ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ನೈರ್ಮಲ್ಯ ಕಾರ್ಮಿಕರ ಆರೋಗ್ಯ ಮತ್ತು ಸಮರ್ಪಣೆಯನ್ನು ಸ್ವಚ್ಛತಾ ಪಾಕ್ಷಿಕ(ಸ್ವಚ್ಛತಾ ಪಖವಾಡ)ದ ಸಂದರ್ಭದಲ್ಲಿ ಆಚರಿಸಲಾಯಿತು
Posted On:
21 SEP 2023 5:34PM by PIB Bengaluru
ನಮ್ಮ ಸಮಾಜದ ಹಾಗೂ ವಸಾಹತುಗಳ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡುವಲ್ಲಿ, ನಮ್ಮ ಬೀದಿಗಳನ್ನು ಶ್ರದ್ಧೆಯಿಂದ ಸ್ವಚ್ಛಗೊಳಿಸುವಲ್ಲಿ, ತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಮತ್ತು ದಿನನಿತ್ಯದ ನೈರ್ಮಲ್ಯ ಸೌಲಭ್ಯಗಳನ್ನು ನಿರ್ವಹಿಸುವಲ್ಲಿ ನೈರ್ಮಲ್ಯ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ದೈನಂದಿನ ಬೇಡಿಕೆಯ ಜವಾಬ್ದಾರಿಯು ಆಗಾಗ್ಗೆ ಹಾಗೂ ಅವರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಅವರ ಕೆಲಸ ದುಷ್ಪರಿಣಾಮ ಉಂಟುಮಾಡುತ್ತದೆ. ಶ್ರಮದಾಯಕ ದೈಹಿಕ ಶ್ರಮ, ಅಪಾಯಕಾರಿ ವಸ್ತುಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದು ಅವರ ಪಾಲಿಗೆ ದೀರ್ಘ ಗಂಟೆಗಳ ಕಾಲ ಆಯಾಸ ಮತ್ತು ಒತ್ತಡಕ್ಕೆ ಕಾರಣವಾಗಬಹುದು. ನಮ್ಮ ಸಾಮೂಹಿಕ ನೈರ್ಮಲ್ಯದ ಭಾರವನ್ನು ಹೊತ್ತ ಈ ಗುರುತಿಸದ ವೀರರು ತಮ್ಮ ಜೀವನದಲ್ಲಿ ವಿಶ್ರಾಂತಿ ಮತ್ತು ಆನಂದದ ಕ್ಷಣಗಳಿಗೆ ಅರ್ಹರಾಗಿರುವುದು ನ್ಯಾಯಯುತವಾಗಿದೆ. ನಮ್ಮ ಸಮುದಾಯಗಳು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿರುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರು ವಹಿಸುವ ಪ್ರಮುಖ ಪಾತ್ರವನ್ನು ಅಂಗೀಕರಿಸುವ ನಿಟ್ಟಿನಲ್ಲಿ ಅವರಿಗೆ ಸ್ವಲ್ಪ ವಿರಾಮಗಳು ಮತ್ತು ಮೋಜಿನ ಚಟುವಟಿಕೆಗಳಿಗೆ ಅವಕಾಶಗಳನ್ನು ಒದಗಿಸುವುದು, ಅವರ ಉತ್ಸಾಹವನ್ನು ಪುನರ್ಯೌವನಗೊಳಿಸುವುದು ನಮ್ಮಕರ್ತವ್ಯವಾಗಿದೆ.
ಈ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಮತ್ತು ನೈರ್ಮಲ್ಯ ಕಾರ್ಮಿಕರ ಯೋಗಕ್ಷೇಮವನ್ನು ಸುಧಾರಿಸುವ ಉದ್ದೇಶದಿಂದ, ಕರ್ನಾಟಕದಲ್ಲಿ ಗದಗ-ಬೆಟಗೇರಿ ಜಿಲ್ಲೆಯಲ್ಲಿ ಸೆ.18 ಮತ್ತು ಸೆ.19, 2023 ರಂದು ಭಾರತೀಯ ಸ್ವಚ್ಛತಾ ಲೀಗ್ ಮತ್ತು ಪೌರಕಾರ್ಮಿಕ ದಿನಾಚರಣೆಯ ಸಂಯೋಜಿತವಾಗಿ ಸರಣಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕ್ರಿಕೆಟ್, ಕಬಡ್ಡಿ, 100 ಮೀಟರ್ ಓಟ, ಮತ್ತು ಶಕ್ತಿ ಪರೀಕ್ಷೆ ಶಾಟ್‌ಪುಟ್ ಸೇರಿದಂತೆ ಪುರುಷ ನೈರ್ಮಲ್ಯ ಕಾರ್ಯಕರ್ತರಿಗಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳು ಅವರ ದೈಹಿಕ ಸಾಮರ್ಥ್ಯವನ್ನು ಎತ್ತಿ ತೋರಿಸುವುದಲ್ಲದೆ, ಭಾಗವಹಿಸುವವರಲ್ಲಿ ಸೌಹಾರ್ದತೆ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸಿದವು. ಈ ಅಥ್ಲೆಟಿಕ್ ಸ್ಪರ್ಧೆಗಳ ಜೊತೆಗೆ, ಟಗ್ ಆಫ್ ವಾರ್, ಮ್ಯೂಸಿಕಲ್ ಚೇರ್ ಮತ್ತು ಲೆಮನ್ ಸ್ಪೂನ್ ಸ್ಪರ್ಧೆಗಳಂತಹ ಅಂತರ್ಗತ ಆಟಗಳು ಈವೆಂಟ್‌ಗೆ ವಿನೋದ ಮತ್ತು ಮನೋರಂಜನೆಗಳು ಸಂತಸದ ಸ್ಪರ್ಶ ನೀಡಿದವು. ಮಹಿಳಾ ನೈರ್ಮಲ್ಯ ಕಾರ್ಯಕರ್ತರಿಗೆ ಆಟದ ಸಂತೋಷದಲ್ಲಿ ವಿಶ್ರಾಂತಿ ಪಡೆಯಲು ಮತ್ತು ಸ್ವಲ್ಪ ವಿರಾಮದಲ್ಲಿರಲು ಅವಕಾಶ ಮಾಡಿಕೊಟ್ಟಿತು. ಅವರ ಜೀವನದಲ್ಲಿ ವಿರಾಮ ಮತ್ತು ಮನರಂಜನೆಯ ಕ್ಷಣಗಳ ಪ್ರಾಮುಖ್ಯತೆಯನ್ನು ಗುರುತಿಸುವ ಮೂಲಕ ಈ ಸಮಗ್ರ ಚಟುವಟಿಕೆಗಳ ಸರಣಿಯು, ನಮ್ಮ ಸಾಮೂಹಿಕ ಸ್ವಚ್ಛತೆಗೆ ಅವರ ಸಮರ್ಪಣೆಯನ್ನು ಆಚರಿಸಿ, ಗೌರವಿಸಿತು.
ಎರಡು ದಿನಗಳ ಕಾರ್ಯಕ್ರಮವು ಬೆವರು ಮತ್ತು ನಗುವಿನ ಸಾಹಸ ಹಾಗೂ ಸಂತಸಗಳ ಮಿಶ್ರಣವಾಗಿತ್ತು, ಏಕೆಂದರೆ ಗದಗ-ಬೆಟಗೇರಿ ಜಿಲ್ಲೆಯ ಮೂಲೆ ಮೂಲೆಗಳಿಂದ ನೈರ್ಮಲ್ಯ ಕಾರ್ಯಕರ್ತರು ತಮ್ಮ ಪ್ರತಿಭೆಯನ್ನು ವ್ಯಾಪಕವಾದ ಚಟುವಟಿಕೆಗಳಲ್ಲಿ ಪ್ರದರ್ಶಿಸಿದರು. ಸ್ಪರ್ಧೆಯು ತೀವ್ರವಾಗಿತ್ತು, ಆದರೂ ಸೌಹಾರ್ದತೆ ತುಂಬಿತ್ತು, ಏಕತೆ ಮತ್ತು ಸಾಮೂಹಿಕ ಸಮರ್ಪಣಾ ಮನೋಭಾವವನ್ನು ಸಂಪೂರ್ಣ ತಂಡ ಬಲಪಡಿಸಿತು. ನೈರ್ಮಲ್ಯ ಕಾರ್ಯಕರ್ತರು ತಮ್ಮ ಕ್ರಿಕೆಟ್ ಬ್ಯಾಟ್ ಗಳನ್ನು ಬೀಸುವುದು ಮತ್ತು ಬೌಂಡರಿಗಾಗಿ ಗುರಿಯಾಗುತ್ತಿರುವುದು ಕಂಡುಬಂದಿತು. ಕ್ರಿಕೆಟ್ ಮತ್ತು ಕಬಡ್ಡಿ ಆಡುವಾಗ ಎಲ್ಲರೂ ತಮ್ಮ ಅದಮ್ಯ ಮನೋಭಾವವನ್ನು ಪ್ರದರ್ಶಿಸಿದರು. ಇದರ ಜೊತೆಯಲ್ಲಿ, 100-ಮೀಟರ್ ಓಟವು ಕೇವಲ ಓಟವಾಗಿರಲಿಲ್ಲ…. ಪ್ರತಿಕೂಲತೆಯನ್ನು ಎದುರಿಸುವ ಅವರ ಸಂಕಲ್ಪದ ಸಂಕೇತವಾಗಿತ್ತು. ಈ ಪಂದ್ಯಾವಳಿಯಲ್ಲಿ 500 ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಯಕರ್ತರು ಭಾಗವಹಿಸಿ ಆನಂದಿಸಿದರು.
ಕೇವಲ ಒಂದು ದಿನದ ಆಟಕ್ಕಿಂತ ಹೆಚ್ಚಾಗಿ, ಈ ಉಪಕ್ರಮವು ನೈರ್ಮಲ್ಯ ಕಾರ್ಯಕರ್ತರು ಪ್ರದರ್ಶಿಸಿದ ಸಮರ್ಪಣೆಗೆ ಹೃತ್ಪೂರ್ವಕ ನೀಡಬಹುದಾದ ಮಹತ್ತರ ಅಂಗೀಕಾರವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಮತ್ತು ನೈರ್ಮಲ್ಯವಾಗಿಡುವಲ್ಲಿ ಅವರ ಅವಿರತ ಪ್ರಯತ್ನಗಳು ಸಾಮಾನ್ಯವಾಗಿ ನಮ್ಮ ಗಮನಕ್ಕೆ ಬರುವುದಿಲ್ಲ. ಸ್ವಚ್ಛತಾ ಪಾಕ್ಷಿಕ(ಪಖವಾಡ)ವು ಇಂತಹ ಸಾಮಾಜಿಕ ನಿರೂಪಣೆಯನ್ನು ಬದಲಾಯಿಸಲು ಪ್ರಯತ್ನಿಸಿತು. ಈ ಕಾರ್ಮಿಕರ ಶ್ರಮವನ್ನು ಆಚರಿಸಲು ವೇದಿಕೆಯನ್ನು ಒದಗಿಸಿತು ಮತ್ತು ಅವರ ಕೊಡುಗೆಗಳನ್ನು ಈ ಮೂಲಕ ಗುರುತಿಸಲಾಯಿತು. ಈ ಕಾರ್ಯಕ್ರಮವು ನಮ್ಮ ಸಮುದಾಯಗಳ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡುವಲ್ಲಿ ನೈರ್ಮಲ್ಯ ಕಾರ್ಯಕರ್ತರು ವಹಿಸುವ ಪ್ರಮುಖ ಪಾತ್ರವನ್ನು ನೆನಪಿಸುವ ಒಂದು ಒಗ್ಗೂಡುವಿಕೆಯ ಕೂಗಾಗಿತ್ತು. ಅವರು ನೈರ್ಮಲ್ಯ ಕ್ಷೇತ್ರದ ಕೇವಲ ಸೇವಾ ಪೂರೈಕೆದಾರರಲ್ಲ, ಆದರೆ ನಮ್ಮ ಸಮಾಜದ ಅಗತ್ಯ ಆಧಾರ ಸ್ತಂಭಗಳು, ಎಂದು ಈ ಕಾರ್ಯಕ್ರಮ ಒತ್ತಿಹೇಳಿತು.
ಭಾರತೀಯ ಸ್ವಚ್ಛತಾ ಲೀಗ್ ಹಾಗೂ ಪೌರಕಾರ್ಮಿಕ ದಿನದ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಗಳು ಅದ್ಧೂರಿಯಾಗಿ ಜರುಗಿದವು. ನೈರ್ಮಲ್ಯ ಕಾರ್ಮಿಕರ ಸಮರ್ಪಣೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಪ್ರಬಲ ಪುರಾವೆಯಾಗಿ ಕಾರ್ಯನಿರ್ವಹಿಸಲಾಯಿತು, ನೈರ್ಮಲ್ಯ ಕಾರ್ಮಿಕರ ಕೊಡುಗೆಗಳು ಅಮೂಲ್ಯವೆಂದು ನಮಗೆ ನೆನಪಿಸಿಕೊಟ್ಟಿತು. ನೈರ್ಮಲ್ಯ ಕಾರ್ಮಿಕರ ಕೊಡುಗೆಗಳು ಮತ್ತು ಪ್ರಯತ್ನಗಳು ಎಂದಿಗೂ ಗಮನಕ್ಕೆ ಬರುವುದಿಲ್ಲ ಅಥವಾ ಪ್ರಶಂಸೆಗೆ ಒಳಗಾಗುವುದಿಲ್ಲ ಎಂಬ ಭರವಸೆಯನ್ನು ಈ ಚೇತೋಹಾರಿ ಕಾರ್ಯಕ್ರಮ ಹುಸಿಗೊಳಿಸಿದ್ದಲ್ಲದೆ, ನಮ್ಮ ಸಮುದಾಯಗಳ ಯೋಗಕ್ಷೇಮಕ್ಕಾಗಿ ಅವರ ಅಚಲವಾದ ಬದ್ಧತೆಯ ಆಚರಣೆಯಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಯಿತು
****
(Release ID: 1959500)
Visitor Counter : 106