ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

"ರಾಷ್ಟ್ರಧ್ವಜದ ಉತ್ಪಾದನೆಯನ್ನು ಹೆಚ್ಚಿಸಿ, ಖಾದಿ ಕುಶಲಕರ್ಮಿಗಳಿಗೆ ಘನತೆಯ ಜೀವನವನ್ನು ನೀಡಲು ಬದ್ಧ" - ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರು


200 ಜೇನು ಸಾಕಾಣಿಕೆ ಪೆಟ್ಟಿಗೆಗಳು ಮತ್ತು ಟೂಲ್ ಕಿಟ್ ಗಳು, 100 ಎಲೆಕ್ಟ್ರಿಕ್ ಪಾಟರ್ ಚಕ್ರಗಳು, 20 ಪ್ಲಂಬಿಂಗ್ ಟೂಲ್ ಕಿಟ್ ಗಳು ಮತ್ತು ಯಂತ್ರೋಪಕರಣಗಳನ್ನು ವಿತರಿಸುವ ಕಾರ್ಯಕ್ರಮವನ್ನು ಧಾರವಾಡದಲ್ಲಿ ನಡೆಸಲಾಯಿತು

20 ವಿದ್ಯುತ್ ಟೂಲ್ ಕಿಟ್ ಗಳು ಮತ್ತು ಯಂತ್ರೋಪಕರಣಗಳು, 10 ಪಾದರಕ್ಷೆಗಳು ಮತ್ತು 100 ಪಾದರಕ್ಷೆ ದುರಸ್ತಿ ಟೂಲ್ ಕಿಟ್ ಗಳು ಮತ್ತು 10 ಹಣ್ಣು ಮತ್ತು ತರಕಾರಿ ಯಂತ್ರೋಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು

Posted On: 08 MAR 2024 3:02PM by PIB Bengaluru

ಕರ್ನಾಟಕದಲ್ಲಿ ಸಣ್ಣ ಪ್ರಮಾಣದ ಗ್ರಾಮ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದೊಂದಿಗೆ, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅತ್ಯುತ್ತಮ ನಾಯಕತ್ವದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಅವರು ಇಂದು ಗ್ರಾಮೋದ್ಯೋಗ ವಿಕಾಸ ಯೋಜನೆಯ (ಜಿವಿವೈ) ಅಡಿಯಲ್ಲಿ, ಗುರುತಿಸಲಾದ 460ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಅತ್ಯಗತ್ಯ ಉಪಕರಣಗಳು ಮತ್ತು ಟೂಲ್ ಕಿಟ್ ಗಳನ್ನು ವಿತರಿಸಿದರು. ಕರ್ನಾಟಕದ ಧಾರವಾಡ ತಾಲ್ಲೂಕಿನ ಗರಗ್ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರು ಧಾರವಾಡ ತಾಲ್ಲೂಕು ಗರಗ್ ಕ್ಷೇತ್ರೀಯ ಸೇವಾ ಸಂಘದಲ್ಲಿ (ಡಿಟಿಜಿಕೆಎಸ್ಎಸ್) ರಾಷ್ಟ್ರಧ್ವಜ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಅವರು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಮತ್ತು ಆತ್ಮನಿರ್ಭರ ಭಾರತ ಮಿಷನ್ ಅನ್ನು ಎಲ್ಲಾ ಕುಶಲಕರ್ಮಿಗಳಿಗೆ ತಾಂತ್ರಿಕ ಮತ್ತು ಆರ್ಥಿಕ ಬೆಂಬಲದ ಮೂಲಕ ವಿಸ್ತರಿಸಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಬದ್ಧವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್ ಕುಮಾರ್ ಅವರು, ಘನತೆ-ಗೌರವದ ಜೀವನ ನಡೆಸಲು ಉಪಕರಣಗಳು ಮತ್ತು ಸಲಕರಣೆಗಳ ಮೂಲಕ ನಮ್ಮ ಕುಶಲಕರ್ಮಿಗಳನ್ನು ಬಲಪಡಿಸುವುದು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯವಾಗಿದೆ. ಕುಶಲಕರ್ಮಿಗಳಿಗೆ ನೆರವಾಗಿ, ಪ್ರಧಾನಿಯವರ ಧ್ಯೇಯವನ್ನು ಮುಂದುವರೆಸಿ, ವಿವಿಧ ಸ್ತರಗಳಲ್ಲಿ ಸುಧಾರಿತ ಟೂಲ್ ಕಿಟ್ ಗಳು ಮತ್ತು ಯಂತ್ರೋಪಕರಣಗಳ ಸಹಾಯದಿಂದ ಜೇನು ಸಾಕಾಣಿಕೆ, ಕುಂಬಾರಿಕೆ, ಪ್ಲಂಬಿಂಗ್, ಎಲೆಕ್ಟ್ರಿಷಿಯನ್ ಸೇವೆಗಳು, ಪಾದರಕ್ಷೆ ತಯಾರಿಕೆ, ಮತ್ತು ಹಣ್ಣು ಮತ್ತು ತರಕಾರಿ ಸಂಸ್ಕರಣೆ ಸೇರಿದಂತೆ ಹಲವಾರು ಕುಶಲಕರ್ಮಿಗಳಿಗೆ ಹೊಸ ಜೀವನವನ್ನು ನೀಡಲು ನಾವು ಪ್ರತಿಜ್ಞೆ ಮಾಡಿದ್ದೇವೆ ಎಂದು ಅವರು ಪುನರುಚ್ಚರಿಸಿದರು.  ಇಂದಿನ ಕಾರ್ಯಕ್ರಮದಡಿ ಸುಮಾರು 390 ಕುಶಲಕರ್ಮಿಗಳು ಪ್ರಯೋಜನ ಪಡೆದಿದ್ದಾರೆ.

ಸ್ವದೇಶಿ ಚಳವಳಿಯ ಸಮಯದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟದಲ್ಲಿ ಪೂಜ್ಯ ಬಾಪುಜಿಯವರು ಬಳಸಿದ ಪ್ರಬಲ ಅಸ್ತ್ರವಾಗಿದ್ದ ಖಾದಿಗೆ ಈಗ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅದರ ಹಿಂದಿನ ವೈಭವವನ್ನು ಮರುಕಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ವ್ಯಾಪಾರವು 1.34 ಲಕ್ಷ ಕೋಟಿ ರೂ.ಗಳನ್ನು ಮೀರಿದೆ. ಖಾದಿ ಬಟ್ಟೆ ಉತ್ಪಾದನೆ 880 ಕೋಟಿ ರೂ.ಗಳಿಂದ 2915.85 ಕೋಟಿ ರೂ.ಗೆ ಮತ್ತು ಖಾದಿ ಉತ್ಪನ್ನಗಳ ಮಾರಾಟವು 1170 ಕೋಟಿ ರೂ.ಗಳಿಂದ 6000 ಕೋಟಿ ರೂ.ಗೆ ಏರಿದೆ.

ಧಾರವಾಡ ತಾಲ್ಲೂಕು ಗರಗ್ ಕ್ಷೇತ್ರೀಯ ಸೇವಾ ಸಂಘ, ಗರಗ್ ನಲ್ಲಿ ಹೊಸದಾದ ರಾಷ್ಟ್ರಧ್ವಜ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕೆವಿಐಸಿ ಅಧ್ಯಕ್ಷರು, ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಫೆಡರೇಶನ್)ನ ಅಡಿಯಲ್ಲಿ ಇದುವರೆಗೆ ಕೇವಲ ಒಂದು ರಾಷ್ಟ್ರಧ್ವಜ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ಘಟಕವು ದೇಶಾದ್ಯಂತ ರಾಷ್ಟ್ರಧ್ವಜಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ರಾಷ್ಟ್ರಧ್ವಜಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.  ಧ್ವಜ ಉತ್ಪಾದನೆಯಲ್ಲಿ ಉತ್ಕೃಷ್ಟತೆಗೆ ಹೆಸರುವಾಸಿಯಾದ ಗರಗ್ ಪ್ರದೇಶವು ಈಗ ನಿಗದಿತ ಮಾನದಂಡಗಳ ಅಡಿಯಲ್ಲಿ ಧ್ವಜ ಉತ್ಪಾದನೆಯ ರಾಷ್ಟ್ರೀಯ ಅಗತ್ಯವನ್ನು ಪೂರೈಸಲು ಗಮನಾರ್ಹ ಕೊಡುಗೆ ನೀಡಲಿದೆ ಎಂದು ಅವರು ಹೇಳಿದರು.

ಶ್ರೀ ಮನೋಜ್ ಕುಮಾರ್ ಅವರು ತಮ್ಮ ಭಾಷಣದಲ್ಲಿ, ರಾಷ್ಟ್ರಧ್ವಜದ ತಯಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ನೇಕಾರರ ಪ್ರಯತ್ನಗಳನ್ನು ಶ್ಲಾಘಿಸಿದರು. ರಾಷ್ಟ್ರೀಯ ಹೆಮ್ಮೆಯನ್ನು ಎತ್ತಿಹಿಡಿಯುವಲ್ಲಿ ಮತ್ತು ಏಕತೆ ಹಾಗೂ ದೇಶಭಕ್ತಿಯ ಮನೋಭಾವವನ್ನು ಸಂಕೇತಿಸುವಲ್ಲಿ ಕುಶಲಕರ್ಮಿಗಳ ಕೊಡುಗೆಗಳ ಮಹತ್ವವನ್ನು ಶ್ರೀ ಮನೋಜ್ ಕುಮಾರ್ ಅವರು ಒತ್ತಿ ಹೇಳಿದರು.

ಇದಲ್ಲದೆ, ಉತ್ತರ ಕರ್ನಾಟಕದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಗಳ ಪ್ರಗತಿಯ ಸಂಕ್ಷಿಪ್ತ ವರದಿಯನ್ನು ಪ್ರಸ್ತುತಪಡಿಸಿದ ಅವರು, ವಿವಿಧ ಪಾಲುದಾರರು ಕೈಗೊಂಡ ಸಾಧನೆಗಳು ಮತ್ತು ಉಪಕ್ರಮಗಳನ್ನು ಪ್ರದರ್ಶಿಸಿದರು. ಖಾದಿಯ ಬೇಡಿಕೆಯನ್ನು ಪೂರೈಸಲು ಹತ್ತಿ, ರೇಷ್ಮೆ ಮತ್ತು ಉಣ್ಣೆ ಉತ್ಪಾದನೆಯ ಸುಮಾರು 74 ಖಾದಿ ಸಂಸ್ಥೆಗಳು ಮತ್ತು 96 ಮಾರಾಟ ಮಳಿಗೆಗಳಿವೆ, ಮಾರಾಟದ ಗುರಿಯನ್ನು 71.94 ಕೋಟಿಗೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು. ಈ ಚಟುವಟಿಕೆಗಳು ಕುಶಲಕರ್ಮಿಗಳ ಆರ್ಥಿಕ ಪ್ರಾಮುಖ್ಯತೆಯನ್ನು ಹೆಚ್ಚಿಸುವ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕನಸುಗಳನ್ನು ಈಡೇರಿಸುತ್ತವೆ ಎಂದು ಅವರು ಪುನರುಚ್ಚರಿಸಿದರು.

'ವೋಕಲ್ ಫಾರ್ ಲೋಕಲ್' ಮತ್ತು 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಅನ್ನು ಬೆಂಬಲಿಸಲು ಮತ್ತು ದೇಶಾದ್ಯಂತದ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಲು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಕರೆಯನ್ನು ಅನುಮೋದಿಸುವ ಬದ್ಧತೆಯನ್ನು ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಅವರು ಪುನರುಚ್ಚರಿಸಿದರು. ದೇಶೀಯ ಕೈಗಾರಿಕೆಗಳನ್ನು ಉತ್ತೇಜಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸುವಂತೆ ಅವರು ಎಲ್ಲಾ ಪಾಲುದಾರರನ್ನು ಕೇಳಿಕೊಂಡರು

****



(Release ID: 2012768) Visitor Counter : 34


Read this release in: English