ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕಿಸಾನ್ ದಿವಸ ಆಚರಣೆ

Posted On: 24 DEC 2023 11:10AM by PIB Bengaluru

ಶ್ರೀ ಎಸ್ . ಮುನಿಸ್ವಾಮಿ ಸಂಸದರು, ಕೋಲಾರ ಇವರು ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ರಾಷ್ಟೀಯ ಕೃಷಿ ಕೀಟ ಸಂಶೋಧನಾ ಬ್ಯೂರೋ (NBAIR), ಬೆಂಗಳೂರನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತಿರುವುದು.

ರಾಷ್ಟೀಯ ಕೃಷಿ ಕೀಟ ಸಂಶೋಧನಾ ಬ್ಯೂರೋ (NBAIR), ಬೆಂಗಳೂರನಲ್ಲಿ ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ರೈತರಿಗೆ ಕೃಷಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ರಾಷ್ಟೀಯ ಕೃಷಿ ಕೀಟ ಸಂಶೋಧನಾ ಬ್ಯೂರೋ (NBAIR), ಬೆಂಗಳೂರನಲ್ಲಿ ಕಿಸಾನ್ ದಿವಸ 2023 ರ ಡಿಸೆಂಬರ್ 23 ರಂದು ಯಲಹಂಕ ಆವರಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಎಸ್. ಮುನಿಸ್ವಾಮಿ, ಸಂಸದರು, ಕೋಲಾರ ಪಾಲ್ಗೊಂಡಿದ್ದರು ಮತ್ತು ವಾಸ್ತವಿಕವಾಗಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಸಿರಿ ಧಾನ್ಯಗಳನ್ನು ಉತ್ಪಾದಿಸುವಲ್ಲಿ ಉತ್ತೇಜನ ನೀಡುವದು, ಬೆಳೆ ವೈವಿಧ್ಯತೆ ಮತ್ತು ರೈತರ ಉತ್ಪನ್ನ ಸಂಘಟನೆಯ (ಎಫ್‌ಪಿಒ) ಪ್ರಾಮುಖ್ಯತೆಯ ಅಂಶಗಳ ಮೇಲೆ ಒತ್ತು ನೀಡಿದರು. ಸರ್ಕಾರದ ಯೋಜನೆಗಳ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು. ಡಾ.ಎಸ್.ಎನ್. ಸುಶೀಲ್, ರಾಷ್ಟೀಯ ಕೃಷಿ ಕೀಟ ಸಂಶೋಧನಾ ಬ್ಯೂರೋದ ನಿರ್ದೇಶಕರು ಮಾತನಾಡಿ ರೈತರಿಗೋಸ್ಕರ ನಡೆದಿರುವ ಈ ಕಾರ್ಯಕ್ರಮದಲ್ಲಿ ರೈತರು ಜೈವಿಕ ಕೀಟ ನಿಯಂತ್ರಣದ ವಿಧಾನವನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುವದರ ಮೂಲಕ ರಾಸಾಯನಿಕ ಮುಕ್ತ ಕೃಷಿಯನ್ನು ಮಾಡಬೇಕೆಂದು ಕರೆಕೊಟ್ಟರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 100 ರೈತರು ಭಾಗವಹಿಸಿದರು ಮತ್ತು ಎಲ್ಲಾ ರೈತರಿಗೆ ಕೃಷಿ ಸಾಮಗ್ರಿಗಳನ್ನು ವಿತರಿಸಲಾಯಿತು.

*****

 

 

 


(Release ID: 1990027) Visitor Counter : 32


Read this release in: English