ಸಂಸದೀಯ ವ್ಯವಹಾರಗಳ ಸಚಿವಾಲಯ
ಯುವ ಸಂಸತ್ ಸ್ಪರ್ಧೆಗಳ ಪ್ರಯೋಜನಗಳು
Posted On:
11 DEC 2023 4:03PM by PIB Bengaluru
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯವು ದಿಲ್ಲಿ ಸರ್ಕಾರದ ಎನ್.ಸಿ.ಟಿ.ಯ ಶಿಕ್ಷಣ ನಿರ್ದೇಶನಾಲಯ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಹೊಸದಿಲ್ಲಿಯ ಮುನ್ಸಿಪಲ್ ಕೌನ್ಸಿಲ್, ಶಿಕ್ಷಣ ಇಲಾಖೆಯ ಅಡಿಯಲ್ಲಿ ಕೇಂದ್ರೀಯ ವಿದ್ಯಾಲಯಗಳು, ಜವಾಹರ್ ನವೋದಯ ವಿದ್ಯಾಲಯಗಳು ಮತ್ತು ವಿಶ್ವವಿದ್ಯಾಲಯಗಳು / ಕಾಲೇಜುಗಳಲ್ಲಿ ಆಯಾ ಯೋಜನೆಗಳ ಅಡಿಯಲ್ಲಿ ಪ್ರತಿ ವರ್ಷ ಸ್ಪರ್ಧೆಗಳನು ಆಯೋಜಿಸುತ್ತದೆ. ಶಿಕ್ಷಣ. ಯೋಜನೆಗಳ ಪ್ರಕಾರ, ಶಾಲೆಗಳಲ್ಲಿನ ಪ್ರತಿಯೊಂದು ಸ್ಪರ್ಧೆಗಳನ್ನು ಆಯಾ ಪೋಷಕ ಶಿಕ್ಷಣ ಸಂಸ್ಥೆಗಳಿಂದ ನಾಮನಿರ್ದೇಶನಗೊಂಡ ಶಾಲೆಗಳ ನಡುವೆ ಆಯೋಜಿಸಲಾಗುತ್ತದೆ, ಅಂದರೆ ಶಿಕ್ಷಣ ನಿರ್ದೇಶನಾಲಯ, ದಿಲ್ಲಿ ಸರ್ಕಾರದ ಎನ್ಸಿಟಿ ಮತ್ತು ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ ಶಿಕ್ಷಣ ಇಲಾಖೆ; ಕೇಂದ್ರೀಯ ವಿದ್ಯಾಲಯ ಸಂಘಟನೆ,; ಮತ್ತು ನವೋದಯ ವಿದ್ಯಾಲಯ ಸಮಿತಿಗಳು ತಮ್ಮ ಸಾಂಸ್ಥಿಕ ರಚನೆಗಳ ಪ್ರಕಾರ ಮತ್ತು ವಿಶ್ವವಿದ್ಯಾಲಯಗಳು / ಕಾಲೇಜುಗಳಲ್ಲಿ ಸ್ಪರ್ಧೆಯನ್ನು ಅದಕ್ಕಾಗಿ ಅರ್ಜಿ ಸಲ್ಲಿಸುವಂತಹ ವಿಶ್ವವಿದ್ಯಾಲಯಗಳು / ಕಾಲೇಜುಗಳ ನಡುವೆ ಆಯೋಜಿಸಲಾಗುತ್ತದೆ. ಮೇಲಿನ ಯಾವುದೇ ಸ್ಪರ್ಧೆಗಳನ್ನು ರಾಜ್ಯವಾರು ಆಯೋಜಿಸಲಾಗುವುದಿಲ್ಲ.
ಸ್ಪರ್ಧೆಗಳನ್ನು ಆಯೋಜಿಸುವುದರಿಂದಾಗುವ ಪ್ರಯೋಜನಗಳಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವುದು, ಶಿಸ್ತಿನ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸುವುದು, ಇತರರ ದೃಷ್ಟಿಕೋನಗಳ ಬಗ್ಗೆ ಸಹಿಷ್ಣುತೆ ಮೂಡಿಸುವುದು ಮತ್ತು ವಿದ್ಯಾರ್ಥಿ ಸಮುದಾಯವು ಸಂಸತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುವುದು ಸೇರಿವೆ.
ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ಆಯೋಜಿಸಲಾದ ವರ್ಷವಾರು ಯುವ ಸಂಸತ್ ಸ್ಪರ್ಧೆಗಳ ಸಂಖ್ಯೆ ಈ ಕೆಳಗಿನಂತಿದೆ:
ಕ್ರಮ ಸಂಖ್ಯೆ
|
ವರ್ಷ
|
ಯುವ ಸಂಸತ್ ಸ್ಪರ್ಧೆಗಳ ಸಂಖ್ಯೆ
|
-
|
2020-21
|
ಒಂದೂ ಇಲ್ಲ (ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ದೇಶದಲ್ಲಿ ಹರಡಿದ್ದರಿಂದ ನಡೆಸಲಾಗಿಲ್ಲ )
|
-
|
2021-22
|
ಒಂದೂ ಇಲ್ಲ (ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ದೇಶದಲ್ಲಿ ಹರಡಿದ್ದರಿಂದ ನಡೆಸಲಾಗಿಲ್ಲ )
|
-
|
2022-23
|
4
|
-
|
2023-24
(ಪ್ರಸಕ್ತ ವರ್ಷ )
|
3 (ನಡೆಯುತ್ತಿದೆ ) ಮತ್ತು 1 ಇನ್ನಷ್ಟೇ ಆರಂಭವಾಗಬೇಕಿದೆ.
|
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯವು ಈ ಕೆಳಗಿನ ಮಿತಿಗಳ ಪ್ರಕಾರ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ, ಈ ಪಾವತಿಗಳು ಸ್ಪರ್ಧೆಗಳು ಪೂರ್ಣಗೊಂಡ ನಂತರ ಖರ್ಚು ವೆಚ್ಚಗಳ ಬಗ್ಗೆ ವಿವರಗಳ ಸ್ವೀಕೃತಿಯನ್ನು ಅನುಸರಿಸಿ ಮಾಡಲ್ಪಡುತ್ತವೆ.
ಕ್ರಮ ಸಂಖ್ಯೆ
|
ಶಾಸಕಾಂಗದ ಬಲಾಬಲ
|
ಮರುಪಾವತಿಗಾಗಿರುವ ಗರಿಷ್ಠ ಮೊತ್ತ
|
a
|
100 ರವರೆಗೆ ಸದಸ್ಯರನ್ನು ಹೊಂದಿರುವ ಶಾಸಕಾಂಗಗಳು
|
ಪ್ರತಿ ಶಾಸಕಾಂಗಕ್ಕೆ ವಾರ್ಷಿಕ 3 ಲಕ್ಷ ರೂ.
|
b
|
100-200 ಸದಸ್ಯರನ್ನು ಹೊಂದಿರುವ ಶಾಸಕಾಂಗಗಳು
|
ಪ್ರತಿ ಶಾಸಕಾಂಗಕ್ಕೆ ವಾರ್ಷಿಕ 4 ಲಕ್ಷ ರೂ.
|
c
|
200 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಶಾಸಕಾಂಗಗಳು
|
ಪ್ರತಿ ಶಾಸಕಾಂಗಕ್ಕೆ ವಾರ್ಷಿಕ 5 ಲಕ್ಷ ರೂ.
|
d
|
ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳು
|
ಪ್ರತಿ ಕೇಂದ್ರಾಡಳಿತ ಪ್ರದೇಶಕ್ಕೆ ವರ್ಷಕ್ಕೆ 2 ಲಕ್ಷ ರೂ.
|
ಬಿಹಾರ ಸೇರಿದಂತೆ ಹೆಚ್ಚಿನ ರಾಜ್ಯಗಳಿಂದ ಯಾವುದೇ ಮರುಪಾವತಿಗೆ ಸಂಬಂಧಿಸಿದ ಕ್ಲೇಮುಗಳನ್ನು ನಿಗದಿಯಂತೆ ನಿಯಮಿತವಾಗಿ ಈ ಸಚಿವಾಲಯ ಸ್ವೀಕರಿಸಿಲ್ಲ..
ಕಳೆದ ಮೂರು ವರ್ಷಗಳಲ್ಲಿ ರಾಜ್ಯಗಳಿಗೆ ಒದಗಿಸಲಾದ ಆರ್ಥಿಕ ನೆರವಿನ ವಿವರಗಳು ಈ ಕೆಳಗಿನಂತಿವೆ:-
ಕ್ರಮ ಸಂಖ್ಯೆ
|
ಹಣಕಾಸು ವರ್ಷ
|
ರಾಜ್ಯಗಳು
|
|
1
|
2020-21
|
ಹಿಮಾಚಲ ಪ್ರದೇಶ
ಹರ್ಯಾಣ
ಮಧ್ಯಪ್ರದೇಶ
ಒಡಿಶಾ
|
3,00,000/-
2,96,063/-
5,00,000/-
3,26,343/-
|
2
|
2021-22
|
ಮಧ್ಯಪ್ರದೇಶ
|
4,91,022/-
|
3
|
2022-23
|
ಅನ್ವಯಿಸುವುದಿಲ್ಲ
|
ಶೂನ್ಯ / ಇಲ್ಲ
|
ಈ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವರು ಹಾಗು ಸಂಸದೀಯ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವರೂ ಆದ ಶ್ರೀ ವಿ ಮುರಳೀಧರನ್ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
****
(Release ID: 1985377)