ಸಂಸ್ಕೃತಿ ಸಚಿವಾಲಯ
azadi ka amrit mahotsav

ದೇಶದ ವಿವಿಧ ರಾಜ್ಯಗಳಲ್ಲಿ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಉನ್ನತ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ: ಶ್ರೀ ಜಿ. ಕಿಶನ್ ರೆಡ್ಡಿ

Posted On: 27 MAR 2023 5:25PM by PIB Bengaluru

ದೇಶದ ವಿವಿಧ ರಾಜ್ಯಗಳಲ್ಲಿ 3 ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಉನ್ನತ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವು ಪಂ. ದೀನದಯಾಳ್ ಉಪಾಧ್ಯಾಯ ಪುರಾತತ್ವ ಶಾಸ್ತ್ರ ಸಂಸ್ಥೆ (Pt. DUIA), ನೋಯ್ಡಾ, ಉತ್ತರ ಪ್ರದೇಶ, ಸಾಂಸ್ಕೃತಿಕ ಸ್ವತ್ತು ಸಂರಕ್ಷಣೆಗಾಗಿ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯ (NRLC), ಲಖನೌ, ಉತ್ತರ ಪ್ರದೇಶ, ಮತ್ತು ಕಲೆಯ ಇತಿಹಾಸದ ರಾಷ್ಟ್ರೀಯ ಸಂಗ್ರಹಾಲಯ ಸಂಸ್ಥೆ ಸಂರಕ್ಷಣೆ ಮತ್ತು ಸಂಗ್ರಹಾಲಯ ಶಾಸ್ತ್ರ (NMI), ನೋಯ್ಡಾ .

ಪಂ. ದೀನದಯಾಳ್ ಉಪಾಧ್ಯಾಯ ಪುರಾತತ್ವ ಶಾಸ್ತ್ರ ಸಂಸ್ಥೆ (Pt. DUIA) ವಿದ್ಯಾರ್ಥಿಗಳ ಸೀಟುಗಳನ್ನು 15 ರಿಂದ 25 ಕ್ಕೆ ಹೆಚ್ಚಿಸಿದೆ. ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (BIMSTEC)  ಹೊಂದಿದ ದೇಶಗಳಿಗೆ DUIA ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ (ಬಂಗಾಳ ಕೊಲ್ಲಿಯ ಉಪಕ್ರಮ) ದ ಕೋರ್ಸ್ ಅನ್ನು ಒದಗಿಸುತ್ತಿದೆ.

 ತಾಮ್ರದ ವಸ್ತುಗಳು /ಕಂಚುಗಳಿಂದ ಸುಣ್ಣದ ಶೇಖರಣೆಯನ್ನು ತೆಗೆದುಹಾಕುವ ಸುರಕ್ಷಿತ ವಿಧಾನ, ಸೀಸದ ಲೋಹಕ್ಕೆ ರಕ್ಷಣೆ ನೀಡುವಂತಹ ತುಕ್ಕು ಹಿಡಿಯುವುದನ್ನು ತಡೆಯುವ ಸಂಯುಕ್ತದ ಸಂಶ್ಲೇಷಣೆ, ಕಂಚಿನ ಹಾಳಾಗದಂತೆ ತಡೆಯುವ ನಿಯಂತ್ರಣ ವಿಧಾನ, ಕಂಚಿನ ವಸ್ತುಗಳ ಸಂರಕ್ಷಣೆಯ ವಿಧಾನ ಹೀಗೆ ಸ್ಪಷ್ಟವಾದ ಸಾಂಸ್ಕೃತಿಕ ಸ್ವತ್ತು ಸಂರಕ್ಷಣೆಯ ಹಲವಾರು ವಿಧಾನಗಳನ್ನು ಸಾಂಸ್ಕೃತಿಕ ಸ್ವತ್ತು ಸಂರಕ್ಷಣೆಗಾಗಿ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯ (NRLC), ಲಖನೌ, ಉತ್ತರ ಪ್ರದೇಶ, ಅಭಿವೃದ್ಧಿಪಡಿಸಿದೆ. ಮತ್ತು ದೇಶದ ಸಾಂಸ್ಕೃತಿಕ ಸ್ವತ್ತಿನ ಅವನತಿಯನ್ನು ಮಂದಗೊಳಿಸಲು ಹಲವಾರು ಅಧ್ಯಯನಗಳನ್ನು ಕೂಡ ನಡೆಸಿದೆ. ಈ ಪ್ರಯೋಗಾಲಯದಿಂದ ಪುರಾತನ ವಸ್ತುಗಳು/ಗೋಡೆ ವರ್ಣಚಿತ್ರಗಳು ಇತ್ಯಾದಿ ಸೇರಿದಂತೆ ಹಲವಾರು ಕಲಾಕೃತಿ/ಸಂಗ್ರಹಾಲಯ ವಸ್ತುಗಳನ್ನೂ ಸಂರಕ್ಷಿಸಲಾಗಿದೆ. ಮೇಲಿನವುಗಳಷ್ಟೇ ಅಲ್ಲದೆ, ಸಾಂಸ್ಕೃತಿಕ ಆಸ್ತಿಯ ಸಂರಕ್ಷಣೆಯ ಅಲ್ಪಾವಧಿಯ ಮತ್ತು ದೀರ್ಘಾವಧಿಯ ತರಬೇತಿ ಕೋರ್ಸ್ ‌ಗಳ ಮೂಲಕ ಹಲವಾರು ವಿದ್ಯಾರ್ಥಿಗಳು/ಆಸಕ್ತರಿಗೆ ಈ ಪ್ರಯೋಗಾಲಯ  ತರಬೇತಿ ನೀಡಿದೆ.

ಕಲೆಯ ಇತಿಹಾಸದ ರಾಷ್ಟ್ರೀಯ ಸಂಗ್ರಹಾಲಯ ಸಂಸ್ಥೆ ಸಂರಕ್ಷಣೆ ಮತ್ತು ಸಂಗ್ರಹಾಲಯ ಶಾಸ್ತ್ರ (NMI), ನೋಯ್ಡಾ 1989 ರಲ್ಲಿ ವಿಶ್ವವಿದ್ಯಾಲಯವೆಂದು ಪರಿಗಣಿಸಲಾಯಿತು ಮತ್ತು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಾರಂಭಿಸಿತು. ಈ ಸಂಸ್ಥೆಯು ಕಳೆದ ಕೆಲವು ದಶಕಗಳಲ್ಲಿ ಕಲೆಯ ಇತಿಹಾಸ, ಸಂರಕ್ಷಣೆ ಮತ್ತು ಸಂಗ್ರಹಾಲಯ ಶಾಸ್ತ್ರ ಕ್ಷೇತ್ರಗಳಲ್ಲಿ ಬೋಧನೆ ಮತ್ತು ಸಂಶೋಧನೆಯಲ್ಲಿ ಗಣನೀಯ ಕೊಡುಗೆ ನೀಡಿದೆ.

ಪಂ. ದೀನದಯಾಳ್ ಉಪಾಧ್ಯಾಯ ಪುರಾತತ್ವ ಶಾಸ್ತ್ರ ಸಂಸ್ಥೆ ಪುರಾತತ್ವ ಶಾಸ್ತ್ರದಲ್ಲಿ 2 ವರ್ಷಗಳ ಸ್ನಾತಕೋತ್ತರ ಡಿಪ್ಲೊಮಾ, ಪ್ರಯೋಗಾಲಯ ಶಾಸ್ತ್ರ, ಸಂರಕ್ಷಣೆ, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ, ರಾಸಾಯನಿಕ ಸಂರಕ್ಷಣೆ ಮತ್ತು ಪ್ರಾಚೀನ ವಸ್ತುಗಳ ಸಂರಕ್ಷಣೆ ಮತ್ತು ನಿಯತಕಾಲಿಕ ಕಾರ್ಯಾಗಾರಗಳಲ್ಲಿ ಅಲ್ಪಾವಧಿಯ ತರಬೇತಿ ಕೋರ್ಸ್ ‌ಗಳನ್ನು ನೀಡುತ್ತಿದೆ.

ಸಾಂಸ್ಕೃತಿಕ ಸ್ವತ್ತು ಸಂರಕ್ಷಣೆಗಾಗಿ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯ (NRLC) ಡೇಟಿಂಗ್, ಪರಿಸರ ಪುರಾತತ್ತ್ವ ಶಾಸ್ತ್ರ, ಭೌತಿಕ ಮತ್ತು ರಾಸಾಯನಿಕ ವಿಧಾನಗಳಿಂದ ತಾಂತ್ರಿಕ ಅಧ್ಯಯನ, ಸಂರಕ್ಷಣಾ ವಿಧಾನಗಳು, ಸಂಬಂಧಿತ ದಾಖಲಾತಿ, ಇತರ ಪ್ರಯೋಗಾಲಯಗಳಿಗೆ ಸಹಾಯ, ವಸ್ತುಸಂಗ್ರಹಾಲಯಗಳಿಗೆ ಸಹಾಯ - ಪುರಾತತ್ತ್ವ ಶಾಸ್ತ್ರ ರಾಜ್ಯ ಇಲಾಖೆ, ಸಂರಕ್ಷಣೆಯಲ್ಲಿ ತರಬೇತಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದೆ.

ಕಲೆಯ ಇತಿಹಾಸದ ರಾಷ್ಟ್ರೀಯ ಸಂಗ್ರಹಾಲಯ, ಸಂರಕ್ಷಣೆ ಮತ್ತು ಸಂಗ್ರಹಾಲಯ ಶಾಸ್ತ್ರ ಸಂಸ್ಥೆ ನಿಯಮಿತವಾಗಿ ಕಲೆಯ ಇತಿಹಾಸದಲ್ಲಿ, ಸಂರಕ್ಷಣೆ ಮತ್ತು ವಸ್ತುಸಂಗ್ರಹಾಲಯ ಶಾಸ್ತ್ರ ಕ್ಷೇತ್ರದಲ್ಲಿ ಎಂ ಎ ಮತ್ತು ಪಿ ಹೆಚ್ ಡಿ ಮಟ್ಟದ ಕೋರ್ಸ್ ಗಳನ್ನು ನೀಡುತ್ತದೆ. ಕಲೆಯ ಇತಿಹಾಸದಲ್ಲಿ ಎರಡು ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್ ‌ಗಳನ್ನು ನೀಡುತ್ತದೆ ಮತ್ತು ಭಾರತದಲ್ಲಿನ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಕೂಡಾ ನಡೆಸುತ್ತದೆ.

ಪಂ. ದೀನದಯಾಳ್ ಉಪಾಧ್ಯಾಯ ಪುರಾತತ್ವ ಶಾಸ್ತ್ರ ಸಂಸ್ಥೆ, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ (ಸಾರ್ಕ್) ಮತ್ತು  ಬಹು ಆಯಾಮದ ತಾಂತ್ರಿಕ ಮತ್ತು ಆರ್ಥಿಕ ಸಹಕಾರದ ಬಂಗಾಳಕೊಲ್ಲಿ ಉಪಕ್ರಮ (BIMSTEC) ದೇಶಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನಾಮನಿರ್ದೇಶನಗೊಂಡ ವಿದೇಶಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ (ಆರ್ಕಿಯಾಲಜಿ ಡಿಪ್ಲೊಮಾ) ಗೆ, ಯೋಜನೆಗಳು ಮತ್ತು ಸಂಶೋಧನಾ ಕಾರ್ಯಗಳಿಗೆ ಅವಕಾಶ ಕಲ್ಪಿಸುತ್ತದೆ.

ಭಾರತೀಯ ಸಂಶೋಧನಾ ವಿದ್ವಾಂಸರು ಸಾಂಸ್ಕೃತಿಕ ಸ್ವತ್ತು ಸಂರಕ್ಷಣೆಗಾಗಿ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯದಲ್ಲಿ ಸಂಶೋಧನಾ ಕಾರ್ಯವನ್ನು ಕೈಗೊಳ್ಳಲು ಅನುಮತಿಸಲಾಗಿದೆ. ಮತ್ತು ಕಲೆಯ ಇತಿಹಾಸದ ರಾಷ್ಟ್ರೀಯ ಸಂಗ್ರಹಾಲಯ, ಸಂರಕ್ಷಣೆ ಮತ್ತು ವಸ್ತುಸಂಗ್ರಹಾಲಯ ಶಾಸ್ತ್ರ ಭಾರತ ಮತ್ತು ವಿದೇಶಗಳಲ್ಲಿನ ಸಂಸ್ಥೆಗಳೊಂದಿಗೆ ಜಾಗೃತಿಯನ್ನು ವೃದ್ಧಿಸುವ ಉದ್ದೇಶದಿಂದ ಮತ್ತು ಸಹಯೋಗವನ್ನು ಸರಳೀಕರಿಸುವ ಗುರಿಯೊಂದಿಗೆ ವಿವಿಧ ವಿಭಾಗಗಳ ತಜ್ಞರೊಂದಿಗೆ ತರಬೇತಿ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಇತ್ಯಾದಿಗಳನ್ನು ಆಯೋಜಿಸಲು ಒಪ್ಪಂದವನ್ನು ಮಾಡಿಕೊಂಡಿದೆ.

ಇಂದು ಲೋಕಸಭೆಯಲ್ಲಿ ಈಶಾನ್ಯ ಭಾಗದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ ಅವರು ಈ ಉತ್ತರವನ್ನು ನೀಡಿದರು.

***


(Release ID: 1911403) Visitor Counter : 115
Read this release in: English , Urdu , Urdu