ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಬೆಂಗಳೂರಿನಲ್ಲಿ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ ನಾಳೆಯಿಂದ 21 ರವರೆಗೆ ನಡೆಯಲಿದೆ
ಪ್ರಕಟಣಾ ದಿನಾಂಕ:
14 DEC 2023 3:04PM by PIB Bengaluru
ಬೆಂಗಳೂರು ಜಿಲ್ಲಾ ನೆಹರು ಯುವ ಕೇಂದ್ರ, ಭಾರತ ಸರ್ಕಾರದ ಗೃಹ ಮಂತ್ರಾಲಯ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಇವರುಗಳ ಸಹಯೋಗಲ್ಲಿ 15ನೇ ಬುಡಕಟ್ಟು ಯುವ ವಿನಿಮಯ 15-12-2023 ರಿಂದ 21-12-2023 ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭವು ದಿನಾಂಕ 15-12-2023 ರಂದು ಮತ್ತು ಮುಕ್ತಾಯ ಸಮಾರಂಭವು ದಿನಾಂಕ 21-12-2023 ರಂದು ಬೆಂಗಳೂರಿನ ನೃಪತುಂಗಾ ರಸ್ತೆಯ ಯುವನಿಕಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸದರಿ ಕಾರ್ಯಕ್ರಮಕ್ಕೆ ಝಾರ್ಖಂಡ್, ಒಡಿಸಾ ರಾಜ್ಯಗಳ 200 ಯುವಜನರು ಮತ್ತು 20 ಜನ ಉಸ್ತುವಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ 220 ಯುವಜನರ ನಿಯೋಗ ಈ 07 ದಿನಗಳು ಬೆಂಗಳೂರಿನಲ್ಲಿ ಇದ್ದು, ಇಲ್ಲಿಯ ಕಲೆ, ಸಂಸ್ಕೃತಿ, ಆಚಾರ-ವಿಚಾರ, ರೀತಿ- ರಿವಾಜು. ಉಡುಗೆ-ತೊಡುಗೆ, ಆಹಾರ ಪದ್ಧತಿ, ಜೀವನ ಶೈಲಿ ಮುಂತಾದ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಾದ, ವಿಧಾನ ಸೌಧ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಕ್ರೀಡಾಂಗಣ, ಸಿಆರ್ಪಿಏಫ್ ಕ್ಯಾಂಪಸ್, ಬಯಪ್ಪನಹಳ್ಳಿಯ ನಮ್ಮ ಮೆಟ್ರೋ ಸ್ಟೇಷನ್, ಇಸ್ಕಾನ್ ಟೆಂಂಪಲ್ ಮುಂತಾದ ಸ್ಥಳಗಳಿಗೆ ಬೇಟಿ ನೀಡಲಿದ್ದಾರೆ.
ಕರ್ನಾಟಕ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಗೌರವನ್ವಿತ ಶ್ರೀ. ಬಿ. ನಾಗೇಂದವರು ದಿನಾಂಕ 15-12-2023 ರಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ. ಪಿ.ಸಿ. ಮೋಹನ್ ರವರು ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಸನ್ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ. ತೇಜಸ್ವಿ ಸೂರ್ಯ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಎನ್. ಮಂಜುನಾಥ್ ಪ್ರಸಾದ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಶ್ರೀ. ಎನ್. ಶಶಿಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿವಾಜಿನಗರ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ. ರಿಜವಾನ್ ಅರ್ಷದ್ ರವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ದಿನಾಂಕ 21-12-2023 ರಂದು ಬೆಳಿಗ್ಗೆ 11-00 ಗಂಟೆಗೆ ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು, ಮಾನ್ಯ ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. (ಪ್ರತ್ಯೇಕ ಆಹ್ವಾನ ಪತ್ರಿಕೆ ತಲುಪಿಸಲಾಗುವುದು)
ಕಾಶ್ಮೀರಿ ಯುವ ವಿನಿಮಯ ಕಾರ್ಯಕ್ರಮ ದಿನಾಂಕ 26-12-12023 ರಿಂದ 31-12-2023 ರವರೆಗೆ ಕೊಡಗು ಜಿಲ್ಲೆ ಗೋಣಿಕೊಪ್ಪದಲ್ಲಿ :-
ಭಾರತ ಸರ್ಕಾರದ ಗೃಹ ಮಂತ್ರಾಲಯ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ ಇವರುಗಳ ಸಹಯೋಗದಲ್ಲಿ ಕಾಶ್ಮೀರಿ ಯುವ ಮಿನಿಮಯ ಕಾರ್ಯಕ್ರಮವನ್ನು ದಿನಾಂಕ 26-12-2023 ರಿಂದ 31-12-2023 ರವರೆಗೆ ಕೊಡಗು ಜಿಲ್ಲೆ ಗೋಣಿಕೊಪ್ಪದ ಕೂರ್ಗ ಪಬ್ಲಿಕ್ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮಕ್ಕೆ ಜಮ್ಮು ಕಾಶ್ಮೀರದ 100 ಯುವಜನರು 20 ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ 120 ಯುವಜನರ ನಿಯೋಗ ಈ 06 ದಿನಗಳು ಕೊಡಗು ಜಿಲ್ಲೆಯಲ್ಲಿ ಇದ್ದು. ಇಲ್ಲಿಯ ಕಲೆ, ಸಂಸ್ಕೃತಿ, ಆಚಾರ-ವಿಚಾರ, ರೀತಿ- ರಿವಾಜು, ಉಡುಗೆ-ತೊಡುಗೆ, ಆಹಾರ ಪದ್ದತಿ, ಜೀವನ ಶೈಲಿ ಮುಂತಾದ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.
ದಿನಾಂಕ 26-12-2023 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ & ಕ್ರೀಡಾ ಸಚಿವರಾದ ಬಿ. ನಾಗೇಂದ್ರ ಉದ್ಘಾಟಿಸಲಿದ್ದು, ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಸಬಲೀಕರಣ & ಕ್ರೀಡಾ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಮಾರಂಭದ ಉದ್ಘಾಟನೆಯು ದಿನಾಂಕ 26-12-2023 ರಂದು ಮತ್ತು ಮುಕ್ತಾಯ ಸಮಾರಂಭ ದಿನಾಂಕ 31-12-2023 ರಂದು ಕೊಡಗು ಜಿಲ್ಲೆ ಗೋಣಿಕೊಪ್ಪ ಕೂರ್ಗ ಪಬ್ಲಿಕ್ ಶಾಲೆ ಆವರಣದಲ್ಲಿ ನಡೆಯಲಿದೆ. ಕರ್ನಾಟಕ ಘನವೆತ್ರ ಮಾನ್ಯ ರಾಜ್ಯಪಾಲರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷರು ಸಮಾರೋಪ ದಿನಾಂಕ 31-12-2023 ರಂದು ಕಾರ್ಯಕ್ರಮ ಮುಕ್ತಾಯಗೊಳ್ಳುವುದು.
ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮ ದಿನಾಂಕ 06-02-2024 ರಿಂದ 12-02-2024 ರವರೆಗೆ ಮೈಸೂರಿನಲ್ಲಿ:
ಮೈಸೂರು ಜಿಲ್ಲಾ ನೆಹರು ಯುವ ಕೇಂದ್ರ, ಭಾರತ ಸರ್ಕಾರದ ಗೃಹ ಮಂತ್ರಾಲಯ, ಯುವಜನ ವ್ಯವಹಾರ ಕ್ರೀಡಾ ಸಚಿವಾಲಯ ಇವರುಗಳ ಸಹಯೋಗಲ್ಲಿ 15ನೇ ಬುಡಕಟ್ಟು ಯುವ ವಿನಿಮಯ ಕಾರ್ಯಾಕ್ರಮವನ್ನು ದಿನಾಂಕ 06-02-2024 ರಿಂದ 12-02-2024 ರವರೆಗೆ ಮೈಸೂರಿನ ಮಾನಸ ಗಂಗೋತ್ರಿಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಲಾಗಿದೆ. ಸದರಿ ಕಾರ್ಯಕ್ರಮಕ್ಕೆ ಝಾರ್ಖಂಡ್, ಛತ್ತೀಸ್ಕಡ, ಜಿಹಾರ ಮತ್ತು ಒಡಿಸಾ ರಾಜ್ಯಗಳ 200 ಯುವಜನರು ಮತ್ತು 20 ಜನ ಉಸ್ತುವಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ 220 ಯುವಜನರ ನಿಯೋಗ ಈ 07 ದಿನಗಳು ಮೈಸೂರಿನಲ್ಲಿ ಇದ್ದು, ಇಲ್ಲಿಯ ಕಲೆ, ಸಂಸ್ಕೃತಿ, ಆಚಾರ-ವಿಚಾರ, ರೀತಿ- ರಿವಾಜು, ಉಡುಗೆ-ತೊಡುಗೆ, ಆಹಾರ ಪದ್ದತಿ, ಜೀವನ ಶೈಲಿ ಮುಂತಾದ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಮೈಸೂರಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು, ಜೆಎಸ್ಎಸ್ ಮಠ, ಇನ್ಫೋಸಿಸ್ ಕ್ಯಾಂಪಸ್ ಮುಂತಾದ ಸ್ಥಳಗಳಿಗೆ ಬೇಟಿ ನೀಡಲಿದ್ದಾರೆ.
ಈ ಸಮಾರಂಭದ ಉದ್ಘಾಟನೆಯು ದಿನಾಂಕ 06-02-2024 ರಂದು ಮತ್ತು ಮುಕ್ತಾಯ ಸಮಾರಂಭ ದಿನಾಂಕ 12-02-2024 ರಂದು ಮೈಸೂರಿನ ಮಾನಸ ಗಂಗೋತ್ರಿಯ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ. ಎಲ್ಲರಿಗೂ ಊಟ ವಸತಿ ವ್ಯವಸ್ಥೆ ಮಾಡಿಲಾಗಿದೆ. ದಿನಾಂಕ 12-02-2024 ರಂದು ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
****
(ಪ್ರಕಟಣೆ ಐ.ಡಿ.: 1986193)
ವಿಸಿಟರ್ ಕೌಂಟರ್ : 34