ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸದ ಅದ್ಧೂರಿ ಪ್ರಾರಂಭ ಮುಂಬೈನಲ್ಲಿ
ಶೀಘ್ರದಲ್ಲೇ ಎವಿಜಿಸಿ ವಲಯದಲ್ಲಿ ಶ್ರೇಷ್ಠತೆಯ ಕೇಂದ್ರ : ರಾಜ್ಯ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಡಾ. ಎಲ್. ಮುರುಗನ್
ವಿಶಿಷ್ಟ ಸಾಮರ್ಥ್ಯಗಳು, ಭಾವನೆಗಳು ಮತ್ತು ಮಾನವ ಬಂಧಗಳನ್ನು ನೈಜವಾದ ರೀತಿಯಲ್ಲಿ ಪ್ರದರ್ಶಿಸುವಲ್ಲಿ ಸಾಕ್ಷ್ಯಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ: ಡಾ. ಎಲ್. ಮುರುಗನ್
ವನ್ಯಜೀವಿ ಚಿತ್ರ ನಿರ್ಮಾಪಕ ಸುಬ್ಬಯ್ಯ ನಲ್ಲಮುತ್ತು ಅವರಿಗೆ ‘ಡಾ.ವಿ ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು
"ಬಿಲ್ಲಿ ಮತ್ತು ಮೊಲ್ಲಿ, ಓಟರ್ ಲವ್ ಸ್ಟೋರಿ" ಎಂಬ ಆರಂಭಿಕ ಚಲನಚಿತ್ರವು ಮನುಷ್ಯರು ಮತ್ತು ಪ್ರಕೃತಿಯ ನಡುವಿನ ನಿಕಟವಾದ ಬಂಧವನ್ನು ಹೇಳುತ್ತದೆ
Posted On:
15 JUN 2024 10:02PM by PIB Bengaluru
ಒಂದು ವಾರದ ಸಿನಿಮಾದ ಉತ್ಕೃಷ್ಟತೆಗೆ ವೇದಿಕೆಯನ್ನು ಸಿದ್ಧಪಡಿಸಿ, ಸಾಕ್ಷ್ಯಚಿತ್ರ, ಕಿರು ಚಿತ್ರಗಳು ಮತ್ತು ಅನಿಮೇಷನ್ ಚಲನಚಿತ್ರಗಳಿಗಾಗಿ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಎಂಐಎಫ್ ಎಫ್-2024) 18 ನೇ ಆವೃತ್ತಿಯನ್ನು ಇಂದು ಕೇಂದ್ರ ವಾರ್ತಾ ಮತ್ತು ಪ್ರಸಾರದ ರಾಜ್ಯ ಸಚಿವ ಡಾ. ಎಲ್. ಮುರುಗನ್ ಉದ್ಘಾಟಿಸಿದರು.. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರದ ಸಂಸ್ಕೃತಿ ಸಚಿವರಾದ ಶ್ರೀ. ಸುಧೀರ್ ಮುಂಗಂತಿವಾರ್ ಅವರು ಉಪಸ್ಥಿತರಿದ್ದರು.
(ಫೋಟೋದಲ್ಲಿ: ಡಾ. ಎಲ್. ಮುರುಗನ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಎಂಐಎಫ್ಎಫ್ನ 18 ನೇ ಆವೃತ್ತಿಯನ್ನು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸುತ್ತಿದ್ದಾರೆ )
ರೋಮಾಂಚಕ ಮತ್ತು ವರ್ಣರಂಜಿತ ಉದ್ಘಾಟನಾ ಸಮಾರಂಭವು ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್ ಸಿಪಿಎ) ನಲ್ಲಿ ನಡೆಯಿತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ದ್ವೈವಾರ್ಷಿಕವಾಗಿ ಆಯೋಜಿಸಲಾಗಿದ್ದು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿಸಿ) ಮೂಲಕ ಕಾರ್ಯಗತಗೊಳಿಸಲಾಗುತ್ತದೆ, ಈ ಪ್ರತಿಷ್ಠಿತ ಕಾರ್ಯಕ್ರಮವು ಚಲನಚಿತ್ರ ನಿರ್ಮಾಪಕರು, ಉದ್ಯಮ ವೃತ್ತಿಪರರು ಮತ್ತು ಸಿನಿಮಾ ಆಸಕ್ತರಿಗೆ ಸಮೃದ್ಧವಾದ ಅನುಭವವನ್ನು ನೀಡುತ್ತದೆ. ಈ ವರ್ಷ ಎಂಐಎಫ್ಎಫ್ ಐದು ನಗರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗಳು ಮತ್ತು ರೆಡ್ ಕಾರ್ಪೆಟ್ ಈವೆಂಟ್ಗಳೊಂದಿಗೆ ದೇಶಾದ್ಯಂತ ಹರಡಿದೆ. ಈ ಏಳು ದಿನಗಳ ಉತ್ಸವವು ವಿಶ್ವದರ್ಜೆಯ ಸಮಾನಾಂತರ ಸಿನಿಮಾದ ಮಾಂತ್ರಿಕತೆಯನ್ನು ಭಾರತದಾದ್ಯಂತದ ಚಲನಚಿತ್ರ ಪ್ರಿಯರಿಗೆ ಹತ್ತಿರ ತರುತ್ತದೆ.
ಉದ್ಘಾಟನಾ ಭಾಷಣ ಮಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು, ಉದ್ಯೋಗವನ್ನು ಸೃಷ್ಟಿಸುವ ಮತ್ತು ಬೆಳವಣಿಗೆಯನ್ನು ಸೃಷ್ಟಿಸುವಲ್ಲಿ ಎವಿಜಿ ಕ್ಷೇತ್ರದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪರಿಗಣಿಸಿ, ಸರ್ಕಾರವು ಶೀಘ್ರದಲ್ಲೇ ಎವಿಜಿಸಿ ವಲಯದಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ರಚಿಸಲಿದೆ ಎಂದು ಹೇಳಿದರು. ಸಿನಿಮಾಟೋಗ್ರಾಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಶದಲ್ಲಿ ಕೃತಿಚೌರ್ಯ (ಪೈರಸಿ) ನಿಯಂತ್ರಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಸಚಿವರು ಒತ್ತಿ ಹೇಳಿದರು.
ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರನ್ನು ಒಟ್ಟುಗೂಡಿಸುವಲ್ಲಿ ಎಂಐಎಫ್ಎಫ್ ಪಾತ್ರವನ್ನು ಒತ್ತಿಹೇಳುತ್ತಾ, ಡಾ. ಎಲ್. ಮುರುಗನ್ ಅವರು ಅನನ್ಯ ಸಾಮರ್ಥ್ಯಗಳು, ಭಾವನೆಗಳು ಮತ್ತು ಮಾನವ ಬಂಧಗಳನ್ನು ನಿಜವಾದ ಮತ್ತು ನೈಸರ್ಗಿಕ ರೀತಿಯಲ್ಲಿ ಪ್ರದರ್ಶಿಸುವಲ್ಲಿ ಸಾಕ್ಷ್ಯಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು. ನಮ್ಮ ದೇಶವನ್ನು ವಿಶ್ವದ ವಿಷಯ ರಚನಾ ಕೇಂದ್ರವನ್ನಾಗಿ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಮಾಡಿದ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. "ಚಲನಚಿತ್ರ ನಿರ್ಮಾಪಕರು ಭಾರತದಲ್ಲಿ ಚಿತ್ರೀಕರಣಕ್ಕೆ ಸುಲಭ ಲಭ್ಯತೆ ಮತ್ತು ಅನುಮತಿಗಳನ್ನು ಪಡೆಯಲು ಚಲನಚಿತ್ರವನ್ನು ಸುಲಭಗೊಳಿಸಲು ಏಕ ಗವಾಕ್ಷಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಇದರಿಂದ ಅವರು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಎಡತಾಕಬೇಕಿಲ್ಲ. ಹಿಮಾಲಯದಿಂದ ಹಿಡಿದು, ಪಶ್ಚಿಮ ಘಟ್ಟಗಳು, ನೀಲಗಿರಿ, ಕಡಲತೀರಗಳು ಮತ್ತು ಪುರಾತನ ದೇವಾಲಯಗಳವರೆಗೆ, ಭಾರತದಲ್ಲಿ ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ನಾವು ಸುಂದರವಾದ ಸ್ಥಳಗಳನ್ನು ಹೊಂದಿದ್ದೇವೆ. ಭಾರತದಲ್ಲಿ ಚಿತ್ರೀಕರಣವನ್ನು ಉತ್ತೇಜಿಸಲು ವಿದೇಶಿ ಚಲನಚಿತ್ರ ನಿರ್ಮಾಪಕರು ಮತ್ತು ಕಂಪನಿಗಳಿಗೆ ಸರ್ಕಾರವು ಅನೇಕ ಪ್ರೋತ್ಸಾಹಗಳನ್ನು ನೀಡುತ್ತಿದೆ” ಎಂದು ಅವರು ಹೇಳಿದರು. ಈ ವರ್ಷ ವಿ.ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಸುಬ್ಬಯ್ಯ ನಲ್ಲಮುತ್ತು ಅವರನ್ನು ಡಾ.ಎಲ್.ಮುರುಗನ್ ಅಭಿನಂದಿಸಿದರು.
(ಫೋಟೋದಲ್ಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರ ಉದ್ಘಾಟನಾ ಭಾಷಣ)
ವಿ.ಶಾಂತಾರಾಮ್, ವನ್ಯಜೀವಿ ಚಲನಚಿತ್ರ ನಿರ್ಮಾಪಕ ಸುಬ್ಬಯ್ಯ ನಲ್ಲಮುತ್ತು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ
ಉದ್ಘಾಟನಾ ಸಮಾರಂಭದಲ್ಲಿ, ಅಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾದ ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರಿಗೆ ಈ ವರ್ಷದ ವಿ.ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಮಹಾರಾಷ್ಟ್ರ ಸರ್ಕಾರದ ಸಂಸ್ಕೃತಿ ಸಚಿವರಾದ ಶ್ರೀ ಸುಧೀರ್ ಮುಂಗಂತಿವಾರ್ ಅವರೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಷ್ಠಿತ ಡಾ. ವಿ ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಎಂಐಎಫ್ ಎಫ್ ಪ್ರತಿ ಆವೃತ್ತಿಯಲ್ಲಿ ಸಾಕ್ಷ್ಯಚಿತ್ರ ಚಲನಚಿತ್ರಗಳಿಗೆ ಮತ್ತು ಭಾರತದಲ್ಲಿ ಅದರ ಅಭಿವೃದ್ಧಿಗೆ ನೀಡುವ ಕೊಡುಗೆಗಾಗಿ ಚಲನಚಿತ್ರ ನಿರ್ಮಾಪಕರಿಗೆ ನೀಡಲಾಗುತ್ತದೆ. ಪ್ರಶಸ್ತಿಯು 10 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 1950 ರ ದಶಕದಲ್ಲಿ ಗೌರವ ಮುಖ್ಯ ನಿರ್ಮಾಪಕರಾಗಿ ಚಲನಚಿತ್ರ ವಿಭಾಗದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಚಲನಚಿತ್ರ ನಿರ್ಮಾಣದ ದಂತಕಥೆ ವಿ ಶಾಂತಾರಾಮ್ ಅವರ ನೆನಪಿಗಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರು ತಮ್ಮ ಚಲನಚಿತ್ರ ನಿರ್ಮಾಣದ ಪಯಣದುದ್ದಕ್ಕೂ ಅವರಿಗೆ ಬೆಂಬಲ ನೀಡಿದ ಅವರ ಪೋಷಕರು ಮತ್ತು ಕುಟುಂಬಕ್ಕೆ ಪ್ರಶಸ್ತಿಯನ್ನು ಅರ್ಪಿಸಿದರು.
(ಫೋಟೋದಲ್ಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಮತ್ತು ಮಹಾರಾಷ್ಟ್ರ ಸರ್ಕಾರದ ಶ್ರೀ ಸಂಸ್ಕೃತಿ ಸಚಿವ, ಸುಧೀರ್ ಮುಂಗಂತಿವಾರ್, ವನ್ಯಜೀವಿ ಚಲನಚಿತ್ರ ನಿರ್ಮಾಪಕ ಸುಬ್ಬಯ್ಯ ನಲ್ಲಮುತ್ತು ಅವರಿಗೆ ವಿ. ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.)
ಈ ಸಂದರ್ಭದಲ್ಲಿ, ಎಂಐಎಫ್ ಎಫ್ ಅಂತರರಾಷ್ಟ್ರೀಯ ಸ್ಪರ್ಧೆ, ರಾಷ್ಟ್ರೀಯ ಸ್ಪರ್ಧೆ ಮತ್ತು ಎಫ್ಐಪಿಆರ್ ಇ ಎಸ್ ಸಿಐ ಜ್ಯೂರಿ ಸದಸ್ಯರಾದ ಕೀಕೊ ಬ್ಯಾಂಗ್, ಬಾರ್ತೆಲೆಮಿ ಫೌಗಿಯಾ, ಆಡ್ರಿಯಸ್ ಸ್ಟೋನಿಸ್, ಭರತ್ ಬಾಲಾ, ಮಾನಸ್ ಚೌಧರಿ, ಅಡೆಲೆ ಸೀಲ್ಮನ್-ಎಗ್ಬರ್ಟ್, ಡಾ ಬಾಬಿ ಶರ್ಮಾ ಬರುವಾ, ಅಪೂರ್ವ ಬಕ್ಷಿ, ಮುಂಜಾಲ್ ಶ್ರಾಫ್ ಡೊನ್ನರ್ಸ್ಮಾರ್ಕ್ ಮತ್ತು ಮೇಘಚಂದ್ರ ಕೊಂಗ್ಬಾಮ್ ಅವರನ್ನು ಸನ್ಮಾನಿಸಲಾಯಿತು.
(ಫೋಟೋದಲ್ಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರಿಂದ ಎಂಐಎಫ್ ಎಫ್ ನ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಎಫ್ಐಪಿಆರ್ ಇ ಎಸ್ ಸಿಐ ಜ್ಯೂರಿ ಸದಸ್ಯರ ಸನ್ಮಾನ)
ಸಮಾರಂಭದಲ್ಲಿ ಭಾರತೀಯ ಸಮಾನಾಂತರ ಸಿನಿಮಾ ಮತ್ತು ಕಲೆಯ ಗುರುಗಳಿಗೆ ಗೌರವ ಚಿತ್ರದೊಂದಿಗೆ ಗೌರವ ಸಲ್ಲಿಸಲಾಯಿತು. ಜರ್ನಿ ಆಫ್ ಮುಂಬೈ ಇಂಟರ್ನ್ಯಾಷನಲ್ ಫಿಲ್ಮೀ ಹಬ್ಬದ ಪ್ರಯಾಣವನ್ನು ಶ್ರವಣದೃಶ್ಯ ಮಾಧ್ಯಮದ ಮೂಲಕ ನೆನೆಯಲಾಯಿತು. ಭಾರತದ ಸಾಮಾಜಿಕ ನವೋದ್ಯಮಿಗಳ ಕಥೆಯನ್ನು ಹೇಳಲು ನೆಟ್ ಫ್ಲಿಕ್ಸ್ ನಿರ್ಮಿಸಿದ ಸಾರ್ವಜನಿಕ ಸೇವಾ ಜಾಗೃತಿ ಚಲನಚಿತ್ರ ‘ಆಜಾದಿ ಕಿ ಅಮೃತ್ ಕಹಾನಿಯಾ’ ಟ್ರೇಲರ್ ಅನ್ನು ಸಹ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಇದಕ್ಕೂ ಮೊದಲು, ಚಾರ್ಲಿ ಹ್ಯಾಮಿಲ್ಟನ್ ಜೇಮ್ಸ್ ನಿರ್ದೇಶಿಸಿದ ನ್ಯಾಷನಲ್ ಜಿಯಾಗ್ರಫಿಕ್ ನ ಸಾಕ್ಷ್ಯಚಿತ್ರ “ಬಿಲ್ಲಿ ಮತ್ತು ಮೊಲ್ಲಿ, ಆನ್ ಓಟರ್ ಲವ್ ಸ್ಟೋರಿ” ಯ ಭಾರತದ ಪ್ರಥಮ ಪ್ರದರ್ಶನದೊಂದಿಗೆ ಉತ್ಸವದ ಪ್ರದರ್ಶನಗಳು ಪ್ರಾರಂಭವಾದವು. ಈ ಚಿತ್ರವು ಪ್ರೀತಿಯ ಅನಂತ ಆಳವನ್ನು ಮತ್ತು ಮನುಷ್ಯರು ಮತ್ತು ಪ್ರಕೃತಿಯ ನಡುವಿನ ಆಳವಾದ ಬಂಧವನ್ನು ತೋರಿಸುತ್ತದೆ.
ವರ್ಣರಂಜಿತ ಉದ್ಘಾಟನಾ ಸಮಾರಂಭವು ಮಧುರ್ ಭಂಡಾರ್ಕರ್, ರಿಚಿ ಮೆಹ್ತಾ, ಆನಂದ್ ಎಲ್ ರೈ, ದಿವ್ಯಾ ದತ್ತಾ, ರಣದೀಪ್ ಹೂಡಾ, ಅಭಿಷೇಕ್ ಬ್ಯಾನರ್ಜಿ, ಸೋನಾಲಿ ಕುಲಕರ್ಣಿ, ದಿವ್ಯೇಂದು, ಶರದ್ ಕೇಳ್ಕರ್, ತಾಹಾ ಶಾ, ರಾಹುಲ್ ರಾವೈಲ್, ಸೂರಜ್ ಠಾಕೂರ್ ಸಿಂಗ್, ಅವಿನಾಶ್ ತಿವಾರಿ, ಕೈಲಾಶ್ ಖೇರ್, ಉಪಾಸನಾ, ಪಂಕಜ್ ಝಾ, ಸೌರಬ್ ಸಚ್ದೇವ ಮತ್ತು ಆದಿಲ್ ಹುಸೇನ್.ಮುಂತಾದ ಖ್ಯಾತನಾಮರ ಉಪಸ್ಥಿತಿಯಿಂದ ಅಲಂಕರಿಸಲ್ಪಟ್ಟಿತು.
ಮಂತ್ರಮುಗ್ಧಗೊಳಿಸುವ ಉದ್ಘಾಟನಾ ಸಮಾರಂಭವು ಭಾರತೀಯ ಅನಿಮೇಶನ್ ನ ಪಯಣ, ಶ್ರೀಲಂಕಾದ ಸಾಂಸ್ಕೃತಿಕ ಪ್ರದರ್ಶನ, ಕ್ರೇಜಿ ಕಿಂಗ್ಸ್ ಡ್ಯಾನ್ಸ್ ಕ್ರ್ಯೂ ಪ್ರಸ್ತುತಪಡಿಸಿದ ಭಾರತೀಯ ಅನಿಮೇಷನ್ ನ ಇತಿಹಾಸದ ಆಕರ್ಷಕವಾದ 15 ನಿಮಿಷಗಳ ಪ್ರಯಾಣವನ್ನು ಬಿಂಬಿಸುವಂತಹ ಸಾಂಸ್ಕೃತಿಕ ಕಾರ್ಯಗಳ ಕಲಾತ್ಮಕ ಸಂಯೋಜನೆ, ಭಾರತದ ಮೊದಲ ಡ್ಯಾನ್ಸಿಂಗ್ ಐಕಾನ್ ವಿ ಕಂಪನಿಯ ಶಕ್ತಿಶಾಲಿ ಪ್ರದರ್ಶನ, ಮತ್ತು ಈ ವರ್ಷದ 77 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಲಾ ಸಿನೆಫ್ ಪ್ರಶಸ್ತಿಯನ್ನು ಗೆದ್ದುಕೊಂಡ ಎಫ್ ಟಿಐಐ ವಿದ್ಯಾರ್ಥಿಗಳ ಕಿರುಚಿತ್ರ "ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೊ" ಪ್ರದರ್ಶನಕ್ಕೆ ಸಾಕ್ಷಿಯಾಯಿತು.
(ಫೋಟೋದಲ್ಲಿ: ಎಂಐಎಫ್ ಎಫ್ ಉದ್ಘಾಟನಾ ಸಮಾರಂಭದಲ್ಲಿ ನಡೆದ ಶ್ರೀಲಂಕಾದ ಸಾಂಸ್ಕೃತಿಕ ಪ್ರದರ್ಶನದ ಒಂದು ನೋಟ)
ಶ್ರೀ ಪೃಥುಲ್ ಕುಮಾರ್, ಉತ್ಸವ ನಿರ್ದೇಶಕರು, ಎಂಐಎಫ್ ಎಫ್ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಎನ್ ಎಫ್ ಡಿಸಿ ಅವರ ವಂದನಾರ್ಪಣೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.
ಉದ್ಘಾಟನಾ ಸಮಾರಂಭದ ವಿಡಿಯೋ ಇಲ್ಲಿದೆ ನೋಡಿ.
18ನೇ ಎಂಐಎಫ್ ಎಫ್ ನ ಮುಖ್ಯಾಂಶಗಳು:
• 61 ಭಾಷೆಗಳಲ್ಲಿ 59 ದೇಶಗಳಿಂದ ಈ ಆವೃತ್ತಿಯಲ್ಲಿ ಒಟ್ಟು 314 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇದು 8 ವಿಶ್ವ ಪ್ರೀಮಿಯರ್ ಗಳು, 5 ಅಂತರರಾಷ್ಟ್ರೀಯ ಪ್ರೀಮಿಯrಳು, 18 ಏಷ್ಯಾ ಪ್ರೀಮಿಯರ್ ಗಳು ಮತ್ತು 21 ಇಂಡಿಯಾ ಪ್ರೀಮಿಯರ್ ಗಳನ್ನು ಒಳಗೊಂಡಿದೆ.
• ಮುಂಬೈನ ಎಫ್ಡಿ-ಎನ್ಎಫ್ ಡಿಸಿ ಆವರಣದಲ್ಲಿ ಉತ್ಸವದ ಮುಖ್ಯ ಸ್ಥಳವಲ್ಲದೆ, ದೆಹಲಿ (ಸಿರಿಫೋರ್ಟ್ ಆಡಿಟೋರಿಯಂ), ಚೆನ್ನೈ (ಟ್ಯಾಗೋರ್ ಫಿಲ್ಮ್ ಸೆಂಟರ್), ಪುಣೆ (ಎನ್ಎಫ್ಎಐ ಆಡಿಟೋರಿಯಂ) ಮತ್ತು ಕೋಲ್ಕತ್ತಾ (ಎಸ್ಆರ್ ಎನ್ ಪಿ ಟಿ ಐ ಆಡಿಟೋರಿಯಂ) ನಲ್ಲಿ ಎಂಐಎಫ್ಎಫ್ ಪ್ರದರ್ಶನಗಳು ನಡೆಯಲಿವೆ.
• 20 ಮಾಸ್ಟರ್ ಕ್ಲಾಸ್ ಗಳು, ಚಲನಚಿತ್ರ ದಿಗ್ಗಜರಾದ ಸಂತೋಷ್ ಶಿವನ್, ಆಡ್ರಿಯಸ್ ಸ್ಟೋನಿಸ್, ಕೇತನ್ ಮೆಹ್ತಾ, ರಿಚಿ ಮೆಹ್ತಾ, ಟಿ.ಎಸ್. ನಾಗಾಭರಣ, ಜಾರ್ಜಸ್ ಶ್ವಿಜ್ಗೆಬೆಲ್ ಮತ್ತು ಇನ್ನೂ ಅನೇಕ ಪ್ರಮುಖರೊಂದಿಗೆ ಸಂವಾದಗಳು ಮತ್ತು ಪ್ಯಾನಲ್ ಚರ್ಚೆಗಳು.
• ಭಾರತೀಯ ಡಾಕ್ಯುಮೆಂಟರಿ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (ಐಡಿಪಿಎ) ಸಹಯೋಗದೊಂದಿಗೆ ಪ್ರತಿದಿನ ಓಪನ್ ಫೋರಂ ಚರ್ಚೆಗಳು ಆಂಫಿ ಥಿಯೇಟರ್ ಆವರಣದಲ್ಲಿ, ಎನ್ಎಫ್ ಡಿಸಿ ಕಾಂಪ್ಲೆಕ್ಸ್. ರಾಷ್ಟ್ರಮಟ್ಟದಲ್ಲಿ ಹೆಸರಾಂತ, ಚಿತ್ರರಂಗದ ಗಣ್ಯ ವ್ಯಕ್ತಿಗಳ ಭಾಗವಹಿಸುವಿಕೆ.
• ನೋಂದಾಯಿತ ಭಾಗವಹಿಸುವವರಿಗೆ ಅನಿಮೇಷನ್ ಮತ್ತು ವಿಎಫ್ಎಕ್ಸ್ ಪೈಪ್ ಲೈನ್ ಕುರಿತು ಕಾರ್ಯಾಗಾರ.
• ಮೊದಲ ಬಾರಿಗೆ, ಚಲನಚಿತ್ರ ನಿರ್ಮಾಪಕರು ತಮ್ಮ ಯೋಜನೆಗಳಿಗೆ ಖರೀದಿದಾರರು, ಪ್ರಾಯೋಜಕರು ಮತ್ತು ಸಹಯೋಗಿಗಳನ್ನು ಹುಡುಕಲು ವೇದಿಕೆಯನ್ನು ಒದಗಿಸುವ ಮೂಲಕ ಚಲನಚಿತ್ರ ನಿರ್ಮಾಣವನ್ನು ಹೆಚ್ಚಿಸಲು ಸಹಾಯ ಮಾಡಲು ಡಾಕ್ ಫಿಲ್ಮ್ ಬಜಾರ್.
• ಆಸ್ಕರ್ ಮತ್ತು ಬರ್ಲಿನೇಲ್ ಚಲನಚಿತ್ರಗಳು, ಅನಿಮೇಷನ್ ಚಲನಚಿತ್ರಗಳು, ಪ್ರತಿಷ್ಠಿತ ಸಂಸ್ಥೆಗಳಿಂದ ವಿದ್ಯಾರ್ಥಿ ಚಲನಚಿತ್ರಗಳು ಮತ್ತು ಎನ್ ಎಫ್ ಡಿಸಿ-ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾದಿಂದ ಮರುಸ್ಥಾಪಿಸಲಾದ ಕ್ಲಾಸಿಕ್ ಗಳ ವಿಶೇಷ ಪ್ಯಾಕೇಜ್ ಗಳು.
• ರಷ್ಯಾ, ಜಪಾನ್, ಬೆಲಾರಸ್, ಇಟಲಿ, ಇರಾನ್, ವಿಯೆಟ್ನಾಂ ಮತ್ತು ಮಾಲಿ - 7 ದೇಶಗಳ ಸಹಯೋಗದೊಂದಿಗೆ ‘ವಿಶೇಷ ದೇಶಗಳ ಕೇಂದ್ರೀಕೃತ ಪ್ಯಾಕೇಜ್ ಗಳು’
• ʼಅಮೃತ ಕಾಲʼ ದಲ್ಲಿ ಭಾರತದ ವಿಶೇಷ ವಿಷಯದ ಮೇಲೆ ಸ್ಪರ್ಧೆಯ ಚಲನಚಿತ್ರಗಳು ದೇಶದ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಪ್ರದರ್ಶಿಸುತ್ತವೆ
• ದೃಷ್ಟಿದೋಷವುಳ್ಳ ಮತ್ತು ಶ್ರವಣದೋಷವುಳ್ಳವರಿಗೆ ʼದಿವ್ಯಜ್ಞಾನ್ ಪ್ಯಾಕೇಜ್ʼ ಚಲನಚಿತ್ರಗಳು.
• ವನ್ಯಜೀವಿ, ಮಿಷನ್ ಲೈಫ್ ಮತ್ತು ಏಷ್ಯನ್ ಮಹಿಳಾ ಚಲನಚಿತ್ರ ನಿರ್ಮಾಪಕರ ಚಲನಚಿತ್ರಗಳ ಆಯ್ದ ಪ್ಯಾಕೇಜ್ ಗಳು
• ಸರ್ಕಾರೇತರ ಸಂಸ್ಥೆಯಾದ ಸ್ವಯಂ ಸಹಭಾಗಿತ್ವದಲ್ಲಿ ಉತ್ಸವದ ಸ್ಥಳವನ್ನು ವಿಕಲಚೇತನರು ಪ್ರವೇಶಿಸಬಹುದಾಗಿದೆ
• ಮುಂಬೈ ಎನ್ಎಫ್ ಡಿಸಿ ಕಾಂಪ್ಲೆಕ್ಸ್ ನಲ್ಲಿ ರೆಡ್ ಕಾರ್ಪೆಟ್ ಈವೆಂಟ್ ಗಳ ಜೊತೆಗೆ ದೆಹಲಿ (ಜೂನ್ 17), ಚೆನ್ನೈ (ಜೂನ್ 18), ಕೋಲ್ಕತ್ತಾ (ಜೂನ್ 19) ಮತ್ತು ಪುಣೆ (ಜೂನ್ 20) ನಲ್ಲಿ ವಿಶೇಷವಾದ ರೆಡ್ ಕಾರ್ಪೆಟ್ ಈವೆಂಟ್ ಗಳು. ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.
*****
(Release ID: 2025786)
Visitor Counter : 52