ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಮೋದಿಯವರು ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಭಾರತದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕೌಶಲ್ಯದಿಂದ ಕೊಂಡೊಯ್ಯುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ: ಶ್ರೀ ಪಿಯೂಷ್ ಗೋಯಲ್


2030 ರ ವೇಳೆಗೆ ಭಾರತ-ರಷ್ಯಾ ದ್ವಿಪಕ್ಷೀಯ ವ್ಯಾಪಾರವನ್ನು 100  ಶತಕೋಟಿ ಡಾಲರ್ ಗೆ ಕೊಂಡೊಯ್ಯಲು ಸರ್ಕಾರದೊಂದಿಗೆ ಕೆಲಸ ಮಾಡಲು ಉದ್ಯಮಕ್ಕೆ  ಶ್ರೀ ಗೋಯಲ್ ಕೇಳಿಕೊಂಡರು   

ಭಾರತ-ಇ.ಎಫ್.ಟಿ.ಎ ಒಪ್ಪಂದದ ಅಡಿಯಲ್ಲಿ 100 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಶ್ರೀ ಗೋಯಲ್ ಅವರು ಸ್ವಿಟ್ಜರ್ಲೆಂಡ್ ದೇಶಕ್ಕೆ ಭೇಟಿ ನೀಡಲಿದ್ದಾರೆ 

ಮೂಲಸೌಕರ್ಯ ಮತ್ತು ಕಲ್ಯಾಣ ಉಪಕ್ರಮಗಳು ವಂಚಿತ ವರ್ಗಗಳ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ: ಶ್ರೀ ಗೋಯಲ್
 
ಸುಸ್ಥಿರತೆಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದ್ದು, ಈ ಆಂದೋಲನವನ್ನು ದೇಶದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವ ಪ್ರಯತ್ನದಲ್ಲಿ ಉದ್ಯಮವು ಪಾಲುದಾರರಾಗಲಿದೆ: ಶ್ರೀ ಗೋಯಲ್

Posted On: 10 JUL 2024 6:25PM by PIB Bengaluru

ಇಂದು ನವದೆಹಲಿಯಲ್ಲಿ ನಡೆದ ಎಫ್.ಐ.ಸಿ.ಸಿ.ಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ತಮ್ಮ ಭಾಷಣದಲ್ಲಿ ರಷ್ಯಾದ 'ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್' ಗೌರವಕ್ಕೆ ಪಾತ್ರರಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು. ಭಾರತವು ಹೇಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕೌಶಲ್ಯದಿಂದ ಕೊಂಡೊಯ್ಯಲು ಸಾಧ್ಯವಾಗಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಶ್ರೀ ಗೋಯಲ್ ಹೇಳಿದರು. 2030 ರ ವೇಳೆಗೆ ಭಾರತ-ರಷ್ಯಾ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್ ಗೆ  ಕೊಂಡೊಯ್ಯಲು ಸರ್ಕಾರದೊಂದಿಗೆ ಕೆಲಸ ಮಾಡಲು ಉದ್ಯಮವನ್ನು ಸಚಿವರು ಕೇಳಿಕೊಂಡರು.

ಇತ್ತೀಚೆಗೆ ಸಹಿ ಮಾಡಿದ ಭಾರತ- ಇ.ಎಫ್.ಟಿ.ಎ  ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ  100 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್ ಡಿ ಐ) ಗುರಿಯತ್ತ ಕಾರ್ಯಗೈಯಲು ಸ್ವಿಟ್ಜರ್ಲೆಂಡ್ ದೇಶಕ್ಕೆ ಭೇಟಿ ನೀಡುತ್ತಿರುವುದಾಗಿ ಶ್ರೀ ಗೋಯಲ್ ಹೇಳಿದರು. ಈ ಬದ್ಧತೆಯು ಸಂಪೂರ್ಣವಾಗಿ ಎಫ್.ಡಿ.ಐ ಬದ್ಧತೆಯಾಗಿದೆ ಮತ್ತು ವಿದೇಶಿ ಬಂಡವಾಳ ಹೂಡಿಕೆಯನ್ನು ಒಳಗೊಂಡಿರುವುದಿಲ್ಲ ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು. ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಭಾರತೀಯ ಉದ್ಯಮದಿಂದ ಸಾಮೂಹಿಕ ಪ್ರಯತ್ನದಿಂದ ಎಫ್.ಡಿ.ಐ ಬದ್ಧತೆಯ ಮೇಲಿನ ಇಎಫ್ಟಿಎ ಒಪ್ಪಂದದ ಗುರಿಯನ್ನೂ ಮೀರಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಉದ್ಯಮದ ಕ್ಷಿಪ್ರ ಬೆಳವಣಿಗೆಯ ಜೊತೆಗೆ 2030 ರ ವೇಳೆಗೆ 2 ಟ್ರಿಲಿಯನ್  ಡಾಲರ್ ರಫ್ತು ಗುರಿಗೆ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಶ್ರೀ ಪಿಯೂಷ್ ಗೋಯಲ್ ಹೇಳಿದರು. "ಇದು ಸಾಧ್ಯವಾಗುವಂಥ ಕಾರ್ಯ, ಮತ್ತು ಇದನ್ನು ಸಾಧಿಸಬಹುದು. ನಾವು ಸರಿಯಾದ ವ್ಯವಸ್ಥೆಯನ್ನು ಹೊಂದಿದ್ದೇವೆ, ನಮ್ಮನ್ನು ಬೆಂಬಲಿಸಲು ನಾವು ಬಲವಾದ ಸಮಗ್ರ ಅರ್ಥವ್ಯವಸ್ಥೆಯನ್ನು ಹೊಂದಿದ್ದೇವೆ. ದೇಶದ ಕರೆನ್ಸಿ ಸ್ಥಿರವಾಗಿದೆ ಮತ್ತು ಇತರ ಉದಯೋನ್ಮುಖ ಮಾರುಕಟ್ಟೆಗಳನ್ನು ಮೀರಿಸಿದೆ”ಎಂದು ಶ್ರೀ ಗೋಯಲ್ ಹೇಳಿದರು. ಸ್ಥಿರ ಸರ್ಕಾರ, ಸ್ಥಿರ ಮಾರುಕಟ್ಟೆಗಳು, ಸ್ಥಿರ ಆರ್ಥಿಕತೆ ಮತ್ತು ಸಾಮೂಹಿಕ ಶಕ್ತಿಯ ಪುನರುತ್ಥಾನದೊಂದಿಗೆ, ದೇಶವು ಜಾಗತಿಕ ಆರ್ಥಿಕತೆಯಲ್ಲಿ ಹೆಚ್ಚಿನ ಜಾಗತಿಕ ವೇದಿಕೆಗಳಲ್ಲಿ ಉಜ್ವಲ ತಾಣವಾಗಿ ಮೌಲ್ಯಯುತವಾಗಿದೆ ಎಂದು ಅವರು ಹೇಳಿದರು.

2014 ರಿಂದ ಪೇಟೆಂಟ್ ನೋಂದಣಿಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಪ್ರದರ್ಶಿಸುವ ಮೂಲಕ ಕಳೆದ ಒಂದು ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಪೇಟೆಂಟ್ಗಳನ್ನು ನೋಂದಾಯಿಸಲಾಗಿದೆ ಎಂದು ಸಚಿವರು ಹೇಳಿದರು. ಸರ್ಕಾರವು ತನ್ನ ಮೂರನೇ ಅವಧಿಯಲ್ಲಿ ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಬೆಳವಣಿಗೆ (ಆರ್ & ಡಿ) ಯಲ್ಲಿ ಹೂಡಿಕೆ ಮಾಡಲು ಬದ್ಧವಾಗಿದೆ ಎಂದು ಅವರು ತಿಳಿಸಿದರು. ಭಾರತೀಯ ಸ್ಪರ್ಧಾತ್ಮಕ ಮಾನದಂಡಗಳೊಂದಿಗೆ ಗುಣಮಟ್ಟದ ಮಾನದಂಡಗಳು ಮತ್ತು ಗುಣಮಟ್ಟ ನಿಯಂತ್ರಣ ಆದೇಶಗಳು ಸಂಬಂಧಿಸಿವೆ ಎಂದು ಅವರು ಹೇಳಿದರು, ಇದು ಭಾರತವನ್ನು ವೆಚ್ಚದಲ್ಲಿ ಸ್ಪರ್ಧಾತ್ಮಕವಾಗಿರಲು ಅನುವು ಮಾಡಿಕೊಡುತ್ತದೆ ಮತ್ತು ಕೆಳದರ್ಜೆಯ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ತನ್ನ ಮೂರನೇ ಅವಧಿಯಲ್ಲಿ ಮೂರು ಪಟ್ಟು ಹೆಚ್ಚು ವೇಗ, ಮೂರು ಪಟ್ಟು ಹೆಚ್ಚು ಕೆಲಸ ಮತ್ತು ಮೂರು ಪಟ್ಟು ಹೆಚ್ಚು ಫಲಿತಾಂಶಗಳನ್ನು ತರಲು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಬದ್ಧವಾಗಿದೆ ಎಂದು ಸಚಿವರು ಹೇಳಿದರು. ನಾಗರಿಕರ ಆದಾಯದ ಮಟ್ಟವನ್ನು ಹೆಚ್ಚಿಸುವುದರೊಂದಿಗೆ ಭಾರತೀಯ ಆರ್ಥಿಕತೆಯನ್ನು ಬೆಳೆಸಲು ಸಹಾಯ ಮಾಡುವ ಮಾಪನಾಂಕ ನಿರ್ಣಯದ ಸುಧಾರಣೆಗಳ ಕಾರ್ಯವನ್ನು ಮುಂದುವರಿಸಲು ಸರ್ಕಾರವು ಆಳವಾಗಿ ಬದ್ಧವಾಗಿದೆ ಎಂದು ಶ್ರೀ ಗೋಯಲ್ ಪ್ರತಿಪಾದಿಸಿದರು. ಮುಂದಿನ ಐದು ವರ್ಷಗಳಲ್ಲಿ ಜಲ ಜೀವನ್ ಮಿಷನ್ ಮೂಲಕ ಸುಧಾರಿತ ರಸ್ತೆ ಮತ್ತು ರೈಲ್ವೆ ಸಂಪರ್ಕ, ವಿದ್ಯುತ್, ಕೊಳವೆ ಅನಿಲ ಸಂಪರ್ಕ, ಪ್ರತಿ ಮನೆಗೆ ನೀರಿನ ಸಂಪರ್ಕದಂತಹ ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಒದಗಿಸಲು ಬೃಹತ್ ಮೂಲಸೌಕರ್ಯಕ್ಕೆ ಒತ್ತು ನೀಡಲಾಗುವುದು ಎಂದು ಸಚಿವರು ವಿವರಿಸಿದರು.
 
ಶ್ರೀ ಗೋಯಲ್ ಅವರು ಉದ್ಯೋಗ, ಆರ್ಥಿಕತೆ ಮತ್ತು ವಿವಿಧ ಸರಕು ಮತ್ತು ಸೇವೆಗಳ ಬಳಕೆಯ ಮೇಲೆ ಹಲವು ಪಟ್ಟಿನ ಪ್ರಭಾವವನ್ನು ಹೊಂದಿರುವುದರಿಂದ ಮೂಲಸೌಕರ್ಯಗಳ ವೇಗವಾದ ಒದಗಿಸುವಿಕೆಯು ಉದ್ಯಮದ ಅಗತ್ಯಗಳೊಂದಿಗೆ ಸಂಬಂಧ ಹೊಂದಿದೆ ಎಂದು ಒತ್ತಿ ಹೇಳಿದರು. ಮೂಲಸೌಕರ್ಯವನ್ನು ಹೆಚ್ಚಿಸುವುದು, ಉತ್ಪಾದನೆ ಮತ್ತು ಸಾರಿಗೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಭಾರತದ ಆರ್ಥಿಕತೆಯ ಮೇಲೆ ದೀರ್ಘಾವಧಿಯ ಪ್ರಭಾವವನ್ನು ಹೊಂದಿದೆ ಎಂದು ಅವರು ವಿವರಿಸಿದರು, ಆದರೆ ಇದು ಕಡಿಮೆ ಕೆಳಮಟ್ಟದ ವರ್ಗಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಸಮಾಜದಲ್ಲಿ ಉತ್ತಮ ಸಮತೋಲನವನ್ನು ತರಲು ಸಹಾಯ ಮಾಡುತ್ತದೆ . ಈ ದೂರದೃಷ್ಟಿಯೆಡೆಗೆ ಪ್ರಧಾನಮಂತ್ರಿ ಶ್ರೀ ಮೋದಿಯವರು ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಆರೋಗ್ಯ ಸೇವೆ ವಿಸ್ತರಣೆ, ಜಲ ಜೀವನ್ ಮಿಷನ್ನಿನ ಯಶಸ್ಸು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂರು ಕೋಟಿ ಉಚಿತ ಮನೆಗಳು ಮತ್ತು ನಗರ ಪ್ರದೇಶಗಳಲ್ಲಿನ ಕೊಳೆಗೇರಿಗಳ ಸ್ಥಳದಲ್ಲೇ ಪುನರ್ವಸತಿ ಪ್ರಯತ್ನಗಳು ಈ ಅವಧಿಯಲ್ಲಿ ಸರ್ಕಾರದ ಕಾರ್ಯಸೂಚಿಯ ಒಂದು ಭಾಗವಾಗಿದೆ ಎಂದು ಸಚಿವರು ಹೇಳಿದರು.. ಶೀಘ್ರವಾಗಿ ಬೆಳೆಯುತ್ತಿರುವ ʼಸ್ಟಾರ್ಟ್ ಅಪ್ ಇಂಡಿಯಾ ಇನಿಶಿಯೇಟಿವ್ʼ ನಿಂದ ಉಂಟಾಗುವ ಉದ್ಯೋಗಾವಕಾಶಗಳು ಅಥವಾ ಉದ್ಯಮಶೀಲತೆಯೊಂದಿಗೆ ಈ ಮೂಲಭೂತ ಸೌಕರ್ಯಗಳು ಮತ್ತು ಉತ್ಪಾದನೆಯಲ್ಲಿನ ಹೂಡಿಕೆಗಳು ಭಾರತವನ್ನು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿಸುತ್ತದೆ ಎಂದು ಶ್ರೀ ಗೋಯಲ್ ಪ್ರತಿಪಾದಿಸಿದರು.

ಅನುಸರಣೆ ಹೊರೆಯನ್ನು ಕಡಿಮೆ ಮಾಡುವ ಮೂಲಕ, ಜನ್ ವಿಶ್ವಾಸ್ ಕಾಯ್ದೆಯ ಮೂಲಕ ಕೆಲವು ಕಾನೂನುಗಳ ಅಪರಾಧಮುಕ್ತವನ್ನಾಗಿಸಿ  ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಇತರ ಕ್ರಮಗಳ ಮೂಲಕ ಭಾರತೀಯ ಹೂಡಿಕೆ ಪ್ರಯಾಣವನ್ನು ಸುಲಭಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಶ್ರೀ ಗೋಯಲ್ ಅವರು ಉದ್ಯಮವು ಹೆಚ್ಚು ಪೂರ್ವಭಾವಿಯಾಗಿರಲು  ಮತ್ತು ಸಂಬಂಧಪಟ್ಟವರು ಎದುರಿಸುತ್ತಿರುವ ಅಡೆತಡೆಗಳನ್ನು ಎತ್ತಿ ತೋರಿಸಲು ಮತ್ತು ಭ್ರಷ್ಟಾಚಾರವನ್ನು ನಿಭಾಯಿಸಲು ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲು ಒತ್ತಾಯಿಸಿದರು.

ಪ್ರಧಾನಿ ಮೋದಿಯವರ ʼಮಾತೆಯ ಹೆಸರಿನಲ್ಲೊಂದು ಮರʼ (ಏಕ್ ಪೆಡ್ ಮಾ ಕೆ ನಾಮ್)  ಅಭಿಯಾನವನ್ನು ಉಲ್ಲೇಖಿಸಿದ ಶ್ರೀ ಗೋಯಲ್, ಸುಸ್ಥಿರತೆಯನ್ನು ಉತ್ತೇಜಿಸಲು ಸರ್ಕಾರವು ಬದ್ಧವಾಗಿದೆ ಮತ್ತು ಮರಗಳನ್ನು ನೆಡಲು ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು   ಒತ್ತಾಯಿಸಿದರು. ಬಿದಿರು ಆಮ್ಲಜನಕವನ್ನು ಉತ್ಪಾದಿಸುವ ಮತ್ತು ಇಂಗಾಲವನ್ನು ಹೀರುವುದರಿಂದ ಸುಸ್ಥಿರತೆಯ ಮೇಲೆ ಹೇಗೆ ಮಹತ್ತರವಾದ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಸಚಿವರು ಮತ್ತಷ್ಟು ಮಾತನಾಡಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರಾಯೋಗಿಕ ಉಪಕ್ರಮಗಳನ್ನು ನೋಡಲು ಭಾಗವಹಿಸಿದ್ದವರನ್ನು ಅವರು ಪ್ರೋತ್ಸಾಹಿಸಿದರು ಮತ್ತು ಈ ಆಂದೋಲನವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೆ ಕೊಂಡೊಯ್ಯುವ ಪ್ರಯತ್ನದಲ್ಲಿ ಪಾಲುದಾರರಾಗಲು ಉದ್ಯಮವನ್ನು ಒತ್ತಾಯಿಸಿದರು.

 

*****


(Release ID: 2032447) Visitor Counter : 61


Read this release in: English , Urdu , Hindi , Hindi_MP