ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

​​​​​​​“ಇಶಾ(ಈಶ) ಇನ್ ಸೈಟ್ – ದಿ ಡಿಎನ್ಎ ಆಫ್ ಸಕ್ಸಸ್” ಕಾರ್ಯಕ್ರಮಲ್ಲಿ ಭಾಗವಹಿಸಲಿರುವ ಸಚಿವ ರಾಜೀವ್ ಚಂದ್ರಶೇಖರ್

Posted On: 22 NOV 2023 12:28PM by PIB Bengaluru

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಗುರುವಾರ ಕೊಯಮತ್ತೂರಿನಲ್ಲಿ "ಇಶಾ(ಈಶ) ಇನ್ ಸೈಟ್ – ದಿ ಡಿಎನ್ಎ ಆಫ್ ಸಕ್ಸಸ್" 12ನೇ ಆವೃತ್ತಿಯಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸಚಿವರು ಶ್ರೀ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಅನೌಪಚಾರಿಕ ಸಂವಾದ ನಡೆಸಲಿದ್ದಾರೆ, ಉದ್ಯಮ ವ್ಯವಹಾರಗಳನ್ನು ಹೇಗೆ ಹೆಚ್ಚಿಸುವುದು, ಸ್ಟಾರ್ಟಪ್‌ಗಳಿಗೆ ಪೂರಕ ವಾತಾವರಣ ಸೃಷ್ಟಿಸುವುದು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಹೇಗೆ ಕೊಡುಗೆ ನೀಡುವುದು ಸೇರಿದಂತೆ ನಾನಾ ವಿಷಯಗಳ ಒಳನೋಟಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಕಾರ್ಯಕ್ರಮದ ವಿಷಯ ವಸ್ತು(ಥೀಮ್‌)ವಿಗೆ ಹೊಂದಿಕೊಂಡಂತೆ, ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು 2014ರಿಂದ ಉದ್ಯಮಶೀಲತೆ-ಸ್ನೇಹಿ ಪರಿಸರ ವ್ಯವಸ್ಥೆ ನಿರ್ಮಿಸುವ ಹಾದಿಯಲ್ಲಿ ಭಾರತದ ಪಯಣ ಕುರಿತು ಮಾತನಾಡಲಿದ್ದಾರೆ. ಸ್ಟಾರ್ಟಪ್‌ಗಳು ಮತ್ತು ಯುವ ಸಮುದಾಯ ಹೇಗೆ ತಮ್ಮದೇ ಆದ ವಿಭಿನ್ನ ಮಾರ್ಗಗಳನ್ನು ರೂಪಿಸುತ್ತಿದ್ದಾರೆ, ಮುಕ್ತವಾಗಿರುವ ವಿಫುಲ ಅವಕಾಶಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಸಚಿವರು ಮಾತನಾಡುತ್ತಾರೆ. ತಂತ್ರಜ್ಞಾನ ವಲಯದಲ್ಲಿ ಅವರಿಗಿರುವ ಅಪಾರ ಅನುಭವ, ಇಂಟೆಲ್‌ನ ಮಾಜಿ ಚಿಪ್ ಡಿಸೈನರ್ ಮತ್ತು ಬಿಪಿಎಲ್ ಮೊಬೈಲ್‌ ಸಂಸ್ಥಾಪಕರಾಗಿ, ಉದ್ಯಮಿಯಾಗಿ ಸಚಿವರು ತಮ್ಮ ಗಾಢ ಅನುಭವವನ್ನು ಉದ್ಯಮ ಮುಖಂಡರು ಮತ್ತು ಉದ್ಯಮಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ತಂತ್ರಜ್ಞಾನ ವಲಯದ ಉದ್ಯಮಿಯಾಗಿ ಶ್ರೀ ರಾಜೀವ್ ಚಂದ್ರಶೇಖರ್ ಅವರು, ತಮಿಳುನಾಡಿನಲ್ಲಿ ಮೊಟ್ಟಮೊದಲು  ದೊಡ್ಡ ವೈರ್‌ಲೆಸ್ ಜಾಲ ಸ್ಥಾಪಿಸಿದ್ದರು. ಸಚಿವ ರಾಜೀವ್ ಚಂದ್ರಶೇಖರ್ ಅವರು ಸಂಸದರಾಗಿ ತಮ್ಮ ಅನುಭವದ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೆ, ಭಾರತದ ತಂತ್ರಜ್ಞಾನ ವಲಯದ ನೀತಿಗಳನ್ನು ರೂಪಿಸುವ ವಿಚಾರದ ಮೇಲೆ ಗಮನ ಕೇಂದ್ರೀಕರಿಸಲಿದ್ದಾರೆ.

"ಇನ್ ಸೈಟ್: ದಿ ಡಿಎನ್ಎ ಆಫ್ ಸಕ್ಸಸ್" ಎನ್ನುವುದು ಸಿಇಒಗಳು/ಸಿಎಕ್ಸ್‌ಒಗಳು ಮತ್ತು ಉದ್ಯಮಿಗಳಿಗೆ 4 ದಿನಗಳ ನಡೆಯುವ ಉದ್ಯಮ ವ್ಯವಹಾರ ನಾಯಕತ್ವದ ತೀವ್ರತೆಯುಳ್ಳ ಕಾರ್ಯಕ್ರಮವಾಗಿದೆ, ಇದನ್ನು ಎಲ್‌ಎಸ್‌ಎ ಲೀಡರ್‌ಶಿಪ್ ಅಕಾಡೆಮಿ ಆಯೋಜಿಸುತ್ತಿದೆ. ಇದು ಉದ್ಯಮಶೀಲರ ಉದ್ಯಮ ವ್ಯವಹಾರವನ್ನು ಅಳೆಯುವ ಅಥವಾ ಮಾಪನ ಮಾಡುವ ವಿಜ್ಞಾನವನ್ನು ಪರಿಶೋಧಿಸುತ್ತದೆ.


***


(Release ID: 1978780) Visitor Counter : 114


Read this release in: English , Urdu , Hindi , Tamil