ಉಪರಾಷ್ಟ್ರಪತಿಗಳ ಕಾರ್ಯಾಲಯ

ದೇಶವು ಅದ್ಭುತ ವಾತಾವರಣದಲ್ಲಿದೆ  ಮತ್ತು ನಾವು ಎಲ್ಲದರಲ್ಲೂ ಪ್ರಗತಿ ಹೊಂದುತ್ತಿದ್ದೇವೆ - ಉಪರಾಷ್ಟ್ರಪತಿ


"ಭಾರತದ ಏಳಿಗೆಯನ್ನು ತಡೆಯಲಾಗದು" ಎಂದು ಉಪರಾಷ್ಟ್ರಪತಿ ಪ್ರತಿಪಾದನೆ

ಕಾನೂನಿನ ಮುಂದೆ ಸಮಾನತೆ ಇರದ ಹೊರತು ಯಾವುದೇ ಪ್ರಜಾಪ್ರಭುತ್ವವು ಸಂಪೂರ್ಣವಾಗುವುದಿಲ್ಲ - ಉಪರಾಷ್ಟ್ರಪತಿ  
ಸುಪ್ರೀಂ ಕೋರ್ಟ್ನಿಂದ 'ಹಿರಿಯ ವಕೀಲ' ಎಂದು ನಿಯುಕ್ತಗೊಂಡ  ಅತ್ಯಂತ ಕಿರಿಯ ವಕೀಲ ಎಂದು ರಾಷ್ಟ್ರೀಯ ದಾಖಲೆ ಹೊಂದಿರುವ ಉಪರಾಷ್ಟ್ರಪತಿಯವರಿಗೆ ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಶ್ಲಾಘನೆ 

ಐಐಟಿ ಧಾರವಾಡದಲ್ಲಿ ವಿವಿಧ ಯೋಜನೆಗಳನ್ನು ಉಪರಾಷ್ಟ್ರಪತಿಗಳು ಉದ್ಘಾಟಿಸಿದರು

Posted On: 01 MAR 2024 7:25PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ದೇಶವು ಅದ್ಭುತ ವಾತಾವರಣದಲ್ಲಿದೆ  ಮತ್ತು ನಾವು ಎಲ್ಲದರಲ್ಲೂ ಪ್ರಗತಿ ಹೊಂದುತ್ತಿದ್ದೇವೆ ಎಂದು ಪ್ರತಿಪಾದಿಸಿದರು. “ಭಾರತದ ಏಳಿಗೆಯನ್ನು ತಡೆಯಲಾಗದು” ಎಂದು ಒತ್ತಿ ಹೇಳಿದ ಅವರು, ದೇಶದ ಅಪೂರ್ವ ಬೆಳವಣಿಗೆಯ ಬಗ್ಗೆ ಯುವಕರು ಹೆಮ್ಮೆ ಪಡಬೇಕು ಎಂದು ಕೇಳಿಕೊಂಡರು.

ಇಂದು ಧಾರವಾಡದ ಐಐಟಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ನಂತಹ ಜಾಗತಿಕ ಸಂಸ್ಥೆಗಳ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ, ಭಾರತವನ್ನು ಹೂಡಿಕೆ ಮತ್ತು ಅವಕಾಶಗಳ ನೆಚ್ಚಿನ ತಾಣವೆಂದು ಬಣ್ಣಿಸಿದರು. ಶತಮಾನಗಳ ಹಿಂದೆಯೇ ನಾವು ವಿಶ್ವದಲ್ಲಿ ನಂಬರ್ ಒನ್ ರಾಷ್ಟ್ರವಾಗಿದ್ದೇವೆ ಎಂದು ಒತ್ತಿ ಹೇಳಿದ ಅವರು 2047 ರಲ್ಲಿ ನಾವು ನಂಬರ್ ಒನ್ ಆಗುತ್ತೇವೆ ಎಂದು ಪ್ರತಿಪಾದಿಸಿದರು ಮತ್ತು ಯುವಜನರು ಅದಕ್ಕಾಗಿ ಸಜ್ಜಾಗಬೇಕೆಂದು ಹೇಳಿದರು.

ಇಂದು ಹುಬ್ಬಳ್ಳಿ-ಧಾರವಾಡಕ್ಕೆ ತಮ್ಮ ಒಂದು ದಿನದ ಪ್ರವಾಸದಲ್ಲಿ, ಉಪರಾಷ್ಟ್ರಪತಿಗಳು ಐಐಟಿ ಧಾರವಾಡದಲ್ಲಿ ಮುಖ್ಯ ದ್ವಾರ ಸಂಕೀರ್ಣ, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಮತ್ತು ಕೇಂದ್ರ ಕಲಿಕಾ ಮಂದಿರವನ್ನು ಉದ್ಘಾಟಿಸಿದರು. ಅವರು ಮೇಲ್ಛಾವಣಿಯ ಸೌರ ಫಲಕ ಸೌಲಭ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು, ಇದು ಹಸಿರು ಶಕ್ತಿ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಆಡಳಿತ ಮತ್ತು ಪ್ರಜಾಪ್ರಭುತ್ವದಲ್ಲಿ ಯುವಕರು ಅತ್ಯಂತ ಪ್ರಮುಖ ಪಾಲುದಾರರು ಎಂದು ಬಣ್ಣಿಸಿದ ಉಪರಾಷ್ಟ್ರಪತಿಗಳು, ಯುವಕರು ರಾಷ್ಟ್ರಕ್ಕೆ ಅಗತ್ಯವಿರುವ ಬದಲಾವಣೆಯನ್ನು ತರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಐಐಟಿ ಧಾರವಾಡ ಉನ್ನತ ಮಟ್ಟಕ್ಕೆ ಏರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಉಪರಾಷ್ಟ್ರಪತಿಗಳು, ಹಳೆಯ ವಿದ್ಯಾರ್ಥಿಗಳು ಸಂಘವನ್ನು ರಚಿಸಲು ಮತ್ತು ಎಲ್ಲಾ ರೀತಿಯಲ್ಲಿ ತಮ್ಮ ಹಳೆಯ ವಿದ್ಯಾನಿಲಯಕ್ಕೆ ಮರಳಿ ಕೊಡುಗೆ ನೀಡುವಂತೆ ಮನವಿ ಮಾಡಿದರು.

ಕಾನೂನಿನ ಮುಂದೆ ಸಮಾನತೆಯಿಲ್ಲದ ಹೊರತು ಯಾವುದೇ ಪ್ರಜಾಪ್ರಭುತ್ವವು ಸಂಪೂರ್ಣವಾಗುವುದಿಲ್ಲ ಎಂದು ಪ್ರತಿಪಾದಿಸಿದ ಉಪರಾಷ್ಟ್ರಪತಿಗಳು, ಇಂದಿನ ಯುವಕರು ಮೊದಲನೆಯದಾಗಿ ಬಯಸುತ್ತಿರುವುದು - ಕಾನೂನಿನ ಮುಂದೆ ಸಮಾನತೆ. “ಕಾನೂನಿನ ಮುಂದೆ ಸಮಾನತೆ ಇಲ್ಲದಿದ್ದರೆ ನಿಮ್ಮ ಘನತೆಗೆ ಧಕ್ಕೆಯಾಗುತ್ತದೆ. ತಮ್ಮನ್ನು ಕಾನೂನಿಗಿಂತ ಹೆಚ್ಚು ಎಂದು ಪರಿಗಣಿಸಿದವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಮತ್ತು ಕಾನೂನಿನ ಮುಂದೆ ಸಮಾನತೆ, ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವುದು ಇಂದಿನ  ವಾಸ್ತವ ಎಂದು ಅನುಭವದಿಂದ ಕಲಿಯುತ್ತಿದ್ದಾರೆ, ”ಎಂದು ಅವರು ಹೇಳಿದರು.

ಭ್ರಷ್ಟಾಚಾರವು "ದೀರ್ಘಕಾಲದವರೆಗೆ ಒಂದು ಪಿಡುಗಾಗಿದ್ದು" ಎಂದು ಹೇಳಿದ ಶ್ರೀ ಧನಕರ್ ಕೆಲವು ವರ್ಷಗಳ ಹಿಂದೆ ಭ್ರಷ್ಟಾಚಾರವಿಲ್ಲದೆ ಏನೂ ಸಾಧ್ಯವಿರಲಿಲ್ಲ ಎಂದರು. ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಇತ್ತೀಚಿನ ಸುಧಾರಣೆಗಳತ್ತ ಗಮನ ಸೆಳೆಯುವಾಗ ಅವರು "ಭ್ರಷ್ಟಾಚಾರವು ಸರ್ಕಾರಿ ಗುತ್ತಿಗೆ, ಸರ್ಕಾರಿ ಉದ್ಯೋಗವನ್ನು ಪಡೆಯಲು ಅಥವಾ ಅವಕಾಶವನ್ನು ಪಡೆಯಲು ಏಕೈಕ ಮಾರ್ಗವಾಗಿದೆ ಮತ್ತು  ದಲ್ಲಾಳಿಗಳು  ಅಧಿಕಾರದ ಪ್ರಾಂಗಣಗಳನ್ನು  ಮುತ್ತಿಕೊಂಡಿದ್ದವು" ಎಂದು ಅವರು ಹೇಳಿದರು. ಅಧಿಕಾರದ ಪ್ರಾಂಗಣಗಳ  ಭ್ರಷ್ಟ ಅಂಶಗಳನ್ನು ತೊಳೆದಿರುವುದರಿಂದ ಈಗ ದೊಡ್ಡ ಬದಲಾವಣೆಯಾಗಿದೆ ಎಂದು  ಉಪರಾಷ್ಟ್ರಪತಿಗಳು ಪ್ರತಿಪಾದಿಸಿದರು ಮತ್ತು "ಪಕ್ಷಪಾತವಲ್ಲ, ದೇಶಪ್ರೇಮವಲ್ಲ ಮತ್ತು ಸ್ವಜನಪಕ್ಷಪಾತವಲ್ಲ ಕೇವಲ ಯೋಗ್ಯತೆ ಮತ್ತು ಅರ್ಹತೆ ಮಾತ್ರ ಯುವ ಮನಸ್ಸಿನ ಪ್ರಯತ್ನಗಳ ಫಲಿತಾಂಶವನ್ನು ನಿರ್ದೇಶಿಸುತ್ತದೆ" ಎಂದು ಒತ್ತಿ ಹೇಳಿದರು.

ನಮ್ಮ ತ್ವರಿತ ಮತ್ತು ಅಪೂರ್ವವಾದ ಬೆಳವಣಿಗೆಯ ಬಗ್ಗೆ ನಾವು ಹೆಮ್ಮೆಪಡಬೇಕು ಎಂದು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, ಕೆಲವರಿಗೆ ಭಾರತದ ಪ್ರಗತಿಯನ್ನು ಕಂಡು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಕೆಲವು ಶಕ್ತಿಗಳು ನಡೆಸುತ್ತಿರುವ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ನೋವು ವ್ಯಕ್ತಪಡಿಸಿದ ಅವರು, ಇಂತಹ ಹೀನ  ಪ್ರಯತ್ನಗಳನ್ನು ತಟಸ್ಥಗೊಳಿಸಬೇಕೆಂದು ಯುವಕರಿಗೆ ಕರೆ ನೀಡಿದರು.

ವಿಕ್ರಾಂತ್, ಫ್ರಿಗೇಟ್ ಗಳು ಮತ್ತು ತೇಜಸ್ ಗಳನ್ನು ಉಲ್ಲೇಖಿಸಿದ ಅವರು, ನಮ್ಮದು ರಕ್ಷಣಾ ಸಾಧನಗಳನ್ನು ತಯಾರಿಸುವುದು ಮಾತ್ರವಲ್ಲದೆ ಅದನ್ನು ರಫ್ತು ಮಾಡುವ ದೇಶವಾಗಿದೆ - ಇದು ದೊಡ್ಡ ಬದಲಾವಣೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಕೇವಲ ಹನ್ನೊಂದು ವರ್ಷಗಳ  ವಕೀಲಿವೃತ್ತಿಯ ನಂತರ ಸುಪ್ರೀಂ ಕೋರ್ಟ್ನಿಂದ 'ಹಿರಿಯ ವಕೀಲ' ಎಂದು   ನಿಯುಕ್ತಗೊಂಡ ಉಪರಾಷ್ಟ್ರಪತಿ ಅವರು ದೇಶದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಕೀಲರು ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ ಶ್ಲಾಘಿಸಿದರು. "ಇಲ್ಲಿಯವರೆಗಿನ ಇದು ದಾಖಲೆಯಾಗಿದೆ ಮತ್ತು ಇಷ್ಟು ಕಡಿಮೆ ಅವಧಿಯಲ್ಲಿ ಮತ್ತು ಚಿಕ್ಕ ವಯಸ್ಸಿನಲ್ಲಿ ಯಾರೂ ಹಿರಿಯ ವಕೀಲರಾಗಿರಲಿಲ್ಲ" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಸಂಸದೀಯ ವ್ಯವಹಾರಗಳು ಹಾಗು ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

***



(Release ID: 2011150) Visitor Counter : 60


Read this release in: English , Urdu , Hindi