ರಾಷ್ಟ್ರಪತಿಗಳ ಕಾರ್ಯಾಲಯ
ಡೊಮಿನಿಕನ್ ರಿಪಬ್ಲಿಕ್ ನ ಉಪಾಧ್ಯಕ್ಷರಿಂದ ರಾಷ್ಟ್ರಪತಿಗಳ ಭೇಟಿ
Posted On:
03 OCT 2023 12:42PM by PIB Bengaluru
ಡೊಮಿನಿಕನ್ ರಿಪಬ್ಲಿಕ್ ದೇಶದ ಉಪಾಧ್ಯಕ್ಷರಾದ ಶ್ರೀಮತಿ ರಾಕ್ವೆಲ್ ಪೆನಾ ರೋಡ್ರಿಗಸ್ ಅವರು ಇಂದು (ಅಕ್ಟೋಬರ್ 3, 2023) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
ಭಾರತಕ್ಕೆ ನೀಡುತ್ತಿರುವ ಚೊಚ್ಚಲ ಭೇಟಿಯಲ್ಲಿ ಉಪಾಧ್ಯಕ್ಷರನ್ನು ಸ್ವಾಗತಿಸಿದ ರಾಷ್ಟ್ರಪತಿಗಳು, ಭಾರತ ಮತ್ತು ಡೊಮಿನಿಕನ್ ರಿಪಬ್ಲಿಕ್ ತಮ್ಮ ರಾಜತಾಂತ್ರಿಕ ಸಂಬಂಧಗಳ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಭೇಟಿಯು ತುಂಬಾ ಸೂಕ್ತವಾಗಿದೆ ಎಂದು ಹೇಳಿದರು. ಉಭಯ ದೇಶಗಳ ನಡುವಿನ ಪ್ರಜಾಪ್ರಭುತ್ವದ ಹಂಚಿಕೆಯ ಮೌಲ್ಯಗಳ ಬಲವಾದ ಅಡಿಪಾಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ವಿಶಾಲವಾದ ಒಮ್ಮುಖದ ಆಧಾರದ ಮೇಲೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮಧುರ ಮತ್ತು ಸ್ನೇಹಪರವಾಗಿವೆ ಎಂದು ಅವರು ಹೇಳಿದರು.
ಲ್ಯಾಟಿನ್ ಅಮೆರಿಕದಲ್ಲಿ ಡೊಮಿನಿಕನ್ ರಿಪಬ್ಲಿಕ್ ಭಾರತದ 8ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ರಾಷ್ಟ್ರಪತಿಗಳು ಹೇಳಿದರು. ವ್ಯವಹಾರದಲ್ಲಿ ಮತ್ತಷ್ಟು ವೈವಿಧ್ಯತೆಯ ಸಾಮರ್ಥ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಔಷಧೀಯ ಉತ್ಪನ್ನಗಳು, ಸಾಗರ ವಿಜ್ಞಾನ, ಹವಾಮಾನ, ವಿಪತ್ತು ನಿರೋಧಕ ಮೂಲಸೌಕರ್ಯ ಮತ್ತು ಡಿಜಿಟಲ್ ಪಾವತಿ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ನಮ್ಮ ಅನುಭವ ಮತ್ತು ಪರಿಣತಿಯನ್ನು ಒಟ್ಟಿಗೆ ಕೆಲಸ ಮಾಡಲು ಮತ್ತು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.
ಭಾರತ-ಡೊಮಿನಿಕನ್ ರಿಪಬ್ಲಿಕ್ ಸಹಕಾರದ ಕೇಂದ್ರ ಸ್ತಂಭಗಳಲ್ಲಿ ಸಾಮರ್ಥ್ಯ ನಿರ್ಮಾಣವು ಒಂದು ಎಂದು ರಾಷ್ಟ್ರಪತಿಗಳು ಹೇಳಿದರು. ಇತ್ತೀಚೆಗೆ ಭಾರತವು ಡೊಮಿನಿಕನ್ ರಿಪಬ್ಲಿಕ್ ನ ಅಧಿಕಾರಿಗಳಿಗೆ ಸೈಬರ್ ಸೆಕ್ಯುರಿಟಿ ಮತ್ತು ರಿಮೋಟ್ ಸೆನ್ಸಿಂಗ್ ನ ನಿರ್ಣಾಯಕ ಕ್ಷೇತ್ರಗಳಲ್ಲಿ ಎರಡು ವಿಶೇಷ ಐಟಿಇಸಿ ತರಬೇತಿ ಕೋರ್ಸ್ ಗಳನ್ನು ನಡೆಸಿದೆ ಎನ್ನುವ ವಿಷಯ ತಿಳಿದು ಸಂತೋಷಪಟ್ಟರು ಎಂದರು.
ಭಾರತ-ಡೊಮಿನಿಕನ್ ರಿಪಬ್ಲಿಕ್ ಸಹಕಾರದ ಕೇಂದ್ರ ಸ್ತಂಭಗಳಲ್ಲಿ ಸಾಮರ್ಥ್ಯ ನಿರ್ಮಾಣವು ಒಂದು ಎಂದು ಅಧ್ಯಕ್ಷರು ಹೇಳಿದರು. ಇತ್ತೀಚೆಗೆ ಭಾರತವು ಡೊಮಿನಿಕನ್ ರಿಪಬ್ಲಿಕ್ ಅಧಿಕಾರಿಗಳಿಗೆ ಸೈಬರ್ ಭದ್ರತೆ ಮತ್ತು ರಿಮೋಟ್ ಸೆನ್ಸಿಂಗ್ನ ನಿರ್ಣಾಯಕ ಕ್ಷೇತ್ರಗಳಲ್ಲಿ ಎರಡು ವಿಶೇಷ ITEC ತರಬೇತಿ ಕೋರ್ಸ್ ಗಳನ್ನು ಆಯೋಜಿಸಿದೆ ಎಂದು ತಿಳಿದು ಅವರು ಸಂತೋಷಪಟ್ಟರು.
ಭಾರತ ಮತ್ತು ಡೊಮಿನಿಕನ್ ರಿಪಬ್ಲಿಕ್ ನಡುವಿನ ನಿರಂತರ ವಿನಿಮಯ ಮತ್ತು ಸಂಪರ್ಕಗಳು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಉಭಯ ನಾಯಕರು ಹೇಳಿದರು .
****
(Release ID: 1963631)
Visitor Counter : 108