ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ಭಗವಾನ್ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಅನಾವರಣಗೊಳಿಸಿದರು


ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ವಿಶ್ವಕ್ಕೆ ಭಾರತದ ಸಂದೇಶವನ್ನು ಹರಡಿದ ಇಬ್ಬರು ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಲಾಗಿದೆ, ಇದೊಂದು ಐತಿಹಾಸಿಕ ದಿನ

ಈ ಪ್ರತಿಮೆಗಳು ಬಸವಣ್ಣ ಮತ್ತು ಕೆಂಪೇಗೌಡರ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಸಂದೇಶವನ್ನು ವಿಧಾನಸಭೆಯಲ್ಲಿ ಚುನಾಯಿತರಾದವರಿಗೆ ನೀಡುವುದನ್ನು ಮುಂದುವರಿಸುತ್ತವೆ

ಭಾರತವು ಪ್ರಜಾಪ್ರಭುತ್ವದ ತಾಯಿ ಎಂಬ ಸಂದೇಶವನ್ನು ಬಸವಣ್ಣನವರ ಪ್ರತಿಮೆ ಇಡೀ ಜಗತ್ತಿಗೆ ನೀಡುತ್ತದೆ, ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ವಿಧಾನಸಭೆ ಮಾತ್ರವಲ್ಲ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ವಿಶ್ವದ ಎಲ್ಲಾ ಜನರನ್ನು ಗೌರವಿಸಲಾಗುತ್ತದೆ

ಕೆಂಪೇಗೌಡರು ಬೆಂಗಳೂರಿನಲ್ಲಿ ನೂರಾರು ಕೆರೆಗಳನ್ನು ನಿರ್ಮಿಸುವ ಮೂಲಕ ಇಡೀ ಜಗತ್ತಿಗೆ ನೀರಿನ ಮಹತ್ವವನ್ನು ವಿವರಿಸಿದರು, ಅವರು ಇಂದಿನ ಬೆಂಗಳೂರಿನ ಜಾಗತಿಕ ದೃಷ್ಟಿಕೋನಕ್ಕೆ ಅಡಿಪಾಯ ಹಾಕಿದರು

ಅಭಿವೃದ್ಧಿಗೆ ಬದ್ಧರಾಗಿರುವವರು ಮಾತ್ರ ಅಭಿವೃದ್ಧಿಯನ್ನು ಮಾಡಬಹುದು, ದೇಶದ ಬಗ್ಗೆ ಪ್ರೀತಿ ಇರುವವರು ಮಾತ್ರ ಭ್ರಷ್ಟಾಚಾರವನ್ನು ಕೊನೆಗೊಳಿಸಬಹುದು. ದೇಶವನ್ನು ಸುರಕ್ಷಿತವಾಗಿಡಲು ಬಯಸುವವರು ಮಾತ್ರ ದೇಶವನ್ನು ಸುರಕ್ಷಿತವಾಗಿಸಬಹುದು, ಪ್ರಧಾನಿ ಮೋದಿ ಆ ಕೆಲಸವನ್ನು ತಮ್ಮ ಬಲವಾದ ಇಚ್ಛಾಶಕ್ತಿಯಿಂದ ಮಾಡಿದ್ದಾರೆ

ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿ ಮತ್ತು ಕರ್ನಾಟಕದಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಡಬಲ್‌ ಎಂಜಿನ್ ಸರಕಾರದ ಪ್ರಯತ್ನಗಳಿಂದಾಗಿ, ಕರ್ನಾಟಕವು ಕಳೆದ 4 ವರ್ಷಗಳಲ್ಲಿ ಅಭಿವೃದ್ಧಿ ಕ್ಷೇತ್ರದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ

ಹಿಂದಿನ ಸರಕಾರವು 2009ರಿಂದ 2014 ರವರೆಗೆ ತೆರಿಗೆ ಅಪಮೌಲ್ಯೀಕರಣ ಮತ್ತು ಅನುದಾನದ ಅಡಿಯಲ್ಲಿ ಕರ್ನಾಟಕಕ್ಕೆ 94,000 ಕೋಟಿ ರೂ.ಗಳನ್ನು ನೀಡಿದೆ, ಶ್ರೀ ಮೋದಿ ಅವರು 2014 ಮತ್ತು 2019 ರ ನಡುವೆ ಕರ್ನಾಟಕಕ್ಕೆ 2,25,000 ಕೋಟಿ ರೂ.ಗಳನ್ನು ಈ ಎರಡು ಬಾಬ್ತುಗಳ ಅಡಿಯಲ್ಲಿ ನೀಡಿದ್ದು, ಇದು ಹಿಂದಿನ ಸರಕಾರದ ಅವಧಿಗೆ ಹೋಲಿಸಿದರೆ 140% ಹೆಚ್ಚಾಗಿದೆ

ಕಾಶ್ಮೀರ, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು, ಈಶಾನ್ಯ ಅಥವಾ ಗಡಿಯಾಚೆಗಿನ ದಾಳಿಗಳು ಏನೇ ಇರಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ದೃಢ ಸಂಕಲ್ಪದೊಂದಿಗೆ ಅವೆಲ್ಲವನ್ನೂ ನಿರ್ಮೂಲನೆ ಮಾಡುವ ಮೂಲಕ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಖಾತರಿಪಡಿಸಿದ್ದಾರೆ

Posted On: 26 MAR 2023 10:15PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕ ವಿಧಾನಸಭೆಯ ಆವರಣದಲ್ಲಿ ಭಗವಾನ್ ಬಸವೇಶ್ವರರು ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಅನಾವರಣಗೊಳಿಸಿದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತದ ಸಂದೇಶವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಾರಿದ ಇಬ್ಬರು ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ರಾಜ್ಯ ವಿಧಾನಸಭೆಯ ಆವರಣದಲ್ಲಿ ಅನಾವರಣಗೊಳಿಸಿದ ಐತಿಹಾಸಿಕ ದಿನ ಇದಾಗಿದೆ ಎಂದು ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು ಹೇಳಿದರು. ಈ ಪ್ರತಿಮೆಗಳು ಬಸವಣ್ಣ ಮತ್ತು ಕೆಂಪೇಗೌಡರ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಸಂದೇಶವನ್ನು ವಿಧಾನಸಭೆಗೆ ಆಯ್ಕೆಯಾದವರಿಗೆ ನೀಡುವುದನ್ನು ಮುಂದುವರಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಇಲ್ಲಿ ಸ್ಥಾಪಿಸಲಾದ ಭಗವಾನ್ ಬಸವೇಶ್ವರರ ಪ್ರತಿಮೆಯು ಭಾರತವು ಪ್ರಜಾಪ್ರಭುತ್ವದ ತಾಯಿ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರುತ್ತದೆ ಎಂದು ಶ್ರೀ ಶಾ ಬಣ್ಣಿಸಿದರು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಮಾಜದ ಕೆಳಸ್ತರದ ಜನರಿಗೆ ಒಂದೇ ವೇದಿಕೆ ಒದಗಿಸುವ ಮೂಲಕ ಸಮಾಜದ ಸಬಲೀಕರಣದ ಬಗ್ಗೆ ಚರ್ಚಿಸುವ ಧೈರ್ಯ ಮಾಡಿದರು ಎಂದರು. ಬಸವಣ್ಣನವರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಇಡೀ ಪ್ರಪಂಚದ ಮುಂದೆ ಇಟ್ಟರು ಮತ್ತು ಇಂದಿಗೂ ಆದರ್ಶ ಜೀವನವನ್ನು ಅರ್ಥಮಾಡಿಕೊಳ್ಳಲು ಬಸವಣ್ಣನವರ ಚಿಂತನೆಗಳು ಆಧಾರವಾಗಿವೆ ಎಂದರು. ಬಸವಣ್ಣನವರ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸುವ ಮೂಲಕ ವಿಧಾನಸಭೆಗೆ ಮಾತ್ರವಲ್ಲ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ವಿಶ್ವದ ಎಲ್ಲ ಜನರನ್ನು ಗೌರವಿಸಲಾಗುತ್ತದೆ ಎಂದರು.

ಮಾತು ಮುಂದುವರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, “ನಾಡಪ್ರಭು ಕೆಂಪೇಗೌಡರು ತಮ್ಮ ಚಿಂತನೆಗಳ ಮೂಲಕ ಮುಂಬರುವ ಯುಗಕ್ಕೆ ಭದ್ರ ಬುನಾದಿ ಹಾಕಿದರು. ಸಾಮ್ರಾಟ್ ಅಚ್ಯುತರಾಯರ ಬೆಂಬಲದೊಂದಿಗೆ ಕೆಂಪೇಗೌಡರು ಬೆಂಗಳೂರಿಗೆ ಭದ್ರ ಬುನಾದಿ ಹಾಕಲು ನಿರ್ಧರಿಸಿದರು, ಅದನ್ನು ಕೆರೆಗಳ ನಗರವನ್ನಾಗಿ ಮಾಡಿದರು ಮತ್ತು ಇಲ್ಲಿ ನೂರಾರು ಕೆರೆಗಳನ್ನು ನಿರ್ಮಿಸುವ ಮೂಲಕ ಇಡೀ ಜಗತ್ತಿಗೆ ನೀರಿನ ಮಹತ್ವವನ್ನು ವಿವರಿಸಿದರು. ಕೆಂಪೇಗೌಡರು ಇಂದಿನ ಬೆಂಗಳೂರಿನ ಜಾಗತಿಕ ದೃಷ್ಟಿಕೋನಕ್ಕೆ ಅಡಿಪಾಯ ಹಾಕಿದರು ಎಂದರು. ಕರ್ನಾಟಕ ವಿಧಾನಸಭೆಯ ಮುಂಭಾಗದಲ್ಲಿ ಒಂದು ಬದಿಯಲ್ಲಿ ಜಗಜ್ಯೋತಿ ಬಸವಣ್ಣ ಮತ್ತು ಇನ್ನೊಂದು ಬದಿಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ವಿಧಾನಸಭೆಯ ಪ್ರಜ್ಞೆಯನ್ನು ಸದಾ ಜೀವಂತವಾಗಿರಲಿದೆ ಎಂದು ಶ್ರೀ ಶಾ ಹೇಳಿದರು.

ʻನಮ್ಮ ಬೆಂಗಳೂರು ಹಬ್ಬʼ ಉತ್ಸವದ ಸಮಾರೋಪಕ್ಕೂ ಇಂದಿನ ದಿನವು ಸಾಕ್ಷಿಯಾಗಿದೆ. ಈ ಉತ್ಸವವು ಅನೇಕ ಕಲಾವಿದರು, ಬರಹಗಾರರು, ಸಂಗೀತಗಾರರು ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಜನರಿಗೆ ದೊಡ್ಡ ಸಾಂಸ್ಕೃತಿಕ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶ್ರೀ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕಳೆದ 4 ವರ್ಷಗಳಲ್ಲಿ ಕರ್ನಾಟಕವು ಅಭಿವೃದ್ಧಿ ಕ್ಷೇತ್ರದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ ಎಂದು ಅವರು ಹೇಳಿದರು. ಇಂದು 2.72 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ಕರ್ನಾಟಕವು ಭಾರತ ಎಲ್ಲಾ ರಾಜ್ಯಗಳ ಪೈಕಿ ವಿದೇಶಿ ನೇರ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ 39 ನವೋದ್ಯಮಗಳಿದ್ದು,  ಅವು 1 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಆಸ್ತಿ ಮೌಲ್ಯವನ್ನು ಹೊಂದಿವೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಕರ್ನಾಟಕದ ಪಾಲು ಶೇಕಡಾ 25 ರಷ್ಟಿದೆ, ಕರ್ನಾಟಕವು ಇಂದು ನಾವೀನ್ಯ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ರಕ್ಷಣಾ ವಿಮಾನ ತಯಾರಿಕೆ ವಿಚಾರಕ್ಕೆ ಬರುವುದಾದರೆ, ದೇಶದಲ್ಲಿ ತಯಾರಿಸಿದ ಪ್ರತಿ 100 ವಿಮಾನಗಳಲ್ಲಿ 75 ವಿಮಾನಗಳನ್ನು ಕರ್ನಾಟಕದಲ್ಲಿ ತಯಾರಿಸಲಾಗುತ್ತದೆ. ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿ ಮತ್ತು ಕರ್ನಾಟಕದಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಡಬಲ್ ಎಂಜಿನ್ ಸರಕಾರವು ಕಳೆದ 4 ವರ್ಷಗಳಲ್ಲಿ ಕರ್ನಾಟಕವನ್ನು ಬಹಳ ದೂರ ಕೊಂಡೊಯ್ದಿದೆ ಎಂದು ಶ್ರೀ ಶಾ ಹೇಳಿದರು.

ಶ್ರೀ ಮೋದಿ ಅವರ ನೇತೃತ್ವದ ಡಬಲ್ ಇಂಜಿನ್ ಸರ್ಕಾರವು ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೂ ಕರ್ನಾಟಕವನ್ನು ಬಹಳ ಮುಂದೆ ಕೊಂಡೊಯ್ಯಲು ಕೆಲಸ ಮಾಡುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನ ಅಭಿವೃದ್ಧಿಗೆ ಹಲವು ಕೆಲಸಗಳನ್ನು ಮಾಡಿದ್ದಾರೆ. ಈ ನಗರದ ಅಭಿವೃದ್ಧಿಗೆ ಈವರೆಗೆ 13,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರವು ಉಪನಗರ ರೈಲ್ವೆಗಾಗಿ 14,000 ಕೋಟಿ ರೂ.ಗಳನ್ನು ನೀಡಿದೆ ಮತ್ತು ಇದು 40 ತಿಂಗಳಲ್ಲಿ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರವು ಹೈದರಾಬಾದ್, ಮೈಸೂರು ಮತ್ತು ಚೆನ್ನೈಗಳನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳಿಗೆ ಸುಮಾರು 70,000 ಕೋಟಿ ರೂ.ಗಳನ್ನು ಒದಗಿಸಿದೆ ಎಂದು ಶ್ರೀ ಶಾ ತಿಳಿಸಿದರು. ಹಿಂದಿನ ಸರಕಾರವು 2009ರಿಂದ 2014ರವರೆಗೆ 'ತೆರಿಗೆ ಅಪಮೌಲ್ಯ' ಮತ್ತು 'ಅನುದಾನ'ದ ಅಡಿಯಲ್ಲಿ ಕರ್ನಾಟಕಕ್ಕೆ 94,000 ಕೋಟಿ ರೂ.ಗಳನ್ನು ನೀಡಿತು, ಆದರೆ 2014 ಮತ್ತು 2019ರ ನಡುವೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ 2.25 ಲಕ್ಷ ಕೋಟಿ ರೂ.ಗಳನ್ನು ನೀಡಿದ್ದಾರೆ, ಇದು ಸುಮಾರು 140 ಪ್ರತಿಶತದಷ್ಟು ಅಧಿಕ ಎಂದು ಅವರು ಹೇಳಿದರು.

 

ಅಭಿವೃದ್ಧಿಗೆ ಬದ್ಧರಾಗಿರುವವರು ಮಾತ್ರ ಅಭಿವೃದ್ಧಿಯನ್ನು ಮಾಡಲು ಸಾಧ್ಯ, ದೇಶದ ಬಗ್ಗೆ ಪ್ರೀತಿ ಹೊಂದಿರುವವರು ಮಾತ್ರ ಭ್ರಷ್ಟಾಚಾರವನ್ನು ಕೊನೆಗೊಳಿಸಬಹುದು. ಹಾಗೆಯೇ, ದೇಶವನ್ನು ಸುರಕ್ಷಿತವಾಗಿಡಲು ಬಯಸುವವರು ಮಾತ್ರ ದೇಶವನ್ನು ಸುರಕ್ಷಿತವಾಗಿಸಬಹುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಕಾಶ್ಮೀರ, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು, ಈಶಾನ್ಯ ಅಥವಾ ಗಡಿಯಾಚೆಗಿನ ದಾಳಿಗಳು ಏನೇ ಇರಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ದೃಢ ಸಂಕಲ್ಪದಿಂದ ಅವೆಲ್ಲವನ್ನೂ ನಿರ್ಮೂಲನೆ ಮಾಡುವ ಮೂಲಕ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಖಾತರಿಪಡಿಸಿದ್ದಾರೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವನ್ನು ಸಮೃದ್ಧಿಯ ಪಥದಲ್ಲಿ ಕೊಂಡೊಯ್ದಿದ್ದಾರೆ ಮತ್ತು 2025ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಮೂಲಕ, ನಾವು ಜಗತ್ತಿನಲ್ಲಿ ಮುಂದೆ ಸಾಗುತ್ತೇವೆ. 2027ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು. ಕರ್ನಾಟಕವನ್ನು ಮುಂದೆ ಕೊಂಡೊಯ್ಯಲು ಬೇಕಾಗಿರುವುದು ಜಗಳವಾಡುವ ಪಕ್ಷಗಳಲ್ಲ, ಬದಲಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೆಲಸ ಮಾಡುವ ಶಿಸ್ತುಬದ್ಧ ದೇಶಭಕ್ತರ ಪಡೆಯ ಅಗತ್ಯವಿದೆ ಎಂದು ಸಚಿವರು ಹೇಳಿದರು.

****



(Release ID: 1911056) Visitor Counter : 160


Read this release in: English , Urdu , Hindi , Punjabi