ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ತೀರ್ಥಯಾತ್ರೆಯಿಂದ ಪ್ರಗತಿಯ ಯಾತ್ರೆಯೆಡೆಗೆ: ಜನರ ನೋಟದ ಮೂಲಕ ಅಯೋಧ್ಯೆಯ ರೂಪಾಂತರ (ಪರಿವರ್ತನೆ)

Posted On: 21 JAN 2024 9:04PM by PIB Bengaluru

ತಲೆ ತಲೆಮಾರುಗಳಿಂದಲೂ ಅಯೋಧ್ಯೆಯು ಧಾರ್ಮಿಕ ಪ್ರಾಮುಖ್ಯತೆಯೊಂದಿಗೆ ಪ್ರತಿಧ್ವನಿಸುತ್ತಿದೆ. ಭಗವಾನ್ ರಾಮನ ಜನ್ಮಸ್ಥಳವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಈ ನಗರದ ಅಸ್ತಿತ್ವವು ಪ್ರಗತಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಜಟಿಲವಾಗಿ ಹೆಣೆಯಲ್ಪಟ್ಟಿರುವ ಒಂದು ಗಮನಾರ್ಹವಾದ ರೂಪಾಂತರ ಅಥವಾ ಪರಿವರ್ತನೆಗೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಉಪಕ್ರಮಗಳ ಎಚ್ಚರಿಕೆಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯು ನಗರದ ಪುನರುತ್ಥಾನಕ್ಕೆ ದಾರಿ ಮಾಡಿಕೊಟ್ಟಿದೆ, ಅದನ್ನು ಸಂಸ್ಕೃತಿ ಮತ್ತು ಸಮೃದ್ಧಿಯ ದಾರಿದೀಪವಾಗಿ ಪರಿವರ್ತಿಸಿದೆ.

ಅಯೋಧ್ಯೆಯ ಅಂಗಡಿ ಮಾಲೀಕ ರಾಜೇಶ್ ಕುಮಾರ್ ಗುಪ್ತಾ ಅವರು ರಾಮಮಂದಿರ ನಿರ್ಮಾಣದ ನಂತರ ತಮ್ಮ ಸಮೃದ್ಧಿಯ ಕಥೆಯನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನ ನಿರ್ಮಾಣಕ್ಕೂ ಮುನ್ನ ಅವರ ವಸ್ತುಗಳಿಗೆ ಅಷ್ಟೇನೂ ಬೇಡಿಕೆ ಇರಲಿಲ್ಲ. ಹಾಗಾಗಿ  ಅವರ ಆದಾಯ ಅಲ್ಪವಾಗಿತ್ತು ಎಂದು ಹೇಳಿದರು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಅಯೋಧ್ಯೆಯು ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ಕೇಂದ್ರವಾಯಿತು, ಇದು ಅವರ ಸರಕುಗಳಿಗೆ ಬೇಡಿಕೆಯನ್ನು ಹೆಚ್ಚಿಸಿತು, ತರುವಾಯ ಅವರ ಆದಾಯವು ಹೆಚ್ಚಾಗತೊಡಗಿದೆ. ಶ್ರೀ ಗುಪ್ತಾ ಅವರು ದಿನಕ್ಕೆ ಕೇವಲ 300-400 ರೂ. ಗಳಿಸುತ್ತಿದ್ದ.  ಆದರೆ ಭವ್ಯವಾದ ರಾಮಮಂದಿರ ನಿರ್ಮಾಣ ಘೋಷಿಸಿದ ನಂತರ, ಅವರ ಆದಾಯವು ದಿನಕ್ಕೆ 1000-1500 ರೂ.ಗೆ ಏರಿಕೆ ಆಗಿದೆ.

https://static.pib.gov.in/WriteReadData/userfiles/image/image001VWFD.jpg

 

ರಾಜೇಶ್ ಕುಮಾರ್ ಗುಪ್ತಾ, ಸ್ಥಳೀಯ ವರ್ತಕ

 ಅಯೋಧ್ಯೆಯ ರೂಪಾಂತರವು ದೇವಾಲಯ ಯೋಜನೆ ದಾಟಿ ವಿಸ್ತರಿಸಿದೆ. ಅಯೋಧ್ಯೆಯ ನಿವಾಸಿ ಶ್ರೀ ಶ್ಯಾಮ್ ಲಾಲ್ ದಾಸ್ ಹೇಳಿದಂತೆ, ಅಯೋಧ್ಯೆಯು ಸ್ವಚ್ಛತೆಯ ಸಂಕೇತವಾಗಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ, ಈಗ ನೀವು ಹೊಳೆಯುವ ಸ್ವಚ್ಛ ಬೀದಿಗಳು ಮತ್ತು ಅಂದವಾಗಿ ರೂಪಿಸಿದ ತೊಟ್ಟಿಗಳನ್ನು ನೋಡಬಹುದು, ಜಾಗರೂಕರಾಗಿರುವ ಅಯೋಧ್ಯೆ ನಗರ ನಿಗಮದ ನೌಕರರಿಗೆ ಧನ್ಯವಾದಗಳು". ಸುಧಾರಿತ ನೈರ್ಮಲ್ಯಕ್ಕೆ ಅಯೋಧ್ಯೆಯ ಬದ್ಧತೆಯನ್ನು ಸಂಕೇತಿಸುವ ಮೂಲಕ ಅವರು ಹತ್ತಿರದ ಸುಲಭ್ ಶೌಚಾಲಯ ಸಂಕೀರ್ಣವನ್ನು ಶ್ರೀ ದಾಸ್ ಅವರು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ.

https://static.pib.gov.in/WriteReadData/userfiles/image/image002N5M1.jpg

 

ಪಾಲ್ಟು ದಾಸ್ ಅಖಾರದ ಸಂತ ಶ್ರೀ ಆರ್.ಕೆ. ನಾಥ ಯೋಗಿ, ಸರಯು ನದಿಯ ಮೇಲಿನ ಘಟ್ಟ(ಘಾಟ್‌)ಗಳಲ್ಲಿ ಆಗಿರುವ ಪರಿವರ್ತನೆಯನ್ನು ವಿವರಿಸುತ್ತಾರೆ. ಈ ಹಿಂದೆ ಸುಸಜ್ಜಿತ ಘಾಟ್‌ಗಳು ಇರಲಿಲ್ಲ. ನದಿಯನ್ನು ತಲುಪಲು ಜನರು ಸಾಕಷ್ಟು ಹರಸಾಹಸ ಪಡಬೇಕಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ನದಿಯ ಸುತ್ತಲೂ ಸುಸಜ್ಜಿತ ಮೂಲಸೌಕರ್ಯ ನಿರ್ಮಿಸಲಾಗುತ್ತಿದೆ. "ಈ ಸ್ಥಳವು ಈಗ ಸ್ವರ್ಗವಾಗಿದೆ" ಎಂದು ಆರ್.ಕೆ. ನಾಥ ಯೋಗಿ ಭಾವುಕರಾಗಿ ಹೇಳಿದರು.

https://static.pib.gov.in/WriteReadData/userfiles/image/image003S3O4.jpg

ಆರ್.ಕೆ. ನಾಥ ಯೋಗಿ, ಪಲ್ತು ದಾಸ್ ಅಖಾರಾ ಸಂತ

ಐತಿಹಾಸಿಕ ಶ್ರೀರಾಮಮಂದಿರ ಉದ್ಘಾಟನೆಗೆ ಸಾಕ್ಷಿಯಾಗಲು ನಗರವು ಸಿದ್ಧವಾಗುತ್ತಿರುವಾಗ, ಈ ಸಾಕ್ಷ್ಯಗಳು ತೆರೆದ ತೋಳುಗಳಿಂದ ಬದಲಾವಣೆ ಸ್ವೀಕರಿಸಿದ ಸಮುದಾಯದ ಭಾವನೆಗಳನ್ನು ಪ್ರತಿಧ್ವನಿಸುತ್ತವೆ. ರಾಮಮಂದಿರವು ಕೇವಲ ಸ್ಮಾರಕವಾಗಿ ಅಥವಾ ಪೂಜಾ ಸ್ಥಳವಾಗಿ ಅಲ್ಲ, ಆದರೆ ಅಯೋಧ್ಯೆ ಮತ್ತು ಅಲ್ಲಿನ ಜನರ ಏಕೀಕೃತ ಪರಿವರ್ತನಾ ಯಾತ್ರೆಯ ಸಂಕೇತವಾಗಿ ಎತ್ತರದಲ್ಲಿ ನಿಂತಿದೆ.

 

*****

 


(Release ID: 1998556) Visitor Counter : 74


Read this release in: English , Urdu , Hindi