ಕಲ್ಲಿದ್ದಲು ಸಚಿವಾಲಯ
ವರ್ಷಗಳಲ್ಲಿ ಕಲ್ಲಿದ್ದಲು ಬಳಕೆಯಲ್ಲಿ ಗಣನೀಯ ಹೆಚ್ಚಳ
ವಿದ್ಯುತ್ ವಲಯಕ್ಕೆ ಸರಾಗ ಕಲ್ಲಿದ್ದಲು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಕ್ರಮಗಳು
Posted On:
09 AUG 2023 2:14PM by PIB Bengaluru
2022-23ರಲ್ಲಿ 1115.02 ಎಂ.ಟಿ. (ತಾತ್ಕಾಲಿಕ) ಗೆ ಹೋಲಿಸಿದರೆ 1983-84 ರಲ್ಲಿ ಒಟ್ಟು ಕಲ್ಲಿದ್ದಲು ಬಳಕೆ 130.73 ಎಂ.ಟಿ ಆಗಿದೆ, ಇದು ಸುಮಾರು 753% ನಷ್ಟು ಹೆಚ್ಚಳವಾಗಿದೆ.
ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯು ಒಂದು ನಿರಂತರ ಪ್ರಕ್ರಿಯೆ. ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲು, ವಿದ್ಯುತ್ ಸಚಿವಾಲಯ, ಕಲ್ಲಿದ್ದಲು ಸಚಿವಾಲಯ, ರೈಲ್ವೇ ಸಚಿವಾಲಯ, ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ), ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮತ್ತು ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ (ಎಸ್ಸಿಸಿಎಲ್) ಪ್ರತಿನಿಧಿಗಳನ್ನು ಒಳಗೊಂಡ ಅಂತರ ಸಚಿವಾಲಯದ ಉಪ ಗುಂಪು ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲಿನ ಪೂರೈಕೆಯನ್ನು ಹೆಚ್ಚಿಸಲು ಹಾಗೂ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನಿನ ವಿಷಮ ಸ್ಥಿತಿಯನ್ನು ತಡೆಯುವುದು ಸೇರಿದಂತೆ ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಯಾವುದೇ ಅನಿಶ್ಚಿತ ಸಂದರ್ಭಗಳನ್ನು ಎದುರಿಸುವ ಬಗ್ಗೆ ವಿವಿಧ ಕಾರ್ಯಾಚರಣೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಯಮಿತವಾಗಿ ಸಭೆ ಸೇರುತ್ತದೆ.
ಇದಲ್ಲದೆ, ಕಲ್ಲಿದ್ದಲು ಪೂರೈಕೆ ಮತ್ತು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವನ್ನು ಮೇಲ್ವಿಚಾರಣೆ ಮಾಡಲು ರೈಲ್ವೆ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿ, ಕಲ್ಲಿದ್ದಲು ಸಚಿವಾಲಯ; ಕಾರ್ಯದರ್ಶಿ, ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ಕಾರ್ಯದರ್ಶಿ, ವಿದ್ಯುತ್ ಸಚಿವಾಲಯ; ಇವುಗಳನ್ನು ಒಳಗೊಂಡ ಅಂತರ-ಸಚಿವಾಲಯ ಸಮಿತಿ (ಐಎಂಸಿ) ಯನ್ನು ಸಹ ರಚಿಸಲಾಗಿದೆ. ಕಾರ್ಯದರ್ಶಿ,ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಅಧ್ಯಕ್ಷರು, ಸಿಇಎ ಅವರನ್ನು ಐಎಂಸಿ ಯಿಂದ ಅಗತ್ಯವಿದ್ದಾಗ ಮತ್ತು ವಿಶೇಷ ಆಹ್ವಾನಿತರನ್ನಾಗಿ ಅಯ್ಕೆ ಮಾಡಲಾಗುತ್ತದೆ.
ಪರಿಶೋಧನೆಯ ಮೂಲಕ ಕಲ್ಲಿದ್ದಲು ಮತ್ತು ಗಣಿಗಾರಿಕೆಗೆ ಹೊಸ ಪ್ರದೇಶಗಳನ್ನು ಕಂಡುಹಿಡಿಯುವುದು ನಿರಂತರ ಪ್ರಕ್ರಿಯೆಯಾಗಿದೆ. ಕಲ್ಲಿದ್ದಲು ಮತ್ತು ಲಿಗ್ನೈಟ್ ನ ಹೊಸ ಪ್ರದೇಶಗಳ ಪರಿಶೋಧನೆಗಾಗಿ ಕಲ್ಲಿದ್ದಲು ಸಚಿವಾಲಯದ ಕೇಂದ್ರ ವಲಯದ ಯೋಜನೆಯ ಮೂಲಕ ಒಂದು ಉಪ-ಯೋಜನೆ ಅಂದರೆ ಪ್ರಚಾರದ (ಪ್ರಾದೇಶಿಕ) ಪರಿಶೋಧನೆಯು ಮುಂದುವರಿಯುತ್ತದೆ. ಇದರ ಜೊತೆಗೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ಕಲ್ಲಿದ್ದಲು ಸೇರಿದಂತೆ ಖನಿಜಗಳ ಪರೀಕ್ಷೆಯನ್ನು ಸಹ ನಡೆಸುತ್ತದೆ.
ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
****
(Release ID: 1947084)