ಉಪರಾಷ್ಟ್ರಪತಿಗಳ ಕಾರ್ಯಾಲಯ

ಪಂಜಾಬ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಪ್ರೊ. ರೇಣುಪ್ರೊ. ರೇಣು ಚೀಮಾ ವಿಗ್ ಅವರನ್ನು ಉಪರಾಷ್ಟ್ರಪತಿ ಅವರು ನೇಮಿಸಿದ್ದಾರೆ

Posted On: 29 MAR 2023 4:32PM by PIB Bengaluru

ಪಂಜಾಬ್ ವಿಶ್ವವಿದ್ಯಾನಿಲಯದ ಕುಲಪತಿಯೂ ಆಗಿರುವ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಪ್ರಸ್ತುತ ವಿಶ್ವವಿದ್ಯಾನಿಲಯ ಶಿಕ್ಷಣದ ವಿಭಾಗದ ಡೀನ್ (ಡಿ.ಯು.ಐ.) ಪ್ರೊ. (ಡಾ.) ರೇಣು ಚೀಮಾ ವಿಗ್ ಅವರನ್ನು ಪಂಜಾಬ್ ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಯಾಗಿ ನೇಮಕ ಮಾಡಿದ್ದಾರೆ.

ಪಂಜಾಬ್ ವಿಶ್ವವಿದ್ಯಾನಿಲಯ ಕಾಯಿದೆ 1947 ರ ಪರಿಚ್ಛೇದ 10 ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ, ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಮೂರು ವರ್ಷಗಳ ಅವಧಿಗೆ ಪ್ರೊ. ವಿಗ್ ಅವರನ್ನು ನೇಮಕ ಮಾಡಿದ್ದಾರೆ.

ಪಂಜಾಬ್ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದ ಪ್ರೊ. ರಾಜ್ ಕುಮಾರ್ ಅವರು ರಾಜೀನಾಮೆ ನೀಡಿದ ನಂತರ, ಪ್ರೊ. ವಿಗ್ ಅವರು ಜನವರಿ 16, 2023 ರಿಂದ ಹಂಗಾಮಿ ಉಪಕುಲಪತಿಯಾಗಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು.

ಈ ನಿಟ್ಟಿನಲ್ಲಿ, ಗೌರವಾನ್ವಿತ ಉಪರಾಷ್ಟ್ರಪತಿಯವರು ಮಾರ್ಚ್ 21, 2023 ರಂದು ಪಂಜಾಬ್ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ಹೆಸರುಗಳನ್ನು ಶಿಫಾರಸು ಮಾಡಲು ಮೂರು ಸದಸ್ಯರ ಪರಿಶೀಲನಾ ಹಾಗೂ ಆಯ್ಕೆ ಸಮಿತಿಯನ್ನು ರಚಿಸಿದ್ದರು.  ಪ್ರೊ. ರೇಣು ವಿಗ್ ಅವರ ನೇಮಕವು ಸಮಿತಿಯ ವರದಿಯನ್ನು ಅನುಸರಿಸಿ ನಡೆಯುತ್ತಿದೆ.

 ***



(Release ID: 1911889) Visitor Counter : 97


Read this release in: English , Urdu , Hindi , Punjabi