ಕಲ್ಲಿದ್ದಲು ಸಚಿವಾಲಯ

ಕೋಲ್ ಬೆಡ್ ಮೀಥೇನ್ ಹೊರತೆಗೆಯುವಿಕೆ

Posted On: 23 MAR 2023 4:36PM by PIB Bengaluru

ಪ್ರಸ್ತುತ, ಕೋಲ್ ಬೆಡ್ ಮೀಥೇನ್ ನ್ನು (CBM) ದೇಶದ ಯಾವುದೇ ಕೆಲಸ/ಕಾರ್ಯಾಚರಣೆ ಕಲ್ಲಿದ್ದಲು ಗಣಿಗಳಿಂದ ಉತ್ಪಾದಿಸಲ್ಪಡುವುದಿಲ್ಲ. ಕಲ್ಲಿದ್ದಲು ಗಣಿಗಾರಿಕೆಗೆ ಮೊದಲು ಕಲ್ಲಿದ್ದಲು ಹೊಂದಿರುವ ಪ್ರದೇಶಗಳಿಂದ ಕೋಲ್ ಬೆಡ್ ಮೀಥೇನ್ (CBM) ನ್ನು ಹೊರತೆಗೆಯಲು ಭಾರತ ಸರ್ಕಾರವು 1997ರಲ್ಲಿ ನೀತಿಯನ್ನು ರೂಪಿಸಿತ್ತು. ಸಿಬಿಎಂ ಅಭಿವೃದ್ಧಿಗೆ ಸಹಕಾರಿ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಕಲ್ಲಿದ್ದಲು ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಯಿತು.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದರು.

****



(Release ID: 1910026) Visitor Counter : 118


Read this release in: English , Urdu