ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು "ಮುಂದಿನ ಪೀಳಿಗೆಯ ಪ್ರೊಸೆಸರ್ಗಳು, ಐಪಿಗಳು ಮತ್ತು ಎಂಬೆಡೆಡ್ ಸಿಸ್ಟಮ್ಗಳ ವೇಗವರ್ಧಕ ವಿನ್ಯಾಸ" ಕುರಿತು ಬೆಂಗಳೂರಿನಲ್ಲಿ ಡಿಜಿಟಲ್ ಇಂಡಿಯಾ ಸಂವಾದವನ್ನು ಉದ್ದೇಶಿಸಿ ಮಾತನಾಡಿದರು
ಭಾರತದಲ್ಲಿ ಐಟಿ ಹಾರ್ಡ್ವೇರ್ ಉತ್ಪಾದನೆ ಮತ್ತು ನಾವೀನ್ಯತೆ ಪೂರಕ ವ್ಯವಸ್ಥೆಯನ್ನು ವೇಗಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸ್ಟಾರ್ಟ್ ಅಪ್ಗಳು, ಉದ್ಯಮ ಮತ್ತು ಶಿಕ್ಷಣ ವಲಯದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ: ಶ್ರೀ ರಾಜೀವ್ ಚಂದ್ರಶೇಖರ್
ಜಾಗತಿಕ ಎಲೆಕ್ಟ್ರಾನಿಕ್ಸ್ ಸರಬರಾಜು ಸರಪಳಿಯಲ್ಲಿ ಭಾರತವನ್ನು ಮಹತ್ವದ ಆಟಗಾರನನ್ನಾಗಿ ಮಾಡಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ: ಶ್ರೀ ರಾಜೀವ್ ಚಂದ್ರಶೇಖರ್
Posted On:
06 JUL 2023 6:12PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು ಬೆಂಗಳೂರಿನಲ್ಲಿ ಡಿಜಿಟಲ್ ಇಂಡಿಯಾ ಸಂವಾದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು, ಐಟಿ ಹಾರ್ಡ್ವೇರ್ ಗಾಗಿ ಪರಿಷ್ಕೃತ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿ ಎಲ್ ಐ) ಯೋಜನೆಯನ್ನು ಅವರು ಕೇಂದ್ರೀಕರಿಸಿದರು.
ಈ ಅಧಿವೇಶನವು ತಜ್ಞರು, ಉದ್ಯಮ ಪ್ರತಿನಿಧಿಗಳು ಮತ್ತು ಸ್ಟಾರ್ಟ್ ಅಪ್ ಗಳಂತಹ ಟೆಕ್ ಉದ್ಯಮದ ಭಾಗೀದಾರರನ್ನು ಒಂದೆಡೆ ಸೇರಿಸಿತು. ಸಚಿವರು ಅವರೊಂದಿಗೆ ಸಕ್ರಿಯವಾಗಿ ಸಂವಾದ ನಡೆಸಿದರು, ಪೂರಕ ವ್ಯವಸ್ಥೆಯನ್ನು ಸುಧಾರಿಸುವ ಕುರಿತು ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸರ್ವರ್ ಮತ್ತು ಐಟಿ ಹಾರ್ಡ್ವೇರ್ ಉತ್ಪಾದನಾ ಪೂರಕ ವ್ಯವಸ್ಥೆಯನ್ನು ರಚಿಸಲು ಸರ್ಕಾರವು ಸ್ಟಾರ್ಟ್ ಅಪ್ಗಳು, ಉದ್ಯಮ ಮತ್ತು ಶಿಕ್ಷಣ ವಲಯದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಮಹತ್ವಾಕಾಂಕ್ಷೆಗಳು ಸ್ಪಷ್ಟವಾಗಿವೆ - 2026 ರ ವೇಳೆಗೆ 300 ಬಿಲಿಯನ್ ಡಾಲರ್ ಎಲೆಕ್ಟ್ರಾನಿಕ್ಸ್ ಉದ್ಯಮ ಮತ್ತು 1 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆ ಈ ಮಹತ್ವಾಕಾಂಕ್ಷೆಗಳಾಗಿವೆ ಎಂದರು. ಡೇಟಾ ಸೆಂಟರ್ಗಳು, ಸರ್ವರ್ಗಳು ಇತ್ಯಾದಿಗಳನ್ನು ಒಳಗೊಂಡಿರುವ ಭಾರತದ ಐಟಿ ಹಾರ್ಡ್ವೇರ್ ಪೂರಕ ವ್ಯವಸ್ಥೆಯನ್ನು ವೇಗಗೊಳಿಸಲು ಸರ್ಕಾರವು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ. ಐಟಿ ಹಾರ್ಡ್ವೇರ್ ಗಾಗಿ ಈ ಬಾರಿ ಉದ್ಯಮದ ಸಲಹೆ, ಅಭಿಪ್ರಾಯಗಳೊಂದಿಗೆ ಈ ಪಿ ಎಲ್ ಐ ಯೋಜನೆಯನ್ನು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಎಲೆಕ್ಟ್ರಾನಿಕ್ ಉತ್ಪಾದನಾ ಪೂರಕ ವ್ಯವಸ್ಥೆಯಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಮಾರುಕಟ್ಟೆಗಳಲ್ಲಿ ಒಂದಾಗಿದೆ, ಏಕೆಂದರೆ ನಾವು ನಮ್ಮ ಆರ್ಥಿಕತೆ, ಸರ್ಕಾರ ಮತ್ತು ಸಾರ್ವಜನಿಕ ಸೇವೆಗಳನ್ನು ಅಭೂತಪೂರ್ವ ವೇಗದಲ್ಲಿ ಡಿಜಿಟಲೀಕರಣಗೊಳಿಸಿದ್ದೇವೆ ಎಂದು ಅವರು ಹೇಳಿದರು.
ದೇಶದಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸಲು ಉದ್ಯಮಗಳು ಮತ್ತು ಸ್ಟಾರ್ಟ್ಅಪ್ ಗಳನ್ನು ಪ್ರೋತ್ಸಾಹಿಸುವಾಗ ಪೂರಕ ವ್ಯವಸ್ಥೆಯ ಅಭಿವೃದ್ಧಿಯನ್ನು ಉತ್ತೇಜಿಸುವ ಬಗ್ಗೆ ಚರ್ಚೆಗಳನ್ನು ಕೇಂದ್ರೀಕರಿಸಲಾಯಿತು.
"ದೊಡ್ಡ ವಿದೇಶಿ ಕಂಪನಿಗಳನ್ನು ಭಾರತದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಲು ನಾವು ಸ್ವಾಗತಿಸುತ್ತೇವೆ, ನಾವು ಉದ್ಯಮವನ್ನು ಪ್ರೋತ್ಸಾಹದಿಂದ ಲಾಭ ಪಡೆಯಲು ಮತ್ತು ಭಾರತದಲ್ಲಿ ಇಎಂಎಸ್ ಪೂರಕ ವ್ಯವಸ್ಥೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತಿದ್ದೇವೆ" ಎಂದು ಸಚಿವರು ಹೇಳಿದರು.
ಮೇ ತಿಂಗಳಲ್ಲಿ, ಐಟಿ ಹಾರ್ಡ್ವೇರ್ ಗಾಗಿ ಪಿ ಎಲ್ ಐ 2.0 ಯೋಜನೆಯನ್ನು ಸರ್ಕಾರವು 17,000 ಕೋಟಿ ರೂಪಾಯಿಗಳ ವೆಚ್ಚದೊಂದಿಗೆ ಅನುಮೋದಿಸಿತು, ಇದು 2021 ರ ಯೋಜನೆಯ ಬಜೆಟ್ ನ ದುಪ್ಪಟ್ಟಾಗಿದೆ. ಈ ಯೋಜನೆಯು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು, ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಐಟಿ ಹಾರ್ಡ್ವೇರ್ ಬಿಡಿಭಾಗಗಳು ಮತ್ತು ಸಬ್-ಅಸೆಂಬ್ಲಿಗಳ ಸ್ಥಳೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಲ್ಯಾಪ್ ಟಾಪ್ಗಳು, ಟ್ಯಾಬ್ಲೆಟ್ ಗಳು, ಆಲ್ ಇನ್ ಒನ್ ಪಿಸಿಗಳು, ಸರ್ವರ್ಗಳು ಮತ್ತು ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳನ್ನು ಒಳಗೊಂಡಿದೆ. ಹಾಗೆ ಮಾಡುವ ಮೂಲಕ, ಭಾರತದ ದೇಶೀಯ ಐಟಿ ಹಾರ್ಡ್ವೇರ್ ಉತ್ಪಾದನಾ ಪೂರಕ ವ್ಯವಸ್ಥೆಯನ್ನು ವೇಗಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ, ಆ ಮೂಲಕ ಐಟಿ ಹಾರ್ಡ್ವೇರ್ ಉದ್ಯಮದಲ್ಲಿ ಭಾರತೀಯ ಚಾಂಪಿಯನ್ಗಳನ್ನು ಸೃಷ್ಟಿಸುತ್ತದೆ.
ಈ ಯೋಜನೆಯು ಆರು ವರ್ಷಗಳ ಕಾಲ ಚಾಲನೆಯಲ್ಲಿರುತ್ತದೆ ಮತ್ತು 2,430 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 3.35 ಲಕ್ಷ ಕೋಟಿ ಮೌಲ್ಯದ ಉತ್ಪಾದನೆಯ ಗಮನಾರ್ಹ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಇದು ಸರಿಸುಮಾರು 75,000 ಹೊಸ ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.
2014 ರಿಂದ, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವು ಶೇ.17 ರಷ್ಟು ಸ್ಥಿರವಾದ ಸಂಯೋಜಿತ ವಾರ್ಷಿಕ ಬೆಳವಣಿಗೆ ದರವನ್ನು (ಸಿಎಜಿಆರ್) ಸಾಧಿಸಿದೆ. ಸುಮಾರು 1 ಲಕ್ಷ ಕೋಟಿ ರೂ.ಗಳಿಂದ ಪ್ರಾರಂಭವಾದ ಉತ್ಪಾದನೆಯು ಈಗ 105 ಶತಕೋಟಿ ಡಾಲರ್ ಅನ್ನು ಮೀರಿದೆ.
ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಭಾರತದ ಗಮನಾರ್ಹ ಬೆಳವಣಿಗೆಯನ್ನು ಶ್ರೀ ರಾಜೀವ್ ಚಂದ್ರಶೇಖರ್ ಅವರು ಪ್ರಸ್ತಾಪಿಸಿದರು. "ಸ್ಮಾರ್ಟ್ ಫೋನ್ ಯಶಸ್ಸಿನ ಬಗ್ಗೆ ನಮಗೆ ಸ್ಪಷ್ಟವಾಗಿ ತಿಳಿದಿದೆ ಮತ್ತು ಸ್ಮಾರ್ಟ್ ಫೋನ್ ವಿಭಾಗದ ಬೆಳವಣಿಗೆಯಲ್ಲಿ ನೀವು ನೋಡಿರುವುದು ಕೇವಲ ಒಂದು ಭಾಗ ಮಾತ್ರ ಎಂದು ನಾನು ತುಂಬಾ ವಿಶ್ವಾಸದಿಂದ ಹೇಳಬಲ್ಲೆ. ಇದು ಸ್ಪಷ್ಟವಾಗಿದೆ. ಮುಂಬರುವ ದಶಕದಲ್ಲಿ ನಾವು ಸ್ಮಾರ್ಟ್ ಫೋನ್ ಉತ್ಪಾದನೆಯ ಗಮನಾರ್ಹ ಮೂಲವಾಗಲಿದ್ದೇವೆ ಮತ್ತು ಸ್ಮಾರ್ಟ್ ಫೋನ್ ಸಂಬಂಧಿತ ಒಟ್ಟಾರೆ ಪೂರಕ ವ್ಯವಸ್ಥೆಯಾಗಲಿದ್ದೇವೆ ಮತ್ತು ದೊಡ್ಡ ಬ್ರ್ಯಾಂಡ್ಗಳು ನಿಸ್ಸಂಶಯವಾಗಿ ಅವರು ಭಾರತದಲ್ಲಿ ವಿಸ್ತೃತ ಅಸ್ತಿತ್ವವನ್ನು ಹೊಂದಲು ಬಯಸಿದ್ದಾರೆ ಮತ್ತು ಅದನ್ನು ಗಮನಾರ್ಹವಾಗಿ ವಿಸ್ತರಿಸಲು ಬಯಸಿದ್ದಾರೆ” ಎಂದು ಅವರು ಹೇಳಿದರು.
****
(Release ID: 1937891)
Visitor Counter : 138