ ವ್ಯಾಪ್ತಿ 19.07.2024 ರವರೆಗೆ ಈ ಕೆಳಗಿನಂತಿದೆ:-
i. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿಯಲ್ಲಿ, ಯಾವುದೇ ಕಾರಣದಿಂದ ಸಾವನ್ನಪ್ಪಿದರೆ 2 ಲಕ್ಷ ರೂ.ಗಳ ಜೀವ ವಿಮಾ ರಕ್ಷಣೆಯನ್ನು ಒದಗಿಸಲು 20.48 ಕೋಟಿ ಸಂಚಿತ ನೋಂದಣಿಗಳನ್ನು ಮಾಡಲಾಗಿದೆ;
ii. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ) ಅಡಿಯಲ್ಲಿ, 45.08 ಕೋಟಿ ಸಂಚಿತ ದಾಖಲಾತಿಗಳನ್ನು ಮಾಡಲಾಗಿದ್ದು, ಒಂದು ವರ್ಷದ ಆಕಸ್ಮಿಕ/ಅಪಘಾತ ವಿಮೆ 2 ಲಕ್ಷ ರೂ.ಗಳ (ಸಾವು ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ) ಮತ್ತು 1 ಲಕ್ಷ ರೂ.ಗಳ (ಶಾಶ್ವತ ಭಾಗಶಃ ಅಂಗವೈಕಲ್ಯ) ವಿಮೆ ಒದಗಿಸಲಾಗಿದೆ.
iii. ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ, ಅರ್ಹ ಚಂದಾದಾರರಿಗೆ ಮಾಸಿಕ ಪಿಂಚಣಿ ಒದಗಿಸಲು 6.71 ಕೋಟಿ ಸಂಚಿತ ದಾಖಲಾತಿಗಳನ್ನು/ನೋಂದಣಿಗಳನ್ನು ಮಾಡಲಾಗಿದೆ.
ಇದಲ್ಲದೆ, "ಹಣವಿಲ್ಲದವರಿಗೆ ಧನಸಹಾಯ" ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ, ಸರ್ಕಾರವು ವಿವಿಧ ಸಾಲ ಸಂಬಂಧಿತ ಯೋಜನೆಗಳನ್ನು ಪ್ರಾರಂಭಿಸಿದೆ, ಅವುಗಳ ಪ್ರಗತಿ ಈ ಕೆಳಗಿನಂತಿದೆ:-
- ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ, ಆದಾಯ ಉತ್ಪಾದಿಸುವ ಚಟುವಟಿಕೆಗಳಿಗಾಗಿ ಸೂಕ್ಷ್ಮ / ಸಣ್ಣ ಉದ್ಯಮ ಘಟಕಗಳಿಗೆ 10 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಂಸ್ಥಿಕ ಹಣಕಾಸು ಒದಗಿಸಲು 29.93 ಲಕ್ಷ ಕೋಟಿ ರೂ.ಗಳ (12.07.2024 ರಂತೆ) 48.92 ಕೋಟಿ ಸಂಚಿತ ಸಾಲಗಳನ್ನು ಮಂಜೂರು ಮಾಡಲಾಗಿದೆ.
- ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ (ಎಸ್ ಯುಪಿಐ) ಅಡಿಯಲ್ಲಿ, ಗ್ರೀನ್ ಫೀಲ್ಡ್ ಯೋಜನೆಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗೆ 53,609 ಕೋಟಿ ರೂ.ಗಳ ಮೊತ್ತದ 2.36 ಲಕ್ಷ ಸಂಚಿತ ಸಾಲಗಳನ್ನು (15.07.2024 ರಂತೆ) ಮಂಜೂರು ಮಾಡಲಾಗಿದೆ.
- 17.09.2023 ರಂದು ಪ್ರಾರಂಭಿಸಲಾದ ಪಿಎಂ ವಿಶ್ವಕರ್ಮ ಯೋಜನೆ, ಗುರುತಿಸಲಾದ 18 ವ್ಯಾಪಾರೋದ್ಯಮಗಳಲ್ಲಿ ತೊಡಗಿರುವ ಸಾಂಪ್ರದಾಯಿಕ ಕಲಾವಿದರು ಮತ್ತು ಕುಶಲಕರ್ಮಿಗಳಿಗೆ ಕೌಶಲ್ಯ ತರಬೇತಿ, ಮೇಲಾಧಾರ ರಹಿತ ಸಾಲ, ಆಧುನಿಕ ಉಪಕರಣಗಳು, ಮಾರುಕಟ್ಟೆ ಸಂಪರ್ಕ ಬೆಂಬಲ ಮತ್ತು ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹದ ಮೂಲಕ ಆರಂಭದಿಂದ ಕೊನೆಯವರೆಗೆ (ಎಂಡ್-ಟು-ಎಂಡ್) ಸಮಗ್ರ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.
- ಕೋವಿಡ್ -19 ಲಾಕ್ ಡೌನ್ ನಿಂದ ಬಾಧಿತರಾದ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರ ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂಸ್ವನಿಧಿ) ಯನ್ನು 2020ರ ಜೂನ್ 01 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ ಸಾಲವನ್ನು ವಿಸ್ತರಿಸುವ ಮೂಲಕ ಮಾತ್ರವಲ್ಲದೆ ಅವರ ಸಮಗ್ರ ಆರ್ಥಿಕ ಅಭಿವೃದ್ಧಿಯನ್ನು ಸಹ ಸಬಲೀಕರಣಗೊಳಿಸಲು ಉದ್ದೇಶಿಸಿದೆ.
ಬ್ಯಾಂಕುಗಳು ಮತ್ತು ಇತರ ಸಂಬಂಧಿತ ಭಾಗೀದಾರರು/ಮಧ್ಯಸ್ಥಗಾರರೊಂದಿಗೆ ಈ ಯೋಜನೆಗಳ ಅನುಷ್ಠಾನ ಮತ್ತು ಪರಿಣಾಮಕಾರಿತ್ವವನ್ನು ಮೇಲ್ವಿಚಾರಣೆ ಮಾಡಲು ನಿಯತಕಾಲಿಕ ಪರಿಶೀಲನಾ ಕಾರ್ಯವಿಧಾನವಿದೆ ಎಂದು ಸಚಿವರು ಹೇಳಿದರು.
*****
(Release ID: 2042000)
Visitor Counter : 66