ಉಪರಾಷ್ಟ್ರಪತಿಗಳ ಕಾರ್ಯಾಲಯ

ಭಾರತೀಯ ಕಂದಾಯ ಸೇವೆಯ 76 ನೇ ಬ್ಯಾಚ್ ನ ಬೀಳ್ಕೊಡುಗೆಯ  ಸಮಾರಂಭದಲ್ಲಿ ಉಪರಾಷ್ಟ್ರಪತಿಯವರ ಭಾಷಣ 

Posted On: 15 APR 2024 9:30PM by PIB Bengaluru

ಒಂದೇ ನದಿಯಲ್ಲಿ ಯಾರೂ ಎರಡು ಬಾರಿ ಹೆಜ್ಜೆ ಇಡುವುದಿಲ್ಲ.  ಪರಿಸ್ಥಿತಿಗಳು ಬದಲಾಗಿವೆ.  ಇಲ್ಲಿ ನಾನು ಹೀಗಿದ್ದೇನೆ, ನಾನು ಆಗ ಇದ್ದ ಅದೇ ಮನುಷ್ಯನಲ್ಲ ಮತ್ತು ನೀವು ಮೊದಲಿನಂತೆಯೇ ಇಲ್ಲ. ಪರಿವರ್ತನೆಯೊಂದೇ ಶಾಶ್ವತ.
ಗೌರವಾನ್ವಿತ ಅಧ್ಯಾಪಕರೇ, ಶ್ರದ್ಧೆ, ಬದ್ಧತೆ, ತಿಳುವಳಿಕೆಯುಳ್ಳ, ವಿದ್ವತ್ಪೂರ್ಣ ಅಧ್ಯಾಪಕರಿಲ್ಲದೆ ಸಂಸ್ಥೆಗೆ ಅರ್ಥವಿಲ್ಲ.   ಇದು ವರದಾನವಾಗಿದೆ.

ನಾನು ರಾಷ್ಟ್ರಪಿತರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.  ಅಲ್ಲಿ ಬರೆದಿರುವುದನ್ನು ನಾನು ನೋಡಿದೆ, ಗಾಂಧೀಜಿ ಹೇಳಿರುವರು “ನಿಮಗೆ ಸಂದೇಹ ಇದ್ದಾಗ , ಈ ಕೆಳಗಿನ ಪರೀಕ್ಷೆಯನ್ನು ತೆಗೆದುಕೊಳ್ಳಿರಿ. ನೀವು ನೋಡಿದ ಅತ್ಯಂತ ಬಡ ಮತ್ತು ದುರ್ಬಲ ವ್ಯಕ್ತಿಯ ಮುಖವನ್ನು ನೆನಪಿಸಿಕೊಳ್ಳಿ ಮತ್ತು ನೀವು ಯೋಜಿಸುವ ಕ್ರಮಗಳಿಂದ ಅವನಿಗೆ ಅಥವಾ ಅವಳಿಗೆ ಏನಾದರೂ ಉಪಯೋಗವಾಗುತ್ತದೆಯೇ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿರಿ.

ಮಹಾತ್ಮ ಗಾಂಧೀಜಿಯವರ ಮತ್ತೊಂದು ಅಮೂಲ್ವಯವಾದ ಮಾತು   "ನಾನು ನಿಮ್ಮ ಸ್ವಾತಂತ್ರ್ಯಕ್ಕಾಗಿ ಕಾಳಜಿ ವಹಿಸುತ್ತೇನೆ ಏಕೆಂದರೆ ನಾನು ನನ್ನದನ್ನು ಗೌರವಿಸುತ್ತೇನೆ." ಅವರು ಎಷ್ಟು ಅದ್ಭುತ ಮಾತು ಹೇಳಿವರು ಎನ್ನುವುದನ್ನು  ಊಹಿಸಿಕೊಳ್ಳಿ!

ನೀವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದೊಡನೆ ಹೆಜ್ಜೆ ಇಡುತ್ತಿರುವಿರಿ  ಮತ್ತು ಸಾರ್ವಜನಿಕ ಸೇವಕರಾಗಿ ನಿಮ್ಮ ಕೆಲಸವು ಪ್ರಗತಿಯು ಹೆಚ್ಚುತ್ತಿರುವ ಪಥದಲ್ಲಿ ಇರುವುದಾಗಿದೆ.

ನಾನು ವಿಶೇಷವಾಗಿ ಭೂತಾನ್ ರಾಯಲ್ ಸರ್ವಿಸಸ್ನ ಇಬ್ಬರು ಅಧಿಕಾರಿಗಳ ಬಗ್ಗೆ ಉಲ್ಲೇಖಿಸಬೇಕು. ಅವರು ಭೂತಾನ್ ಜನರಿಗೆ ನಮ್ಮ ಸದ್ಭಾವನೆಯ ಸಂದೇಶವನ್ನು ಕೊಂಡೊಯ್ಯುತ್ತಾರೆ  ಮತ್ತು ಈ ಸಂಪರ್ಕವು ಎರಡೂ ಕಡೆಯವರಿಗೆ ಕೃತಜ್ಞರಾಗಿರುತ್ತದೆ. ಈ ಸಂಪರ್ಕವನ್ನು ನಿಮ್ಮ ಜೀವನದುದ್ದಕ್ಕೂ ಇಟ್ಟುಕೊಳ್ಳಿರಿ. ಭೂತಾನ್ ಒಂದು ಸುಂದರ ದೇಶ. ಅವರಿಗೆ ಅಭಿನಂದನೆಗಳು.

ಕೆಲವು ಇತರ ಸೇವೆಗಳು ಪ್ರಾಥಮಿಕ ಸ್ಥಾನವನ್ನು ಹೊಂದಿದ್ದ ಸಮಯವಿತ್ತು. ನೀವು ದೆಹಲಿಗೆ ಹೋದರೆ, ನೀವು ದೆಹಲಿಯ ವಿವಿಧ ಕಾಲೇಜುಗಳಿಗೆ ಹೋಗುತ್ತೀರಿ, ಮತ್ತು ನೀವು ಒಂದು ಕಾಲೇಜಿಗೆ ಹೋಗಿ ಇನ್ನೊಂದು ಕಾಲೇಜಿನ ಬಗ್ಗೆ  ಕೇಳಿದರೆ, ಅವರು ರಸ್ತೆಯ ಆ ಕಡೆಯ ಕಾಲೇಜು ಎಂದು ಹೇಳುತ್ತಾರೆ. ನಾನು ಉಲ್ಲೇಖಿಸುತ್ತಿರುವ ಕಾಲೇಜು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲೇಜು. ಹಿಂದೂ ಕಾಲೇಜು ಎಲ್ಲಿದೆ ಎಂದು ಯಾರಾದರೂ ಕೇಳಿದರೆ, ಅವರು ಹೆಸರನ್ನು ತೆಗೆದುಕೊಳ್ಳುವುದಿಲ್ಲ; ರಸ್ತೆಯ ಆಕಡೆಯ   ಕಾಲೇಜು ಎಂದು ಹೇಳುತ್ತಿದ್ದರು. ಇದು ನಾಗರಿಕ ಸೇವೆಗಳಿಗೂ ಸಹ  ಇದೇ ರೀತಿ ಆಗುತ್ತಿತ್ತು, ಇನ್ನು ಮುಂದೆ ಹಾಗಾಗದು. ಭಾರತೀಯ ಕಂದಾಯ ಸೇವೆ ಅನನ್ಯವಾಗಿದೆ; ಅದು ತನ್ನದೇ ಆದ ಸ್ಥಾನವನ್ನು ಹೊಂದಿದೆ. ಅದಕ್ಕೆ ಇತರರು ಪ್ರತಿಸ್ಪರ್ಧಿಯಾಗುತ್ತಿದ್ದಾರೆ. ಭಾರತೀಯ ಕಂದಾಯ ಸೇವೆಯು ನಮ್ಮ ತೆರಿಗೆ ವ್ಯವಸ್ಥೆಯ ಪಾಲಕನಾಗಿ ಪ್ರಮುಖ ಪಾತ್ರವನ್ನು ಹೊಂದಿದೆ. ಏಕೆಂದರೆ ಪ್ರಜಾಪ್ರಭುತ್ವವು ಆರ್ಥಿಕ ಬಲದಿಂದ ನಡೆಸಲ್ಪಡುತ್ತಿದೆ ಮತ್ತು ನೀವು ಅದರೊಂದಿಗೆ ಅವಿಭಾಜ್ಯವಾದ ಸಂಪರ್ಕ ಹೊಂದಿದ್ದೀರಿ.

ಕಂದಾಯ ಅಧಿಕಾರಿಗಳಾಗಿ, ನೀವು ಕೇವಲ ತೆರಿಗೆ ನಿರ್ವಾಹಕರಲ್ಲ; ನಮ್ಮ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಮತ್ತು ಸಾರ್ವಜನಿಕ ಸೇವೆಗಳ ನಿಬಂಧನೆಗೆ ಅಗತ್ಯವಾದ ನಮ್ಮ ಹಣಕಾಸಿನ ಚೌಕಟ್ಟಿನ ಉಸ್ತುವಾರಿಯನ್ನು ನಿಮಗೆ ವಹಿಸಲಾಗಿದೆ.

ಸಾರ್ವಜನಿಕ ಸೇವೆಯಲ್ಲಿರುವವರಾಗಿ ನೀವು ಶಿಸ್ತು, ಸಮಗ್ರತೆ, ನಮ್ರತೆ, ನೈತಿಕತೆ ಮತ್ತು ಬದ್ಧತೆಯನ್ನು ಪ್ರದರ್ಶಿಸುವ ಅಗತ್ಯವಿದೆ.   ಎಲ್ಲರೂ ಗಮನಿಸುತ್ತಿರುವ  ಮತ್ತು ಅಸೂಯೆಪಡುವ ಯುವಕರ ವರ್ಗದಲ್ಲಿ ನೀವಿದ್ದೀರಿ. ನೀವು ಸಹಜವಾಗಿ ರೋಲ್ ಮಾಡೆಲ್ ಆಗಿದ್ದೀರಿ, ಆದ್ದರಿಂದ ನೀವು ದೇಶದಾದ್ಯಂತ ಯುವ ಮನಸ್ಸುಗಳಿಗೆ ಸ್ಪೂರ್ತಿದಾಯಕ ಮತ್ತು ಪ್ರೇರಕವಾಗಿರಬೇಕು.

ಜಗತ್ತು ನಂಬಲಾಗದ ವೇಗದಲ್ಲಿ ಬದಲಾಗುತ್ತಿದೆ. ಇದು ಸೆಕೆಂಡುಗಳಲ್ಲಿ ಬದಲಾಗುತ್ತಿದೆ. ನಿಮ್ಮದೇ ಕ್ಷೇತ್ರವನ್ನು   ತೆಗೆದುಕೊಳ್ಳಿ, ಅಲ್ಲಿ ನೀವು ದೊಡ್ಡ ಹೆಜ್ಜೆಗಳನ್ನು ಇಡುತ್ತೀರಿ. ತೆರಿಗೆ ಆಡಳಿತ ಮತ್ತು ಸಂಗ್ರಹಣೆಯ  ವಿಭಾಗದಲ್ಲಿ   ಪರಿವರ್ತನೆಯ ಬದಲಾವಣೆ ಕಂಡುಬಂದಿದೆ.

ಪ್ರಧಾನವಾಗಿ ಸಾಂಪ್ರದಾಯಿಕ ಕಾಗದ ಆಧಾರಿತ ವ್ಯವಸ್ಥೆಯಿಂದ  ನಾವು ಮಾಹಿತಿಯನ್ನು ಸುಲಭವಾಗಿ ಪಡಯಬಹುದಾದ ಮತ್ತು ಅಧಿಕಾರಿಗಳು ಹಾಗು  ತೆರಿಗೆದಾರರ ಪ್ರಯೋಜನಕ್ಕಾಗಿ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಲಾದ ಆಧುನಿಕ, ತಂತ್ರಜ್ಞಾನ ಚಾಲಿತ ಪರಿಸರ ವ್ಯವಸ್ಥೆಗೆ ಬದಲಾಗಿದ್ದೇವೆ.

ಈ ರೂಪಾಂತರವು ನಾವು ತೆರಿಗೆಗಳನ್ನು ನಿರ್ವಹಿಸುವ ವಿಧಾನವನ್ನು ಕ್ರಾಂತಿಗೊಳಿಸಿದೆ, ಇದು ಹೆಚ್ಚು ಪರಿಣಾಮಕಾರಿ, ಬಳಕೆದಾರ ಸ್ನೇಹಿ ಮತ್ತು ಪಾರದರ್ಶಕವಾಗಿದೆ.  ಜನ ಸಾಮಾನ್ಯರಿಗೆ ಭೀತಿಯುಂಟುಮಾಡಿದ್ದ, ತೊಡಕಿನ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿದ್ದ ತೆರಿಗೆ ಸಲ್ಲಿಕೆಯ ದಿನಗಳು  ಕಳೆದು ಹೋದವು.  

ಜನರು ತಮ್ಮ ಕೆಲಸಕ್ಕೆ  ರಜೆ ಹಾಕಿ ತಮ್ಮ ತೆರಿಗೆ ರಿಟರ್ನ್ ನಿಖರವಾಗಿದೆಯೋ ಇಲ್ಲವೋ ಎನ್ನುವ ಭಯದಿಂದ ಚಾರ್ಟರ್ಡ್ ಅಕೌಂಟೆಂಟ್ ಗಳ ಹತ್ತಿರ ಹೋಗುತ್ತಿದ್ದರು ಮತ್ತು  ಹಲವಾರು ದಿನಗಳವರೆಗೆ ಕೆಲಸ ಮಾಡುತ್ತಿದ್ದರು. ಇನ್ನು ಮುಂದೆ  ಹಾಗೆ ಇರುವುದಿಲ್ಲ. ಇಲಾಖೆಯು ಎಂತಹ ಪ್ರಗತಿಯನ್ನು ಮಾಡಿದೆ ಅಂದರೆ, ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡಲು ನಿಮಗೆ ಬೇಕಾಗಿರುವುದು ನಿಮ್ಮ ಕಂಪ್ಯೂಟರ್ ನಲ್ಲಿಯೇ ಲಭ್ಯವಿದೆ.

ನೀವು ಇಷ್ಟಪಡುವ ಮತ್ತು ನಮಗೆ ಮುಖ್ಯವಾಗಿರುವ ಇನ್ನೊಂದು ಅಂಶವೆಂದರೆ, ವ್ಯವಸ್ಥೆಯು ಎಷ್ಟು ಅದ್ಭುತವಾಗಿ ಸ್ನೇಹಪರವಾಗಿ ಬಿಟ್ಟಿದೆ. ಇಲ್ಲದಿದ್ದರೆ, ತೆರಿಗೆ ಇನ್ಸ್ಪೆಕ್ಟರ್ ಅಥವಾ ಅಧಿಕಾರಿಯ ಭೇಟಿ ಅಥವಾ ಸಂದೇಶವು ನಮಗೆ ನಿದ್ರೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಅವರೊಂದಿಗೆ ಹೇಗೆ  ಮಾತನಾಡುವುದು  ಎಂದು ನಾವು ಚಿಂತೆಗೀಡಾಗುತ್ತಿದ್ದೆವು . ಆದರೆ ಈಗ, ವ್ಯವಸ್ಥೆಯು ಸ್ನೇಹಪರವಾಗಿದೆ ಮತ್ತು ಸಹಾಯಕವಾಗಿದೆ. ತೆರಿಗೆ ಸಂಗ್ರಹದಿಂದ ಅದು ತೆರಿಗೆ ಸೌಲಭ್ಯಕ್ಕೆ ಪರಿವರ್ತನೆಯಾಗಿದೆ. ಈ ಬದಲಾವಣೆಯು ಗಮನಾರ್ಹವಾಗಿದೆ ಮತ್ತು ದೇಶದ ತೆರಿಗೆದಾರರ ಮನಸ್ಥಿತಿಯನ್ನು ಬದಲಾಯಿಸುತ್ತಿದೆ. ನಾನು ಅವರಲ್ಲಿ ಒಬ್ಬ, ಮತ್ತು ಈಗ ಎಷ್ಟು ಬೇಗನೆ ರಿಟರ್ನ್ ಗಳನ್ನು ಪ್ರಕ್ರಿಯೆಗೊಳಿಸಲಾಗುತ್ತಿದೆ  ಎಂದು ನನಗೆ ಆಶ್ಚರ್ಯವಾಗಿದೆ.

ತ್ವರಿತ ಮರುಪಾವತಿಗಳು ಮತ್ತು ಸಮಸ್ಯೆಗಳನ್ನು ಸಮಯೋಚಿತವಾಗಿ ಪರಿಹರಿಸುವುದರೊಂದಿಗೆ ತೆರಿಗೆದಾರರು ಪ್ರಬಲವಾಗಿ ಮತ್ತು ಆಶ್ಚರ್ಯಕರವಾಗಿ ಪ್ರಭಾವಿತರಾಗಿದ್ದಾರೆ.

ಈಗ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೊಸ ಪದ್ದತಿಗಳಾಗಿವೆ. ಔಪಚಾರಿಕ ಆರ್ಥಿಕತೆಯು ಆರ್ಥಿಕತೆಯ ಅನೌಪಚಾರಿಕ ರಚನೆಯನ್ನು ವೇಗವಾಗಿ ಬದಲಾಯಿಸುತ್ತಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ.  ಅನೌಪಚಾರಿಕ ಆರ್ಥಿಕತೆಗಿಂತ ಔಪಚಾರಿಕ ಆರ್ಥಿಕತೆಯ ಭಾಗವಾಗುವುದು ಯಾವಾಗಲೂ ಲಾಭದಾಯಕವೆಂದು ಜನರು ಅರಿತುಕೊಳ್ಳುತ್ತಿದ್ದಾರೆ. ಔಪಚಾರಿಕ ಆರ್ಥಿಕತೆಯು ನಿಮಗೆ ಕಾನೂನಾತ್ಮಕವಾಗಿ  ಮಾಡಿದ ರೀತಿಯಲ್ಲಿ ತೃಪ್ತಿ ಮತ್ತು ಬೆಳವಣಿಗೆಯನ್ನು ನೀಡುತ್ತದೆ, ಆದರೆ ಎರಡನೆಯದು ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ತರುತ್ತದೆ.

ತೆರಿಗೆದಾರರು ಮತ್ತು ನಾಗರಿಕರು ಹೆಚ್ಚು ಹೆಚ್ಚುಸವಾಲಾಗುತ್ತಿದ್ದಾರೆ. ತೆರಿಗೆ ಆಡಳಿತವು ತನ್ನ ಎಲ್ಲಾ ಅಂಶಗಳು ಮತ್ತು ಚಟುವಟಿಕೆಗಳಲ್ಲಿ ನ್ಯಾಯಸಮ್ಮತತೆ,  ಸಮಾನತೆ ಮತ್ತು ಪಾರದರ್ಶಕತೆಯಲ್ಲಿ ಕಾರ್ಯನಿರ್ವಹಿಸಲಿ   ಎಂದು ಅವರು ನಿರೀಕ್ಷಿಸುತ್ತಾರೆ. ತೆರಿಗೆ ಆಡಳಿತಗಳು ಕೆಲಸದ ವೇಗವನ್ನು ಉಳಿಸಿಕೊಳ್ಳುವ, ತೆರಿಗೆ ವಂಚನೆಯನ್ನು ನಿಯಂತ್ರಿಸುವ  ತೆರಿಗೆದಾರರ ಹೊಸ ಅಗತ್ಯಗಳು ಮತ್ತು ನಿರೀಕ್ಷೆಗಳಿಗೆ ಸ್ಪಂದಿಸುವ ಸವಾಲನ್ನು ಎದುರಿಸುತ್ತವೆ.

ತೆರಿಗೆ ವಂಚನೆಯು  ಸಮಾಜಕ್ಕೆ ಅಪಾಯ, ವ್ಯವಸ್ಥೆಗೆ ಅಪಾಯ. ನೀವು ಕಟ್ಟುನಿಟ್ಟಾಗಿ  ವ್ಯವಹರಿಸಬೇಕು; ನಿಮ್ಮ ಅಧ್ಯಕ್ಷರು  ಸುಧಾರಣೆಯನ್ನು ಮತ್ತು ಅಡೆತಡೆಗಳನ್ನು ಒಟ್ಟಾಗಿ ನಿರ್ವಹಿಸಬೇಕೆಂದು  ಸೂಚಿಸಿರುವರು.

ವಹಿವಾಟು ಮತ್ತು ಹಣವನ್ನು ಮರೆಮಾಚುವ ಬಗ್ಗೆ ಹೆಚ್ಚಿನ ಗಮನ ಹರಿಸುವ ಅವಶ್ಯಕತೆಯಿದೆ. ಕೆಲವು ಜನರು ಇನ್ನೂ ತಪ್ಪಿಸಿಕೊಂಡಿರುತ್ತಾರೆ ; ಅವರು ನಿಮ್ಮ ತಾಂತ್ರಿಕತೆ ಮತ್ತು  ನಿಮ್ಮ ಬುದ್ಧಿಶಕ್ತಿಯನ್ನು ಮೀರಬಹುದು   ಎಂದು ಅವರು ಇನ್ನೂ ಭಾವಿಸುತ್ತಾರೆ. ಅವರು ತಪ್ಪಾಗಿ  ತಿಳಿದೊಕೊಂಡಿದ್ದಾರೆ; ಅವರು ಖಂಡಿತವಾಗಿಯೂ ನಿಮ್ಮ ಜಾಲದಲ್ಲಿ ಇರುತ್ತಾರೆ. ಆದರೆ ಅವರನ್ನು  ಜಾಲದಲ್ಲಿ ಹಿಡಿಯುವುದಕ್ಕಿಂತ  ಅವರಿಗೆ ಸಮಾಲೋಚನೆ ನೀಡುವುದು ಉತ್ತಮ, ಮಾಹಿತಿಯನ್ನು  ತಿಳಿಸುವುದು  ಇದರಿಂದ ಇಂಥವರನ್ನು  ವ್ಯವಸ್ಥೆಯ ಅಡಿಯಲ್ಲಿ ತರಬಹುದು. ದೇಶಕ್ಕೆ ಕೊಡುಗೆ ನೀಡುವ ಏಕೈಕ ಉತ್ತಮ ಮಾರ್ಗವೆಂದರೆ ಕಾನೂನಿನ ನಿಯಮವನ್ನು ಪಾಲಿಸುವುದು ಎನ್ನುವುದನ್ನು ಅವರು ಅರಿತುಕೊಳ್ಳಬೇಕು.

ಇದರಿಂದ ಆಗುವ ಅನಾಹುತಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ತಂತ್ರಜ್ಞಾನವು ಅವುಗಳನ್ನು ಆಧಾರ್ ಮೂಲಕ ನಿರಂತರವಾಗಿ ವೀಕ್ಷಿಸುತ್ತಿದೆ, ಪ್ಯಾನ್ ಕಾರ್ಡ್ ಮೂಲಕ , ವಹಿವಾಟುಗಳನ್ನು  ತಪ್ಪದೇ ವರದಿ ಮಾಡಲಾಗುತ್ತಿದೆ, ಏನು ನಡೆಯುತ್ತಿದೆ ಎಂಬುದರ ಬಗ್ಗೆ ಇಲಾಖೆಗೆ ಸಂಪೂರ್ಣ ಅರಿವಿದೆ. ತೆರಿಗೆ ವಂಚನೆಯಲ್ಲಿ, ನೀವು ವ್ಯವಸ್ಥೆಯನ್ನು ಮೀರಿಸಲು ಸಾಧ್ಯವಿಲ್ಲ.  ಇಂದಲ್ಲ ನಾಳೆ, ನೀವು ಜಾಲದಲ್ಲಿ ಸಿಲುಕಿಕೊಳ್ಳುತ್ತೀರಿ. ಅವರಿಗೆ ಈ ರೀತಿಯ ಸಲಹೆ  ಸಾಕಾಗುತ್ತದೆ. ತೆರಿಗೆ ವಂಚನೆ ಸಾಮಾಜಿಕ ವ್ಯವಸ್ಥೆಗೆ ಸವಾಲಾಗಿದೆ. ಇಲಾಖೆಗೆ ಲೆಕ್ಕ ಕೊಡದ ಅಕ್ರಮ ಸಂಪತ್ತನ್ನು ಪಡೆಯುತ್ತಾನೆ. ಜಾಗರೂಕತೆಯಿಂದ ಹೆಜ್ಜೆಗಳನ್ನು ಇರಿಸಿ, ತಂತ್ರಜ್ಞಾನವನ್ನು ಬಳಸಿ, ಮತ್ತು ನೀವು ಅದಕ್ಕೆ ಸುಲಭವಾದ ಉತ್ತರವನ್ನು ಕಂಡುಕೊಳ್ಳುತ್ತೀರಿ.

ಆನ್ಲೈನ್ ಪೋರ್ಟಲ್ಗಳು, ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳು ತೆರಿಗೆ ಅನುಸರಣೆಯನ್ನು ಸರಳಗೊಳಿಸಿದೆ, ಇದು ವ್ಯಕ್ತಿಗಳು ಮತ್ತು  ವ್ಯಾಪಾರಿಗಳಿಗೆ   ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಸುಲಭ ಮತ್ತು ಹೆಚ್ಚು ಅನುಕೂಲಕರವಾಗಿಸುತ್ತದೆ ಮತ್ತು ದೇಶದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಹೆಚ್ಚುತ್ತಿರುವ ತೆರಿಗೆ ಆಡಳಿತದ ಡಿಜಿಟಲೀಕರಣ ನಿಜಕ್ಕೂ ಶ್ಲಾಘನೀಯ.  ವಾಸ್ತವವಾಗಿ, ವಿಶ್ವ ಬ್ಯಾಂಕ್ ಸೇರಿದಂತೆ ಜಾಗತಿಕ ಸಂಸ್ಥೆಗಳು   ನಮ್ಮ ಡಿಜಿಟಲ್  ಅಳವಡಿಕೆಯನ್ನು ಮೆಚ್ಚಿವೆ. ನಮ್ಮ ವಹಿವಾಟುಗಳು ಡಿಜಿಟಲ್;  ಅದು ನಮ್ಮ  ಔಪಚಾರಿಕ ಆರ್ಥಿಕ ವಿಕಸನಕ್ಕೆ ಭಾರಿ ಕೊಡುಗೆ ನೀಡಿವೆ.

ಫೇಸ್ಲೆಸ್ ಇ-ಅಸೆಸ್ಮೆಂಟ್   ವ್ಯವಸ್ಥೆಯು ಈಗಾಗಲೇ ಪ್ರಾದೇಶಿಕ ನ್ಯಾಯವ್ಯಾಪ್ತಿಯಿಂದ ಡೈನಾಮಿಕ್ ನ್ಯಾಯವ್ಯಾಪ್ತಿಗೆ ಮಾದರಿ ಬದಲಾವಣೆಯನ್ನು ತಂದಿದೆ. ಇದು ಆದಾಯ ತೆರಿಗೆ ಮೌಲ್ಯಮಾಪನದಲ್ಲಿ ಅನಾಮಧೇಯತೆಯನ್ನು ಪರಿಚಯಿಸಿದ್ದು,  ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಂಡಿದೆ ಮತ್ತು 'ಪ್ರಾಮಾಣಿಕರನ್ನು ಗೌರವಿಸುವ' ತನ್ನ ಉದ್ದೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ.

ಸ್ನೇಹಿತರೇ, ನಾವು ಕಠಿಣ ಸಮಯದಲ್ಲಿ ಜೀವಿಸುತ್ತಿದ್ದೇವೆ. ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ ವಿಶ್ಲೇಷಣೆಗಳಂತಹ ಹೊಸ ತಂತ್ರಜ್ಞಾನಗಳು ತೆರಿಗೆ ಆಡಳಿತವನ್ನು ಸುಧಾರಿಸುತ್ತಿವೆ ಮತ್ತು ತೆರಿಗೆ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತಿವೆ. ಬಹಳ ಮುಖ್ಯವಾಗಿ, ಇದು ವ್ಯವಸ್ಥೆಯಲ್ಲಿ ತೆರಿಗೆದಾರರ ನಂಬಿಕೆಯನ್ನು ಹೆಚ್ಚಿಸುತ್ತದೆ, ಇದು ಹೆಚ್ಚಿನ ಕಾನೂನುಪಾಲನೆಯನ್ನು ಉತ್ತೇಜಿಸುತ್ತದೆ. ಯುವ ವೃತ್ತಿಪರರಾಗಿ, ನೀವು ನವನವೀನ ತಂತ್ರಜ್ಞಾನವನ್ನು ಬಳಸಬೇಕಾಗುತ್ತದೆ . ನಿಮ್ಮ ಪಠ್ಯಕ್ರಮವನ್ನು ಮೀರಿ ನೀವು ಅವನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ, ಬ್ಲಾಕ್ ಚೈನ್ ಮತ್ತು ಮೆಷಿನ್ ಲರ್ನಿಂಗ್  ಅನ್ನೇ ತೆಗೆದುಕೊಳ್ಳಿ. ನಿಮ್ಮ ಕರ್ತವ್ಯಕ್ಕೆ ಮತ್ತು ದೇಶಕ್ಕೆ ನಿಮ್ಮ ಜವಾಬ್ದಾರಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ಈ ಎರಡು ತಂತ್ರಜ್ಞಾನಗಳು ಯಾವಾಗಲೂ ಲಭ್ಯವಿರುತ್ತವೆ.

ಬ್ಲಾಕ್ ಚೈನ್ ತಂತ್ರಜ್ಞಾನವು ಸುಧಾರಿತ ದತ್ತಾಂಶದ ಕಾರ್ಯವಿಧಾನವಾಗಿದ್ದು ಅದು ವ್ಯಾಪಾರ ಜಾಲದಲ್ಲಿ ಪಾರದರ್ಶಕ ಮಾಹಿತಿ ಹಂಚಿಕೆಯನ್ನು ಅನುಮತಿಸುತ್ತದೆ. ಬ್ಲಾಕ್ ಚೈನ್ ಡೇಟಾ ಬೇಸ್ (ದತ್ತಾಂಶ) ಸರಪಳಿಯಲ್ಲಿ ಒಟ್ಟಿಗೆ ಲಿಂಕ್ ಮಾಡಲಾದ ಬ್ಲಾಕ್ ಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತದೆ. ಈ ವಿಕಸನಗೊಳ್ಳುತ್ತಿರುವ ತೆರಿಗೆ ಪದ್ಧತಿಯ ಭವಿಷ್ಯದ ಪಾಲಕರಾಗಿ, ಧನಾತ್ಮಕ ಬದಲಾವಣೆಯನ್ನು ಸಕ್ರಿಯಗೊಳಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇನೆ. ಅನೌಪಚಾರಿಕವಾd ನಗದು ನಿರ್ವಹಣೆಯನ್ನು ತಂತ್ರಜ್ಞಾನವು  ಪ್ರೋತ್ಸಾಹಿಸುವುದಿಲ್ಲ, ಏಕೆಂದರೆ ಇದು ಸಮಾಜಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಈ ರೀತಿಯ ಕ್ರಮಗಳು ವ್ಯವಸ್ಥೆಯಲ್ಲಿ ಅಭೂತಪೂರ್ವ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತಂದಿದೆ, ಇಂದು ಭಾರತದಲ್ಲಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆಯ ಹೊಸ ಮಾನದಂಡದೊಂದಿಗೆ ಇದೆ  . ಪವರ್ ಕಾರಿಡಾರ್ ಗಳನ್ನು ಸರಿಯಾಗಿ ಭ್ರಷ್ಟ ಅಂಶಗಳಿಂದ ತಟಸ್ಥಗೊಳಿಸಲಾಗಿದೆ. ಭ್ರಷ್ಟಾಚಾರವು ಇನ್ನು ಮುಂದೆ ಅವಕಾಶಗಳು ಮತ್ತು ಒಪ್ಪಂದಗಳಿಗೆ ಪಾಸ್ವರ್ಡ್ ಅಲ್ಲ; ಭ್ರಷ್ಟಾಚಾರವು ಜೈಲು ಎಂಬ ಸ್ಥಳಕ್ಕೆ ಒಂದು ಮಾರ್ಗವಾಗಿದೆ.

ದೃಢ ಮತ್ತು ನಿರಂತರ ಕೌಶಲ್ಯದ ಉನ್ನತೀಕರಣ   ಮತ್ತು ಅಂತರರಾಷ್ಟ್ರೀಯ ತೆರಿಗೆ ಮತ್ತು ತೆರಿಗೆ ಒಪ್ಪಂದದ ಪರಿಣಾಮಗಳಂತಹ ತೆರಿಗೆಯ ಹೊಸ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಸಹ   ಭವಿಷ್ಯಕ್ಕೆ  ನಿರ್ಣಾಯಕವಾಗಿರುತ್ತದೆ.
 ಪರಿಣಾಮಕಾರಿ ತೆರಿಗೆ ಆಡಳಿತವನ್ನು ಖಾತ್ರಿಪಡಿಸುವಲ್ಲಿ ಮತ್ತು ತೆರಿಗೆ ವಂಚನೆಯ ವಿರುದ್ಧ  ಬೇಲಿಯನ್ನು  ರಚಿಸುವಲ್ಲಿ ನಿಮ್ಮ ಪಾತ್ರವು ದೇಶ ನಿರ್ಮಾಣದ ಕಾರ್ಯಕ್ಕೆ ನಿಮ್ಮನ್ನು ಪ್ರಮುಖ ಕೊಡುಗೆದಾರರನ್ನಾಗಿ ಮಾಡುತ್ತದೆ.

ನೀವು ಅವರನ್ನು ತಲುಪಲು ಇಂದು ಕಾರ್ಯವಿಧಾನವನ್ನು ಪ್ರಾರಂಭಿಸಿದ್ದೀರಿ ಮತ್ತು ತೆರಿಗೆ ರಿಟರ್ನ್ ಸಲ್ಲಿಸಬೇಕಾದವರು 15 ದಶಲಕ್ಷಕ್ಕಿಂತಲೂ  ಹೆಚ್ಚು ಅಥವಾ ಅದಕ್ಕಿಂತ ಹೆಚ್ಚಿನವರು ಅದನ್ನು ಸಲ್ಲಿಸಿಲ್ಲ ಎಂದು ಪತ್ರಿಕೆಗಳ ವರದಿಯಿಂದ ನಾನು   ಮಾಹಿತಿ ಸಂಗ್ರಿಸಿದ್ದೇನೆ.  ಇದು ಪ್ರಮುಖ ಸವಾಲಾಗಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಗಮನಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ನಾವು 8 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆದಾರರನ್ನು ಹೊಂದಿದ್ದೇವೆ ಆದರೆ ನಾವು 1.4 ಶತಕೋಟಿಯ ರಾಷ್ಟ್ರವಾಗಿದ್ದೇವೆ,  ಅದಕ್ಕೆ ಹೋಲಿಸಿದರೆ ಈ ಸಂಖ್ಯೆಯು ಹೆಚ್ಚಾಗಬೇಕಾಗಿದೆ. ಮನವೊಲಿಕೆ, ಸಮಾಲೋಚನೆ, ಸಹಕಾರದೊಂದಿಗೆ ಅಂತಿಮವಾಗಿ ಪ್ರತಿಯೊಂದೂ ರಿಟರ್ನ್ ಸಲ್ಲಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ತೆರಿಗೆಯನ್ನು ಪಾವತಿಸುವ ಮೂಲಕ ರಿಟರ್ನ್ ಸಲ್ಲಿಸುವ ಮೂಲಕ ನೀವು  ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗುತ್ತಿದ್ದೀರಿ ಮತ್ತು ಅಭಿವೃದ್ಧಿಯನ್ನು  ತಡೆಯಲಾಗುತ್ತಿಲ್ಲ ಎಂದು ಅವರು ಹೆಮ್ಮೆಪಡುವಂತೆ ಮಾಡಿ.
 
ಈ ಜಗತ್ತಿನ ಯಾವುದೇ ದೊಡ್ಡ ದೇಶಕ್ಕಿಂತ ಹೆಚ್ಚಿನ ಭರವಸೆ ಭಾರತ ದೇಶದಲ್ಲಿದೆ. ಭಾರತವು ಇನ್ನು ಮುಂದೆ ಸಾಮರ್ಥ್ಯವಿರುವ ಅಥವಾ ಮಲಗುವ ದೈತ್ಯ ದೇಶವಲ್ಲ. ಜಾಗತಿಕ ಸೂಪರ್ ಪವರ್ ಆಗುವತ್ತ ಭಾರತ ಅತ್ಯಂತ ವೇಗವಾಗಿ ಸಾಗುತ್ತಿದೆ.

ನಾವು ಈಗ ಭರವಸೆ ಮತ್ತು ಸಾಧ್ಯತೆಯ  ನಾಡಾಗಿದ್ದೇವೆ, ಹೂಡಿಕೆ ಮತ್ತು ಅವಕಾಶಗಳ ನೆಚ್ಚಿನ ಜಾಗತಿಕ ತಾಣವಾಗಿದೆ, ಭಾರತವು ಭವಿಷ್ಯದ ಜಾಗತಿಕ ಸೂಪರ್ ಪವರ್ ಆಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ.

ಹೊರಗೆ ಮತ್ತು ಒಳಗೆ  ಸಂಶಯಪಡುವವರು ಇದ್ದಾರೆ, ಆ ಸಂಶಯಪಡುವವರು ಸಾರ್ವಜನಿಕ ಸ್ಥಳವನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ ಅವರಿಗೆ ನನ್ನ ಸಂದೇಶವೇನೆಂದರೆ, ನಮ್ಮ ಕ್ಷಿಪ್ರ  ಅಭಿವೃದ್ಧಿ ಮತ್ತು ತಡೆಯಲಾಗದ ಬೆಳವಣಿಗೆಯ ಬಗ್ಗೆ ಸಂಶಯವಿರುವವರು   ಭರವಸೆ ಮತ್ತು ಸಾಧ್ಯತೆಯ ಪರಿಸರವನ್ನು ಅನುಭವಿಸಲು  ತಮ್ಮ "ಭ್ರಾಂತಿ " ಯಿಂದ ಹೊರಬರಬೇಕಾಗಿದೆ.

ಇದು ವಿಭಿನ್ನವಾದ ಭಾರತವಾಗಿದ್ದು, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ನಾವು ಜಾಗತಿಕ ಸಂವಾದವನ್ನು ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದೇವೆ. ಭಾರತವು ಜಗತ್ತಿಗೆ ಯೋಗವನ್ನು ನೀಡಿದೆ; ಜೂನ್ 21 ರಂದು, ಇದನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ನಮ್ಮ ದೂರದೃಷ್ಟಿಯ ಪ್ರಧಾನ ಮಂತ್ರಿಯವರು ವಿಶ್ವಸಂಸ್ಥೆಯಲ್ಲಿ  ಇದರ ಪ್ರಕ್ರಿಯೆಯನ್ನು ಪ್ರಾರಂಭಿಸಿದರು ಮತ್ತು ಕಡಿಮೆ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ದೇಶಗಳು ಅದನ್ನು ಬೆಂಬಲಿಸಲು ಮುಂದೆ ಬಂದವು. 

ಭಾರತವು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಪ್ರಧಾನ ಕಛೇರಿಯಾಗಿದೆ. ನಮ್ಮ ದೇಶವನ್ನು ನೋಡಿ; ಇದು ಸೌರಶಕ್ತಿ, ಜೈವಿಕ ಇಂಧನಗಳು, ಸಿರಿಧಾನ್ಯ,  ಜಗತ್ತಿನ ದಕ್ಷಿಣ ಭಾಗದ ಧ್ವನಿ, ಮತ್ತು ಮುಂತಾದವುಗಳಿಂದ ಕೂಡಿದೆ. ನೀವು ಮುಂದೆ ಹೋದರೆ, ನಮ್ಮ ಮೃದುವಾದ ರಾಜತಾಂತ್ರಿಕ ಶಕ್ತಿಯು ಅತ್ಯಾಧುನಿಕವಾಗಿದೆ ಎನ್ನುವುದನ್ನು ನೀವು ಕಾಣಬಹುದು. ಈಗ, ಜಿ20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಜಗತ್ತಿನ ದಕ್ಷಿಣ ಭಾಗದ ಧ್ವನಿಯಾಯಿತು. ಅವು ಪ್ರತಿನಿಧಿಸುವ ಜಿಡಿಪಿಯನ್ನು ನೋಡಿ, ಪ್ರತಿನಿಧಿಸುವ ಜನಸಂಖ್ಯೆ, ಮತ್ತು ಮೊದಲು ಅವರನ್ನು ಕೇಳುವವರು ಇರಲಿಲ್ಲ. ಇದು ಈಗ ಪ್ರಮುಖ ವೇದಿಕೆಯಲ್ಲಿದೆ ಇದಕ್ಕೆ ಪ್ರಮುಖ ಕಾರಣ ಭಾರತದ ದೂರದೃಷ್ಟಿಯ ನಾಯಕತ್ವ.

ಸ್ವಾತಂತ್ರ್ಯದ ನಂತರ ಒಂದು ಕಾಲದಲ್ಲಿ, ಭಾರತವು ವಿಶ್ವದ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿತ್ತು. 60ರ ದಶಕದಲ್ಲಿ ನಮ್ಮ ಉಳಿವಿಗಾಗಿ, ನಾವು ಹೊರಗಿನಿಂದ, ವಿಶೇಷವಾಗಿ ಅಮೆರಿಕದಿಂದ ಸಹಾಯಕ್ಕಾಗಿ ಕಾಯುತ್ತಿದ್ದೆವು. ನಾನು 1989 ರಲ್ಲಿ ಸಂಸತ್ತಿಗೆ ಆಯ್ಕೆಯಾದಾಗ ಮತ್ತು ಆ ಸರ್ಕಾರದಲ್ಲಿ ಮಂತ್ರಿಯಾಗುವ ಅದೃಷ್ಟವನ್ನು ಹೊಂದಿದ್ದಾಗ, , 1991 ರಲ್ಲಿ ನಮ್ಮ ಆರ್ಥಿಕತೆಯ ಗಾತ್ರ ಹೇಗಿತ್ತು ಎಂದು ನಾನು ನಿಮಗೆ ಹೇಳುತ್ತೇನೆ, ನೀವು ಆಶ್ಚರ್ಯಪಡುತ್ತೀರಿ. ಒಂದು ಕಾಲದಲ್ಲಿ "ಚಿನ್ನದ ಹಕ್ಕಿ " ಎಂದು ಕರೆಯಲ್ಪಡುತ್ತಿದ್ದ ನಮ್ಮ ಆರ್ಥಿಕತೆಯು ಪ್ಯಾರಿಸ್ ಮತ್ತು ಲಂಡನ್ನಿನ ಆರ್ಥಿಕತೆಗಿಂತ ಕಡಿಮೆಯಾಗಿತ್ತು, ಎರಡು ನಗರಗಳು ಪ್ರತ್ಯೇಕವಾಗಿ, ಅದು ನಮ್ಮ ಗಾತ್ರವಾಗಿತ್ತು. ಮತ್ತು ಈಗ, ನಾವು ಯುಕೆ, ಕೆನಡಾ ಮತ್ತು ಫ್ರಾನ್ಸ್ ಗಿಂತ ಮುಂದಿದ್ದೇವೆ. ಮುಂದಿನ 2 ವರ್ಷಗಳಲ್ಲಿ ನಾವು ಜಪಾನ್ ಮತ್ತು ಜರ್ಮನಿಗಿಂತ ಮುಂದಿರುತ್ತೇವೆ.

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ, ಸರಾಸರಿ ಜಿಡಿಪೀ  ಬೆಳವಣಿಗೆ ಪ್ರಮಾಣವು 6.5% ರಿಂದ 7% ರಷ್ಟಿದೆ.

ಸ್ನೇಹಿತರೇ,  ವಿಕಸಿತ ಭಾರತ@2047 ರ ಮಾರ್ಗವನ್ನು ನಿಮ್ಮಂತಹ ಯುವ ಮನಸ್ಸುಗಳು ನಿರ್ಧರಿಸುತ್ತವೆ.. ನಿಮ್ಮ ಸಮರ್ಪಣೆ, ಸಮಗ್ರತೆ ಮತ್ತು ಶ್ರೇಷ್ಠತೆಯ ಬದ್ಧತೆಯು ಮುಂಬರುವ ವರ್ಷಗಳಲ್ಲಿ ನಮ್ಮ ದೇಶದ ಆರ್ಥಿಕ ಕ್ಷೇತ್ರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಯಶಸ್ಸಿಗೆ ಖಚಿತವಾದ ಮಾರ್ಗವೆಂದರೆ ತೆರಿಗೆಗೆ ಪಾವತಿಸುವುದು ಮತ್ತು ಕಾನೂನು ಬದ್ಧವಾಗಿರುವುದು ಎನ್ನುವುದನ್ನು ನೀವು ಜನರಿಗೆ ಅರ್ಥ ಮಾಡಿಸಬೇಕು. ದೈನಂದಿನ ಜೀವನದಲ್ಲಿ, ನೀವು ಶಾರ್ಟ್ಕಟ್ಗಳನ್ನು ತೆಗೆದುಕೊಂಡರೆ, ಇದು ದೀರ್ಘವಾದ, ನೋವಿನ ಮಾರ್ಗವಾಗಿ ಹೊರಹೊಮ್ಮುತ್ತದೆ. ನಿಮಗೆ ಶಾರ್ಟ್ಕಟ್ಗಳ ಅಗತ್ಯವಿದ್ದಾಗ, ನೀವು ಕಾನೂನಿನೊಂದಿಗೆ, ಕಾನೂನು ಆಡಳಿತದೊಂದಿಗೆ, ತೆರಿಗೆ ಪದ್ಧತಿಯೊಂದಿಗೆ ಶಾರ್ಟ್ಕಟ್ಗಳನ್ನು ತೆಗೆದುಕೊಂಡರೆ ನಿಮಗೆ ಅಸಹನೀಯ ನೋವು ಉಂಟಾಗುತ್ತದೆ.

ಸಂಭಾವ್ಯ ತೆರಿಗೆದಾರರಿಗೆ ಔಪಚಾರಿಕ ಆರ್ಥಿಕತೆಯ ಭಾಗವಾಗಿರುವುದರಿಂದ ಆಗುವ ಅನುಕೂಲಗಳು ಮತ್ತು  ಆಗದಿದ್ದರೆ ಇರುವ ತೊಂದರೆಗಳ ಬಗ್ಗೆ ತಿಳಿಸಬೇಕು.

ಭಾರತದ ಅಭಿವೃದ್ಧಿಯಲ್ಲಿ, ದಣಿವರಿಯಿಲ್ಲದೆ ಕೆಲಸ ಮಾಡಲು ನಾನು ನಿಮಗೆ ಕರೆ ನೀಡುತ್ತೇನೆ. ನಮ್ಮ ದೇಶವು ಇತರರಿಗಿಂತ ಭಿನ್ನವಾಗಿ, 5000 ವರ್ಷಗಳಿಗಿಂತ ಹೆಚ್ಚು ನಾಗರಿಕತೆಯನ್ನು ಹೊಂದಿರುವ ಕಾರಣ ನೀವು ಒಂದು ಸೆಕೆಂಡ್ ಅನ್ನು ಕಳೆಯಲು  ಸಾಧ್ಯವಿಲ್ಲ. ಅಮೃತ ಕಾಲದಲ್ಲಿ ನಾವು ಜಾಗತಿಕ ನಾಯಕರಾಗಲು  ಸಿದ್ಧರಾಗಿದ್ದೇವೆ.  2047 ರಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ನಾವು  ಅಡಿಪಾಯವನ್ನು ಹಾಕಿರುವೆವು. ನಿಮ್ಮಂತಹ ಯುವಜನರು, ನಿಮ್ಮ ವರ್ಗದಲ್ಲಿರುವ ಯುವಕರು, ಅವರು ವಿಕಸಿತ ಭಾರತ @2047 ರ ಈ ಬೃಹತ್ ಮೆರವಣಿಗೆಯ ಪ್ರಮುಖ ಶಕ್ತಿಯಾಗಿದ್ದಾರೆ.

ನಮ್ಮ ಸಾಮೂಹಿಕ ಆಕಾಂಕ್ಷೆಗಳನ್ನು ಸಾಧಿಸಲು ಕೆಲಸ ಮಾಡಲು ನಾನು ನಿಮಗೆ ಕರೆ ನೀಡುತ್ತಿದ್ದೇನೆ. ತೆರಿಗೆದಾರರಿಗೆ ಮಾಹಿತಿಯೊಂದಿಗೆ ಅಧಿಕಾರ ನೀಡಿ, ಪಾರದರ್ಶಕತೆಯ ಮೂಲಕ ನಂಬಿಕೆಯನ್ನು ಬೆಳೆಸಿಕೊಳ್ಳಿ ಮತ್ತು ನಿಮ್ಮ ವೃತ್ತಿಪರ ನಡವಳಿಕೆಯಲ್ಲಿ ಸಮಗ್ರತೆಯ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಿ.

ಪ್ರತಿಯೊಬ್ಬರ ಜೀವನದಲ್ಲಿ ನಾವು ಉತ್ಕೃಷ್ಟತೆ, ಆಧ್ಯಾತ್ಮಿಕತೆ, ನೈತಿಕ ಮಾನದಂಡಗಳು ಅಥವಾ ಸಮಗ್ರತೆಯಿಂದ ವಿಮುಖರಾಗಲು ಬಯಸುವ ಸಮಯ ಬರುತ್ತದೆ. ಆ ದುರ್ಬಲ ಕ್ಷಣಕ್ಕೆ ಬಲಿಯಾಗದಿರಿ, ಏಕೆಂದರೆ ಆ ಕ್ಷಣವು ನಿಮ್ಮ ಕಿವಿಯಲ್ಲಿ ಯಾವಾಗಲೂ ಪ್ರತಿಧ್ವನಿಸುತ್ತಿರುತ್ತದೆ. ನೀವು ಪ್ರಲೋಭನೆಗೆ ಬಲಿಯಾಗದಿರಿ, ಅದು ಹೆಚ್ಚು ಕ್ಷಣಿಕವಾಗಿದೆ, ಅದು ಶಾಶ್ವತವಲ್ಲ, ಅದಕ್ಕೆ ಬಲಿಯಾಗಬೇಡಿ. ನಿಮ್ಮ ವೃತ್ತಿಜೀವನವು ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ, ನಿಮ್ಮ ಸ್ನೇಹಿತರು ಮತ್ತು ರಾಷ್ಟ್ರಕ್ಕಾಗಿ ಯಶಸ್ವಿಯಾಗಿರಬೇಕು.

ನಿಮ್ಮಲ್ಲಿ ಪ್ರತಿಯೊಬ್ಬರೂ ಬದಲಾವಣೆಗೆ ಪ್ರೇರಕರು , ನಿಮ್ಮಲ್ಲಿ ಆರ್ಥಿಕ ಪ್ರಗತಿಯ ಪ್ರಯೋಜನಗಳನ್ನು ನಮ್ಮ ವೈವಿಧ್ಯಮಯ ಸಮಾಜದ ಪ್ರತಿಯೊಂದು ಮೂಲೆಗೂ ಕೊಂಡೊಯ್ಯುವ ಸಾಮರ್ಥ್ಯವಿದೆ.

ಈ ಸ್ಮರಣೀಯ ಮೈಲಿಗಲ್ಲಿನಲ್ಲಿ  ನವ ಅಧಿಕಾರಿಗಳನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಮುಂದಿರುವ ಸವಾಲುಗಳನ್ನು ಉತ್ಸಾಹದಿಂದ ಮತ್ತು ಮಾನವೀಯತೆಯ ಸೇವೆಯ ಮನೋಭಾವದಿಂದ ಸ್ವೀಕರಿಸಿ. ನೀವು ಕೇವಲ ಭಾರತೀಯ ಕಂದಾಯ ಸೇವೆಯ ಸದಸ್ಯರಲ್ಲ. ನೀವು ಮಾಡುತ್ತಿರುವ ಸೇವೆಯ ಬಲದಿಂದ, ನೀವು ಸಮಾಜದ ಉನ್ನತ ಶ್ರೇಣಿಯಲ್ಲಿದ್ದೀರಿ. ದೇಶದ ಕಲ್ಯಾಣಕ್ಕಾಗಿ ಈ ಸ್ಥಾನವನ್ನು ಬಳಸಿಕೊಳ್ಳಿ.

ವೋಕಲ್ ಫಾರ್ ಲೋಕಲ್  ಆಗಿರೆಂದು  ನಾನು ನಿಮಗೆ ಮನವಿ ಮಾಡುತ್ತೇನೆ. ಈಗ,  ತೆರಿಗೆ  ನಿರ್ವಾಹಕರಾದ ನೀವು ತಿಳಿದಿರುವಿರಿ, ತಪ್ಪಿಸಬಹುದಾದ ಆಮದುಗಳು ನಮ್ಮ ವಿದೇಶಿ ವಿನಿಮಯದ ಮೇಲೆ ಶತಕೋಟಿಗಳಷ್ಟು ಹೊರೆಯಾಗಿದೆ. ಅವು ನಮ್ಮ ಯುವಕರಿಂದ ಕೆಲಸಗಳನ್ನು ಕಸಿದುಕೊಳ್ಳುತ್ತವೆ, ಉದ್ಯಮಶೀಲತೆಗೆ ಅವರ ವಿಕಾಸವನ್ನು ಮೊಟಕುಗೊಳಿಸುತ್ತವೆ. ನೀವು ಉದ್ದಯಮದ ಜನರೊಂದಿಗೆ ಸಂವಹನ ನಡೆಸುತ್ತೀರಿ. ನೀವು ಅವರಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ತುಂಬಬಹುದು, ದೇಶದಲ್ಲಿ ಏನು ಲಭ್ಯವಿದೆ, ನಾವು ಅದನ್ನು ಏಕೆ ಆಮದು ಮಾಡಿಕೊಳ್ಳಬೇಕು, ಅದರ ದುಷ್ಪರಿಣಾಮಗಳನ್ನು ಅವರಿಗೆ ತಿಳಿಸಿ, ಹೊರಗಿನಿಂದ ಪೀಠೋಪಕರಣಗಳು, ಪರದೆಗಳನ್ನು , ಮೇಣದಬತ್ತಿಗಳು, ಗಾಳಿಪಟಗಳು, ಮಕ್ಕಳ ಆಟಿಕೆಗಳು ಆಮದು ಮಾಡಿಕೊಳ್ಳುವುದರಿಂದ ಆರ್ಥಿಕವಾಗಿ  ಕೆಲವರಿಗೆ ಮಾತ್ರ ಲಾಭವಾಗುತ್ತದೆ ಎನ್ನುವುದನ್ನು ನೀವು ಅವರಿಗೆ ತಿಳಿಸಬಹುದು.  ಒಮ್ಮೆ ನೀವು ಅದನ್ನು ಮಾಡಿದರೆ, ನೀವು ಮೂರು ಅಂಶಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತೀರಿ:

1. ವಿದೇಶಿ ವಿನಿಮಯ ಹೊರಗೆ ಹೋಗುವುದಿಲ್ಲ

2. ಉದ್ಯೋಗ ಸೃಷ್ಟಿಯಾಗುತ್ತದೆ.

3. ವಾಣಿಜ್ಯೋದ್ಯಮವು ಹಿರಿದಾಗಿ ಬೆಳವಣಿಗೆಯಾಗುತ್ತದೆ 

ಅಂತೆಯೇ, ಸ್ನೇಹಿತರೇ, ಇದು ಒಳ್ಳೆಯ ಆಲೋಚನೆಯಲ್ಲ, ಖಂಡಿತವಾಗಿ ಉತ್ತಮ ಹಣಕಾಸಿನ ವ್ಯವಹಾರವಲ್ಲ,  ಕಚ್ಚಾ ವಸ್ತುಗಳನ್ನು ರಫ್ತು ಮಾಡುವುದು ಉತ್ತಮ ರಾಷ್ಟ್ರೀಯ ಮನೋಭಾವವಲ್ಲ.  ಆದರೆ ನಾವು ಮೌಲ್ಯವನ್ನು ಸೇರಿಸಲು ಸಮರ್ಥರಾಗಿದ್ದೇವೆ.  ಜಗತ್ತು ನಮ್ಮ ಬಳಿಗೆ ಬರುತ್ತಿದೆ, ಆದರೆ ಯಾರಾದರೂ   ಸಂಪತ್ತಿನ್ನು ಹಾಗೇ ಇರಿಸಿಕೊಂಡಿದ್ದರೆ, ಉದಾಹರಣೆಗೆ ಪ್ರಕೃತಿ ಸಂಪತ್ತು, ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಹಾಗೆಯೇ ರಫ್ತು ಮಾಡುವೆ  ನನಗೆ ಹಣ ಸಿಗುತ್ತದೆ ಎಂದು ಹೇಳಿ ಜನರ ಮೇಲೆ ಪ್ರಭಾವ ಬೀರಿರಿ,  ನೀವು ಇದನ್ನು ಮಾಡಬಹುದು, ಅದನ್ನು ನೆನಪಿನಲ್ಲಿಡಿ.

ನಿಮ್ಮಂತಹ ಯುವ ಅಧಿಕಾರಿಗಳಿಗೆ ತರಬೇತಿ ನೀಡುವ ಉತ್ತಮ ಕೆಲಸ ಮಾಡುತ್ತಿರುವ ರಾಷ್ಟ್ರೀಯ ನೇರ ತೆರಿಗೆಗಳ ಅಕಾಡೆಮಿಯನ್ನು ನಾನು ಅಭಿನಂದಿಸುತ್ತೇನೆ.

ಒಂದು ಅದ್ಭುತ ಕಾರ್ಯ! ಅವರಿಗೆ ಅಭಿನಂದನೆಗಳು!

ಆದಾಯ ತೆರಿಗೆ ಇಲಾಖೆ ಮತ್ತು ಅದರ ಸಮರ್ಥ ನಾಯಕತ್ವವು ಅಭಿವೃದ್ಧಿಯ ರಾಷ್ಟ್ರೀಯ ಮಾನದಂಡದೊಂದಿಗೆ ಜೊತೆಯಾಗಿ ವೇಗವನ್ನು ಇಟ್ಟುಕೊಳ್ಳುವುದಕ್ಕಾಗಿ ಮತ್ತು ಕೆಲವೊಮ್ಮೆ ಅದನ್ನೂ ಮೀರಿಸುತ್ತಿರುವುದಕ್ಕಾಗಿಯೂ ಸಹ ನಾನು ಅಭಿನಂದಿಸುತ್ತೇನೆ. ಜನಸ್ನೇಹಿಯಾಗಿರುವುದೇ ಇಲ್ಲ  ಎಂದು ಜನ ಭಾವಿಸಿದ್ದ ಇಲಾಖೆ ಈಗ  ಸಹಾಯ ನೀಡುವಲ್ಲಿ, ಪಾರದರ್ಶಕತೆಯಲ್ಲಿ, ಹೊಣೆಗಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಇಲಾಖೆಗೆ ಅಭಿನಂದನೆಗಳು.

ಸ್ನೇಹಿತರೇ, ನಿಮ್ಮ ವೃತ್ತಿಜೀವನದ ಈ ಹೊಸ ಅಧ್ಯಾಯವನ್ನು ನೀವು ಪ್ರಾರಂಭಿಸುತ್ತಿರುವಾಗ, ನಮ್ಮ ಪ್ರೀತಿಯ ಭಾರತಕ್ಕೆ ಸೇವೆ ಸಲ್ಲಿಸುವಲ್ಲಿ ನೀವು ಸಾರ್ಥಕತೆ ಮತ್ತು ಉದ್ದೇಶವನ್ನು ಕಂಡುಕೊಳ್ಳಲಿ ಎಂದು ಹಾರೈಸುತ್ತೇನೆ.

ಬಹಳ ಧನ್ಯವಾದಗಳು. ಜೈ ಹಿಂದ್!

*****



(Release ID: 2018104) Visitor Counter : 30


Read this release in: English , Urdu , Hindi , Odia , Telugu