ಸಂಸದೀಯ ವ್ಯವಹಾರಗಳ ಸಚಿವಾಲಯ
ಸಂಸದೀಯ ವ್ಯವಹಾರಗಳ ಸಚಿವಾಲಯದಿಂದ 2022-23ನೇ ಸಾಲಿನ 55ನೇ ಯುವ ಸಂಸತ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ; ಶಿಕ್ಷಣ ನಿರ್ದೇಶನಾಲಯ, ದೆಹಲಿಯ ಎನ್ ಸಿಟಿ ಸರ್ಕಾರ ಮತ್ತು ಎನ್ ಡಿಎಂಸಿ ಅಡಿ ಬರುವ ಶಾಲಾ ಮಕ್ಕಳಿಗಾಗಿ ಯುವ ಸಂಸತ್ ಸ್ಪರ್ಧೆ
ಸ್ಕೂಲ್ ಆಫ್ ಎಕ್ಸಲೆನ್ಸ್, ಕಲ್ಕಾಜಿ, ದೆಹಲಿ ಶಾಲೆಗೆ ಮೊದಲ ಪ್ರಶಸ್ತಿ; ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ 10 ಶಾಲೆಗಳಿಗೆ ಪ್ರಶಸ್ತಿ
प्रविष्टि तिथि:
21 JUL 2023 8:21PM by PIB Bengaluru
ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ(ಎನ್‌ಸಿಟಿ), ಶಿಕ್ಷಣ ನಿರ್ದೇಶನಾಲಯ ಮತ್ತು ಎನ್‌ಡಿಎಂಸಿ ವ್ಯಾಪ್ತಿಯ ಅಡಿ ಬರುವ ಶಾಲೆಗಳಿಗೆ 2022-23ರ ಸಾಲಿನ 55ನೇ ಯುವ ಸಂಸತ್ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿಂದು ನಡೆಯಿತು. ದೆಹಲಿಯ ಸ್ಕೂಲ್ ಆಫ್ ಎಕ್ಸಲೆನ್ಸ್, ಕಲ್ಕಾಜಿ 55ನೇ ಯುವ ಸಂಸತ್ ಸ್ಪರ್ಧೆ 2022-23ರಲ್ಲಿ ಪ್ರಥಮ ಬಹುಮಾನ ಗೆದ್ದಿದೆ.

ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ(ಸ್ವತಂತ್ರ ಉಸ್ತುವಾರಿ), ಸಂಸದೀಯ ವ್ಯವಹಾರಗಳು, ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ದೆಹಲಿಯ ಸ್ಕೂಲ್ ಆಫ್ ಎಕ್ಸಲೆನ್ಸ್ ಕಲ್ಕಾಜಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ನೀಡಿದರು. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ 10 ಶಾಲೆಗಳಿಗೂ ಸಹ ಪ್ರಶಸ್ತಿ ನೀಡಲಾಯಿತು. ವಿಜೇತ ಶಾಲೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
1. ಲಿಟಲ್ ಫ್ಲವರ್ಸ್ ಪಬ್ಲಿಕ್ ಸೀನಿಯರ್ ಸೆಕೆಂಡರಿ ಸ್ಕೂಲ್, ಶಿವಾಜಿ ಪಾರ್ಕ್, ಶಹದಾರ, ದೆಹಲಿ
2. ಸೇಂಟ್ ಗಿರಿ ಸೀನಿಯರ್ ಸೆಕೆಂಡರಿ ಸ್ಕೂಲ್, ಪಿಕೆಟಿ-25-27, ಸೆಕೆಂ-3, ರೋಹಿಣಿ
3. ಜಿಎಸ್ ಕೆವಿ, ಬಿ-3, ಪಶ್ಚಿಮ ವಿಹಾರ್
4. ನವಯುಗ್ ಹಿರಿಯ ಮಾಧ್ಯಮಿಕ ಶಾಲೆ, ಪೇಶ್ವಾ ರಸ್ತೆ, ನವದೆಹಲಿ
5. ಶ್ರೀ ಗುರುನಾನಕ್ ಪಬ್ಲಿಕ್ ಸ್ಕೂಲ್, ಬಂಗಲೆ ರಸ್ತೆ, ಆದರ್ಶ ನಗರ, ದೆಹಲಿ
6. ಎಸ್.ವಿ, ಜೈದೇವ್ ಪಾರ್ಕ್, ದೆಹಲಿ
7. ಸರ್ವೋದಯ ಕೋ-ಎಜುಕೇಷನ್ ಸ್ಕೂಲ್, ಗುಲಾಬಿ ಬಾಗ್, ದೆಹಲಿ
8. ಕೇರಳ ಸೀನಿಯರ್ ಸೆಕೆಂಡರಿ ಸ್ಕೂಲ್, ಎಂ-ಬ್ಲಾಕ್, ವಿಕಾಸ್ ಪುರಿ
9. ಜಾಫರ್‌ಪುರ್ ಕಲಾನ್- ಎಸ್ (ಕೋ-ಎಜುಕೇಷನ್) ವಿ, ನವದೆಹಲಿ
10. ಸರ್ಕಾರಿ ಕೋ-ಎಜುಕೇಷನ್ SSS, ಸೈಟ್ 2, ವಿಭಾಗ. 6, ದ್ವಾರಕಾ, ನವದೆಹಲಿ
ಕಾರ್ಯಕ್ರಮದಲ್ಲಿ ಸಚಿವ ಶ್ರೀ ಮೇಘವಾಲ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಯುವ ಪೀಳಿಗೆಯು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ನೀತಿಗಳನ್ನು ಕಲಿಯಬೇಕು, ಅವುಗಳನ್ನು ಅಳವಡಿಸಿಕೊಳ್ಳಬೇಕು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಾಮರಸ್ಯ ಮತ್ತು ಸಂಪ್ರದಾಯ ಉತ್ತೇಜಿಸಲು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಚ್ಛ ಪರಿಸರ ಉಳಿಸಲು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದ ಸಚಿವರು, ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.

ಸ್ವಾಗತ ಭಾಷಣ ಮಾಡಿದ ಸಂಸದೀಯ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ಶ್ರೀ ಜಿ. ಶ್ರೀನಿವಾಸ್, ಸಂಸತ್ತಿನ ಕಲಾಪಗಳ ಅಭ್ಯಾಸಗಳು, ಆಚರಣೆ ಮತ್ತು ಪ್ರಕ್ರಿಯೆಗಳನ್ನು ಜನಪ್ರಿಯಗೊಳಿಸಲು ಮತ್ತು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ, ದೆಹಲಿಯ ಸ್ಕೂಲ್ ಆಫ್ ಎಕ್ಸಲೆನ್ಸ್ ಕಲ್ಕಾಜಿಯ ವಿಜೇತ ತಂಡವು ನೀಡಿದ ಯುವ ಸಂಸತ್ತಿನ ಶಕ್ತಿಯುತ ಪುನರಾವರ್ತಿತ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತವಾಯಿತು.

ಸಂಸದೀಯ ವ್ಯವಹಾರಗಳ ಸಚಿವಾಲಯ ಕಳೆದ 57 ವರ್ಷಗಳಿಂದ ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ(ಎನ್ ಸಿಟಿ)ದ ಶಾಲೆಗಳಿಗಾಗಿ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ಶಿಕ್ಷಣ ನಿರ್ದೇಶನಾಲಯ, ದೆಹಲಿಯ ಎನ್ ಸಿಚಿ ಮತ್ತು ಎನ್ ಡಿಎಂಸಿ ಅಡಿ ಬರುವ ಶಾಲೆಗಳಿಗೆ ಯುವ ಸಂಸತ್ ಸ್ಪರ್ಧೆ ಸರಣಿಯ 55ನೇ ಸ್ಪರ್ಧೆಯನ್ನು 2022-23ರಲ್ಲಿ ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶದ 39 ಶಾಲೆಗಳಿಗೆ ಆಯೋಜಿಸಲಾಗಿತ್ತು.
ಯುವ ಸಂಸತ್ ಸ್ಪರ್ಧೆಯು ಯುವ ಪೀಳಿಗೆಯಲ್ಲಿ ಸ್ವಯಂ-ಶಿಸ್ತು, ವೈವಿಧ್ಯಮಯ ಅಭಿಪ್ರಾಯಗಳ ಸಹಿಷ್ಣುತೆ, ದೃಷ್ಟಿಕೋನಗಳ ನ್ಯಾಯಯುತ ಅಭಿವ್ಯಕ್ತಿ ಮತ್ತು ಪ್ರಜಾಪ್ರಭುತ್ವದ ಜೀವನ ವಿಧಾನದ ಸದ್ಗುಣಗಳ ಮನೋಭಾವ ಬೆಳೆಸುವ ಗುರಿ ಹೊಂದಿದೆ. ಅಲ್ಲದೆ, ಈ ಯೋಜನೆಯು ವಿದ್ಯಾರ್ಥಿಗಳಿಗೆ ಸಂಸತ್ತಿನ ಅಭ್ಯಾಸಗಳು ಮತ್ತು ಕಾರ್ಯ ವಿಧಾನಗಳು, ಚರ್ಚೆ ಮತ್ತು ಸಮಾಲೋಚನೆಯ ತಂತ್ರಗಳನ್ನು ಪರಿಚಯಿಸುತ್ತದೆ. ವಿದ್ಯಾರ್ಥಿಗಳ್ಲಲಿ ಅವರಲ್ಲಿ ಆತ್ಮವಿಶ್ವಾಸ, ಗುಣಮಟ್ಟದ ನಾಯಕತ್ವ ಮತ್ತು ಪರಿಣಾಮಕಾರಿ ಭಾಷಣ ಕಲೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ.
***
(रिलीज़ आईडी: 1941767)
आगंतुक पटल : 197