ಸಂಸದೀಯ ವ್ಯವಹಾರಗಳ ಸಚಿವಾಲಯ
ಸಂಸದೀಯ ವ್ಯವಹಾರಗಳ ಸಚಿವಾಲಯವು ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುವ ಎನ್ ಸಿಟಿ ಮತ್ತು ಎನ್ ಡಿಎಂಸಿ ಶಾಲೆಗಳ 2022-23ನೇ ಸಾಲಿನ 55ನೇ ಯುವ ಸಂಸತ್ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು 2023ರ ಜುಲೈ 21ರಂದು ನಡೆಸಲು ಆಯೋಜಿಸಿದೆ
Posted On:
20 JUL 2023 4:44PM by PIB Bengaluru
ಸಂಸದೀಯ ವ್ಯವಹಾರಗಳ ಸಚಿವಾಲಯವು ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುವ ಎನ್ ಸಿಟಿ ಮತ್ತು ಎನ್ ಡಿಎಂಸಿ ಶಾಲೆಗಳ 2022-23ನೇ ಸಾಲಿನ 55ನೇ ಯುವ ಸಂಸತ್ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು 2023ರ ಜುಲೈ 21ರಂದು ನವದೆಹಲಿಯ ಸಂಸತ್ ಸಂಕೀರ್ಣದಲ್ಲಿ ನಡೆಸಲು ಆಯೋಜಿಸಿದೆ.
ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ, ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಬಹುಮಾನಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ, ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುವ ಎನ್ ಸಿಟಿ ಮತ್ತು ಎನ್ ಡಿಎಂಸಿ ಶಾಲೆಗಳ 55ನೇ ಯುವ ಸಂಸತ್ ಸ್ಪರ್ಧೆ, 2022-23ರಲ್ಲಿ ಪ್ರಥಮ ಸ್ಥಾನ ಪಡೆದ ದೆಹಲಿಯ ಕಲ್ಕಾಜಿಯ ಸ್ಕೂಲ್ ಆಫ್ ಎಕ್ಸಲೆನ್ಸ್ ನ ವಿದ್ಯಾರ್ಥಿಗಳು ತಮ್ಮ "ಯುವ ಸಂಸತ್" ಅಧಿವೇಶನದ ಪುನರಾವರ್ತಿತ ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವಾಲಯವು ಕಳೆದ 57 ವರ್ಷಗಳಿಂದ ರಾಷ್ಟ್ರದ ರಾಜಧಾನಿ ದೆಹಲಿಯ ಶಾಲೆಗಳಿಗೆ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದ ಅಧೀನದಲ್ಲಿರುವ ಎನ್ ಸಿಟಿ ಮತ್ತು ಎನ್ ಡಿಎಂಸಿ ಅಡಿಯಲ್ಲಿನ ಶಾಲೆಗಳಿಗೆ ಯುವ ಸಂಸತ್ ಸ್ಪರ್ಧೆಯ ಯೋಜನೆಯಡಿ, ಈ ಸರಣಿಯ 55ನೇ ಸ್ಪರ್ಧೆಯನ್ನು 2022-23ರಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ 39 ಶಾಲೆಗಳ ನಡುವೆ ಆಯೋಜಿಸಲಾಗಿತ್ತು.
ಯುವ ಸಂಸತ್ ಯೋಜನೆಯು ಯುವ ಪೀಳಿಗೆಯಲ್ಲಿ ಶಿಸ್ತಿನ ಮನೋಭಾವ, ವೈವಿಧ್ಯಮಯ ಅಭಿಪ್ರಾಯ ಸಹಿಷ್ಣುತೆ, ದೃಷ್ಟಿಕೋನಗಳ ಅಭಿವ್ಯಕ್ತಿ ಮತ್ತು ಪ್ರಜಾಪ್ರಭುತ್ವ ಜೀವನ ವಿಧಾನದ ಇತರ ಸದ್ಗುಣಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇದಲ್ಲದೆ, ಈ ಯೋಜನೆಯು ವಿದ್ಯಾರ್ಥಿಗಳಿಗೆ ಸಂಸತ್ ನ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳು, ಅದರ ಚರ್ಚೆ ಹಾಗೂ ಚರ್ಚೆಯ ತಂತ್ರಗಳನ್ನು ಪರಿಚಯಿಸುತ್ತದೆ. ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವದ ಗುಣಮಟ್ಟ ಮತ್ತು ಪರಿಣಾಮಕಾರಿ ಭಾಷಣದ ಕಲೆ ಮತ್ತು ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ.
ಪಾರ್ಲಿಮೆಂಟರಿ ಶೀಲ್ಡ್ ಮತ್ತು ಟ್ರೋಫಿಯನ್ನು ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ದೆಹಲಿಯ ಕಲ್ಕಾಜಿಯ ಸ್ಕೂಲ್ ಆಫ್ ಎಕ್ಸಲೆನ್ಸ್ ಗೆ ನೀಡಲಾಗುವುದು. ಇದಲ್ಲದೆ, ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ 10 ಶಾಲೆಗಳಿಗೆ ಮೆರಿಟ್ ಟ್ರೋಫಿಗಳನ್ನೂ ಸಹ ನೀಡಲಾಗುವುದು.
****
(Release ID: 1941153)