ರೈಲ್ವೇ ಸಚಿವಾಲಯ
ಕಾಯ್ದಿರಿಸಿದ ಬೋಗಿಗಳಲ್ಲಿ ವೇಟ್ ಲಿಸ್ಟ್ ಟಿಕೆಟ್ ಸ್ಥಗಿತ
Posted On:
02 AUG 2024 6:27PM by PIB Bengaluru
ಆನ್ ಬೋರ್ಡ್ ಟಿಕೆಟ್ ತಪಾಸಣಾ ಸಿಬ್ಬಂದಿಗೆ (ರೈಲು ಚಲಿಸುತ್ತಿರುವ ವೇಳೆ ಟಿಕೆಟ್ ತಪಾಸಣೆಗೆ ಬರುವ ಸಿಬ್ಬಂದಿಗೆ) ಲಭ್ಯವಿರುವ ಖಾಲಿ ಸೀಟುಗಳಲ್ಲಿ ಪ್ರಯಾಣಿಸಲು ಕಾಯ್ದಿರಿಸಿದ ಬೋಗಿಗಳನ್ನು ಹತ್ತಲು ಪ್ರಯಾಣಿಕರಿಗೆ ಅವಕಾಶ ನೀಡುವ ಅಧಿಕಾರ ಒದಗಿಸಲಾಗಿದೆ. ಪ್ರಯಾಣಿಸುವ ದರ್ಜೆ/ವರ್ಗಕ್ಕೆ ನಿಗದಿಪಡಿಸಿದ ಕನಿಷ್ಠ ತರಗತಿ ಟಿಕೆಟ್ ಮತ್ತು ಶುಲ್ಕದ ವ್ಯತ್ಯಾಸವೇನಾದರೂ ಇದ್ದರೆ ಅದನ್ನು ವಸೂಲು ಮಾಡಿದ ನಂತರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಟಿಕೆಟ್ ರಹಿತ ಮತ್ತು ಆಗಾಗ್ಗೆ ಬರುವ ಪ್ರಯಾಣಿಕರ ವಿರುದ್ಧ ನಿಯಮಿತ ಮತ್ತು ಅನಿರೀಕ್ಷಿತ ತಪಾಸಣೆಗಳನ್ನು ನಡೆಸಲಾಗುತ್ತದೆ.
ಭಾರತೀಯ ರೈಲ್ವೆಯಲ್ಲಿ ಚಲಿಸುವ ಎಲ್ಲಾ ರೈಲುಗಳ ವೇಟಿಂಗ್ ಲಿಸ್ಟ್ ಸ್ಥಾನವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು, ಅಸ್ತಿತ್ವದಲ್ಲಿರುವ ರೈಲುಗಳ ಹೊರೆಯನ್ನು ಹೆಚ್ಚಿಸಲಾಗುತ್ತದೆ, ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ, ಹೊಸ ರೈಲುಗಳನ್ನು ಅಳವಡಿಸಲಾಗುತ್ತದೆ, ಅಸ್ತಿತ್ವದಲ್ಲಿರುವ ರೈಲುಗಳ ಆವರ್ತನವನ್ನು ಹೆಚ್ಚಿಸಲಾಗುವುದೂ ಸೇರಿದಂತೆ ಇತರ ಕ್ರಮಗಳನ್ನು ಕಾರ್ಯಾಚರಣೆಯ ಕಾರ್ಯಸಾಧ್ಯತೆಗೆ ಒಳಪಟ್ಟು ಕೈಗೊಳ್ಳಲಾಗುತ್ತದೆ.
ವಿಕಲ್ಪ್ ಎಂದು ಕರೆಯಲ್ಪಡುವ ಪರ್ಯಾಯ ರೈಲು ಆಸನ ಯೋಜನೆ ಮತ್ತು ಉನ್ನತೀಕರಣದಂತಹ ಯೋಜನೆಗಳನ್ನು ಸಹ ಅಳವಡಿಸಲಾಗಿದೆ. ವಿಕಲ್ಪ್ನಲ್ಲಿ ದೃಢಪಡಿಸಿದ ಪ್ರಯಾಣದ ಅವಕಾಶವನ್ನು/ಸೀಟನ್ನು ಪರ್ಯಾಯ ರೈಲಿನಲ್ಲಿ ಅದನ್ನು ಆಯ್ಕೆ ಮಾಡಿದ ಅರ್ಹ ಪ್ರಯಾಣಿಕರಿಗೆ ಒದಗಿಸಲಾಗುತ್ತದೆ ಮತ್ತು ಉನ್ನತೀಕರಣ ಯೋಜನೆಯಲ್ಲಿ ಕೆಳ ದರ್ಜೆಯ ಪ್ರಯಾಣಿಕರಿಗೆ ಉನ್ನತ ದರ್ಜೆಯಲ್ಲಿ ಸೀಟು ಮತ್ತು ಕೆಳ ದರ್ಜೆಯಲ್ಲಿ ಕಾಯುವ ಪಟ್ಟಿಯಲ್ಲಿದ್ದರೆ ಅವರಿಗೆ ಉನ್ನತ ದರ್ಜೆಯಲ್ಲಿ ದೃಢಪಡಿಸಿದ ಸೀಟು ಒದಗಿಸಲಾಗುತ್ತದೆ. ಅಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ನಿರಂತರ ಮತ್ತು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದೆ.
ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.
*****
(Release ID: 2041061)
Visitor Counter : 66