ಕಲ್ಲಿದ್ದಲು ಸಚಿವಾಲಯ
ಉನ್ನತ ಗುಣಮಟ್ಟದ ಕಲ್ಲಿದ್ದಲು ಪೂರೈಕೆ; ಕಲ್ಲಿದ್ದಲು ಆಮದು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳು
प्रविष्टि तिथि:
06 DEC 2023 3:26PM by PIB Bengaluru
ವಿದೇಶದಿಂದ ಆಮದು ಮಾಡಿಕೊಳ್ಳುವ ಅತ್ಯಾಧುನಿಕ ಕಲ್ಲಿದ್ದಲಿನ ಸಮರ್ಪಕ ಪೂರೈಕೆಗಾಗಿ ಇಂದು ಸರಕಾರ ಖಾಸಗಿ ಕಂಪನಿಗಳನ್ನು ಅವಲಂಬಿತವಾಗಿಲ್ಲ. ಆದ್ದರಿಂದ, ಪ್ರಸ್ತುತ ಆಮದು ನೀತಿಯ ಪ್ರಕಾರ, ಕಲ್ಲಿದ್ದಲ್ಲನ್ನು ಮುಕ್ತ ಸಾರ್ವಜನಿಕ ಅನುಮತಿ (ಓಪನ್ ಜನರಲ್ ಲೈಸೆನ್ಸ್ - ಒ.ಜಿ.ಎಲ್) ಅಡಿಯಲ್ಲಿ ಮಾಡಲಾಗುತ್ತದೆ ಮತ್ತು ಗ್ರಾಹಕರು ತಮ್ಮ ಒಪ್ಪಂದದ ಬೆಲೆ ಮತ್ತು ಅನ್ವಯವಾಗುವ ಸುಂಕದ ಪಾವತಿಯಾಧಾರದಲ್ಲಿ ತಮ್ಮ ಆಯ್ಕೆಯ ಮೂಲದಿಂದ ಕಲ್ಲಿದ್ದಲ್ಲನ್ನು ಆಮದು ಮಾಡಿಕೊಳ್ಳಲು ಮುಕ್ತರಾಗಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಆಮದು ಮಾಡಿಕೊಂಡ ಕಲ್ಲಿದ್ದಲಿನ ಪ್ರಮಾಣ ಮತ್ತು ಮೌಲ್ಯವನ್ನು ಕೆಳಗೆ ನೀಡಲಾಗಿದೆ.
|
ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕಲ್ಲಿದ್ದಲ್ಲಿನ ಆಮದು
(ಮಿಲಿಯನ್ ಟನ್‌ಗಳಲ್ಲಿ - ಪ್ರಮಾಣ ಮತ್ತು ಮೌಲ್ಯಗಳು ಕೋಟಿ ರೂ.ಗಳಲ್ಲಿ)
|
|
ವರ್ಷಗಳು
|
ಆಂಥ್ರಾಸೈಟ್ ಕಲ್ಲಿದ್ದಲು
|
ಕೋಕಿಂಗ್
|
ನಾನ್-ಕೋಕಿಂಗ್
|
ಒಟ್ಟು
|
|
ಸಂಖ್ಯೆ
|
ಮೌಲ್ಯ
|
ಸಂಖ್ಯೆ
|
ಮೌಲ್ಯ
|
ಸಂಖ್ಯೆ
|
ಮೌಲ್ಯ
|
ಸಂಖ್ಯೆ
|
ಮೌಲ್ಯ
|
|
2018-19
|
1.83
|
2038.15
|
51.84
|
72049.76
|
181.68
|
96832.57
|
235.35
|
170920.49
|
|
2019-20
|
1.82
|
1804.15
|
51.83
|
61266.83
|
194.89
|
89661.07
|
248.54
|
152732.05
|
|
2020-21
|
1.96
|
1700.24
|
51.20
|
45355.21
|
162.09
|
68968.61
|
215.25
|
116024.05
|
|
2021-22
|
2.30
|
3402.39
|
57.16
|
102995.85
|
149.47
|
122343.61
|
208.93
|
228741.85
|
|
2022-23
|
2.02
|
4522.1.5
|
56.05
|
15383.99
|
181.62
|
229744.40
|
237.67
|
383584.38
|
|
2023-24
(ಸೆಪ್ಟೆಂಬರ್ 2023 ರವರೆಗೆ)
|
1.17
|
1984.21
|
29.39
|
62840.51
|
95.82
|
86678.2.03
|
125.21
|
149518.71
|
ಕಲ್ಲಿದ್ದಲು ಆಮದು ಕಡಿತಕ್ಕೆ ತೆಗೆದುಕೊಂಡ ಕ್ರಮಗಳನ್ನು ಕೆಳಗೆ ನೀಡಲಾಗಿದೆ:
(i) ಸ್ವ-ಅವಲಂಬನೆಯನ್ನು ಸಾಧಿಸಲು ಮತ್ತು ಆಮದು ಮಾಡಿಕೊಂಡ ಕಲ್ಲಿದ್ದಲಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಮುಖವಾದ ದೇಶೀಯ ಕಲ್ಲಿದ್ದಲು ಉತ್ಪಾದನೆಯ ವರ್ಧನೆಯ ಮೇಲೆ ಒತ್ತಡವಿದೆ. 2022-23ರಲ್ಲಿ ಕಲ್ಲಿದ್ದಲು ಉತ್ಪಾದನೆಯು ಹಿಂದಿನ ವರ್ಷಕ್ಕಿಂತ 14.77% ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಿ ನವೆಂಬರ್, 2023 ರವರೆಗಿನ ಅವಧಿಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶೀಯ ಕಲ್ಲಿದ್ದಲು ಉತ್ಪಾದನೆಯು 13% ಕ್ಕಿಂತ ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಉತ್ಪಾದನೆ ಗುರಿ 1012.14 ಮಿಲಿಯನ್ ಟನ್. ಅದೇ ರೀತಿ, 2025-26, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಕೇವಲ ಒಂದು ಬಿಲಿಯನ್ ಟನ್ ಉತ್ಪಾದಿಸಲಿದೆ
(ii) ಕಲ್ಲಿದ್ದಲಿನ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ತೆಗೆದುಕೊಂಡ ಪ್ರಮುಖ ಉಪಕ್ರಮಗಳು ಏಕಗವಾಕ್ಷಿ ತೆರವು, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 ರ ತಿದ್ದುಪಡಿಯನ್ನು ಒಳಗೊಂಡಿವೆ. ಅಂತಿಮ ಬಳಕೆಯ ಸ್ಥಾವರ, ಎಂ.ಡಿ.ಒ ಮಾದರಿಯ ಮೂಲಕ ಉತ್ಪಾದನೆ, ಮೇಲ್ಮೈ ಮೈನರ್ಸ್, ನಿರಂತರ ಗಣಿಗಾರ ಮುಂತಾದ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸುವುದು, ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳ ವಿಸ್ತರಣೆ ಮತ್ತು ಕಲ್ಲಿದ್ದಲು ಬ್ಲಾಕ್‌ಗಳನ್ನು ಖಾಸಗಿ ಕಂಪನಿಗಳು/ಪಿಎಸ್‌ಯುಗಳಿಗೆ ಹರಾಜು ಮಾಡುವುದು ಮುಂತಾದವುಗಳನ್ನು ಒಳಗೊಂಡಿವೆ. ವಾಣಿಜ್ಯ ಗಣಿಗಾರಿಕೆಗೆ 100% ವಿದೇಶಿ ನೇರ ಹೂಡಿಕೆಯನ್ನು ಅನುಮತಿಸಲಾಗಿದೆ. ಈ ಎಲ್ಲಾ ಉಪಕ್ರಮಗಳು ಉತ್ಪಾದನೆಯ ವರ್ಧನೆ ಮತ್ತು ಆಮದು ಕಡಿತಕ್ಕೆ ಕಾರಣವಾಯಿತು. ಹರಾಜು ವಿಧಾನ / ವಾಣಿಜ್ಯ ಕಲ್ಲಿದ್ದಲು ಹರಾಜು ಮೂಲಕ ಉತ್ಪಾದನೆಯನ್ನು ಪ್ರಾರಂಭಿಸದಿದ್ದರೆ, ಸಿ.ಎ.ಜಿ.ಆರ್. ಬೆಳವಣಿಗೆ ದರದ ಪ್ರಕಾರ ನಾವು 150.00 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಬೇಕಾಗಿತ್ತು ಆದರೆ ನಾವು 23-24. ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಕೇವಲ 125.21 ಮಿಲಿಯನ್ ಟನ್ ಆಮದು ಮಾಡಿಕೊಂಡಿದ್ದೇವೆ.
(iii) ಕೇಂದ್ರ ಕಲ್ಲಿದ್ದಲು ಸಚಿವಾಲಯ, ಕೇಂದ್ರ ವಿದ್ಯುತ್ ಸಚಿವಾಲಯ, ಕೇಂದ್ರ ರೈಲ್ವೇ ಸಚಿವಾಲಯ, ಕೇಂದ್ರ ಶಿಪ್ಪಿಂಗ್ ಸಚಿವಾಲಯ, ಕೇಂದ್ರ ವಾಣಿಜ್ಯ ಸಚಿವಾಲಯ, ಕೇಂದ್ರ ಉಕ್ಕು ಸಚಿವಾಲಯ, ಕೇಂದ್ರ ಸರ್ಕಾರದ ಿತರ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಕಲ್ಲಿದ್ದಲು ಆಮದು ಪರ್ಯಾಯದ ಉದ್ದೇಶಕ್ಕಾಗಿ ಅಂತರ-ಸಚಿವಾಲಯ ಸಮಿತಿ (ಐ.ಎಂ.ಸಿ) ಅನ್ನು ರಚಿಸಲಾಗಿದೆ. ಕೇಂದ್ರ ಗಣಿಗಳ ಸಚಿವಾಲಯ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂ.ಎಸ್.ಎಂ.ಇ), ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ), ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ), ಕೋಲ್ ಇಂಡಿಯಾ ಲಿಮಿಟೆಡ್, ಎಸ್.ಸಿ.ಸಿ.ಎಲ್, ಪಾರಾದೀಪ್ ಪೋರ್ಟ್ ಟ್ರಸ್ಟ್, ವಿಶಾಖಪಟ್ಟಣಂ ಪೋರ್ಟ್ ಟ್ರಸ್ಟ್ ಮತ್ತು ಕೋಲ್ಕತ್ತಾ ಬಂದರು ಇವುಗಳಲ್ಲಿ ಸೇರಿವೆ. ಕಲ್ಲಿದ್ದಲಿನ ಆಮದನ್ನು ತೊಡೆದುಹಾಕಲು ಆಯಾ ವಲಯದ ಕಲ್ಲಿದ್ದಲು ಗ್ರಾಹಕರನ್ನು ಉತ್ತೇಜಿಸಲು ಮಾರ್ಗದರ್ಶನ ನೀಡಲು ಈ ಸಮಿತಿಯು ಆಡಳಿತಾತ್ಮಕವಾಗಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳೊಂದಿಗೆ ಉನ್ನತ ಹಂತದ ವೇದಿಕೆಯಲ್ಲಿ ಚರ್ಚೆಮಾಡಲಿವೆ.
ಈಗ, ದೇಶದಲ್ಲಿ ಕಲ್ಲಿದ್ದಲಿನ ಬಹುಪಾಲು ಅಗತ್ಯವನ್ನು ದೇಶೀಯ ಉತ್ಪಾದನೆಯ ಮೂಲಕ ಪೂರೈಸಲಾಗುತ್ತದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಬಳಸುವ ಕೋಕಿಂಗ್ ಕಲ್ಲಿದ್ದಲು, ಆಂಥ್ರಾಸೈಟ್ ಮತ್ತು ಕಡಿಮೆ ಬೂದಿ ಥರ್ಮಲ್ ಕಲ್ಲಿದ್ದಲುಗಳಂತಹ ಕೆಲವು ಉನ್ನತ ದರ್ಜೆಯ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅವುಗಳ ದೇಶೀಯ ಉತ್ಪಾದನೆಯು ಅಷ್ಟಾಗಿ ಲಭ್ಯವಿಲ್ಲ. ಕಲ್ಲಿದ್ದಲಿನ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ದೇಶದಲ್ಲಿ ಕಲ್ಲಿದ್ದಲಿನ ಅನಿವಾರ್ಯವಲ್ಲದ ಆಮದನ್ನು ತೊಡೆದುಹಾಕುವುದು ಸರ್ಕಾರದ ಮುಖ್ಯ ಹಾಗೂ ತುರ್ತು ಗಮನವಾಗಿದೆ.
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
****
(रिलीज़ आईडी: 1983197)
आगंतुक पटल : 86