ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐ ಎಫ್ ಎಫ್ ಐ 54 ರಲ್ಲಿ 'ಕಾಂತಾರ' ಚಿತ್ರಕ್ಕಾಗಿ ಭಾರತೀಯ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಖ್ಯಾತ ಭಾರತೀಯ ಚಲನಚಿತ್ರ ನಿರ್ದೇಶಕ, ನಟ ಮತ್ತು ಬರಹಗಾರ ರಿಷಬ್ ಶೆಟ್ಟಿ ಅವರು ಪ್ರತಿಷ್ಠಿತ 54 ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ ಎಫ್ ಎಫ್ ಐI) 'ಕಾಂತಾರ' ಚಿತ್ರದ ಅವರ ಅದ್ಭುತ ಕೆಲಸಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು.
ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಾಂತಾರ ಚಾಪ್ಟರ್ -1 ಫಸ್ಟ್ ಲುಕ್ ಟ್ರೇಲರ್ ಅನಾವರಣ ಮಾಡಲಾಯಿತು. ಟ್ರೇಲರ್ ಗೆ ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆಯಾಯಿತು.
"ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ನನಗೆ ನೀಡಿದ ಪ್ರೀತಿ ಮತ್ತು ಗೌರವದಿಂದ ನಾನು ವಿನಮ್ರನಾಗಿದ್ದೇನೆ" ಎಂದು ರಿಷಬ್ ಶೆಟ್ಟಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ತಮ್ಮ ಚಲನಚಿತ್ರ ನಿರ್ಮಾಣದ ತತ್ವವನ್ನು ಹಂಚಿಕೊಂಡ ಶೆಟ್ಟಿ, "ನನ್ನ ಚಿತ್ರಗಳು ತಮ್ಮಷ್ಟಕ್ಕೆ ತಾವೇ ಮಾತನಾಡಲು ಅವಕಾಶ ಪಡೆಯುತ್ತವೆ ಎಂದು ನಾನು ನಂಬುತ್ತೇನೆ; ಕಡಿಮೆ ಮಾತನಾಡಿದಷ್ಟೂ ಯಶಸ್ಸು ಹೆಚ್ಚಾಗಿರುತ್ತದೆ." ಎಂದು ಹೇಳಿದರು. 'ಕಾಂತಾರ' ಪ್ರೇಕ್ಷಕರೊಂದಿಗೆ ಅನುರಣಿಸುವುದನ್ನು ಮುಂದುವರೆಸುತ್ತಿದ್ದಂತೆ ಅವರ ವಿನಮ್ರತೆ ಮತ್ತು ಕುಶಲತೆಯ ಬಗೆಗಿನ ಸಮರ್ಪಣೆಯೂ ಮಿಂಚುತ್ತದೆ.
ಭಾರತೀಯ ಸಿನಿಮಾದ ಜಾಗತಿಕ ವಿಸ್ತರಣೆಯ ಬಗ್ಗೆ ಮಾತನಾಡಿದ ಶೆಟ್ಟಿ, "ಭಾರತೀಯ ಸಿನಿಮಾ ನಿಜವಾಗಿಯೂ ಜಾಗತಿಕವಾಗಿದೆ. ಇದು ಭಾರತದಿಂದ ಹುಟ್ಟಿಕೊಂಡ ಅಸಾಧಾರಣ ಕಥಾವಸ್ತುವಿನ ನೇರ ಪರಿಣಾಮವಾಗಿದೆ." ಎಂದರು.
ಕನ್ನಡ ಚಿತ್ರರಂಗದ ಸಾರ್ವತ್ರಿಕ ಆಕರ್ಷಣೆಯ ಬಗ್ಗೆ ಒತ್ತಿಹೇಳಿದ ಅವರು, ಭಾಷಾ ಅಡೆತಡೆಗಳನ್ನು ಮೀರುವ ಸಾಮರ್ಥ್ಯವನ್ನು ಇದು ಹೊಂದಿದೆ. ‘ಕಾಂತಾರʼಕ್ಕೆ ಸಿಕ್ಕ ಅಗಾಧ ಪ್ರತಿಕ್ರಿಯೆ ಈ ಒಳಗೊಳ್ಳುವಿಕೆಗೆ ಸಾಕ್ಷಿ ಎಂದು ಹೇಳಿದರು.
ಜನರೊಂದಿಗಿನ ಸಂಪರ್ಕದಲ್ಲಿ ಆಳವಾಗಿ ಬೇರೂರಿರುವ ರಿಷಬ್ ಶೆಟ್ಟಿ, "ನನ್ನ ಚಲನಚಿತ್ರಗಳು ವೈಯಕ್ತಿಕವಾಗಿ ನಮ್ಮನ್ನು ಬಂಧಿಸುವ ಕಥೆಗಳು ಮತ್ತು ಭಾವನೆಗಳ ವಿಸ್ತರಣೆಯಾಗಿದೆ" ಎಂದು ಹೇಳಿದರು.
ರಿಷಬ್ ಶೆಟ್ಟಿ ನಿರ್ದೇಶನದ ಪರಿಣತಿಗೆ ತೀರ್ಪುಗಾರರು ನೀಡಿರುವ ಮನ್ನಣೆಯು ಸ್ಥಳೀಯ ಸಂಸ್ಕೃತಿಯಲ್ಲಿ ಬೇರೂರುತ್ತಲೇ, ಸಾಂಸ್ಕೃತಿಕ ಮತ್ತು ಸಾಮಾಜಿಕ ಗಡಿಗಳನ್ನು ಮೀರಿ ಸಾರ್ವತ್ರಿಕವಾಗಿ ಪ್ರತಿಧ್ವನಿಸುವ ಅವರ ನಿರೂಪಣಾ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. 'ಕಾಂತಾರ' ಕಾಲ್ಪನಿಕ ಹಳ್ಳಿಯೊಳಗೆ ಮನುಷ್ಯರು ಮತ್ತು ಪ್ರಕೃತಿಯ ನಡುವಿನ ಸೈದ್ಧಾಂತಿಕ ಸಂಘರ್ಷವನ್ನು ಹೇಳುತ್ತದೆ, ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಘರ್ಷಣೆಯ ಪ್ರಬಲ ಸಂದೇಶವನ್ನು ನೀಡುತ್ತದೆ.
ರಿಷಬ್ ಶೆಟ್ಟಿ ಅವರಿಗೆ ನೀಡಲಾದ ಪ್ರತಿಷ್ಠಿತ ಪ್ರಶಸ್ತಿಯು ಸಿಲ್ವರ್ ಪೀಕಾಕ್ ಪದಕ, ರೂ 15 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.
****
(Release ID: 1980778)
Visitor Counter : 136